20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಚರ್ಚೆಗಳನ್ನು ಗೆಲ್ಲಲು ಸುಲಭ ಸೂತ್ರಗಳು

March 25, 2009 - 8:27pm
summer_glau
ಚರ್ಚೆ ಮಾಡಿ ಗೆಲ್ಲುವುದು ಬಹಳ ಕಷ್ಟ. ಅದರಲ್ಲೂ ನಾವು ನಂಬಿರುವ (ಆದರೆ ತಪ್ಪಾಗಿರುವ) ವಿಶಯಳಲ್ಲಂತೂ ಇನ್ನು ಕಷ್ಟ. ಆದರೆ ಎಲ್ಲ ಕಷ್ಟಗಳಿಗೂ ಮದ್ದು ಇರುವ ಹಾಗೆ ಇದಕ್ಕೂ ಇದೆ. ಚರ್ಚೆ ಮಾಡುವಾಗ ಈ ಕೆಳಗಿನ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಆಯಿತು ಅಷ್ಟೇ!
* ವಿಶಯಾಂತರ: ಯಾವಾಗ ನಮ್ಮ ವಿಚಾರ ತಪ್ಪು ಎಂದು ಒಪ್ಪಿಕೊLLಉವ ಪರಿಸ್ಥಿತಿ ಬರುತ್ತದೆಯೋ, ಆಗ ತಕ್ಷಣ ವಿಶಯಾಂತರ ಮಾಡಿ.
ಉದಾ:
ನಾನು: ೧=೨ ಎಂಬುದನ್ನು ಗಣಿತದ ಮೂಲಕ prove ಮಾಡಿದ್ದೇನೆ. ಆದ್ದರಿಂದ ನಾನು ಹೇಳುವುದು ಸರಿ.
ಪ್ರತಿವಾದಿ: ನಿಮ್ಮ proof ನಲ್ಲಿ ತಪ್ಪಿದೆ. Equation ನ ಎರಡೂ ಕಡೆ ಸೊನ್ನೆಯಿಂದ ಭಾಗಿಸಿದ್ದೀರಿ.
ನಾನು: ಗಣಿತಕ್ಕೆ ನಿಲುಕದೇ ಇರುವ ನಿಯಮಗಳು ಇರಬಹುದಲ್ಲವೇ?
ಪ್ರತಿವಾದಿ : (ದಂಗು!!)

* ಹಿರಿತನ : ಎಲ್ಲವನ್ನೂ ತಿಳಿದಂತೆ ಮಾತಾಡಿ. ತಿಳಿದಿರಲೇ ಬೇಕೆಂದು ಇಲ್ಲ, ತೋರಿಸಿಕೊಂಡರೆ ಸಾಕು. ಎದುರಿನವರನ್ನು ಏಕವಚನದಲ್ಲಿ ಸಂಬೋಧಿಸಿ, ವಯಸ್ಸಿನಲ್ಲಿ (ಆದ್ದರಿಂದ ತಿಳುವಳಿಕೆಯಲ್ಲಿ) ಕೀಳು ಎನ್ನುವಂತೆ ಮಾಡಿದರೆ ಬೋನಸ್ ಅಂಕಗಳು.
ಉದಾ:
ಪ್ರತಿವಾದಿ: ಇಲ್ಲಿ ನೋಡಿ ನೀವೇ ಹಿಂದೆ ಒಪ್ಪಿಕೊಂಡಂತೆ ನೀವು ಎಲ್ಲರೂ ಗಂಜಿ ಹಾಕಿದ ಪಂಜಿ ಉಡಬೇಕೆಂದು ಅಪೇಕ್ಷಿಸುವುದಿಲ್ಲ ಆದರೆ ಈಗ ನೋಡಿದರೆ ಗಂಜಿ ಇಲ್ಲದ ಪಂಜಿ ಉಟ್ಟವರೆಲ್ಲರೂ ಹುಚ್ಚರು ಎನ್ನುತ್ತಿದ್ದೀರಲ್ಲ?
ನಾನು: ನೋಡು ತಮ್ಮಾ, ಪಂಜಿ ಎನ್ನುವುದು ನಿಮಿತ್ತ ಮಾತ್ರ. ನಿನ್ನಂತೆ ಸಣ್ಣ ವಯಸ್ಸಿನಲ್ಲಿ ಇದ್ದಾಗ ನಾನು ಕೂಡ ಇದರ ಬಗ್ಗೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದೆ. ಆದರೆ ವಯಸ್ಸಿನಿಂದ ಬರುವ ಅನುಭವವೇ ಬೇರೆ. ನನ್ನಷ್ಟು ತಲೆ ನೆರೆತ ಮೇಲೆ ನಿನಗೆ ತಿಳಿಯುತ್ತದೆ. ನಿನ್ನ ಯೌವನವನ್ನು ಕ್ಷುಲ್ಲಕ ಪಂಜಿಯ ಬಗ್ಗೆ ತಲೆ ಕೆಡಿಸಿಕೊಂಡು ವ್ಯರ್ಥ ಮಾಡಬೇಡ.
ಪ್ರತಿವಾದಿ : (ತಲೆ ಕೆರೆದು ಕೊLLಉವನು)

