20
June
2013

ಸದಸ್ಯರ ಗಮನಕ್ಕೆ: ಹೊರಗಿನ ಕಂಟೆಂಟ್ ತಂದು ಹಾಕದಿರಿ

March 11, 2009 - 2:10am
ನಿರ್ವಹಣೆ

ಇತ್ತೀಚೆಗೆ ಸಂಪದದಲ್ಲಿ "ಮಿಂಚಂಚೆಯಲ್ಲಿ ಬಂದದ್ದು" ಎನ್ನುತ್ತ ಹೊರಗಿನಿಂದ ತಂದ ಮಾಹಿತಿ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಹೊರಗಿನಿಂದ ಕಾಪಿ ಮಾಡಿದ ಯಾವುದೇ ಕಂಟೆಂಟ್ ಕೂಡ ಸಂಪದದಲ್ಲಿ ಹಾಕುವಂತಿಲ್ಲ. ಹಾಗೆ ಹಾಕಿದ ಪುಟಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ಪ್ರಕಟಣೆಯಿಂದ ತೆಗೆದುಹಾಕಲಾಗುವುದು. ಚಿತ್ರ ಪುಟಗಳಿಗೆ ಸೂಕ್ತ ಕ್ರೆಡಿಟ್ಸ್ ಚಿತ್ರ ಪುಟಗಳನ್ನು ಅಪ್ಲೋಡ್ ಮಾಡುವಾಗ ಚಿತ್ರ ಯಾರದ್ದು? ಎನ್ನುವುದನ್ನು ಓದುಗರಿಗೆ ತಿಳಿಸುವ ಕುರಿತು ಸದಸ್ಯರ ಗಮನವಿದ್ದರೆ ಉತ್ತಮ. ಹೊರಗಿನಿಂದ ತೆಗೆದುಕೊಂಡ ಚಿತ್ರವಾದರೆ ಅದನ್ನು ಬಳಸಲು ಅನುಮತಿ ಇರುವುದನ್ನು ಮೊದಲು ಖಾತ್ರಿಪಡಿಸಿಕೊಳ್ಳಿ. ಚಿತ್ರವನ್ನು ಅಪ್ಲೋಡ್ ಮಾಡುವಾಗ ಅದನ್ನು ತೆಗೆದವರಿಗೆ ಸೂಕ್ತ ಕ್ರೆಡಿಟ್ಸ್ ಕೊಡುವುದು ಮರೆಯದಿರಿ. ಕ್ರೆಡಿಟ್ಸ್ ಬರೆಯುವಾಗ "ಗೂಗಲ್ ನಿಂದ ಪಡೆದದ್ದು" ಎಂದೆಲ್ಲ ಇದ್ದರೆ ಯಾವುದೇ ಮುನ್ಸೂಚನೆಯಿಲ್ಲದೆ ಚಿತ್ರವನ್ನು ಅಳಿಸಿಹಾಕಲಾಗುತ್ತದೆ. ಹೊರಗಿನಿಂದ ತಂದು ಹಾಕಿದ, ನೇರ cut/paste ಮಾಡಿದ ಮಾಹಿತಿಯಿಂದ ಸಂಪದಕ್ಕೆ ತೊಂದರೆಯಾಗುತ್ತದೆ ಎಂಬುದು ಸದಸ್ಯರ ಗಮನದಲ್ಲಿರಲಿ. - ನಿರ್ವಹಣೆಯ ಪರವಾಗಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

Submitted by srivathsajoshi on
ಸಂಪದ ನಿರ್ವಹಣಾ ತಂಡದಿಂದ ಬಂದಿರುವ ಇದು ಒಳ್ಳೆಯ, ರಚನಾತ್ಮಕ ಸೂಚನೆ. ಸಂಪದ ಸದಸ್ಯರೆಲ್ಲರೂ ಇದನ್ನು ಪಾಲಿಸೋಣ. ==== ತತ್‌ಕ್ಷಣಕ್ಕೆ ನೆನಪಾಗುತ್ತಿರುವ ಎರಡು ಹೋಲಿಕೆಗಳು- ೧) "ಆನು ದೇವಾ ಹೊರಗಣವನು...." ೨) ರೆಸ್ಟೋರೆಂಟ್‌ಗಳಲ್ಲಿ/ಚಿತ್ರಮಂದಿರಗಳಲ್ಲಿ ಬೋರ್ಡ್: "ಹೊರಗಿನ ತಿಂಡಿ ತಂದು ತಿನ್ನುವುದನ್ನು ನಿಷೇಧಿಸಲಾಗಿದೆ" :-) ====

Submitted by Vyasraj on
ಒಳ್ಳೆ ಯೋಚನೆ ... ಹಾಗೆಯೇ ಇದು ಸುಲಭವಾಗಿ ಎಲ್ರಿಗೂ ಕಾಣ್ಸೋ ಥರ ಲಿಂಕ್ ಕೊಡ್ತೀರಾ ? ಚರ್ಚೆ,ಸಮುದಾಯ ಮುಂತಾದ ವಿಭಾಗದ ಲೇಖನಗಳು/ಮಾಹಿತಿಗಳು ಬೇಗ ಕಾಣ್ಸೋದೇ ಇಲ್ಲ ...

