ನಾನು ಶ್ರೀಶ ಕಾರಂತ
ಸಂಪದಕ್ಕೆ ಸ್ವಲ್ಪ (೧೫ ದಿನಕ್ಕೆ) ಹಳಬ...
ಅಕ್ಕ ಸ್ಮಿತಾಳಿಂದ ಸಂಪದದ ಪರಿಚಯವಾಯ್ತು...
ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದಿದ್ದು...puc ಯ ತನಕ ಅಲ್ಲೇ...ಅಪ್ಪ ಅಮ್ಮಾರದ್ದು ಈಗಲೂ ಅಲ್ಲೇ ವಾಸ...
BE Comp.Sc... NIE, ಮೈಸೂರಿನಲ್ಲಿ...೨೦೦೫ ರಲ್ಲಿ ಮುಗಿಯಿತು...ಬಹಳ ಒಳ್ಳೇ ಊರು..ಮೈಸೂರು..
ಸದ್ಯಕ್ಕೆ hewltt packard (HP) ಯಲ್ಲಿ s/w ಅಭಿಯಂತರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ..
ಮೊದಲಿನಿಂದಲೂ ನಿಮಗೆಲ್ಲಾ ಇರುವಂತೆಯೇ ನನಗೂ ಕನ್ನಡದ ಬಗ್ಗೆ ಬಹಳ ಪ್ರೀತಿ...
ಡಾ || ಗಜಾನನ ಶರ್ಮರು(ಶಿವಮೊಗ್ಗದಲ್ಲಿ EXixutive Eng KPTCL nalli... "ಬೆಳಕಾಯಿತು ಕರ್ನಾಟಕ" ಹಾಗೂ "ವಿಶ್ವೇಶ್ವರಯ್ಯನವರ ಜೀವನಚರಿತ್ರೆಯ" ಕತೃ)..ಒಂದು ರೀತಿಯಲ್ಲಿ..ಸಾಹಿತ್ಯದ ಹುಚ್ಚು ಹಿಡಿಸಿದ..ಗುರು...
ಭೈರಪ್ಪನ್ದವರ fan...ಸತ್ಯ ಮತ್ತು ಸೌಂದರ್ಯ, ನಾನೇಕೆ ಬರೆಯುತ್ತೇನೆ ಹಾಗೂ ಸಾಕ್ಶಿಯನ್ನು ಬಿಟ್ಟು ಉಳಿದದ್ದನ್ನು ಓದಿದ್ದೇನೆ..
ಕಾವ್ಯದಲ್ಲಿ... ಕುವೆಂಪು , ದರಾಬೆಂದ್ರೆ , ಅಡಿಗರು...ಇಷ್ಟ...
ಆದರೆ ಇವರೆಲ್ಲರಿಗಿಂತ...ಗುಂಡಪ್ಪನವರು..ನಮ್ಮ ಗುರುಗಳು...ಕಗ್ಗಕ್ಕೆ ಸರಿಸಾಟಿಯಾದ ಸಾಹಿತ್ಯ ಇನ್ನೊಂದಿಲ್ಲ ಎಂಬುದು ನನ್ನ ಅನಿಸಿಕೆ...
ಹೀಗೆ..ಒಂದಷ್ಟು ಕನ್ನಡಕ್ಕೆ ಸೇವೆ ಸಲ್ಲಿಸೋಣ ಎಂದು ಇಲ್ಲಿಗೆ ಬಂದಿರುವೆ...ಸದಭಿರುಚಿಯ ಸಭಿಕರು ಇದ್ದಾರೆ ಎಂದು ತಿಳಿಯುತ್ತಿರುವೆ...ಸಂತೋಷ..ಇದು ಹೀಗೆ ಸಾಗಲಿ..ಎಂದು ಹಾರೈಸುತ್ತಾ...
ಇಂತಿ ನಿಮ್ಮ
ಶ್ರೀಶ ಕಾರಂತ...

- Login or register to post comments
- 1154 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಕಗ್ಗ
> ಕಗ್ಗಕ್ಕೆ ಸರಿಸಾಟಿಯಾದ ಸಾಹಿತ್ಯ ಇನ್ನೊಂದಿಲ್ಲ
ಮರುಳ ಮುನಿಯನ ಕಗ್ಗ ಓದಿದ್ದೀರ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಓದುತ್ತಿರುತ್ತೇನೆ
ಹಾ ಮರುಳಮುನಿಯನ ಕಗ್ಗ ಆಗಾಗ ಓದುತ್ತಿರುತ್ತೇನೆ...
