ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕರ್ನಾಟಕದ ರಾಜ್ಯೋತ್ಸವದ ಸಮಯದಲ್ಲಿ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಟಿ.ಏ. ನಾರಾಯಣ ಗೌಡರ ಕರೆ - ನನಗೆ ಬಂದ ಪತ್ರ

ಅಕ್ಕರೆಯ ಕನ್ನಡ ಬಂಧು,

ರಾಜ್ಯೋತ್ಸವದ ಶುಭ ಹಾರೈಕೆಗಳು. ಕನ್ನಡನುಡಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಇದೀಗ ಘೋಷಿಸಿದೆ. ಆ ಮೂಲಕ ಒಕ್ಕೂಟ ವ್ಯವಸ್ಥೆಯ ಘನತೆಯನ್ನು ಎತ್ತಿ ಹಿಡಿದಿದೆ. ಕನ್ನಡನುಡಿಗೆ ದೊರೆತ ಈ ಪಟ್ಟ ಅಷ್ಟು ಸುಲಭವಾಗಿ ದೊರೆತದ್ದಲ್ಲ. ಇದಕ್ಕಾಗಿ ವರ್ಷಗಳ ಕಾಲ ನಿರಂತರ ಹೋರಾಟ ನಡೆಸಬೇಕಾಯ್ತು. ಕನ್ನಡಿಗರ ಒಗ್ಗಟ್ಟಿನ ಹೋರಾಟಕ್ಕೆ ಸಂದ ಜಯ ಇದು. ಈ ಒಗ್ಗಟ್ಟೇ ಕನ್ನಡಿಗರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮತ್ತು ನಾಳಿನ ನಾಡನ್ನು ಕಟ್ಟಲು ತುರ್ತಾಗಿ ಬೇಕಾಗಿರುವ ಜೀವಾಮೃತ. ಈ ದಿನ ಕರ್ನಾಟಕವು ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾಗಲು ನಮ್ಮ ಹಿರಿಯರು ಮಾಡಿದ ತ್ಯಾಗ, ಬಲಿದಾನ ಮತ್ತು ಹೋರಾಟಗಳನ್ನು ನಾವು ನೆನೆಯಬೇಕಾದ ದಿನ. ಈ ದಿನವನ್ನು ಪ್ರತಿವರ್ಷವೂ ಕನ್ನಡ ಬಾವುಟವನ್ನು ಹಾರಿಸಿ ಹಬ್ಬ ಮಾಡುವ ಮೂಲಕ ಆಚರಿಸುತ್ತೇವೆ. ಇದು ವಾಡಿಕೆ. ಆದರೆ ಈ ಸಂದರ್ಭದಲ್ಲಿ ನಾವು ಇಷ್ಟಾದರೆ ಸಾಕೇನು ಎಂದು ಆಲೋಚಿಸಬೇಕಾಗಿದೆ (ಅಧ್ಯಕ್ಷರ ಕರೆಗಾಗಿ ಇಲ್ಲಿ ಕ್ಲಿಕ್ಕಿಸಿ http://www.karnataka... ).

ಇಂತಿ
ಟಿ.ಏ.ನಾರಾಯಣ ಗೌಡ
ಆಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ

No votes yet