ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಕಾಳಿದಾಸ ಭಾಸ

March 6, 2006 - 6:59pm — ಮಹೇಶ ಭೋಗಾದಿ

ದಯವಿಟ್ಟು.
ಕಾಳಿದಾಸ ಭಾಸರ ಕೃತಿಗಳನ್ನು ಅನ್ವಯಾನುಸಾರವಾಗಿ (ಪದ ಪದ ಅರ್‍ಥ) ಕನ್ನಡದಲ್ಲಿ ಭಾಷಾಂತರಿಸಿರುವ ಪುಸ್ತಕಗಳನ್ನು ತಿಳಿಸಿ.

ಅದರಲ್ಲು ಕಾಳಿದಾಸನ ಮೇಘದೂತವು ಅತ್ಯಂತ ರಮಣೀಯವಾಗಿದೆಯೆಂದು ನನ್ನ ಮಿತ್ರನೊಬ್ಬ ಹೇಳುತ್ತಾನೆ.

‹ ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು? ಪ್ರಜಾವಾಣಿಯಲ್ಲಿ ತ ಸು ಶಾಮರಾಯರ ಬಗ್ಗೆ ಲೇಖನ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 889 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 7, 2006 - 7:49pm — Sunil Jayaprakash

ಮೇಘದೂತ

Sunil Jayaprakash's picture

ಕಾಳಿದಾಸನ ಮೇಘದೂತದ ಬಗ್ಗೆ ಹೇಳುವುದಾದರೆ, ಈ ಕೃತಿಯ ತಾತ್ಪರ್ಯ, ಅನ್ವಯಾರ್ಥ ಎಲ್ಲವೂ ಇರುವ ಪುಸ್ತಕ ಲಭ್ಯವಿದೆ.

ಇದನ್ನು ಕನ್ನಡಕ್ಕೆ ಬಿ. ಗೋಪಾಲ ರಾವ್ ಎಂಬುವರು ಅನುವಾದಿಸಿ ಕೊಟ್ಟಿದ್ದಾರೆ. ಬಹಳ ಚೆನ್ನಾಗಿದೆ. ಓದಿ ನೋಡಿ.

ಕೃತಿಯ ಹೆಸರು - ಮಹಾಕವಿ ಕಾಳಿದಾಸ ಪ್ರಣೀತ ಮೇಘದೂತ
(ಮೂಲಶ್ಲೋಕ, ಮಲ್ಲಿನಾಥನ ಸಂಜೀವಿನೀ ವ್ಯಾಖ್ಯಾನ ತಾತ್ಪರ್ಯ ಮತ್ತು ಅನ್ವಯಾರ್ಥ) 

ಕನ್ನಡಕ್ಕೆ - ಬಿ. ಗೋಪಾಲರಾವ್
ಪ್ರಕಾಶಕರು - ಅಂಕಿತ ಪುಸ್ತಕ
ದೊರೆತ ಸ್ಥಳ - ಅಂಕಿತ ಪುಸ್ತಕ 

ಮೇಘದೂತ ದ ಬಗ್ಗೆ ಸಂಪದದಲ್ಲಿ ಸ್ವಲ್ಪ ಹಿಂದೆ ಸಣ್ಣ ಚರ್ಚೆ(??) ನಡೆದಿತ್ತು. ಮೇಘದೂತ ಎಂದು ಹುಡುಕಿ ನಲ್ಲಿ ಕೊಟ್ಟು ನೋಡಿ. ಕೊಂಡಿಗಳು ಸಿಗುತ್ತವೆ.

ಸಾಧ್ಯವಾದರೆ ಅದರ ಬಗ್ಗೆ ಒಂದು ವಿಮರ್ಶೆ ಬರೆಯಬೇಕೆಂದಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 7, 2006 - 9:57pm — tvsrinivas41

ವಿಮರ್ಶೆ

tvsrinivas41's picture

ಕಾಳಿದಾಸನ ಮೇಘದೂತದೊಂದಿಗೆ ಇತರ ಕೃತಿಗಳ ವಿಮರ್ಶೆಯನ್ನೂ ಬರೆಯಿರಿ.
ಉಪಮೆಗೆ ಕಾಳಿದಾಸ ಹೆಸರುವಾಸಿಯಾದಂತೆ, ಅರ್ಥವತ್ತಾಗಿ ಬರೆದಿರುವ ಭಾರವಿ, ಸುಲಭ ಪದಗಳನ್ನು ಬಳಸಿದ ದಂಡಿ ಮತ್ತು ಈ ಎಲ್ಲ ಗುಣಗಳನ್ನೂ ಒಳಗೂಡಿಸಿದ ಮಾಘನ ಕೃತಿಗಳನ್ನೂ ನಮಗೆ ತೋರಿಸಿಕೊಡಿ. ಸಂಪದ ಸಂಪದ್ಭರಿತವಾಗಲಿ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 7, 2006 - 10:14pm — srivathsajoshi

Re: ವಿಮರ್ಶೆ

srivathsajoshi's picture

tvsrinivas41 wrote:
ಉಪಮೆಗೆ ಕಾಳಿದಾಸ ಹೆಸರುವಾಸಿಯಾದಂತೆ...

ಉಪಮಾ ಕಾಲಿದಾಸಸ್ಯ ಭಾರವೇರರ್ಥಗೌರವಂ
ದಂಡಿನಃ ಪದಲಾಲಿತ್ಯಂ ಮಾಘೆ ಸಂತಿ ತ್ರಯೋ ಗುಣಾ: ||

ಕಾಳಿದಾಸ ಉಪಮಾ (= ಉಪ್ಪಿಟ್ಟು = ಖಾರಾಭಾತ್ ) ಮಾಡುತ್ತಿದ್ದನೇ? MTR Readymix ಬಳಸುತ್ತಿದ್ದನೋ ಇಲ್ಲವೋ ಗೊತ್ತಿಲ್ಲ Smiling

- ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 8, 2006 - 12:01pm — ಮಹೇಶ ಭೋಗಾದಿ

"ಸೂಚಿಭೇದತಮ"

ಮಹೇಶ ಭೋಗಾದಿ's picture

ಎಲ್ಲರಿಗೆ ಧನ್ಯವಾದ.

ಒರ್ಕುಟನಲ್ಲಿ "ಸಂಸ್ಕೃತ" ಸಮುದಾಯದಲ್ಲಿ ಮೇಘದೂತದ ಬಗ್ಗೆ ಕೇಳಿ ನನಗೂ ಅದನ್ನು ಓದಬೇಕೆನಿಸಿತು.
ಅದರಲ್ಲಿ ಈ ಮಾತು ಬಂದಿದೆ "ಸೂಚಿಭೇದೈ: ತಮೋಭಿ:".
ಇದರ ಅರ್ಥ ನಾನು ತಿಳಿದಂತೆ,

ಕಣ್ಣಿಗೆ ತಮಗೆ ತಾವೆ ಸೂಜಿ ಚುಚಿಕೊಳ್ಳುವಷ್ಟು ಕಗ್ಗತ್ತಲಿನಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 14, 2006 - 6:36pm — ಮಹೇಶ ಭೋಗಾದಿ

ಮಹಾಕವಿ ಕಾಳಿದಾಸ ಪ್ರಣೀತ ಮೇಘದೂತ

ಮಹೇಶ ಭೋಗಾದಿ's picture

ಧನ್ಯವಾದ ಸುನಿಲರೆ,

ನಿನ್ನೆ ಕೊಂಡು ತಂದೆ. ಓದಲು ಶುರುಮಾಡಿದ್ದೇನೆ.

ನೀವು ಓದಾಯಿತೆ? ನಿಮಗೆ ಮಲ್ಲಿನಾಥನ ವ್ಯಾಖಾನಗಳು ಹೇಗೆ ಅನ್ನಿಸಿದವು?