ಆದರೆ ಅವನು ಮಂಕುತಿಮ್ಮನಿಗಿಂತ ತುಂಬ ಜಾಣ...ಸ್ವಲ್ಪ
OHT (OVER HEAD TRANSMISSION)...
ಆದರೂ ಚೆನ್ನಾಗಿದೆ...
ಸದ್ಯಕ್ಕೆ ರಾಮಾಯಣ ದರ್ಶನಮ್ ಓದುತ್ತಿರುವೆ...ಕುವೆಂಪು ರವರ ಉಪಮೆಗಳು..ಅದ್ಭುತ...
ಕಗ್ಗ
ಕಗ್ಗವೆಂದರೇನು?
ಅದರ ಸ್ವರೂಪವೇನು?ಅಂದರೆ ಯಾವ ಸಾಹಿತ್ಯ ಶೈಲಿಯನ್ನು ಕಗ್ಗವೆನ್ನುವರು?
ಕಗ್ಗ ಪದವು ಯಾವುದಾದರು ಸಂಸ್ಕೃತಪದದಿಂದ ಬಂದಿದೆಯೆ?
ಕೃಪೆಮಾಡಿ ತಿಳಿಸಿರಿ.
ಕಗ್ಗವೆಂದರೆ ಕವನ
ಕಗ್ಗವೆಂದರೆ ಪದ್ಯ, ಕವನ. ಕಗ್ಗಕ್ಕೆ ಅದರದೇ ಆದ ಶೈಲಿಯಿಲ್ಲ. ಯಾವ ಪದ್ಯವನ್ನಾದರೂ ಕಗ್ಗವೆನ್ನಬಹುದು. ನನಗೆ ತಿಳಿದಂತೆ ಕಗ್ಗ ಕನ್ನಡ ಪದ, ಅದು ಸಂಸ್ಕೃತದಿಂದ ಹುಟ್ಟಿ ಬಂದದ್ದಲ್ಲ.
??????
ಮಹೇಶ್ ಮಹಾಶಯರೇ ತಾವು ಪವನಜರ ಪ್ರಶ್ನೆಗೆ ಉತ್ತರಿಸದೇ ಇರುವುದು ಏಕೋ?
ಯಾವ ಪ್ರಶ್ನೆ
ಯಾವ ಪ್ರಶ್ನೆ?
NIE
ಮೈಸೂರೇನೋ ಒಳ್ಳೆಯ ಊರು... ಎಲ್ಲೆಲ್ಲು ಪ್ರಣಯಿಗಳ ತಾಣಗಳು(lovers spots)
.
ಆದರೆ NIE ಹೇಗೆ...
ಅಂದಹಾಗೆ ನಾನು ಕೂಡ NIEಯಲ್ಲಿ 2004ರಲ್ಲಿ ISE ವಿಭಾಗದಲ್ಲಿ ತೇರ್ಗಡೆಯಾಗಿ, ಸದ್ಯ symbol ನಲ್ಲಿ ಕೆಲಸದಲ್ಲಿರುವೆನು.
ನಾನು ಹೇಳಿದಂತೆ ಕೇಳು. ನಾನು ಮಾಡಿದಂತೆ ಮಾಡಬೇಡ!
ರೀ, ಮಹೇಶರೆ. ಹಿಂದೊಮ್ಮೆ ನಾನು ನನ್ನ ವೈಯಕ್ತಿಕ ವಿವರ, ಅಂದರೆ ನಾನು ಯಾವ ಶಾಲೆಯಲ್ಲಿ ಕಲಿತದ್ದು ಎಂದು ಬರೆದಾಗ ನೀವೇನು ಹೇಳಿದ್ದಿರಿ? ಅದನ್ನು ಜ್ಞಾಪಿಸಬೇಕಾದರೆ ಇಲ್ಲಿ ಕ್ಲಿಕ್ಕಿಸಿ. ಈಗ ನೀವೇ ನಿಮ್ಮ ಸೂತ್ರವನ್ನು ಮುರಿದಂತಾಗಲಿಲ್ಲವೇ? ರಾಜಕಾರಿಣಿಗಳ ಸೂತ್ರ ಯಾವುದು ಗೊತ್ತೆ? ಅದು "ನಾನು ಹೇಳಿದಂತೆ ಕೇಳು. ನಾನು ಮಾಡಿದಂತೆ ಮಾಡಬೇಡ!" ಎಂದು.
ನಿಮ್ಮ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ನಾನು ಯಾವಾಗಲೂ ವಸ್ತುನಿಷ್ಠವಾಗಿ ವ್ಯವಹರಿಸುವವನು. ನನ್ನದೇ ಸ್ವಂತ ಅಂತರಜಾಲ ತಾಣವಿಟ್ಟುಕೊಂಡು "ಸಂಪದ"ದಲ್ಲಿ ಬರೆಯುವುದು, "ಸಂಪದ"ದ ಬಗ್ಗೆ ಸುಧಾ ಪತ್ರಿಕೆಗೆ ಲೇಖನ ಬರೆದುದು -ಇವುಗಳೇ ನನ್ನ ಮಾತಿಗೆ ಸಾಕ್ಷಿ.
ಸಿಗೋಣ,
ಪವನಜ
ತಪ್ಪಾಯಿತು
ನಾನು ಮೈಸೂರಿನ ಬಗ್ಗೆ ಮಾತಾಡುತ ನನ್ನ ಶಾಲೆಯ ಬಗ್ಗೆ ಹೇಳಿಕೊಂಡೆ.
ನನ್ನಿಂದ ತಪ್ಪಾಯಿತು ಕ್ಷಮಿಸಿರಿ.
ಎರಡೆ ಎರಡು ಮಾತುಗಳು..
ನೀವು ನೀಡಿದ ಕೊಂಡಿಯಲ್ಲಿ, ನಾವು ಹೇಗೆ ಕರ್ನಾಟಕವು ಗೋದಾವರಿಯ ವರಗೆ ಹಬ್ಬಿತ್ತು ಎಂದು ಚರ್ಚಿಸುತ್ತ ಇದ್ದೆವು. ಮಧ್ಯದಲ್ಲಿ ನೀವು ಬೇರೆ ಮಾತುಕತೆಶುರುಮಾಡಿದಿರಿ.
ಇಲ್ಲಿ ನಾವು ಶ್ರೀಶ ಕಾರಂತರ ಬಗ್ಗೆ ಮಾತಾಡುತ್ತಿರುವೆವು. ಇದು ಅವರ ಪರಿಚಯಲೇಖನ.
ಆದರು ನನ್ನಿಂದ ತಪ್ಪಾಯಿತಂತಾದರೆ, ದಯವಿಟ್ಟು ಎಲ್ಲರು ನನ್ನ ಅಧಿಕಪ್ರಸಂಗವನ್ನು ಕ್ಷಮಿಸಿ.
ನಾನೂ ಮೈಸೂರು!
ನಾನೂ ಮೈಸೂರಿನಲ್ಲಿದ್ದೆ. ಪಿ.ಯು.ಸಿ. ಅಲ್ಲಿಯೇ ಓದಿದ್ದು. ಆದರೆ ಮೂವತ್ತು ವರ್ಷಗಳ ಹಿಂದೆ. ಆಗಿನ ಮೈಸೂರು ಈಗ ಬದಲಾಗಿರಬೇಕು ಅನ್ನಿಸುತ್ತದೆ. ಆಗ ನಿಮ್ಮ ಕಾಲೇಜು ಊರಿನಿಂದಾಚೆ ಇದ್ದದ್ದು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ನಾನೂ ಮೈಸೂರು
ಈಗಲೂ ಅದು ಒಂದು ರೀತಿ ಊರಾಚೆಯೆ ಇರುವುದು
!
ಆದರೆ ನಮಗೆ ಒಳ್ಳೆಯ ಪ್ರಾಧ್ಯಾಪಕರುರಿದ್ದರು. ಸಾಕು ಸಾಕು ಎನ್ನುವಷ್ಟು ಆಂತರಿಕಾಂಕಗಳನ್ನು( Internal marks
) ಕೊಟ್ಟ ಪುಣ್ಯಾತ್ಮರು.
ಹಾಜರಾತಿಯ ಗೊಡವೆಗೆ ನನ್ನಂಥ ಗಂಭೀರ ವಿದ್ಯಾರ್ಥಿಗಳನ್ನು
ಈಡುಮಾಡುದೆ, ನಮ್ಮ ವಿದ್ಯಾರ್ಥಿಜೀವನವನ್ನು ಸುಗಮ ಮಾಡಿದವರು...