25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸಚಿವೆ ರೇಣುಕಾ ಚೌಧರಿ ಮತ್ತು ’ವ್ಯಾ’ಲೆಂಟೈನ್ಸ್ ಡೇ

February 6, 2009 - 7:48pm
gurumlr
ಇವತ್ತಿನ DNA ದಿನಪತ್ರಿಕೆಯ ತಲೆಬರಹದಲ್ಲಿ ರೇಣುಕಾ ಚೌಧರಿ ಎನ್ನುವ ಒಬ್ಬ ಮಹಿಳೆಯ ಹೇಳಿಕೆಯನ್ನು ಈ ರೀತಿ ಪ್ರಕಟಿಸಲಾಗಿತ್ತು. ಈ ಹೇಳಿಕೆಯನ್ನು ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್ ಅವರಿಗೆ ಹೇಳಿದ್ದು. "He is not married. He doesn't know what to do. That's his problem. I might land where he is on Feb 14...and give him more than just roses". ಇದರ ಒಳಾರ್ಥ ಏನು?. And give him more than just roses ಅಂದರೆ ಏನು?. ಅವಳು ಕ್ರಿಶ್ಚಿಯನ್ ಆಗಿ ಪರಿವರ್ತನೆ ಆದರೆ ಎಲ್ಲರೂ ಅದೇ ರೀತಿ ಆಗಬೇಕಿಲ್ಲವಲ್ಲ?. ಇಂತಹ ಹೇಳಿಕೆಗಳು ಸಾಮಾನ್ಯ ಜನರ ಮನಸ್ಸಿನಲ್ಲಿ ಎಂಥಹ ಭಾವನೆಗಳನ್ನು ಹುಟ್ಟು ಹಾಕುತ್ತವೆ ಎಂಬುದು ಈ ಮಹಿಳೆಗೆ ತಿಳಿದಿದೆಯೇ?. ಅಂದರೆ ವೇಶ್ಯಾವಾಟಿಕೆಯನ್ನು ಅವಳು ಪರೋಕ್ಷವಾಗಿ ಬೆಂಬಲಿಸಿದಂತಾಗಿದೆ. ಒಬ್ಬ ಮಹಿಳೆ ಬಹಿರಂಗವಾಗಿ ಇಂತಹ ಹೇಳಿಕೆಯನ್ನು ಕೊಡುತ್ತಿದ್ದರೆ ವ್ಯಾಲೆಂಟೈನ್ಸ್ ಡೇ ಎಂಬ ವೇಶ್ಯಾವಾಟಿಕೆಯನ್ನು ಪ್ರೋತ್ಸಾಹಿಸುವ ಆಚರಣೆಗಳು ನಮ್ಮ ದೇಶದಲ್ಲಿ ಹೆಚ್ಚಾಗುತ್ತವೆ. ವ್ಯಾಲೆಂಟೈನ್ಸ್ ಡೇ ಬೇಕೇ? ಈ ವ್ಯಾಲೆಂಟೈನ್ಸ್ ಡೇ (ಪ್ರೇಮಿಗಳ ದಿನ) ವನ್ನು ನಮ್ಮ ದೇಶದಲ್ಲಿ ಆಚರಿಸುವ ಪ್ರಮೇಯವಿದೆಯೇ?. ಪಾಶ್ಚಾತ್ಯ ದೇಶಗಳಲ್ಲಿ ಪ್ರೀತಿ ಮಾಡಲೂ ಪುರುಸೊತ್ತು ಸಿಗದ ಕಾರಣ ಅವರು Father's Day, Mother's Day, Grand Father's Day, Grand mother's Day, Valentain's Day ಮುಂತಾದ ದಿನಗಳನ್ನು ಆಚರಿಸುತ್ತಾರೆ. ಅವರು ವರ್ಷಕ್ಕೆ ಒಂದೇ ದಿನ ಪ್ರೀತಿಸುವುದು. ಆದರೆ ವರ್ಷವಿಡೀ ಪ್ರೀತಿಸುವ ನಮಗೆ ಈ ಅಸಭ್ಯ ಸಂಸ್ಕೃತಿ ಬೇಕೆ?. ಇದು ನಮ್ಮ ದೇಶದಲ್ಲಿ ಕೇವಲ ಶೋಕಿಯ, ವೇಶ್ಯಾವಾಟಿಕೆಯನ್ನು ಪ್ರಚೋದಿಸುವ, ವ್ಯಭಿಚಾರವನ್ನು ಪ್ರಚೋದಿಸುವ, ಕಾಮುಕತೆಯನ್ನು ತೋರ್ಪಡಿಸುವ ಒಂದು ದಿನವಾಗಿದೆ. ಈಗ ನಾವೆಲ್ಲರೂ ನಮ್ಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಹೋರಾಡಬೇಕಾದ ಅನಿವಾರ್ಯತೆ ಇದೆ. ಇದರಲ್ಲಿ ಎಲ್ಲಾ ಮಹಿಳೆಯರೂ, ಪುರುಷರೂ ಕೈಜೋಡಿಸಬೇಕಾಗಿದೆ. ಈ ಹೋರಾಟದಲ್ಲಿ ಎಲ್ಲರೂ ಭಾಗಿಯಾಗದಿದ್ದರೂ ಕನಿಷ್ಠ ಪಕ್ಷ ಗರಿಷ್ಠ ಮಟ್ಟದಲ್ಲಿ ಭಾಗಿಯಾಗಬೇಕಾಗಿದೆ. ಆದರೆ ಇದರಲ್ಲಿ ಯಾರನ್ನೂ ನಾವು ಬಲವಂತ ಮಾಡಲಾಗುವುದಿಲ್ಲ, ಏಕೆಂದರೆ ಇದು ಭಾರತ ಸ್ವಾಮೀ....ಎಲ್ಲರಿಗೂ ಇಲ್ಲಿ ಎನು ಮಾಡಲೂ ಸ್ವಾತಂತ್ರ್ಯವಿದೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by inchara123 on
ಯಾವುದನ್ನೇ ಆಗಲೀ ರೂಲ್ ಅಂತಾ ಮಾಡಿದರೆ ಅದನ್ನು ಎಲ್ಲರೂ ಮೀರುವುದೇ ಹೆಚ್ಚು. ನಮ್ಮ ಮಕ್ಕಳಿಗೆ ಆಗಲಿ ‘ಇದು ಮಾಡಬೇಡ, ಅದು ಮಾಡಬೇಡ’ ಅಂದರೆ ನಾವು ಅವರ ಸ್ವಾತಂತ್ರ್ಯವನ್ನು ಕಿತ್ತುಕೊಂಡೆವೆಂದು ಹೇಳಿ ಅದನ್ನು ಮೀರುವುದೇ ಸರಿ ಅಂದುಕೊಳ್ತಾರೆ. ಅದರ ಬದಲು ಯಾಕೆ ಮಾಡಬಾರದು ಅನ್ನುವುದನ್ನು ತಿಳಿಹೇಳಬೇಕೆ ಹೊರತು ಅವರಿಗೆ ಹೋಗಿ ಹೊಡೆದು ಬಡಿಯುವುದಲ್ಲ. ಆಗ ಅವರೆಲ್ಲರೂ ಬಂಡಾಯಗಾರರಾಗ್ತರೇ ಹೊರತು ಯಾರ ಮಾತನ್ನು ಕೇಳುವುದಿಲ್ಲ. ಸೇನೆಯವರು ಹೋಗಿ ವ್ಯಾಲೆಂಟನ್ಸ್ ಆಚರಿಸಿದವರಿಗೆ ಮದುವೆ ಮಾಡ್ತರಂತೆ (ಸುದ್ದಿ) ಇದನ್ನು ಆಚರಿಸುವ ಜನತೆಗೆ ಮದುವೆಯು ದೊಡ್ದ ವಿಷಯವಲ್ಲ, ಡೈವೋರ್ಸ್ ಕೂಡ ವಿಷಯವಲ್ಲ. ಇವರು ತಾಳಿ ಕಟ್ಟಿಸಿದರೇ ಮರು ಗಳಿಗೆಯೇ ಕಿತ್ತು ಬಿಸಾಕಿ ಹೋಗ್ತಾರೆ. ಇನ್ನು ಈ ರೇಣುಕಾ ಚೌಧರಿಗೆ ಪಬ್ ಆಗಲೀ, ಇನ್ನಾವುದೂ ವಿಷಯವಲ್ಲ. ಅವರಿಗೆ ಬೇಕಾಗಿರುವುದು ಕೀಳುಮಟ್ಟದ ರಾಜಕೀಯ. ಹೆಡ್ ಲೈನ್ಸ್ ಗಳಲ್ಲಿ ಸುದ್ದಿ. ನಮ್ಮ ಶಾಲೆಯ ಮಕ್ಕಳಿಗೆ ದಿವಸವೂ ದಿನಪತ್ರಿಕೆಗಳ ಹೆಡ್ ಲೈನ್ಸ್ ಓದುವುದು ಕಡ್ಡಾಯ. ಪಬ್, ವ್ಯಾಲೆಂಟನ್ಸ್ ಯಾವುದರ ಅರಿವು ಇರದ ಮಕ್ಕಳೂ ಕುತೂಹಲಕ್ಕೆ ಪಬ್ ಗೆ ಹೋಗಬೇಕು, ವ್ಯಾಲೆಂಟನ್ಸ್ ಆಚರಿಸಬೇಕು ಹಾಗಿದೆ ಎಲ್ಲರ ವರ್ತನೆ. ಬೇಕೆ ಇದು ಉತ್ತರಿಸಿ ರೇಣುಕಾ ಅವರು ಬಂದು ಮುತಾಲಿಕ್ ಗೆ ರೋಸ್ ಕೊಡ್ತಾರಂತೆ. ನಾವು ಅವರಿಬ್ಬರಿಗೂ ಮದುವೆ ಮಾಡಿಸೋಣ ಏನಂತೀರಿ :-)

Submitted by inchara123 on
ಸರಿಯಲ್ಲವಾ. ಇವರಿಗೆ ಪ್ರೀತಿ ಬಗ್ಗೆ ಗೊತ್ತಾಗುತ್ತೆ. ಅವರಿಗೆ ನಮ್ಮ ಸಂಸ್ಕೃತಿ ಬಗ್ಗೆ ಗೊತ್ತಾಗುತ್ತೆ. ನಮ್ಮ ಗೋಳೂ ತಪ್ಪುತ್ತೆ. ;-)

Submitted by ಹೇಮ ಪವಾರ್ on
ನೀನು ಹೇಳೋದು ಸರಿ ಇಂಚರ. ಒಬ್ಬ ಮುತಾಲಿಕ್, ಚೌಧರಿ ಯಿಂದ ನಮ್ಮ ಸಂಸ್ಕೃತಿಯ ಪಾಠ ಕಲಿಯಬೇಕಿಲ್ಲ ನಾವು, ಅವರಿಗೇ ಕಲಿಸಿ ಬರೋಣ. :)

Submitted by gurumlr on
ಪಕ್ಕಾ ಶ್ರೀರಾಮ ಸೇನೆ ಬೆಂಬಲಿಗ.........:) ಅಲ್ಲರೀ......ಇಲ್ಲಿ ಬಹುತೇಕ ಮಂದಿ ಮಹಿಳೆಯರೂ ಸೇರಿದಂತೆ ಎಲ್ಲರೂ ಪುರುಷರಿಗಿಂತ ಹೆಚ್ಚಿನ ಸ್ವಾತಂತ್ರ್ಯ ಬಯಸುತ್ತಿದ್ದಾರೆ. ತಗೊಳ್ಳಿ....ಎಲ್ಲಾರೂ ಹಾಯಾಗಿ ಇರಿ

Submitted by createam on
ಮತ್ತೆ ಅದೇ ರಾಗ!!. ಯಾವ್ದ್ರೀ ನಮ್ಮ ಸಂಸ್ಕೃತಿ? ಮಾತೆತ್ತಿದ್ರೆ ನಮ್ಮ್ ಸಂಸ್ಕೃತಿಯನ್ನ ರಕ್ಷಿಸಬೇಕು ಅಂತ ಹೇಳೋರೇ. ಸಂಸ್ಕೃತಿ ಅನ್ನೋದು ಯಾವುದೋ ಹಳೆಯ ಕಾಲದ ಆಚರಣೆ ಅಲ್ಲ. ಸಂಸ್ಕೃತಿ ಅನ್ನೋದು ಒಂದು ಕಾಲಘಟ್ಟದಲ್ಲಿ ಒಂದು ಸಮಾಜದಲ್ಲಿರುವ ಆಚಾರ-ವಿಚಾರ, ಭಾಷೆ, ಆಹಾರ, ಒಂದು ರೀತಿಯಲ್ಲಿ ಹೇಳಬೇಕಾದರೆ ಜೀವನಕ್ರಮ. ಇದು ಸಾವಿರ ವರ್ಷಗಳಿಂದಲೂ ಸತತವಾಗಿ ಬದಲಾಗುತ್ತಲೇ ಬಂದಿದೆ. ಬೇಲೂರಿನ ಶಿಲಾ ಬಾಲಿಕೆಯರ ಹಾಗೆ ಈಗಿನ ಹುಡುಗಿಯರಿಗೆ ಬಟ್ಟೆ ಹಾಕಿ ಅಂತ ಹೇಳೋಕಾಗುತ್ತಾ? ಯಾಕೆ, ಅದು ನಮ್ಮ ಸಂಸ್ಕೃತಿ ಅಲ್ವ? ಭಜರಂಗ ದಳ, ಶ್ರೀರಾಮ ಸೇನೆ ಅಥವಾ ಇವ್ಯಾವುದೇ ಸ್ವಯಂಘೋಷಿತ "ಸಂಸೃತಿ ರಕ್ಷಕರ" ಮನಸ್ಸಿಗೆ ಸರಿ ಎನಿಸಿದ್ದೆಲ್ಲಾ ನಮ್ಮ ಸಂಸ್ಕೃತಿಯಲ್ಲ. [quote]ಇದು ನಮ್ಮ ದೇಶದಲ್ಲಿ ಕೇವಲ ಶೋಕಿಯ, ವೇಶ್ಯಾವಾಟಿಕೆಯನ್ನು ಪ್ರಚೋದಿಸುವ, ವ್ಯಭಿಚಾರವನ್ನು ಪ್ರಚೋದಿಸುವ, ಕಾಮುಕತೆಯನ್ನು ತೋರ್ಪಡಿಸುವ ಒಂದು ದಿನವಾಗಿದೆ[/quote] ಅದು ಹೇಗೆ ವ್ಯಾಲಂಟೈನ್ಸ್ ಡೇ ಅನ್ನೋದನ್ನ ವೇಶ್ಯಾವಾಟಿಕೆ ಅಂತ ಕರೀತೀರಾ? ಅಂದರೆ ಒಂದು ಹುಡುಗ ಒಂದು ಹುಡುಗಿಗೆ ಏನೋ ಒಂದು ಗುಲಾಬಿ ಕೊಟ್ಟರೆ ಅದು ವೇಶ್ಯಾವಾಟಿಕೆನಾ? ಅಥವ ಒಂದು ಕಾರ್ಡ್ ಕೊಟ್ಟರೆ ಅದು ವ್ಯಭಿಚಾರನಾ? ಅಥವಾ ಡಿನ್ನರ್‍‍ಗೆ ಕರ್ಕೊಂಡು ಹೋಗಿ ಕೈ ಕೈ ಹಿಡಿದು ಕೂತಿದ್ದರೆ ಅದು ಕಾಮುಕತೆನಾ? ಯಾವುದು ತಪ್ಪು ಗೊತ್ತಾ? ಕಾಲೀಜಿಗೆ ಹೋಗೊ ಸಮಯದಲ್ಲಿ ಇದೆಲ್ಲ ಮಾಡ್ಕೊಂಡು ಅಪ್ಪನ ದುಡ್ಡು ಹಾಳುಮಾಡೋದು, ಅಥವ ಓದಿನ ಕಡೆ ಗಮನ ಕಡಿಮೆ ಮಾಡಿಕೊಂಡು ಮುಂದೆ ತೊಂದರೆ ಮಾಡಿಕೊಳ್ಳುವುದು. ಪ್ರೀತಿ, ಪ್ರೇಮದ ಜೊತೆ ಗಮನವಿಟ್ಟು ಓದಿ ಕಾಲೇಜಿನಲ್ಲಿ ಕ್ಲಾಸ್‍ಗೆ ಟಾಪ್ ರ್‍ಯಾಂಕ್‍ನಲ್ಲಿ ಮುಗಿಸಿರುವವರು ನನಗೆ ಬಹಳ ಗೊತ್ತು. ಈಗ ಅವರರವರ ಹುಡುಗ/ಹುಡುಗಿಯರ ಜೊತೆ ಮದುವೆಯಾಗಿ ಚೆನ್ನಾಗೇ ಇದ್ದಾರೆ. ಇದರಲ್ಲಿ ಯಾವ ಸಂಸ್ಕೃತಿ ಪ್ರಶ್ನೆ ಬರೋದಿಲ್ಲ, ಆದರೆ ನಮ್ಮ ಜೀವನಕ್ಕೆ ಯಾವುದು ಸರಿ ತಪ್ಪು ಅನ್ನೋ ಪ್ರಶ್ನೆ ಪಾತ್ರ ಬರೋದು. ಇದನ್ನು ಆ ವ್ಯಕ್ತಿ (ನಿಮ್ಮ ಪ್ರಕಾರ ಈ ವ್ಯಕ್ತಿ ಯುವ ಹುಡುಗರು/ಹುಡುಗಿಯರು) ಮತ್ತು ಅವರ ತಂದೆ-ತಾಯಿಗಳಿಗೆ ಬಿಟ್ಟ ವಿಚಾರ. ಅವರು ಇನ್ನೊಬ್ಬರಿಗೆ ತೊಂದರೆ ಕೊಡದಿದ್ದರೆ ಅವರ ಜೀವನದಲ್ಲಿ ಅವರು ಏನಾಗಬೇಕು ಅನ್ನೋದು ಖಂಡಿತಾ ಅವರವರಿಗೆ ಬಿಟ್ಟ ವಿಚಾರ. ನಾನೇನು ಇಲ್ಲಿವರೆಗು ಯಾವ ವ್ಯಾಲಂಟೈನ್ಸ್ ಡೇ ಅನ್ನು ಆಚರಿಸಿಲ್ಲ, ಆದರೆ ಅದನ್ನು ಆಚರಿಸುವುದನ್ನು ವಿರೋಧಿಸುವುದಿಲ್ಲ. [quote]ಅವರು ವರ್ಷಕ್ಕೆ ಒಂದೇ ದಿನ ಪ್ರೀತಿಸುವುದು. ಆದರೆ ವರ್ಷವಿಡೀ ಪ್ರೀತಿಸುವ ನಮಗೆ ಈ ಅಸಭ್ಯ ಸಂಸ್ಕೃತಿ ಬೇಕೆ?[/quote] ತಂಗಿಗೆ ಅಣ್ಣನ ರಕ್ಷಣೆ ಯಾವತ್ತೂ ಇರುತ್ತದೆ, ಆದರೆ ರಕ್ಷಾಭಂಧನ ಅಂತ ಒಂದು ದಿನ ಮಾತ್ರ ಯಾಕೆ ಆಚರಿಸುತ್ತೀವಿ? ಹಾಗಾದರೆ ಅದರ ಆಚರಣೆಯೇ ತಪ್ಪಲ್ಲವಾ? ಇದೂ ಅಸಭ್ಯನಾ? ಒಂದು ದಿನವನ್ನು ಕೆಲವು ಆಚರಣೆಗಳಿಗೆ ಮೀಸಲಿಡುವುದು ನಮ್ಮಲ್ಲೂ ತುಂಬಾ ಸಾಮಾನ್ಯ. ಅದು ಅಸಭ್ಯ ಸಂಸ್ಕೃತಿ ಅಲ್ಲ. ನನಗೂ ಸುಮ್ಮನೆ ಪಾಶ್ಚಾತ್ಯ ದೇಶಗಳನ್ನು ಹಿಂದೆ ಮುಂದೆ ನೋಡದೆ ಅನುಸರಿಸೋದು ಸರಿ ಬರೋದಿಲ್ಲ. ಹೆಚ್ಚಿನ ಸಮಯ ಇದು ಕೇವಲ ಅನುಕರಣೆ ಆಗಿರುತ್ತದೇ ಹೊರತು ಅದಕ್ಕೆ ಯಾವುದೇ ಮಹತ್ವ ಇರುವುದಿಲ್ಲ. ಆದರೆ ಅದು ಅವರವರಿಗೆ ಬಿಟ್ಟ ವಿಚಾರ. ನೀವು ಮಾಡೋದನ್ನ ನನ್ನ ಮೇಲೆ ಹೇರದಿದ್ದರೆ ಸಾಕು, ಅಥವ ನಿಮ್ಮ ಆಚರಣೆ ಇನ್ನೊಬ್ಬರಿಗೆ ತೊಂದರೆ ಕೊಡದಿದ್ದರೆ ಸಾಕು.

Submitted by bhasip on
"ಅದು ಹೇಗೆ ವ್ಯಾಲಂಟೈನ್ಸ್ ಡೇ ಅನ್ನೋದನ್ನ ವೇಶ್ಯಾವಾಟಿಕೆ ಅಂತ ಕರೀತೀರಾ? ಅಂದರೆ ಒಂದು ಹುಡುಗ ಒಂದು ಹುಡುಗಿಗೆ ಏನೋ ಒಂದು ಗುಲಾಬಿ ಕೊಟ್ಟರೆ ಅದು ವೇಶ್ಯಾವಾಟಿಕೆನಾ? ಅಥವ ಒಂದು ಕಾರ್ಡ್ ಕೊಟ್ಟರೆ ಅದು ವ್ಯಭಿಚಾರನಾ? ಅಥವಾ ಡಿನ್ನರ್‍‍ಗೆ ಕರ್ಕೊಂಡು ಹೋಗಿ ಕೈ ಕೈ ಹಿಡಿದು ಕೂತಿದ್ದರೆ ಅದು ಕಾಮುಕತೆನಾ? ಯಾವುದು ತಪ್ಪು ಗೊತ್ತಾ? " ಒಂದು ಕಾರ್ಡ್ ಕೊಟ್ಟರೆ ಅಥವಾ ಒಂದು ಗುಲಾಬಿ ಕೊಟ್ತರೆ ಮಾತ್ರ ಅದು ಪ್ರೇಮ ತೋರಿಸಿದ ಹಾಗೆ ಅಗುತ್ಯೆ? ಯೋಚನೆ ಮಾಡಿ, ನಿಮ್ಮ ತಾಯಿ ಕೂಡ, ವರ್ಷಕ್ಕೆ ಒಂದು ಕಾರ್ಡ್ ಅಥವಾ ಒಂದು ಆಟಿಕೆ ಕೊಟ್ಟು ಬೆಳೆಸಿದ್ದರೆ ಮಕ್ಕಳ ದಿನಾಚರಣೆ ದಿನ, ಆ ತಾಯಿಯ ಬಗ್ಗೆ ನಿಮಗೆ ಏನು ಅಬಿಪ್ರಾಯ ಮೂಡುತ್ತಿತ್ತು? ಅಮ್ಮನಿಗೆ ನಾವು ಯಾಕೆ ಅಷ್ಟು ಗೌರವ , ಪ್ರೀತಿ ತೋರಿಸುತ್ತೇವೆ? ಪ್ರೀತಿ, ಪ್ರೇಮ ಇದು ಕೇವಲ ಒಂದು ದಿನ ಅಥವಾ ಒಂದೇ ದಿನ ವ್ಯಕಪಡಿಸುವ "feelings" ಅಲ್ಲ, ವಿದೇಶಗಳಲ್ಲಿ ಇದೆಲ್ಲ ಒಂದು ಕೃತಕವಾಗು ವ್ಯಕ್ತಪಡಿಸುವ ಪರಿಪಾಠವಿದೆ, ಅದು ನಮಗೆ ಅವಶ್ಯಕತೆ ಇಲ್ಲ. "ಕಾಲೀಜಿಗೆ ಹೋಗೊ ಸಮಯದಲ್ಲಿ ಇದೆಲ್ಲ ಮಾಡ್ಕೊಂಡು ಅಪ್ಪನ ದುಡ್ಡು ಹಾಳುಮಾಡೋದು, ಅಥವ ಓದಿನ ಕಡೆ ಗಮನ ಕಡಿಮೆ ಮಾಡಿಕೊಂಡು ಮುಂದೆ ತೊಂದರೆ ಮಾಡಿಕೊಳ್ಳುವುದು. ಪ್ರೀತಿ, ಪ್ರೇಮದ ಜೊತೆ ಗಮನವಿಟ್ಟು ಓದಿ ಕಾಲೇಜಿನಲ್ಲಿ ಕ್ಲಾಸ್‍ಗೆ ಟಾಪ್ ರ್‍ಯಾಂಕ್‍ನಲ್ಲಿ ಮುಗಿಸಿರುವವರು ನನಗೆ ಬಹಳ ಗೊತ್ತು. ಈಗ ಅವರರವರ ಹುಡುಗ/ಹುಡುಗಿಯರ ಜೊತೆ ಮದುವೆಯಾಗಿ ಚೆನ್ನಾಗೇ ಇದ್ದಾರೆ" >>ಪ್ರೀತಿಸಿದ ಹುಡುಗ / ಹುಡುಗಿ ಸಿಗಲಿಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡವರೂ ಬಹಳ ಮಂದಿ ಇದ್ದಾರೆ.. ಪ್ರೀತಿಸಿದ ಹುಡುಗನಿಂದ ಕಾಲೇಜುದಿನಗಳಲ್ಲೇ ಬಸಿರಾಗಿ ಅವಮಾನ ತಾಳಲಾರದೆ ಎಷ್ಟು ಜನ ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಶರಣಾಗಿಲ್ಲಾ? ಉತ್ತಮ ಶ್ರೇಣಿಯಲ್ಲಿ ಪಾಸ್ ಅಗುತ್ತಿದ್ದ ಗೆಳೆಯ ರಾಮು ಇದ್ದಕಿದ್ದ ಹಾಗೆ ಫೇಲ್ ಆದಾಗ ಅವನ ಸ್ಥಿತಿ ಯಾಕೆ ಹೀಗಯಿತು ಅಂತ ನೋಡಿದರೆ, ಅವನನ್ನು ಪ್ರೀತಿಸಿ, ಕಾರ್ಡ್ , ಗುಲಾಬಿ ಕೊಟ್ಟು, ಪಡೆದು ಕಡೆಗೆ ಅಪ್ಪ ನೋಡಿದ ವಿದೇಶಿ ಹುಡಗನೊಂದಿಗೆ ನಿಶ್ಚಿತಾರ್ಥ ಆಯಿತು ಅಂತ ಹುಡುಗಿ ಹೇಳಿ ಹೋಗಿದ್ದಳು.. ಗೆಳೆಯ ರಾಮು ಫೆ"" ೧೪ರಂದು ಮೊದಲ ಬಾರಿ ಗುಲಾಬಿ, ಕಾರ್ಡ್ ಕೊಟ್ಟಿದ್ದ. ಪ್ರೀತಿ ಮಾಡೋದು ತಪ್ಪು ಅಥವಾ ಅಪರಾಧ ಅಂತ ನಾನು ಹೇಳುತ್ತಿಲ್ಲ.. ಆದರೆ ವಿದೇಶದಿಂದ ಆಮದಾಗಿರುವ ಈ ರೀತಿಯ ಆಚರಣೆಯಿಂದ ಏನೂ ಲಾಭವಿಲ್ಲ.. ನಮಗೆ ಈ "ಡೇ"ಗಳ ಪರಿಚಯ ಆಗಿದ್ದು ಯಾವಾಗ? MTV/VTV ಇವುಗಳು ಬಂದಮೇಲೆ ಅಲ್ಲವೆ? ಇದೆಲ್ಲಾ ಕೆಲವರ ವ್ಯವಹಾರ ಉದ್ದಾರಕ್ಕಾಗಿ ಅಷ್ಟೆ, ನಿಜವಾದ ಪ್ರೇಮ, ಒಂದು ದಿನ ಡಿನ್ನರ್ ಗೆ ಕರೆದುಕೊಂಡು ಹೋಗಿ ಕೈ ಕೈ ಹಿಡಿದರೆ ಮಾತ್ರ ವ್ಯಕ್ತ ಅಗುತ್ತದೆ ಅನ್ನೋದಾದರೆ,, ಅದಕ್ಕೆ ಫೆ|| ೧೪ಕ್ಕೆ ಯಾಕೆ ಕಾಯಬೇಕು? ಅಥವಾ ಅಲ್ಲೀವರೆಗೂ ಕಾಯಬೇಕೆ?

