ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ ಹೋರಾಟ, ಸಮಾರಂಭಗಳ ಪಾತ್ರ ಮುಖ್ಯನಾ................ ?

ನನ್ನ ಸುತ್ತಮುತ್ತ ಎಲ್ಲೆ ಕನ್ನಡ ಪರವಾಗಿ ಯಾವುದೇ ಸಮಾರಂಭ ವಾಗಲಿ ಅಥವಾ ಹೋರಾಟವಾಗಲಿ ನಡೆದಾಗ ತಪ್ಪದೆ ಅಲ್ಲಿ ನಾನು ಕೂಡ ಭಾಗವಹಿಸಿದ್ದೆನೆ ಆಗ ನನ್ನ ಗೆಳೆಯರಲ್ಲಿ ಕೆಲವರು ಅಪಹಾಸ್ಯ ಮಾಡಿದ್ದು ಉಂಟು ಯಾಕೆಂದರೆ ಅವರು ಹೇಳೊ ಮಾತು ಇಷ್ಟೆ ಅಲ್ಲವೋ ನೀವು ಒಬ್ಬ ಇಂಜಿನಿಯರ್ ಆಗಿ ನಿನ್ನ ಕೆಲಸದ ಕಡೆ ಗಮನ ಹರಿಸೋದು ಬಿಟ್ಟು ಯಾವುದು ಸಮಾರಂಭ ಅಂತೆ ಹೋರಾಟವಂತೆ ಅಲ್ಲವೋ ನಿನಗೆನಾದರೂ ನಾಳೆ ಹೆಚ್ಚು ಕಡಿಮೆ ಯಾದರೆ ಅವರು ಯಾರು ನಿನ್ನ ಸಹಾಯಕ್ಕೆ ಬರಲ್ಲ ಯಾಕೆಂದರೆ ಅವರಿಗೆನೆ ನೂರೆಂಟು ಸಮಸ್ಯೆ ಇರುತ್ತೆ ಅದಲ್ಲೆ ಬಿಟ್ಟು ನಿನ್ನ ಸಹಾಯಕ್ಕೆ ಬರುತ್ತಾರಾ ? ಸುಮ್ಮ ನೆ ನಿನ್ನ ಕೆಲಸದ ಕಡೆ ಗಮನ ಹರಿಸು , ಮತ್ತೆ ಕೆಲವರು ಬೆನ್ನು ತಟ್ಟಿದ್ದು ಉಂಟು ಯಾಕೆಂದರೆ ನಮ್ಮನ್ನ ನಾವು ನೋಡಿಕೊಳ್ಳುವ ಜೊತೆಗೆ ನಮ್ಮ ನಾಡು ನುಡಿನ ಬೇಳೆಸೋದು ಅಷ್ಟೆ ಮುಖ್ಯ ಅದಕ್ಕೆ ದೊಡ್ಡವರು ಒಂದು ಮುತ್ತಿನಂತಹ ಮಾತನ್ನ ಹೇಳಿದ್ದಾರೆ " ದೇಶ ನಮಗೇನು ಮಾಡಿತು ಅನ್ನುವುದಕ್ಕಿಂತ ದೇಶಕ್ಕೆ ನಾವೇನು ಮಾಡಿದಿವಿ " ಅಂತ , ಹೌದು ಎರಡು ಕಡೆಯಿಂದಲೂ ಬಂದಂತಹ ಉತ್ತರಕ್ಕೆ ಅದರದೆ ಆದ ಆರ್ಥವಿರುತ್ತೆ ಹೇಗೆ ಒಂದು ವಿಷಯಕ್ಕೆ ಪರ ಮತ್ತೆ ವಿರೋದವಿರುತೊ ಹಾಗೆನೆ .

ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ ಹೋರಾಟ ಅಥವಾ ಸಮಾರಂಭಗಳ ಪಾತ್ರ ಮುಖ್ಯನಾ ? ಅದನ್ನ ಪಡೆಯಲಿಕ್ಕೆ ಹೋರಾಟ ಮತ್ತು ಸಮಾರಂಭ ಗಳ ಅವಸ್ಯಕತೆ ಇದೆಯೇ ?

ಹಾಗಾದರೆ ಹೋರಾಟ,ಸಮಾರಂಭ ಗಳೆ ಮುಖ್ಯವಲ್ಲ ಅನ್ನೋ ದ್ದಾದರೆ ಹೇಗೆ ಬೆಳಸಬಹುದು ಅನ್ನೋದೆ ಇಲ್ಲಿನ ಚರ್ಚೆ ..

