~
virtual ಮುಂತಾದುವುಗಳಿಗೆ ಕನ್ನಡದಲ್ಲಿ ಏನೆಂದು ಬಳಸಬಹುದು?
Virtual, Virtualization, ಹಾಗು paravirtualization ಪದಗಳಿಗೆ ಕನ್ನಡದಲ್ಲಿ ಏನೆಂದು ಬಳಸಬಹುದು?
ಅಥವ ಹಾಗೆ ಕನ್ನಡೀಕರಿಸಿದರೆ ಹೇಗೆ (ಉದಾ: virtual ಗೆ 'ವರ್ಚುವಲ್')? ಸಂಪದಿಗರೆ ನಿಮ್ಮ ಅಭಿಪ್ರಾಯ ತಿಳಿಸಿ...
ಬಳಕೆ: ವರ್ಚುವಲ್ ಗಣಕ

- Login or register to post comments
- 178 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: virtual ಮುಂತಾದುವುಗಳಿಗೆ ಕನ್ನಡದಲ್ಲಿ ಏನೆಂದು ಬಳಸಬಹುದು?
೧. virtual (ಗು) ವಾಸ್ತವವಾಗಿ, ಕಾರ್ಯತಃ
೨. virtual memory (ಗಣಕಯಂತ್ರದ) ಮಿಥ್ಯಾಸ್ಮೃತಿ (ಮುಖ್ಯ ಸ್ಮೃತಿಯಲ್ಲದೆ ದೃಢಚಕ್ರದ ನೆರವಿನಿಂದ ಹೆಚ್ಚುವರಿ ಸ್ಮೃತಿಯನ್ನು ಪಡೆದುಕೊಳ್ಳುವ ವಿಧಾನ)
೩. virtual reality (ಗಣಕಯಂತ್ರದ) ಮಿಥ್ಯಾವಾಸ್ತವ
ಇದು ಪ್ರಿಸಂ ನಿಘಂಟಿನ ಫಲಿತ.
virtual = ವಾಸ್ತವಿಕ
Virtualization = ವಾಸ್ತವೀಕರಣ, ವಾಸ್ತವಿಕೆ, ವಾಸ್ತವನ
paravirtualization = (ಅಪರ)ಸಮಾನವಾಸ್ತವೀಕರಣ, ಸಮಾನವಾಸ್ತವಿಕೆ, ಸಮಾನವಾಸ್ತವನ
ಉ: virtual ಮುಂತಾದುವುಗಳಿಗೆ ಕನ್ನಡದಲ್ಲಿ ಏನೆಂದು ಬಳಸಬಹುದು?
ನನ್ನಿ ಮಹೇಶ!
ಆದರೆ, ವಾಸ್ತವ ಎನ್ನುವುದು ನೈಜ ಅನ್ನುವ ಅರ್ಥದಲ್ಲಿ ಬಳಕೆಯಾಗುತ್ತಿದೆಯಲ್ಲ?
virtual system ಗೆ ವಾಸ್ತವ ಗಣಕ ಎಂದು ಬಳಸಿದರೆ ತಪ್ಪಾಗುವುದಿಲ್ಲವೆ?
ಉ: virtual ಮುಂತಾದುವುಗಳಿಗೆ ಕನ್ನಡದಲ್ಲಿ ಏನೆಂದು ಬಳಸಬಹುದು?
ಹೌದೇ?
virtual ಮತ್ತು natural ನಡುವಣ ಗೊಂದಲವಿಲ್ಲಿ?
virtual system = ವಾಸ್ತವ ವ್ಯವಸ್ಥೆ.
’ವಾಸ್ತವ’ ಯಥಾಸ್ಥಿತಿಯಂತೆ. ನೈಜ = ಸಹಜಸ್ಥಿತಿಯಂತೆ.
ಏನೋಪ್ಪ ಪ್ರಿಸಂ virtual ಆಂಗ್ಲಪದಕ್ಕೆ ವಾಸ್ತವವೆಂಬ ಸಂಸ್ಕೃತಮೂಲದ ಕನ್ನಡಪದವನ್ನು ಸೂಚಿಸುತ್ತದೆ.
