ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ಕನ್ನಡಕ್ಕೊಂದು CMS

May 23, 2006 - 8:24pm — Rohit

ಕನ್ನಡ ಹಾಗೂ ತಂತ್ರಜ್ಞಾನವನ್ನು ಬೆಸೆಯುವುದರ ಬಗ್ಗೆ ಈಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಈ ಚರ್ಚೆಗಳೂ ಒಂದು ಕೃತಿಸ್ವರೂಪವನ್ನು ಪಡೆಯುವಲ್ಲಿ ಮುಂದಡಿಯಿಟ್ಟಿವೆ. ಅಂತರ್ಜಾಲ ತಾಣಗಳನ್ನು ನಿರ್ವಹಿಸಲು ಅಗತ್ಯವಾದ 'Content Management System(CMS)' ....ಕನ್ನಡವೂ ಸೇರಿದಂತೆ ಇತರ ಯಾವುದೇ ಭಾಷೆಗೂ ಕಸ್ಟಮೈಸ್ ಮಾಡಿಕೊಳ್ಳಬಹುದಾದಂತಹ ಒಂದು ಸಿಎಂಎಸ್ ಪೂರ್ಣಕಾರ ಪಡೆಯುವ ಹಂತದಲ್ಲಿದೆ. ಇದನ್ನು ಸಾಧ್ಯವಾಗಿಸಲು 'ಸಂಪೂರ್ಣ' ಶ್ರಮ ಮೀಸಲಿರಿಸುವವರು, ಕನ್ನಡಸಾಹಿತ್ಯ.ಕಾಂ ನ ಶೇಖರ್‍ ಪೂರ್ಣ ಹಾಗೂ ತಂತ್ರಜ್ಞ ರಾಘವ ಕೋಟೇಕಾರ್‍. ಅದರ ಪ್ರಾರಂಭಿಕ ಪುಟಗಳನ್ನು www.sampoorna.kannadasaahithya.com ತಾಣದಲ್ಲಿ ಕಾಣಬಹುದು.

ಇದನ್ನು ಪರಿಷ್ಕರಿಸಲು ಮತ್ತಷ್ಟು ತಂತ್ರಜ್ಞರು ಹಾಗೂ ಸ್ವಯಂ-ಆಸಕ್ತರ ಅಗತ್ಯವಿದೆ. ಕೈ ಜೋಡಿಸಲಿಚ್ಛಿಸುವವರು sampoorna_ksc@yahoo.com ಸಂಪರ್ಕಿಸಬಹುದು.

ಈಚೆಗೆ ಶೇಖರ್‍ ತಮ್ಮ ಈ ಪ್ರಯತ್ನದ ಬಗ್ಗೆ ಬರೆದ ಒಂದು ತುಣುಕನ್ನು ಇಲ್ಲಿ ಸೇರಿಸುತ್ತಿದ್ದೇನೆ.....

 

ಸಂಪೂರ್ಣ (ಕಂಟೆಂಟ್ ಮೇನೇಜ್‌ಮೆಂಟ್ ಸಿಸ್ಟಂ- ಕೃತಿಗಳ ನಿರ್ವಹಣೆಯ ವ್ಯವಸ್ಥೆ)

ಇದರ ಹಿನ್ನೆಲೆಯಲ್ಲಿರುವ ಚಿಂತನೆ
ಭಾಷೆ ಹಾಗು ಭಾವ ಎರಡನ್ನೂ ನಿರ್ವಹಿಸುವುದು ಅತ್ಯಂತ ಕಠಿಣವಾಗುತ್ತಿರುವ ತಾಂತ್ರಿಕ ಹಿನ್ನೆಲೆಯನ್ನು ಹೇಗೆ ನಿರ್ವಹಿಸಬೇಕು ಎಂದು ನಮ್ಮ ಮುಂದೆ ಇರುವ ದೊಡ್ಡ ಸವಾಲು. ಸವಲತ್ತುಗಳು, ಆರ್ಥಿಕವಾಗಿ ಪ್ರಬಲಾಗಿರುವವರ ಸ್ವತ್ತಾಗುತ್ತಿರುವ ಹಿನ್ನೆಲೆಯಲ್ಲಿ, ಬರಿ ಮೆರಿಟೋಕ್ರಸಿಯ ಸ್ವತ್ತಾಗಿರುವ ಹಿನ್ನೆಲೆಯುಳ್ಳ ಭಾರತದಂತಹ ಸಾಮಾಜಿಕ ಪರಿಸರದಲ್ಲಿ, ಇಂತಹುದೇ ಪರಿಸರವಿರುವ ಯಾವುದೇ ದೇಶಕ್ಕೂ, ಈ ಸವಾಲನ್ನು ಎದುರಿಸುವುದು ದಿನೇ ದಿನೇ ಕಠಿಣವಾಗುತ್ತ ಹೋಗುತ್ತಿದೆ. ಇದಕ್ಕೆ ಕಾರಣಗಳು ಬರಿಯ ಅರ್ಥಿಕ-ರಾಜಕೀಯ ಸಂಗತಿಗಳು ಮಾತ್ರವೇ ಕಾರಣವಾಗಿಲ್ಲ. ಯಾವುದನ್ನೂ ಆಲೋಚಿಸದೆ, ಪ್ರಶ್ನಿಸದೆ ಸಿಕ್ಕುವುದಕ್ಕೆ ಹೊಂದಿಕೊಂಡು ಹೋಗಿ ಬಿಡುವ, ನಾನ್ಯಾಕೆ ಮೈಮೇಲೆ ಎಳೆದುಕೊಳ್ಳಲಿ ಎಂದೆನ್ನುವ ಸ್ವ-ಕೇಂದ್ರಿತ ಮನಸ್ಸುಗಳು, ಸೋಮಾರಿತನ ಹಾಗು `ನಾನು ಅದ್ಭುತವಾದದ್ದನ್ನೂ ಮಾಡಿದ್ದೇನೆ' ಎಂಬ ಹುಂಬತನಗಳೂ ಸಹ ಕಾರಣಗಳೆ. ಇವುಗಳನ್ನು ಸಮಷ್ಟಿಯಾಗಿ ನೋಡಿದಾಗ ಸಾಮಾಜಿಕ- ಬಿಡಿಸಿನೋಡಿದಾಗ ವೈಯಕ್ತಿಕ. ಈ ಹಿನ್ನೆಲೆಯಲ್ಲೇ ಐಟಿ ಒದಗಿಸುತ್ತಿರುವ ಸವಲತ್ತುಗಳನ್ನೂ ಗ್ರಹಿಸಿ ನೋಡಬೇಕು.

ಐಟಿ ಒದಗಿಸುತ್ತಿರುವ ಸಾಧನಗಳು ಇನ್ನೂ "ಉಳ್ಳವರ-ಪ್ರತಿಭಾನ್ವಿತರಿಗೆ (ಮೆರಿಟ್)' ಸೀಮಿತವಾಗಿರುವುದು ಭಾರತ ದೇಶದ ದುರಂತ. ಇದರಿಂದಾಗಿ, ಡಿಜಿಟಲ್ ಕಂದರ ಮತ್ತೂ ಹೆಚ್ಚಾಗುತ್ತಾ ಹೋಗುವ ಸನ್ನಿವೇಶಗಳು ಮಾತ್ರವೇ ಕಾಣುತ್ತಿದೆಯಾಗಲಿ, ತಳಮಟ್ಟದವರನ್ನು ತಲುಪುವ ಯಾವುದೇ ಕಾರ್ಯಕ್ರಮಗಳು ಕಣ್ಣಿಗೆ ಕಾಣಿಸುತ್ತಿಲ್ಲ. ಉದಾಹರಣೆಗೆ: ಅಂತರ್ಜಾಲದ ನಿರ್ವಹಣೆ.

ಡಿಜಿಟಲ್ ಕಂದರ: ಭಾರತದ ಸಮಾಜವನ್ನು ಈ ಡಿಜಿಟಲ್ ಕಂದರ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಮೂರು ರೀತಿಯಲ್ಲಿ ವಿಂಗಡಿಸಬಹುದು:

