~
ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇಂದು(೧ನೇ ಡಿಸೆಂಬರ್ ೨೦೦೮) ಸಂಜೆ ೬.೦೦ಱಿಂದ ೭.೪೫ಱವರೆಗೆ ಪಶ್ಚಿಮ ದಿಗಂತದಲ್ಲಿ ಮೞೆಮೋಡಗಳು ಅಡ್ಡ ಬರದೆ ನಮಗೆ ಸಹಕರಿಸಿದ್ದಱಿಂದಲೂ ಗುರು ಶುಕ್ರ ಮತ್ತು ಚಂದ್ರರ ಯುತಿಯನ್ನು ಪೂರ್ವಾಷಾಢ ನಕ್ಷತ್ರ ಧನೂರಾಶಿಯಲ್ಲಿ ನಾನು ನೋಡಿದೆ. ನಾಳೆ ಚಂದ್ರ ಇನ್ನೂ ಮುಂದೆ ಹೋಗಿ ಗುರು ಶುಕ್ರರನ್ನು ಸಂಧಿಸಬಹುದು ಅಥವಾ ದಾಟಿಯೂ ಹೋಗಬಹುದು. ಅದನ್ನೂ ನೋಡುವ ತವಕದಲ್ಲಿದ್ದೇನೆ.

- Login or register to post comments
- 177 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಹೌದು...
ಚೆನ್ನಾಗಿತ್ತು...
ನಾಳೆಯ ಸಂಜೆಗೆ ಕಾಯ್ತಿರ್ತೀನಿ...
-ಅನಿಲ್.
ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ನಾಳೆ ಸಂಜೆಗೆ ಚಂದ್ರ ಒಂದು ೧೦ ಡಿಗ್ರಿ ಅಷ್ಟು ಮೇಲೆ ಹೋಗ್ಬಿಟ್ಟಿರತ್ರೀ..
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಬಹುಶಃ ಇಂದು ಕಂಡ ಹಾಗೆ ಕಾಣುವುದಿಲ್ಲವೇನೋ ಹಾಗಿದ್ರೆ?
-ಅನಿಲ್.
ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇಲ್ಲಿ ಈ ಮೂಱೂ ಗ್ರಹಗಳ ಯುತಿ ನೋಡಿ ತಕ್ಷಣವೇ ವಿಮಾನವೇಱಿ ಲಂಡನ್‍ನಲ್ಲಿ ಸಂಜೆ ೬.೩೦ ಸಂಜೆ (ಅಂದರೆ ಭಾರತದ ರಾತ್ರಿ ೧೨.೩೦ಗೆ) ಸೇರಿದ್ದೆನೆಂದಿಟ್ಟುಕೊಂಡಿದ್ದರೆ ಈ ಚಂದ್ರ ಗುರುಶುಕ್ರರನ್ನು ಸಂಧಿಸುವುದನ್ನು ನೋಡಬಹುದಿತ್ತೇನೋ? ಚಂದ್ರನ ಗತಿ ದಿನಕ್ಕೆ ಸುಮಾರು ೧೩ ಡಿಗ್ರಿ ಆಗುವುದಱಿಂದ ಬೇಱೆ ಬೇಱೆ ದೇಶಗಳಲ್ಲಿ ಸಂಜೆ ನೋಡುವಾಗ ಚಂದ್ರನ ಚಲನೆ ಬದಲಾಗುವುದನ್ನು ನೋಡಬಹುದು.