ಉ: virtual ಮುಂತಾದುವುಗಳಿಗೆ ಕನ್ನಡದಲ್ಲಿ ಏನೆಂದು ಬಳಸಬಹುದು?
ಪಡಿರೂಪ ಎಂದು ಬೞಸಿ. (ಪ್ರತಿರೂಪ ಎಂದಾದರೂ ಸರಿಯೇ)
ಉ: virtual ಮುಂತಾದುವುಗಳಿಗೆ ಕನ್ನಡದಲ್ಲಿ ಏನೆಂದು ಬಳಸಬಹುದು?
Virtual, Virtualization, ಹಾಗು paravirtualization
ಮೂರಕ್ಕೂ ಪದಗಳನ್ನು ನೀಡಿರಿ.
ಉ: virtual ಮುಂತಾದುವುಗಳಿಗೆ ಕನ್ನಡದಲ್ಲಿ ಏನೆಂದು ಬಳಸಬಹುದು?
ಮೊದಲಿಗೆ ಪಡಿರೂಪಿನ(virtual), ಪಡಿರೂಪತೆ(virtualization), paravirtualization ಶಬ್ದವನ್ನು ಸ್ವಲ್ಪ ವಿವರವಾಗಿ ಹೇೞಿ.
ಉ: virtual ಮುಂತಾದುವುಗಳಿಗೆ ಕನ್ನಡದಲ್ಲಿ ಏನೆಂದು ಬಳಸಬಹುದು?
ಇದರ ಬಳಕೆಯನ್ನು ಗಮನಿಸೋಣ.. (ನಿಮಗೆ ತಿಳಿದಿರಬಹುದು)
vmvare ಎನ್ನುವ ತಂತ್ರಾಂಶವನ್ನು ಬಳಸಿಕೊಂಡು ಈ ಬಗೆಯ ವರ್ಚುವಲ್ ವ್ಯವಸ್ಥೆಗಳನ್ನು ಹೊಂದಲು ಸಾಧ್ಯ. ಅಂದರೆ vmware ಬಳಸಿಕೊಂಡು ನಿಜವಾದ ಗಣಕದಲ್ಲಿ/ಇತರೆ ಹಾರ್ಡ್-ಡಿಸ್ಕಿನಲ್ಲಿ ಒಂದಿಷ್ಟು ಜಾಗ (ಸುಮಾರು ೨-೮ ಜಿಬಿಯಷ್ಟು) ಒಂದು ಕಾರ್ಯವ್ಯವಸ್ಥೆಯನ್ನು(OS) ಹೊಂದಬಹುದು. ಇದೆ ವರ್ಚುವಲ್ ವ್ಯವಸ್ಥೆ. ಇಲ್ಲಿ ಮೂಲ ಕಾರ್ಯವ್ಯವಸ್ಥೆಯಲ್ಲಿ ಇದ್ದುಕೊಂಡೆ ಇನ್ನೊಂದು ಕಾರ್ಯವ್ಯವಸ್ಥೆಯನ್ನು ಬಳಸಬಹುದು. ಹೀಗಿರುವಾಗ ಇದನ್ನು ವಾಸ್ತವ ವ್ಯವಸ್ಥೆ ಎಂದು ಬಳಸುವುದು ಎಷ್ಷು ಸೂಕ್ತ? ನಿಜ ಹೇಳಬೇಕೆಂದರೆ, ನಾನೂ ಈ ಮೊದಲು ಹಾಗೆಯೆ ಬಳಸುತ್ತಿದ್ದೆ. ಆದರೆ ಈಗ ಇದರ ಬಗ್ಗೆ ಅನುಮಾನ ಹುಟ್ಟಿಕೊಂಡಿದೆ. ಅದಕ್ಕೆ ಕೇಳಿದೆ!
ಉ: virtual ಮುಂತಾದುವುಗಳಿಗೆ ಕನ್ನಡದಲ್ಲಿ ಏನೆಂದು ಬಳಸಬಹುದು?
ಪಡಿಯಚ್ಚು ಪ್ರತಿರೂಪವೇ ಹೊಱತು ನಿಜರೂಪವಲ್ಲ. ಪಡಿರೂಪ (ಪ್ರತಿರೂಪ) ಇದನ್ನು virtualizationಗೆ ಬೞಸಿ.