~
ವಚನ-ಲಿಂಗ-ತೋರುವ ನಾಮಪದ ಹಿನ್ನೊಟ್ಟು
ಮಾನ್ಯ ಕನ್ನಡ ಕಂದರೆ,
ನಮ್ಮ ಕನ್ನಡದಾಗಮ ಸಂದಿಯ ಗೋಜಲನ್ನು ಬಿಡುಸುವ ಚರ್ಚೆಯಲ್ಲಿ ನಾನು ಪರಿಕಲ್ಪಿಸಿದ ಒರ್ವಚನ-ತೋರುವ-ಹಿನ್ನೊಟ್ಟಿನ ವಿಚಾರವಾಗಿ ವಿಸೃತಚರ್ಚೆಯನ್ನರಸೀ ಚರ್ಚೆಯನ್ನು ಮೊದಲುತ್ತಿದ್ದೇನೆ.
ಸದ್ಯಕ್ಕೆ ವಿಭಕ್ತಿಪ್ರತ್ಯಯಗಳನ್ನು ಗಣಿಸುವುದು ಬೇಡ. ಏಕೆಂದರೆ ಕನ್ನಡದ ವಿಭಕ್ತಿ ಪ್ರತ್ಯಯದ ದೊಡ್ಡ ಗೋಚಲೇ ಇದೆ. ಆ ವಿಷಯವನ್ನು ಬೇರೆ ಚರ್ಚೆಯನ್ನು ಮಾಡೋಣ. ಆದುದರಿಂದ ವಿಭಕ್ತಿಪ್ರತ್ಯಯದ ಯಾವುದಾಹರಣೆಯನ್ನೂ ತರುವುದು ಬೇಡ.
ನಾನು ಹೇಳ ಬಯಸುವ ಪರಿಕಲ್ಪನೆ ಹೀಗಿದೆ.
ರಾಮ ಎಂಬುದು ಹೆಸರುಪದದ ಬೇರು( ನಾಮ ಪ್ರಕೃತಿ, ಪ್ರಾತಿಪದಿಕ? ). ಈ ಹೆಸರುಪದದ ಬೇರನ್ನು ಹಾಗೇ ಕನ್ನಡದಲ್ಲಿ ಬಳಸಲು ಬರುವುದಿಲ್ಲ.
ಅದನ್ನು ಬಳಸಲು ಎರಡು ಸೂತ್ರಗಳು
೧)ವಿಭಕ್ತಿಪ್ರತ್ಯಯವನ್ನು ಸೇರಿಸಿ ಬಳಸಬೇಕು. ( ಇದು ಪ್ರಸ್ತುತ ವಿಷಯವಲ್ಲ )
೨)ಅದಕ್ಕೆ ವಚನ+ಲಿಂಗ ತೋರುವ ಹಿನ್ನೊಟ್ಟನ್ನು ಸೇರಿಸಿ ಬಳಸಬೇಕು
ಈ ಚರ್ಚೆಯಲ್ಲೆರಡನೇ ಸೂತ್ರವನ್ನು ನೋಡೋಣವಷ್ಟೇ.
ರಾಮ + ಎಲ್ಲಿ = ?
