ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಇದು ವದಂತಿ.
ವದಂತಿಯಾಗಿಯೇ ಉಳಿಯಲಿ.
ಅತ್ಯಧಿಕ ಪ್ರಸಾರದ ಪತ್ರಿಕೆ ಮುಚ್ಚುವುದು ಯಾಕೆ?
ಹೆಸರು ಬದಲಾಯಿಸಲು ಈ ದಾರಿಯೇ?
- Login or register to post comments
- 1864 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version
ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.
— ಜೆ. ಪಾಲ್ ಗೆಟ್ಟಿ
ಇದು ವದಂತಿ.
ವದಂತಿಯಾಗಿಯೇ ಉಳಿಯಲಿ.
ಅತ್ಯಧಿಕ ಪ್ರಸಾರದ ಪತ್ರಿಕೆ ಮುಚ್ಚುವುದು ಯಾಕೆ?
ಹೆಸರು ಬದಲಾಯಿಸಲು ಈ ದಾರಿಯೇ?

ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ವಿಜಯ ಕರ್ನಾಟಕವನ್ನು ಯಾವಾಗ ಸಂಕೇಶ್ವರರು ಟೈಮ್ಸ್ ಗ್ರೂಪ್ ಗೆ ಮಾರಿದರೋ, ಆವಾಗ್ಲೇ ತುಂಬಾ ಬೇಜಾರಾಯ್ತು. ಕಡೆಗೆ ಟೈಮ್ಸ್ ಆಫ್ ಇಂಡಿಯಾದ ಕನ್ನಡ ಅವತರಿಣಿಕೆ ಬಂದಾಗ, ಯಂತಕ್ಕೆ (ಏತಕ್ಕಾಗಿ) ವಿಜಯ ಕರ್ನಾಟಕವನ್ನು ಟೈಮ್ಸ್ ಕೈಗೆ ಕೊಟ್ಟರೋ ಅಂತ ಅನ್ನಿಸಿತ್ತು.
ಯಾಕೆಂದರೆ, ವಿಜಯಕರ್ನಾಟಕ ಪ್ರಾರಂಭವಾಗಿದ್ದೇ ಇತ್ತೀಚಿಗೆ. ಅದು ಹಳೆಯ ಇತರ ಪತ್ರಿಕೆಗಳ (ಪ್ರಜಾವಾಣಿ, ಕನ್ನಡಪ್ರಭಾ.... ) ಆದಾಯಕ್ಕೆ ಕೊಕ್ಕೆ ಹಾಕಿ ತನ್ನ ಪ್ರಸಾರವನ್ನು ಹೆಚ್ಚಿಸಿಕೊಂಡಿತ್ತು. ಈಗ ಟೈಮ್ಸ್ ತೆಕ್ಕೆಗೆ ಅದನ್ನು ನೀಡಿದ್ದು ತುಂಬಾ ಬೇಜಾರಾಗಿತ್ತು.
ವಂದನೆಗಳೊಂದಿಗೆ,
ಸುಧೀಂದ್ರ
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಬೇಜಾರಾಗಿರಬಹುದು.
ಆದರೆ ಪತ್ರಿಕೆ ನಿಲ್ಲಬಾರದು ಅನ್ಸೋಲ್ವೇ?
*ಅಶೋಕ್
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಹೌದು ಅಶೋಕ್ ಸರ್.
ಪತ್ರಿಕೆ ನಿಲ್ಲಬಾರದು. ಆದರೆ ಟೈಮ್ಸ್ ಗ್ರೂಪ್ ಕೈನಲ್ಲಿ ವಿಜಯ ಕರ್ನಾಟಕ ನರಳುತ್ತಿರುವುದಂತು ನಿಜ.
ವಂದನೆಗಳೊಂದಿಗೆ,
ಸುಧೀಂದ್ರ
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಸುಧೀಂದ್ರ ಅವರೇ,
>>ಪತ್ರಿಕೆ ನಿಲ್ಲಬಾರದು. ಆದರೆ ಟೈಮ್ಸ್ ಗ್ರೂಪ್ ಕೈನಲ್ಲಿ ವಿಜಯ ಕರ್ನಾಟಕ ನರಳುತ್ತಿರುವುದಂತು ನಿಜ.
ಅಂದಿದ್ದೀರಿ. ಪತ್ರಿಕೆ ನಿಲ್ಲಬಾರದು ಅನ್ನೋದೇನೋ ನನ್ನ ಅಭಿಪ್ರಾಯವೂ ಆಗಿದೆ. ಆದರೆ ಟೈಮ್ಸ್ ಗ್ರೂಪ್ ಕೈನಲ್ಲಿ ವಿಜಯ ಕರ್ನಾಟಕ ನರಳುತ್ತಿಲ್ಲ. ಏಕೆಂದರೆ ನನ್ನ ಸ್ನೇಹಿತರೂ ಅಲ್ಲಿದ್ದಾರೆ. ಟೈಮ್ಸ್ ಗ್ರೂಪಿಗೆ ಬಂದ ಮೇಲೆ ಅವರ ಸಂಬಳ ಹೆಚ್ಚಾಗಿದೆ. ಆದರೆ ಅವರು ನರಳ್ತಿರೋದು ಅಲ್ಲಿ ನಡೆದಿರುವ ಜಾತಿಭೇದ ಮತ್ತು ಮಡಿವಂತಿಕೆಯಿಂದ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಸ್ವಾಮಿ,
ಇಷ್ಟು ದಶಕಗಳ ಕಾಲ 'ಎಡ ಮಡಿವಂತಿಕೆ' ಕನ್ನಡ ಸಾಹಿತ್ಯ, ಪತ್ರಿಕಾಲೋಕವನ್ನು ಹೈಜಾಕ್ ಮಾಡಿರಲಿಲ್ವ? ಅದ್ರ ಬಗ್ಗೆ ಏನು ಹೇಳ್ತೀರಾ?
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಸಂಕೇಶ್ವರರು ಯಾವ ಆದರ್ಶದ ಉದ್ದೇಶವನ್ನು ತೋರಗೊಟ್ಟಿದ್ದರೋ ಅವಕ್ಕೆಲ್ಲ ತಿಲಾಂಜಲಿಯಿತ್ತು ಪ್ರಜಾವಾಣಿಗೆ ಸಡ್ಡು ಹೊಡೆದು ಒಂದೂವರೆ ರೂಪಾಯಿಗೆ ಪತ್ರಿಕೆ ಮಾರಿ ವ್ಯವಹಾರ ಕೌಶಲ್ಯ ಪ್ರದರ್ಶಿಸಿದರು. ಆದರೆ ನಂತರದ ದಿನಗಳಲ್ಲಿ ಅದೇ ಸ್ವಾರ್ಥದ ಲಾಭಕ್ಕಾಗಿ ಟೈಮ್ಸ್ ಬಳಗಕ್ಕೆ ಪತ್ರಿಕೆ ಮಾರಿ ಪತ್ರಕರ್ತರನ್ನು ನಡುನೀರಿನಲ್ಲಿ ಕೈಬಿಟ್ಟು ಕೈತೊಳೆದುಕೊಂಡರು. ಅಲ್ಲೇ ಉಳಿದ ಕೆಲವರಿಗೆ ಟಿಓಐ ಸಂಬಳ ದೊರೆಯಿತು. ಆದರೆ ಹೊರದೂಡಲ್ಪಟ್ಟವರು ಬಹುಕಾಲ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸಬೇಕಾಯಿತು.
ಮೊದಲಲ್ಲಿ ಈ ಪತ್ರಿಕೆ ವಿಭಿನ್ನ ರುಚಿಗಳನ್ನು ಉಣಬಡಿಸಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಂತೂ ನಿಜ. ಆದರೆ ಭಟ್ಟರ ಧೋರಣೆ ಅಲ್ಲಿ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸಿತು. ಈ ನಡುವೆ ರೀಡರ್‍ಶಿಪ್ ಹೆಚ್ಚಿಸುವ ಧಾವಂತದಲ್ಲಿ ಮತಾಂತರವನ್ನು ದಾಳವಾಗಿ ಬಳಸಿಕೊಳ್ಳಲಾಯಿತು. ಆದರೆ ಈ ಗಿಮಿಕ್ಕುಗಳು ಸಾರ್ವಕಾಲಿಕವಲ್ಲ ಎಂಬುದನ್ನು ಅರಿಯುವಲ್ಲಿ ಅವರು ಸೋತರು.
ಟಿ ಓ ಐ ಆಗಲೀ, ಡಿ ಎನ್ ಎ ಆಗಲೀ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವ ಹರಿಕಾರರಾಗಲು ಸಾಧ್ಯವಿಲ್ಲ. ಹೇಗೆ ಬಿಬಿಸಿ ಯವರು ತಮ್ಮ ನಿಲುವುಗಳನ್ನು ನಮ್ಮ ಮೇಲೆ ಹೇರುತ್ತಾರೋ ಹಾಗೆ ಈ ಎಲ್ಲರೂ ತಮ್ಮ mould ಗೆ ತಕ್ಕಂತೆ ನಮ್ಮ ಮನಸ್ಸುಗಳನ್ನು ರೂಪಿಸ ಬಯಸುತ್ತಾರೆ
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ವಿ.ಕ.ದಲ್ಲಿ ಏಕತಾನತೆಯಿಲ್ಲ. ಹೊಸ ವಿನ್ಯಾಸ, ಹೊಸ ರೀತಿಯ ಪ್ರಯೋಗಗಳು ನಡೆದಿವೆ ಅಲ್ಲವೇ? ಬಹುಶ: ಅದುವೇ ಪತ್ರಿಕೆಯ ಯಶಸ್ಸಿನ ಗುಟ್ಟು. ಮತಾಂತರದ ವಿರೋಧಿ ಬರಹಗಳು ಇತ್ಯಾದಿ ಅಲ್ಲವೆನಿಸುತ್ತದೆ.
*ಅಶೋಕ್
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
>>ಹೊಸ ವಿನ್ಯಾಸ, ಹೊಸ ರೀತಿಯ ಪ್ರಯೋಗಗಳು ನಡೆದಿವೆ.
ಅದೇನೋ ನಿಜಾರೀ ಅಶೋಕ್, ಆದರೆ ಈಚೀಚೆಗೆ ಜನಕ್ಕೆ ಓದೋಕಿಂತಲೂ ನೋಡೋದೇ ಸಾಕು ಅನ್ಸುತ್ತೆ. ಲೇಖನಕ್ಕಿಂತಲೂ ಚಿತ್ರಗಳು ಮತ್ತು ಅವುಗಳ ಕ್ಯಾಪ್ಷನ್ನುಗಳನ್ನಷ್ಟೇ ನೋಡುವ ಮನೋಭಾವ ಹೆಚ್ಚುತ್ತಿದೆ. ಅದಕ್ಕೇ ನೋಡಿ ಪ್ರಜಾವಾಣಿ ಸಾಪ್ತಾಹಿಕ ಪುರವಣಿ ಹೇಗೆ ಬದಲಾಗಿದೆ ಅನ್ತ. ಮೊದಲೆಲ್ಲ ಪದಬಂಧ ಬಿಡಿಸೋದೇ ಒಂದು ಹವ್ಯಾಸವಾಗಿತ್ತು. ಈಗ ಆ ಆಸಕ್ತಿ ಇದ್ದರೂ ವ್ಯವಧಾನವಿಲ್ಲ. ಷಡಕ್ಷರಿಯವರ ಆಣಿಮುತ್ತು ಅಂತೆಯೇ ಕರ್ಜಗಿಯವರ ಕರುಣಾಳು ಬಾ ಬೆಳಕೆ ಒಂದು ರೀತಿ ಆಸಕ್ತಿಕರವಾಗಿವೆ. ಆದರೆ ಒನ್ ಸೈಡೆಡ್ ವಾಚಕರವಿಜಯವು ವಾಚಕರವಾಣಿಯ ಮುಂದೆ ಸೋಲುತ್ತದೆ. ನೂರೆಂಟು ಮಾತಿನ ಆತ್ಮಪ್ರಶಂಸೆ ಹಾಗೂ ಬೆತ್ತಲೆ ಜಗತ್ತಿನ ಸುಳ್ಳುಗಳ ಸರಮಾಲೆ ರೇಜಿಗೆ ಹುಟ್ಟಿಸುತ್ತದೆ. ಅಲ್ಲಾ ಸ್ವಾಮಿ ಅಬ್ದುಲ್ ಕಲಾಮ್ ನಮ್ಮ ಮನೆಗೆ ಬಂದಿದ್ರು, ನಾನು ಅವರೂ ಕೂಡಿ ಒಂದೇ ತಟ್ಟೇಲಿ ಉಂಡೆವು ಅಂದರೆ ಯಾರಿಗೆ ತಾನೇ ಸಹ್ಯವಾಗುತ್ತೆ?
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಓದುಗರ ಪತ್ರಗಳನ್ನು ಪ್ರಕಟಿಸುವಾಗ ಒಂದೇ ವಾದ ಸರಣಿಯ ಪತ್ರಗಳನ್ನು ಪ್ರಕಟಿಸುತ್ತಿರುವುದನ್ನು ನಾನೂ ಗಮನಿಸಿರುವೆ. ಪ್ರತಾಪ್ ಸಿಂಹರೂ ಬರೆಯುವಾಗ ಒಂದೇ ವಾದಕ್ಕೆ ಜೋತು ಬೀಳುವುದಿದೆ. ಸಂಪಾದಕರು ಇತರರು ಬರೆದ ಬರಹಗಳನ್ನು ಸವಿಸ್ತಾರವಾಗಿ quote ಮಾಡುವುದೂ ಇದೆ.
*ಅಶೋಕ್
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಪೈ ಗುಂಪಿನವರು ಎಲ್ಲ ಊರುಗಳ ಉಡುಪಿ ಹೋಟೆಲುಗಳು ಹಾಗೂ ಬಸ್ ಸ್ಟಾಂಡು ಮಳಿಗೆಗಳ ತಮ್ಮ ಜನರನ್ನು ಹಿಡಿದು ತಮ್ಮ ಮಾರುಕಟ್ಟೆ ಬೆಳೆಸಿಕೊಂಡ ಹಾಗೆ ಸಂಕೇಶ್ವರರೂ ವಿಆರೆಲ್ ಲಾರಿಬಸ್ಸು ನೆಟ್ವರ್ಕನ್ನೂ ತಮ್ಮ ಮಾರುಕಟ್ಟೆಗೆ ಬಳಸಿಕೊಂಡರು. ಅವರು ಒಂದೂವರೆ ರೂಪಾಯಿಗೆ ಪತ್ರಿಕೆ ಮಾರಿದ್ದೂ ವ್ಯಾಪಾರದ ಒಂದು ಗಿಮಿಕ್ಕು. ಜನರಿಗೆ ಏನು ಕೊಡಬೇಕು ಏನು ಕೊಡಬಾರದು ಎಂಬ ವಿವೇಚನೆಯಿಲ್ಲದೆ ಆ ಪತ್ರಿಕೆ ಒಂದು ವರ್ಗದ ತೆವಲನ್ನಷ್ಟೇ ಪೋಷಿಸುತ್ತಾ ಹೋಯಿತು. ಕೊನೆಗೆ ಟೈಮ್ಸ್ ಗುಂಪಿಗೆ ಪತ್ರಿಕೆ ಮಾರಿದಾಗ ಸಂಕೇಶ್ವರರಿಗೆ ಹಣವಷ್ಟೇ ಮುಖ್ಯವಾಯಿತು ಹೊರತು ತಮ್ಮ ಆದರ್ಶದ ಮಾತುಗಳಲ್ಲ. (ಪ್ರಜಾವಾಣಿಯ ಮಾಲಿಕತ್ವದಲ್ಲೂ ಲಾಭದ ಆಸೆ ಇದೆಯಾದರೂ ಪತ್ರಿಕೆಯ ಧೋರಣೆ ಹಾಗೂ ಭಾಷೆಯಲ್ಲಿ ಕಾಂಪ್ರಮೈಸ್ ಆಗಿಲ್ಲ. ಲಂಕೇಶ್, ವೈಕುಂಠರಾಜು ಮುಂತಾದವರನ್ನು ದೂರ ತಳ್ಳಿದರೂ ಅದು ತನ್ನತನವನ್ನು ಬಿಟ್ಟುಕೊಡಲಿಲ್ಲ.)
ಮೊದಲು ಇಸ್ಕೂಲುಗಳು ಮಾರಾಟವಾಗುತ್ತಿದ್ದರೆ ಅದು ಸೋಜಿಗವೆನಿಸುತ್ತಿತ್ತು, ವಿಷಾದ ಮೂಡುತ್ತಿತ್ತು. ಈಗ ಪತ್ರಿಕೆಗಳು ಅಲ್ಲ ಪತ್ರಿಕೆಗಳ ಮಾಲಿಕತ್ವ ಮಾರಾಟವಾಗುತ್ತಿವೆ, ಆಶ್ಚರ್ಯವೇನೂ ಆಗುತ್ತಿಲ್ಲ. ಮುಂದೆ ಮಠಗಳು ಮಾರಾಟವಾಗುವ ಕಾಲವೂ ಬಂದೀತು.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
>>ಮುಂದೆ ಮಠಗಳು ಮಾರಾಟವಾಗುವ ಕಾಲವೂ ಬಂದೀತು.
ಹಾಗಾದರೆ ಆಶ್ಚರ್ಯವಿಲ್ಲ.
*ಅಶೋಕ್
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಪತ್ರಿಕೆ ವಿಷಯದಲ್ಲಿ ಮಾತಾಡುವಾಗ ಅದರ ಬಗ್ಗೆ ಮಾತಾಡುವುದಷ್ಟೆ ಒಳ್ಲೆದು ಅನ್ಕೊತ್ತಿನಿ.. ಆದ್ರೆ ಮಠವನ್ನು ಇಲ್ಲಿ ತಂದಿದ್ದಾರೆ..
ಹಣದ ಆಮೀಷ ತೋರಿಸಿ ಜನರ ಧರ್ಮವನ್ನೇ ಬದಲಿಸುತ್ತಿದ್ದಾರೆ.. ಧರ್ಮದ ಹೆಸರಲ್ಲಿ ವ್ಯಾಪರ ನಡೆಸುತ್ತಿದ್ದಾರೆ. ಇದನ್ನೆಲ್ಲಾ ಮಠಗಳ ಬಗ್ಗೆ ಮಾತಾಡುವುದಕ್ಕೆ ಮುಂಚೆ ಯೋಚನೆ ಮಾಡುವುದು ಒಳ್ಲೆದು ಅನ್ನಿಸುತ್ತೆ,
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಹೌದು,ಪತ್ರಿಕೆ ಬಗ್ಗೆ ಬರೆದರೆ ಚೆನ್ನಾಗಿರುತ್ತದೆ .
