ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ಅಲ್ಲಿ ಎಲ್ಲಿ ಸೇರುತ್ತದೆ?

December 3, 2008 - 11:35am — kpbolumbu

ಅಲ್ಲಿ ಎಲ್ಲಿ ಸೇರುತ್ತದೆ?
ಹಾಗೆನ್ದರೇನು ಸ್ವಾಮೀ....ಅಲ್ಲೆಲ್ಲೋ ಸೇರುತ್ತೆ ನನ್ಗೇನ್ ಗೊತ್ತು..ಅನ್ಬೇಡಿ, ಯಾಕೆನ್ದರೆ ಅಲ್ಲಿ ಎಲ್ಲಾ ಕಡೆ ಬೇಕಾಗುತ್ತೆ ಕಾಣ್ರಿ...ಇದು ಏಳನೇ ವಿಭಕ್ತಿ ಪ್ರತ್ಯಯ ಪ್ರಕರಣ.
 
ಈವೊತ್ತಿನ್ ರೂಢಿಯನ್ತೆ ಏಳನೇ ವಿಭಕ್ತಿ ನಲ್ಲಿ ಅಲ್ಲವೇ..ಇನ್ನೆಲ್ಲಿ ಅಲ್ಲಿ..ಛೇ..ಬಿಡಿ ಸ್ವಾಮೀ..ವಿಷ್ಯಕ್ಕೆ ಬರ್ತೇನೆ.

ಕನ್ನಡ+ಅಲ್ಲಿ = ಕನ್ನಡದಲ್ಲಿ
ನಗರ+ಅಲ್ಲಿ  = ನಗರದಲ್ಲಿ
ಕಿಟಕಿ+ಅಲ್ಲಿ = ಕಿಟಕಿಯಲ್ಲಿ
ಮನೆ+ಅಲ್ಲಿ = ಮನೆಯಲ್ಲಿ; ಮನೇನಲ್ಲಿ ತಪ್ಪು(ಮನೇಲಿ ಸರಿ, ಅದರ ಕುರಿತು ಮುನ್ದಿನ ಬರೆಹದಲ್ಲಿ)
ಊರು+ಅಲ್ಲಿ = ಊರಿನಲ್ಲಿ

(ಕೊನೆಯ ಸ್ವರ ಒ ಆಗಿರುವನ್ಥ ಉದಾಹರಣೆಗಳ ಕುರಿತು ಮುನ್ದಿನ ಬರೆಹದಲ್ಲಿ)

ಕನ್ನಡ+ಅಲ್ಲಿ = ಕನ್ನಡದಲ್ಲಿ ಯಾಕಾಗ್ಬೇಕು....ಕನ್ನಡಾನಲ್ಲಿ ಅಲ್ಲವೇ...ಹಂಗೇ ತಾನೇ ನಾವೆಲ್ಲ ಅನ್ನೋದು..ಅನುಮಾನ ಬನ್ದಿರುತ್ತೆ.
ಅಲ್ಲಿ ಎಲ್ಲಿ ಸೇರುತ್ತೆ ಎನ್ದರೆ ಅ ಆದಮೇಲೆ ಸೇರುತ್ತೆ. ಹಾಗಾಗಿ ಅಲ್ಲಿ ಸೇರುವ ಮುಂಚೆ ಅ ಸೇರಬೇಕು..ಅದೇ ಕಾಣ್ರಿ ಆರನೇ ವಿಭಕ್ತಿ ಅನ್ನಾದು.....
(ಕನ್ನಡ ಪತ್ರಿಕೆಯೊನ್ದರಲ್ಲಿ ಇದರ ಬಗ್ಗೆ ಚರ್ಚೆ ನಡೆಸಿದ್ದರು, ಆದರೆ ಪರಿಹಾರ ಅವರಿಗೂ ಗೊತ್ತಿರಲಿಲ್ಲ.)

ಇನ್ತಿರೆ,

ಕನ್ನಡ+ಅ+ಅಲ್ಲಿ = ಕನ್ನಡದಲ್ಲಿ (ಕನ್ನಡಂ ಎನ್ದೂ ತೆಗೆದುಕೊಳ್ಳಬಹುದು, ಆಗ ಮಕಾರಕ್ಕೆ ದಕಾರಾದೇಶ)
ಕಿಟಕಿ+ಅ+ಅಲ್ಲಿ = ಕಿಟಕಿಯಲ್ಲಿ (ಯಕಾರಾಗಮ)
ಮನೆ+ಅ+ಅಲ್ಲಿ = ಮನೆಯಲ್ಲಿ (ಯಕಾರಾಗಮ)
ಊರು+ಅ+ಅಲ್ಲಿ = ಊರಿನಲ್ಲಿ (ನಕಾರಾಗಮ)

(ಕೊನೆಯ ಸ್ವರ ಒ ಆಗಿರುವನ್ಥ ಉದಾಹರಣೆಗಳ ಕುರಿತು ಮುನ್ದಿನ ಬರೆಹದಲ್ಲಿ)

ಅನ್ದಂಗೆ ಮರ್ತೇವೋದೆ ಗುರೋ..
ಮಲಬಾರ್+ಅ+ಅಲ್ಲಿ = ಮಲಬಾರಿನಲ್ಲಿ (ಮಲಬಾರದಲ್ಲಿ ಅಲ್ಲ)
ತೆಂಕಣ ಒಳನಾಡಿನಾಗೆ ಎಲ್ಲದಕ್ಕೂ ನಲ್ಲಿ ಸೇರುಸ್ತಾರೆ...ಅಲ್ಲಿ ಬಡಗಣ ಒಳನಾಡಿನಾಗೆ ಎಲ್ಲದಕ್ಕೂ ದಲ್ಲಿ ಸೇರುಸ್ತಾರೆ... (ವಸಿ ಉಪ್ಪು ಕಾರ ನೀವೇ ಹಚ್ಕೊಳ್ಳಿ ಸ್ವಾಮೀ)
ಬೇಜಾರ್ ಮಾಡ್ಕ್ಯಂಬೇಡಿ.....ಇದ್ದಿದ್ದುನ್ನ ಇದ್ದಂಗೇ ಅನ್ದಾನ್ತ ಎದೆಗೆ ಒದೀಬೇಡಿ.

ಕನ್ನಡವು+ಅಲ್ಲಿ = ಕನ್ನಡವಲ್ಲಿ ಆಗಿ ವಕಾರಕ್ಕೆ ದಕಾರ ಆದೇಶವಾಗುವನ್ಥದ್ದಲ್ಲ.
ಇಷ್ಟೇ ಕಾಣ್ರಿ ಸದ್ಯಕ್ಕೆ ಅಲ್ಲಿ ಪ್ರವರ...ಮುನ್ದಿನ ಬರೆಹದಲ್ಲಿ ಇನ್ನಾ ಮಿಕ್ಕಿದ್ದನ್ನ ಹೇಳ್ತೇನೆ.

ನಲುಮೆಯೊನ್ದಿಗೆ,
ಕೆಪಿ ಬೊಳುಂಬು.

ಕನ್ನಡದಲ್ಲಿ ಬರದ ಕೂಡುವೆಂಜನಗಳು/ಸಂಯುಕ್ತವೆಂಜನಗಳು/ಒತ್ತಕ್ಕರಗಳು - ೧ ›
  • ವ್ಯಾಕರಣ
~.~
  • Login or register to post comments
  • 115 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅ ಎಲ್ಲಿ ಸೇರುತ್ತದೆ?
  • ಸ೦ಧಿ ವಿ೦ಗಡಿಸುವ ಚಿಹ್ನೆ
  • ಎಲ್ಲಿ ಎಲ್ಲಿ ತೋರಣ , ಅಲ್ಲಿ ಅಲ್ಲಿ ಹೂರಣ !
  • ಪುಸ್ತಕ ಸಂತೆ
  • ನೀವು ಮೆಚ್ಚಿದ ಹೊತ್ತಗೆಗಳ ಬಗ್ಗೆ ಅಲ್ಲಿ ಮಾತಾಡಿ
Syndicate content

ಲೇಖಕರು

kpbolumbu's picture

ಪೂರ್ಣ ಹೆಸರು
ಕೃಷ್ಣಪ್ರಕಾಶ್ ಬೊಳುಂಬು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Nagaraj.G
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 1:21pm
  • gurubaliga
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 1:21pm
  • roopablrao
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 1:04pm
  • palachandra
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:49pm
  • hariharapurasridhar
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:46pm
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:43pm
  • hariharapurasridhar
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 12:40pm
  • roopablrao
    ಉ: nanna kiru parichaya
    January 8, 2009 - 12:33pm
  • palachandra
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 12:33pm
  • palachandra
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:30pm
ಇನ್ನಷ್ಟು


ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ |
ದೂರವಾದೊಡದೇನು ಕಾಲು ಕುಂಟಿರಲೇನು
ಊರ ನೆನಪೇ ಬಲವು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator