ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕಾಲೇಜು ಮತ್ತು ವಿವಿಗಳನ್ನು ಜ್ಞಾನಕೇಂದ್ರಗಳಾಗಿಸುವಲ್ಲಿ ಬ್ಲಾಗುಗಳ ಬಳಕೆ

ವಿವಿಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ ಸಂವಹನ ಹೆಚ್ಚಿಸಲು ಬ್ಲಾಗ್ ಮತ್ತು ಅಂತರ್ಜಾಲ ಮೊದಲಾದ ತಂತ್ರಜ್ಞಾನಗಳ ಸದ್ಬಳಕೆ ಆಗಬೇಕು ಎನ್ನುವ ವಾದಸರಣಿಯ ಬರಹವೊಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ.
ಈ ಬಗ್ಗೆ ನಿಮ್ಮ ಅನಿಸಿಕೆ ಏನು?
ಪದವಿ ನೀಡುವ ಕಾರ್ಖಾನೆಗಳು ಜ್ಞಾನಕೇಂದ್ರಗಳಾಗ ಬೇಕು

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕಾಲೇಜು ಮತ್ತು ವಿವಿಗಳನ್ನು ಜ್ಞಾನಕೇಂದ್ರಗಳಾಗಿಸುವಲ್ಲಿ ಬ್ಲಾಗುಗಳ ಬಳಕೆ

nkumar's picture

ಇಂತ ಜ್ಞಾನ ಕೇಂದ್ರಗಳು ಆಗಲೇ ಇವೆ.

IIT ಅವರ NPTEL:
http://nptel.iitm.ac...

Masachussets Institute of Technology ಅವರ OpenCourseWare:
http://ocw.mit.edu/O...

ಹಾಗೆ Stanford University ಅವರದ್ದು ಇದೆ ಕೊಂಡಿ ತಿಳಿದಿಲ್ಲ.

ಆದರೆ ಇವೆಲ್ಲ ಇಂಜಿನಿಯರಿಂಗ್ ಮತ್ತು ವಿಜ್ಞಾನಕ್ಕೆ ಸಂಬಂಧಪಟ್ಟವು. ಬೇರೆ ವಿಷಯಗಳ ಬಗ್ಗೆ ತಿಳಿದಿಲ್ಲ.

-- ನಂದಕುಮಾರ

ಉ: ಕಾಲೇಜು ಮತ್ತು ವಿವಿಗಳನ್ನು ಜ್ಞಾನಕೇಂದ್ರಗಳಾಗಿಸುವಲ್ಲಿ ಬ್ಲಾಗುಗಳ ಬಳಕೆ

ASHOKKUMAR's picture

ಎಂ ಐ ಟಿ ಯ ಮುಕ್ತ ಪಠ್ಯ ಸಂಪನ್ಮೂಲಗಳು ಚೆನ್ನಾಗಿವೆ. ಐಐಟಿ ತಾಣದಲ್ಲೂ ಸಾಕಷ್ಟು ಮಾಹಿತಿ ಲಭ್ಯ. ಆದರೆ ನೋಂದಾಯಿಸಿದರೆ ಮಾತ್ರಾ ಈ ಸೌಲಭ್ಯ ಸಿಗುತ್ತದೆ.
ಆದರೆ ಸಂವಹನಕ್ಕೆ ಅದಷ್ಟೇ ಸಾಲದು.
*ಅಶೋಕ್

ಉ: ಕಾಲೇಜು ಮತ್ತು ವಿವಿಗಳನ್ನು ಜ್ಞಾನಕೇಂದ್ರಗಳಾಗಿಸುವಲ್ಲಿ ಬ್ಲಾಗುಗಳ ಬಳಕೆ

nkumar's picture

ಎರಡು ತಾಣಗಳಲ್ಲಿ ವೀಡಿಯೊ ಮತ್ತು ಪಠ್ಯದ ಸಂಪನ್ಮೂಲಗಳು ಇವೆ. ಹಾಗೆ stanford ಅವರದ್ದು ಇದೆ ಕೊಂಡಿ ತಿಳಿದಿಲ್ಲ.

ಹಾಗೆಯೇ MIT ತಾಣದಲ್ಲಿ ಅನೇಕ ವಿಷಯಗಳ ಬಗ್ಗೆ ಪಠ್ಯಗಳಿವೆ (ತಾಂತ್ರಿಕ ಮತ್ತು ವಿಜ್ಞಾನದ ಜೊತೆಗೆ).

-- ನಂದಕುಮಾರ

ಉ: ಕಾಲೇಜು ಮತ್ತು ವಿವಿಗಳನ್ನು ಜ್ಞಾನಕೇಂದ್ರಗಳಾಗಿಸುವಲ್ಲಿ ಬ್ಲಾಗುಗಳ ಬಳಕೆ

pavanaja's picture

ಅರವಿಂದ ನಾವಡರು ಒಂದು ಉತ್ತಮ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಶಿಕ್ಷಣದಲ್ಲಿ ಕೇವಲ ಬ್ಲಾಗ್ ಒಂದನ್ನು ಮಾತ್ರ ಅಳವಡಿಸಿಕೊಂಡರೆ ಸಾಲದು. ಆಧುನಿಕ ತಂತ್ರಜ್ಞಾನದ ಎಲ್ಲ ಅಂಗಗಳನ್ನು ಅದರಲ್ಲೂ ಮುಖ್ಯವಾಗಿ ಅಂತರಜಾಲ ಆಧಾರಿತ ಸವಲತ್ತುಗಳನ್ನು ಶಿಕ್ಷಣದಲ್ಲಿ ಬಳಸಿಕೊಳ್ಳಬೇಕು. ಇದನ್ನು ಇಂಗ್ಲಿಶಿನಲ್ಲಿ Technology Enabled Learning ಎಂದು ಕರೆಯುತ್ತಾರೆ. ಮಣಿಪಾಲ ಶಿಕ್ಷಣ ಸಂಸ್ಥೆಯ ಕೆಲವು ವಿಭಾಗಗಳಲ್ಲಿ ಇದನ್ನು ಈಗಾಗಲೇ ಅಳವಡಿಸಲಾಗಿದೆ. ಇದರಲ್ಲಿ ನನ್ನ ಪಾಲೂ ಇದೆ. ಸಿಕ್ಕಿಂ ಮಣಿಪಾಲ ವಿವಿಯ ದೂರಶಿಕ್ಷಣದಲ್ಲಿ ಇದನ್ನು ಈಗಾಗಲೆ ಅಳವಡಿಸಲಾಗಿದೆ. BCA ಮತ್ತು MBA ವಿದ್ಯಾರ್ಥಿಗಳಿಗೆ ಈ ತಾಣದಲ್ಲಿ ಅವುಗಳ ಸೌಕರ್ಯ ದೊರೆಯುತ್ತದೆ - http://tel2.smude.edu.in. ಹಾಗೆಯೇ ಬೆಂಗಳೂರಿನಲ್ಲಿ ವಾರಾಂತ್ಯದಲ್ಲಿ ನಡೆಯುವ MS ಕೋರ್ಸ್‌‌ಗಳಿಗೆ ಈ ತಾಣವಿದೆ - http://tel.manipal.edu. ಇದರಲ್ಲಿ ಇರುವ ಎಲ್ಲ ಸವಲತ್ತುಗಳ ಬಗ್ಗೆ ವಿವರವಾಗಿ ಬರೆದರೆ ಅದು ಒಂದು ಪೂರ್ಣಪ್ರಮಾಣದ ಲೇಖನವೇ ಆಗಬಲ್ಲುದು.

-ಸಿಗೋಣ,
ಪವನಜ
-----------
Vishva Kannada
Think globally, Act locally

ಮಣಿಪಾಲ ವಿವಿಯ ಅಂತರ್ಜಾಲ ತಾಣಗಳು

ASHOKKUMAR's picture

ಡಾ.ಪವನಜ,
ಈ ತಾಣಗಳು ಸರಳ ಸುಂದರವಾಗಿವೆ. ಪ್ರವೇಶಿಸಲಾಗುವುದಿಲ್ಲ-ನೋಂದಾವಣೆ ಅವಶ್ಯಕತೆ ಇದೆ.
ಹಾಗಾಗಿ ಅವುಗಳ ಬಗ್ಗೆ ತುಸು ವಿವರಿಸ ಬಹುದೇ?

ಉ: ಮಣಿಪಾಲ ವಿವಿಯ ಅಂತರ್ಜಾಲ ತಾಣಗಳು

shaamala's picture

ಇಲ್ಲೆರಡು ಕೊಂಡಿಗಳಿವೆ ನೋಡಿ - ಮೊದಲನೆಯದರಲ್ಲಿ ವೀಡಿಯೊ ಮತ್ತು slides ಎರಡನ್ನೂ ಒಟ್ಟಿಗೆ ನೋಡಬಹುದು. ಎರಡನೇ ಕೊಂಡಿಯಲ್ಲಿ ಒಂದು ಮಾದರಿ Blackboard course ಸೈಟ್ ನೋಡಬಹುದು. ಅಮೇರಿಕೆಯಲ್ಲಿ ಮೊದಲಿಗೆ WebCT ಮತ್ತು Blackboard - ಈ ಎರಡೂ ತಂತ್ರಾಂಶಗಳೂ ಬಹಳಷ್ಟು ವಿಶ್ವವಿದ್ಯಾಲಯಗಳಲ್ಲಿ ದೂರ ಕಲಿಕೆಯ ಪ್ರಮುಖ ವಾಹಿನಿಗಳಾಗಿ ಉಪಯೋಗಿಸಲ್ಪಡುತ್ತಿದ್ದವು. WebCT ಹವ್ಯಾಸಿ ವಿ.ವಿ. ಸಂಶೋಧಕರ ಕೊದುಗೆಯಾದರೆ, Blackboard ಪಕ್ಕಾ ಕಮರ್ಷಿಯಲ್. ಹೀಗಾಗಿ ಕೊನೆಗೆ blackboard ನವರು ಈಗ WebCT ಯನ್ನು ತಾವೇ ಖರೀದಿಸಿಬಿಟ್ಟಿದ್ದಾರೆ.

ಈ ವಿಡಿಯೋ ಹಾಗೂ Slides ಗಳನ್ನೂ ಚಿತ್ರೀಕರಿಸಲು ಹಾಗೂ ಪ್ರಸಾರ ಮಾಡಲು MediaSite ಎನ್ನುವ ತಂತ್ರಾಂಶ ಉಪಯೋಗಿಸುತ್ತಾರೆ. ಈ MediaSite ಅನ್ನು Blackboard ಒಳಗೆ ಅಳವಡಿಸಬಹುದು. ಆಗ ವಿದ್ಯಾರ್ಥಿಗಳಿಗೆ ಪಾಠದ ವೀಡಿಯೊ, power point slides, ಅಲ್ಲದೆ, ತರಗತಿಯ Homework, Class Discussion, Bulletin Board, ತನ್ನ Grades ಎಲ್ಲವೂ ಒಂದೇ ಜಾಲತಾಣದಲ್ಲೇ ಸಿಗುತ್ತದೆ.

http://www.dets.umd....

http://www.svcc.edu/...

(sample login given)

ನನಗೆ ತಂತ್ರಜ್ಞಾನವನ್ನು ಕನ್ನಡದಲ್ಲಿ ಹೇಳಲು ಅಷ್ಟು ಚೆನ್ನಾಗಿ ಬರುವುದಿಲ್ಲ, ಏಕೆಂದರೆ, ನಾನು ವಿಜ್ಞಾನದ ವಿದ್ಯಾರ್ಥಿ ಅಲ್ಲ :) ತಪ್ಪುಗಳಿದ್ದರೆ, ದಯವಿಟ್ಟಿ ಕ್ಷಮಿಸಿ, ಹಾಗೂ ತಿದ್ದಿ.

ಶಾಮಲ

ಉ: ಮಣಿಪಾಲ ವಿವಿಯ ಅಂತರ್ಜಾಲ ತಾಣಗಳು

ASHOKKUMAR's picture

ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಶಾಮಲಾರವರೇ.

>>ನನಗೆ ತಂತ್ರಜ್ಞಾನವನ್ನು ಕನ್ನಡದಲ್ಲಿ ಹೇಳಲು ಅಷ್ಟು ಚೆನ್ನಾಗಿ ಬರುವುದಿಲ್ಲ
ಚೆನ್ನಾಗಿಯೇ ಬರೆದಿದ್ದೀರಲ್ಲ.

ಉ: ಮಣಿಪಾಲ ವಿವಿಯ ಅಂತರ್ಜಾಲ ತಾಣಗಳು

shaamala's picture

ನಂನಿ :)

ಶಾಮಲ