ಕದಂಬ
ಕದಂಬ ಪದದ ಒಂದು ಅರ್ಥ ಹೊಂಗೆ ಮರವೆಂದು ಇಂದು ತಿಳಿಯಿತು.
ಕದಂಬನೆಂದರೆ ಷಣ್ಮುಖ ಸ್ವಾಮಿಯೆಂದು ಅರ್ಥವಿದೆ.
ಕದಂಬವನವಾಸಿನಿ ಎಂದು ಕಾಳಿ/ಪಾರ್ವತಿಯನ್ನು ಕರೆಯುವರು.
ಇವಲ್ಲದೆ ಇನ್ನು ಹೆಚ್ಚು ಅರ್ಥಗಳು ಈ ಪದಕ್ಕೆ ಇರಬಹುದು.
..
ಆದರೆ ಕನ್ನಡದ ಪ್ರಥಮ ರಾಜವಂಶ-"ಕದಂಬ" ಪದವು ಯಾವ ಅರ್ಥದಿಂದ ಉಂಟಾಯಿತೆಂದು ಕುತೂಹಲ.
ಧನ್ಯವಾದ!

- Login or register to post comments
- 852 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಕದಂಬ
ಕದಂಬ ಎಂದರೆ ಸಂಸ್ಕೃತದಲ್ಲಿ ತಾಳೆಯ ಜಾತಿಗೆ ಸೇರಿದ ಈಚಲ ಮರ.
ಕದಂಬರ ಮೂಲಪುರುಷ ಮಯೂರವರ್ಮ ಇದೇ ಮರದ ಲಾಂಛನ ಹೊದಿದ್ದನೆಂಬ ಪ್ರತೀತಿಯಿದೆ.
ನಿಮ್ಮವ
ಬೆನಕ
ಕದಂಬ = ಈಚನ.. ಹ್ಞೂಂ
ಹೌದು ಇದು ಬಹಳ ಸರಿಯಾಗಿ ಹೊಂದುವುದು.
ಕಾಳಿದೇವಿಯು ಕದಂಬವನವಾಸಿನಿ, ಎಂದರೆ "ಈಚಲಗಾಡುಹೆಣ್ಣು".
ಹಾಗದರೆ ನಮ್ಮನ್ನಾಳಿದ ಮೊದಲ ಕನ್ನಡರಸತನ "ಈಚಲ" ರಾಜವಂಶ.
ಬನವಾಸಿಯಲ್ಲಿ ಈಚಲಮರಗಳು ಹೆಚ್ಚಾಗಿ ಬೆಳೆಯುತ್ತಿದ್ದವೇನು?
ಸವಿಯೊದಗೆ,
ಮಹೇಶ
ಕಂದಬ ಈಚಲವೇ?
ಕದಂಬ ವೃಕ್ಷದ ಬಗೆಗೆ ಬಿ ಜಿ ಎಲ್ ಸ್ವಾಮಿ ಮಾಹಿತಿ ನೀಡಿದ್ದಾರೆ. (ಹಸುರು ಹೊನ್ನು ಪು 44-45). ಅದು 30-40 ಅಡಿ ಎತ್ತರ ಬೆಳೆಯುತ್ತದೆ, ಸುಗಂಧ ಭರಿತ ಹೂವು ಬಿಡುತ್ತದೆ. Anthocephalus cadamba ಎಂಬ ವೈಜ್ಞಾನಿಕ ಹೆಸರುನ್ನುಳ್ಳ ಇದೇ, ಸಂಸ್ಕೃತದಲ್ಲಿಯೂ ಹೆಸರಾದ ಮರ ಹಾಗೂ ತಾಳಗುಂದ ಶಾಸನದ ಪ್ರಕಾರ ಕದಂಬ ವಂಶಕ್ಕೆ ಆ ಹೆಸರು ತಂದ ಮರ ಎನ್ನುತ್ತಾರೆ ಬಿ ಜಿ ಎಲ್ ಸ್ವಾಮಿಯವರು.
ಈ ಮರದ ಚಿತ್ರಗಳೂ ವೆಬ್ ನಲ್ಲಿ ಲಭ್ಯವಿವೆ.
url ಕೊಡಿ ಸ್ವಲ್ಪ
ಸುಮಾರು ದಿನ ನಾನು ಕದಂಬ ವೃಕ್ಷವೆಂದರೆ ಅತ್ತಿ ಹಣ್ಣಿನ ಮರ ಎಂದುಕೊಂಡಿದ್ದೆ. ವೆಬ್ನಲ್ಲಿ ಚಿತ್ರಗಳು ಲಭ್ಯವಿದೆ ಎಂದಿದೆಯಲ್ಲ? ದಯವಿಟ್ಟು url ಕೊಡ್ತೀರಾ?
ಎನಗಿಂತ ಕಿರಿಯರಿಲ್ಲ