ನಾನು ಶ್ರೀನಿಧಿ, ಸಂಪದ ದ ಗೊಂಚಲಿನ ಹೀಚು ಕಾಯಿ.....
ಎಲ್ಲರಿಗೂ ನಮಸ್ತೆ....
ನಾನು ಸಂಪದ ದ ಸದಸ್ಯನಾಗಿ ಒಂದು ತಿಂಗಳಾಯ್ತು.... ಇನ್ನೂ ಪರಿಚಯಿಸಿಕೊಂಡಿರಲಿಲ್ಲ.. ಕಾರಣ, ಸೋಮಾರಿತನ ! ನಾನು ಸಾಹಿತ್ಯಾಸಕ್ತ,ಬರಹಗಾರ. ಕತೆ , ಕವನಗಳು, ನನಗೆ ಖುಷಿ ಕೊಡುವ ಪ್ರಕಾರಗಳು.ಈವರೆಗೆ ಅಲ್ಪ-ಸ್ವಲ್ಪ ಬರೆದು, ಹಾಗೇ ಇಟ್ಟಿದ್ದೇನೆ. ಇನ್ನಾದರೂ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ.ಸಂಪದ ದ ಗೊಂಚಲಿನ ಹೀಚುಕಾಯಿ ನಾನು,ನೀವು ಬೆಳೆಯಲು ಪ್ರೋತ್ಸಾಹಿಸುತ್ತೀರಿ ಎಂಬ ವಿಶ್ವಾಸದೊಂದಿಗೆ,
ಶ್ರೀನಿಧಿ.ಡಿ.ಎಸ್.

- Login or register to post comments
- 1387 hits
- Email this forum





RSS:
ಸ್ವಾಗತ
ನನಗೇ ತಿಳಿಯದಂತೆ ಯಾವಾಗ ಪರಿಚಯ ಮಾಡಿಕೊಂಡೆ ಅಂತ ಒಮ್ಮೆ ಆಶ್ಚರ್ಯವಾಯಿತು. ಯಾಕೆಂದರೆ ನಾನೂ ಒಬ್ಬ ಸೋಮಾರಿ. ಶ್ರೀನಿಧಿ.ಡಿ.ಎಸ್ ಎಂದು ನೋಡಿದ ಮೇಲೆ ಗೊತ್ತಾಯಿತು.
ಹೀಚುಕಾಯಿಗೆ ದೋರುಗಾಯಿಯ ಸ್ವಾಗತ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಸ್ವಾಗತ
ಹೀಚುಕಾಯಿ, ದೋರುಗಾಯಿಗಳಿಗೆ ಎಲೆಮರೆಯಿಂದ ಹೊರಬಂದು ಪೆಟ್ಟು ತಿಂದು ಕೆಳಗೆ ಬಿದ್ದ ಕಾಯಿಯ ನಮನ.
ಶ್ರೀನಿಧಿಯವರಿಗೆ, ಸ್ವಾಗತ.
ಶ್ರೀನಿಧಿಯವರಿಗೆ,
ಸ್ವಾಗತ.
ನೀವು ಹೇಳುವಂತಹ ಈ 'ಹೀಚೇ' ಮುಂದೆ ಕಾಯಿಯಾಗಿ ಹಣ್ಣಾಗಿ ರಸ ಭರಿತ 'ಹಾಪೂಸ್' ಆಗಿ ನಮ್ಮ ಮನವನ್ನು ರಂಜಿಸುವುದರಲ್ಲಿ ಎಳ್ಳಸ್ಠೂ ಶ್ಯಂಕೆಯಿಲ್ಲ !
'ಎಳೆಗರುಮ್ ಎತ್ತಾಗದೇ ಹರ ಹರಾ ಶ್ರೀ ಚನ್ನಸೋಮೇಶ್ವರಾ' !!
ಹೀಚು ಕಾಯಿ
ಹೀಚುಗಾಯಿ ಎಂದರೇನು?
ಹೀಚುಗಾಯಿ ಅಂದರೆ...
ಹೂವಿನ ನಂತರದ, ಕಾಯಿಯಾಗುವ ಮೊದಲಿನ ಹಂತದಲ್ಲಿರುವ , ಅತೀ ಎಳೆಯ ಮಿಡಿಗಳನ್ನ ಹೀಚುಗಾಯಿ ಅಂತಾರೆ...
ಮಿಡಿ = ಹೀಚು = ಹೀಚುಗಾಯಿ ?
ನಮ್ಮ ಕಡೆ "ಕಾಯಿ" ಎಂದರೆ ಹಣ್ಣಿನ ಮೊದಲ ರೂಪ, ಹೂವಿನ ನಂತರದ್ದು.
ಮಾವಿನ ಹೂ, ಮಾವಿನಕಾಯಿ, ಮಾವಿನ ಹಣ್ಣು.. ಅಂದರ ಕಾಯಿತನವನ್ನು ಹೇಳಲು ನಾವು ಹೀಚು ಎನ್ನುವೆವು. ಉದಾ: ಅದಿನ್ನು ಹೀಚು. ಎಂದರೆ ಬಲಿತಿಲ್ಲದ, ಎಳೆಸಾದ.
ಹಾಗಾದರೆ ಕಾಯಿ = ಮಿಡಿ = ಹೀಚು = ಹೀಚುಗಾಯಿ = ಎಳೆಗಾಯಿ ?..
ನಿಮಗೆ ನನ್ನ ಸವಿಯೊದಗೆ,
ಹೀಚುಕಾಯಿ !
ಶ್ರೀನಿಧಿಯವರಿಗೆ,
ನಿಮ್ಮ ಆಸಕ್ತಿಗಳನ್ನು ಹಂಚಿಕೊಳ್ಳಿ. ಬರಿ ಹೀಚಾಗಿ ಬಹಳ ಸಮಯ ಇರುವುದು ಒಳ್ಳೆಯದಲ್ಲ. ನೀವಿನ್ನು ಪ್ರಾರಂಭಿಸಿ.ಈ ದಿನವೂ 'ಹೀಚ'ನ್ನು ಕಂಡಾಗ ಹೇಳಬೇಕೆನ್ನಿಸಿತು ! ಬೇಸರ ಇಲ್ಲ ತಾನೇ ?
ವೆಂ.