೧. ಮಹಾ ನಗರಗಳು (ಸುಖಾ-ಭೋಗ ವಲಯ=ಕಂಫರ್ಟಬಲ್ ಜೋನ್)
ಈ ಪ್ರದೇಶಗಳಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚು ವಿನ್ ಎಕ್ಸ್ ಪಿ ಹಾಗು ಲೈನೆಕ್ಸ್ ಆಧರಿಸಿರುತ್ತದೆ. ಸಾಮಾನ್ಯರಿಗೆ, ಇವೆರಡೂ ದುರ್ಲಭ. ಹೆಚ್ಚು ಹಣ ಅಥವ ಹೆಚ್ಚು ಬುದ್ಧಿವಂತಿಕೆಯನ್ನು ಇವೆರಡೂ ಬೇಡುತ್ತದೆ. ಬಹಳ ಕಾಲದಿಂದಲೂ ಬಳಕೆಯಾಗಿರುವ ವಿಂಡೋಸ್ ಅತಿ ವ್ಯಾಪ್ತಿ ಪಡೆದುಕೊಂಡಿದೆ. ಹೆಚ್ಚು ಬಳಸುತ್ತಿರುವುದರಿಂದ ಅದು ಮೇಲ್ವರ್ಗದ ಬುದ್ಧಿವಂತ ಜನರಿಂದ ಕೆಳ ಮಟ್ಟದವರಿಗೂ ಬಳಕೆ ಸರಳವಾಗಿದೆ ಎಂದನ್ನಿಸಿಬಿಟ್ಟಿರುವುದರಿಂದ ಅದರ ವ್ಯಾಪ್ತಿ ಹೆಚ್ಚಿನದ್ದಾಗಿದ್ದರೆ ಆಶ್ಚರ್ಯವೇನಿಲ್ಲ. ಲೈನೆಕ್ಸ್ ಎನ್ನುವ ಚಳುವಳಿ ಒಂದು ಅಧ್ಭುತವಾದದ್ದು. ಅದರ ಆಶಯದ ಬಗೆಗೆ ಯಾವುದೇ ಅನುಮಾನಗಳಿಲ್ಲ. ಆದರೆ, ಭಾರತೀಯ ಲೈನೆಕ್ಸ್ ಎನ್ನುವುದು ನನಗೆ ಈಗಿನ ಸಂದರ್ಭದಲ್ಲಿ (ನೆನಪಿಡಿ: ಈಗಿನ ಸಂದರ್ಭದಲ್ಲಿ) ಹಾಸ್ಯಾಸ್ಪದವಾಗಿ ಕಾಣುತ್ತಿದೆ. ಅದರೊಂದಿಗೆ ಗುರುತಿಸಿಕೊಂಡಿರುವ ಯುವಕ ಯುವತಿಯರು ಭಾರತೀಯ ಲೈನೆಕ್ಸ್ ಅನ್ನು ಪ್ರಾದೇಶಿಕಗೊಳಿಸದ ತನಕ ಅವರ ಎಲ್ಲ ಚಟುವಟಿಕೆಗಳನ್ನು ಅನುಮಾನದಿಂದಲೇ ನೋಡಬೇಕಾಗುತ್ತದೆ. ಬರಿಯ ಅಂತಹ ಒಂದು ಚಳವಳಿಯೊಂದಿಗೆ ಗುರುತಿಸಿಕೊಳ್ಳುವುದು `ನಾನು ಸಾಮಾಜಿಕವಾಗಿ-ರಾಜಕೀಯವಾಗಿ ಭ್ರಷ್ಟಗೊಳ್ಳದೆ' ಇದ್ದೇನೆ ಎಂದೆನ್ನುವ ಭಾವಶಮನಕ್ಕೆ ಮಾತ್ರವೇ-ಎಂದೆನ್ನಿಸಿಬಿಡುತ್ತದೆ. ಲೈನೆಕ್ಸ್ ಪ್ರಾದೇಶಿಕವಾಗದವರೆಗೆ, ಲೈನೆಕ್ಸ್ ಚಳವಳಿ ಒಂದು ಡೋಂಗಿತನವೆನ್ನದೆ ಬೇರೆ ದಾರಿಯೇ ಇಲ್ಲ. ಲೈನೆಕ್ಸ್ ಬಳಕೆ ಹೆಚ್ಚಾಗಬೇಕಾದರೆ, ಅದನ್ನು ಎಲ್ಲ ವರ್ಗದವರಿಗೂ ತಲುಪಿಸುವಂತೆ (ಕನಿಷ್ಟ ಮಟ್ಟದ ಕಂಪ್ಯೂಟರನ್ನೂ ಅದು ಸಪೋರ್‍ಟ್ ಮಾಡಬೇಕಾಗುತ್ತದೆ-ಇಲ್ಲದಿದ್ದರೆ ಇವರ ಧೋರಣೆಗೂ, ಮೈಕ್ರೋಸಾಫ್ಟ್‌ನ ನಿರ್ದಯಿ ವ್ಯಾಪಾರಿ ಧೋರ್‍ಅಣೆಗೂ ಹೆಚ್ಚು ವ್ಯತ್ಯಾಸವೇನಲ್ಲ, ಇದು ಸದ್ಯದ ಪರಿಸ್ಥಿತಿ.

ಅಂತರ್ಜಾಲದ ಜಾಲಾಟಕ್ಕೆ ಬೇಕಾದ ಬ್ಯಾಂಡ್‌ವಿಡ್ತ್ , ಕಚೇರಿಗಳಲ್ಲಿ ಅನೌಪಚಾರಿಕವಾಗಿ ಇರಬಲ್ಲ ವಾತಾವರಣ, ಬುದ್ಧಿವಂತಿಕೆ, ತಾಂತ್ರಿಕ ಪರಿಣತಿ-ಅನುಭವ ಇತ್ಯಾದಿಗಳು ಇವರ ಶಕ್ತಿ.

ಹೀಗಾಗಿ ಈ ವರ್ಗದವರನ್ನು ದೂರವಿಡುವುದರಲ್ಲಿ ಅರ್ಥವಿಲ್ಲ. ನಮ್ಮ ಆಲೋಚನೆಗಳು, ಕೃತಿಗಳು, ವಿಚಾರಗಳು ಇವರನ್ನೂ ತಲುಪಬೇಕು. ಏಕೆಂದರೆ ಇವರಿಗೆ ಮಾತ್ರ ಸದ್ಯಕ್ಕೆ "ಎಲ್ಲವನ್ನೂ" ಮುನ್ನಡೆಸುವ ಶಕ್ತಿ ಇರುವುದು.

ಸ್ಥೂಲವಾಗಿ ಈ ವರ್ಗದವರಿಗೆ ಎಕ್ಸ್ ಪಿ ಬಳಕೆಯಿಂದಾಗಿ ಎಲ್ಲ ತೆರನಾದ ಬೆಂಬಲವೂ ಸಿಕ್ಕಂತಾಗುತ್ತದೆ. ಲೈನೆಕ್ಸ್‌ನಲ್ಲಾದರೆ, ಬರಿಯ ಯುನಿಕೋಡ್ ಮಾತ್ರ.

ಯುನಿಕೋಡ್ ಹೊರತಾಗಿ ಲೈನೆಕ್ಸ್‌ನಲ್ಲಿ ಬೇರೆ ವ್ಯವಸ್ಥೆ ಇದ್ದರೆ ತಿಳಿಸಬೇಕಾಗಿ ಮನವಿ.

೨. ಅರೆ ನಗರಗಳು ಅಥವ ಅರೆ ಪಟ್ಟಣಗಳು (ಅರೆ ಸುಖಾಭೋಗ ವಲಯ)
ಮೇಲೆ ವಿವರಿಸಿರುವ ವರ್ಗಕ್ಕೆ ಇರುವ ಸವಲತ್ತುಗಳು ಪೂರ್ಣ ಪ್ರಮಾಣದಲ್ಲಿ ಇವರಿಗೆ ಇಲ್ಲ. ಈ ಪ್ರದೇಶಿಗರು ಮೇಲಿನ ವರ್ಗ ಹಾಗು ಕೆಳಾಗಿನ ವರ್ಗದವರ ಮಧ್ಯೆ ಇದ್ದಾರೆ. ಉದಾಹರಣೆಗೆ, ಮೈಸೂರು, ಹುಬ್ಬಳ್ಳಿ-ಧಾರವಾಡ ಮುಂತಾದೆಡೆ, ಸರ್ಕಾರ ಐಟಿಗೆ ನೀಡುತ್ತಿರುವ ಪ್ರೋತ್ಸಾಹದಿಂದಾಗಿ ಇಲ್ಲಿ ಎರಡು ವರ್ಗದವರೂ ಕಾಣ ಸಿಗುತ್ತಾರೆ.ಆದರೆ, ಇದನ್ನೇ ನಾವು, ಕೋಲಾರ, ಬೀದರ್ ಮುಂತಾದ ಪ್ರಾಂತ್ಯಗಳಿಗೆ ಅನ್ವಯಿಸಲಾಗುದಿಲ್ಲ. ಆದುದರಿಂದ ಇಲ್ಲೆಲ್ಲ ಹೆಚ್ಚೂ ಕಡಿಮೆ ವಿಂಡೋಸ್-೯೮ ಮಾತ್ರ ಬಳಕೆಯಲ್ಲಿದೆ. ವಿಂಡೋಸ್-೯೮ ಯುನಿಕೋಡನ್ನು ಬೆಂಬಲಿಸುವುದಿಲ್ಲ. ಲೈನೆಕ್ಸ್ ಇದ್ದೂ ಇಲ್ಲದಂತೆ ಬಳಕೆಯಾಗುತ್ತಿರುವುದರಿಂದ ಇನ್ನೂ ಯುನಿಕೋಡ್ ಬಳಕೆ ಹೆಚ್ಚಾಗಿ ಇರುವುದಕ್ಕೆ ಸಾಧ್ಯವಿಲ್ಲ ಎಂದು ಅಂದಾಜಿಸಬಹುದು.

