ನಿಮಗೆ ಒಂದು ವೇಳೆ ಒಳ್ಳೆಯ ಸಲಹೆ ದೊರೆತರೆ ಅದನ್ನು ಕೂಡಲೆ ಬೇರೆಯವರಿಗೆ ತಲುಪಿಸಿ. ಅದರಿಂದ ನಿಮಗೆ ಉಪಯೋಗವಾಗುವುದು ಅಷ್ಟರಲ್ಲೇ ಇದೆ ಬಿಡಿ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಗೋಕಾಕ್ ಚಳುವಳಿ..

ಕನ್ನಡ, ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲು ಗೋಕಾಕ್ ಚಳುವಳಿ..
ಆದರೆ ಇದರ ಬಗ್ಗೆ ಯಾರಿಗೆ ಎಷ್ಟು ಗೊತ್ತು. ನಮ್ಮೆಲ್ಲರಿಗು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೆಯಾ?
ಅಂತರ್ಜಾಲದಲ್ಲಿ ಇದರ ಬಗ್ಗೆ ಪೂರ್ಣ ಮಾಹಿತಿ ಸಿಗಲಿಲ್ಲ. ದಯವಿಟ್ಟು ಗೊತ್ತಿದ್ದವರು ಇಲ್ಲಿ ಬರೀರಿ. ಗೊತ್ತಿಲ್ಲದವರಿಗೆ ಗೊತ್ತಾಗುತ್ತೆ? ಗೊತ್ತಾಯ್ತಾ?
- ವಿನಯ್

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಗೋಕಾಕ್ ಚಳುವಳಿ..

vini.mysore's picture

ಪ್ರಿಯ ಸಂಪದಿಗರೆ,
ಬಹಳ ನಿರಾಶೆಯಿಂದ ಬರೀತಿದೀನಿ.
ಒಂದು ವಾರ ಅಯ್ತು. 73 ಜನ ಓದಿದಾರೆ.
ಆದರೆ ಒಂದೂ ಪ್ರತಿಕ್ರಿಯೆ ಇಲ್ಲ. ಇದರರ್ಥ ಏನು?
ಈ ವಿಷಯ ಚರ್ಚೆಗೆ ಯೋಗ್ಯವಲ್ಲವೆ?
ಅಥವಾ ಇದು ನಮ್ಮಲ್ಲಿ ಯಾರಿಗು ತಿಳಿದಿರದ ವಿಷಯವೆ?
ಅಥವಾ ಸಂಪದಿಗರಿಗೆ ಉತ್ತರಿಸಲು ಸಮಯ ಇಲ್ಲವೆ?
ಸಂಪದದಲ್ಲಿ ಬರೇ ಓದುಗನಾಗಿ ಉಳಿಯುವುದೆ ಒಳ್ಳೆದು ಅನ್ಸತ್ತೆ.
ಒಬ್ಬರಾದ್ರು ಪ್ರತಿಕ್ರಿಯಿಸಿ ಗೋಕಾಕ್ ಚಳುವಳಿಯ ಬಗ್ಗೆ ವಿವರಗಳಿರುವ ಒಂದು ಲಿಂಕ್ ಅನ್ನಾದರು ದಯಪಾಲಿಸಿದ್ದರೆ ನನಗಿಷ್ಟು ನಿರಾಸೆ ಆಗ್ತಿರ್ಲಿಲ್ಲ.

ವಿಷಾದದಿಂದ,
ವಿನಯ್

ಉ: ಗೋಕಾಕ್ ಚಳುವಳಿ..

uniquesupri's picture

ಬೇಸರಿಸಿಕೊಳ್ಳಬೇಡಿ
ಚೂರು ಗೂಗಲಿಸಿ ನೋಡಿದರೆ ನಿಮಗೇ ಸಿಕ್ಕುತ್ತಿತ್ತು...

http://en.wikipedia....
http://churumuri.wor...
http://ellakavi.word...

ಉ: ಗೋಕಾಕ್ ಚಳುವಳಿ..

vini.mysore's picture

ಸುಪ್ರೀತ್, ನನಗೆ ಬೇಕಾಗಿದ್ದು ಇಂತ ಒಂದು ಪ್ರತಿಕ್ರಿಯೆ ಅಷ್ಟೆ..
ನನ್ನಿ..

ಉ: ಗೋಕಾಕ್ ಚಳುವಳಿ..

ಮಾಯ್ಸ೨'s picture

Quote:
Karnataka had adopted Three language formula for education in schools since the linguistic reorganization of states in 1956. Strong opposition to Hindi was witnessed in the 1960s and '70s., leading to Kannada speakers leaning towards English. It was also felt that Kannada faced threat from Sanskrit, which was the dominant language in schools, leading to a situation where students could complete their high school education without having to study Kannada. This created a wide incompatibility between languages used for state administration and education.
This led to a linguistic movement against retaining Sanskrit as the first language in School education. The movement was initiated and supported by political parties, groups of Kannada teachers, students, college and university professors, literary critics, playwrights, and creative writers. This made the government rethink about the language policy for school education and constituted a committee on July 5, 1980 with Prof. V.K. Gokak as the Chairman

ಪುರಾವೆ: http://www.languagei...
ಗೋಕಾಕ್ ಚಳುವಳಿ ಯಾಕೆ ನಡೆಯಿತು ಎಂದು ನನಗೆ ಈಗ ಸರಿಯಾಗಿ ಅರಿವಾಯಿತು..

ನನ್ನಿ

ಉ: ಗೋಕಾಕ್ ಚಳುವಳಿ..

Khavi's picture

ಆದರೆ ಶಾಲೆಗಳಲ್ಲಿ ಈಗ ಸಂಸ್ಕೃತಕ್ಕಿಂತಲೂ ಹಿಂದಿ (ಮತ್ತು ಇಂಗ್ಲಿಷ್) ಹೇರಿಕೆ ಜಾಸ್ತಿ ಆಗಿದೆ...
ಸದ್ಯದ ಪರಿಸ್ಥಿತಿಲಿ ಇಂಗ್ಲಿಷ್ ಬಿಡಲಾಗದು, ಆದರೆ ಹಿಂದಿ ಬಿಡಬಹುದಲ್ಲ, ಅದರ ಅವಶ್ಯಕತೆ ಕನ್ನಡಿಗರಿಗಿಲ್ಲ...
ಈಗಿನ ಯುವ ಕನ್ನಡ ಪೀಳಿಗೆಯಲ್ಲಿ ಅದೊಂದು ಹೊಸಬಗೆಯ ವಿಲಕ್ಷಣ ಶೈಲಿ ಅಥವಾ ಹುಚ್ಚು ಹಿಡಿತಾ ಇದೆ... ಇದು ಕನ್ನಡಕ್ಕೆ ಮಾರಕವಾಗಬಹುದು..

ಭಾರತದಲ್ಲಿ ಕರ್ನಾಟಕವು ಹೆಚ್ಚು ಭಾಷಿಕರ ರಾಜ್ಯ. ಕೆಳಗಿನ ಪ್ರಕಾರ 1991ರಲ್ಲಿ ಕರ್ನಾಟಕದಲ್ಲಿ ಬೇರೆ ಬೇರೆ ನುಡಿ ಮಾತನಾಡುವವರ ಪ್ರಮಾಣ ಇಷ್ಟಿದೆ.. ಅದರಲ್ಲಿ ಕನ್ನಡ ಬಿಟ್ಟರೆ ಉರ್ದು, ತೆಲುಗು, ತಮಿಳು ಮಾತನಾಡುವವರು ಹೆಚ್ಚು, ಅದು ಅವರ ತಾಯಿನುಡಿ ಇರಬಹುದು. ಅದು ಸರಿ ಆದರೆ ಈಗ 2009ರಲ್ಲಿ ಇವರಿಗಿಂತಲೂ ಹಿಂದಿ ಮಾತನಾಡುವವರ ಪ್ರಮಾಣ ಹೆಚ್ಚಿದೆ, ಅದರಲ್ಲೂ ದುರದೃಷ್ಟ ಅಂದರೆ ಹೆಚ್ಚಿನವರು ಕನ್ನಡಿಗರೆ ಅನ್ನುವುದು...

Quote:
Karnataka is one of the most multilingual states in India. The linguistic demography, according to the 1991 Census, is as follows:
Kannada 66.2
Urdu 9.96
Telugu 7.39
Tamil 3.84
Marathi 3.64
Tulu 3.06
Hindi 1.96
Konkani 1.57
Malayalam 1.68
Kodagu 0.21
Gujarati

ಉ: ಗೋಕಾಕ್ ಚಳುವಳಿ..

ಮಾಯ್ಸ೨'s picture

ಇರಬಹುದು.. ಆದರೆ ಕನ್ನಡದಲ್ಲಿ ಬೇಡವಾಗಿ ಸಂಸ್ಕ್ರತದ ಪದಗಳನ್ನು ತುರುಕುವುದೇ ಹೆಚ್ಚು... ಉರ್ದು, ಮರಾಟಿ, ಹಿಂದಿ ಅಲ್ಲಿಲ್ಲಿ ಕಾಣುವುವು.

ಒಂದು ಸರತಿ ಕನ್ನಡದ ಒಂದು ಸುದ್ದಿಯೋಲೆಯನ್ನು ತೆಗೆದು ಅದರ ಒಂದು ಬರಹದಲ್ಲಿ ಏ ಏ ನುಡಿಗಳು ಎಶ್ಟು ಎಶ್ಟು ಪದಗಳಿವೆ ಎಂದೊಮ್ಮೆ ಲೆಕ್ಕ ಹಾಕಿರಿ.. ಆಗ ನಿಮಗೆ ತಿಳಿಯುವುದು.

ಹಿಂದಿಯ ದಬ್ಬಾಳಿಕೆ, ಸಂಸ್ಕ್ರತದ ಬೆರಕೆ, ಇಂಗ್ಲಿಶ್ನ ಊಳಿಗ..... ಇವುಗಳಿಂದ ನಮಗೆ ಬಿಡುಗಡೆ ಬೇಕು.. ಆದರೀಗ ಇಂಗ್ಲಿಶ್ ಬೇಡ ಎನ್ನುವ ಪಾಡು ನಮ್ಮದಲ್ಲ! ಮುಂದುವರಿದ ಅರಿವು ತಿಳಿಗನ್ನಡದಲ್ಲೇ ದೊರೆಯುವ ತನಕ ನಮಗೆ ಇಂಗ್ಲಿಶ್ ಆಡಿಯಾಳುತನ ತಪ್ಪಿದ್ದಲ್ಲ.

ಉ: ಗೋಕಾಕ್ ಚಳುವಳಿ..

Khavi's picture

Quote:
"ಹಿಂದಿಯ ದಬ್ಬಾಳಿಕೆ, ಸಂಸ್ಕ್ರತದ ಬೆರಕೆ, ಇಂಗ್ಲಿಶ್ನ ಊಳಿಗ....."

- ಹಾಂ ನಿಜ... ಸರಿಯಾಗಿ ಹೇಳಿದಿರಿ..

ಉ: ಗೋಕಾಕ್ ಚಳುವಳಿ..

ಮಾಯ್ಸ೨'s picture

ಕನ್ನಡದಲ್ಲಿ ’ಹುಂ’, ಹಾ ಎಂದು ಹೌದು ಎಂಬುದು ಹಿಂದಿ :)

ಹು = ಹೌದು
ಉಹು = ಅಲ್ಲ

:) ( ಸುಮ್ನೆ )

ಉ: ಗೋಕಾಕ್ ಚಳುವಳಿ..

vini.mysore's picture

ನಿಜವೇ!!??
ನಂಗೆ ನಂಬೋಕೆ ಆಗ್ತಿಲ್ಲ..
ಆದರೆ 'ಅಹುದು' ಎಂಬ ಪದ ಕನ್ನಡ ಎಂದು ನನ್ನ ನಂಬಿಕೆ..

ಉ: ಗೋಕಾಕ್ ಚಳುವಳಿ..

ಮಾಯ್ಸ೨'s picture

ಅಪ್ಪುದು => ಅಹುದು => ಹವುದು(ಹೌದು)
ಅಪ್ಪಗೆ => ಅಹಗೆ => ಹಾಗೆ

ಅಪ್ಪು => ಸೇರು, ಒಡಂಬಡು..

ಉ: ಗೋಕಾಕ್ ಚಳುವಳಿ..

Khavi's picture

ಹುಂ.. ಅಯ್ತಾ..
ಈ ಜರ್ಮನಿಯಲ್ಲಿ ನನ್ನ ಸುತ್ತ ಮುತ್ತ ಇರೋರೆಲ್ಲ ಬರಿ ಉತ್ತರ ಇಂಡಿಯದವರು, ಇನ್ನೇನು ಮಾಡಲಿ ಅವರಿಗೆ "ಹಾಂ ಭಯ್ಯಾ ಹಾಂ" ಅಂತ ಅಂದು ರೂಢಿಯಾಗಿದೆ.. ಹಿಂದಿ ದಬ್ಬಾಳಿಕೆ ಜರ್ಮನಿಯಲ್ಲಿ :P

ಉ: ಗೋಕಾಕ್ ಚಳುವಳಿ..

ಮಾಯ್ಸ೨'s picture

ನೀವ್ ಜರ್‍ಮನಿಯಲ್ಲಿರುವುದಕ್ಕೂ ಜನಾಂಗೀಯ ದೇಶೀಯತೆ/ಬುಡುಕಟ್ಟಿನ ನಾಡಿಗತನದ ಅರಿವಿಗೂ ಸರಿ ಹೋಯ್ತು..

danke :)

ಉ: ಗೋಕಾಕ್ ಚಳುವಳಿ..

Khavi's picture

Herzlich willkommen!! bitte.. (ಬಿಟ್ಟೆ ಅಲ್ಲ ದಯವಿಟ್ಟು ಅಂತ.. :) )

ಉ: ಗೋಕಾಕ್ ಚಳುವಳಿ..

ಮಾಯ್ಸ೨'s picture

Zustimmung! ಸಾಕು. :)

ಉ: ಗೋಕಾಕ್ ಚಳುವಳಿ..

Narayana's picture

ವಿನೀತ್

ನಿಮಗೆ ಪ್ರತಿಕ್ರಿಯೆ ಬೇಕಾದರೆ, ಬ್ಲಾಗ್ ಅಂತ ಹಾಕಿ . ಚರ್ಚೆ ಸೆಕ್ಷನ್ ಹೆಚ್ಚಿನವರ ಕಣ್ಣಿಗೆ ಬೀಳುವುದಿಲ್ಲ.

ನಾರಾಯಣ

ಉ: ಗೋಕಾಕ್ ಚಳುವಳಿ..

vini.mysore's picture

ಥಾಂಕ್ಸ್, 'ನಾರದ' ಅವರೆ..
'ವಿನಯ್'

ಉ: ಗೋಕಾಕ್ ಚಳುವಳಿ..

vini.mysore's picture

ಮಾಹಿತಿಗೆ ಧನ್ಯವಾದಗಳು.
..ವಿನಯ್