22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Breaking News ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?

November 13, 2008 - 5:55pm
anil.ramesh
Breaking Newsಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು? ಹಾಗೇನೆ Flash Newsಗೂ ಕನ್ನಡದಲ್ಲಿ ಏನಂತಾರೆ? ಎರಡಕ್ಕೂ ಒಂದೇ ಅರ್ಥ ಬರುವಂತೆ "ಇದೀಗ ಬಂದ ಸುದ್ದಿ" ಅಂತ ಹೇಳಬಹುದಾ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by mahesha on
ಮುರಿಯುವ ಸುದ್ದಿ (drinking water)ಹಾಗೆ ಹೊಳೆ ಸುದ್ದಿ :) ತಮಾಶೆ ಇರಲಿ Breaking news : ದೊಡ್ಡ ಸುದ್ದಿ( ಗಮನಿಸಿರಿ, ನಮ್ಮ ಮಾತಲ್ಲಿ.. ಅದು ಊರಲ್ಲಿ ದೊಡ್ಡ ಸುದ್ದಿಯಾಗಿತ್ತು :) ಅಂದರೆ ಊರಲ್ಲೇ breaking newsಆಗಿತ್ತು) Flash news : ಸುದ್ದಿ ಇಣುಕು/ತುಣುಕು http://maaysa.wordpr...

Submitted by vikashegde on
ಸ್ಪೋಟ ಅನ್ನುವ ಹಾಗಿಲ್ಲ, ಅದು ಸಕ್ಕದ :) ಸಿಡಿಯುವಂಥ ಸುದ್ದಿ, ಸುದ್ದಿ ಸಿಡಿತ, ಸಿಡಿದ ಸುದ್ದಿ ಏನಾದ್ರೂ ಅನ್ಬೇಕು. ************************** http://vikasavada.bl... **************************

Submitted by mahesha on
ನಾನು ಮುನ್ನವೇ ಹೇಳಿಯಾಗಿದೆ ಈ ವಿಶಯವಾಗಿ. ನಿಮ್ಮ ಸ್ಪೋಟಕ ಸುದ್ದಿಗೆ ಏನಾದ್ರೂ ಹೇಳಿದ್ರೆ ನೀವು ಬೇಜಾರ್‍ ಮಾಡಿಕೋತೀರ ಅಂತ ಸುಮ್ನಾದೆ... ನೀವು ನನ್ನ ಪ್ರತಿಕ್ರಿಯೆ ನಿರೀಕ್ಶಿಸಿ ಬಯಸಿದ್ದೀರಿ ಎಂದು ನನಗೆ ತಿಳೀಲಿಲ್ಲ :) ’ಸ್ಪೋಟಕ ಸುದ್ದಿ’ ಅಂನೋದು ಇಂಗ್ಲಿಶಲ್ಲಿ ಬ್ರೇಕಿಂಗ್ ಸುದ್ದಿ ಅನ್ನೋದಕ್ಕಿಂತ ಒಂತಾರ ಹಿಡಿಸದಂತೆ ಇರತ್ತೆ. http://maaysa.wordpr...