೩. ಗ್ರಾಮಾಂತರ ಪ್ರದೇಶ (ಐಟಿ ವಂಚಿತ ವಲಯ)
ಕಂಪ್ಯೂಟರ್, ಸಾಫ್ಟ್‌ವೇರ್, ಕಿಯೋಸ್ಕ್‌ಗಳು ಇತ್ಯಾದಿಗಳ ಪ್ರವೇಶದಿಂದಾಗಿ ಉಂಟಾಗಬಹುದಾದ ತಾತ್ಕಾಲಿಕ ಸಾಂಸ್ಕೃತಿಕ ಪಲ್ಲಟಗಳ ಕಂಪ್ಯೂಟರ್ ಬಳಸಲು ಬೇಕಾದ ವಿದ್ಯುತ್, ಟೆಲಿಫೋನ್, ಇಂಟರ್‌ನೆಟ್ ಸಂಪರ್ಕ ಮುಂತಾದ ಮೂಲಭೂತ ಅಗತ್ಯಗಳ ಅಪಾರ ಕೊರತೆ. ಈ ನಡುವೆ ಅಲ್ಲೊಬ್ಬರು ಇಲ್ಲೊಬ್ಬರು ಬಳಸುವವರೂ ಇದ್ದಾರೆ. ಹೀಗೆ ಬಳಸುವ ಇವರನ್ನೂ ದೂರ ಇಡಲೇ ಬಾರದು. ಏಕೆಂಡರೆ, ಮುಂದಿನ ದಿನಗಳಲ್ಲಿ ಚಿಂತನೆಗಳ-ಪ್ರಕಟಣೆಯ ಮಾಧ್ಯಮಾವಾಗಿ ಅಂತರ್ಜಾಲ ಬೆಳೆಯಲಿದೆ. ಇಂತಹವರ ತಾಂತ್ರಿಕ ದೌರ್ಬಲ್ಯಗಳ ನಡುವೆಯೂ ನಾವು ತಲುಪಬೇಕು. ಇವರನ್ನು ಮಾಹಿತಿ ವಂಚಿತರನ್ನಾಗಿ ಇಡುವುದು ಬಹಳ ದೊಡ್ಡ ಪಾಪ (ಸಿನ್) ಇಲ್ಲಿಗೆ ಎಕ್ಸ್ ಪಿ ತಲುಪಲು, ಲೈನೆಕ್ಸ್ ತಲುಪಲು, ಯುನಿಕೋಡ್ ಬಳಕೆಗೆ ಬರುವಂತಾಗಲು ಇನ್ನೂ ಅನೇಕ ವರ್ಷಗಳಾದರೂ ಆಗುತ್ತದೆ. ಮೈಕ್ರೋಸಾಫ್ಟ್‌ನವರೇನೋ ಕಡಿಮೆ ದರದ ಎಕ್ಸ್ ಪಿ ಬಿಡುಗಡೆ ಮಾಡುತ್ತಾರಂತೆ- ಅಂದರೆ ಇದರಲ್ಲಿ ಮೂರೇ ಮೂರು "ಅಪ್ಲಿಕೇಶನ್"ಗಳನ್ನು ಬಳಸಬಹುದಂತೆ-ಕಾಸಿಗೆ ತಕ್ಕ ಕಜ್ಜಾಯವೆನ್ನುವ ನಿರ್ದಯಿ ವ್ಯಾಪಾರ ಮನೋಭಾವದ ಮೈಕ್ರೋಸಾಫ್ಟ್‌ನವರೇನು "ಸಾಮಾಜಿಕ ಬದಲಾವಣೆ'ಗೆ ಹೊರಟಿಲ್ಲವಲ್ಲ. ಅಂತಹ ಕಡಿಮೆದರದ ಎಕ್ಸ್ ಪಿ ಬಂದರೂ ಸಹ ಅದು ವ್ಯಾಪಕವಾಗುವುದಕ್ಕೆ ಇನ್ನೂ ಬಹಳ ಕಾಲವೇ ಬೇಕಾಗುತ್ತದೆ. ಇಂತಹ, ವಾತಾವರಣದಲ್ಲಿ ಕಂಪ್ಯೂಟರ್ ಬಳಸುತ್ತಿರುವವರನ್ನೂ ತಲುಪಬೇಕಾದ ಒಂದು ವ್ಯವಸ್ಥೆಯನ್ನಂತೂ ಈ ಸನ್ನಿವೇಶ ಆಗ್ರಹಿಸುತ್ತದೆ. ಇವರನ್ನು ಕಡೆಗಣಿಸಿದರೆ, ಮೇಲಿನ ವರ್ಗಕ್ಕಷ್ಟೇ ಎಲ್ಲ ಸವಲತ್ತುಗಳು ಸೀಮಿತವಾದರೆ, ಅದು ಸಾಮಾಜಿಕವಾದ ಅನ್ಯಾಯ ಮಾತ್ರವಲ್ಲದೆ ಮತ್ತೊಂದು ಬಗೆಯ ಅಪ್ರಾಮಾಣಿಕತೆ, ಶೋಷಣೆ.

- ಈ ಮೇಲಿನ ಚಿಂತನೆಯ ಹಿನ್ನೆಲೆಯಲ್ಲಿ ಅಂತರ್ಜಾಲದಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ತಾಂತ್ರಿಕತೆ ಕುರಿತಂತೆ ಹೊಸದೇ ಆದ ವ್ಯವಸ್ಥೆ ಬೇಕಾಗಿದೆ. ಇದರ ಮನವರಿಕೆಯನಂತರ ಸುತ್ತಮುತ್ತಲೂ ಕಣ್ಣು ಹಾಯಿಸಿದಾಗ, ಸಿಗುವುದು ಅಂತರ್ಜಾಲದ ವ್ಯಾಪ್ತಿ ಹಳೆಯದು ಹಾಗು ಹೊಸದರ ಮಧ್ಯೆ ಕೆಟ್ಟದಾಗಿ ಹಂಚಿ ಹೋಗಿದೆ. ಛಿದ್ರ ಛಿದ್ರವಾಗಿದೆ. ಒಂದೋ ಹಳೆಯ ವ್ಯವಸ್ಥೆಗೆ ಅಥವ ಹೊಸ ವ್ಯವಸ್ಥೆಗೆ ಮಾತ್ರ ಸೀಮಿತಗೊಂಡು ಸೀಮಿತ ವರ್ಗವನ್ನು ಮಾತ್ರ ತಲುಪುತ್ತಿರುವುದು ಕಠೋರವಾದ ಸತ್ಯ. ಇದು, ಕನ್ನಡದ ಮಟ್ಟಿಗಂತೂ ಹೆಮ್ಮೆಯ ಸಂಗತಿಯಲ್ಲ. ಹೀಗಾಗಿ ಒಂದು ಹೊಸದೇ ಆದ ವ್ಯವಸ್ಥೆಯ ಕಲ್ಪನೆ ಇಂದಿನ ಜರೂರು. ಈ ಜರೂರಿಗೆ ತಕ್ಕಂತೆ ಕನ್ನಡಸಾಹಿತ್ಯ.ಕಾಂ ಸಜ್ಜಾಗಲು, ಇತರರನ್ನೂ ಸಜ್ಜುಗೊಳಿಸಲು ಮೊದಲನೆ ಹೆಜ್ಜೆ ಇಟ್ಟಿದೆ. ಅದರ ಪರಿಣಾಮವೇ ಈ "ಸಂಪೂರ್ಣ".

`ಸಂಪೂರ್ಣ'ದ ಬಗೆಗೆ ವಿವರಿಸುವ ಮುನ್ನ ಮುಕ್ತವಾಗಿ ದೊರೆಯುವ ಸ್ಕ್ರಿಪ್ಟ್‌ಗಳತ್ತ ನೋಡಿದಾಗ ಯುನಿಕೋಡ್ (ಯುಟಿಏಫ್-೮) ಹಾಗು ವಿಂಡೋಸ್-೧೨೫೨ (ಬರಹ, ನುಡಿ ಮುಂತಾದ ಫಾಂಟ್‌ಗಳು) ಕ್ಯಾರೆಕ್ಟರ್ ಎನ್‌ಕೋಡಿಂಗ್ ಎರಡನ್ನೂ ಒಂದೇ ಕೇಂದ್ರದಲ್ಲಿ ನಿರ್ವಹಣೆ ಮಾಡುವ ಒಂದಾದರೂ ಸ್ಕ್ರಿಪ್ಟ್ ಸಿಗಲಿಲ್ಲ ಎನ್ನುವುದು ಬಹುತೇಕ ನಿಜ. ಇರುವುದೆಲ್ಲ ಒಂದೋ ಯುಟಿಎಫ್-೮ ಅನ್ನು ಬೆಂಬಲಿಸುತ್ತದೆ ಅಥವ ವಿಂಡೋಸ್-೧೨೫೨ ಕ್ಯಾರೆಕ್ಟರ್ ಎನ್‌ಕೋಡಿಂಗನ್ನು ಮಾತ್ರ ಬೆಂಬಲಿಸುತ್ತದೆ. ಹೀಗಾಗಿ, ಕೃತಿಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುವುದೆಂದರೆ ಯಾವುದಾದರೂ ಒಂದಕ್ಕೆ ಅಂಟಿಕೊಳ್ಳಬೇಕಾಗಿದೆ. ಈಗ ಈ `ಸಂಪೂರ್ಣ' ವ್ಯವಸ್ಥೆಯಡಿಯಲ್ಲಿ ಜಗತ್ತಿನ ಯಾವುದೇ ಭಾಷೆಯನ್ನಾಗಲಿ, ಕ್ಯಾರೆಕ್ಟರ್ ಎನ್‌ಕೋಡಿಂಗ್ ಅನ್ನಾಗಲಿ ಬೆಂಬಲಿಸುವ ವ್ಯವಸ್ಥೆಯನ್ನು (ಸ್ಕ್ರಿಪ್ಟ್) ವಿನ್ಯಾಸ ಮಾಡಿ ರಚಿಸಲಾಗುತ್ತಿದೆ. ಸದ್ಯಕ್ಕೆ ಇದು ವಿನ್ಯಾಸದ ಹಂತವನ್ನು ದಾಟಿದ ಒಂದು ಹೆಜ್ಜೆಯಾಗಿ ಪರಿಣಮಿಸಿದೆ. ಆದರೆ, ಇನ್ನೂ ಎಲ್ಲರ ಬಳಕೆಗೆ ಬಿಡುಗಡೆ ಮಾಡುವ ಹಂತ ಮುಟ್ಟಿಲ್ಲ. ಹೀಗಾಗಿ, ಪರೀಕ್ಷಾರ್ಥವಾಗಿ ಈ ಸ್ಕ್ರಿಪ್ಟನ್ನು ಕನ್ನಡಸಾಹಿತ್ಯ.ಕಾಂ ಅಡಿಯಲ್ಲಿ ಸ್ಥಾಪಿಸಿದ್ದೇವೆ. ಆಸಕ್ತಿ ಇರುವವರು, ರಿಜಿಸ್ಟರ್ ಮಾಡಿಕೊಂಡು ಪರೀಕ್ಷಿಸಬಹುದು. ತಮ್ಮ ಪ್ರತಿಕ್ರಿಯೆಗಳನ್ನು ಬರೆದು ತಿಳಿಸಬಹುದು. ಮತ್ತೆ, ಈ ಯೋಜನೆಯಲ್ಲಿ ಪಾಲ್ಗೊಂಡು, ಇದನ್ನು ಮತ್ತಷ್ಟು ದೃಢಪಡಿಸಲು ನೆರವಾಗಬಹುದು.

ಆದರೆ ನೆನಪಲ್ಲಿಡಿ. ಈಗಿನ ವ್ಯವಸ್ಥೆ ಪರೀಕ್ಷಾರ್ಥವಾಗಿರುವುದು, ಹಾಗು ಅಪೂರ್ಣಗೊಂಡಿರುವುದು. ಆದರೆ, ದಿನಕಳೆದಂತೆ ಇದನ್ನು ಹೆಚ್ಚು ಬಳಕೆಗೆ ಯೋಗ್ಯವೆನ್ನಿಸುವಂತೆ ಮಾಡುವಲ್ಲಿ ಶ್ರಮಿಸುತ್ತಿದ್ದೇವೆ. ಇದರಲ್ಲಿ ಭಾಗಿಯಾಗಲು ಇಚ್ಛಿಸುವವರು ಕೆಳಗಿನ ವಿಳಾಸಕ್ಕೆ ಬರೆಯಬಹುದು-ಅಂದರೆ ಈ ಮೈಲ್ ಕಳಿಸಬಹುದು. ನಿಮ್ಮ ಆಸಕ್ತಿ, ಅಂದರೆ ಪರೀಕ್ಷಿಸಲು ಕುತೂಹಲಿಗಳಾಗಿದ್ದೀರ ಅಥವ ಈ ಯೋಜನೆಯಲ್ಲಿ ನೀವೂ ಪಾಲ್ಗೊಳ್ಳಲು ಇಚ್ಛಿಸಿದ್ದೀರ, ನಿಮ್ಮ ಪರಿಣತಿ ಇತ್ಯಾದಿ ವಿವರಗಳೊಂದಿಗೆ

sampoorna_ksc AT yahoo.com ವಿಳಾಸಕ್ಕೆ ಈಮೈಲ್ ಮಾಡಿ.