ರಾಮ + ನ್ + ಎಲ್ಲಿ = ರಾಮನೆಲ್ಲಿ. ಇಲ್ಲಿ ನ್ ಅಕಾರಂತ ಮಾನುಷ-ಗಂಡು-ಲಿಂಗ ಒರ್ವಚನ ನಾಮಪದಕ್ಕೆ ಬಂದ ಹಿನ್ನೊಟ್ಟು
ರಾಮ + ರ್ + ಎಲ್ಲಿ = ರಾಮರೆಲ್ಲಿ, ಇಲ್ಲಿ ರ್ ಅಕಾರಂತ ಮಾನುಷ-ಗಂಡು-ಲಿಂಗ ಹಲವಚನ ನಾಮಪದಕ್ಕೆ ಬಂದ ಹಿನ್ನೊಟ್ಟು
ಮರ + ವ್ + ಎಲ್ಲಿ = ಮರವೆಲ್ಲಿ, ಇಲ್ಲಿ ವ್ ಅಕಾರಂತ ಅಮಾನುಷ-ಲಿಂಗ ಒರ್ವಚನ ನಾಮಪದಕ್ಕೆ ಬಂದ ಹಿನ್ನೊಟ್ಟು
ಮರ + ಗಳ್ + ಎಲ್ಲಿ = ಮರಗಳೆಲ್ಲಿ, ಇಲ್ಲಿ ಗಳ್ ಅಕಾರಂತ ಮಾನುಷ-ಲಿಂಗ ಹಲವಚನ ನಾಮಪದಕ್ಕೆ ಬಂದ ಹಿನ್ನೊಟ್ಟು

- Login or register to post comments
- 232 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ವಚನ-ಲಿಂಗ-ತೋರುವ ನಾಮಪದ ಹಿನ್ನೊಟ್ಟು
ಏನ್ರೀ ಇದು,
ಹಿನ್ನೊಟ್ಟು ?
ಮೊದಲುವುದು?
ಯಾವುದಾಹರಣೆಯನ್ನೂ ?
ಗೋಚಲು?
ಕನ್ನಡದಾಗಮ ಸಂದಿ ? ಇದಾವ ಸಂದಿಯಲ್ಲಿ ನಮ್ಮನ್ನ ಕರೆದೊಯ್ತಾ ಇದ್ದೀರಿ?
ಏನೋ ಹೊಸ ಹೊಸ ಪ್ರಯೋಗ ಮಾಡ್ತೀರಪ್ಪಾ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ವಚನ-ಲಿಂಗ-ತೋರುವ ನಾಮಪದ ಹಿನ್ನೊಟ್ಟು
ಬೇರೆಲ್ಲೂ ಇಷ್ಟು ವ್ಯಾಪಕವಾಗಿ ಕನ್ನಡದ ನುಡಿ ಬಗ್ಗೆ ಚರ್ಚೆ ಆದದ್ದು ನನಗೆ ತಿಳಿದಿಲ್ಲ.
ಮಹೇಶ, ಶ್ರೀ ಮೊದಲಾದ ಎಲ್ಲರಿಗೂ ನನ್ನ ಸೊಲ್ಮೆಗಳು.
ಉ: ವಚನ-ಲಿಂಗ-ತೋರುವ ನಾಮಪದ ಹಿನ್ನೊಟ್ಟು
ನಿಮ್ಮ ಸೊಲ್ಮೆಯನ್ನು ಈಸಿದುಕೊಂಡು, ಅದಕ್ಕೆ ಪ್ರತಿಯಾಗಿ ನನ್ನ ನನ್ನಿಗಳನ್ನು ಕೊಡುವೆನು. ತಗೊಳ್ಳಿ ಪ್ಲೀಸ್!
ಉ: ವಚನ-ಲಿಂಗ-ತೋರುವ ನಾಮಪದ ಹಿನ್ನೊಟ್ಟು
ಗೋಜಲು ; ಗೋಚಲು ನನ್ನ ತಪ್ಪು
ಸೊಲ್ಲರಿಮೆಯಾಸಕ್ತರೀಗೀಗ ಕನ್ನಡದ ನುಡಿಯ ಬಗ್ಗೆ ಹೊರಬರುತ್ತಿಹ ಸೊಲ್ಲರಿಮೆಯ ಹೊತ್ತಗೆಗಳನ್ನು ಚಾಚೂ ತಪ್ಪದೇ ಓದುವವರಿಗೆ ತಿಳಿದೇ ಇರುವುವಾ ಪದಗಳು.
ಆದರೂ ಸೊಲ್ಲರಿಮೆಯ ಪ್ರಗತಿಗಳನ್ನಷ್ಟು ಗಮನಿಸಿದವರಿಗಾಗಿ.