* ಉದ್ಧರಿಸುವುದು: ಗಾದೆಗಳು, ಶ್ಲೋಕಗಳು ಇತ್ಯಾದಿಗಳನ್ನು ಯಥೇಚ್ಚವಾಗಿ ಉಧ್ಧರಿಸಿ. ಅವು ಸಂದರ್ಭಕ್ಕೆ ಸೂಕ್ತವಾಗಿರಲೇ ಬೇಕು ಎಂದು ಇಲ್ಲ. (ಉದಾ: ಆಕಳು ಕಪ್ಪಾದರೆ ಹಾಲು ಕಪ್ಪೇ ಅಂದಹಾಗೆ ನಮ್ಮ ಪಕ್ಕದ ಮನೆಯ ಹಸು ೧೦ ಲೀಟರ್ ಹಾಲು ಕೊಡುತ್ತದೆ). ಇದರಿಂದ ೩ ವಿಧದಲ್ಲಿ ಉಪಯೋಗ ಇದೆ. ಒಂದು, ನೀವು ಜ್ನಾನಿಗಳು ಎಂದು ನೋಡುವವರಿಗೆ ಅನಿಸುತ್ತದೆ, ಎರಡು, ಏನನ್ನೂ ತಿಳಿಯದ ಅಮಾಯಕರಿಗೆ ನೀವು ಈಪಾಟಿ ಶ್ಲೋಕ ಹೇಳುವುದು ನೋಡಿದರೆ ನಿಜವನ್ನೇ ಹೇಳುತ್ತಿರಬೇಕು ಅನಿಸುತ್ತದೆ ಮತ್ತು ಕೊನೆಯದಾಗಿ ಪ್ರತಿವಾದಿಗೆ ನಿಮ್ಮ ಶ್ಲೋಕದ ಅರ್ಥ ಮತ್ತು context ಸರಿಯಾಗಿ ಗೊತ್ತಿಲ್ಲದಿದ್ದರೆ ಆತ/ಆಕೆ ಸೋಲನ್ನು ಒಪ್ಪಿಕೊLLಅಲೇ ಬೇಕಾಗುತ್ತದೆ.
ಉದಾ:
ಪ್ರತಿವಾದಿ: ಹಾಗಾದರೆ ನಾವು ದೇವರನ್ನು ವಾರಕ್ಕೊಮ್ಮೆ ನೆನೆಸಿಕೊಂಡರೆ ಸಾಕೆ?
ನಾನು: ಖಂಡಿತ. ಶಂಕರಾಚಾರ್ಯರು ಭಜಗೋವಿಂದಂ ನಲ್ಲಿ ಹೇಳಿಲ್ಲವೇ 'ಮನಸಿ ವಿಚಿಂತ್ಯಾ ವಾರಂ ವಾರಂ' ಅಂತ? ಅಂದರೆ ಪ್ರತಿ ವಾರವೂ ದೇವರ ಕುರಿತು ಮನಸ್ಸಿನಲ್ಲಿ ಚಿಂತಿಸು ಅಂತ
ಪ್ರತಿವಾದಿ : (ಬಟ್ಟೆಯನ್ನು ಹರಿದುಕೊLLವನು)