ಕಲ್ಪನೆ-ವಿನ್ಯಾಸ: ಶೇಖರ್‌ಪೂರ್ಣ. ಕನ್ನಡಸಾಹಿತ್ಯ.ಕಾಂ ನ ಮುಂಚೂಣಿಯಲ್ಲಿದ್ದಾರೆ.
ತಾಂತ್ರಿಕ-ಪರಿಣತಿ: ರಾಘವ್ ಕೋಟೇಕಾರ್, ವೆಬ್‌ಡಿಸೈನಿಂಗಿನಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಇರುವವರು.

-ಶೇಖರ್‌ಪೂರ್ಣ
-ರಾಘವ್ ಕೋಟೇಕಾರ್
ದಿನಾಂಕ: ೨೩-೦೫-೨೦೦೬
http://www.sampoorna.kannadasaahithya.com
we pledge ourself for the cause of http://www.kannadasaahithya.com

‹ ಕನ್ನಡದಲ್ಲಿನ ನವೀಕ್ರುತ ಗಾದೆಗಳು ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ! ›
  • ಸುದ್ದಿ, ಸಮಾಚಾರ
~.~
  • Login or register to post comments
  • 1219 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 29, 2006 - 11:52am — Rohit

ಲಾಗಿನ್ ಆಗಿ ಪರೀಕ್ಷಿಸಿ

Rohit's picture

ಮೇಲೆ ಕೊಟ್ಟಿರುವ ಮಾಹಿತಿಗೆ ಮತ್ತೊಂದು ಜೋಡಣೆ....

ಈಗ ಆಸಕ್ತರು ಈ ತಾಣದಲ್ಲಿ ತಮ್ಮ ಐಡಿ create ಮಾಡಿ, ನಂತರ ಲಾಗಿನ್ ಆಗಿ ಪರೀಕ್ಷಿಸಬಹುದು(test).

http://sampoorna.kannadasaahithya.com/users

ಹಾಗೆಯೇ ತಮ್ಮ ಅನುಭವಗಳನ್ನೂ ಸಹ sampoorna_ksc@yahoo.com ವಿಳಾಸಕ್ಕೆ ಮೈಲ್ ಮಾಡಬಹುದು.

ಧನ್ಯವಾದಗಳು,
ರೋಹಿತ್ ಆರ್‍.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 25, 2006 - 4:39pm — Rohit

`ಸಂಪೂರ್ಣ' ಬಗ್ಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ

Rohit's picture

೨೫-೦೬-೨೦೦೬ ರ ಟೈಮ್ಸ್ ಆಫ್ ಇಂಡಿಯಾದ ಬೆಂಗಳೂರು ಹಾಗೂ ಮಂಗಳೂರು ಆವೃತ್ತಿಗಳಲ್ಲಿ ರಾಷ್ಟ್ರೀಯ ವಾರ್ತೆಗಳ ವಿಭಾಗದಲ್ಲಿ 'ಸಂಪೂರ್ಣ' CMS ಬಗ್ಗೆ ಮಾಹಿತಿಪೂರ್ಣ ಲೇಖನ ಪ್ರಕಟವಾಗಿದೆ.

ಅದರ ಪಠ್ಯವನ್ನು ಕೆಳಗೆ ಲಗತ್ತಿಸಿಲಾಗಿದೆ.

Edit: Copyrighted material removed.

.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2006 - 4:41pm — tksbhat

ಹೊಸ ಸಿಎಂಎಸ್ ಜಿಪಿಎಲ್ ನಲ್ಲಿ ದೊರೆಯುತ್ತದೆಯೇ?

tksbhat's picture

ಈ ಸಿಎಂಎಸ್ ಈಗಾಗಲೇ ಲಭ್ಯವಿರುವ ಮುಕ್ತ ಸಿಎಂಎಸ್ ದ್ರುಪಾಲ್ ಗಿಂತ ಹೇಗೆ ಭಿನ್ನ? ದ್ರುಪಾಲ್ ಕೂಡಾ ಯಾವುದೇ ಭಾಷೆಗೆ ಕಸ್ಟಮೈಸ್ ಮಾಡಿಕೊಳ್ಳುವಂತೆ ಇದೆ. ಇದನ್ನೂ ಎಎನ್ಎಸ್ಐ ಮತ್ತು ಯೂನಿಕೋಡ್ ಗಳನ್ನು ಒಟ್ಟೊಟ್ಟಿಗೆ ಬಳಸುವಂತೆ ಕಸ್ಟಮೈಸ್ ಮಾಡಬಹುದು. ಇನ್ನೂ ಇದು ಅಪೂರ್ಣ ಗೊಂಡಿದೆ ಎಂದಿದ್ದೀರಿ. ಇದರ ಅಭಿವೃದ್ಧಿಗೆ ನಾವು ಸಹಕರಿಸಲು ಸಾಧ್ಯವಾಗುವಂತೆ ಈ ಸಿಎಂಎಸ್ ಅನ್ನು ನಲ್ಲಿ (ಸ್ವತಂತ್ರ ತಂತ್ರಾಶ) ಬಿಡುಗಡೆ ಮಾಡಲಾಗಿದೆಯೇ? ಇನ್ನು ಗ್ರಾಮೀಣ ಪ್ರದೇಶಗಳಿಗೆ ಕಂಪ್ಯೂಟರ್ ತಲುಪುತ್ತಿರುವುದೇ ಈಗ. ಹಾಗಾಗಿ ಅಲ್ಲೆಲ್ಲಾ ವಿಂಡೋಸ್ 98 ತಂತ್ರಾಂಶವೇ ಇದೆ ಎಂಬ ಹೇಳಿಕೆಯನ್ನು ಒಪ್ಪುವುದು ಸಾಧ್ಯವಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2006 - 9:09pm — Rohit

ವಾಸ್ತವವಲ್ಲ

Rohit's picture

ಗೆಳೆಯ ಭಟ್ಟ ರವರೆ,

customise ಮಾಡಬಹುದೆ? ಹೇಗೆ? ಮಾಡಬಹುದಾದರೆ ಇನ್ನೂ ಏಕೆ ಯಾರೂ ಮಾಡಿಲ್ಲ? ಅಗತ್ಯವನ್ನು ಉಪೇಕ್ಷಿಸಲಾಗಿದೆಯೆ.. windows 98 ಹಳ್ಳಿಗಳಲ್ಲೇ ಏಕೆ..ದೊಡ್ಡ ದೊಡ್ಡ ಪ್ರೆಸ್ಸುಗಳಲ್ಲೂ ಇನ್ನೂ ಬಳಕೆಯಲ್ಲಿ ಇರುವುದು windows 98 ಹಾಗು windows 2000 server..ಒಪ್ಪದಿದ್ದರೆ ಇರುವ ಸತ್ಯ ಬೇರೆಯಾಗುವುದಿಲ್ಲ.

(ಗಮನಿಸಿ: ನಮ್ಮ ಸರ್ಕಾರದವರು ನಮ್ಮ ಗ್ರಾಮೀಣ ಮಕ್ಕಳಿಗೆ ಕಂಪ್ಯೂಟರ್‍ ಶಿಕ್ಷಣ ಒದಗಿಸಲು ಮೈಕ್ರೋಸಾಫ್ಟಿನವರೊಂದಿಗೆ ಮಾಡಿಕೊಂಡಿರುವ "Project Shiksha" ಒಡಂಬಡಿಕೆಯ ಮೂಲಕ ಈಗ ಆ ಗಂಕಗಳಲ್ಲಿ ಅನುಸ್ಥಾಪಿಸಲಾಗಿರುವುದು Windows 98 !!! ನಮ್ಮ ಲಕ್ಷಗಟ್ಟಳೆ ಗ್ರಾಮೀಣ ಮಕ್ಕಳು ಕಲಿಯುತ್ತಿರುವುದು ಅದರ ಮೂಲಕವೇ...

ಅಷ್ಟೇಕೆ ಇಲ್ಲಿ ನಾನಿರುವ ಮುಂಬಯಿಯಲ್ಲಿಯೂ ಸಹ ನಾನು ಎಡತಾಕಿದ ಬಹುತೇಕ ಇಂಟರ್‍ನೆಟ್ ಕೆಫೆಗಳಲ್ಲಿರುವುದೂ Windows 98. ಮಂಬಯಿಯಲ್ಲೇ ಹೀಗಿರುವಾಗ, ನಮ್ಮ ಮಧುಗಿರಿಯೋ, ಮುಧೋಳವೋ ಇವುಗಳ ಕತೆ ಏನು...)

ಸಂಪೂರ್ಣ ತಂತ್ರಾಂಶದ ಬೆಳವಣಿಗೆ ಹಾಗು ವಿಸ್ತರಣೆಗೆ "developers community" ಸಜ್ಜಾಗುವುದಾದರೆ ಅದನ್ನು "ಮುಕ್ತವಾಗಿ" ತೆರೆದಿಡಲು ಆಲೋಚಿಸಬಹುದು. ಹತ್ತು ವರ್ಷಗಳೇ ಕಳೆದಿದ್ದರೂ ಕನ್ನಡದಲ್ಲಿ ಬರಹ, ನುಡಿ ಹೊರತಾದ ತಂತ್ರಾಂಶಗಳೇಕೆ ಬಿಡುಗಡೆಯಾಗಿಲ್ಲ...? ಇಂತಹ ಸನ್ನಿವೇಶದ ನಡುವೆ, "committed developers community" ರೂಪಿತವಾಗದಿದ್ದರೆ, ಮುಕ್ತವಾಗಿ ತೆರೆದಿಟ್ಟು ಏನು ಪ್ರಯೋಜನ. ಕನಿಷ್ಟ "proprietorial" ಆಗಿ ಉಳಿಸಿಕೊಂಡಿದ್ದರೆ, "ಕನಿಷ್ಟ" ಯಾರಿಗಾದರೂ ಪ್ರಯೋಜನವಾಗಬಹುದು..

