ಎರಡು ಹನಿಗಳು....
---ಆಶಯ--
ಪಯಣ ಸಾಗುತಲಿರಲಿ ಗುರಿಯ ಕಡೆಗೆ,
ವಿನಯ ಸೂಸುತಲಿರಲಿ ಕೊನೆಯವರೆಗೆ,
ತಾಳ್ಮೆ ತಪ್ಪದೆ ಇರಲಿ, ಜಯವೆ ನಿನಗೆ.
---ಸಾಮ್ಯ----
ಬೆಳ್ಳಿ ಬೆಳದಿಂಗಳಿಗೆ ಕಾಲಿಡಬೇಡಾ ಹುಡುಗಿ..
ನಿನಗೂ ಅದಕೂ ಸಾಮ್ಯವೆ ಎಲ್ಲಾ,
ಸಾಕಾದೀತೂ ಹುಡುಕಿ!

- Login or register to post comments
- 932 hits
- Email this forum





RSS:
ಹನಿ ಹನಿಗೂಡಿದ್ರೆ ಹಳ್ಳ
ತೆನೆ ತೆನೆ ಗೂಡಿದ್ರೆ ವಳ್ಳ ಎನ್ನುಂತೆ.
ನಿಮ್ಮ ಭಂಡಾರದಲ್ಲಿರಬಹುದಾದ ಹನಿಗಳನ್ನು ಎರಡಕ್ಕೇ ಸೀಮಿತಗೊಳಿಸದಿರಿ ಎಂಬುದು ನನ್ನ ಕೋರಿಕೆ.
ಸಂಪದದ ಚಿಪ್ಪಿನೊಳಗೆ
ಪ್ರಿಯ ಶ್ರೀನಿಧಿಯವರೇ,
ಹನಿಗಳೆರಡೂ ಚೆನ್ನಾಗಿವೆ; ಹೀಗೆಯೇ ಬರೆಯುತ್ತಿರಿ. ಹನಿಯೆಂದರೆ ಕಾವ್ಯದಲ್ಲಿ ನೆನಪಾಗುವುದು ಈ ಸುಭಾಷಿತ:
ಕಾದ ಕಬ್ಬಿಣದ ಮೇಲೇರಿದ ಹನಿಯ ಗುರುತೂ ಉಳಿಯದು
ಅದೇ ತಾವರೆಯ ಎಲೆಯೇರಿ ಮುತ್ತಂತೆ ತೋರುವುದು
ಬಿದ್ದು ಸ್ವಾತಿಯಲಿ ಕಡಲ ಚಿಪ್ಪಿನೊಳದೇ ಮುತ್ತಾಗುವುದು
ಅಧಮಮಧ್ಯಮೋತ್ತಮ ಗುಣಗಳು ಬಹುಶಃ ಸಹವಾಸದಿಂದಾಗುವುವು!
(ಭರ್ತೃಹರಿಯ ಸಂಸ್ಕೃತ ಸುಭಾಷಿತದ ಕನ್ನಡೀಕರಣ)
ನಿಮ್ಮ ಹನಿಗಳು ಹೀಗೆಯೇ ಸಂಪದದ ಚಿಪ್ಪಿನೊಳಗೆ ಬೀಳಲೆಂದು ಆಶಿಸುತ್ತೇನೆ.
ನಿಮ್ಮವ
ಬೆನಕ