ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

— ಜೆ. ಪಾಲ್ ಗೆಟ್ಟಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ

ಭಾರತದ ಇತಿಹಾಸದಲ್ಲೇ ಸಾಮಾಜಿಕ ಜೀವನದಲ್ಲಿಮಿಳಿತವಾಗಿ ಕನ್ನಡ ಬೆಳೆದು ಬಂದಂತೆ ಬೇರಾವ ಭಾಷೆಯೂ ಬೆಳೆದಿರಲಾರದು.ರಾಜದಂಡದ ಭೀತಿಯಲ್ಲಿ ಬೆಳೆದುಬಂದ ಅನೇಕ ಭಾಷೆಗಳು ಕೂಚುಭಟ್ಟರ ತೊದಲಿನಲ್ಲಿ ಪರಮೋನ್ನತಿಯನ್ನು ಕಂಡಂತಿ ಕನ್ನಡ ತನ್ನ ಉನ್ನತಿಯನ್ನು ಕಾಣಲಿಲ್ಲ, ಜನಸಾಮಾನ್ಯರ ಭಾಷೆಯಾಗಿ, ಅವರ ಏರು ಇಳಿತದಲ್ಲಿ ಕಷ್ಟ-ಸುಖಗಳಲ್ಲಿ, ದುಃಖ-ದುಮ್ಮಾನದಲ್ಲಿ ಕರಗಿ ಕೊರಗಿ ಬೆಳೆದು ಘಟ್ಟಗಳಲ್ಲಿ ಬದಲಾಗುತ್ತಾ ಅತ್ಯಂತ ಸುಲಲಿತವೂ ಸಮೃದ್ದವೂ ಪ್ರಭುದ್ದವೂ ಆದ ಭಾಷೆಯಾಗಿಬೆಳೆದಿದೆ. ಈ ದಿನ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಅನ್ನುವ ಗೌರವ ದೊರೆತಿದೆ. ಕನ್ನಡಿಗರ ಕನಸು ಹೋರಾಟ ಫಲಪ್ರದವಾಗಿದೆ.ದುಃಖದ ವಿಷಯವೆಂದರೆ, ಈ ಗೌರವವನ್ನು ನಾವು ಹೋರಾಡಿ ಪಡೆಯಬೇಕಾಯಿತು.ನಮ್ಮ ಹೋರಾಟದ ಢಮರು ನಿನಾದ ಸದಾ ದೆಲ್ಲಿಯ ತೊಘಲಿಕ್ಕರಿಗೆ ಎಚ್ಚರಿಕೆಯಾಗಿರಲಿ . ನಾವು ಯಾವುದೇ ಅನ್ಯಾಯವನ್ನು, ಭೇದೋಪಾಯವನು, ರಾಜಕೀಯ ವಶೀಲಿಕರಣವನ್ನು ಕಿಂಚಿತ್ತೂ ಸಹಿಸುವುದಿಲ್ಲ.ಈ ಸಂದರ್ಬದಲ್ಲಿ, ವಯೋವೃದ್ದರಾದರು ಕನ್ನಡದ ಕಿಚ್ಚಿನಲ್ಲಿ ಬೀದಿಗಿಳಿದು ಹೋರಾಡಿದ, ಡಾ. ದೇಜಗೌ ಅವರಿಂದ ಹಿಡಿದು, ಇತ್ತೀಚೆಗೆ ನ್ಯಾಯಾಲಯದ ಕಣಕ್ಕಿಳಿದ ದೀಪಕ್ ತಿಮ್ಮಯ್ಯನವರ ತನಕ ಎಲ್ಲರಿಗೂ,ಅಭಿನಂದದೆಗಳು. ನಮ್ಮೊಡನೆಯೇಇದ್ದು, ಕಾವೇರಿಯ ನೀರನ್ನು ಹೀರಿ ಕನ್ನಡದ ಹಿತಕಾಯದೇ ಕನ್ನಡದ ಸೌಲತ್ತನ್ನೆಲ್ಲಾ ಹೀರುತ್ತಿರುವ ಕಪ್ಪು ಕುರಿಗಳಿಗೆ ದಿಕ್ಕಾರ ಹೇಳೋಣ.
ಜೈ ಕರ್ನಾಟಕ ಮಾತೆ.

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ

venkatb83's picture

ಕರುನಾಡಿನ ಜನತೆಗೆ ಈ ವರ್ಷದ ಕನ್ನಡ ರಾಜೋತ್ಸವದ ಸುಸಂದರ್ಬಿತ ಒಂದು ಘೋಷಣೆ ಎಂದರೆ ಶಾಸ್ತ್ರೀಯ ಭಾಷಾ ಸ್ಥಾನ ಸಿಕ್ಕಿದ್ದು.
ಇದು ನಮ್ಮೆಲ್ಲರಿಗೂ ಖುಸಿಯ ವಿಚಾರ,

ಈ ದಿಶೆಯಲ್ಲಿ ಹೋರಾಡಿದವರಲ್ಲಿ ಪ್ರಮುಖರು ,
ದೇ ಜ ಗೌ , ಈ ವಯಸ್ಸಿನಲ್ಲೋ ಅವರು ತುಂಬಾ ಸಾರಿ ಅದಕ್ಕಉಪವಾಸ ಸತ್ಯಾಗ್ರಹ ಮಾಡಿದ್ದೂ ಉಂಟು.

ಆಗಾಗ ಅಲ್ಲೊಬ್ಬರು ಇಲ್ಲೊಬ್ಬರು ಅದಕ್ಕೆ ಬೆಂಬಲ ಕೊಟ್ಟದ್ದು ಉಂಟು.
ಈ ದಿಸೆಯಲ್ಲಿ ಚಿ ಮು , ಜಿ ಎಸ್ ಎಸ್ಸ್ , ಮುಂತಾದವರ ಪಾತ್ರ ಇತ್ತು.
ಇನ್ನು ಪ್ರತಿಯೊಬ್ಬ ಕನ್ನಡ ಪ್ರಜೆ (ಕಾಂಗ್ರೆಸ್ ಸಂಸದರು,ಇನ್ನಿತರ ಕಾಂಗ್ರೆಸ್ಸಿಗರ ಮುಖವಾಡ ಎಗಲೇ ಬಯಲಿಗೆ ಬಂದದ್ದು)

ಒಟ್ಟಿನಲ್ಲಿ ಈ ಒಂದು ಕಾರಣಕ್ಕಾಗಿ ಪರೋಕ್ಷವಾಗಿ ಹೋರಾಡಿದ ಅಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಬೇಕದ್ದೆ.

ಕೇಂದ್ರ ಸರಕಾರ ಕರುನಾಡಿಗೆ ಸಂಬಂದಿಸಿದ ಈ ಒಂದು ವಿಷಯದಲ್ಲಿ ಮಾತ್ರ ನಮಗೆ ಸಹಕರಿಸಿದೆ(ಅದೂ ವ್ಯಾಪಕ ಟೀಕೆ ನಂತರ)

ಸಿರಿಗನ್ನಡಂ ಗೆಲ್ಗೆ .

ವೆಂಕಟೇಶ ರಾಯಚೂರು