ದ್ರುಪಾಲ್ ಅನ್ನು ಯಾವುದೇ ಭಾಷೆಗೆ ಒಗ್ಗಿಸಬಹುದು. ಆದರೆ ಬಹುಭಾಷೆಗೆ ಒಗ್ಗಿಸಲು ಸಾಕಷ್ಟು ಶ್ರಮವಹಿಸಬೇಕಾಗುತ್ತದೆ. ಸಂಪೂರ್ಣ "ದ್ರುಪಾಲ್, textpattern, wordpress ಮುಂತಾದ CMSಗಳನ್ನೇ ಬಳಸುವವರು ಬಳಸಲಿ..ಅದು ಮುಕ್ತವಾಗಿ ಲಭ್ಯವಿದೆ. ಭಿನ್ನವೆಂದರೆ, multicharacter encoding ಹಾಗು multi-linguitic feature ಅವುಗಳಲ್ಲಿ ಸಿಗುವುದಿಲ್ಲ. ಒಂದೊಂದು ಭಾಷೆಗೂ ಒಂದೊಂದು CMS ಸ್ಥಾಪಿಸಿವುವ ಗೋಜಲು..

ದ್ರುಪಾಲ್ ನವರು advanced characterset ಗೆ ಮಾತ್ರ CMS ನಿರ್ಮಿಸುವುದು ಸಹಜವಾದದ್ದೆ. ಆದರೆ, ಅದನ್ನು opensourceನಲ್ಲಿ ಬಿಟ್ಟಿದ್ದರೂ ನಮ್ಮವರು ಅದನ್ನು customise ಮಾಡದಿರುವುದು ದಿವ್ಯ ನಿರ್ಲಕ್ಶ್ಯವನ್ನಷ್ಟೇ ತೋರಿಸುತ್ತದೆ..

ಸಂಪೂರ್ಣದ ರೂವಾರಿಯಾದ ಶೇಖರ್‍ ಪೂರ್ಣರ ಅನಿಸಿಕೆಗಳೂ ಮೇಲಿನ ವಾಕ್ಯಗಳಲ್ಲಿ ಸೇರಿವೆ.

ವಂದನೆಗಳು,
ರೋಹಿತ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2006 - 12:51pm — anjali

ಏನಿದು CMS

anjali's picture

ಏನಿದು CMS ಅಂದ್ರೆ? ಮೊದಲು ಅದ್ನ ಬರೆಯೋದಲ್ವೆ. ಸಂಪದ ಕೆಲ ದಿನಗಳಿಂದ ಫಾಲೋ ಮಾಡ್ತಾ ಬಂದಿದೀನಿ. ಇವತ್ತು ಬರಹ ಹಾಕಿಕೊಂಡೆ. PCಲಿ ಕನ್ನಡ ಬರ್ಯೋದು ಇಷ್ಟು ಸುಲ್ಭಾಂತ ಗೊತ್ತಿರ್ಲಿಲ್ಲ. ಇದರಲ್ಲಿ 'ಮ + ಊ' ಅಕ್ಷರ ಬರ್ಯೋದು
ಹ್ಯಾಗೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2006 - 2:10pm — Rohit

CMS - ಕಂಟೆಂಟ್ ನಿರ್ವಹಣಾ ವ್ಯವಸ್ಥೆ

Rohit's picture

ನಮಸ್ಕಾರ ಅಂಜಲಿಯವರೆ.

ಅಂತರ್ಜಾಲದಲ್ಲಿ ಕಂಟೆಂಟ್ ಅನ್ನು ಸೂಕ್ತವಾಗಿ (ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು) ನಿರ್ವಹಿಸಲು ಬಳಸಲಾಗುವ ತಂತ್ರಾಂಶವೇ ಈ CMS. ಸಂಪದದಂತಹ ಅಂತರ್ಜಾಲ ತಾಣಗಳನ್ನು ರೂಪಿಸಲು ಈ ತಂತ್ರಾಂಶದ ಬಳಕೆ ಅತ್ಯಗತ್ಯ. ಸದ್ಯ ಹಲವಾರು ಮುಕ್ತ CMSಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಅಂತಹವುಗಳಲ್ಲಿ ' ದ್ರುಪಾಲ್ ' ಎಂಬುದು ಬಹು ಜನಪ್ರಿಯವಾದದ್ದು. ಸಂಪದ ಬಳಸುತ್ತಿರುವುದೇ ಇದನ್ನು. ಆದರೆ ಇವುಗಳ ಬಹುಮುಖ್ಯ ಕೊರತೆಯೆಂದರೆ ಇವುಗಳು ಇಂಗ್ಲಿಷ್ ಭಾಷೆಯನ್ನು ಗಮನದಲ್ಲಿರಿಸಿಕೊಂಡು ತಯಾರಾಗಿರುವಂತಹವು. ಇತರೆ ಭಾಷೆಗಳಿಗೆ ಒಗ್ಗಿಸಲು ಮೇಲೆ ತಿಳಿಸಿರುವಂತೆ ಹರಸಾಹಸ ಮಾಡಬೇಕಾಗುತ್ತದೆ.
ಹಾಗೆ ಒಗ್ಗಿಸುವ ಪ್ರಯತ್ನಗಳಂತೂ ಊಹೂ...ನಡೆದೇ ಇಲ್ಲ ಎನ್ನಬಹುದು. ಸಾಲದ್ದಕ್ಕೆ ಕನ್ನಡ ಅಂತರ್ಜಾಲ ತಾಣ ರೂಪಿಸಲು ಯೂನಿಕೋಡಿಗೇ ಮೊರೆಹೋಗಬೇಕು. ಹೀಗಿರುವಾಗ ಕನ್ನಡ ಹಾಗೂ ಇತರ ಯಾವುದೇ ಭಾಷೆಯಲ್ಲಿಯೂ , ಯಾವುದೇ ಎನ್ಕೋಡಿಂಗ್ ಬಳಸಿಕೊಂಡು ಬಹುಭಾಷಾ ತಾಣಗಳನ್ನು ರೂಪಿಸಿ ನಡೆಸುವ ಸೌಲಭ್ಯವನ್ನು ' ಸಂಪೂರ್ಣ ' ಒದಗಿಸುತ್ತದೆ. ಅಲ್ಲದೆ ಇದು ತಂತ್ರಜ್ಞಾನ ಕ್ಷೇತ್ರಕ್ಕಿಂತ ಬಹುಭಿನ್ನವಾದ ಸಾಹಿತ್ಯ ತಾಣ ಕನ್ನಡಸಾಹಿತ್ಯ.ಕಾಂ ನವರು ಆಸ್ಥೆಯಿಂದ ಅಭಿವೃದ್ಧಿಪಡಿಸಿರುವಂತಹದು. ತಂತ್ರಜ್ಞಾನ ಕ್ಷೇತ್ರದಲ್ಲೇ ಸಂಪೂರ್ಣವಾಗಿ ಮುಳುಗಿಹೋಗಿರುವ ಆಸಕ್ತರೂ ಸಹ ಕನ್ನಡ ಭಾಷೆಯ ಅಗತ್ಯಗಳನ್ನು ಕಡೆಗಣಿಸಿರುವುದಕ್ಕೆ, ತಕ್ಕ ಉತ್ತರ ನೀಡುತ್ತದೆ ಈ ತಂತ್ರಾಂಶ.
ಇದರ ಡೆಮೋ ವರ್ಷನ್ ಅನ್ನು ನೋಡಲು ಇಲ್ಲಿಗೊಮ್ಮೆ ಭೇಟಿ ಕೊಡಿ. http://www.sampoorna.kannadasaahithya.com/

ಇದನ್ನು ಬಳಸಲು ಅಗತ್ಯವಿರುವ ಬಳಕೆದಾರರ ಕೈಪಿಡಿಯೂ ಅಲ್ಲಿ ಲಭ್ಯವಿದೆ.

 

ಧನ್ಯವಾದಗಳು,

ರೋಹಿತ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2006 - 5:07pm — hpn

ತಪ್ಪು ಮಾಹಿತಿ ನೀಡದಿರಿ... ಕಾಮೆಂಟುಗಳಲ್ಲಿ ದೂಷಣೆ ಬೇಡ

hpn's picture

ರೋಹಿತ್, "ತಂತ್ರಜ್ಞಾನ ಕ್ಷೇತ್ರದಲ್ಲೇ ಸಂಪೂರ್ಣವಾಗಿ ಮುಳುಗಿಹೋಗಿರುವ ಆಸಕ್ತರೂ ಸಹ ಕನ್ನಡ ಭಾಷೆಯ ಅಗತ್ಯಗಳನ್ನು ಕಡೆಗಣಿಸಿದ್ದಾರೆ" ಎಂದು ಎಲ್ಲರನ್ನೂ generic ಆಗಿ ದೂರುವ ಸಂದರ್ಭದಲ್ಲಿ ಸರಿಯಾದ ಆಧಾರಗಳನ್ನಿಟ್ಟುಕೊಂಡು ಮಾತನಾಡಿದರೆ ಒಳ್ಳೆಯದು. ಸುಮ್ಮನೆ ಎಲ್ಲರನ್ನೂ ದೂರುತ್ತ ನಿಮ್ಮ ದೃಷ್ಟಿಕೋನ ಮುಂದಿಡಬೇಡಿ. ನಿಮ್ಮ ದೃಷ್ಟಿಕೋನವನ್ನು ಮಂದಿಡುವುದಕ್ಕೆ ಬೇರೆಯದ್ದನ್ನು ಸರಿ ಇಲ್ಲ ಒಂದು ಹೇಳಿಯೇ ಮುಂದುವರೆಯುವ necessity ಇದೆಯೆ?

