ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಸಂಪದ ಆರ್ಕೈವಿನಿಂದ

ಲೇಖಕರು

shreekant.mishrikoti's picture

ಪೂರ್ಣ ಹೆಸರು
ಶ್ರೀಕಾಂತ ಮಿಶ್ರಿಕೋಟಿ

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಇಂಗ್ಲೀಷ್ ಕನ್ನಡ ಅನುವಾದ ತಂತ್ರಾಂಶ ಇದೆಯೇ?

ಇಂಗ್ಲೀಷ್ ಕನ್ನಡ ಅನುವಾದ ತಂತ್ರಾಂಶ ಏನಾದರೂ ಇದೆಯೇ? ನಿಮಗೇನಾದರೂ ಗೊತ್ತಿದ್ದರೆ ತಿಳಿಸಿ . ಅಂತಹದು ಏನಾದರೂ ಇದ್ದರೆ ಇಂಗ್ಲೀಷಿನಿಂದ ಎಲ್ಲಾ ತಿಳುವಳಿಕೆಯನ್ನ ಕನ್ನಡಕ್ಕೆ ತರಲು ನೆರವಾಗುತ್ತದೆ ಅಲ್ಲವೇ ?

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಇಂಗ್ಲೀಷ್ ಕನ್ನಡ ಅನುವಾದ ತಂತ್ರಾಂಶ ಇದೆಯೇ?

omshivaprakash's picture

ನಿಘಂಟು ಇಲ್ಲಿದೆ - http://www.baraha.co... - ಸಂಪೂರ್ಣ ಅನುವಾದ ತಂತ್ರಾಂಶ ಇನ್ನೂ ಸಾಧ್ಯವಾಗಿಲ್ಲ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ಇಂಗ್ಲೀಷ್ ಕನ್ನಡ ಅನುವಾದ ತಂತ್ರಾಂಶ ಇದೆಯೇ?

shreekant.mishrikoti's picture

ಹಾಗೆ ಒಂದ್ವೇಳೆ ಇಲ್ಲದೇ ಇದ್ರೇ ಒಂದ್ ಕೈ ನೋಡಮಾ ಅಂತ
:)

ತೀರ ಸಣ್ಣ ಪ್ರಮಾಣದಲ್ಲಿ ಒಂದ್ ಪ್ರೋಗ್ರಾಮ್ ಅನ್ನ ಬರ್ಕೊಂಡಿದ್ದೀನಿ ....

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಉ: ಇಂಗ್ಲೀಷ್ ಕನ್ನಡ ಅನುವಾದ ತಂತ್ರಾಂಶ ಇದೆಯೇ?

omshivaprakash's picture

ಭಲೇ ಭಲೇ! ಅದರ ಬಗ್ಗೆ ಒಂದಿಷ್ಟು ಮಾಹಿತಿಯನ್ನ http://dev.sampada.net ನಲ್ಲಿ ಹಾಕಲು ಸಾಧ್ಯವೇ. ಎಲ್ಲ ಪ್ರಾಜೆಕ್ಟ್ ಗಳ ಮಾಹಿತಿ ಒಂದೆಡೆಯಿರಲಿ ಎಂದು!

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ಇಂಗ್ಲೀಷ್ ಕನ್ನಡ ಅನುವಾದ ತಂತ್ರಾಂಶ ಇದೆಯೇ?

shreekant.mishrikoti's picture

೧) ಇಲ್ರೀ , ಅದು ಈಗ ತಾನೆ ಮೊಳಕೆ ಒಡೆದಿದೆ !‌, ನೀರು ಗೊಬ್ರ ಎಲ್ಲ ಹಾಕಿ ಕಾಯ್ಬೇಕು , ಕಾಯ್ಕೋಬೇಕು !
೨) ಈಗಾಗಲೇ ಆ ತರ ಏನಾದ್ರೂ ಇದ್ರೆ , ನಾನು ಅದನ್ನ ಬೆಳೆಸಬೇಕಿಲ್ಲ ; ಅಲ್ವೇ ? ಅದಕ್ಕೆ ಕೇಳ್ತಾ ಇದ್ದೀನಿ !
೩) ಅದಕ್ಕಿನ್ನೂ ಪ್ರಾಜೆಕ್ಟ್ ಅನ್ನೋ ದೊಡ್ಡ ಹೆಸರು ಸರಿ ಅಲ್ಲ !

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಉ: ಇಂಗ್ಲೀಷ್ ಕನ್ನಡ ಅನುವಾದ ತಂತ್ರಾಂಶ ಇದೆಯೇ?

shreekant.mishrikoti's picture

ಅರೆಬರೆ ಅನುವಾದ ತಂತ್ರಾಂಶ ಇದೆಯೇ ?

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಉ: ಇಂಗ್ಲೀಷ್ ಕನ್ನಡ ಅನುವಾದ ತಂತ್ರಾಂಶ ಇದೆಯೇ?

pavanaja's picture

ಗೂಗ್ಲ್‌ನವರು ಹಿಂದಿ ಭಾಷೆಗೆ ಅನುವಾದ ಸವಲತ್ತು ನೀಡಿದ್ದಾರೆ. ನೋಡಿ - http://www.google.co.in/language_tools?hl=en. ಇಲ್ಲಿ ನೀಡಿರುವ ಆಯ್ಕೆಗಳಲ್ಲಿ ಹಿಂದಿ ಭಾಷೆಯೂ ಇದೆ. ಆದರೆ ಅವರ ಅನುವಾದ ಅತಿ ಕೆಟ್ಟದಾಗಿದೆ. ಸುಮ್ಮನೆ ಹೊತ್ತು ಕಳೆಯಬೇಕಿದ್ದರೆ ಕೆಲವು ಇಂಗ್ಲಿಶಿನ ವಾಕ್ಯಗಳನ್ನು ನೀಡಿ ಅವುಗಳನ್ನು ಹಿಂದಿಗೆ ಅನುವಾದಿಸಿ ನೋಡಿ. ಕನ್ನಡವೂ ಬರಲಿದೆ.

ಅನುವಾದ ತಂತ್ರಾಂಶ ತಯಾರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಒಬ್ಬ ವ್ಯಕ್ತಿಯಿಂದ ಆಗುವ ಕೆಲಸವಂತೂ ಅಲ್ಲವೇ ಅಲ್ಲ. ಇದಕ್ಕೆ ಒಂದು ದೊಡ್ಡ ತಂಡವೇ ವರ್ಷಗಳ ಕಾಲ ದುಡಿಯಬೇಕು. ಅತಿ ದೊಡ್ಡ corpus ಬೇಕು. ನಾನು ಈ ಕ್ಷೇತ್ರದಲ್ಲಿ, ಮೈಕ್ರೋಸಾಫ್ಟ್ ರೀಸರ್ಚ್ ಲ್ಯಾಬ್‌ನಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದ್ದೇನೆ. ಈ ತಂತ್ರಾಂಶ ತಯಾರಿಸಬೇಕಾದರೆ ಇರುವ ತೊಡಕುಗಳು, ಅದಕ್ಕೆ ಬೇಕಾದ ಕಾಲಾವಧಿಯ ಪರಿಕಲ್ಪನೆ ನನಗಿದೆ.

ಸಿಗೋಣ,
ಪವನಜ
-----------
Vishva Kannada
Think globally, Act locally

ಉ: ಇಂಗ್ಲೀಷ್ ಕನ್ನಡ ಅನುವಾದ ತಂತ್ರಾಂಶ ಇದೆಯೇ?

gurubaliga's picture

ಸೀ ಡಾಕ್ ನವರು ನಿರ್ಮಾಣ ಮಾಡಿದ "ಮಂತ್ರ ರಾಜಭಾಷಾ" ಅಂತ ಹೇಳುವ ಹಿಂದಿ ಅನುವಾದಕ ಇಲ್ಲಿದೆ.
http://www.mantra-ra...

ಆದರೆ ಬೇಕಾದಾಗ ಕೈಕೊಡುತ್ತೆ.