* ಒಗ್ಗಟ್ಟಿನಲ್ಲಿ ಬಲವಿದೆ: ಒಬ್ಬರಿಗಿಂತ ಇಬ್ಬರು ಲೇಸು. ಇಬ್ಬರು ಸೇರಿದರೆ ಪ್ರತಿವಾದಿಯ ಜಂಘಾಬಲವೇ ಉಡುಗಿಸಬಹುದು. ನೀವು ಮತ್ತು ನಿಮ್ಮ ಸಹಾಯಕ ಇಬ್ಬರೂ ಪರಸ್ಪರ ವಿದ್ವತ್ತು, ವಿವೇಕ ಇವನ್ನು ವಾಚಾಮಗೋಚರವಾಗಿ ಹೊಗಳ ಬೇಕು. ಪರಸ್ಪರ ಬೆನ್ನು ಕೆಂಪು ಆಗುವಷ್ಟು ತಟ್ಟಿಕೊLLಅ ಬೇಕು.
ಉದಾ:
ಪ್ರತಿವಾದಿ: ಹಾಗಾದರೆ ನೀವು ಹೇಳುತ್ತಿರುವುದು ತಪ್ಪು ಎಂದಾಯಿತು
ನನ್ನ ಸಹಾಯಕ: (ನನ್ನ ಕುರಿತು) ನೀನು ಇದಕ್ಕೆಲ್ಲ ಅಂಜಬೇಡ ಮಾರಾಯ. ನೀನು ಎಂತಹ ಮೇಧಾವಿ ಎಂದು ನಮಗೆಲ್ಲ ಗೌರವ ಇದೆ.
ನಾನು: ಸಹಾಯಕ, ನಿನ್ನಂತಹ ಮಹಾ ಪಂಡಿತನೇ ಈ ಮಾತು ಹೇಳಿದಮೇಲೆ ನಾನು ಮಹಾನ್ ಮೇಧಾವಿಯೇ ಇರಬೇಕು. ನನಗೆ ಯಾಕೆ ಏ ಕೀಳು ಮಟ್ಟದ ಜಗಳ? ನಾನು ಇಲ್ಲಿಂದ ಹೊರಟೆ.
ಪ್ರತಿವಾದಿ: (!!!???)