ಹಿನ್ನೊಟ್ಟು = post fix
ಈ ಮೂರು ಸಲೀಸಾಗಿ ಮಾನ್ಯ ಶ್ರೀಕಾಂತರಿಗೆ ತಿಳಿಯಬೇಕಿತ್ತು.. ಆದರೂ ಅವರಿವನ್ನು ಹೊಸಪ್ರಯೋಗವೆಂದು ಕಂಡೆರೇಕೋ!
ಮೊದಲುವುದು = ಪ್ರಾರಂಭವಾಗುವುದು
ಯಾವುದು + ಉದಾಹರಣೆಯನ್ನೂ = ಯಾವುದುದಾಹರಣೆಯನ್ನೂ
ಕನ್ನಡದ + ಆಗಮ = ಕನ್ನಡದಾಗಮ
ಉ: ವಚನ-ಲಿಂಗ-ತೋರುವ ನಾಮಪದ ಹಿನ್ನೊಟ್ಟು
೧.
ಸೊಲ್ಲರಿಮೆಯ ಹೊತ್ತಗೆಗಳನ್ನು ಓದುವವರಿಗೆ ತಿಳಿದೀತು.
ಸೊಲ್ಲರಿಮೆ ಎಂದರೇನೆಂದೇ ತಿಳಿಯದವರ ಪಾಡೇನು ? ಅವರಿಗೂ ತಿಳಿಯಬೇಕಲ್ಲವೇ ?
೨.
ಸಲೀಸಾಗಿ ತಿಳಿಯಲಿಲ್ಲ ; ಕೊಂಚ ವಿಚಾರ ಮಾಡಬೇಕಾಯಿತು .
ಮೊದಲುವುದು , ಯಾವುದುದಾಹರಣೆಯನ್ನೂ ಹಿನ್ನೊಟ್ಟು = post fix , ಈ ಪ್ರಯೋಗಗಳನ್ನ ಮೊದಲಬಾರಿಗೆ ನೋಡಿದೆನು . ಹಿಂದಕ್ಕೆ ಒಟ್ಟಿದ್ದು ಹಿನ್ನೊಟ್ಟೇ ?
೩ "ಗೋಜಲು ; ಗೋಚಲು ನನ್ನ ತಪ್ಪು ಎಂದೊಪ್ಪಿದವರು , ಸಂದಿ-ಸಂಧಿಯ ಗೊಂದಲನ್ನು ಗಮನಿಸಲಿಲ್ಲವೇ ?
ಒಮ್ಮೆ ಸಂಸ್ಕೃತವನ್ನು , ಸಂಸ್ಕೃತದ ಅಕ್ಷರ, ಮಹಾಪ್ರಾಣಗಳನ್ನ ವಿರೋಧಿಸುವಿರಿ , ಇನ್ನೊಮ್ಮೆ ಸಂಸ್ಕೃತಭೂಯಿಷ್ಠವಾಗಿ ಬರೆಯುವಿರಿ , ಮಗುದೊಮ್ಮೆ ಇಂಗ್ಲೀಶಿನಂತೆ ಪ್ರತ್ಯಯಗಳನ್ನು , ಶಬ್ದಗಳನ್ನು ಜಾರಿಗೆ ತರಬೇಕೆಂದು ಹಾಗೆ ಬರೆಯುವಿರಿ . ನೀವು ಬರೆವುದರಲ್ಲೇ ಅನೇಕ ಕಾಗುಣಿತ ದೋಷಗಳನ್ನು ಬರೆಯುವಿರಿ .
ಅಯ್ಯಪ್ಪಾ ... ನಿಮ್ಮ ಓದುಗರನ್ನು ದೇವರೇ ಕಾಪಾಡಬೇಕು .
ಓರ್ವ ಓದುಗನಾಗಿ ನಿಮ್ಮ ಬರಹದ ಶೈಲಿಯಲ್ಲಿ ಸುಸಂಬದ್ಧತೆಯನ್ನು ಅಪೇಕ್ಷಿಸಿದರೆ ತಪ್ಪಲ್ಲ ತಾನೇ ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ವಚನ-ಲಿಂಗ-ತೋರುವ ನಾಮಪದ ಹಿನ್ನೊಟ್ಟು
ಸರಿ.. ನನ್ನದು ತಪ್ಪಾಯಿತು.
