ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ಹೊಸ ಕನ್ನಡ ಕೀಬೋರ್ಡ್ ಬಂತಂತೆ

March 17, 2006 - 1:34pm — honnung

ಇದೀಗ ಗೊತ್ತಾಯಿತು ಈ ಸುದ್ದಿ. ಕನ್ನಡದಲ್ಲಿ ಹೊಸ ಕೀಲಿಮಣೆ ಬಂದಿದೆಯಂತೆ.

ಇದನ್ನು ಹೆಲ್ವೆಟ್ ಪ್ಯಾಕರ್ಡ್ ಕಂಪನಿಯವರು ತಯಾರಿಸಿದ್ದಾರೆ. ಇದರ ವಿಶೇಷವೆಂದರೆ ಇದರಲ್ಲಿ ಪೆನ್ ಬಳಕೆ ಇದೆಯಂತೆ. ವ್ಯಂಜನಗಳಿಗಾಗಿ ಬಟನ್ ಗಳು ಇದ್ದು, ಪೆನ್ ಬಳಸಿ ಅವನ್ನು ಕಾಗುಣಿತ ಮಾಡಬಹುದಂತೆ. ಹೇಗೋ ಗೊತ್ತಿಲ್ಲ. ನಾವು ಎರಡೂ ಕೈಯಿಂದ ಕುಟ್ಟುತ್ತಿದ್ದರೆ ಪೆನ್ ಹೇಗೆ ಸಮಂಜಸವಾಗಿ ಬಳಸಬಹುದು? ಇಲ್ಲವೆ ಬರೀ ಒಂದೇ ಕೈಯಿಂದ ಬಟನ್ ಒತ್ತಿ ಮತ್ತೊಂದು ಕೈಯಿಂದ ಪೆನ್ ಉಪಯೋಗಿಸಬಹುದು. ಏನಾದರು ಆಗಲಿ, ಸರಳವಾಗಿ ಬಳಸುವಂತಿದ್ದರೆ ಸಾಕು.

ಅಬ್ಬಾ! ಇದರ ಬೆಲೆ ಹೆಚ್ಚಾಯಿತೇನೊ ಅನ್ನಿಸುತ್ತೆ. ಒಂದು ಕೀಬೋರ್ದಿಗೆ ಬರೀ 2000 ರೂಪಾಯಿಗಳು! ಅಲ್ಲದೆ ಇದಕ್ಕಾಗಿ ಬೇರೆ ತಂತ್ರಾಂಶ ಬಳಸಬೇಕಾಗಿ ಬರಬಹುದು. ನೋಡೋಣ, ಕಂಪ್ಯೂಟರೆನಲ್ಲಿ ಭಾರತೀಯ ಭಾಷೆಗಳನ್ನು ತರುವ ಈ ಪ್ರಯತ್ನ ಸಫಲವಾಗುವುದೆ ಎಂದು. ಯಾರಾದರು ಈ ಕೀಲಿಮಣೆಯನ್ನು ನೋಡಿದರೆ/ಬಳಸಿದರೆ ನಿಮ್ಮ ಅನಿಸಿಕೆಯನ್ನು ಮರೆಯದೆ ತಿಳಿಸಿ.

‹ ಕಾವೇರಿ ನೀರು ಹಂಚಿಕೆ ಬಗ್ಗೆ ತೀರ್ಪು ಹೊರಬಿದ್ದಿದೆ ಕನ್ನಡ-ತೆಲುಗು ಒಂದೇ ಲಿಪಿ ›
  • ಸುದ್ದಿ, ಸಮಾಚಾರ
~.~
  • Login or register to post comments
  • 853 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 17, 2006 - 5:46pm — pavanaja

ಉ: ಹೊಸ ಕನ್ನಡ ಲೇಖನಿಮಣೆ

pavanaja's picture

ಮೊದಲನೆಯದಾಗಿ -ಅದು ಕೀಲಿಮಣೆ (ಕೀಬೋರ್ಡ್) ಅಲ್ಲ. ಬದಲಿಗೆ ಅದೊಂದು ಲೇಖನಿಮಣೆ. ಡಿಜಿಟೈಸರ್ ನೋಡಿರಬಹುದು. ಅದರಲ್ಲಿ ಒಂದು ಪ್ಯಾಡ್ ಮತ್ತು ಪೆನ್ನು (ಲೇಖನಿ) ಇರುತ್ತವೆ. ಎಚ್‌ಪಿ ಲ್ಯಾಬ್‌ನವರು ತಯಾರಿಸಿರುವ ಲೇಖನಿಮಣೆಯಲ್ಲೂ ಸುಮಾರಾಗಿ ಹಾಗೆಯೇ ಇದೆ. ಇದರ ಕಾರ್ಯವಿಧಾನ ಸ್ವಲ್ಪ ವಿಚಿತ್ರ ಅನ್ನಿಸಬಹುದು. ಎಲ್ಲ ವ್ಯಂಜನ, ಸ್ವರ, ಸ್ವರ ಚಿಹ್ನೆ ಮತ್ತು ಒತ್ತುಗಳ ರೂಪಗಳು (ಅಥವಾ ಅಕ್ಷರಭಾಗಗಳು) ಪರದೆಯಲ್ಲಿ ಕಾಣುತ್ತವೆ. ನಿಮಗೆ ಬೇಕಾಗ ಅಕ್ಷರಭಾಗವನ್ನು ನೀವು ಲೇಖನಿಯನ್ನು ಅದಕ್ಕೆಂದೇ ಇರುವ ಪ್ಯಾಡ್ ಮೇಲೆ (ಅಥವಾ ಲೇಖನಿಯ ಇರವನ್ನು ಅರ್ಥೈಸಿಕೊಳ್ಳಬಹುದಾದ ಸ್ಥಳದಲ್ಲಿ ಅಂದರೆ ಮೇಜಿನ ಮೇಲೆ) ಕುಟ್ಟಿ ಆಯ್ಕೆ ಮಾಡಬೇಕಾಗುತ್ತದೆ. ಅನ್ನ ಎಂಬ ಪದವನ್ನು ರೂಪಿಸಲು ನೀವು ಮೊದಲು ಅ ಅಕ್ಷರದ ಮೇಲೆ ನಂತರ ನ ಅಕ್ಷರ ನಂತರ ನ ಅಕ್ಷರದ ಒತ್ತಿನ (ಅಕ್ಷರಭಾಗ) ಮೇಲೆ ಪೆನ್ನಿನಿಂದ ಕುಟ್ಟಿ ಆಯ್ಕೆ ಮಾಡಬೇಕು.

ಈ ವಿಧಾನವನ್ನು ಬಳಸಲು ಸ್ವಲ್ಪ ತರಬೇತಿ ಅಗತ್ಯ. ಭಾಷೆಯಲ್ಲಿ ನಾವು ಅಕ್ಷರ, ಪದಗಳನ್ನು ಜೋಡಿಸುವ ಸಹಜ ರೂಪದಲ್ಲಿ ಇಲ್ಲಿ ಅಕ್ಷರ, ಪದಗಳ ಸೃಷ್ಟಿ ಇಲ್ಲ. ಇದು online handwriting recognition ಅಲ್ಲ.

ಬಹುಶಃ, ಎಚ್‌ಪಿ ಲ್ಯಾಬ್ಸ್‌ನಲ್ಲಿ ಕೆಲಸ ಮಾಡುತ್ತಿರುವ, ಈ ಲೇಖನಿಮಣೆಯ ವಿನ್ಯಾಸಕ್ಕಾಗಿ ದುಡಿದಿರುವ ಹಾಗೂ ಸಂಪದದ ಸದಸ್ಯರಾಗಿರುವ ಪ್ರಶಾಂತ ಪಂಡಿತರು ಆಫಿಶಿಯಲ್ ಮಾಹಿತಿ ನೀಡಬಹುದು.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 17, 2006 - 8:26pm — ಪ್ರಶಾಂತ.ಪಂಡಿತ

ಅಫಿಶಿಯಲ್ ಮಾಹಿತಿ

ಪ್ರಶಾಂತ.ಪಂಡಿತ's picture

ಪವನಜರು ಹೇಳಿದಂತೆ ಇದೊಂದು ಲೇಖನಿಮಣೆ (ಅವರು ಆರಂಭಿಕ ಹಂತದಲ್ಲಿ ಇದನ್ನು ನೋಡಿದ್ದಾರೆ). ಇದರ ಚಿತ್ರವನ್ನು Electronics For You ಪತ್ರಿಕೆಯಲ್ಲಿ ನೋಡಬಹುದು. ಪ್ಯಾಡಿನ ಮೇಲೆ ವ್ಯಂಜನಗಳು ಹಾಗು ಸ್ವರಗಳ ಲೇಔಟ್ ಇರುತ್ತದೆ. ಲೇಖನಿಯಿಂದ ಕುಟ್ಟುವ ಮೂಲಕ ಅವುಗಳನ್ನು ಆಯ್ದುಕೊಳ್ಳಬಹುದು. ಕೊಂಬು, ದೀರ್ಘ, ಸುಳಿ, ತಲಗಟ್ಟು ಮುಂತಾದವನ್ನು ಬೇಕಾದ ವ್ಯಂಜನದ ಮೇಲೆ ಬರೆಯುವ ಮೂಲಕ ಕಾಗುಣಿತ/ಸಂಯುಕ್ತಾಕ್ಷರಗಳನ್ನು ಪಡೆಯಬಹುದು. ಲೇಖನಿ ಇರುವುದರಿಂದ ಸಹಜವಾಗಿ ಒಂದೇ ಕೈಯನ್ನು ಉಪಯೋಗಿಸಬೇಕು (ಕಾಗದದ ಮೇಲೆ ಬರೆಯುವ ಹಾಗೆ). ಇದರಿಂದ ಬರವಣಿಗೆಯ ವೇಗ ಕುಂಠಿತವಾಗುವುದೆಂಬ ಅನುಮಾನ ಸಹಜ. ಈವರೆಗೆ ನಮ್ಮ ಪರೀಕ್ಷೆಯಿಂದ ಕಂಡುಕೊಂಡ ವೇಗ ನಿಮಿಷಕ್ಕೆ ಸುಮಾರು ೧೮-೨೦ ಪದಗಳು. ಈ ವೇಗವನ್ನು ಐದು ನಿಮಿಷದ ಪರಿಚಯ ಹಾಗು ಸುಮಾರು ಅರ್ಧ ದಿನದ ಬಳಕೆಯಿಂದ ಸಾಧಿಸಬಹುದು. ಹತ್ತೂ ಬೆರಳುಗಳನ್ನು ಬಳಸುವ ನುರಿತ typistನ ವೇಗ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಆದರೆ ಈ ವೇಗ ಸಾಧಿಸಲು ಹಲವಾರು ತಿಂಗಳ ಸತತ ಅಭ್ಯಾಸ ಅಗತ್ಯ. Pen ಮತ್ತು Keyboardನ ವೇಗದ ಹೋಲಿಕೆಯೇ ಅಪ್ರಸ್ತುತ. ಅಂದ ಹಾಗೆ, ನಾನು ಸಂಪದಕ್ಕೆ ಬರೆವಾಗಲೆಲ್ಲ ನಿರ್ಮಾಣ ಹಂತದಲ್ಲಿದ್ದ ಈ ಉಪಕರಣವನ್ನೇ ಬಳಸುತ್ತಿದ್ದೆ. ಈಗ ಪೂರ್ಣಗೊಂಡ product ಲಭ್ಯವಿದೆ. ಸಧ್ಯಕ್ಕೆ Windows ಆವೃತ್ತಿ ಮಾರುಕಟ್ಟೆಯಲ್ಲಿ ದೊರೆಯಲಿದ್ದು Linux ಆವೃತ್ತಿಯು ಕೆಲ ತಿಂಗಳಲ್ಲಿ ಲಭ್ಯವಾಗಲಿದೆ. ಸಧ್ಯಕ್ಕೆ ಇಷ್ಟು ಮಾಹಿತಿ ಸಾಕೇನೋ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 17, 2006 - 8:31pm — ravikh

EFY link ಎಲ್ಲಿ

ravikh's picture

ವಂದನೆಗಳೊಂದಿಗೆ,
ರವಿಶಂಕರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 17, 2006 - 8:36pm — ಪ್ರಶಾಂತ.ಪಂಡಿತ

ಕ್ಷಮಿಸಿ ಇಲ್ಲಿದೆ link

ಪ್ರಶಾಂತ.ಪಂಡಿತ's picture

EFY

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 17, 2006 - 10:29pm — hpn

ಚಿತ್ರ ಇಲ್ಲಿದೆ :)

hpn's picture

kannada gesture keyboard
ಚಿತ್ರ ಕೃಪೆ: EFY, http://www.electronicsforu.com/
(click for full view)

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 20, 2006 - 10:22am — ಮಹೇಶ ಭೋಗಾದಿ

ಒಳ್ಳೆಯ ಬೆಳೆವಣಿಗೆ

ಮಹೇಶ ಭೋಗಾದಿ's picture

ಇದು ಬಹಳ ಸಂತೋಷದ ವಿಷಯ.

ಕನ್ನಡದ ಬಗ್ಗೆ ಈ ರೀತಿ ಪ್ರಗತಿಪರ ವಿದ್ಯಮಾನಗಳು ನಡೆಯುತ್ತಿರುವುದು, ನಿಜವಾಗಲು ಕನ್ನಡದ ಬಗ್ಗೆ ಬಹಳ ಜನರಿಗೆ ಪ್ರೋತ್ಸಾಹ ನೀಡುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆ-೧
  • ಇನ್ಫೋಸಿಸ್‌ಗೆ ಮುತ್ತಿಗೆ
  • ಬೆಂಗಳೂರಿನಲ್ಲಿ ಹಳೆಯ ಕನ್ನಡ ಚಿತ್ರಗಳ 'ಹಬ್ಬ'
  • ನಾನು ಕಾಗುಣಿತವನ್ನು ಕಲಿತ ಬಗೆ
  • IBM Indic IME
Syndicate content

ಲೇಖಕರು

honnung's picture

ಪರಿಚಯ

A fellow kannadiga like to see much of Kannada on net world

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನ್ನಡ ರಸಪ್ರಶ್ನೆ:೯
  • ಅಳುವ ಗಂಡಸ ನಂಬಬೇಡ?
  • ಮಾಹಿತಿ ಬೇಕಿದೆ
  • ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
  • ಮೆಱವಣಿ, ಮೆಱವಣಿಗೆ
  • ಪೞೆಯುೞಿಕೆಗಳು
  • ಹೆಂಡತಿ-ಎಂದರೆ ಜೋಕು ಯಾಕೆ ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
ಇನ್ನಷ್ಟು


"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator