ಈ-ಮೈಲ್ ನಿಂದ ಬ್ಲಾಗ್ ಪ್ರಕಟಣೆ!!!
ಈ ಪ್ರಶ್ನೆಯನ್ನು feedback section ನಲ್ಲಿ ಕೇಳಬೇಕೆಂದುಕೊಂಡೆ. ಆದರೆ, ಅದೇ ಪ್ರಶ್ನೆಯನ್ನು ಇಲ್ಲಿ ಕೇಳಿದರೆ ಎಲ್ಲ ಸದಸ್ಯರೂ ಭಾಗವಹಿಸುತ್ತಾರೇನೋ ಎಂದುಕೊಂಡು ಇಲ್ಲಿಡುತ್ತಿದ್ದೇನೆ.
ಯಾವಾಗಲೂ ಸಂಪದ.ಕಾಮ್ ಗೆ ಬಂದು ಬ್ಲಾಗ್ ಅಥವಾ ಫೋರಮ್ ಗೆ ಉತ್ತರಿಸುವುದು ಈಗಿರುವ ವಿಧಾನ. ಆದರೆ, ನನಗನ್ನಿಸುವಂತೆ ಸಂಪದದ ಹೆಮ್ಮೆ ಎನಿಸುವಂತೆ ಇರುವ ೧೦೦೦ ಸದಸ್ಯರೆಲ್ಲರಿಗೂ ಮೈಲ್ ಫೆಸಿಲಿಟಿ ಇದ್ದರೆ ಹಾಗೂ ಸಂಪದ.ಕಾಮ್ ಗೆ ಬರುವ ಬದಲು ಮೈಲ್ ಮಾಡುವ ವಿಧಾನ ಒಂದಿದ್ದರೆ, ಇಲ್ಲಿ ಪ್ರಕಟವಾಗುವ ಲೇಖನಗಳು ದುಪ್ಪಟ್ಟಾಗುವುದು ಖಚಿತ.
ಇದೇ ವಿಧಾನವನ್ನು ನಾನು ಬೇರೆ ಕೆಲವು websiteನಲ್ಲಿ ನೋಡಿದ್ದೇನೆ. ಸದಸ್ಯರಿಗೆ ಒಂದು ಪ್ರತ್ಯೇಕವಾದ id ಕೊಟ್ಟು ಯಾವುದೇ ಲೇಖನವನ್ನು ಅದಕ್ಕೆ ಕಳಿಸಿದರೆ, ಅದು ಈ websiteನಲ್ಲಿ ತನ್ನಷ್ಟಕ್ಕೆ ತಾನೇ ಪ್ರಕಟವಾಗಬೇಕು.
ಇದು ನನ್ನ ಅಭಿಪ್ರಾಯವಷ್ಟೆ. ಇದು ಆಗುವುದಾದರೆ, ಕನ್ನಡಕ್ಕೇ ಲಾಭ. ಸದಸ್ಯರು ಹೆಚ್ಚಾಗಲೆನ್ನುವುದೇ ನನ್ನ ಉದ್ದೇಶ.
ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮುಂದಿಡಬೇಕೆಂದು ಕೇಳಿಕೊಳ್ಳುತ್ತೇನೆ. ಹಾಗೂ ಸಂಪದದ ನಿರ್ವಾಹಕರು ಪ್ರತಿಕ್ರಿಯಿಸಬೇಕೆಂದು ವಿನಂತಿ.
ಮೇಘಶ್ಯಾಂ

- Login or register to post comments
- 966 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಒಳ್ಳೆಯ ಸಲಹೆ
ಆದರೆ ಹರಿ ಪ್ರಸಾದರಿಗೆ ನೆರವಾಗಲು ಬಹಳ ಕಡಮೆ ಮಂದಿಯಿರುವರು. ನನಗೆ ಬಲೆ(net)-ತಂತ್ರಗಳು ಬರವು. ಆದರೂ ಆದ ತಾಂತ್ರಿಕ ನೆರವನ್ನು ಮಾಡಲು ನಾನು ತುದಿಗಾಲಿನಲ್ಲಿ ನಿಂತೆದ್ದೇನೆ.
ದಯವಿಟ್ಟು, ಹರಿ ಪ್ರಸಾದರಿಗೆ ನೆರವಾಗಿ.
ಕೋರುವ,
ಮಹೇಶ.
ಎಲ್ಲರಿಗೂ ಈ-ಮೇಯ್ಲು
ಸಂಪದದಲ್ಲಿ XML-RPC ಬಳಸಿ ಈ-ಮೇಯ್ಲ್ ನಿಂದಲೇ ಬ್ಲಾಗ್ ಮಾಡುವ ಸೌಲಭ್ಯ ಇದೆ. ಆದರೆ ಸದ್ಯಕ್ಕೆ ಅದನ್ನು ಬಂದ್ ಮಾಡಲಾಗಿದೆ. ಯಾರಿಗೂ ಈ ಸವಲತ್ತಿನ ಬಗ್ಗೆ ತಿಳಿಸಲಾಗಿಲ್ಲ. ಇದಕ್ಕೆ ಕಾರಣ ನಾನು ಮುಂಚೆ ಹೇಳಿದಂತೆ ಸಂಪದದಲ್ಲಿ ಸದ್ಯಕ್ಕೆ ಎಲ್ಲರಿಗೂ ಈ ಸೌಲಭ್ಯ ಕಲ್ಪಿಸುವುದಕ್ಕಾಗಿ ಸರಿಯಾದ ಸಂಪನ್ಮೂಲಗಳಿಲ್ಲ.
ಡೆಡಿಕೇಟೆಡ್ ಸರ್ವರ್ ಗೆ ಸಂಪದವನ್ನು ಸ್ಥಳಾಂತರಿಸಿದ ಮೇಲೆ ಈ ಬಗ್ಗೆ ಗಮನ ಹರಿಸಬಹುದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"