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 7, 2006 - 10:17pm — muralihr

ಬೇ೦ದ್ರೆ

muralihr's picture

ಬೇ೦ದ್ರೆಯವರ ಕನ್ನಡ ಮೇಘದೂತವನ್ನು ಓದಿ... ಅದರಷ್ಟು ಮಧುರವಾಗಿ ಬೇರೆ ಅನುವಾದ ಇರಲಿಕ್ಕ್ ಇಲ್ಲಾ.
ಕೆಲವು ಪದ್ಯಗಳನ್ನು ಇಲ್ಲಿ ಬರೆಯುತ್ತಿದ್ದೇನೆ.
****************************
ಪೂಜ್ಯ ವಸ್ತುವಿನ ಪೂಜೆಗೊದಗದಾ ನಾದವಿದ್ದು ಏನು ??
ಗೆಳೆಯಗಾಗಿ ಕೈಕೊ೦ಡ ಕೆಲಸವನು ನಡುವೆ ಬಿಡುವರು೦ಟೇ??
ಬಣ್ಣವಿರಲಿ ಕರಿ; ಬೆಳ್ಳಗಾಗು ಒಳಗೆಲ್ಲ ಬೆಳಕು ತು೦ಬಿ..
ಮುಗಿಲಿಗೆ೦ದು ಕೈ ಹಾಕಿ ಹಾರಿದರೆ ಕಾಲು ಮುರಿದುಕೊಳರೆ ??
ಕಷ್ಟ ಕಳೆವುದೇ ಇಷ್ಟವಹುದು ಉತ್ತಮರ ಶಕ್ತಿಗಳಿಗೆ !!
ಜಡವೋ ಚೇತನವೋ ಬಯಕೆ ಮರುಳರಿಗೆ ಯಾವ ವಸ್ತುವೇನು ??
ನಿನ್ನ ವಿರಹ ವ್ಯಥೆಯಿ೦ದ ಬೆ೦ದು ಬದುಕಿಹೆನು ಹೇಗೋ ಇ೦ದು ...
ಇಷ್ಟು ಚೆನ್ನಾಗಿ ಮಾಡಿದ್ದಾರೆ ಅಲ್ಲವೇ ??
ಶತಾವದಾನಿ ಗಣೇಶ್ .. ಕಾಲಿದಾಸನ ಮೇಘದೂತ/ ಬೇ೦ದ್ರೆ ಯ ಮೇಘದೂತ
ಎರಡನ್ನೂ ಪಕ್ಕ ಪಕ್ಕ ಇಟ್ಕೋ೦ಡು ಒ೦ದು ಉಪನ್ಯಾಸ ಕೊಟ್ಟಿದ್ದರು.
ಗೋಖಲೆ ಕೇ೦ದ್ರದಲ್ಲಿ CD ಸಿಗುತ್ತೆ.
ವರಕವಿ ಬೇ೦ದ್ರೆ ಸಮಾನರು೦ಟೇ ???

ಪರಮೇಶ್ವರ ಭಟ್ಟ.. ಭಾಸ ನ/ಕಾಲಿದಾಸನ ಸಮಗ್ರ ಸ೦ಪುಟವನ್ನು ಪ್ರಕಟಿಸಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಾರಿತೊತ್ತಿಗನ/ಕಾಳಿದಾಸನ ಹೊತ್ತು/ಕಾಲ ಯಾವುದು?
  • ಹಳತು - ಹೊಸತು
  • ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
  • QUIZ ಸ೦ಸ್ಕೃತ ನಾಟಕ
  • ಕನ್ನಡ ಪುಸ್ತಕಗಳನ್ನು ಅಂತರ್ಜಾಲದ ಮೂಲಕ ಮಾರಾಟ ಮಾಡುವವರಿದ್ದಾರೆಯೇ?
Syndicate content

ಲೇಖಕರು

ಮಹೇಶ ಭೋಗಾದಿ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ನೆಗೞ್
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
  • ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಪಂದಿ/ಹಂದಿ, ಪಂದೆ/ಹಂದೆ
    August 21, 2008 - 6:28pm
  • anamadheya
    ಉ: ....ಬಾರದು ಎಂದುಕೊಂಡರೆ!
    August 21, 2008 - 5:40pm
  • Sunil Jayaprakash
    ಉ: ಪಂದಿ/ಹಂದಿ, ಪಂದೆ/ಹಂದೆ
    August 21, 2008 - 5:33pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • madhava_hs
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • kannadakanda
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:50pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:45pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:30pm
  • jp.nevara
    ಉ: ನಾಳೆ ಎಂಬುದು ಕತ್ತಲು
    August 21, 2008 - 4:27pm
ಇನ್ನಷ್ಟು


ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator