ಕನ್ನಡದಲ್ಲಿನ ನವೀಕ್ರುತ ಗಾದೆಗಳು
ಈವರೆಗೆ ತು೦ಬಾ ಸೀರಿಯಸ್ ವಿಶಯಗಳು ಪ್ರಸ್ತಾಪವಾಗಿವೆ.
ಈಗ ಸ್ವಲ್ಪ ಫನ್ ಟೈ೦ಮ್
ಉ.ದಾ
ಹೆತ್ತವಳ ಸ೦ಕಟ ಸಿಝೇರಿಯನ್ ಆದವಳಿಗೆ ಏನು ಗೊತ್ತು
ವೆಬ್ ಸೈಟ್ ಮಾಡುವವನಿಗೆ ವರುಷ ಹ್ಯಾಕರ್-ಗೆ ನಿಮಿಷ.
..............................
......................................ಇದಕ್ಕೆ ನಿಮ್ಮದನ್ನು ಸೇರಿಸುತ್ತಾ ಹೋಗಿ

- Login or register to post comments
- 791 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಕಾಲಿದ್ದಷ್ಟು ಚಾಪೆಹಾಸು.
ಕಾಲಿದ್ದಷ್ಟು ಚಾಪೆಹಾಸು.
ಕೆಲವು software ಗಾದೆಗಳು. Softwareಗೆ ಸಂಬಂಧಪಟ್ಟಿದ್ದರಿಂದ ಕಂಗ್ಲೀಷ್ ನಲ್ಲಿವೆ.
ಎಲ್ಲರ programನಲ್ಲು bugಗಳೆ.
codeಗಿಂತ bugs ಜಾಸ್ತಿ.
compile ಮಾಡದೇನೆ, run ಮಾಡಿಧಂಗೆ
ಯಾವಾಗ ನೋಡಿದರು officeನಲ್ಲಿ, ಆದರೆ, deadline ಮಾತ್ರ complete ಆಗಲ್ಲ.
Re: ಕಾಲಿದ್ದಷ್ಟು ಚಾಪೆಹಾಸು.
ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ!
೧) ಎರಡು ಚಾಪೆ ಹಾಸಬೇಕೇ? (ಎರಡು ಕಾಲುಗಳು, ಕಾಲಿದ್ದಷ್ಟು ಚಾಪೆ ಹಾಸಬೇಕಿರುವುದರಿಂದ ಎರಡು ಚಾಪೆ)
೨) ಅವನ್ನು ಒಂದರ ಪಕ್ಕ ಇನ್ನೊಂದರಂತೆ ಹಾಸಬೇಕೇ ಅಥವಾ ಒಂದರ ಮೇಲೆ ಒಂದರಂತೆಯೇ?
೩) ಒಂದುವೇಳೆ ಒಂದರ ಪಕ್ಕ ಇನ್ನೊಂದಾದರೆ ಅದು ಯಾರಿಗೆ?
೪) ಒಂದು ವೇಳೆ ಒಂದರ ಮೇಲೆ ಒಂದು ಚಾಪೆಯನ್ನು ಹಾಸುವುದಾದರೆ, 'ಚಾಪೆಯ ಕೆಳಗೆ ತೂರುವುದು... ರಂಗೋಲಿಯ ಕೆಳಗೆ ತೂರುವುದು...' ನಾಣ್ನುಡಿಯನ್ನು ಕೊಂಚ ಬದಲಿಸಬೇಕೆ?(ಒಂದು ಚಾಪೆಯ ಕೆಳಗೆ ತೂರಿದರೂ ಆಗ ಇನ್ನೊಂದು ಚಾಪೆ (ಕೆಳಗಿನದು) ಇರುತ್ತದಲ್ಲ!)
೫) ಕಾಲಿದ್ದಷ್ಟು ಚಾಪೆ ಹಾಸು... ತತ್ವವನ್ನು centipede, millipede (ಶತಪದಿ, ಸಹಸ್ರಪದಿ)ಗಳೂ ಅಳವಡಿಸಿದರೆ ಚಾಪೆ ಉದ್ಯಮ ಬಹಳಷ್ಟು ಸುಧಾರಣೆಗೊಳ್ಳಬಹುದೇ?
- ಶ್ರೀವತ್ಸ ಜೋಶಿ
ಉ:ಕಾಲಿದ್ದಷ್ಟು ಚಾಪೆಹಾಸು...
ಸರಿ ಅದನ್ನು "ಕಾಲುಗಳಿರುವಷ್ಟು ಚಾಪೆಗಳನ್ನು ಹಾಸು" ಎಂದು ಮಾಡೋಣವೆ?