* ವೈಜ್ನಾನಿಕತೆ: ಈ ದಿನಗಳಲ್ಲಿ ವೈಜ್ನಾನಿಕ ವಿಚಾರಗಳಿಗೆ ಮಾತ್ರ ಬೆಲೆ. ಆದ್ದರಿಂದ ವೈಜ್ನಾನಿಕ ಅಥವ pseudo-ವೈಜ್ನಾನಿಕ ಮಾತುಗಳನ್ನು ಚರ್ಚೆಯಲ್ಲಿ ಸೇರಿಸಿ. ಇದು ಕೂಡ ಗಾದೆ/ಶ್ಲೋಕಗಳಂತೆಯೇ ಮೂರು ರೀತಿಯ ಲಾಭವನ್ನು ಕೊಡುತ್ತದೆ.
ಉದಾ:
ಪ್ರತಿವಾದಿ: ನೀವು ಹೇಳುವುದು ಸರಿಯಾದರೆ ನಮ್ಮ ಕೈ ಕಾಲುಗಳು ಸೆಟೆದುಕೊLLಅ ಬೇಕಿತ್ತಲ್ಲ?
ನಾನು: ಆಹಾ! ನಿಮಗೆ ವಿಜ್ನಾನದ ಪರಿಚಯವಿಲ್ಲ ಅನಿಸುತ್ತದೆ. ಪ್ರತಿ ಜೀವಕೋಶದಲ್ಲೂ ಅಡಿನೋಸಿನ್ ಟ್ರೈ ಫಾಸ್ಪೇಟ್ ಅನ್ನುವ ರಸಾಯನಿಕ ಇರುತ್ತೆ. ಅದನ್ನ ಎಟಿಪಿ ಅಂತ ಕೂಡ ಕರೀತಾರೆ. ಅದರಿಂದಲೇ ಕೈ ಕಾಲುಗಳು ಸೆಟೆಯೊಲ್ಲ.
ಪ್ರತಿವಾದಿ: ಅದು ಸರಿ ಆದರೆ ಈ ವಿಶಯ ಜಿರಲೆ ಔಶದಿ ಕುಡಿದರೆ ಮನುಶ್ಯ ಸಾಯುವುದಿಲ್ಲ ಎಂದು ನೀವು ಹೇಳುತ್ತಿರುವುದಕ್ಕೆ ಹೇಗೆ ಪೂರಕವಾಗುತ್ತದೆ?
ನಾನು: ಹೈಸೆನ್ ಬರ್ಗ್ uncertainty principle ಪ್ರಕಾರ ಆಗುತ್ತದೆ!
ಪ್ರತಿವಾದಿ : (ಸಂಪೂರ್ಣ ಸಮಾಧಿ ಸ್ಥಿತಿ ತಲುಪುವನು).

ಇನ್ನೂ ಯಾವುದಾದರು ವಿಧಾನಗಳಿದ್ದಲ್ಲಿ ಉದಾಹರಣೆ ಸಮೇತವಾಗಿ ಕಮೆಂಟುಗಳಲ್ಲಿ ಬರೆಯುವುದು.

ಗಮನಿಸಿ: ಇದು ಹಾಸ್ಯ ಬರಹ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

Submitted by inchara123 on
ಇದು ಹಾಸ್ಯಬರಹವಲ್ಲ. ಈಗಿನ ವಸ್ತು ಸ್ಥಿತಿ. ಬೇಕಿದ್ದರೆ ವಿಡಂಬನೆ ಎನ್ನಬಹುದೇನೋ. :-) ಆದರೂ ಸರಿಯಾಗಿ ಚುರುಕು ಮುಟ್ಟಿಸಿದ್ದೀರಿ ಪ್ರತಿಯೊಬ್ಬರಿಗೂ. :-) ಧನ್ಯವಾದಗಳು.

Submitted by uniquesupri on
:) ಸಕತ್! ಆದ್ರೆ ಚರ್ಚಾಪಟುಗಳ ಪ್ರಮುಖ ಅಸ್ತ್ರವನ್ನೇ ಮರೆತುಬಿಟ್ಟಿರುವಿರಲ್ಲಾ? ಅಡ್ ಹೊಮಿನೆಮ್! ಅದರ ಹೆಸರು ಕೇಳಿದರೇನೇ ಪ್ರತಿವಾದಿಯ ಜಂಘಾಬಲ ಉಡುಗಿ ಹೋಗಿಬಿಡುತ್ತೆ! http://en.wikipedia....

Submitted by rekhash on
ತುಂಬಾ ಚೆನ್ನಾಗಿದೆ, ಪ್ರತಿವಾದಿಗಳ ಪ್ರತಿಕ್ರಿಯೆಗಳ ವರ್ಣನೆಯಂತೂ ಸುಪರ್ಬ್. ಕಲ್ಪನೆ ಮಾಡಿಕೊಂಡೇ ನಕ್ಕು ನಕ್ಕು ಸಾಕಾಯ್ತು. ಹೀಗೇ ಬರೆಯುತ್ತಿರಿ.

Submitted by ಮಾಯ್ಸ೨ on
*ನೋವಾಗುವುದು...ಬೇಜಾರಾಗುವುದು ಅವನು) ವಿಕಾಸವಾದದಂತೆ ಮಂಗನಿಂದ ಮನುಶ್ಯರು. ಅದಕ್ಕೆ ನಿಮಗೆ ನಮಗೆ ಮಂಗನ ಹಾಗೆ ಕೈಗಳು, ಅಂಗೈ ಇವೆ. ಇವನು) ನನ್ನ ಮಂಗ ಎಂದು ಕರೆದು ನೋವು ಮಾಡಿದಿರಿ. ನನ್ನ ನಂಬಿಕೆಯನ್ನು ಘಾಸಿಗೊಳಿಸಿದಿರಿ. ನಾನು ದೇವರಿಂದ ಸೃಷ್ಟಿಸಲ್ಪಟ್ಟವ. ಮಂಗನ ಮಗನಲ್ಲ.. ಅಯ್ಯಯ್ಯೋ.. ಇವನು ನನ್ನ, ನಮ್ಮಪ್ಪನ್ನ, ನನ್ನ ವಂಶವನ್ನ ಮಂಗಗಳದ್ದು ಅಂತಾನೆ.. ಬನ್ರಪ್ಪೋ! :)

Submitted by summer_glau on
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು! @ಇಂಚರ : ಬರೆಯುವಾಗ ಚುರುಕು ಮುಟ್ಟಿಸುವ ಉದ್ದೇಶ ಇಲ್ಲದಿದ್ದರೂ ಪರಿಣಾಮ ಹಾಗೇ ಆಗಿದೆ ಅನಿಸುತ್ತೆ. @ಸುಪ್ರೀತ್ / ಮಾಯ್ಸ : Ad hominem ಮತ್ತು ನೋವಾಗುವುದು ಎರಡೂ ಉತ್ತಮ ಉದಾಹರಣೆಗಳು. ಮೂಲ ಲೇಖನ edit ಮಾಡಲು ಆಗದೇ ಇರುವುದರಿಂದ ಇನ್ನೊಂದು ತಂತ್ರ * ಕಥೆ: ನಮ್ಮ ನಿಲುವಿಗೆ ಬೇರೆ ಯಾವುದೇ ಆಧಾರ ಸಿಕ್ಕದಿದ್ದಾಗ ಒಂದು ಆಧಾರವನ್ನು ನಾವೇ ಕಥೆಯ ರೂಪದಲ್ಲಿ ಹುಟ್ಟಿಸುವುದು. ಕಥೆಗಳು ನೇರವಾಗಿ ವಿಷಯವನ್ನು ಉದ್ದೇಶಿಸಿ ಇರಬಾರದು ಮತ್ತು ನಾವು ಯಾವ conclusion ಬೇಕೆಂದು ಬಯಸುತ್ತೇವೆಯೋ ಅದಕ್ಕೆ ತಕ್ಕ ಕಥೆಗಳನ್ನೇ ಹೆಣೆಯುವುದು. ಕಥೆಯಲ್ಲಿ ರೂಪಕಗಳ ಬಳಕೆ ಯಥೇಚ್ಚವಾಗಿ ಮಾಡಿ. ರೂಪಕಗಳಲ್ಲಿ ದಿನನಿತ್ಯ ನಾವು ನೋಡುವ ವಸ್ತುಗಳನ್ನು ಬಳಸಿದಸ್ಟೂ ನೋಡುಗರಿಗೆ ನಿಮ್ಮ ಅಭಿಪ್ರಾಯದ ಬಗ್ಗೆ ಸಹಮತ ಉಂಟಾಗುತ್ತದೆ. ಉದಾ: ನಾನು: ಕಾರು ಗಂಟೆಗೆ ೧೫೦ ಕಿಮಿ ಕಿಂತ ವೇಗವಾಗಿ ಹೋದರೆ ಕಿಡಕಿಗಳು ಒಡೆದು ಹೋಗುತ್ತವೆ ಪ್ರತಿವಾದಿ: ಹಾಗೇನೂ ಇಲ್ಲ. ನಾನು ಬೇಕಾದರೆ ೧೫೦ ಕಿಮಿ ಕಿಂತ ವೇಗವಾಗಿ ಕಾರನ್ನು ಓಡಿಸಿ ತೋರಿಸಬಲ್ಲೆ ನಾನು: ಒಂದು ಊರಿನಲ್ಲಿ ಒಂದು ಮಡಕೆ ಇತ್ತು. ಅದಕ್ಕೆ ತಾನು ಎಷ್ಟೇ ಗಾಳಿ ಬಂದರೂ ನಾನು ತಡೆದುಕೊLLಅಬಲ್ಲೆ ಎಂಬ ಗರ್ವವಿತ್ತು. ಒಂದು ದಿನ ಜೋರಾಗಿ ಗಾಳಿ ಬಂತು. ಪಕ್ಕದಲ್ಲಿದ್ದ ಮರದೆ ರೆಂಬೆ ಮಡಕೆಯ ಮೇಲೆ ಬಿತ್ತು. ಮಡಕೆ ಒಡೆದು ಹೋಯಿತು!! ಪ್ರತಿವಾದಿ: (ದೇಶಾಂತರ ಓಡಿಹೋಗುವನು) ಈ ಬರವಣಿಗೆ ಇಷ್ಟವಾದವರಿಗೆ ಒಂದು ಸಲಹೆ/ಕೋರಿಕೆ. ನೀವು ನಡೆಸುತ್ತಿರುವ ಚರ್ಚೆಗಳಲ್ಲಿ ಈ ಸೂತ್ರಗಳನ್ನು ಪಾಲಿಸುವುದು ಕಂಡು ಬಂದರೆ ಅಲ್ಲಿ ಪ್ರತಿವಾದ ಮಾಡದೇ ಈ ಲೇಖನದ ಲಿಂಕ್ ಕೊಟ್ಟು ಬಿಡಿ. Slashdot ನಲ್ಲಿ ಇರುವ cultural meme (http://en.wikipedia....) ಗಳಂತೆ ಸಂಪದದಲ್ಲಿ ಕೂಡ ಒಂದಿಷ್ಟು meme ಗಳ ಅವಶ್ಯಕತೆ ಇದೆ ಅಂತ ನನ್ನ ಅಭಿಪ್ರಾಯ.

Submitted by cmariejoseph on
ಒಂದು ಒಳ್ಳೇ ಸಂಶೋಧನಾ ಬರಹ. ವಿಷಯಾಂತರ ಮಾಡೋದು, ದೊಡ್ಡಸ್ತಿಕೆ ತೋರಿಸಿಕೊಳ್ಳೋದು, ಅಸಂಬದ್ಧವಾದ್ದನ್ನು quote ಮಾಡೋದು, ಗೆದ್ದೆತ್ತಿನ ಬಾಲ ಹಿಡಿಯೋದು, ವಿಜ್ಞಾನದ ಸೂತ್ರಗಳನ್ನು ಬಳಸೋದು ಇಷ್ಟೇನಾ? ಇನ್ನೂ ಏನೋ, ಇನ್ನೂ ಏನೇನೋ ಇದೆ. ಹೇಳೋಕೆ ಗೊತ್ತಾಗ್ತಾ ಇಲ್ಲ. ಇದರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕಿದೆ. ಪ್ರೀತಿಯಿಂದ ಸಿ ಮರಿಜೋಸೆಫ್