ಎಲ್ಲರಿಗೂ ನನ್ನ ನಮಸ್ಕಾರಗಳು
ನಾನು ಸಂಪದದ ಹೊಸ ಸದಸ್ಯ. ನಾನು ಸಾಫ಼್ಟ್-ವೇರ್ ನಲ್ಲಿ ಕೆಲಸ ಮಾಡುತ್ತೇನೆ. ಇಂದು ಐ.ಇ.೬.೦ ನಲ್ಲಿ ಕನ್ನಡ ಅಕ್ಶರಗಳು ಒಳ್ಳೇ ಮುತ್ತಿನಂತೆ ಹೊಳೆಯುತ್ತಿರೋದನ್ನ ನೋಡಿ ನಾನು ಯಾಕೆ ಕನ್ನಡದಲ್ಲಿ ಕನ್ನಡಿಗರೊಂದಿಗೆ ಇಂಟರ್-ನೆಟ್ ಎಂಬ ಮಾಯಾಜಾಲದಲ್ಲಿ ಅನಿಸಿಕೆಗಳನ್ನು ಹಂಚಿಕೊಳ್ಳಬಾರದು? ಅನಿಸಿತಾದ್ದರಿಂದ ಸಂಪದಕ್ಕೆ ಸೇರಿದೆ. ಮುಂದೆ ನಮ್ಮ ಸಂಪದ ಕನ್ನಡಿಗರ ಅಚ್ಚುಮೆಚ್ಚಿನ ಇ-ತಾಣ ಆಗೊದರಲ್ಲಿ ಅನುಮಾನಾನೇ ಇಲ್ಲ. ಕನ್ನಡಿಗರು ನಾವು ಕನ್ನಡಾಭಿಮಾನವ ಬೆಳೆಸಿಕೊಳ್ಳೋಣ. ಧನ್ಯವಾದಗಳೊಂದಿಗೆ ನಿಮ್ಮ, ಸಂಗನಗೌಡ.

- Login or register to post comments
- 920 hits
- Email this forum





RSS:
ಉ: ಎಲ್ಲರಿಗೂ ನನ್ನ ನಮಸ್ಕಾರಗಳು
ಗೌಡ್ರೆ.. ನನಗು ಹಾಗೆಯೆ ಅನಿಸಿತು. ಕನ್ನಡ ಅಕ್ಷರಗಳು ಒಬ್ಬ ಕನ್ನಡಿಗನ ಕಣ್ಣುಗಳಿಗೆ ಸಂತಸ ಮತ್ತು ಶೀತಲ ಅನುಭವಗಳನ್ನು ತಂದು ಕೊಡುತ್ತವೆ.
ಅದನ್ನು ಕಂಡೇ ನಾನು ಕೂಡ ಸಂಪದ ಜಾಲಕ್ಕೆ ಸೇರಿಕೊಂಡೆ.