ಇನ್ನು, ನೀವು ದ್ರೂಪಾಲ್ ಬಗ್ಗೆ ತಿಳಿಯದವರಿಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ. "ಇಂಗ್ಲಿಷ್ ಭಾಷೆಯನ್ನು ಗಮನದಲ್ಲಿರಿಸಿಕೊಂಡು ತಯಾರಾಗಿರುವಂತಹವು. ಇತರೆ ಭಾಷೆಗಳಿಗೆ ಒಗ್ಗಿಸಲು ಮೇಲೆ ತಿಳಿಸಿರುವಂತೆ ಹರಸಾಹಸ ಮಾಡಬೇಕಾಗುತ್ತದೆ." ಎಂದೆಲ್ಲ ನಿಮಗೆ ಯಾರು ಹೇಳಿದ್ದು? ನೀವೇ ಕಂಡುಕೊಂಡಿದ್ದೀರೇನು? ಈ ರೀತಿ ಮಾಹಿತಿ ಒದಗಿಸುವ ಮುನ್ನ ಒಮ್ಮೆಯಾದರೂ ಅದನ್ನು ಬಳಸಿ ನೋಡಿದ್ದೀರಾ? ಸುಮ್ಮನೇ ತಪ್ಪು ಮಾಹಿತಿ ನೀಡಿದ್ದೀರಿ.

ಅಂತರಜಾಲದಲ್ಲಿ ಕಂಟೆಂಟ್ ಹಳೆಯ ಎನ್ಕೋಡಿಂಗ್ ನಲ್ಲಿ ಲಭ್ಯವಿರಬೇಕು ಎಂಬುದು ನಿಮ್ಮ ದೃಷ್ಟಿಕೋನ. ಅದನ್ನು ನೇರವಾಗಿ ಎಲ್ಲರ ಮುಂದಿಡಿ - ಅದನ್ನು ಬಿಟ್ಟು ಬೇರೆ ದಾರಿಯಿಲ್ಲ... ಎಲ್ಲೆಲ್ಲೂ ಕತ್ತಲೆಯೇ ಎನ್ನುವ ಆಭಾಸ ಏತಕ್ಕೆ? (ಈ ಬಗ್ಗೆ ಸಾಕಷ್ಟು ಬಾರಿ ಶೇಖರ್ ಪೂರ್ಣರವರೊಂದಿಗೆ ಮಾತನಾಡಿರುವೆ. ಇದರ ಬಗ್ಗೆ ವಿವರವಾಗಿ ಒಮ್ಮೆ ಬರೆಯುವೆ) ಸಂಪದದಲ್ಲಿರುವ ಕಂಟೆಂಟನ್ನು ಬರಹದಲ್ಲಾಗಲಿ, ನುಡಿಯಲ್ಲಾಗಲಿ ಸಿಗುವಂತೆ ಮಾಡುವುದು ಖಂಡಿತ ದ್ರೂಪಾಲ್‌ನಲ್ಲಿ ಕಷ್ಟವಲ್ಲ - ಆದರೆ ಸಂಪದದಲ್ಲಿ ನಮಗೆ ಹಾಗೆ ಮಾಡುವಲ್ಲಿ ಆಸಕ್ತಿಯಿಲ್ಲದರಿಂದ ನಾವು ಇದುವರೆಗೂ ಮಾಡಿಲ್ಲ. ನಿಮಗೆ ಆಸಕ್ತಿಯಿದ್ದು ನಿಮಗದು ಚೆಂದ ಕಂಡರೆ ನೀವು ದ್ರೂಪಾಲ್ ನಲ್ಲಿಯೇ ಮಾಡಬಹುದು.

--

Check my Blog

Kannada wikipedia "ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2006 - 6:24pm — ismail

ನಿಂತ ನೆಲ ನೋಡಿಕೊಳ್ಳೋಣ

ismail's picture

ಟಿ ಕೆ ಎಸ್ ಭಟ್ ಅವರು ಜಿಪಿಎಲ್ ಬಗ್ಗೆ ಬರೆದಿದ್ದರು. ತಾತ್ವಿಕವಾಗಿ ನಾನು ಈ ನಿಲುವನ್ನು ಒಪ್ಪಿಕೊಳ್ಳುತ್ತೇನೆ.

`ಸವಲತ್ತುಗಳು, ಆರ್ಥಿಕವಾಗಿ ಪ್ರಬಲಾಗಿರುವವರ ಸ್ವತ್ತಾಗುತ್ತಿರುವ ಹಿನ್ನೆಲೆಯಲ್ಲಿ, ಬರಿ ಮೆರಿಟೋಕ್ರಸಿಯ ಸ್ವತ್ತಾಗಿರುವ ಹಿನ್ನೆಲೆಯುಳ್ಳ ಭಾರತದಂತಹ ಸಾಮಾಜಿಕ ಪರಿಸರದಲ್ಲಿ, ಇಂತಹುದೇ ಪರಿಸರವಿರುವ ಯಾವುದೇ ದೇಶಕ್ಕೂ, ಈ ಸವಾಲನ್ನು ಎದುರಿಸುವುದು ದಿನೇ ದಿನೇ ಕಠಿಣವಾಗುತ್ತ ಹೋಗುತ್ತಿದೆ' ಎಂದು ಮಾತನಾಡುವಾಗ ನಾವು ನಿಂತಿರುವ ನೆಲವನ್ನು ನೋಡಿಕೊಳ್ಳಬೇಕಾಗುತ್ತದೆ. ಅಂದರೆ ನಾವೂ ಅಂಥ ವ್ಯವಸ್ಛೆಯನ್ನು ಪೋಷಿಸುತ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕಾಗುತ್ತದೆ.

ಪರ್ಯಾಯಗಳನ್ನು ಸೃಷ್ಟಿಸುತ್ತಿರುವ ಶೇಖರ್ ಪೂರ್ಣ ಅವರಿಗೆ ಇದು ಅರ್ಥವಾಗದ್ದೇನೂ ಅಲ್ಲ. ಇಷ್ಟಕ್ಕೂ ಟಿ ಕೆ ಎಸ್ ಭಟ್ ಅವರು ಮುಂದಿಟ್ಟದ್ದು ಒಂದು ಸಲಹೆಯನ್ನು ಮಾತ್ರ. ಇದಕ್ಕೆ ಪ್ರತಿಕ್ರಿಯಿಸುವ ಆತುರದಲ್ಲಿ ರೋಹಿತ್ ಒಂದು ಸೈದ್ಧಾಂತಿಕ ಬದ್ಧತೆಯೊಂದಿಗೆ ನವ ಉದಾರವಾದೀ ಜಾಗತೀಕರಣ ಜ್ಞಾನದ ಪ್ರಸರಣಕ್ಕೆ ಅಡ್ಡಿಯಾಗುವಂತೆ ರೂಪಿಸುತ್ತಿರುವ ನೀತಿಗಳ ವಿರುದ್ಧ ತಮ್ಮದೇ ಆದ ಮಾರ್ಗದಲ್ಲಿ ಸೆಣಸುತ್ತಿರುವ ಮುಕ್ತ ತಂತ್ರಾಂಶ ಕಾರ್ಯಕರ್ತರನ್ನು ದೂಷಿಸಿದ್ದು ಸರಿಯಲ್ಲ.

ಒಂದು ಪರಿಕಲ್ಪನೆ ನಮಗಿಷ್ಟವಾಗಲಿಲ್ಲವಾದರೆ ಅದು ನಮಗೆ ಬೇಡ ಎನ್ನಬಹುದು. ಈ ಮೊದಲೇ ಹರಿಪ್ರಸಾದ್ ನಾಡಿಗ್ ಅವರು ಬರೆದಿರುವಂತೆ ಒಂದು ದೃಷ್ಟಿಕೋನವನ್ನು ಪ್ರತಿಪಾದಿಸಲು ಉಳಿದೆಲ್ಲವೂ ಸರಿ ಇಲ್ಲ ಎಂದು ವಾದಿಸುವುದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 28, 2006 - 11:17am — Rohit

