19
June
2013

ಅಂತುಳೆ ಎಂಬ ಮತ್ತೊಬ್ಬ ಭಾರತ ವಿರೋಧಿ

December 24, 2008 - 10:09pm
gurumlr
ಈ ಮುಂಬೈ ಭಯೋತ್ಪಾದಕ ದಾಳಿಯ ನಂತರ ಕಾಂಗ್ರೆಸ್ಸಿನ ಒಬ್ಬೊಬ್ಬರೇ ತಮ್ಮ ದೇಶದ್ರೋಹಿತನವನ್ನು ಪ್ರಚುರಪಡಿಸುತ್ತಿರುವುದು ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷದ ನಿಜ ಬಣ್ಣ ಬಯಲಾಗುತ್ತಿದೆ. ಎಲ್ಲಾ ಸಂಸದರು ಈ ದಾಳಿಯನ್ನು ಖಂಡಿಸಿದರೆ ಈ ಅಬ್ದುಲ್ ರೆಹಮಾನ್ ಅಂತುಳೆ ಎಂಬ ಒಬ್ಬ ಮುಸ್ಲಿಂ ರಾಜಕಾರಣಿ ಪಾಕಿಸ್ತಾನದ ಪರ ಹೇಳಿಕೆಗಳನ್ನು ಕೊಡುತ್ತಿರುವುದು, ಒಬ್ಬ ಮುಸ್ಲಿಂ ಯಾವತ್ತೂ ಈ ದೇಶಕ್ಕೆ ನಿಷ್ಠನಾಗಿರಲು ಸಾಧ್ಯವಿಲ್ಲ ಎಂಬುದನ್ನು ನಿಜ ಮಾಡಲು ಹೊರಟಿರುವಂತಿದೆ. ಭಯೋತ್ಪಾದಕರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಹೇಮಂತ್ ಕರ್ಕರೆ ಮೊದಲಾದವರ ಬಲಿದಾನವನ್ನು ನಿಕೃಷ್ಟವಾಗಿಸಲು ಹೊರಟಿರುವುದು ಈ ಅಂತುಳೆ ಎಂಬ ಮತಾಂಧನ ಹುಂಬತನವನ್ನು ತೋರಿಸುತ್ತದೆ. ವೀರ ಮರಣ ಹೊಂದಿದ ಮೂವರು ಅಧಿಕಾರ್‍ಇಗಳನ್ನು ಹಿಂದೂ ಭಯೋತ್ಪಾದಕರು ಮುಸ್ಲಿಂ ವೇಷದಲ್ಲಿ ಬಂದು ಹತ್ಯೆ ಮಾಡಿದ್ದಾರೆ ಎಂಬ ಬಾಲಿಶ ಹಾಗೂ ದೇಶದ್ರೋಹಿ ಹೇಳಿಕೆಗಳನ್ನು ಕೊಟ್ಟು ಸಮಸ್ತ ಹಿಂದೂಗಳನ್ನು ಭಯೋತ್ಪಾದಕರೆಂದು ಬೊಟ್ಟು ಮಾಡಿ ತೋರಿಸುತ್ತಿದ್ದಾನೆ. ಈ ಮತಾಂಧನ ಹಿನ್ನೆಲೆಗಳನ್ನು ಗಮನಿಸಿದರೆ ಇವನಿಗೆ ಪಾಕಿಸ್ತಾನದ ಐ.ಎಸ್.ಐ. ಹಾಗೂ ದಾವೂದ್ ಇಬ್ರಾಹಿಂ ನಂಟು ಇರುವುದನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ಇವ ಮೊದಲು ಮಹಾರಾಷ್ಟ್ರದ ಮುಖ್ಯಮಂತ್ರಿ ಗಾದಿಯ ಮೇಲೆ ಕೂತಿದ್ದವ ಹಾಗೂ ಅವನ ಕಾಲದಲ್ಲಿ ಮುಂಬೈನಲ್ಲಿ ಸಾಕಷ್ಟು ಅವಾಂತರಗಳು ನಡೆದಿದ್ದವು. ಇಂತಹ ಒಬ್ಬ ರಾಜಕಾರಣಿ ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದರೆ ಪ್ರಧಾನಿ ಪಟ್ಟದಲ್ಲಿ ಕೂತ ಇನ್ನೊಬ್ಬ ರಾಜಕಾರಣಿ ತುಟಿ ಪಿಟಿಕ್ ಎನ್ನದೆ ಸುಮ್ಮನಿರುವುದು ಪ್ರಧಾನಿಯ ಮೇಲೆಯೇ ಸಂಶಯ ಬರುವಂತೆ ಮಾಡಿದೆ. ಈಗ ಕಾಂಗ್ರೆಸ್ ಪಕ್ಷದ ದೇಶನಿಷ್ಠೆಯನ್ನು ಒರೆಗೆ ಹಚ್ಚುವ ಸಮಯ ಬಂದಿದೆ. ಈಗ ಎಲ್ಲರೂ ತಮ್ಮ ನಿಜವಾದ ಬಣ್ಣ ತೋರಿಸಲಾರಂಭಿಸಿರುವುದು ಒಂದು ಗಂಭೀರ ವಿಷಯವಾಗಿದೆ.ಅಲ್ಲದೆ ಈ ಭಯೋತ್ಪಾದಕರ ಧಾಳಿಯಾದ ಮೇಲೆ ನಮ್ಮೆ ದೇಶದಲ್ಲಿ ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿರುವವರು ಜಾಸ್ತಿಯಾಗಿದ್ದಾರೆ. ಅರುಂಧತಿ ರಾಯ್, ಅಂತುಳೆ, ಆರ್.ಆರ್.ಪಾಟೀಲ್, ಅಚ್ಯುತಾನಂದ್, ವಿಲಾಸ್ ರಾವ್ ದೇಶ್‌ಮುಖ್ ಮೊದಲಾದವರು ಈಗ ಹಿಂದೂವಿರೋಧಿ, ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿರುವುದು ಆತಂಕದ ವಿಷಯವಾಗಿದೆ. ಇವರನ್ನು ಇನ್ನೂ ಬಂಧಿಸದೆ ಹಾಗೆಯೇ ಬಿಟ್ಟಿರುವುದು ಕೇಂದ್ರ ಸರಕಾರದ ಹಿಂದೂ ಹಾಗೂ ದೇಶವಿರೋಧಿ ನೀತಿಯ ಸಮರ್ಥನೆಯೇ?. ಇಪ್ಪತ್ತು ಭಯೋತ್ಪಾದಕರ ಪಟ್ಟಿ ನೀಡಿ, ಅವರ ಹಸ್ತಾಂತರದ ಬಗ್ಗೆ ಇನ್ನೂ ಮೀನ ಮೇಷ ಎಣಿಸುತ್ತಿರುವ ಈ ಕಾಂಗ್ರೆಸ್ ಸರಕಾರ, ನಮ್ಮ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿನ ವಿಷಯವಾಗಿರುವುದಕ್ಕೆ ಯಾವ ಉತ್ತರ ನೀಡುತ್ತದೆ?. ಪಾಕ್ ಮೇಲೆ ದಾಳಿ ಮಾಡಿದರೆ ಎಲ್ಲಿ ಮುಸ್ಲಿಂ ಮತಗಳು ತಮಗೆ ತೊಡಕಾಗುವುದೋ ಎಂಬ ತುಚ್ಛ ಯೋಚನೆಯಲ್ಲಿಯೇ ಈ ಕಾಂಗ್ರೆಸ್ ಸರಕಾರ ಕಾಲ ತಳ್ಳುತ್ತಿದೆ. ಹೇಗಿದ್ದರೂ ಹಿಂದೂಗಳ ಮತ ತಮಗೇ ಗ್ಯಾರಂಟಿ, ಅವರನ್ನು ತೃತೀಯ ದರ್ಜೆ ಪ್ರಜೆಗಳನ್ನಾಗಿ ನಡೆಸಿಕೊಂಡರೂ ಅವರು ಮತ ಮಾತ್ರ ಕಾಂಗ್ರೆಸ್ಸಿಗೇ ಹಾಕುತ್ತಾರೆ ಎಂಬ ಭಂಡ ನಂಬಿಕೆ ಈ ಸರಕಾರದ್ದು. ಈ ಕಾಂಗ್ರೆಸ್ ಸರಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಮತ ನೀಡುವವ ನಿಜವಾಗಲೂ ಈ ದೇಶವನ್ನು ಪ್ರೀತಿಸುವವನಾಗಲು ಸಾಧ್ಯವೇ ಇಲ್ಲ. ಅವ ಖಂಡಿತಾ ದೇಶದ್ರೋಹಿಯೇ ಸರಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by venkatb83 on
ಸತ್ಯ ಯಾವಾಗಲು ಕಹಿ ಆಗಿರುತ್ತೆ. ಈಗ ನೀವು ಹೇಳಿರುವುದು ಸಹಾ ಅದನ್ನೇ. ಇದು ಪ್ರತಿಯೊಬ್ಬ ಅಪ್ಪಟ ಭಾರತೀಯನ ಅನಿಸಿಕೆ ಕೆಲವರು ಬಹಿರಂಗವಾಗಿ ಹೇಳುತ್ತಾರೆ/ಬರೆಯುತ್ತಾರೆ, ಇನ್ನು ಕೆಲವರು ಕೇವಲ ಅದನ್ನು ಓದುತ್ತಾರೆ, ಅಥವಾ ಪ್ರತಿಕ್ರಿಯಿಸುತಾರೆ. ಈಗ ನಾನು ಇದನ್ನು(ನಿಮ್ಮ ಬರಹ) ಓದಿದ್ದೇನೆ ಮತ್ತು ಪ್ರತಿಕ್ರಿಯಿಸಿದ್ದೇನೆ.. ನಿಮ್ಮ ಬರಹಕ್ಕೆ ೫೮(ನನ್ನದು ಸೇರಿ ೫೯) ಜನ ಭೇಟಿ ನೀಡಿ ಓದಿದ್ದರೆ, ಆದರೆ ಕೇವಲ ನಾನು ಮತ್ತು ಇನ್ನೊಬ್ಬರು ಪ್ರಯಿಕ್ರಿಯಿಸಿದ್ದೇವೆ, ಇದು ನಿಮ್ಮ ಬರಹ ಜನರನ್ನ ತಟ್ಟಿದೆ ಅಂತಲೂ ಹೇಳಬಹುದು... ಇನ್ನು ಈ ಭಾರತದಲ್ಲಿ ಏನನ್ನಾದರು ಮುಕ್ತವಾಗಿ ಹೇಳಲು ಸಹಾ(ಮುಕ್ತ ಸ್ವಾತಂತ್ರ ಅಂತ ಒಂದು ಇದೆಯಂತೆ ಎಲ್ಲಿದೆ?) ಭಯ ಪಡಬೇಕಾಗಿ ಬಂದಿರುವುದು ಮಹಾ ದುರಂತ ಅಂತಲೇ ಹೇಳಬಹುದು.. ಅಂತುಲೆ ತರಹದ ರಾಜಕಾರಣಿಗಳು, ಹುಸಿ ಜಾತ್ಯತೀತವಾದಿಗಳು, ಏನಾದರು ಬೊಗಳಿ ಸುಮ್ಮನಾಗಿ(ಅದರ ಪರಿಣಾಮ ಮಾತ್ರ ಘೋರವಾಗಿರುತ್ತೆ) ಬಿಡಬಹುದು, ಆದರೆ ನಮ್ಮ ತರಹದವರು ಏನಾದರು ಅದಕ್ಕೆ ವಿರುದ್ಧವಾಗಿ ಹೇಳಿದರೆ , ನಮ್ಮದೇ ನೆಲದಲ್ಲಿ ನಾವು ಪರಕೀಯರಾಗುವುದು ಸತ್ಯ.. ಈಗ ಆಗಬೇಕಿರುವುದು ಮನಸುಗಳ ಮಿಲನ,ಅದು ಎಲ್ಲ ಜಾತಿ, ಪಂಥ ಮೀರಿ ಪ್ರಸಿರಿಸಬೇಕು, ಅದರಿಂದ ಭಯೋತ್ಪಾದನೆಯನ್ನ ಹಿಮ್ಮೆತ್ತಬಹುದು.. ಆದರೆ ಈಗ ಅದಕ್ಕೆ ವಿರುದ್ಧವಾಗಿ ವಿಷ ಬೀಜ ಬಿತ್ತಿ ಬೆಳೆ ತೆಗೆಯಲು ಕೆಲ ಜನ ಹೊಂಚು ಹಾಕುತ್ತಿದ್ದಾರೆ... ನಾವು ಈಗ ಎಚ್ಹ್ಚೆತ್ತುಕೊಳುವ ಕಾಲ ಬಂದಿದೆ... ಮನಸ್ಸಿಗನ್ನಿಸಿದ್ದನ್ನ ನಿಸ್ತುರವಾಗಿ ಹೇಳುವವರನ್ನು ಕಂಡರೆ ನನಗೆ ಅಚ್ಚ್ ಮೆಚ್ಚು. ಈಗ ನಿಮ್ಮ ಬರಹ ಅದನ್ನೇ ಹೇಳಿದೆ... ನಿಮ್ಮ ನೇರ ನುಡಿ ನನಗೆ ಇಷ್ಟ ಆಯ್ತು.. prasca ಅವರೇ...

Submitted by prasca on
ಅಯ್ಯೊ ವೆಂಕಟ್ ಇದು ನನ್ನ ಲೇಖನವಲ್ಲ. ಲೇಖನ ಬರೆಯುವಷ್ಟು ಪ್ರಬುದ್ದನೂ ನಾನಲ್ಲ. ನಾನೆನಿದ್ದರು ಬರೀ ಟಿಕಾಕಾರ ಅದಕ್ಕೇನು ತಲೆ ಬೇಕಿಲ್ಲ, ಬುದ್ದಿಯಂತು ಬೇಡವೇ ಬೇಡ. ಅದಕ್ಕೆ ಸುಲಭದ ದಾರಿ ಹಿಡಿದಿದ್ದೇನೆ.

Submitted by gurumlr on
ಅಭಿನಂದನೆಗಳು ವೆಂಕಟ್ ಅವರೇ......ನಿಮ್ಮಂತಹ ಹತ್ತು ಜನ ನನ್ನ ಲೇಖನಗಳಿಗೆ ಬೆಂಬಲ ನೀಡುತ್ತಿದ್ದರೆ ನನಗೆ ಇನ್ನಷ್ಟು ಹುರುಪು ಬರುವುದಂತೂ ನಿಜ. ನನಗೆ ಮೊದಲಿನಿಂದಲೂ ಇಂಥ ದೇಶದ್ರೋಹಿಗಳನ್ನು ಕಂಡರೆ ಮೈಯೆಲ್ಲಾ ಉರಿಯುತ್ತದೆ. ಕೇಂದ್ರ ಸರಕಾರ (ಕಾಂಗ್ರೆಸ್) ನಮ್ಮಂಥ ಮಧ್ಯಮವರ್ಗದವರಿಗೆ ಮಾಡುತ್ತಿರುವ ಅನ್ಯಾಯ ಕಂಡರೆ ಒಡಲಲ್ಲಿ ಕೆಂಡ ಇಟ್ಟುಕೊಂಡ ಅನುಭವ. ನೀವು ನನ್ನ ಬ್ಲಾಗ್‌ಗ್ರ್ ಭೇಟಿ ನೀಡಿ....http://kannadaputhra...

Submitted by Rakesh Shetty on
ಗುರು ಅಂತುಳೆಯಂತ ತಲೆ ಕೆಟ್ಟವರಿಂದ ಇಂತಹ ಹೇಳಿಕೆಗಳನ್ನಲ್ಲದೆ ಇನ್ನೇನು ನಿರೀಕ್ಷಿಸಲು ಸಾದ್ಯವಿಲ್ಲ, ಪುಡಿ ವೋಟಿಗೆ ಸಾಯುವ ರಾಜಕಾರಣಿಗಳು ದೇಶವನ್ನು ಮಾರಲು ಹೇಸುವುದಿಲ್ಲ ಬಿಡಿ. [quote]ಒಬ್ಬ ಮುಸ್ಲಿಂ ಯಾವತ್ತೂ ಈ ದೇಶಕ್ಕೆ ನಿಷ್ಠನಾಗಿರಲು ಸಾಧ್ಯವಿಲ್ಲ ಎಂಬುದನ್ನು ನಿಜ ಮಾಡಲು ಹೊರಟಿರುವಂತಿದೆ [/quote] ಆದರೆ ನಿಮ್ಮ ಈ ಮಾತು ತಪ್ಪು ತಪ್ಪು, ಎಲ್ಲರನ್ನು ಒಂದೇ ರೀತಿ ತಿಳಿಯಬೇಡಿ, ಅವರಲ್ಲೂ ಬಹಳಷ್ಟು ಜನ ಒಳ್ಳೆಯವರಿದ್ದಾರೆ. ರಾಕೇಶ್ ಶೆಟ್ಟಿ :)