~
ವ್ಯಂಗ್ಯಚಿತ್ರವೆನ್ನಬೇಡಿ ನಗೆಚಿತ್ರವನ್ನಿ
Cartoon = comic drawing
cartoon (ನಾ) ಹಾಸ್ಯಚಿತ್ರ, ವಿಡಂಬನ ಚಿತ್ರ, ವ್ಯಂಗ್ಯ ಚಿತ್ರ
ಆದರೆ ನಾವೆಲ್ಲ ವ್ಯಂಗ್ಯಚಿತ್ರ ಎಂಬ ಪದವನ್ನೇ ಬಳಸ್ತೀವಲ್ಲ.. ವ್ಯಂಗ್ಯಕ್ಕೆ ಒಂದು ನೆಗಟಿವ್ ಅರ್ಥ ಇದೆ.
ವ್ಯಂಗ್ಯ (ಸಂ) (ನಾ) ೧ ಕೊಂಕು, ಅಣಕ, ಚುಚ್ಚುಮಾತು
ಆದರೆ ಹಲವು ಕಾರ್ಟೂನ್ಗಳು ಅಣಕ,ಕೊಂಕು ಆಗಿರಲ್ಲ. ಅದಕ್ಕೆ ಅವನ್ನು ನಗೆಚಿತ್ರ / ನಗೆಪಾಪೆ ಎಂದು ಕರೆದರೆ ಚನ್ನಲ್ಲವೇ.

- Login or register to post comments
- 166 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ವ್ಯಂಗ್ಯಚಿತ್ರವೆನ್ನಬೇಡಿ ನಗೆಚಿತ್ರವನ್ನಿ
ನಗೆ ತರಿಸುವ ಚಿತ್ರಗಳನ್ನು ನಗೆಚಿತ್ರ ಎನ್ನೋಣ,ಉಳಿದುವು ವ್ಯಂಗ್ಯಚಿತ್ರ ಎಂದಿರಲಿ.
*ಅಶೋಕ್
ಉ: ವ್ಯಂಗ್ಯಚಿತ್ರವೆನ್ನಬೇಡಿ ನಗೆಚಿತ್ರವನ್ನಿ
ವ್ಯಂಗಚಿತ್ರವೆಂದರೆ, ಕೆಲವು ನಮ್ಮ ಕಣ್ಣಿಗೆ ಕಾಣುತ್ತಿರುವ ಸಂಗತಿಗಳನ್ನು ವ್ಯಂಗ್ಯ ಚಿತ್ರಕಾರ ಹೇಗೆ ಅರ್ಥೈಸುತ್ತಾನೆ ಎನ್ನುವುದರ ಮೇಲೆ ಹೋಗುತ್ತದೆ. ಪ್ರತಿ ವ್ಯಂಗ್ಯಚಿತ್ರವೂ ನಗುವಿನ ಹೊನಲನ್ನು ಹರಿಸಬೇಕೆಂದಿಲ್ಲ. ವಿಚಾರಕ್ಕೆ ಎಡೆಮಾಡಿಕೊಡುವ ಒಂದು ಪ್ರಕ್ರಿಯೆ, ಅನ್ನೋಣವೇ ? ವ್ಯಂಗ್ಯದಲ್ಲಿ ಸಾಮಾನ್ಯಘಟನೆಗಳಿಗೂ ಉಪ್ಪುಕಾರ ಹಚ್ಚಿ ತನ್ನ ಮಾತಿನ ಚಕಮಕಿಯಲ್ಲಿ ಹಾಗೂ ರೇಖೆಗಳ ಅಂಕು ಡೊಂಕುಗಳಲ್ಲಿ ಕಳಕಳಿಯಿಂದ ಹೇಳುವುದೇ ಆಗಿದೆ. ಉದಾಹರಣೆಗೆ, ನಾನು ಕುಳ್ಳ. ಹೊಟ್ಟೆದಪ್ಪ. ದೊಡ್ಡಮೂಗು, ತಲೆಬೋಳು. ಕಡ್ಡಿಕಾಲಿನ ವ್ಯಕ್ತಿ. ಈ ಮಾಹಿತಿಗಳು, ಲಕ್ಷ್ಮಣ್ ರಿಗೆ ಒಳ್ಳೆಯ ಗ್ರಾಸವನ್ನು ಒದಗಿಸಿ, ಅವರು ನಮ್ಮನ್ನು ಅಣಕವಾಡದೆ, ಏನನ್ನೋ ಹೇಳಿ, ವಾಸ್ತವಿಕತೆಗೆ ನಾವೇ ಮುಗುಳುನಗುವಂತೆ, ಪ್ರೇರೇಪಿಸುತ್ತಾರೆ. ಅಲ್ಲವೇ. ನಮ್ಮ ಹರಿಯವರನ್ನು ಕೇಳಿ. ಇದಕ್ಕೆ ಸಮಂಜಸವಾದ ಉತ್ತರ ಸಿಕ್ಕೀತು !
ಏ
ಕನ್ನಡ ನನ್ನ ತಾಯ್ನುಡಿ; ನನ್ನುಸಿರು.
ಉ: ವ್ಯಂಗ್ಯಚಿತ್ರವೆನ್ನಬೇಡಿ ನಗೆಚಿತ್ರವನ್ನಿ
ಹು..
ಎಲ್ಲಾ ಕಾರ್ಟೂನ್ಗಳನ್ನು ವ್ಯಂಗ್ಯಚಿತ್ರ ಅನ್ನೋದು ಸರಿಯಿಲ್ಲ..
ನನ್ನಿ
-ಮಹೇಶ
ನನ್ನ ಕವನಗಳು
http://maaysa.wordpress.com/