*ಅಶೋಕ್
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
Bhasip ಅವರೇ, ಆಮಿಷ ಅಂದ್ರೇನು? ಪ್ರಸಾದ ಅನ್ತ ಚರಪು ಹಂಚೋದೋ? ಮಿಠಾಯಿ ಲಡ್ಡು ಪುಳಿಯೋಗರೆ ರಸಾಯನ ಕೋಸಂಬರಿ ತೋರಿಸಿ ಕರಪೂರ ಹಚ್ಚೋದೋ?
ನೂರೊಂದು ಗಣೇಶ ನೋಡೋಕೆ ಅನ್ತ ಮನೆ ಮನೆ ಸುತ್ತುತಿದ್ದೆವಲ್ಲ ಆಗಂತೂ ನನಗೂ ನಮ್ಮ ಗೆಳೆಯರಿಗೂ ಕಾಣುತ್ತಿದ್ದುದು ಗಣೇಶನಿಗಿಂತ ಅಲ್ಲಿದ್ದ ಕಡುಬು ಮತ್ತು ಕುರುಕು ತಿಂಡಿಗಳೇ. ದಾಸರ ಪದ ನೆನಪಿಸಿಕೊಳ್ಳಿ ’ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರೂ, ಕಲ್ಲುಸಕ್ಕರೆ ಸವಿ ಬಲ್ಲವರೇ ಬಲ್ಲರು . . . ’ ಆ ಕೀರ್ತನೆಯ ಕೊನೆಯ ಸಾಲನ್ನು ಮಾತ್ರ ಮತ್ತೊಮ್ಮೆ ಮತ್ತೊಮ್ಮೆ ಮನಸಿನಲ್ಲೇ ಧ್ಯಾನಿಸಿ. ಆಮೇಲೆ ಆಮಿಷದ ಬಗ್ಗೆ ಮಾತಾಡೋಣ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ರೋಗ ರುಜಿನ ವಾಸಿ ಮಾಡ್ತಿವಿ ಅಂತ ಜನರಿಗೆ ಆಸೆ ತೋರಿಸಿ ಯಲಹಂಕ ವಾಯು ಅಡ್ಡೆಲಿ ಜನರನ್ನ ಸೇರಿಸಿದ್ದು ಆಮೀಷವೆ. ಕೆಲಸ ಇಲ್ಲದವರಿಗೆ ಕೆಲ್ಸ ಕೊಡಿಸ್ತಿವಿ ಅಂತ ಹೇಳಿ ಅವರ ಧರ್ಮ ಬದಲಿಸಿವುದು ಆಮೀಷವೆ. ವಿಧ್ಯೆ ಕೊಡ್ತಿವಿ ಅಂತ ಆಮೀಷ ತೋರಿಸಿ ಮಕ್ಕಳಿಗೆ ಬಳೆ ಹಾಕಬೇಡಿ, ಕುಂಕುಮ ಇಡಬೇಡಿ ಅಂತ ಕಟ್ಟುಪಾಡು ಹಾಕಿ ಸೇವೆಯ ಹೆಸರಿನಲ್ಲಿ ಧರ್ಮ ಕೆಡೆಸುತ್ತಿರುವುದು ಎಲ್ಲರಿಗು ತಿಳಿದಿದೆ.
ಗಣೇಶನ ಹಬ್ಬದಲ್ಲಿ ಪ್ರಸದಕ್ಕೆ ತಿರುಗುತ್ತಿದ್ದರೆ ಅದು ಅವರ ಒಂದು ದಿನದ ಬಾಯಿ ಚಪಲಕ್ಕೆ ಇರಬಹುದು. ಆದರೆ ಇಲ್ಲಿ ಕಡುಬು ಚಕ್ಕುಲಿ ಕೊಡುವವರು ನಮ್ಮ ಮನೆಗೆ ಬಂದು ಇರು, ನಿಮ್ಮ ಮನೆ ಹಾಳು ಇಲ್ಲಿ ಪಂಗಡ ಇದೆ, ಅಂತ ಹೇಳಿಲ್ಲ ಹಾಗೆನೆ ಆ ಹುಡೂಗನ ಧರ್ಮ ಹೀಯಾಳಿಸಿ ಅವನ ದೇವರನ್ನು ಖಂಡಿಸಿ ಪುಸ್ತಕ ಪ್ರಿಂಟ್ ಮಾಡಿ ಹಂಚಿಲ್ಲ. ಬಹುಶಃ ಇಷ್ಟು ಸಾಕು ಅನ್ನಿಸುತ್ತೆ ಆಮಿಷಗಳ ಬಗ್ಗೆ...
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಭಾಸಿಪ್ ಸರಿಯಾಗಿ ಹೇಳಿದ್ರಿ,
ಇನ್ನೊಬ್ಬರ ತಪ್ಪನ್ನು ತೋರಿಸುವವರು , ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಧೈರ್ಯ ಹಾಗೂ ಮನಸ್ಥಿತಿ ಹೊಂದಿರಬೇಕು
ರಾಕೇಶ್ ಶೆಟ್ಟಿ
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಊಸರವಳ್ಲಿತನ, ಆಮಿಷ ಅಂದ್ರೆ ವಿಗ್ರಹಾರಾಧನೆ ವಿರೋಧಿಸಿ, ತಮ್ಮ 'ದೇವಾಲಯ'ಗಳ ಮುಂದೆ, 'ವರ್ಜಿನ್' ಮೇರಿ ಪ್ರತಿಮೆ ನೆಟ್ಟು ಹಣ್ಣು ಹೂವು ಹಾಕೋದು.
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಇನ್ನೂ ಇದಕ್ಕೆ ಉದಾಹರಣೆ ಬೇಕು ಅಂದರೆ, ಮೂಢ ನಂಬಿಕೆ ಇದೆ ಅಂತ ಬೇರೆ ಧರ್ಮಗಳನ್ನ ಹೀಯಳಿಸಿ, ಬಜನೆ ಮಾಡಿ ರೋಗ ವಾಸಿ ಮಾಡ್ತಿನಿ ಅಂತ ಜನರನ್ನ ನಂಬಿಸುವ ಬೆನ್ನಿ ಹಿನ್, ರೋಜರ್ ಆಶ್ಟುಮ ... ಹಾಗು ಭಜನೆಯಿಂದ ಜನರ ರೋಗ ವಾಸಿ ಮಾಡ್ತಿನಿ ಅಂತ ಎಲ್ಲ ಕಡೆ ಮತಾಂತರ ಮಾಡಿ ತನ್ನ ರೋಗ ತಾನೆ ವಾಸಿ ಮಾಡಿಕೊಳ್ಳಲಾಗದೆ ಸತ್ತ ದಿನಕರನ್.
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಮರಿ
ಕಾಲಕ್ಕೂ ನಿಮಗೆ ಕಾಲೆಳೆಯುವ ಬುದ್ದಿಯೇ ಯಾಕೆ
ಇಲ್ಲಿ ವಿಜಯಕರ್ನಾಟಕದ ಬಗ್ಗೆ ಮಾತನಾಡಿದರೆ ನಿಮಗೆ ಇದ್ದಕ್ಕಿದ್ದಂತೆ ಯೇಸುವನ್ನೇ ಮಾರಿದಂತಾಗುತ್ತೇನು, ಮಠದ ವಿಚಾರ ಏಕೆ ಮರಿ ಇಲ್ಲಿ.
ನಿಮ್ಮ ಅಭಿಮಾನಿ ಹುಡುಗ
ಅರವಿಂದ್
http://aravindnimmav...
http://abhimanihudug...
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಹುಟ್ಟು ಗುಣ ಘಟ್ಟ ಹತ್ತಿದರೂ ಹೋಗೋಲ್ಲ ಅಂತಾರೆ ಕರಾವಳಿಯ ಜನ....
(ಇನ್ನು ಕೆಲವರು ಹುಟ್ಟು ಗುಣ ಸುಟ್ಟರೂ ಹೋಗೊಲ್ಲಾ ಅಂತಾರೆ, ಸುಡುವ ವಿಷಯ ಬೇಡ, ಬಿಡಿ)
ಹಾಗೇ ಇರಬಹುದೇನೋ ಈ ಮರಿ ಜೋಸೇಫರ ಸಮಸ್ಯೆ...
ಮನ್ನಿಸು ದೇವಾ, ಮನ್ನಿಸು.
- ಆಸು ಹೆಗ್ಡೆ
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಲೈಟಾಗಿ ತಗೊಳ್ಳಿ ಅರವಿಂದ್. ನಿಮ್ಮಲ್ಲಿದ್ದ ಹಾಗೇ ನಮ್ಮಲ್ಲೂ ಮಠಗಳಿವೆ. ಬೌದ್ಧರಲ್ಲೂ ಇವೆ. ಯಾಕೆ ಟೆನ್ಷನ್ ಮಾಡ್ಕೋತೀರಾ? ನಿಮಗೂ ನಮಗೂ ಮಠಗಳು ದೂರ ಅಲ್ವೇ? ಯೋಚಿಸಿ ನೋಡಿ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಬಹುರಾಷ್ಟ್ರೀಯ ಕಂಪೆನಿಗಳ ಹಾಗೆ ಪತ್ರಿಕೋದ್ಯಮದಲ್ಲಿ ಹಣ ತೊಡಗಿಸಿರುವ ಕಂಪೆನಿಗಳಿಗೆ ಪತ್ರಿಕೆಗಳೂ ಹಣವನ್ನು ಹುಟ್ಟು ಹಾಕುವ ಉದ್ಯಮವಷ್ಟೇ. ಪತ್ರಿಕೆಯ ಸಾಮಾಜಿಕ ಜವಾಬ್ದಾರಿ, ಅದರ ಆವಶ್ಯತೆ, ಅದರ ಭಾವನಾತ್ಮಕ ನಂಟು ಎಲ್ಲವೂ ಸೆಕೆಂಡರಿ...
ಆದರೂ ವಿಜಯ ಕರ್ನಾಟಕ ಕಣ್ಮುಚ್ಚುವುದೆಂದರೆ ದುಃಖವೇ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ನಿಮ್ಮ ಕಳಕಳಿ ಅರ್ಥವಾಗುವಂತದ್ದು. ನನ್ನನಿಸಿಕೆಯು ಅದೇ.
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಸರ್,
ಸೋ ಕಾಲ್ಡ್ ಬುದ್ಧಿಜೀವಿ ವರ್ಗ ಸಾಹಿತ್ಯದಲ್ಲಿ ಮಾತ್ರ ಅಲ್ಲ. ಪತ್ರಿಕೋದ್ಯಮದಲ್ಲೂ ಇರುತ್ತೆ. ಅವರೇ ಇಂಥ ಸುದ್ಧಿ ಜನರ ಆರೋಗ್ಯಕ್ಕೆ ಹಿತ ಇದು ಮಾರಕ ಅಂಥ ತೀರ್ಮಾನ ಮಾಡುತ್ತಾರೆ. ಅಂಥ ವಿಚಾರಗಳನ್ನು ಸ್ವಲ್ಪ ದೂರ ಇಟ್ಟದ್ದು ವಿ.ಕ ಮಾತ್ರ. ಮಡಿವಂತಿಕೆಯ ಪ್ರವೃತ್ತಿ ಬಿಟ್ಟದಷ್ಟೇ ಅಲ್ಲ ಪತ್ರಿಕೋದ್ಯಮ ಎಂಬ ಪದಕ್ಕೆ ವಿಭಿನ್ನ ಅರ್ಥ ನೀಡಿದವರು. ಗೆಝೆಟಿಯರ್ ರೀತಿಯ ಭಾಷೆ, 'ಜ್ಞಾನ ಪೀಠಿಗಳ' ಮಾರ್ಗದರ್ಶನ ಎರಡನ್ನು ಅನುಮಾನದಿಂದ ನೋಡಿದ ಮೊದಲ ಪತ್ರಿಕೆ. ಹಣ ಕಡಿಮೆ ಮಾಡಿ ಮಾರ್ಕೆಟ್ ಮಾಡ್ತಾರೆ ಅನ್ನೋದು ಕೇವಲ ಓದುಗರನ್ನು ಅವಮಾನಿಸುವ ಮಾತು. ಜನ ಸುದ್ದಿಗೆ ಬೆಲೆ ಕೊಡ್ತಾರೆ ಹಣಕ್ಕಲ್ಲ. ಕೇರಳದಲ್ಲಿ ಪತ್ರಿಕೆ ಬೆಲೆ ೩.೫೦+ .ಅದರೂ ಜನ ಪತ್ರಿಕೆಗಳನ್ನು ಖರೀದಿಸುತ್ತಾರೆ. ಹೀಗಿರುವಾಗ ಮೊದಲೆಲ್ಲ ಜಾಹೀರಾತುಗಳಿಂದ ಕತ್ತರಿಸಿದ ದುಡ್ಡು ಎಲ್ಲಿ ಹೋಯ್ತು.ದರ ಸಮರ ಆಗಿಯೂ ಯಾವ ಪತ್ರಿಕೆಗಳು ಸತ್ತಿಲ್ಲ. ಇನ್ನು ಪೈಪೋಟಿ ಮೇಲೆ ಚೆಂದ ಮಾಡುತ್ತಿವೆ. ಸುಭಗ ಎನಿಸಿಕೊಳ್ಳುವ ಪತ್ರಿಕೆಗಳು ಯಾರ ಒಡೆತನದಲ್ಲಿವೆ ಮತ್ತು ಯಾರ ಹಿತ ಕಾಪಾಡಲು ಯಾವ ಯಾವ ವಾದಗಳನ್ನು ಹುಟ್ಟುಹಾಕುತ್ತಿವೆ ಎಂಬುದನ್ನು ನೋಡಿ. ಬರೆದರೆ ಲೇಖನವೇ ಅದೀತು ಅನ್ನುವ ಭಯ.
ಸಾತ್ವಿಕ್.ಎನ್.ವಿ
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
>>ಬರೆದರೆ ಲೇಖನವೇ ಅದೀತು ಅನ್ನುವ ಭಯ.
ಪ್ರತ್ಯೇಕ ಬರಹ ಬರೆಯಿರಿ.. ಭಯ ಯಾಕೆ :)
*ಅಶೋಕ್
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
>>ಸೋ ಕಾಲ್ಡ್ ಬುದ್ಧಿಜೀವಿ ವರ್ಗ ಸಾಹಿತ್ಯದಲ್ಲಿ ಮಾತ್ರ ಅಲ್ಲ. ಪತ್ರಿಕೋದ್ಯಮದಲ್ಲೂ ಇರುತ್ತೆ. ಅವರೇ ಇಂಥ ಸುದ್ಧಿ ಜನರ ಆರೋಗ್ಯಕ್ಕೆ ಹಿತ ಇದು ಮಾರಕ ಅಂಥ ತೀರ್ಮಾನ ಮಾಡುತ್ತಾರೆ. ಅಂಥ ವಿಚಾರಗಳನ್ನು ಸ್ವಲ್ಪ ದೂರ ಇಟ್ಟದ್ದು ವಿ.ಕ ಮಾತ್ರ.
ಸಮಾಜ ಪರಿವರ್ತನೆಯಲ್ಲಿ ಸಾಹಿತ್ಯದ ಪಾತ್ರ ಹಿರಿದು. ಅಂತೆಯೇ ಪತ್ರಿಕೆಗಳು ಹಾಗೂ ದೃಶ್ಯಮಾಧ್ಯಮಗಳಿಗೆ ಸಾಮಾಜಿಕ ಜವಾಬ್ದಾರಿ ಅನ್ತ ಇರುತ್ತೆ. ಇರಬೇಕು. ಆಕಾಶವಾಣಿಯಲ್ಲಿರೋ ನಿಮಗೆ ಇದು ಖಂಡಿತ ಗೊತ್ತಿರುತ್ತೆ. ಆದರೂ ಭ್ರಮಾಧೀನರಾಗಿ ಈ ಹೇಳಿಕೆ ಕೊಟ್ಟಿದ್ದೀರಿ.
>> ಗೆಝೆಟಿಯರ್ ರೀತಿಯ ಭಾಷೆ, 'ಜ್ಞಾನ ಪೀಠಿಗಳ' ಮಾರ್ಗದರ್ಶನ ಎರಡನ್ನು ಅನುಮಾನದಿಂದ ನೋಡಿದ ಮೊದಲ ಪತ್ರಿಕೆ.
ಈ ಅನುಮಾನ ಶುರುವಾಗಿದ್ದು ಯಾವಾಗ? ಅನಂತಮೂರ್ತಿಯವರಿಗೆ ಜ್ಞಾನಪೀಠ ಸಿಕ್ಕಮೇಲೆ ತಾನೇ? ಬ್ಯಾರೆಯೋರಿಗೆ ಕೊಟ್ಟಿದ್ರೆ ಅನುಮಾನ ಬರ್ತಿತ್ತಾ? ಎಂಜಿಆರ್ ಗೆ ಭಾರತರತ್ನ ಕೊಟ್ಟಾಗಲೂ ಜನ ಅನುಮಾನ ಪಟ್ಟಿದ್ದು ನಿಜ. ಹಾಗೆಯೇ ಮುಂದೇನಾದ್ರೂ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಭೈರಪ್ನೋರಿಗೂ ಜ್ಞಾನಪೀಠ ಸಿಕ್ಕಿ ಆಗ್ಲೂ ಅನುಮಾನ ಬಂದೇ ಬರುತ್ತೆ.
>>ಹಣ ಕಡಿಮೆ ಮಾಡಿ ಮಾರ್ಕೆಟ್ ಮಾಡ್ತಾರೆ ಅನ್ನೋದು ಕೇವಲ ಓದುಗರನ್ನು ಅವಮಾನಿಸುವ ಮಾತು.
ಓದುಗರನ್ನು ಅವಮಾನಿಸುವ ಮಾತೇ ಇಲ್ಲ. ಓದುಗರು ಹಣ ಎಷ್ಟಾದರೂ ತೆತ್ತು ಓದ್ತಾರೆ. ರೈಲುಗಳಲ್ಲಿ ಪ್ರಯಾಣಿಸುವಾಗ ಒಂದು ರೂಪಾಯಿ ಜಾಸ್ತಿಗೆ ಮಾರಿದರೂ ಮಾತಾಡದೇ ಕೊಂಡು ಓದುತ್ತಾರೆ. ನಾವು ಸ್ನೇಹಿತರು ಸೇರಿ ಎಲ್ಲ ಪತ್ರಿಕೆಗಳನ್ನೂ ಖರೀದಿಸಿ ಎಲ್ಲವನ್ನೂ ಓದುತ್ತೇವೆ. ಆದರೂ ಕನ್ನಡಿಗರು ಕೊಂಡು ಓದುವವರಲ್ಲ ಎಂಬ ಮಾತನ್ನಂತೂ ಒತ್ತಿ ಹೇಳುತ್ತೇನೆ. ಇದು ಕನ್ನಡಿಗರನ್ನು ಅವಮಾನಿಸುವ ಮಾತಂತೂ ಅಲ್ಲ.
>>ದರ ಸಮರ ಆಗಿಯೂ ಯಾವ ಪತ್ರಿಕೆಗಳು ಸತ್ತಿಲ್ಲ.
ಯಾಕೆ ಸತ್ತಿಲ್ಲ? ವಡ್ಡರಸೆ ರಘುರಾಮ ಶೆಟ್ಟರ ’ಮುಂಗಾರು’ ಅನ್ನೋ ಪತ್ರಿಕೆ ಇತ್ತು. ಹಾಗೆಯೇ ’ಹೊಸದಿಗಂತ’ ಇತ್ತು, ಸಂಕೇಶ್ವರ ಅವರದೇ ಉಷಾಕಿರಣ ಅನ್ತ ಇತ್ತು. ಮೇಲೆ ಚೆಂದ ಮಾಡುತ್ತಿವೆ.
>>ಸುಭಗ ಎನಿಸಿಕೊಳ್ಳುವ ಪತ್ರಿಕೆಗಳು ಯಾರ ಒಡೆತನದಲ್ಲಿವೆ ಮತ್ತು ಯಾರ ಹಿತ ಕಾಪಾಡಲು ಯಾವ ಯಾವ ವಾದಗಳನ್ನು ಹುಟ್ಟುಹಾಕುತ್ತಿವೆ ಎಂಬುದನ್ನು ನೋಡಿ.
ಪತ್ರಿಕೆಗಳು ವಿರೋಧ ಪಕ್ಷಗಳ ಕೆಲಸ ಮಾಡಬೇಕು. ಸುದ್ದಿಯ ಎರಡೂ ಮುಖಗಳನ್ನು ತೋರಿಸಬೇಕು. ಆದರೆ ವಿಜಯ ಕರ್ನಾಟಕ ಹಾಗೆ ಮಾಡಿಲ್ಲ. ಅಲ್ಲಿನ ಬಳಗದವರು ಮಾಡಿದರೂ ಸಂಪಾದಕ ಅದಕ್ಕೆ ಕತ್ತರಿ ಹಾಕುತ್ತಾರೆ. ನಿಮ್ಮ "ಯಾರ ಹಿತ ಕಾಪಾಡಲು ಯಾವ ಯಾವ ವಾದಗಳನ್ನು ಹುಟ್ಟುಹಾಕುತ್ತಿವೆ ಎಂಬುದನ್ನು ನೋಡಿ" ಅನ್ನೋದನ್ನ ಆ ಪತ್ರಿಕೆಗೆ ನೇರವಾಗಿ ಅನ್ವಯಿಸಬಹುದು. ಹಾಗಂತ ನಾನೇನು ಪ್ರಜಾವಾಣಿ ಬಗ್ಗೆ ವಕಾಲತ್ತು ಮಾಡುತ್ತಿಲ್ಲ. ಈಚೀಚೆಗೆ ಅಲ್ಲೂ ಈ ಕಾಯಿಲೆ ಶುರುವಾಗಿದೆ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
>> ಗೆಝೆಟಿಯರ್ ರೀತಿಯ ಭಾಷೆ, 'ಜ್ಞಾನ ಪೀಠಿಗಳ' ಮಾರ್ಗದರ್ಶನ ಎರಡನ್ನು ಅನುಮಾನದಿಂದ ನೋಡಿದ ಮೊದಲ ಪತ್ರಿಕೆ.
ಈ ಅನುಮಾನ ಶುರುವಾಗಿದ್ದು ಯಾವಾಗ? ಅನಂತಮೂರ್ತಿಯವರಿಗೆ ಜ್ಞಾನಪೀಠ ಸಿಕ್ಕಮೇಲೆ ತಾನೇ? ಬ್ಯಾರೆಯೋರಿಗೆ ಕೊಟ್ಟಿದ್ರೆ ಅನುಮಾನ ಬರ್ತಿತ್ತಾ? ಎಂಜಿಆರ್ ಗೆ ಭಾರತರತ್ನ ಕೊಟ್ಟಾಗಲೂ ಜನ ಅನುಮಾನ ಪಟ್ಟಿದ್ದು ನಿಜ. ಹಾಗೆಯೇ ಮುಂದೇನಾದ್ರೂ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಭೈರಪ್ನೋರಿಗೂ ಜ್ಞಾನಪೀಠ ಸಿಕ್ಕಿ ಆಗ್ಲೂ ಅನುಮಾನ ಬಂದೇ ಬರುತ್ತೆ.
--- ಅ , ಮೂರ್ತಿ ಗೆ ಜ್ನಾನಪೀಠ ಬಂದದ್ದು ಯಾವಾಗ? ವಿ.ಕ ಪತ್ರಿಕೆ ಶುರು ಆಗಿದ್ದು ಯಾವಾಗ? ಇವೆರದಡರ ನಡುವೆ ಇದ್ದ ಸಮಯದಲ್ಲಿ ಬೇರೆ ಪತ್ರಿಕೆಗಳು ಯಾಕೆ ಈ ಜ್ನ್ಗಾಪೀಠಿಗಳನ್ನ , ಅವರ ಮಾರ್ಗದರ್ಶನವನ್ನ ಪ್ರಶ್ನೆ ಮಾಡ್ಒ ಧೈರ್ಯ ತೋರಲಿಲ್ಲ? ಇಲ್ಲಿ ಜ್ನಾನಪೀಠಿ ಅಂತ ಬಳಸಿದ್ದಾರೆ ಹೊರತು ಯಾರ ಹೆಸರನ್ನು ಪ್ರಸ್ಥಾಪಿಸಿಲ್ಲವಲ್ಲ ಯಕೆ ನಿಮಗೆ ಇದ್ದಕಿದ್ದ ಹಾಗೆ ಮೂರ್ತಿಗಳ ಹೆಸರು ಜ್ನಾಪಕ ಬಂತು? ಸುಮ್ಮನೆ ವಿ.ಕ ಬಗ್ಗೆ ಇಲ್ಲಸಲ್ಲದ ಆರೋಪ ಹೊರಸುವುದರಿಂದ ಏನೂ ಪ್ರಯೋಜನ ಅಗುವುದಿಲ್ಲ. ಎಷ್ಟೊ ಪತ್ರಿಕೆಗಳು/ ಟಿವಿ ಚಾನಲ್ಗಳು ಬೆಕದವರ ಕಡೆ, ಬೆಕಾದ ಹಾಗೆ ಪ್ರಚಾರ ಮಾಡುತ್ತಲೇ ಇವೆ? ಒಬ್ಬ ವ್ಯಕ್ತಿಯನ್ನ ಸೋಲಿಸಲು ವರ್ಷಗಟ್ಟಲೆ ಪ್ರಯತ್ನಪಟ್ಟು ವಿಫಲವಾದ ಇತಿಹಾಸನೆ ಇದೆ ನಮ್ಮ ದೇಶದಲ್ಲಿ. ಇದೆಲ್ಲ ಯಾರಿಗೂ ಕಾಣಿಸೋದೆ ಇಲ್ಲ.
ಸ್ವಾಮಿ ಬಿಜೆಪಿ ಅಧಿಕಾರಕಕ್ಕೆ ಬಂದಿತಲ್ಲ.. ಆದ್ರೆ ಭೈರಪ್ಪನೋರಿಗೆ ಜ್ನಾನಪೀಠ ಸಿಗಲಿಲ್ಲ? ನಿಮಗೆ ಬಿಜೆಪಿಯೋರು ಹೇಳಿದ್ದಾರಾ? ಅಧಿಕಾರಕ್ಕೆ ಬಂದ್ರೆ ಭೈರಪೊನಿರಿಗೆ ಪ್ರಶಸ್ತಿ ಕೊಡಿಸ್ತಿವಿ ಅಂತ?
ವಿ.ಕ ಉಳಿಯಬೇಕು. ಕನ್ನಡದ ಅತಿ ಹೆಚ್ಚು ಪ್ರಸಾರವಗುತ್ತಿರುವ ಪತ್ರಿಕೆ ನಶಿಸಬಾರದು.
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ವಿಕ ಉಳಿಯಬೇಕು. ಅದರಲ್ಲೇನೂ ಎರಡು ಮಾತಿಲ್ಲ.
ಆದರೆ ವಿಕ ಅದರ ಇತಿ ಮಿತಿ ಅರಿಯಬೇಕು. "ವಿಷ ಕನ್ಯೆ" ಯಾಗಿ ಸಮಾಜದ ಸ್ವಾಸ್ಥ್ಯ ಕೆಡಿಸಬಾರದು. ಪತ್ರಿಕೆಗಳಿರುವುದೇ ಸರಕಾರಗಳಿಗೆ ಕಿಚ್ಚು ಹಚ್ಚಿ ಒಳ್ಳೆ ಕೆಲಸಗಳಾಗುವಂತೆ ಮಾಡಲು ಹಾಗೂ ಸಮಾಜದ ಒಳಿತನ್ನು ಬಯಸಲು. ಸುದ್ದಿಯ ಎರಡೂ ಆಯಾಮಗಳನ್ನು ತೋರಿಸಲು. ಅದು ಬಿಟ್ಟು ಪತ್ರಿಕೆಗಳು ಸರಕಾರದ ಅಥವಾ ಮಠಗಳ ಕೈಗೊಂಬೆಗಳಾದರೆ ಏನು ಚೆನ್ನ.
ಹಾಗೇನೇ ಮುಖ್ಯಮಂತ್ರಿಗಳು ಪತ್ರಿಕೆಯೊಂದಕ್ಕೆ ಅಥವಾ ಮಠಗಳಿಗೆ ಏನೇನೋ ಮಂಜೂರು ಮಾಡಿದಾಕ್ಷಣ ಅವರ ಹುಳುಕುಗಳೆಲ್ಲ ಮುಚ್ಚಿಹೋಗಿ "ನಂಮ ಮುಖ್ಯಮಂತ್ರಿಗಳಾಗೋದಿಲ್ಲ". ಅವರು ಜನತೆಗೆ ನಾಡಿಗೆ ಏನಾದರೂ ಒಳಿತು ಮಾಡಬೇಕಲ್ಲ?
ಅಂತೆಯೇ ಜ್ಞಾನಪೀಠದಂತೆ ಕೈಶುದ್ಧ ಆಯ್ಕೆ ಸಮಿತಿಯಲ್ಲೂ ಹುಳುಕು ಕಾಣುವುದು ಎಂಥ ಪತ್ರಿಕೋದ್ಯಮ ಹೇಳಿ.
ನೆಹರೂ ಅವರು ಲಾಲ್ ಬಾಗಿನ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ವೇದಿಕೆಯಲ್ಲಿ ತಮ್ಮ ಬದಿಗಿದ್ದ ವಿಶ್ಶೇಶ್ವರಯ್ಯನವರಿಗೆ ನಿಮಗೆ ಭಾರತರತ್ನ ಕೊಡಲು ಶಿಫಾರಸು ಮಾಡಿದ್ದು ನಾನೇ ಎಂದರಂತೆ. ಅದಕ್ಕೆ ಇವರು ’ ಹಾಗಂತ ನಾನು ನೀವು ಮಾಡಿದ್ದನ್ನೆಲ್ಲ ಅನುಮೋದಿಸ್ತೀನಿ ಅಂತ ತಿಳ್ಕೋಬೇಡಿ’ ಅಂದರಂತೆ. ಅದು ಸಾಮಾಜಿಕ ಬದ್ದತೆ ಹಾಗೂ ಮನಸ್ಸಿನ ಸ್ತಿಮಿತತೆ. ಇದಕ್ಕಿಂತ ಇನ್ನೇನೂ ಹೇಳಲಾರೆ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಬಹುಶಃ ಒಂದು ಪತ್ರಿಕೆ ಅದರ ಮಿತಿ ಅರಿಯದೆ ಎಲ್ಲೆ ಮೀರಿದ್ರೆ ಇವತ್ತು ರಾಜ್ಯದ ನಂ ೧ ಪತ್ರಿಕೆ ಅಗುತ್ತಾ ಇರಲಿಲ್ಲ ಅನ್ನೋದು ಅದನ್ನ ದ್ವೇಷಿಸುವವರಿಗೂ ಅರ್ಥ ಆಗಿದೆ ಅನ್ನಿಸುತ್ತೆ.
ನೆಹರು ಅವ್ರು ಈ ದೇಶಕ್ಕೆ ಏನು ಮಾಡಿದ್ರು, ಅವರ ಮುಂದಿನ ತಲೆಮಾರಿನವರು, ವಿದೇಶದಿಂದ ಬಂದು ಅವರ ಕುಟುಂಬ ಸೇರಿದವರು ಏನು ಮಾಡಿದರು, ಮಾಡ್ತ ಇದ್ದಾರೆ ಅನ್ನೋದು ಜಗಜ್ಜಾಹಿರಾತಾಗಿದೆ, ಹಾಗಾಗಿ ಇಲ್ಲಿ ಅದನೆಲ್ಲಾ ತರುವುದು ಬೇಡ.
ಸತ್ಯ ಹೊರತರುವ ಪತ್ರಿಕೆ ಕೆಲವರ ಕಣ್ಣಿಗೆ ವಿಷಕನ್ಯೆ ಹಾಗೆ ಕಂಡಲ್ಲಿ ಏನು ಆಶ್ಚರ್ಯವಿಲ್ಲ. ಯಾಕೆಂದ್ರೆ, ಒಂದು ವರ್ಗದ ಜನ ಏನೇ ಹೇಳಿದ್ರು ಸರಿ, ಅವರ ನಡವಳಿಕೆನ ಯಾರು ಪ್ರಶ್ನೆ ಮಾಡುವುದೇ ಇಲ್ಲ ಅನ್ನುವ ಮನೋಭಾವನೆಗೆ ವಿರ್ರುದ್ದವಾಗಿ ವಿ.ಕ ಕೆಲಸ ಮಾಡುತ್ತಾ ಇದೆ. ಬಿಜೆಪಿ ಸರ್ಕಾರಕ್ಕೆ ಎಷ್ಟೊ ಬಾರಿ ಮಂಗಳಾರತಿ ಎತ್ತಿದೆ, ಡಾ|| ಯೆಡ್ಡಿ ಅವರನ್ನು ಪ್ರಶ್ನಿಸಿದೆ. ಜನರ ಸಲಹೆಗಳನ್ನ ಸ್ವೀಕರಿಸಿ ಮುಖ್ಯಮಂತ್ರಿಯವರಿಗೆ ತಲುಪಿಸುವ ಕಾರ್ಯಕ್ರಮ ನಡೆಸಿದೆ. ಇಲ್ಲಿ ಕೆಲವರು ವಕಾಲತ್ತು ವಹಿಸಿ ಮಾತಾಡುತ್ತಿರುವ ಪ್ರಜಾವಾಣಿ ಎಷ್ಟು ಬಾರಿ ಆ ಕೆಲಸ ಮಾಡಿದೆ?
ಇರಲಿ, ಈಗ ಮನೆಗೆ ಹೊರಡುವ ಸಮಯ ಆಗಿದೆ. ಮಿಕ್ಕಿದನ್ನು ಮನೆಯಿಂದ ಬರೆಯುವೆ.
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
>>>> ಸತ್ಯ ಹೊರತರುವ ಪತ್ರಿಕೆ ಕೆಲವರ ಕಣ್ಣಿಗೆ ವಿಷಕನ್ಯೆ ಹಾಗೆ ಕಂಡಲ್ಲಿ ಏನು ಆಶ್ಚರ್ಯವಿಲ್ಲ.
‘ಸತ್ಯ’ ಹೊರತರುವ ಕೆಲಸವನ್ನು ವಿ.ಕ ಮಾಡುತ್ತಿರಬಹುದು. ಆದರೆ ಅದು ಹೊರ ತರುತ್ತಿರುವುದೆಲ್ಲವೂ ಸತ್ಯ ಎಂದು ಹೇಳಲಾಗದು :ನಗು:
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಇರಬಹುದು , ಆದರೆ, ಸತ್ಯ ಹೊರತರುತ್ತಿರುವ ಕ್ರಮವನ್ನು ಶ್ಲಾಘಿಸೋಣ :)
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಇವತ್ತಿನ ನೂರೆಂಟು ಮಾತು ಅಂಕಣ ಓದಿ. ವಿ.ಭಟ್ಟರು ನೀವು ಹೇಳಿದಂತೆ ಡ್|| ಯೆಡ್ಡಿ ಅವರನ್ನು ಹೊಗಳಿ ಹೊಗಳಿ ಬರೆದಿದ್ದಾರೆ. ಜನತೆಗೆ ಒಳ್ಳೇದು ಮಾಡಿದಾರೋ ಬಿಟ್ಟಿದಾರೊ ಅನ್ನೋದನ್ನ ಜನ ನಿರ್ಧರಿಸುತ್ತಾರೆ ಬಿಡಿ. ಕಳೆದ ಒಂದು ವರ್ಷದಲ್ಲಿ ನಡೆದ ಹಲವಾರು ರಾಜ್ಯಗಳ ಚುನಾವಣೆಗಳೆ ಫಲಿತಾಂಶವೆ ಇದಕ್ಕೆ ಕೈಗನ್ನಡಿ,.
ಇನ್ನು ಜ್ನಾನಪೀಠದ ಆಯ್ಕೆ ಸಮಿತಿಯ ಶುದ್ಧತೆ ಬಗ್ಗೆ ಮಾತಾಡುವ ತಾವು, ಬಿ.ಜೆಪಿ ಅಧಿಕಾರಕ್ಕೆ ಬಂದರೆ ಭೈರಪ್ಪನವರಿಗೆ ಆ ಪ್ರಶಸ್ತಿ ಸಿಗುವುದರ ಬಗ್ಗೆ ಮಾತಾಡಿದ್ದೀರ.. ಇದೇ ಎತ್ತಿ ತೋರಿಸುತ್ತೆ ನಿಮ್ಮ ವಾದಗಳ ದ್ವಂದ್ವವನ್ನ.
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
:D
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಪ್ರೀತಿಯಿಂದ ಮರಿ ಜೋಸೆಫ್ ರಿಗೆ,
ಸರ್ ನೀವು ಹೇಳಿದ ಹಾಗೆ ನಾನು ಭ್ರಮಾಧೀನನಾಗಿರಬಹುದು. ರಾಜಕಾರಣದ ಕೊಳಕು ರಾಜಕೀಯವನ್ನು ಬರೆಯುವ ಪತ್ರಿಕೆಗಳ ಒಳಗಿರುವ ರಾಜಕೀಯವನ್ನು ನೋಡಿ, ಅದನ್ನೇ ಸಂಶೋಧನಾ ವಿಷಯವಾಗಿ ಅಧ್ಯಯನ ಮಾಡುತ್ತ ಬಹುಶ: ಹಾಗಾಗಿರಬಹುದು. ನಾನು ಹೇಳಿದ ಮಾತುಗಳು ಯಾವುದೋ ಪತ್ರಿಕೆಯ ದನಿಯಂತೆ ನಿಮಗೆ ಯಾಕೆ ಕಾಣಿಸಿತೆಂದರೆ ನಾನು ನಿಮ್ಮ ಪ್ರೀತಿಯ ಪತ್ರಿಕೆಯ ಬಗ್ಗೆ ಮಾತಾಡಿದ್ದಿರಬಹುದು. ಪತ್ರಿಕೆ ಓದುಗರನ್ನು ತಿದ್ದುತ್ತದೆ ಎಂಬುದು ಹಳೆ ಥಿಯರಿ. ಆದರೆ ಓದುಗನೇ ತನ್ನ ಥಿಯರಿಗೆ ಹೊಂದುವ ಪತ್ರಿಕೆ ಓದುತ್ತಾನೆ ಎನ್ನುತ್ತದೆ ರಿಡರ್ ರೆಸ್ಪನ್ಸ್ ಥಿಯರಿ. ಹಾಗಾಗಿ ನಿಮಗೆ ಬೇಕೆನಿಸುವ ಪತ್ರಿಕೆಯು ನಿಮ್ಮ ಧೋರಣೆಗಳನ್ನು ಹೊಂದಿರಬೇಕೆಂಬ ನಿಮ್ಮ ಆಶಯದಲ್ಲಿ ಯಾವುದೇ ತಪ್ಪಿಲ್ಲ. ನಿಮ್ಮ ಮೆಚ್ಚಿನ ಪತ್ರಿಕೆಯ ಬಳಗದಲ್ಲೇ ಕೆಲಸ ಮಾಡಿದ, ಅದರೊಳಗಿನ ಕಿತಾಪತಿ, ರಾಜಕೀಯಗಳಿಂದ ನೊಂದ ಕಡೆಗೆ ಆಕಾಶವಾಣಿ ಸೇರಿದ ವ್ಯಕ್ತಿಯೇ ಹೇಳಿದ ಮಾತುಗಳನ್ನೇ ನಾನು ನಿಮಗೆ ಹೇಳಿದ್ದು.
ಸಾತ್ವಿಕ್ ಎನ್.ವಿ.
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಮಾನ್ಯ ಸಾತ್ವಿಕ್ ಅವರೇ, ನನ್ನ ಪ್ರೀತಿಯ ಪತ್ರಿಕೆ, ನನ್ನ ಮೆಚ್ಚಿನ ಪತ್ರಿಕೆ ಎಂದು ಯಾವುದನ್ನು ಊಹಿಸಿದ್ದೀರೋ ತಿಳಿಯದು. ಸದಾ ಊರೂರು ತಿರುಗುವ ನನಗೆ ಒಂದೊಂದು ಊರಿನಲ್ಲಿ ಒಂದೊಂದು ಪತ್ರಿಕೆ ಮೆಚ್ಚು. ದಕ್ಷಿಣ ಇಂಡಿಯಾದ ಕನ್ನಡೇತರ ನಾಡುಗಳಲ್ಲಿ ದಿ ಹಿಂದೂ, ಉತ್ತರ ಇಂಡಿಯಾದಲ್ಲಿ ಹಿಂದೂಸ್ತಾನ್ ಟೈಮ್ಸ್,ದಿ ಟೆಲಿಗ್ರಾಫ್, ಬಂಗಾಲದಲ್ಲಿ ದಿ ಸ್ಟೇಟ್ಸ್ಮನ್, ನಾಗಪುರದಲ್ಲಿ ಹಿತವಾದ ಇನ್ನೂ ಎಷ್ಟೋ ಇವೆ. ಬೆಂಗಳೂರಿನಲ್ಲಂತೂ ನಾವು (ನನ್ನ ಸ್ನೇಹಿತರೂ ಸೇರಿ) ಎಲ್ಲ ಪತ್ರಿಕೆಗಳನ್ನೂ ಓದುತ್ತೇವೆ. ಒಂದೊಂದರಲ್ಲಿನ ಒಂದೊಂದು ಅಂಕಣ ಇಷ್ಟವಾಗುತ್ತೆ. ನಾನೇನೂ ಒಂದೇ ಪತ್ರಿಕೆಗೆ ಅಂಟಿಕೊಂಡಿಲ್ಲ. ತೀರಾ ಖಾಸಗಿಯಾಯಿತಲ್ಲವೇ? ದಯವಿಟ್ಟು ಕ್ಷಮಿಸಿ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಪ್ರೀತಿಯ ಮರಿಜೋಸೆಫ್ ಸರ್,
ನಾನು ನಿಮ್ಮ ಪತ್ರಿಕೆಯ ಕುರಿತು ಹೇಳಲಿಲ್ಲ, ಬದಲಾಗಿ ನಿಮಗಿಷ್ಟವಾಗುವ ಪತ್ರಿಕೆ ಯಾವುದಿರುತ್ತದೆ ಎಂದು ಹೇಳಿದೆ. ಆನುಷಂಗಿಕವಾಗಿ ನೀವು ಉಲ್ಲೇಖಿಸಿದ ಪ್ರಜಾವಾಣಿ ಬಗ್ಗೆ ಹೇಳಿದೆ ಅಷ್ಟೆ. ಸಾರ್ ಯಾವ ಪತ್ರಿಕೆಯ ಧೋರಣೆಗಳು ಸ್ಥಿರವಲ್ಲ. ಅದು ಸಾಪೇಕ್ಷವಾದುದು. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಾನು ಯಾವ ವಿಷಯವನ್ನು ವ್ಯಕ್ತಿಗತವಾಗಿ ಪರಿಗಣಿಸುವುದಿಲ್ಲ. ಅದೊಂದು ಸಂಗತಿಯೆಂದೇ ಪರಿಗಣಿಸುತ್ತೇನೆ.
ಸಾತ್ವಿಕ್ ಎನ್.ವಿ.
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ವಿಜಯ ಕರ್ನಾಟಕವನ್ನು ಮುಚ್ಚುವ ಯೋಜನೆ ಇಂದಿನದಲ್ಲ.
ಟೈಮ್ಸ್ ಆಫ್ ಇಂಡಿಯಾ ಕನ್ನಡ ಶುರುಮಾಡಿದ್ದು ಆ ಉದ್ದೇಶದಿಂದಲೇ.
ನೆಲಗಟ್ಟಿ ಮಾಡಿಕೊಂಡು ವಿಕ ವನ್ನು ಮುಚ್ಚುವ ಯೋಚನೆ ಇತ್ತು ಅಷ್ಟೆ.
ಪತ್ರಿಕೆಯ ಹೆಸರು ಏನೇ ಆದರೂ ವೈಚಾರಿಕ ಸಿದ್ಧಾಂತದಲ್ಲಿ ಬದಲಾವಣೆ ಇಲ್ಲದ್ದಿದ್ದಲ್ಲಿ ಚಿಂತಿಲ್ಲ.
ಇಲ್ಲಿ ವಿಶ್ವೇಶ್ವರ ಭಟ್ ಇರುವಂತೆ, ಅಲ್ಲಿ ಈಶ್ವರ ದೈತೋಟ ಇದ್ದಾರೆ.
ಅವರೂ ಪರಿಣತ ಪತ್ರಕರ್ತನೇ ಆದ್ದರಿಂದ ಚಿಂತಿಲ್ಲ.
ಪತ್ರಿಕೆ ಓದಿಸಿಕೊಂಡು ಹೋಗುವುದು ಅದರ ಹೆಸರಿನಿಂದಲ್ಲ.
ಸಂಪಾದಕರ ಬುದ್ಧಿ ಚಾತುರ್ಯ ಮತ್ತು ದೃಷ್ಟಿಕೋನದಿಂದ ಅನ್ನುವುದು ನನ್ನ ಅಭಿಪ್ರಾಯ.
ಹಾಗೇನಾದರೂ ಆಗದಿದ್ದಲ್ಲಿ, ವಿ. ಭಟ್ ಬಳಗ ಹೊಸ ಪತ್ರಿಕೆ ಹೊರ ತಂದರೂ ತರಬಹುದು ಎನ್ನುವುದು ನನ್ನ ಊಹೆ.
ಅದಕ್ಕೆ ಮತ್ತೆ ವಿಜಯ್ ಸಂಕೇಶ್ವರ ಹಣ ಹೂಡಿದರೂ ಹೂಡಿಯಾರು...
-ಆಸು ಹೆಗ್ಡೆ
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಅಶು ಸರ್,
ಇದು ನೀವು ಹೇಳಿದಂತೆ ಹಳೆ ವಿಷಯ.ಇದು ಗಾಸಿಪ್ ಅಥವಾ ರಿಯಲ್ಲೋ ಗೊತ್ತಾಗುತ್ತಿಲ್ಲ. ಒಂದು ಕಾಲಕ್ಕೆ ವಿಶ್ವೇಶ್ವರ ಭಟ್ ವಿ.ಕ ಬಿಡ್ತಾರೆ ಅನ್ನೋ ರೂಮರ್ ಹರಡಿತ್ತು.
ಸಾತ್ವಿಕ್.ಎನ್.ವಿ
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಬೆಂಕಿ ಇಲ್ಲದೇ ಹೊಗೆ ಇಲ್ಲ ಅಂತಾರೆ.
ಗಾಸಿಪ್...ರೂಮರು..ಗಾಳಿಮಾತು..ನಾಳೆ ನಿಜವಾಗುವುದಂತೂ ಹೌದು..ಅನ್ನಿಸುತ್ತೆ.
ಬೇಜಾರು ಪಡೋದಿಲ್ಲ. ಯಾವ ಪತ್ರಿಕೆ ಹಿಡಿಸುತ್ತೋ ಅದನ್ನು ಓದೋದು.
ಯಾವುದನ್ನೂ ರೂಢಿಮಾಡಿಕೊಂಡು ಬದುಕಬಾರದು ಅನ್ನೋ ವಿಚಾರ ನನ್ನದು.
ಸಾತ್ವಿಕ್. ಎನ್. ವಿ ಇದನ್ನು ಸಾತ್ವಿಕ್ ಎನ್. ವಿ. ಎಂದು ಬರೆದರೆ ಹೇಗೆ?
(ಪೂರ್ಣ ವಿರಾಮಗಳ ಸ್ಥಾನ ಪಲ್ಲಟ ಮಾಡಿದ್ದೇನೆ)
- ಆಸು ಹೆಗ್ಡೆ
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಆಸು ಸರ್,
ನಿಮ್ಮ ಬರಹದ ಕ್ರಮ ಸರಿ. ನಾನೇ ತಪ್ಪಾಗಿ ಬರೆದಿದ್ದೆ. ತಿಳಿಸಿದಕ್ಕೆ ಥ್ಯಾಂಕ್ಸ್ ಸರ್.
ಸಾತ್ವಿಕ್ ಎನ್.ವಿ.
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಸಾತ್ವಿಕ್ ಎನ್ ವಿ ಹೀಗೆ ಬರೆದರೆ ಹೇಗೆ?
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಹಾಗೆ ಬರೆದರೂ ಚೆನ್ನ.
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಈ ಪೇಪರ್ ಹಿಡಿಸೇ ಇರಲಿಲ್ಲ. ಒಂದ್ ರೀತಿ ಒಳ್ಳೇದಾ ಆಗಬಹುದು.ಕಿತಾಪತಿ ಪೇಪರ್‍ರು
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಮಾಯ್ಸಣ್ಣ
ಕಿತಾಪತಿ ಪೆಪರ್ರ? ಹಿಂಗಂದ್ರೆ ಹೆಂಗೆ? ಸತ್ಯ ಹೇಳಿದ್ರೆ ಕಹಿ ಆಯ್ತದೆ ಬುಡಿ ಕೆಲ ಜನಕ್ಕೆ ಏನ್ ಮಾಡಕಾಯ್ತದೆ :)
ವಿಜಯ ಕರ್ನಾಟಕ ಕಣ್ಮುಚ್ಚದಿರಲಿ
ರಾಕೇಶ್ ಶೆಟ್ಟಿ :)
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಅಯ್ಯೋ ಮಾರಾಯ ಅದು ನನ್ನ ಅನಿಸಿಕೆ ಕಾಣಣ್ಣ...
ಅವರು ಸತ್ಯಶೋಧನೆಯ ಬಣ್ಣ ನಮ್ಮ ಅನಿವಾಸಿಗಳು ಬಯಲು ಮಾಡವ್ರೆ ಹಿಂದೆ :)
ಸರಿ.. ನಿಂಗೆ ಬೇಜಾರ್ ಆಗಿದರೆ ತುಸು ನಲಿವಾಗೋ ಹಂಗೆ ಏನಾರ ಕುಡಿ ಇಲ್ಲ ತಿನ್ನು ಇಲ್ಲ ನೋಡು ಇಲ್ಲ ಕೇಳು ಇಲ್ಲ ಏನಾರ ಮಾಡ್ಕೋ :)
ಗುಡ್ ನೈಟು !
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಅಯ್ಯೋ ಮಾರಾಯ ಅದು ನನ್ನ ಅನಿಸಿಕೆ ಕಾಣಣ್ಣ...
ಅವರು ಸತ್ಯಶೋಧನೆಯ ಬಣ್ಣ ನಮ್ಮ ಅನಿವಾಸಿಗಳು ಬಯಲು ಮಾಡವ್ರೆ ಹಿಂದೆ :)
ಸರಿ.. ನಿಂಗೆ ಬೇಜಾರ್ ಆಗಿದರೆ ತುಸು ನಲಿವಾಗೋ ಹಂಗೆ ಏನಾರ ಕುಡಿ ಇಲ್ಲ ತಿನ್ನು ಇಲ್ಲ ನೋಡು ಇಲ್ಲ ಕೇಳು ಇಲ್ಲ ಏನಾರ ಮಾಡ್ಕೋ :)
ಗುಡ್ ನೈಟು !
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಮಾಯ್ಸಣ್ಣ
ಅದೇ ಮಾತನ್ನು ಮತ್ತೆ ಮತ್ತೆ ಬರೆದಿದ್ದೀರ, ನಿದ್ರೆ ಮಂಪರು, ಇವತ್ತು ಮಲಗಿ , ಇನ್ನೊಮ್ಮೆ ದಿಟೈಲ್ ಆಗಿ ಚರ್ಚೆ ಮಾಡೋಣ, ಅನಿವಾಸಿಯವರು ಬರೆದಿದ್ದು ಓದಿದ್ದೇನೆ, ಅದೊಂದನ್ನೇ ಹಿಡಿದು ಹೇಳಿದರೆ ಹೆಂಗೆ?
ರಾಕೇಶ್ ಶೆಟ್ಟಿ :)
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಅಯ್ಯೋ ಹೊಕ್ಕೊಳ್ಳಿ ಬಿಡ್ರೀ.. ನಾನ್ ಕನ್ನಡ ಪೇಪರೇನು ಯಾವ ಪೇಪರ್‍ರೂ ಓದಕ್ಕೆ ಆಗಲ್ಲ.
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ಬಹುಶಃ ಇದ್ದ ವಿಷಯವನ್ನು ಇದ್ದ ಹಾಗೇ ಹೇಳುವುದೊಂದರೆ ಇದೊಂದೇ ಪೇಪರು. ಬೇರೆ ಪತ್ರಿಕೆಗಳು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಸುದ್ಧಿ ಕೊಟ್ಟರೆ, ವಿ.ಕ ತನ್ನ ದಿಟ್ಟ ವರದಿಗಳಿಗೆ, ವಿಮರ್ಶೆಗಳಿಗೆ, ಲೇಖನಗಳಿಗೆ ಹೆಸರುವಾಸಿಯಾಗಿತ್ತು.
ಭಟ್ಟರು, ಪ್ರತಾಪ ಸಿಂಹ ಮತ್ತು ಅವರ ಟೀಮು ಮತ್ತೊಮ್ಮೆ ಸಂಕೇಶ್ವರರೊಡಗೂಡಿ ಇಂತಹುದೇ ಮತ್ತೊಂದು ದಿನ ಪತ್ರಿಕೆ ಹೊರತರಬಹುದಲ್ಲವೇ.
ಉ: ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?
ನಿಮ್ಮೆಲ್ಲರ ವಿಚಾರಗಳನ್ನು ಓದಿದ್ ಮೇಲೆ ನನಗೆ ಒಂದು ಸಂದೇಹ, ವಿ,ಕ ಪತ್ರಿಕೆ ಬರುವವರೆಗೂ ಇನ್ನಿತರ ಪ್ರ’ಖ್ಯಾತ’ ಪತ್ರಿಕೆಗಳಿದ್ದೂ ಈ ಪತ್ರಿಕೆ ಮಾತ್ರ ತನ್ನ ಪ್ರಸಾರ ಹೆಚ್ಚಿಸಿಕೊಂಡದ್ದು ಹೇಗೆ? ಬೆಲೆ ಕಡಿಮೆ ಇದ್ದದ್ದರಿಂದ ಅಂತ ಮಾತ್ರ ಹೇಳಬೇಡಿ. ಕಾರಣ ಅದು ಬೆಲೆ ಹೆಚ್ಚಿಸಿಕೊಂಡ ನಂತರವೂ ಅದು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಈಗಲೂ ವಿಶೇಷ ಘಟನೆಗಳ ಸಂದರ್ಭದಲ್ಲಿ ಮೊದಲು ಖಾಲಿಯಾಗುವುದು ಈ ಪತ್ರಿಕೆ ಮಾತ್ರ ಅದೇಕೆ? ಜನ ಮರುಳೊ.. ಜಾತ್ರೆ ಮರುಳೊ........
manjunath s reddy