ರಸವತ್ತಾದ ಪ್ರಶ್ನೆಗಳು
ರಸವತ್ತಾದ ಪ್ರಶ್ನೆಗಳು
1) gear ಹಾಕುವ ಸೊಪ್ಪಿನಿಂದ ನೀರು ಬೀಳುವ ಜಾಗ ಎಲ್ಲಿದೆ?
2) power ಇದ್ರೂನೂ ಇತ್ತೀಚೆಗೆ ಅಬುಧಾಬಿಯಲ್ಲಿ ಧಬಧಬ ಎಂದು ದಬ್ಬಿಸಿಕೊಂಡವರು ಯಾರು?
3) ಉಪ್ಪಿನ ಸತ್ಯಾಗ್ರಹದಲ್ಲಿ ಕನ್ನಡನಾಡಿನಗಲದ ಕಿವಿಯವರೊಬ್ರು ಅರೆಸ್ಟಾಗಿದ್ರು. ಯಾರವ್ರು?
4) ಭಿಕ್ಷೆಬೇಡ್ಕೊಂಡೇ, ಮೈಕೈ ಬಗ್ಗಿಸ್ಕೊಂಡೇ ಬರೀತಿದ್ದವ್ರು ಯಾರು?
5) ಎಲ್ರಿಗಿಂತ್ಲೂ ಮೊದ್ಲು ಬಿಸಿಬಿಸಿಪತ್ರ ಕಳ್ಸೋ ವ್ಯವಸ್ಥೆ ಮಾಡಿದ್ದು ಯಾರು?
(ಕ್ಲೂ: ಮುಂದೆ ಭಾರಿ ಸೂಕ್ಷ್ಮಬುದ್ಧಿಯವರಿಗೆ ಈ ಪತ್ರಾನ ಮಾರಿಬಿಟ್ರಂತೆ.)
6) ಸರಿಯಾದ ಹುಡುಗನ ಬಗ್ಗೆ ಬರ್ದು ಪ್ರೈಜು ತೊಗೊಂಡೋರು ಯಾರು?
೭) ಹುಲಿಯ ಕೂದಲಿನ ರಾಜನಿಂದ ಸೋತ ನಗುವರಾಜ ಎಲ್ಲಿಯವ?
೮) ನಮ್ಮ ಶ್ರವಣಬೆಳಗೊಳದ ಭಟ್ಟಾರಕರ ಪೈಕಿ ಒಬ್ಬ ಬ್ರಾಹ್ಮಣ ಕ್ರಿಕೆಟ್ ಬಗ್ಗೆ ಮಾತಾಡ್ತಾನಂತೆ. ಯಾರವನು?
೯) ಅಡಿಕೆ ತಿಂದು ಮಾಡೋ ಕೊಲೆಗೆ ಏನು ಹೆಸರು?
೧೦) ವೈಶಾಖದಲ್ಲಿ ಪಂಜಾಬಿಗಳು ಕುಣಿಯೋದಕ್ಕೆ ಏನಂತಾರೆ?
ಸರಿಯಾದ ಉತ್ತರಗಳನ್ನು ತಮಾಶೆಯಾಗುವಂತೆ ಬರೆದರೆ ಖುಷಿಯಾಗುತ್ತದೆ. ಆದರೆ ತಮಾಶೆಯನ್ನೇ ಸರಿಯಂದ್ಕೊಂಡ್ಬಿಟ್ರೆ ಕಷ್ಟ.
ಎನಗಿಂತ ಕಿರಿಯರಿಲ್ಲ

- Login or register to post comments
- 1173 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
30% ಸರಿ
1.ಜೋಗ-ಗೈರುಸೊಪ್ಪ
5.ಹಾಟ್ ಮೇಲ್, ಸಬೀರ್ ಭಾಟಿಯ
6.ಸೂಟಬಲ್ ಬಾಯ್-ವಿಕ್ರಂ ಸೇಠ್
ಅಬುಧಾಭಿಯಲ್ಲಿ...
2. ಬಿಸಿಸಿಐ ಮತ್ತು ಪಿಸಿಬಿಯ ಪ್ರತಿನಿಧಿಗಳ ಬಗ್ಗೆ ತಾನೆ ಹೇಳುತ್ತಿರುವುದು.ಭದ್ರತಾ ವ್ಯವಸ್ಥೆಯ ಕಾರಣದಿಂದ ಅಬುಧಾಭಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡೆದ ಕ್ರಿಕೆಟ್ ಪಂದ್ಯವನ್ನು ನೋಡಲು ಇವರು ತುಂಬ ಹೊತ್ತು ಸಾಲಿನಲ್ಲಿ ನಿಂತು ಕ್ರೀಡಾಂಗಣಕ್ಕೆ ಪ್ರವೇಶ ಪಡೆಯಬೇಕಾಯಿತಂತೆ(ವಿನಾಯತಿ ಏನು ನೀಡಲಿಲ್ಲ).
8. ಚಾರು ಶರ್ಮನಾ? (ಚಾರುಕೀರ್ತಿ ಭಟ್ಟಾರಕ- ಚಾರು ಶರ್ಮ?).ಈತ ಬೆಂಗಳೂರು ನಿವಾಸಿ.
ಉತ್ತರ ತಮಾಶೆಯಗಿಲ್ಲದಿದ್ರು ಪರ್ವಾಗಿಲ್ಲ.ಸರಿ ಇದ್ದರೆ ಸಾಕು..
ಇನ್ನು ಕೆಲವು ಉತ್ತರಗಳು
೧. ಗೇರುಸೊಪ್ಪೆ
೪. ತಿರುಕ (ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು)
೫. ಸಬೀರ್ ಭಾಟಿಯಾ (ಹಾಟ್ ಮೈಲ್)
೬. ಚಾರು ಶರ್ಮ
೯. ಸುಪಾರಿ
೧೦. ಬೈಸಾಖೀ
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಹಾಟಮೇಲ್ ಕರ್ತೃನಿಗೆ ಅದರ ಉಪದೇಶ
ಸಬೀರ ಭಾಟಿಯಾ ಬಗ್ಗೆ ಒಂದು ರಸವತ್ತಾದ ಘಟನೆ. ಇದು ಆಗಿದ್ದು ಸುಮಾರು 1995ರ ಆಸುಪಾಸಿನಲ್ಲಿ ಇರಬಹುದು. ಆಗ ತಾನೆ ಭಾರತದಲ್ಲಿ ಇಂಟರ್ ನೆಟ್ ಪ್ರವೇಶಿಸಿತ್ತು. ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಮೊದಲ ಬ್ರೌಸಿಂಗ್ ಸೆಂಟರ ತೆರೆದಿತ್ತು. ಆಗ ಜನರಿಗೆ ಕಂಪ್ಯೂಟರೆ ಬಳಕೆ ಅಷ್ಟು ಗೊತ್ತಿಲ್ಲದ ಕಾರಣ, ಆ ಸೆಂಟರನ ಜನ ಬಂದವರಿಗೆ ಇಂಟರ್ನೆಟ್ ಬಳಕೆಯ ಬಗ್ಗೆ ಚಿಕ್ಕದಾಗಿ ವಿವರಿಸುತ್ತಿದ್ದರು.
ಅದೇ ಕಾಲಕ್ಕೆ ಸಬೀರ ಭಾಟಿಯಾ ಬೆಂಗಳೂರಿಗೆ ಬಂದಿದ್ದ. ಬೆಂಗಳೂರಿಗೆ ಬಂದವನು ಆ ಬ್ರೌಸಿಂಗ್ ಸೆಂಟರಿಗೂ ಕಾಲಿರಿಸಿದ. ಅಲ್ಲಿ ಖಾಲಿ ಇರುವ ಯಾವುದೋ ಕಂಪ್ಯೂಟರನ ಮುಂದೆ ಕುಳಿತ ತಕ್ಷಣ ಮಧ್ಯವಯಸ್ಕರೊಬ್ಬರು ಬಂದರು. ಬಂದು ಹೇಗೆ ಬ್ರೌಸರ ತೆರೆಯುವುದು, ಹೇಗೆ ಹಾಟಮೇಲ್ ತೆರೆಯುವುದು, ಓದುವುದು, ಉಪಯೋಗಿಸುವುದು ಎಂಬ ಬಗ್ಗೆ 5 ನಿಮಿಷದವರೆಗೆ ಭಾಷಣ ಬಿಗಿದರು. ಕಕ್ಕಾಬಿಕ್ಕಿಯಾಗಿ ಕುಳಿತ ಸಬೀರನಿಗೆ ಏನಾದರು ಮಾತನಾಡಿದ್ದರೆ ಕೇಳಿ! ಹಾಟಮೇಲ್ ಕರ್ತೃನಿಗೆ ಅದರ ಉಪಯೋಗದ ಬಗ್ಗೆ ಉಪದೇಶ. ಇದನ್ನು ಸಬೀರ ಯಾವುದೋ ಸಂದರ್ಶನದಲ್ಲಿ ಹೇಳಿದ್ದರು.
-----
ಶಶಿಧರ