Submitted by manjunath s reddy on
ಒಳ್ಳೆಯ ಸೂಚನೆ... ಹಾಗೆಯೇ ಹಳೆಯ ಪ್ರತಿಕ್ರಿಯೆಗಳನ್ನು ಮತ್ತೆ ಮತ್ತೆ ನೆನಪಿಸಿ ನಿಂದಿಸುವ ಪ್ರತಿಕ್ರಿಯೆಗಳನ್ನು ಅಳಿಸಿ ಹಾಕಿ...

Submitted by nkumar on
ಮಾನ್ಯ ನಿರ್ವಾಹಕರಿಗೆ ಎರಡು ಪ್ರಶೆಗಳು. ೧)ಕೆಲವು ಆಂಗ್ಲ ಬರಹಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಪ್ರಕಟಿಸಬೇಕೆಂದಿದ್ದೇನೆ. ಮೂಲ ಬರಹಗಾರರ ಅನುಮತಿಯನ್ನು ಪಡೆದಿದ್ದೇನೆ (ತರ್ಜುಮೆ ಮಾಡಲು ಮತ್ತು ಪ್ರಕಟಿಸಲು). ಇಂತಹ ಬರಹಗಳನ್ನು ಪ್ರಕಟಿಸಬಹುದೇ? ಬೇಕಾದರೆ ಅವರೊಟ್ಟಿಗೆ ನಡೆಸಿದ ಮಿಂಚೆ ಸರಣಿಯನ್ನು ಲಗ್ಗತ್ತಿಸುತ್ತೇನೆ. ೨) ಚಿತ್ರಗಳನ್ನು ಮೂಲ ಛಾಯಾಗ್ರಹಕರ ಅನುಮತಿ ಪಡೆದು ಪ್ರಕಟಿಸಬಹುದೇ? ----------------------------------------- ನೀವು ಹೇಳಿದಂತೆ ನನ್ನೆಲ್ಲಾ ಬರಹಗಳ ಚಿತ್ರವನ್ನು ಸ್ವಂತ ಚಿತ್ರಗಳಿಂದ ಆದಷ್ಟು ಬೇಗ ಬದಲಾಯಿಸುತ್ತೇನೆ. ಧನ್ಯವಾದಗಳು ನಂದಕುಮಾರ

Submitted by vikashegde on
ಹೊರಗಿನ ಕಂಟೆಂಟ್ ಯಥಾವತ್ತಾಗಿ ತಂದು ಹಾಕುವ ಬಗ್ಗೆ ಅವರು ಹೇಳಿದ್ದಷ್ಟೆ. ನಿಮ್ಮ ಆಂಗ್ಲ ತರ್ಜುಮೆ ಪ್ರಕಟಣೆಗೆ ಯಾವ ಅಡ್ಡಿಯೂ ಇಲ್ಲ ಅಂದುಕೊಳ್ಳುತ್ತೇನೆ.

Submitted by ajgm on

ಗೆಳಯರೆಲ್ಲರಿಗೂ ನನ್ನ ನಮಸ್ಕಾರಗಳು. ನಾನು ಈ "ಸಂಪದ"ಗೆ ಹೊಸಬ. ಈ "ಸಂಪದ"ದದಲ್ಲಿ ನಾವು ಬರೆಯುವ ಕಥೆ, ಕವನ, ಲೇಖನ, ಬ್ಲಾಗ್ ಬರಹ, ಇತ್ಯಾದಿಗಳ ಜೊತೆ ನಮಗೆ ಇಷ್ಟವಾದ ಕವನಗಳನ್ನು(ದೊಡ್ಡ ದೊಡ್ಡ ಕವಿಗಳು ಬರೆದಿರುವ ಕವನಗಳು), ಫಿಲಂ ಡೈಲಾಗ್, ನುಡಿ ಮುತ್ತು, ಇತ್ಯಾದಿಗಳನ್ನೂ ಪ್ರಕಟಿಸಬಹುದೇ? ಇಲ್ಲಿ ನನ್ನ ಉದ್ದೇಶ ಇಷ್ಟೇ. ನನ್ನದೊಂದು ಹವ್ಯಾಸವಿದೆ. ನನಗೆ ಇಷ್ಟ ಆಗುವ ಕವನಗಳು, ಫಿಲಂ ಡೈಲಾಗ್ ಗಳು, ನುಡಿ ಮುತ್ತುಗಳು ಇತ್ಯಾದಿಗಳನ್ನ ಒಂದು ಕಡೆ ಸಂಗ್ರಹ ಮಾಡಬೇಕು ಎಂದು. ಇದಕ್ಕೆ ಅನುಮತಿ ಇದೆಯೇ?
-ಇಂತಿ ನಿಮ್ಮ ಪ್ರೀತಿಯ,
ಜಿ.ಎಂ.