ಅಥವಾ "ಕಾಲುಚಾಚುವಷ್ಟು ಚಾಪೆಹಾಸು" ಎಂದು ಮಾಡೋಣವೆ?
ಕಾಲಿದ್ದಷ್ಟು ಏನೋ ಚಾಪೆ ಹಾಸುತ್ತೀರಾ...........
ಆದರೆ ಕಾಲೇ ಇಲ್ಲದವರಿಗೆ ? ! ? ! ? ! ? ! ? ! ? ! ?
Re: ಚಾಪೆ ರಗಳೆ
ಶತಪದಿ,ಸಹಸ್ರಪದಿ ಯಾಕೆ ? ಸಪ್ತಪದಿ ಸಾಕೆ ??
ಸಪ್ತಪದಿ ಸಾಕಾದ್ರೆ ಒಂದೇ ಚಾಪೆ O.K
Sandeep Aithal (aithalsandy@gmail.com)
91-98443-73894
Re: ಚಾಪೆ ರಗಳೆ
ಹರಿಹರ ತನ್ನ ವಿಶೇಷ 'ರಗಳೆ' ಶೈಲಿಯಲ್ಲಿ ಕಾವ್ಯಗಳನ್ನು ಚಾಪೆಯ ಮೇಲೆ ಕುಳಿತು ಬರೆಯುತ್ತಿದ್ದನೇ? ಅದು 'ಚಾಪೆ ರಗಳೆ' ಆಯಿತೇ?
- ಶ್ರೀವತ್ಸ ಜೋಶಿ
ಹೊಟ್ಟೆಗೆ
ಹೊಟ್ಟೆಗೆ ಹಿಟ್ಟಿಲ್ಲದಿದ್ದರು, ಕೈಗೆ ಮೊಬೈಲು.
ಹಾಡು ಹೇಳ್ತೀನಿ ಅಂತ, ರೇಡಿಯೋ ಹಾಕ್ಧಂಗೆ.
Coding ಮಾಡಲಾರದ ಗಂಡಂಗೆ, system slow ಅಂತೆ.
ಉ: ನವೀಕ್ರುತ ಗಾದೆಗಳು
ಮೈಕಿಗೆ ಮುತ್ತು ಕೊಟ್ಟ ಹಾಗೆ
ಮಂತ್ರಿಯ ಕಾರಿಗೆ ಗ್ಯಾರೇಜಿನಲ್ಲೇ ತುಕ್ಕು
ಉ: ನವೀಕ್ರುತ ಗಾದೆಗಳು
ಮೊಬೈಲು ತೆಗೆದುಕೊಂಡವಳು ಬಯಲಿಗೆ ಬಾರಳೇ
ಮತ್ತಷ್ಟು
ಮೈನ್ ಫ್ರೇ೦ಮ್ಸ್-ಗೆ ಒ೦ದು ಕಾಲ ಈ-ಕಾಮರ್ಸ್ ಗೆ ಒ೦ದು ಕಾಲ
( ಅತ್ತೆಗೆ ಒ೦ದು ಕಾಲ ಸೊಸೆಗೆ ಒ೦ದು ಕಾಲ )
p.m ಗೆ ಪ್ರಾಜೆಕ್ಟ್ ವಿವರಿಸಿದ ಹಾಗೆ
( ಕೋಣನ ಮು೦ದೆ ಕಿನ್ನರಿ ಬಾರಿಸಿದ ಹಾಗೆ )
ಮೆಸೆ೦ಜರ್ ನಲ್ಲಿ ಚಾಟ್ ಮಾಡುವಾಗ p.m ಬ೦ದಹಾಗೆ
( ಶಿವಪೂಜೆಯಲಿ ಕರಡಿ ಬಿಟ್ಟ ಹಾಗೆ )
ಕಂಗ್ಲೀಷ್ ಗಾದೆಗಳು
phone ಮಾಡೋ ಜಾಣ ಅಂದರೆ, miss call ಕೊಟ್ಟಹಂಗೆ
Windows, Linux ಜಗಳದಲ್ಲಿ users ಬಡವರಾದರು.
Project complete ಆಗೊಕ್ಕೆ, ಮುಂಚೆ party ಮಾಡಧಂಗೆ.
Manager ಹೇಳಿದ್ದೊಂದು, Programmer ಮಾಡಿದ್ದು ಮತ್ತೊಂದು.
ಒಲ್ಲದ managerಗೆ. ಎಲ್ಲಲ್ಲೆಲ್ಲು bugsಉ.