Submitted by createam on
ನಾನು ಇಲ್ಲಿ ಎತ್ತಿರೋ ಪ್ರಶ್ನೆಗಳಿಗೆ/ಅಂಶಗಳಿಗೆ ನೇರವಾದ ಉತ್ತರವನ್ನು ನೀವು ನೀಡಿಲ್ಲ. [quote] --ಅದು ಹೇಗೆ ವ್ಯಾಲಂಟೈನ್ಸ್ ಡೇ ಅನ್ನೋದನ್ನ ವೇಶ್ಯಾವಾಟಿಕೆ ಅಂತ ಕರೀತೀರಾ? ಅಂದರೆ ಒಂದು ಹುಡುಗ ಒಂದು ಹುಡುಗಿಗೆ ಏನೋ ಒಂದು ಗುಲಾಬಿ ಕೊಟ್ಟರೆ ಅದು ವೇಶ್ಯಾವಾಟಿಕೆನಾ? ಅಥವ ಒಂದು ಕಾರ್ಡ್ ಕೊಟ್ಟರೆ ಅದು ವ್ಯಭಿಚಾರನಾ? ಅಥವಾ ಡಿನ್ನರ್‍‍ಗೆ ಕರ್ಕೊಂಡು ಹೋಗಿ ಕೈ ಕೈ ಹಿಡಿದು ಕೂತಿದ್ದರೆ ಅದು ಕಾಮುಕತೆನಾ? ಯಾವುದು ತಪ್ಪು ಗೊತ್ತಾ? -- ಒಂದು ಕಾರ್ಡ್ ಕೊಟ್ಟರೆ ಅಥವಾ ಒಂದು ಗುಲಾಬಿ ಕೊಟ್ತರೆ ಮಾತ್ರ ಅದು ಪ್ರೇಮ ತೋರಿಸಿದ ಹಾಗೆ ಅಗುತ್ಯೆ? ಯೋಚನೆ ಮಾಡಿ, ನಿಮ್ಮ ತಾಯಿ ಕೂಡ, ವರ್ಷಕ್ಕೆ ಒಂದು ಕಾರ್ಡ್ ಅಥವಾ ಒಂದು ಆಟಿಕೆ ಕೊಟ್ಟು ಬೆಳೆಸಿದ್ದರೆ ಮಕ್ಕಳ ದಿನಾಚರಣೆ ದಿನ, ಆ ತಾಯಿಯ ಬಗ್ಗೆ ನಿಮಗೆ ಏನು ಅಬಿಪ್ರಾಯ ಮೂಡುತ್ತಿತ್ತು? ಅಮ್ಮನಿಗೆ ನಾವು ಯಾಕೆ ಅಷ್ಟು ಗೌರವ , ಪ್ರೀತಿ ತೋರಿಸುತ್ತೇವೆ? ಪ್ರೀತಿ, ಪ್ರೇಮ ಇದು ಕೇವಲ ಒಂದು ದಿನ ಅಥವಾ ಒಂದೇ ದಿನ ವ್ಯಕಪಡಿಸುವ "feelings" ಅಲ್ಲ, ವಿದೇಶಗಳಲ್ಲಿ ಇದೆಲ್ಲ ಒಂದು ಕೃತಕವಾಗು ವ್ಯಕ್ತಪಡಿಸುವ ಪರಿಪಾಠವಿದೆ, ಅದು ನಮಗೆ ಅವಶ್ಯಕತೆ ಇಲ್ಲ. [/quote] ನಾನು ಇಲ್ಲಿ ಪ್ರಶ್ನೆ ಮಾಡಿರೋದು ವ್ಯಾಲಂಟೈನ್ಸ್ ಡೇ ಬಗ್ಗೆ ವೇಶ್ಯಾವಾಟಿಕೆ, ವ್ಯಭಿಚಾರ, ಕಾಮುಕತೆ ಅಂತೆಲ್ಲ ದೊಡ್ಡ ದೊಡ್ಡ ಪದಗಳನ್ನು ಉಪಯೋಗಿಸಿ ಬರೆದಿರುವುದನ್ನು. ಅದು ಹೇಗೆ ನಮಗೆ ಇಷ್ಟವಾಗದೆ ಇರುವುದನ್ನು ನಾವು ವೇಶ್ಯಾವಾಟಿಕೆ, ವ್ಯಭಿಚಾರ ಅಂತೆಲ್ಲ ಸುಮ್ನೆ ಬ್ರ್ಯಾಂಡ್ ಮಾಡೋಕಾಗುತ್ತೆ? ಇಲ್ಲಿ ನಾನು ಯಾವುದು ನಿಜವಾದ ಫೀಲಿಂಗ್ಸ್, ಯಾವುದು ಕೃತಕ ಅನ್ನುವುದರ ವಿಚಾರವನ್ನೇ ಎತ್ತಿಲ್ಲ. [quote]--ಕಾಲೀಜಿಗೆ ಹೋಗೊ ಸಮಯದಲ್ಲಿ ಇದೆಲ್ಲ ಮಾಡ್ಕೊಂಡು ಅಪ್ಪನ ದುಡ್ಡು ಹಾಳುಮಾಡೋದು, ಅಥವ ಓದಿನ ಕಡೆ ಗಮನ ಕಡಿಮೆ ಮಾಡಿಕೊಂಡು ಮುಂದೆ ತೊಂದರೆ ಮಾಡಿಕೊಳ್ಳುವುದು. ಪ್ರೀತಿ, ಪ್ರೇಮದ ಜೊತೆ ಗಮನವಿಟ್ಟು ಓದಿ ಕಾಲೇಜಿನಲ್ಲಿ ಕ್ಲಾಸ್‍ಗೆ ಟಾಪ್ ರ್‍ಯಾಂಕ್‍ನಲ್ಲಿ ಮುಗಿಸಿರುವವರು ನನಗೆ ಬಹಳ ಗೊತ್ತು. ಈಗ ಅವರರವರ ಹುಡುಗ/ಹುಡುಗಿಯರ ಜೊತೆ ಮದುವೆಯಾಗಿ ಚೆನ್ನಾಗೇ ಇದ್ದಾರೆ-- ಪ್ರೀತಿಸಿದ ಹುಡುಗ / ಹುಡುಗಿ ಸಿಗಲಿಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡವರೂ ಬಹಳ ಮಂದಿ ಇದ್ದಾರೆ.. ಪ್ರೀತಿಸಿದ ಹುಡುಗನಿಂದ ಕಾಲೇಜುದಿನಗಳಲ್ಲೇ ಬಸಿರಾಗಿ ಅವಮಾನ ತಾಳಲಾರದೆ ಎಷ್ಟು ಜನ ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಶರಣಾಗಿಲ್ಲಾ? ಉತ್ತಮ ಶ್ರೇಣಿಯಲ್ಲಿ ಪಾಸ್ ಅಗುತ್ತಿದ್ದ ಗೆಳೆಯ ರಾಮು ಇದ್ದಕಿದ್ದ ಹಾಗೆ ಫೇಲ್ ಆದಾಗ ಅವನ ಸ್ಥಿತಿ ಯಾಕೆ ಹೀಗಯಿತು ಅಂತ ನೋಡಿದರೆ, ಅವನನ್ನು ಪ್ರೀತಿಸಿ, ಕಾರ್ಡ್ , ಗುಲಾಬಿ ಕೊಟ್ಟು, ಪಡೆದು ಕಡೆಗೆ ಅಪ್ಪ ನೋಡಿದ ವಿದೇಶಿ ಹುಡಗನೊಂದಿಗೆ ನಿಶ್ಚಿತಾರ್ಥ ಆಯಿತು ಅಂತ ಹುಡುಗಿ ಹೇಳಿ ಹೋಗಿದ್ದಳು.. ಗೆಳೆಯ ರಾಮು ಫೆ"" ೧೪ರಂದು ಮೊದಲ ಬಾರಿ ಗುಲಾಬಿ, ಕಾರ್ಡ್ ಕೊಟ್ಟಿದ್ದ. [/quote] ನಾನು "ಓದಿನ ಕಡೆ ಗಮನ ಕಡಿಮೆ ಮಾಡಿಕೊಂಡು ಮುಂದೆ ತೊಂದರೆ ಮಾಡಿಕೊಳ್ಳುವುದು" ಅಂತ ಹೇಳಿರೋದೇ ನೀವು ಉದಾಹರಣೆಯ ಮೂಲಕ ವಿವರಿಸಿರೋದನ್ನ. ಆದರೆ ನಾನು ಕೆಳಗೆ ಹೇಳಿರುವಂತೆ ಇದನ್ನ ಅರ್ಥ ಮಾಡಿಕೊಳ್ಳಬೇಕಾದವರು ಆ ವ್ಯಕ್ತಿಗಳು, ಅವರ ತಂದೆ-ತಾಯಿಗಳು. ಅದರ ಬದಲು ಗುಂಪುಗಳಲ್ಲಿ ಹೋಗಿ, ಬನ್ನಿ ನಮ್ಮ ಸಂಸ್ಕೃತಿಯನ್ನು ರಕ್ಷಿಸೋಣ ಅಂತ ಅವರ ಮಧ್ಯೆ ನಾವು ಮೂಗು ತೂರಿಸುವುದಲ್ಲ. ಇದು ಸಂಸ್ಕೃತಿಯ ಪ್ರಶ್ನೆಯೇ ಅಲ್ಲ, ಇದು ಅವರ ಬದುಕಿನ ಪ್ರಶ್ನೆ. ನಿಮ್ಮ ಉದಾಹರಣೆಗಳಲ್ಲಿ ಕಾಲೇಜು ದಿಗಳಲ್ಲೇ ಹುಡುಗಿ ಬಸಿರಾಗುವುದನ್ನು ಹೇಳಿದ್ದೀರ. ಇದೆಲ್ಲ ವ್ಯಾಲಂಟೈನ್ಸ್ ಡೇ ಇಂದನಾ? ನಾನು ನೋಡಿರೋ ಹಳೇ ಕಪ್ಪು-ಬಿಳುಪು ಚಿತ್ರಗಳಲ್ಲೂ ಇಂತಹ ವಿಚಾರಗಳು ಸಾಮಾನ್ಯವಾಗಿದ್ದವು. ಹಲವು ವ್ಯಾಲಂಟೈನ್ಸ್ ಡೇ ಭಾರತಕ್ಕೆ ಬರುವುದಕ್ಕಿಂತ ಮುಂಚಿನ ಕಾದಂಬರಿಗಳಲ್ಲಿನ ಕಥಾ ವಸ್ತುವೇ ಇದಾಗಿರುತ್ತಿತ್ತು (ನಾನು ಮಹಾ ಕಾದಂಬರಿ ಓದುಗಾರನೇನೂ ಅಲ್ಲ, ಆದರೆ ಹಲವು ಕಾದಂಬರಿ ಆಧಾರಿತ ಚಲನಚಿತ್ರಗಳನ್ನು ನೋಡಿ ಈ ಮಾತನ್ನು ಹೇಳುತ್ತಿದ್ದೇನೆ). ಈಗ ವ್ಯಾಲಂಟೈನ್ಸ್ ಡೇ‍ಯನ್ನು ವಿರೋಧಿಸಲು ಇದನ್ನು ಬಳಸಿಕೊಳುತ್ತಿರುವುದು ಹೇಗೆ ಸರಿ? ಗೆಳೆಯ ರಾಮು ಫೆಬ್ರುವರಿ ೧೪ ರಂದು ಗುಲಾಬಿ ಕೊಟ್ಟು ಫೇಲಾದ ಅನ್ನುತ್ತಿದ್ದೀರಲ್ಲಾ, ಹಲವು ದಶಕಗಳಿಂದ ಬೇರೆ ದಿನಗಳಲ್ಲಿ ಗುಲಾಬಿ ಕೊಟ್ಟು ಫೇಲಾದವರೂ ಇದ್ದಾರೆ. ವ್ಯಾಲಂಟೈನ್ಸ್ ಡೇ ಇರಲಿಲ್ಲ ಅಂದರೆ ಗೆಳೆಯ ರಾಮು ಅವಳ ಬರ್ತ್‍ಡೇ ದಿನ ಹೂವು ಕೊಡುತ್ತಿದ್ದನೇನೋ? ರಾಮುವಿನ ಪ್ರೇಮದ ವಿಫಲತೆಗೆ, ಹಾಗು ಅದರಿಂದಾದ ಅವನ ಓದಿನ ಮೇಲಿನ ಪರಿಣಾಮಕ್ಕೆ ವ್ಯಾಲಂಟೈನ್ಸ್ ಡೇ‍ಯನ್ನು ದೂರುವುದು ಸರಿಯಲ್ಲ, ಇದು ಇರುತ್ತಿರಲಿಲ್ಲ ಎಂದರೆ ರಾಮು ಪ್ರೇಮದಲ್ಲಿ ಬೀಳುತ್ತಿರಲಿಲ್ಲ ಎನ್ನುವುದು ವಾದವಾಗುವುದಿಲ್ಲ. ಅಥವಾ ರಾಮು ವ್ಯಾಲಂಟೈನ್ಸ್ ಡೇ ದಿನ ಗುಲಾಬಿ ಕೊಟ್ಟಿದ್ದಕ್ಕೆ ಮಾತ್ರ ಆ ಹುಡುಗಿ ಒಪ್ಪಿದಳು ಅನ್ನುವ ವಾದಕ್ಕೂ ಹುರುಳಿರಿವುದಿಲ್ಲ. [quote]ನಿಜವಾದ ಪ್ರೇಮ, ಒಂದು ದಿನ ಡಿನ್ನರ್ ಗೆ ಕರೆದುಕೊಂಡು ಹೋಗಿ ಕೈ ಕೈ ಹಿಡಿದರೆ ಮಾತ್ರ ವ್ಯಕ್ತ ಅಗುತ್ತದೆ ಅನ್ನೋದಾದರೆ,, ಅದಕ್ಕೆ ಫೆ|| ೧೪ಕ್ಕೆ ಯಾಕೆ ಕಾಯಬೇಕು? ಅಥವಾ ಅಲ್ಲೀವರೆಗೂ ಕಾಯಬೇಕೆ?[/quote] ಇದನ್ನು ನಾನೀಗಾಗಲೇ ರಕ್ಷಾಭಂಧನದ ಉದಾಹರಣೆಯ ಮೂಲಕ ಸಮರ್ಥಿಸಿಕೊಂಡಿದ್ದೇನೆ. ಅದರಲ್ಲಿ ತಪ್ಪಿದ್ದರೆ ತಿದ್ದಿ, ನಾನು ಇನ್ನೊಂದು ದೃಷ್ಟಿಕೋನದ ವಿಚಾರವನ್ನು ಖಂಡಿತಾ ಆಲಿಸುತ್ತೇನೆ. [quote]ಪ್ರೀತಿ ಮಾಡೋದು ತಪ್ಪು ಅಥವಾ ಅಪರಾಧ ಅಂತ ನಾನು ಹೇಳುತ್ತಿಲ್ಲ.. ಆದರೆ ವಿದೇಶದಿಂದ ಆಮದಾಗಿರುವ ಈ ರೀತಿಯ ಆಚರಣೆಯಿಂದ ಏನೂ ಲಾಭವಿಲ್ಲ[/quote] ನನ್ನ ಕಾಮೆಂಟಿನ ಕೊನೆಯಲ್ಲಿ ನಾನು ಹೇಳಿರುವುದು ಇದನ್ನೇ. "ನನಗೂ ಸುಮ್ಮನೆ ಪಾಶ್ಚಾತ್ಯ ದೇಶಗಳನ್ನು ಹಿಂದೆ ಮುಂದೆ ನೋಡದೆ ಅನುಸರಿಸೋದು ಸರಿ ಬರೋದಿಲ್ಲ. ಹೆಚ್ಚಿನ ಸಮಯ ಇದು ಕೇವಲ ಅನುಕರಣೆ ಆಗಿರುತ್ತದೇ ಹೊರತು ಅದಕ್ಕೆ ಯಾವುದೇ ಮಹತ್ವ ಇರುವುದಿಲ್ಲ". ಎಲ್ಲರಿಗೂ ಅವರವರ ವಿಚಾರಗಳನ್ನು ಹೇಳಲು ಅವಕಾಶವಿದೆ, ಅದು ಮುಖ್ಯ ಕೂಡ, ಆದರೆ ನಮಗೆ ಇಷ್ಟವಾಗದ ವಿಚಾರವನ್ನು ವ್ಯಕ್ತಪಡಿಸಲು ಬೇರೆಯವರ ವಿಚಾರವೆಲ್ಲ ತಪ್ಪು ಅನ್ನುವ ಭಾವನೆ ಅಥವ ನಮ್ಮ ವಿಚಾರಗಳನ್ನು ಇನ್ನೊಬ್ಬರ ಮೇಲೆ ಹೇರುವ ಕ್ರಮ ಮಾತ್ರ ಸರಿಯಲ್ಲ. ಹಾಗೆ ಕೆಲವು ವಿಚಾರಗಳನ್ನು ಖಂಡಿಸುವಾಗ ಸತ್ಯಕ್ಕೆ ದೂರವಾದ ಅಂಶಗಳನ್ನು ವೈಭವೀಕರಿಸಿವುದು (ವೇಶ್ಯಾವಾಟಿಕೆ ಅಂತ ಬಣ್ಣಿಸಿರೋದು), ಹಲವು ವಿಚಾರಗಳಿಗೆ ಉದಾಹರಣೆಯಾಗಿ ಬಳಸಿಕೊಳ್ಳಬಹುದಾದಂತ ಅಂಶಗಳಿಗೆ ನಾವು ಖಂಡಿಸುತ್ತಿರುವ ವಿಚಾರ ಒಂದೇ ಕಾರಣ ಎಂಬ ಪೂರ್ವಾಗ್ರಹದಿಂದ ಉದಾಹರಿಸುವುದು (ಕಾಲೇಜಿನಲ್ಲಿ ಹುಡುಗಿ ಬಸಿರಾಗುವ ಉದಾಹರಣೆ) ಇವೆಲ್ಲ ಒಂದು ದೃಷ್ಟಿಕೋನವನ್ನು ಮಾತ್ರ ಬಿಂಬಿಸುತ್ತವೆ. ಇದಕ್ಕೆ ಬಹು ಮುಖ್ಯವಾದ ಕಾರಣ "ನಮ್ಮದು ಉಳಿದವರಿಗಿಂತ ಮೇಲು" ಎಂಬ ಅಭಿಪ್ರಾಯ. ಇದು ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಅಸಭ್ಯ ಎನ್ನುವುದಾಗಿರಬಹುದು ಅಥವಾ ಅವರು ನಮ್ಮ ಸಂಸ್ಕೃತಿಯ ಕೆಲವು ಅಂಶಗಳನ್ನು ಹೆಣ್ಣಿನ ಶೋಷಣೆ ಎನ್ನುವುದಾಗಿರಬಹುದು. ಇಂಗ್ಲಿಶ್‍ಲ್ಲಿ ಇದನ್ನು "Holier than though" attitude ಅಂತ ಕರೆಯುತ್ತಾರೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಅದರ ಬಗ್ಗೆ ನನ್ನ ಅಭಿಪ್ರಾಯಗಳನ್ನು ಹೇಳಿದ್ದೇನೆ. ಇದನ್ನು ವೈಯುಕ್ತಿಕವಾಗಿ ಮಾತ್ರ ತೆಗೆದುಕೊಳ್ಳಬೇಡಿ.

Submitted by hamsanandi on
ವ್ಯಾಲೆಂಟೈನ್ ದಿವಸವೇ ಇರಲಿ, ಅಪ್ಪ-ಅಮ್ಮನ ದಿವಸವೇ ಇರಲಿ - ಇದೆಲ್ಲಾ ಹುಟ್ಟು ಹಾಕಿರೋದು ಯಾರು ಅಂತೀರಾ? ಗ್ರೀಟಿಂಗ್ ಕಾರ್ಡ್ ಕಂಪನೀಗಳು, ಮತ್ತೆ ಹೂ ಬೆಳೆಯೋ-ಮಾರೋ ವ್ಯವಹಾರದಲ್ಲಿ ತೊಡಗಿರೋವ್ರು :) ಅವರಿಗೆ ಎಲ್ಲಿ ಲಾಭ ಇದೆಯೋ ಅದನ್ನ ಅವರು ಮಾಡ್ತಾರೆ. ಅದಕ್ಕೆ ಇಷ್ಟೆಲ್ಲ ಹೆಚ್ಚಿನ ಅರ್ಥಗಳನ್ನೆಲ್ಲಾ ನೋಡಲೇಬಾರದು ಅನ್ಸತ್ತೆ! ಇಂತಹ ದಿವಸ ಮಾತ್ರ ಪ್ರೀತಿ ಹುಟ್ಬೇಕು, ತಂದೆ ತಾಯೀನ ಮಾತಾಡ್ಸ್ಬೇಕು ಅಂತ ಅಂದ್ಕೋತಾ ಹೋದ್ರೆ ಆಯ್ತು!

Submitted by createam on
ಹಂಸಾನಂದಿಯವರೇ, ಇಲ್ಲಿ ಇದೇ ದಿನ ಪ್ರೀತಿ ಹುಟ್ಟಬೇಕು ಅಂತ ನಾನು ಹೇಳ್ತಾ ಇಲ್ಲ, ಅಥವಾ ಅದು ಸರಿ ಅಂತಾನೂ ಹೇಳ್ತಾ ಇಲ್ಲ. ಹಾಗೆ ಇಂತ "ಡೇ" ಗಳಿಗೆ ಮಾರುಕಟ್ಟೆ ಹೇಗೆ ಪ್ರೋತ್ಸಾಹ ಕೊಡುತ್ತೆ ಅನ್ನೋದೂ ಗೊತ್ತಿರುವ ವಿಚಾರನೇ, ಆದರೆ ನಾನು ನನ್ನ ಕಾಮೆಂಟುಳಲ್ಲಿ ವಿರೋಧಿಸುತ್ತಿರುವುದು ಇದನ್ನು ವೇಶ್ಯಾವಾಟಿಕೆ, ಕಾಮುಕತನ ಅಂತೆಲ್ಲಾ ಕರೆಯುತ್ತಿರುವುದನ್ನ. ಹಾಗೇ ಇದನ್ನು ವಿರೋಧಿಸುವುದರಲ್ಲಿ ನಮ್ಮ ಸಂಸ್ಕೃತಿಯ ಉಳಿವು ಇದೆ ಅನ್ನುವುದನ್ನ. ಹಲವಾರು ವರ್ಷಗಳಿಂದ ಇರುವ ತೊಂದರೆಗಳಿಗೆಲ್ಲಾ ಇದೇ ಕಾರಣ ಅನ್ನೋ ಸುಳ್ಳನ್ನ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮದು ಮಾತ್ರ ಸರಿ, ಅನ್ನೋ ಅಭಿಪ್ರಾಯವನ್ನ. ನಿಮ್ಮಂತೆಯೇ ಈ ಪೋಸ್ಟನ್ನು ಬರೆದಿರುವವರು ವ್ಯಾಲಂಟೈನ್ಸ್ ಡೇ ಯಾಕೆ ಸರಿಯಲ್ಲ ಅನ್ನುವುದನ್ನು ಮಾತ್ರ ಹೇಳಿದ್ದರೆ ಅದಕ್ಕೆ ನನ್ನ ವಿರೋಧ ಇರುತ್ತಿರಲಿಲ್ಲ (ನನ್ನ ವಿರೋಧದಿಂದ ಎನೋ ಮಹತ್ಕಾರ್ಯ ಆಗುತ್ತದೆ ಅನ್ನೋ ಹುಚ್ಚುತನ ನನ್ಹತ್ರ ಇಲ್ಲ ;))

Submitted by ಶ್ರೀನಿಧಿ on
[quote] ಪಾಶ್ಚಾತ್ಯ ದೇಶಗಳಲ್ಲಿ ಪ್ರೀತಿ ಮಾಡಲೂ ಪುರುಸೊತ್ತು ಸಿಗದ ಕಾರಣ ಅವರು Father's Day, Mother's Day, Grand Father's Day, Grand mother's Day, Valentain's Day ಮುಂತಾದ ದಿನಗಳನ್ನು ಆಚರಿಸುತ್ತಾರೆ. ಅವರು ವರ್ಷಕ್ಕೆ ಒಂದೇ ದಿನ ಪ್ರೀತಿಸುವುದು. ಆದರೆ ವರ್ಷವಿಡೀ ಪ್ರೀತಿಸುವ ನಮಗೆ ಈ ಅಸಭ್ಯ ಸಂಸ್ಕೃತಿ ಬೇಕೆ?. ಇದು ನಮ್ಮ ದೇಶದಲ್ಲಿ ಕೇವಲ ಶೋಕಿಯ, ವೇಶ್ಯಾವಾಟಿಕೆಯನ್ನು ಪ್ರಚೋದಿಸುವ, ವ್ಯಭಿಚಾರವನ್ನು ಪ್ರಚೋದಿಸುವ, ಕಾಮುಕತೆಯನ್ನು ತೋರ್ಪಡಿಸುವ ಒಂದು ದಿನವಾಗಿದೆ. [/quote] citation ಬೇಕಾಗಿದೆ!! :) ಅಂದಹಾಗೆ ಕಾಳೀದಾಸ ನಾಟಕಗಳಲ್ಲಿ ಬರುವ ಪ್ರಣಯದ ಶ್ಲೋಕಗಳನ್ನು ಏನು ಮಾಡೋಣ? ನಮ್ಮ ಸಂಸ್ಕೃತಿಗೆ ಹೊಂದುವುದಿಲ್ಲ!! ಜಯದೇವನ ಅಷ್ಟಪದಿ ಅರ್ಥಮಾಡಲು ಹೋದರೆ ಅವರನ್ನು ಏನು ಮಾಡೀರಿ? ಬಿಟ್ಟರೆ ಜಯದೇವನ ಪುಸ್ತಕಗಳೆಲ್ಲವನ್ನೂ ಸುಟ್ಟು ಬಿಟ್ಟೀರಿ!! ಇಂಟರ್ನೆಟ್ಟಿನ ತುಂಬಾ ಅದೇ ವ್ಯಭಿಚಾರ/ಶೋಕಿ ತುಂಬಿದೆಯಲ್ಲ!! ಅದನ್ನೇನು ಮಾಡೀರಿ? ಅದರಿಂದ ನಮ್ಮ ಸಂಸ್ಕೃತಿ ಹೇಗೆ ಕಾಪಾಡುವುದು? ನಿಮ್ಮ ಮನಸ್ಸಿನ ತುಂಬಾ ಬೇರೆಯವರು ಮಾಡಬಹುದಾದ/ ಮಾಡಿರಬಹುದಾದ ಕೆಟ್ಟ ಕೆಲಸಗಳು ತುಂಬಿವೆಯಲ್ಲ!! ಅದನ್ನೇನು ಮಾಡೀರಿ?

Submitted by gurumlr on
ಅರೆ, ಮಠಾಧೀಶಾ!!!!! ನಾನೇನೂ ಪ್ರಣಯ ವಿರೋಧಿಯಲ್ಲ. ಸಂಸ್ಕೃತಿಯನ್ನು ಕಾಪಾಡಿ ಅಂತ ಕಾಲಿಗೇನೂ ಬಿದ್ದಿಲ್ಲವಲ್ಲ. ನಿಮ್ಮಂತಹ ಭಾರತೀಯ ಸಂಸ್ಕೃತಿಯ ವಿರೋಧಿಗಳಿಂದ ನಮ್ಮ ಹೆಣ್ಣು ಮಕ್ಕಳನ್ನು ಕಾಪಾಡಿ ಅಂತ ಕೇಳಿಕೊಳ್ಳುತಿದ್ದೇನೆ. ವ್ಯಾಲೆಂಟೈನ್ಸ್ ಡೇ ದಿನ ವ್ಯಭಿಚಾರ ನಡೆಸುವ ಕೆಲ ಹೆಣ್ಣು ಮಕ್ಕಳಿಂದ ಎಲ್ಲಾ ಹೆಣ್ಣು ಮಕ್ಕಳಿಗೂ ಆ ಒಂದು ಅಪವಾದ ಬರದಿರಲೆಂದು ನಾನು ಕೇಳಿದೆ ಅಷ್ಟೆ. ಮತ್ತೆ ನಾನು ಸೂಳೇಗಾರಿಕೆ ಪರ, ನಮ್ಮ ದೇಶದ ಎಲ್ಲಾ ಹೆಣ್ಣು ಮಕ್ಕಳು ವೇಶ್ಯೆಯರಾಗಲಿ ಅಂತ ನೀವು ಹರಕೆ ಹೊತ್ತಲ್ಲಿ ನಾನೇನೂ ಮಾಡಲು ಸಾಧ್ಯವಿಲ್ಲ ಸ್ವಾಮೀ. ನಾನು ಕೇವಲ ಲೇಖನಗಳ ಮೂಲಕ ಹೋರಾಡಬಲ್ಲೆ. ಆದರೆ ನಿಮ್ಮಂತಹ ಮಂದಿ ಜಾಸ್ತಿ ಇರುವುದರಿಂದ ತಡೆಯುವುದು ಕಷ್ಟ.

Submitted by Chamaraj on
ತಾತ್ವಿಕ ಪ್ರಶ್ನೆಯನ್ನೇ ಎತ್ತಿದ್ದೀರಿ ಶ್ರೀನಿಧಿ. ಸಂಸ್ಕೃತಿ ಎನ್ನುವುದು ಕೆಲವೊಬ್ಬರ ನಿರ್ದೇಶನ, ಆಣತಿ, ಅರ್ಥೈಸುವಿಕೆಗೆ ಒಳಪಡುವುದಿಲ್ಲ. ಒಟ್ಟು ಸಮುದಾಯದ ಪ್ರತಿಫಲವಾಗಿರುತ್ತದೆ. ಅದು ಹೀಗೇ ಎಂದು ನಿಶ್ಚಯಿಸುವುದು ಸಾಧ್ಯವಿಲ್ಲ. ವಿವೇಚನೆ ಇಲ್ಲದಿದ್ದರೆ ಸಾಂಸ್ಕೃತಿಕ ಪುಂಡಾಟಿಕೆಗಳು ನಡೆಯುತ್ತವೆ. ಹಾಗೇ ಸ್ವಚ್ಛಂದವೂ.

Submitted by ಹರ್ಷ on
ನನ್ನ ಪ್ರಕಾರ ಪ್ರೀತಿವಿಶ್ವಾಸವನ್ನು ಹೆಚ್ಚಿಸುವ೦ಥ ಎಲ್ಲಾ ಹಬ್ಬಗಳು ಒಳ್ಲೆಯವು. ರಾಖಿ ಹಬ್ಬಕ್ಕೆ ಎನ೦ತೀರಿ? ನಾಗಪ೦ಚಮಿಗೆ ನಿಮ್ಮ ವಿವರಣೆ ಏನು? ಪಾಶ್ಚಾತ್ಯ ದೇಶಗಳಲ್ಲಿ ಜನ ಒಬ್ಬರನ್ನೊಬ್ಬರು ಪ್ರೀತಿಸುವುದಿಲ್ಲ ಎನ್ನುವ ನಿಮ್ಮ ಹೇಳಿಕೆ ಹಾಸ್ಯಾಸ್ಪದವಾಗಿದೆ. ಅಲ್ಲಿ ಜನ ಪ್ರೀತಿ ವಿಶ್ವಾಸಗಳನ್ನು ಮುಚ್ಚುಮರೆಯಿಲ್ಲದೆ ತಿಳಿಸುತ್ತಾರೆ, ಮಾತು-ಕೃತಿ ಎರಡರಲ್ಲೂ!!

Submitted by ಹರ್ಷ on
ಹೌದು ಸ೦ಸ್ಕೃತಿಯನ್ನು ಏಕೆ ಉಳಿಸಬೇಕು?ಸ೦ಸ್ಕೃತಿಯನ್ನು ಇದುವರೆಗೂ ಯಾರಾದರು ಉಳಿಸಲಾಗಿದೆಯೆ? ವೈದಿಕ ಸ೦ಸ್ಕ್ರುತಿ ಮೌರ್ಯ ಕಾಲದಲ್ಲಿತ್ತೆ? ಮೌರ್ಯರ ಸ೦ಸ್ಕ್ರುತಿ ರಜಪೂತರ ಕಾಲದಲ್ಲಿತ್ತೆ?ಸ್ವಾತ೦ತ್ರ್ಯ ಪೂರ್ವದ ಸ೦ಸ್ಕ್ರುತಿ ಈಗ ಉಳಿದಿದೆಯೆ? ಸ೦ಸ್ಕೃತಿ ಕಾಲಕ್ಕೆ ತಕ್ಕಹಾಗೆ ಬದಲಾಗುತ್ತದೆ. ನದಿಯನ್ನು ಹರಿಯಲು ಬಿಡಿ ಅದು ತಾನೇ ತಾನಾಗಿ ದಾರಿ ಹುಡುಕಿಕೊ೦ಡು ಹೋಗುತ್ತದೆ!!

Submitted by vidhata on
ಯಾವುದೊ ರಾಜಕಾರಣಿಗಳು ಅವರವರ ರಾಜಕೀಯ ಲಾಭಕ್ಕಾಗಿ ಆಗಾಗ ಪಬ್ಲಿಸಿಟಿಗಾಗಿ ಈ ಥರದ ಒ೦ದು ಗಲಾಟೆಯನ್ನ ಮಾಡ್ತಾರೆ.ನೀವ್ಯಾಕ್ರಿ ಸುಮ್ನೆ ಟ್ಯಮ್ ವೆಸ್ಟ ಮಾಡ್ತೀರಾರಿ

Submitted by raghava on
>> ..... ನಮ್ಮ ಸಂಸ್ಕೃತಿಯನ್ನು ಉಳಿಸುವ .... ಮಾತೆತ್ತಿದ್ರೆ ಇದು ಬರತ್ತೆ. ನನ್ನ ಪ್ರಶ್ನೆ. ಇಲ್ಲಿ ಹೇಳಿರುವ 'ನಮ್ಮ ಸಂಸ್ಕೃತಿ' ಏನು? ವಿವರಣೆ ಬೇಕು. ದಯವಿಟ್ಟು ಉತ್ತರ ಕೊಡಿ. ಸ್ವೇಛ್ಛಾಚಾರಕ್ಕೆ ನನ್ನ ಸಂಪೂರ್ಣ ವಿರೋಧ ಇದೆ. ಆದರೆ ಬೇರೆಲ್ಲರ ಆಲೋಚನೆಗಳೂ/ವರ್ತನೆಗಳೂ ತನ್ನೊಬ್ಬನ ನಂಬಿಕೆಯಡಿಯಲ್ಲಿ 'ಸರಿ' ಎನ್ನುವ ರೀತಿಯಲ್ಲೆ categorise ಆಗೋ ಥರ ಇರಬೇಕು ಎನ್ನುವುದೂ ಒಂದು ರೀತಿಯ ಸ್ವೇಛ್ಛಾಚಾರವೇ ಅಲ್ಲ್ವಾ ? ಆಚರಣೆ/ನಂಬಿಕೆ ಮತ್ತು ಸಂಸ್ಕೃತಿ ಎಂದಿಗೂ evolve ಆಗ್ತಾ ಇರತ್ತೋ ಅಥವಾ ಒಮ್ಮೆ ಯಾರೋ define ಮಾಡಿದ್ದು ಅಂತ ಬದಲಾವಣೆ ಕಾಣೋದೇ ಇಲ್ಲ್ವೋ? ಮೂಲ ಇದಲ್ಲ. ಮೊದ್ಲು ಜನರಲ್ಲಿ ಅತಿಯಾಗಿರೋ ಹಣ/ಅಧಿಕಾರ/ವೈಭವದ ವ್ಯಾಮೋಹ, ಕೊಳ್ಳುಬಾಕತನ ಕಡಿಮೆಯಾದ್ರೆ ಬೇರೆಲ್ಲಾದೂ ಸರಿದಾರಿಗೆ ಬರತ್ತೆ. ಆದ್ರೆ ಅದೊಂದ್ರ ಬಗ್ಗೆ ಬಿಟ್ಟು ನಮ್ಮೋರು ಬೇರೆಲ್ಲದನ್ನೂ ನೋಡ್ತಿದಾರೆ. ಜಾಣ ಕುರುಡು.