ಧನ್ಯವಾದಗಳು - ದೂಷಣೆಯ ಆಶಯವಿಲ್ಲ

Rohit's picture

ಧನ್ಯವಾದಗಳು ಇಸ್ಮಾಯಿಲ್ ರವರೆ.
ನನ್ನ ಈ ಮೊದಲಿನ ಪ್ರತಿಕ್ರಿಯೆಗಳಲ್ಲಿ [Quote]ಒಂದು ಸೈದ್ಧಾಂತಿಕ ಬದ್ಧತೆಯೊಂದಿಗೆ ನವ ಉದಾರವಾದೀ ಜಾಗತೀಕರಣ ಜ್ಞಾನದ ಪ್ರಸರಣಕ್ಕೆ ಅಡ್ಡಿಯಾಗುವಂತೆ ರೂಪಿಸುತ್ತಿರುವ ನೀತಿಗಳ ವಿರುದ್ಧ ತಮ್ಮದೇ ಆದ ಮಾರ್ಗದಲ್ಲಿ ಸೆಣಸುತ್ತಿರುವ ಮುಕ್ತ ತಂತ್ರಾಂಶ ಕಾರ್ಯಕರ್ತರನ್ನು ದೂಷಿಸಿದ್ದು[/Quote] - ಈ ರೀತಿ ಯಾರತ್ತಲೂ ಬೊಟ್ಟು ಮಾಡಿ ತೋರಿಸಿ ನಾನು ಹೇಳುತ್ತಿರುವುದಷ್ಟೇ ಸರಿ ಎಂದು ಸಾಧಿಸುವುದಷ್ಟೇ ನನ್ನ ಉದ್ದೇಶವಾಗಿರಲಿಲ್ಲ. ನನ್ನ ಆಶಯ ಕೇವಲ "ಅತ್ಯಂತ ಅಗತ್ಯವಿರುವುದು ಆಗಿಲ್ಲ" ಎಂಬುದರ ಬಗ್ಗೆ ಗಮನ ಸೆಳೆಯುವುದಷ್ಟೇ ಆಗಿತ್ತು. ಸಮಾನಾಸಕ್ತರ ನಡುವೆ Reflective ಆದಂತಹ ಒಂದು ಆರೋಗ್ಯಕರ ಸಂವಾದವನ್ನು ಹುಟ್ಟುಹಾಕುವುದಷ್ಟೇ ನನ್ನ ಉದ್ದೇಶವಾಗಿತ್ತು. ಈ ಆಶಯವನ್ನು ಸಮರ್ಥವಾಗಿ ಕಟ್ಟಿಕೊಡುವಲ್ಲಿ ನಾನು ಎಡವಿದ್ದರೆ ಅದಕ್ಕೆ ಕ್ಷಮೆ ಕೋರುತ್ತೇನೆ.
ದ್ರುಪಾಲ್ ನ ವಿಷಯದಲ್ಲೂ ತಪ್ಪು ನುಸುಳಿದೆ. ಕ್ಷಮೆಯಿರಲಿ. ಆದರೆ ನಮ್ಮ ನೆಲದ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ಆದಂತಹ ಪ್ರಯತ್ನ ಇದಲ್ಲ ಎಂಬುದು ನನ್ನ ವಾದವಷ್ಟೇ. ಇದನ್ನು ಸಂಪೂರ್ಣವಾಗಿ ಕನ್ನಡಕ್ಕೆ ಕಸ್ಟಮೈಸ್ ಮಾಡುವುದಾದರೆ ಅದಕ್ಕಿಂತ ಸಂತೋಷದ ವಿಷಯ ಮತ್ತೇನಿದೆ. ಅಂತಹ ಪ್ರಯತ್ನಗಳನ್ನು ನಾನೂ ಸ್ವಾಗತಿಸುತ್ತೇನೆ. ಆದರೆ ಇಲ್ಲಿಯವರೆಗೂ ಅದು ಆಗಿಲ್ಲ ಎಂಬುದು ಸತ್ಯ.
ಇನ್ನು ಜಿಪಿಎಲ್ ವಿಚಾರಕ್ಕೆ ಬಂದಾಗ ಈ ಹಿಂದೆ ಹೇಳಿದಂತೆ ಇದು ಡೆವಲಪರ್‍ಗಳ ಸಮುದಾಯದಲ್ಲಿ ಚರ್ಚಿತವಾಗಬೇಕದ್ದಷ್ಟೇ. ಹಾಗೆಂದೇನು ಜಿಪಿಎಲ್ ನಲ್ಲಿ ಹೊರತರುವ ಯೋಚನೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿಯೇನು ಇಲ್ಲ. ಯಾವುದೇ ರೀತಿಯ "dedicated ಸಮುದಾಯ" ರೂಪುಗೊಳ್ಳದೆ ಇದನ್ನು ತಂದು ಜಿಪಿಎಲ್ ನಲ್ಲಿ ಬಿಡುಗಡೆ ಮಾಡಿದರೆ, ಅದನ್ನಭಿವೃದ್ಧಿಪಡಿಸಿದವರಿಗೂ ನ್ಯಾಯ ಸಲ್ಲುವುದೇ... ಓಪನ್ ಸೋರ್ಸ್ ಕಮ್ಯುನಿಟಿಯ ಕಾರ್ಯಗಳೂ ನಮ್ಮ ಅತ್ಯಂತ ಜರೂರಾದ ಅಗತ್ಯಗಳನ್ನು ಗಮನಕ್ಕೆ ತೆಗೆದುಕೊಳ್ಳುವಲ್ಲಿ ಎಡವಿದರೆ ಅಷ್ಟರ ಮಟ್ಟಿಗೆ Technical Elitismಗೆ ನಾಂದಿ ಹಾಡಿದಂತಲ್ಲವೇ...
Open Office ತಂತ್ರಾಂಶದ ಮೂಲಕ ಕನ್ನಡದಲ್ಲಿ ಕಚೇರಿ ತಂತ್ರಾಂಶವನ್ನು ಅಭಿವೃದ್ಧಿ ಪಡಿಸುವ ಪ್ರಯತ್ನವಾಗಿರುವುದನ್ನು ಗಮನಿಸಿದ್ದೇನೆ. ಅದರ ಬಗ್ಗೆ ನನ್ನ ಅನುಭವವನ್ನೂ ಹೇಳಿಬಿಡುತ್ತೇನೆ. ಸದ್ಯಕ್ಕಂತೂ ಅದರಲ್ಲಿ ಒಂದು ಡಾಕ್ಯುಮೆಂಟ್ ತೆರೆದರೆ ಅದು ನುಂಗುವ ರಿಸೋರ್‍ಸುಗಳು ಇತರ ಯಾವುದೇ ಅಪ್ಲಿಕೇಷನ್ ತೆರೆಯಲು ಬಿಡುವುದಿಲ್ಲ. ನುಡಿ/ಬರಹದ ಹೊರತಾದ ಆಪ್ಷನ್ನುಗಳು ಕನ್ನಡದಲ್ಲಿ ನನಗೀಗಲೂ ಇಲ್ಲ ಎಂಬುದು ಸತ್ಯ. ಇನ್ನು ಯೂನಿಕೋಡಿನ ಕಡೆಗೊಮ್ಮೆ ನೋಡಿದರೆ, ಎದ್ದು ಕಾಣುವ ಫಾಂಟುಗಳ ಕೊರತೆ... ಸಂಪಿಗೆ, ಕೇದಗೆ ಇದ್ದಾವೆ...ಆದರೆ ಅವೂ ಬಗ್ ಗಳಿಂದ ಹೊರತಾಗಿಲ್ಲ. ಅಷ್ಟರ ಮಟ್ಟಿಗೆ ಒಂದು ಬಗ್ ಫ್ರೀ ಫಾಂಟಿನ ಅಗತ್ಯವನ್ನು ಬದಿಗಿರಿಸಿದಂತಲ್ಲವೆ... ಈ ದಿಸೆಯಲ್ಲಿ ಯೋಚನೆ ಹರಿದರೆ ಚೆನ್ನ.

ರೋಹಿತ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2006 - 5:22pm — hpn

ಮ + ಊ ಬಗ್ಗೆ

hpn's picture

ಅಂಜಲಿಯವರೆ, ಮ+ಊ ವಿಂಡೋಸ್ ಎಕ್ಸ್ ಪಿ ಯೊಂದಿಗೆ ಬರುವ ತುಂಗಾ ಫಾಂಟಿನಲ್ಲಿರುವ ಹಲವು ದೋಷಗಳಲ್ಲೊಂದು. ಹೊಸ ತುಂಗಾ ಫಾಂಟ್ ಕೆಲವರ ಬಳಿ ಲಭ್ಯವಿದೆ. ಅದರಲ್ಲಿ ಈ ದೋಷ ಸರಿಪಡಿಸಲಾಗಿದೆ. ನಿಮ್ಮ ಬಳಿ ಸರಿಯಾದ ಲೈಸೆನ್ಸ್ ಇದ್ದಲ್ಲಿ ಆ ಫಾಂಟನ್ನು ನೀವು ಕೇಳಿ ಪಡೆದು ಬಳಸಬಹುದು.

ಹಾಗೆ ಹೊಸ ತುಂಗ ಫಾಂಟು ದೊರಕದಿದ್ದಲ್ಲಿ ಕೇದಗೆ ಫಾಂಟನ್ನ ಬಳಸಿ.

CMS aka Content management system ಬಗ್ಗೆ ಮಾಹಿತಿ ವಿಕಿಪೀಡಿಯದಲ್ಲಿ ಲಭ್ಯವಿದೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2006 - 3:27pm — tksbhat

ಜಿಪಿಎಲ್ ಯಾಕೆ ಬೇಕು?

tksbhat's picture

"committed developers community" ಎಂಬುದು ರೂಪುಗೊಳ್ಳಬೇಕಾದರೆ ಅದನ್ನು ರೂಪಿಸುವ ಕೆಲಸ ಎಲ್ಲೋ ಒಂದು ಕಡೆ ಆರಂಭವಾಗಬೇಕು. ಮ್ಯಾಕ್ ನಲ್ಲಿ ಕನ್ನಡ ಯೂನಿಕೋಡ್ ಕಾಣಿಸಲು ಆರಂಭವಾದದ್ದು ಕನ್ನಡವಲ್ಲೇ ಗೊತ್ತಿಲ್ಲದ ಒಬ್ಬರಿಂದ. ಇದಕ್ಕೆ ಸಂಪದದ ಹರಿಪ್ರಸಾದ್ ನಾಡಿಗ್ ಕೂಡ ಸಹಾಯ ಮಾಡಿದರೆಂದು ಮ್ಯಾಕ್ ಗೆ ಕನ್ನಡವನ್ನು ಅಳವಡಿಸಿದ ನಿಕೋಲಸ್ ಶಾಂಕ್ಸ್ ಬರೆದಿದ್ದಾರೆ. ಯಾವುದನ್ನಾದರೂ ಮುಕ್ತವಾಗಿ ಅಭಿವೃದ್ಧಿ ಪಡಿಸಲು ಹೊರಟರೆ ನಾವು ನಿರೀಕ್ಷಿಸದ ಸ್ಥಳಗಳಿಂದಲೂ ಸಹಾಯ ದೊರೆಯಬಹುದು ಎಂಬುದಷ್ಟೇ ನನ್ನ ಅಭಿಪ್ರಾಯ. ನಾನು ಕನ್ನಡ ಸಾಹಿತ್ಯ ಡಾಟ್ ಕಾಂ ಮಾಡುತ್ತಿರುವ ಪ್ರಯತ್ನವನ್ನು ಸಣ್ಣದು ಎಂದು ಹೇಳುತ್ತಿಲ್ಲ. ಇನ್ನು ದ್ರುಪಾಲ್ ಕಸ್ಟಮೈಸ್ ಮಾಡುವ ವಿಷಯ. ಈಗಿರುವಂತೆಯೇ ದ್ರುಪಾಲ್ ಎಎನ್ಎಸ್ಐ ಅಕ್ಷರಗಳನ್ನು ಯಾವುದೇ ತೊಂದರೆಯಿಲ್ಲದೆ ಬಳಸುತ್ತದೆ. ಎರಡನ್ನೂ ಒಟ್ಟಿಗೆ ಹಾಕುವುದಕ್ಕೆ ಕೆಲಮಟ್ಟಿಗಿನ ಕೆಲಸ ಮಾಡಬೇಕಾಗುತ್ತದೆ. ಆ ತಾಂತ್ರಿಕ ವಿವರಗಳನ್ನು ಬರೆಯುವುದಕ್ಕೆ ಇದು ವೇದಿಕೆಯಲ್ಲ ಎಂದುಕೊಳ್ಳುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2006 - 4:29pm — Rohit

ಯೋಗ್ಯತೆ ಕಡಿಮೆಯೇ

Rohit's picture

ಪ್ರತಿಕ್ರಿಯೆಗೆ ಧನ್ಯವಾದಗಳು ಭಟ್ ರವರೆ.

ತಮ್ಮ ಅಭಿಪ್ರಾಯ ಸೂಕ್ತವಾಗಿಯೇ ಇದೆ. ಆದರೆ ಒಂದು ವಿಷಯ ಗಮನಿಸಿ, ಈ ವಿಚಾರದ ಕುರಿತು ವಿಚಾರವಿಮರ್ಶೆ ನಡೆಯಬೇಕಿರುವುದ ಆಸಕ್ತ ಡೆವಲಪರ್‍ಗಳ ನಡುವೆಯೇ. ಆಸಕ್ತರ ನಡುವೆ ಸಂಪರ್ಕಕ್ಕೆ ಈ-ಮೈಲ್ ವಿಳಾಸವು ಲಭ್ಯವಿದೆ. ಅಲ್ಲೇಕೆ ಬರೆಯಬಾರದು....?
ಗಮನಿಸಿ ನನ್ನ ಹಿಂದಿನ ಪತ್ರದಲ್ಲಿ ನಾನು ಯಾರನ್ನು ಬೊಟ್ಟು ಮಾಡಿತೋರಿಸುವ ಪ್ರಯತ್ನ ಮಾಡಿಲ್ಲ. ಬದಲಿಗೆ ನಮ್ಮ ಒಟ್ಟೂ ಕನ್ನಡ ತಂತ್ರಜ್ಞರ ನಿರಾಸಕ್ತಿ, ಉಪೇಕ್ಷೆಯ ಕಡೆಗೆ ಬೆಳಕು ಹರಿಸಲು ಪ್ರಯತ್ನಿಸಿದ್ದೆ.
ಇನ್ನು windows 98/2000 ಬಗ್ಗೆ ಶುರುವಾಗಿದ್ದ ತಮ್ಮ ಅನಿಸಿಕೆಗಳು ಒಮ್ಮೆಲೇ ಮ್ಯಾಕ್ ನತ್ತ ಹಾರಿದ್ದು ನೋಡಿ ಆಶ್ಚರ್ಯವಾಯಿತು. ಮ್ಯಾಕ್ ನ ಬಳಕೆ ಈಗಿನ ಸಂದರ್ಭದಲ್ಲಿ ಕನ್ನಡಿಗರಲ್ಲಿ ಎಷ್ಟಿದೆ. ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಲ್ಲವೆ....ಅತ್ಯಂತ ಅಗತ್ಯವಿರುವುದನ್ನು ಕಡೆಗಣಿಸಿ ಜುಟ್ಟಿಗೆ ಮಲ್ಲಿಗೆ ಹೂವು ಎಂದದಾದರೆ ಏನು ಪ್ರಯೋಜನ...
ಇನ್ನು ದ್ರುಪಾಲ್ ನ ವಿಷಯಕ್ಕೆ ಬರೋಣ. ದ್ರುಪಾಲ್ ಸಹ ಮುಕ್ತವಾಗಿ ಲಭ್ಯವಿರುವ ಆಸಕ್ತರಿಂದ ರೂಪಿಸಲ್ಪಟ್ಟಿರುವ ಒಂದು CMS. ಗೆದ್ದತ್ತಿನ ಬಾಲವನ್ನು ಹಿಡಿಯುವಂತೆ ಕೇವಲ ಇಂಗ್ಲೀಷ್ ಬಳಕೆದಾರರನ್ನು ಗಮನದಲ್ಲಿರಿಸಿಕೊಂಡು ಅಂತಹ ಒಂದು ವರ್ಗದವರಿಂದ ರೂಪಿಸಲ್ಪಟ್ಟಿರುವ ತಂತ್ರಾಂಶ ಅದು. ಅಲ್ಲದೆ ಅದನ್ನು ಕಸ್ಟಮೈಸ್ ಮಾಡಿಕೊಳ್ಳಲೂ ಇನ್ನೂ ಯಾವ ಪ್ರಯತ್ನಗಳೂ ಇಲ್ಲ. ಕನ್ನಡಕ್ಕೆ ಬೇಕಾದ ತಂತ್ರಾಂಶಗಳನ್ನು ರೂಪಿಸಿ ಅಭಿವೃದ್ಧಿ ಪಡಿಸುವಲ್ಲಿ ಕನ್ನಡಿಗರು ಅಶಕ್ತರೇ....ಮತ್ತೊಬ್ಬರು ತಮ್ಮ ಅನುಕೂಲಕ್ಕೆ ರೂಪಿಸಿಕೊಂಡ ತಂತ್ರಾಂಶದೊಳಕ್ಕೆ ಕನ್ನಡವನ್ನು ತುರುಕುವ ಅನಿವಾರ್ಯತೆಗೆ ನಮ್ಮನ್ನು ನಾವೇಕೆ ದೂಡಿಕೊಳ್ಳಬೇಕು....
ಇಂತಹ ಪ್ರಸ್ತುತ ಸನ್ನಿವೇಶದಲ್ಲಿ ' ಸಂಪೂರ್ಣ ' ಒಂದು ಯಶಸ್ವಿ ಗುರುತರ ಪ್ರಯತ್ನ ಎಂಬ ವಿಚಾರದತ್ತ ತಮ್ಮ ಹಾಗೂ ಇತರ ಆಸಕ್ತ ಓದುಗರ ಗಮನ ಸೆಳೆಯಲಷ್ಟೇ ಈ ಮೇಲಿನ ಪತ್ರಗಳನ್ನು ಇಲ್ಲಿ ಹಾಕಿದ್ದು.

ವಿಶ್ವಾಸಿ,
ರೋಹಿತ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2006 - 6:32pm — tksbhat

ಇದೆಂಥ ಚರ್ಚೆ?

tksbhat's picture

ನಾನು ಒಂದು ತಂತ್ರಾಂಶ ಅಭಿವೃದ್ಧಿಯ ಪರಿಕಲ್ಪನೆಯ ಬಗ್ಗೆ ಹೇಳಿದ್ದೆ. ಇದರಿಂದ ನಮಗೆ ದೊರೆಯಬಹುದಾದ ನೆರವಿನ ಸಾಧ್ಯತೆಗಳು ಎಷ್ಟು ವಿಶಾಲವಾದದ್ದು ಎಂಬುದನ್ನು ಮ್ಯಾಕ್ ನ ಉದಾಹರಣೆಯಲ್ಲಿ ತಿಳಿಸಿದ್ದೆ.

ನನ್ನ ಮಾತುಗಳಷ್ಟನ್ನೂ ನೀವು ನೇತ್ಯಾತ್ಮಕವಾಗಿ ಪರಿಗಣಿಸಿ ಚರ್ಚೆಯನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದೀರಿ. ದಯವಿಟ್ಟು ಕ್ಷಮಿಸಿ ನನಗೆ ಇಂತಹ ಚರ್ಚೆಯಲ್ಲಿ ನಿಜಕ್ಕೂ ಆಸಕ್ತಿ ಇಲ್ಲ. ಈ ಚರ್ಚೆಯ ಥ್ರೆಡ್ ನಲ್ಲಿ ಇರುವ ನನ್ನ ಅಭಿಪ್ರಾಯಗಳನ್ನು ಕಿತ್ತು ಹಾಕಬೇಕೆಂದು ನಾನು ಸಂಪದ ನಿರ್ವಾಹಕರಲ್ಲಿ ಕೇಳಿಕೊಳ್ಳುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಸಾಹಿತ್ಯಡಾಟ್‌ಕಾಂ ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಲಿದೆ
  • "ಬರಹ" ತಂತ್ರಾಂಶದ ಶೇಷಾದ್ರಿವಾಸು ಚಂದ್ರಶೇಖರ್‌ರವರೊಡನೆ ಒಂದು ಸಂವಾದ ಹಾಗು ಅವರಿಗೆ `ನಲ್ನುಡಿಗಳ ಸತ್ಕಾರ'' ಕಾರ್ಯಕ್ರಮ
  • ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಹಾಸನ - ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಗೋಷ್ಠಿ
  • ಕನ್ನಡ ಸಾಹಿತ್ಯ.ಕಾನ ಕಾರ್ಯಕ್ರಮ
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಬಗ್ಗೆ ನನ್ನ ಲೇಖನ
Syndicate content

ಲೇಖಕರು

Rohit's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
  • ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?
  • ಮದುವೆಯಾಗಿ ನಿಮ್ಮ ಬದುಕು ಬದಲಾಯಿತೆ?ಹೇಗೆ?
  • ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?
  • ದಿನಕ್ಕೊಂದು ಪದ
  • ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?
  • ತೋಡ ಪ್ಯಾರ್‍ ತೋಡ ಮ್ಯಾಜಿಕ್ ಎಂಬ ಮಕ್ಕಳ ಹಿಂದಿ ಸಿನಿಮದಲ್ಲಿ ಈ ಹಾಡು..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಹಿಗ್ಗಿದ ಮತ್ತು ಕಹಿ ನುಡಿಗಳು ಒಂದು ಅಳ್ಳಕ ಗುರಿಯನ್ನು ತೋರುವುದು.
    July 4, 2008 - 12:16pm
  • mahesha
    ಉ: ಕನ್ನಡ ಕಾದಂಬರಿ ಮತ್ತು ಕಥಾನಕ ಸಿದ್ಧಾಂತಗಳು - ಪೀಠಿಕೆ
    July 4, 2008 - 12:16pm
  • mahesha
    ಉ: ದನಿಯಱಿವು
    July 4, 2008 - 12:13pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:11pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:11pm
  • kannadakanda
    ಉ: ದನಿಯಱಿವು
    July 4, 2008 - 12:09pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:01pm
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:58am
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:47am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:43am
ಇನ್ನಷ್ಟು


ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator