ಗರ್ವ, ಮಾಯಾಮೃಗ, ಮನ್ವಂತರ ಹಾಗು ಮುಕ್ತ ಶೀರ್ಷಿಕೆ ಗೀತೆಗಳು
ನಮಸ್ಕಾರ ಗೆಳೆಯರೆ ನನ್ನ ಬಳಿ ಕೆಲವು ಕನ್ನಡ ಧಾರಾವಾಹಿಗಳ ಶೀರ್ಷಿಕೆ ಗೀತೆಗಳಿವೆ. ಅವು ಗರ್ವ, ಮಾಯಾಮೃಗ, ಮನ್ವಂತರ ಹಾಗು ಮುಕ್ತ. ನಿಮಗೆ ಈ ಗೀತೆಗಳು ಇಷ್ಟವಿದ್ದಲ್ಲಿ ನೀವು ಇಲ್ಲಿಂದ 'ಡೌನ್ಲೋಡ್' ಮಾಡಿಕೊಳ್ಳಬಹುದು. http://pratapa.blogspot.com/2006/02/kannada-serial-title-songs.html ಧನ್ಯವಾದಗಳು. ಪ್ರತಾಪ (ಈ ವಿಷಯ ಈ ಫೊರಮ್ನಲ್ಲಿ ಸೂಕ್ತವಲ್ಲದಿದ್ದರೆ ದಯವಿಟ್ಟು ಬೇರೆಲ್ಲಿಗಾದರೂ ವರ್ಗಾಯಿಸಿ)

- Login or register to post comments
- 1346 hits
- Email this forum





RSS:
ಧನ್ಯವಾದಗಳು
ಧನ್ಯವಾದಗಳು. ಪ್ರತಾಪ ರವರೆ,
ನನಗೆ ಈಗಲೂ ಮಾಯಾಮೃಗ ಜ್ಞಾಪಕವಿದೆ. ನಮ್ಮ ಜಯನಗರ ನ್ಯಾಷನಲ್ ಕಾಲೇಜು ಬಿಡುತ್ತಿದ್ದುದೇ ನಾಲ್ಕೂ ವರೆಗೆ, ಹಾಗೆಯೇ ಧಾರಾವಾಹಿ ಸಮಯ ಕೂಡ ನಾಲ್ಕೂ ವರೆಗೆ. ಧಾರಾವಾಹಿ ನೋಡುವ ಸಲುವಾಗಿ ಎಲ್ಲೂ ಬ್ರೇಕೇ ಹಾಕದೇ( ಬನಶಂಕರಿ ಬಿಡಿಎ ಕಾಂಪ್ಲೇಕ್ಸ ಹತ್ತಿರವೂ ಕೂಡ!!!!) ಸೈಕಲ್ನಲ್ಲಿ ಮನೆಗೆ ೧೦ ನಿಮಿಷಗಳಲ್ಲಿ ಬಂದುಬಿಡುತ್ತಿದ್ದೆ. ಆಗ ಜಾಹಿರಾತುಗಳ ಮೊದಲ ಕಂತು (ಒಟ್ಟು ಮೂರಿರುತ್ತಿರುತ್ತಿತ್ತು.) ಮುಗಿದಿರುತ್ತಿತ್ತು. ಉಳಿದ ೨೦ ನಿಮಿಷ ಧಾರಾವಾಹಿ ನೋಡಲು ಸಾಧ್ಯವಾಗುತ್ತಿತ್ತು.
Re: ಧನ್ಯವಾದಗಳು
ಪ್ರತಾಪ್,
'ಗರ್ವ'ದ ಹಾಡನ್ನು ತುಂಬ ದಿನದಿಂದ ಹುಡುಕ್ತಾ ಇದ್ದೆ...ತಿಳಿಸಿದಕ್ಕೆ ತಮಗೆ ನನ್ನಿ
---------------
ಈ ನಾನು ಆ ನೀನು ಒಂದೇ ತಾನಿನ ತಾನು - ದ.ರಾ.ಬೇಂದ್ರೆ
ಚೆನ್ನಾಗಿದ್ದವು
ಬಹಳ ದಿನಗಳ ಹಿಂದೇನೆ ನಿಮ್ಮ ಬ್ಲಾಗಿನಿಂದ ಡೌನ್ಲೋಡ್ ಮಾಡಿಕೊಂಡಿದ್ದೆ. (ಆಗ ಯಾವುದೋ ಶೇರಿಂಗ್ ವೆಬ್ಸೈಟಿನಲ್ಲಿತ್ತು ಅನ್ಸತ್ತೆ - ನೀವೇ ಹೋಸ್ಟ್ ಮಾಡಿ ಒಳ್ಳೇ ಕೆಲ್ಸ ಮಾಡಿದ್ರಿ).
ಆದರೂ ಆಡಿಯೋ ಸ್ವಲ್ಪ ಡಿಸ್ಟರ್ಬೆನ್ಸ್ ಇದೆ ಅನ್ನಿಸಿತು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
TIvi sIriyal shirshikegaLa gItegaLu
praatap ravarige namaskaara.
it is great to hear the title songs of some of the serials, that you have mentioned. They are really effective, and meaning ful as well.
Among them i liked is of course, ' Mukta' and the title song of
'Gupta vahini'
Thanks for helping to record the above said title songs.
Re: TIvi sIriyal shirshikegaLa gItegaLu
ಧನ್ಯವಾದ
ಯಾರಿಗಾದರೂ ಸೃಷ್ಟಿ ಎಂಬ ಧಾರವಾಹಿನಿಯ ಶೀರ್ಷಿಕೆ ಗೀತೆ ಸಿಕ್ಕರೆ ತಿಳಿಸಿ.
ಬಹಳಚೆನ್ನಾಗಿದೆ