19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹಿಂದು ಮೂಲಭೂತವಾದಿಗಳು ಹತ್ಯೆಗೈದಿದ್ದಾರೆಯೇ?

December 17, 2008 - 9:10pm
prasca
ಮುಂಬೈ ಭಯೋತ್ಪಾದನೆಯಲ್ಲಿ ವೀರಮರಣ ಅಪ್ಪಿದ ಧೀರ ಅಧಿಕಾರಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹಿಂದು ಮೂಲಭೂತವಾದಿಗಳು ಹತ್ಯೆಗೈದಿದ್ದಾರೆಯೇ? ಇರಬಹುದು ಎನ್ನುವ ಸಂಶಯ ವ್ಯಕ್ತಪಡಿಸಿದ್ದಾರೆ ಕೇಂದ್ರದ ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ಅಬ್ದುಲ್ ರೆಹಮಾನ್ ಅಂತುಳೆ. ಇಡೀ ದೇಶವೇ ಆಶ್ಚರ್ಯ ಮತ್ತು ನಿಬ್ಬೆರಗಾಗುವಂತ ಮಹತ್ವದ ಪ್ರಕರಣವನ್ನು ಭೇದಿಸಿದ ಕೀರ್ತಿ ಹೇಮಂತ್ ಕರ್ಕರೆಗೆ ಸಲ್ಲಬೇಕು. ಇಷ್ಟು ದಿನ ಭಯೋತ್ಪಾದನೆ ಕೃತ್ಯದಲ್ಲಿ ತೊಡಗಿರುವವರು ಬರೀ ಮುಸ್ಲಿಮರು ಎಂದು ತಿಳಿದುಕೊಂಡಿದ್ದ ಭಾರತೀಯರಿಗೆ ಹಿಂದು ಧಾರ್ಮಿಕ ಸಂಘಟನೆಗಳ ಮುಖಂಡರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಪರಿಚಯ ಮಾಡಿಕೊಟ್ಟ ಸೂಪರ್ ಅಧಿಕಾರಿ ಕರ್ಕರೆ ಎಂದು ಅಂತುಳೆ ವಾರ್ತಾ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕೊಂಡಾಡಿದ್ದಾರೆ. ಜೀವದ ಹಂಗನ್ನೇ ತೊರೆದ ಹೇಮಂತ್ ಕರ್ಕರೆ ಇದೇ ವರ್ಷ ಸೆ. 29 ರಂದು ನಡೆದ ಮಾಲೇಗಾಂವ್ ಸ್ಫೋಟದಲ್ಲಿ ಹಿಂದು ಮೂಲಭೂತವಾದಿಗಳ ಕೈವಾಡವಿರುವುದನ್ನು ಹೊರಗೆಳೆದಿದ್ದರು. ಇದು ಕೆಲ ಹಿಂದುಪರ ಸಂಘಟಗಳಿಗೆ ತೀವ್ರ ಇರಿಸುಮುರಿಸು ಉಂಟು ಮಾಡಿತ್ತು. ಕರ್ಕರೆ ವಿರುದ್ಧ ಅನೇಕ ಟೀಕೆ ಟಿಪ್ಪಣಿಗಳು ಕೇಳಿ ಬಂದಿರುವುದು ಗೊತ್ತಿರುವ ಸಂಗತಿ ಎಂದು ಅಂತುಳೆ ಹೇಳಿದರು. ನವೆಂಬರ್ 26ರಂದು ನಡೆದ ಮುಂಬೈ ಭಯೋತ್ಪಾದನೆಯಲ್ಲಿ ಹೇಮಂತ್ ಕರ್ಕರೆ ಉಗ್ರರಿಂದ ಹತರಾದರೆ? ಅಥವಾ ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಅಸಹನೆಯಿಂದ ಕುದಿಯುತ್ತಿದ್ದ ಹಿಂದುಪರ ಸಂಘಟನೆಗಳು ಈ ಕೃತ್ಯ ನಡೆಸಿದವೆ ಎನ್ನುವುದು ಸ್ಪಷ್ಟವಾಗಬೇಕಿದೆ ಎಂದು ಸಚಿವ ಎ ಆರ್ ಅಂತುಳೆ ಪ್ರಶ್ನಿಸಿದ್ದಾರೆ. ಸಚಿವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by uniquesupri on
ಘಟನೆಯ ಬಗ್ಗೆ ಅನುಮಾನಗಳು ಏಳಲು ಸಾಕಷ್ಟು ಅವಕಾಶಗಳಿವೆ. ಮುಂಬೈನ ಮೂರು ಮಂದಿ ಖ್ಯಾತ ಪೊಲೀಸ್ ಅಧಿಕಾರಿಗಳು ಅಂದು ಒಂದೇ ಕಾರಿನಲ್ಲಿ, ಸೂಕ್ತವಾದ ಭದ್ರತಯಿಲ್ಲದೆ ಅಲ್ಲಿಗೆ ಬಂದದ್ದು, ಮೂರೂ ಮಂದಿಯನ್ನು ಉಗ್ರರು ಕೊಂದದ್ದು ಎಲ್ಲವೂ ಹಲವು ಅನುಮಾನಗಳನ್ನು ಹುಟ್ಟಿಸುತ್ತವೆ. ಆದರೆ ಇದರ ಬಗ್ಗೆ ತನಿಖೆಗೆ ಆದೇಶಿಸುವ ಬದಲು ಸಚಿವರಾದವರು ಹೀಗೆ ಬೇಕಾಬಿಟ್ಟಿ ಸಂಶಯಗಳನ್ನು ಹರಿಬಿಡುವುದು ಬೇಜವಾಬ್ದಾರಿಯುತ ವರ್ತನೆ, ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಕೃತ್ಯ... _______________________ ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು. http://ontihakki.wor... http://kalaravapatri... http://ekshana.wordp... http://oshohaadu.wor...

Submitted by prasca on
ಅವರಿಗೆ ಕರ್ಕರೆಯನ್ನು ಕೊಲ್ಲುವ ಯೋಜನೆಯಿರಲಿಲ್ಲ ಎಂದು ಈ ಮಹಾನುಭಾವರು ಉದ್ದರಿಸಿದ್ದಾರೆ ಸುಪ್ರೀತ್. ಇದರಿಂದ ನನ್ನಂತ ಕಿಡಿಗೇಡಿಗೆ ಹೊಳೆಯುವ ವಿಷಯವೆಂದರೆ, ಈತನಿಗೆ (ಅಂತುಳೆಗೆ) ಅವರು ಯಾರನ್ನು ಕೊಲ್ಲುವ ಯೋಜನೆಯಿಟ್ಟುಕೊಂಡಿದ್ದಾರೆಂದು ತಿಳಿದಿತ್ತು ಎಂದಾಯಿತು.