Submitted by Prabhu Murthy on

ಸುಸ್ವಾಗತ! ಸಂಪದನಿರ್ವಾಹಕರು ಗಮನಕ್ಕೆ ತಂದಿರುವ ಈ ವಿಶಯವನ್ನು ನನ್ನ ಗಮನಕ್ಕೆ ತಂದಿದ್ದಕ್ಕೆ ಮೊದಲು ನಿಮಗೆ ಧನ್ಯವಾದಗಳು.

ನಿರ್ವಾಹಕರ ಸಲಹೆ ಮತ್ತು ಎಚ್ಚರಿಕೆ ಸೂಕ್ತವಾಗಿವೆ. ಸಂಪಾದಕೀಯ ಕೆಲಸ ಮಾಡುವಾಗ ನಾನೂ ಈ ವಿಶಯಕ್ಕೆ ಗಮನವನ್ನು ಕೊಟ್ಟಿದ್ದೇನೆ.
ಈ ವಿಶಯದಲ್ಲಿ ಕಾನೂನಿನ ತಜ್ಞನಲ್ಲ. ಅಲ್ಲಿ ಇಲ್ಲಿ ಅವಶ್ಯಕತೆಯಿದ್ದಷ್ಟು ಓದಿಕೊಂಡಿದ್ದೇನೆ. ನನ್ನ ಗ್ರಹಿಕೆಯಲ್ಲಿ ಕುಂದು-ಕೊರತೆಯಿರಬಹುದು. ಆದರೂ ನಿಮ್ಮ ಪ್ರಶ್ನೆಗೆ ಚಿಕ್ಕದಾದ ಉತ್ತರ:
ನೀವು ತಿಳಿಸಿರುವಂತೆ ಸಂಗ್ರಹ ಮಾಡಿಕೊಳ್ಳುವುದಕ್ಕೂ ಸಂಪದಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಹಾಗೆ ಸಂಗ್ರಹಿಸಿದ್ದನ್ನು ಸಂಪದದಲ್ಲೇ ಆಗಲೀ ಅಥವಾ ಬೇರೆ ತಾಣಗಳಲ್ಲೇ ಆಗಲೀ ನೀವು ಹಾಕುವ ಮೊದಲು copyright ಮತ್ತು fair-use ಕಾನೂನು ಹಾಗೆ ಹಾಕುವುದಕ್ಕೆ ಬಾಧಕವೇ ಎಂದು ವಿಚಾರ ಮಾಡಬೇಕು. ಈ ಕೆಳಗಿನಂತಹ ಕೆಲವು ತಾಣಗಳಲ್ಲಿ (ಅಮೇರಿಕಾದ) copyright ಮತ್ತು fair-use ಕಾನೂನಿನ ಕರಿತ ಮಾಹಿತಿಯನ್ನು ಪಡೆಯಬಹುದು.
http://fairuse.stanf...
http://www-sul.stanf...

ಕಾಪಿ-ರೈಟ್ ಆಗಿರುವ ಕೃತಿಯನ್ನು ಅದರ ಸ್ವಾಮ್ಯವನ್ನು ಪಡೆದಿರುವವರ ಅಪ್ಪಣೆ ಪಡೆಯದೆ ಯಾವುದೇ ವಿಧದಲ್ಲೂ ಪ್ರತಿಯನ್ನು ಮಾಡಬಾರದು ಮತ್ತು ಪ್ರಕಟಿಸಬಾರದು. ಹಾಗೆ ಮಾಡಿದಕ್ಕೆ ಪ್ರತಿಯಾಗಿ ಸ್ವಾಮ್ಯವನ್ನು ಪಡೆದಿರುವವರು ಕಾನೂನಿನ ಪ್ರಕಾರ ಕ್ರಮ ಕೈಗೊಂಡರೆ ಯಾವುದೇ ರಕ್ಷಣೆ ಇಲ್ಲದಾಗಬಹುದು.
ಆದರೆ ಕಾಪಿ-ರೈಟ್ ಆಗಿರುವ ಕೃತಿಯ ಸಣ್ಣ ತುಣುಕುಗಳನ್ನು (excerpts) ನಿಮ್ಮ ಸ್ವಂತ ಕೃತಿಯಲ್ಲಿ ಬಳಸಿಕೊಳ್ಳಬಹುದು. ಆದರೆ ಹಾಗೆ ಮಾಡಿರುವುದನ್ನು (ಕೃತಿಚೌರ್ಯ ಆಗದಿರಲು) cite ಮಾಡಬೇಕು. ಆಗ ಅದು fair-use ಆಗುತ್ತದೆ. ಲಾಭದ ಅಪೇಕ್ಷೆಯಿರದೆ ಶೈಕ್ಷಣಿಕ ಉದ್ದೇಶಕ್ಕೆ ಇಡೀ ಕೃತಿಯನ್ನು ಬಳಸಬಹುದು. ಅಲ್ಲೂ ಕೆಲವು ಸೂಕ್ಷ್ಮವಾದ ಕಾನೂನಿನ ವಿಶಯಗಳಿರುತ್ತವೆ. ಯಾವಾಗ fair-use ಆಗುತ್ತದೆ, ಯಾವಾಗ ಆಗುವುದಿಲ್ಲ ಎಂದನ್ನು ಕೆಲವು ತಾಣಗಳಲ್ಲಿ ಪಟ್ಟಿಮಾಡಿರುವುದನ್ನು ಓದಿರುವ ನೆನೆಪಿದೆ. ಆದರೆ ಆ ತಾಣಗಳು ಸಧ್ಯಕ್ಕೆ ಸಿಗುತ್ತಿಲ್ಲ.

ಕೆಲವು ವಿಶಯಗಳು:
೧. ಕಾಪಿ-ರೈಟ್ ಅನ್ವಯಿಸುವುಸುದು ಯಾವುದೇ ವಿಚಾರದ/ತತ್ತ್ವದ ವ್ಯಕ್ತರೂಪಕ್ಕೆ (expression) ಮಾತ್ರ. ಮೂಲದ ಅವ್ಯಕ್ತ ವಿಚಾರ /ತತ್ತ್ವ ಕಾಪಿ-ರೈಟ್‌ಗೆ ಹೊರತಾಗಿರುತ್ತದೆ. ಅಂದರೆ ಯಾವುದೋ ಒಂದು ವಿಚಾರವನ್ನು ಮತ್ತೊಬ್ಬರ ಕೃತಿಯಿಂದ ಗ್ರಹಿಸಿ ಅದನ್ನು ನಿಮ್ಮದೇ ಸ್ವಂತವಾದ ರೀತಿಯಲ್ಲಿ ವ್ಯಕ್ತಪಡಿಸಲು ಅಡ್ಡಿಯಿಲ್ಲ. ಇದು obvious ಎನಿಸಿದರೂ ಕೆಲವೊಮ್ಮೆ ನೆನಪಿಸಿಕೊಂಡರೆ ಏನೂ ತೊಂದರೆಯಿಲ್ಲ :-)
೨. ಕಾಪಿ-ರೈಟ್ ಶಾಶ್ವತವಲ್ಲ (ಜೀವನವೇ ನಶ್ವರ... ). ಸಧ್ಯಕ್ಕೆ ಕೃತಿಯೊಂದರ ಕಾಪಿ-ರೈಟ್ ೬೦ವರ್ಷಕ್ಕೆ ಮುಗಿದುಹೋಗುತ್ತದೆ. ನಂತರ ಆ ಕೃತಿಯು public-domainಗೆ ಸೇರಿಹೋಗುತ್ತದೆ.
೩. public-domainಗೆ ಸೇರಿದ್ದರೂ ಕೃತಿಚೌರ್ಯವಾಗದಂತೆ ಬಳಸಬೇಕು

ಮುಖ್ಯವಾಗಿ copyright ಮತ್ತು fair-use ಇವುಗಳ ವಿಶಯದಲ್ಲಿ ಕೊಂಚ ತಿಳುವಳಿಕೆ ಪಡೆದರೆ, ಹಾಗೆ ಪಡೆಯುತ್ತಾ ಆ ವಿಧಿ-ನಿಷೇಧಗಳ ಮೂಲ ಆಶಯವನ್ನು ಗ್ರಹಿಸಿ, ಪಾಲಿಸಿದರೆ ಇಂಟರ್‌ನೆಟ್‌ನಲ್ಲಿ ಸರ್ವೇಸಾಮಾನ್ಯವಾಗಿರುವ copy-paste ಪಿಡುಗಿಗೆ ಕಡಿವಾಣ ಹಾಕಬಹುದು.

ಪ್ರಭು