ಕೊನೆಯಲ್ಲಿ ಒಂದು ಮಾತು ಇಲ್ಲಿನ ಚರ್ಚೆ ಆರೋಗ್ಯಕರವಾಗಿರಬೇಕೆ ವಿನಃ ಅದರ ಎಲ್ಲೇ ಮೀರಬಾರದು ಅನ್ನುವುದೆ ನನ್ನ ಉದ್ದೇಶ

ನಿಮ್ಮವ
ಮಧುಸೂದನ್ ಗೌಡ

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ

girish.rajanal's picture

ಸಮಾರಂಭಗಳ ಪಾತ್ರವೇನೋ ಸರಿ.. ಆದ್ರೆ ತಿಂಗಳಾನುಗಟ್ಟಲೇ ನೆಡೆಸುವ ಆರ್ಕೆಸ್ಡ್ರಾಗಳ ಪಾತ್ರವಲ್ಲ. ತಿಂಗಳಾನಗಟ್ಟಲೇ ಮಾಡುವ ರಾಜ್ಯೋತ್ಸವವಲ್ಲ,
ಒಲುಮೆಯಿಂದ,
ಗಿರೀಶ ರಾಜನಾಳ.

ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ

msudan86's picture

ಗೀರಿಶ ಈ ಆರ್ಕೆಸ್ಡ್ರಾಗಳೆಲ್ಲಾ ನಾವುಗಳು ನಮ್ಮ ಮೊಜಿಗೆ ಮಾಡಿಕೊಂಡಿರುವುದು ಅಷ್ಟೆ ,ಈ ಸಮಾರಂಭ ಅನ್ನೋ ನೆಪದಲಿ ಕೆಲವರೂ ಹಣ ಮಾಡಲಿಕ್ಕೆ ದಾರಿ ಆಗುತ್ತೆ ಅಷ್ಟೆ ಇದರಲ್ಲಿ ಯಾವುದೆ ಆದ ರೀತಿ ಯಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಲ್ಲ ,ಒಂದು ವೇಳೆ ಮೂಡಿಸಿದರೂ ಅದು ಅವತ್ತಿಗೆ ಮಾತ್ರ ಸಿಮೀತವಾಗಿರುತ್ತೆ ಆಮೇಲೆ ಅವನು ಅದನ್ನೆ ಮರೆತೆ ಹೊಗುತ್ತಾರೆ .

ನಿಮ್ಮವ

ಗೌಡ್ರು

ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ

inchara123's picture

ಗೌಡ್ರೇ, ನನ್ನ ಸಹಮತವಿದೆ. ಕನ್ನಡ ರಕ್ಷಣೆ ಮಾಡುತ್ತೇನೆಂದು ತಿರುಗುವವರಿಗೆ ಕನ್ನಡವನ್ನು ಸರಿಯಾಗಿ ಮಾತಾನಾಡಲು ಬರುವುದಿಲ್ಲ. ಅವರಲ್ಲಿ ಯಾರಿಗಾದರೂ ಕನ್ನಡ ಸಾಹಿತಿಗಳ ಬಗ್ಗೆ ಗೊತ್ತಿದೆಯೇ ಕೇಳಿ?

ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ

msudan86's picture

ಅವರಿವರನ್ನು ಕೇಳೋದು ಮುಖ್ಯವಲ್ಲ ಇಂಚರ , ನಮ್ಮ ಮಹಾತ್ಮರೂ ಒಂದು ಮಾತು ಹೇಳಿದ್ದಾರೆ " ಬದಲಾವಣೆ ಅನ್ನೋದು ಮೊದಲೂ ನಮ್ಮಿಂದಲೇ ಪ್ರಾರಂಭವಾಗಲಿ ಅಂತ" ಹಾಗೆನೆ ಇಲ್ಲಿ ಯಾರನ್ನು ನಂಬಿ ಕೂತರೆ ಸಾಲದು ನಾವೆ ಸ್ವತಃ ನಮ್ಮ ಕನ್ನಡದ ಬಗ್ಗೆ ಒಲವು ,ಕಾಳಜಿ ,ಗೌರವ ಮತ್ತು ಅದನ್ನು ಬೆಳೆಸೋಕೆ ಮುಂದಾಗಬೇಕು ಆಗಲೆ ಬೇರೆಯವರೂ ನಮ್ಮನ್ನು ನೋಡಿ ಅವರೆ ಕಲಿತುಕೊಳ್ಳುತ್ತಾರೆ

ನಿಮ್ಮವ

ಗೌಡ್ರು

ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ

sandhya.darshini's picture

ಇಲ್ಲಿ ನನ್ನದೊಂದು ಅನಿಸಿಕೆ,

ಕೇವಲ ಕನ್ನಡ ಸಾಹಿತಿಗಳಬಗ್ಗೆ ತಿಳಿದಿಲ್ಲ ಅನ್ನೊ ಕಾರಣದಿಂದ ಒಬ್ಬರನ್ನು ಕನ್ನಡಿಗನಲ್ಲ ಇಲ್ಲವೆ ಕನ್ನಡ ಪ್ರೇಮಿ ಅಲ್ಲ ಅನ್ನೋದು ಸರಿಯಲ್ಲವೇನೋ. ಕನ್ನಡಕ್ಕಾಗಿ ಕೆಲಸ ಮಾಡಲು ಇದೊಂದೆ ಮುಖ್ಯ ಅಲ್ಲ. ಕನ್ನಡಿಗರಿಗೆ, ಕನ್ನಡಕ್ಕೆ ಅನ್ಯಾಯ ಆಗದಂತೆ ಯಾರೇ ನೋಡಿಕೊಂದ್ರು ಅವರು ಕನ್ನಡ ಪ್ರೇಮಿಗಳೇ.

ಇಂತಿ,
ಸಂಧ್ಯಾ

ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ

inchara123's picture

ನನ್ನ ಅಭಿಪ್ರಾಯ ಅದಲ್ಲ ಸಂದ್ಯರವರೇ, ಕನ್ನಡವನ್ನು ಉಳಿಸುವುದಕ್ಕಿಂತ ಪ್ರಚಾರ ಪಡೆಯುವದಕ್ಕೆ ಮಾಡುವ ನಾಟಕವನ್ನು ನಾನು ವಿರೋಧಿಸಿದ್ದು.

ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ

sandhya.darshini's picture

ಖಂಡಿತ. ಇದಕ್ಕೆ ನನ್ನ ಧಿಕ್ಕಾರ ಕೂಡ ಇದೆ

ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ

msudan86's picture

ಸಂಧ್ಯಾ ರವರೆ ಬರೀ ಕನ್ನಡಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುವವರೂ ಕನ್ನಡ ಪ್ರೇಮಿಗಳೆ ಬರೀ ಅಷ್ಟು ಸಾಕೆ , ನಮ್ಮಲ್ಲಿ ಯೇ ನಮ್ಮ ಕನ್ನಡ ಪ್ರೇಮಿಗಳನ್ನು ಕೇಳಿದರೆ ನಮ್ಮ ರಾಷ್ಟ್ರ ಭಾಷೆ ಯಾವುದು ಅಂತ ಅವರೆಲ್ಲಾ ಹೇಳುವುದು ಹಿಂದಿ ಅಂತನೆ ಅದರಲ್ಲಿಯೇ ಅವರುಗಳು ಮಾಡುತ್ತಾರೆ ಭಾಷಾಂತರ ಇನ್ನು ಕೆಲವರೂ ಹೇಗೆ ಇರುತ್ತಾರೆ ಅಂದರೆ ಕನ್ನಡ ರಾಜೋತ್ಸವದಂದು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಾನು ಕೂಡ ಭಾಗವಹಿಸಿದ್ದೆ ಅದರ ಅಯೋಜಕರಲೊಬ್ಬ ಅವನ ಗೆಳೆಯನ ಜೊತೆಯಲ್ಲೆ ಬೇರೆ ಭಾಷೆಯಲ್ಲಿ ಮಾತನಾಡುತಿದ್ದ ಏಕೆಂದರೆ ಅವನ ಜೊತೆ ಮಾತನಾಡುತಿದ್ದವನಿಗೆ ಕನ್ನಡನೆ ಬರಲ್ಲ ಅದಕ್ಕೆ , ಆದರೂ ಅವನು ಕನ್ನಡದ ಪರ ಬೆಂಬಲಿಸುತಿದ್ದ ಕಾರಣ ಹಣ ಕೊಡುತ್ತಾರೆ ಅವರು ಅವನಿಗೆ ಮತ್ತು ಸಮಾರಂಭಕ್ಕೆ ಹೆಚ್ಚು ಜನ ಸೇರಿದ್ದರೂ ಅನ್ನೊದು ಕೂಡ,ಇನ್ನು ಕೆಲ ಕನ್ನಡ ಭಾಂದವರೂ ಅಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುತಿದ್ದರೆ ಕೇಳಿದ್ದು ಕೇಳಿಸದೆ ಹಾಗೆ ಸುಮ್ಮನೆ ಹೋಗುತ್ತಾ ಇರುತ್ತಾರೆ ಏಕೆಂದರೆ ಅವರಿಗೆ ಅವರ ಮನೆ ಮಾತ್ರ ಮುಖ್ಯವಾಗಿರುತ್ತೆ ಇದು ನಮ್ಮ ಕನ್ನಡ ಪ್ರೇಮ ಅಲ್ಲವೆ.............

ನಿಮ್ಮವ
ಗೌಡ್ರು