ಸೊಲ್ಲರಿಮೆ = ವ್ಯಾಕರಣ
ಒರ್ವಚನ = ಏಕವಚನ
’ಸಂದಿ’ ಇದು ತಪ್ಪು
ನಿಮ್ಮಪೇಕ್ಷಿಯನ್ನರಿತುಕೊಂಡಿದ್ದೀನಿ.
ನನ್ನಿ
ಉ: ವಚನ-ಲಿಂಗ-ತೋರುವ ನಾಮಪದ ಹಿನ್ನೊಟ್ಟು
http://sampada.net/forum/14250
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ವಚನ-ಲಿಂಗ-ತೋರುವ ನಾಮಪದ ಹಿನ್ನೊಟ್ಟು
ಒರ್ವಚನ,,ಹಿನ್ನೊಟ್ಟು..’ಹೆಸರುಪದದ ಬೇರು’ ??
ಉ: ವಚನ-ಲಿಂಗ-ತೋರುವ ನಾಮಪದ ಹಿನ್ನೊಟ್ಟು
ನಲ್ಮೆಯ ಹೞನುಡಿಜಾಣ ಕಂನಡ ಕಂದರೇ
ಎತ್ತ ವೋದಿರಿ ನೀಂಗಳ್. ನಿಮ್ಮೋಸುಗ ಬರೆದೆನಾನೀ ಚರ್ಚಾತಂತುಮುನ್.
ಅಯ್ಯಾ ದಯೆ ತೋರಿರೈ. ಕೊಂಚಮಿತ್ತ ನೋಟಬೀರಿರೈ.
ಉ: ವಚನ-ಲಿಂಗ-ತೋರುವ ನಾಮಪದ ಹಿನ್ನೊಟ್ಟು
ಒರ್ವಚನ=ಒರ್=ಒಂದು ವಚನ ಏಕವಚನ ಇದು ಕನ್ನಡ ಸಂಸ್ಕೃತ ಹೈಬ್ರಿಡ್ ಆದ್ದಱಿಂದ ನನಗೆ ಸೇರದು.
ಓರೆಣೆ, ಓರೆಣಿಕೆ=ಏಕವಚನ, ಹಲವೆಣೆ, ಹಲವೆಣಿಕೆ=ಬಹುವಚನ
ಹಿನ್ನೊಟ್ಟು ಹಿನ್+ಒಟ್ಟು ಹಿಂದೆ ಸೇರುವ ಪ್ರತ್ಯಯ. ರಾಮ+ನ್ (ಹಿನ್ನೊಟ್ಟು) ರಾಮ ಶಬ್ದವನ್ನು ಹಿಂಬಾಲಿಸಿದ ಪ್ರತ್ಯಯ.
ಉ: ವಚನ-ಲಿಂಗ-ತೋರುವ ನಾಮಪದ ಹಿನ್ನೊಟ್ಟು
ಒರ್ವಚನ ಮತ್ತು ಹಲವಚನ ನಮ್ಮ ಮೆಚ್ಚಿನ ಶಂಕರ ಬಟ್ಟರ ಬಳಕೆಗಳು.
ತಾವು ಪದವನ್ನು ಬಿಟ್ಟು.. ಪ್ರಸ್ತುತ ಹಿನ್ನೊಟ್ಟು ಪರಿಶೀಲಿಸಿರಿ
ನ್,ಳ್,ಯ್,ವ್,ಮ್ ಒರ್ವಚನ ತೋರುವ ಹಿನ್ನೊಟ್ಟುಗಳು
ರ್,ಗಳ್ ಹಲವಚನ ತೋರುವ ಹಿನ್ನೊಟ್ಟುಗಳು
ಸರಿಯೋ ತಪ್ಪೋ!