~
ರಾಜಕೀಯ ಹಾಗೂ ಇನ್ನಿತರ ವಿಷಯ ಸಂಬಂದಿ ವಿಷಯಗಳಿಗೆ ಮಾಡುವ ಮುಷ್ಕರ/ಸಮಾರಂಭಗಳಿಗೆ ಬೆಂಗಳೂರಿನ ಜನ ಪರಿತಪಿಸಬೇಕೆ? ಬೇರೆ ಏನಾದರೂ ವ್ಯವಸ್ಥೆ ಮಾಡಬೇಕೆ?
ಸ್ನೇಹಿತರೆ ,
ನಿಮಗೆ ಗೊತ್ತಿರುವ ಹಾಗೇ ಮೊನ್ನೆ ಹೋದ ಸೋಮವಾರ ಬೆಂಗಳೂರಿನಲ್ಲಿ ತಡ ರಾತ್ರಿವರೆಗೆ ಟ್ರಾಫಿಕ್ ಜಾಮ್ ಆಗಿದ್ದು ಯಾರು ಇನ್ನು ಮುಂದೆ ಅಸ್ತು ಸುಲಭವಾಗಿ ಮರೆಯಲು ಸಾದ್ಯವಿಲ್ಲ.
ಕುಮಾರಸ್ವಾಮಿ ಅದ್ಯಕ್ಷರಗಿದ್ದಕ್ಕೆ ಒಂದು ಸಮಾರಂಭ ಇಟ್ಟುಕೊಂಡು ಅದಕ್ಕಾಗಿ ಅರಮನೆ ಮೈದಾನ ಉಪಯೋಗಿಸಿಕೊಂಡು , ಅಡ್ಡ ದಿಡ್ಡಿ ಗಡಿಗಳನ್ನು ನಿಲ್ಲಿಸಿ ರಸ್ತೆ ಸಂಚಾರ ಅಸ್ತ ವ್ಯಸ್ತ ಮಾಡಿ ,೩೦ ಕೋಟಿ ಖರ್ಚು ಮಾಡಿ/ಮಾಡಿಸಿ ಕುಮಾರಸ್ವಾಮಿ ಗಳಿಸಿದ್ದೇನು?
ಅದಂತೂ ನಮಗೆ ಗೊತ್ತಿಲ್ಲ , ಆದರೆ ನಮಗೆ ಎಷ್ಟು ತೊಂದರೆ ಆಗಿದೆ ಅಂತ ಹೇಳಿಕೊಂದದ್ದಕ್ಕೆ/ ಪೇಪರ್ ನಲ್ಲಿ ಅನಿಸಿಕೆ/ಟಿವಿಗೆ ಅನಿಸಿಕೆ ತಿಳಿಸಿದ್ದೆ ತಡ ಕುಮಾರ ಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ/ ಹಾಗೂ ಹಳ್ಳಿಗರ ಪರ ವಕಾಲತ್ತು ವಹಿಸುವಂತೆ ಮಾತಾಡಿ ಪಟ್ಟಣದವರನ್ನ ಅದರಲ್ಲೋ
ಬೆಂಗಳೂರಿನ ಜನ ಅದರಲ್ಲೋ ಮುಖ್ಯವಾಗಿ ಐ ಟಿ , ಹಾಗೂ ವಿದ್ಯಾವಂತ ಪೋಷಕರ ಹಾಗೂ ಅವರ ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿ ,ಇನ್ನು ಕೋಪ ಬರಲು ಕಾರಣವಾಗಿದ್ದಾರೆ.
ಈಗ ನೀವು ಹೇಳಿ ಅವರು ಮಾಡಿದ್ದೂ ಸರಿಯ?
ತಪ್ಪ?
ಇಲ್ಲ ನಾವು ನಮ್ಮ ಮಕ್ಕಳ ಬಗ್ಗೆ ಅವರು ಸ್ಕೂಲ್ ನಿಂದ ವಾಪಸ್ಸು ಮನೆಗೆ ಬರದಿದ್ದ ಬಗ್ಗೆ ಯೋಚಿಸಿದ್ದೆ ತಪ್ಪ?
ಈ dombaratakke ಕೊನೆ ಎಂದು?

- Login or register to post comments
- 152 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ರಾಜಕೀಯ ಹಾಗೂ ಇನ್ನಿತರ ವಿಷಯ ಸಂಬಂದಿ ವಿಷಯಗಳಿಗೆ ಮಾಡುವ ಮುಷ್ಕರ/ಸಮಾರಂಭಗಳಿಗೆ ಬೆಂಗಳೂರಿನ ಜನ ಪರಿತಪಿಸಬೇಕೆ? ಬೇರೆ ಏನಾದರೂ ವ್ಯವಸ್ಥೆ ಮಾಡಬೇಕೆ?
ರಾಕೇಶ್ ಶೆಟ್ಟಿ
ವೆಂಕಟೇಶ್
ಈ ವಿಷಯದ ಬಗ್ಗೆ ನಾನು ಸಂಪದದಲ್ಲಿ ಬರೆದಿದ್ದೆ ಇಲ್ಲಿ ನೋಡಿ http://sampada.net/blog/rakesh-shetty/17/11/2008/13730
ಕುಮಾರಸ್ವಾಮಿ ಕೊಟ್ಟ ಪ್ರತಿಕ್ರಿಯೆ ನೋಡಿದೆ, ಪಾಪ ಅವರಿಗೆ ತಾವೇನು ಮಾತಾಡಿದ್ದು ಅಂತ ತಿಳಿದಿಲ್ಲ , ತಿಳಿಯದೆ ಮಾಡಿದ ತಪ್ಪಿಗೆ ಈ ಕಂದನನ್ನು ಕ್ಷಮಿಸು ಕರ್ತನೆ ಎನ್ನೋಣವೇ
ಈಗ ಚೆಂಡು ನ್ಯಾಯಾಲಯದ ಮೆಟ್ಟಿಲೇರಿದೆ , ಬಹುಶ ಇನ್ನ್ಮುಂದೆ ಇಂತ ಜಾತ್ರೆಗಳನ್ನು ಊರ ಹೊರಗೆ ಮಾಡಿಸುತ್ತಾರೆ ಅನ್ನಿಸುತ್ತೆ.