Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ವ್ಯಾಕರಣ : ತದ್ಧಿತ

July 10, 2006 - 12:13pm — benaka


ಓದುಗರೇ,
ಶ್ಯಾಮಲ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸ ಹೊರಟಂತೆ ಸ್ವಲ್ಪ 'ತದ್ಧಿತ'ದ ಬಗ್ಗೆ ಬರೆಯೋಣವೆನಿಸಿತು; ಇಲ್ಲಿದೆ ಸಣ್ಣ ಪ್ರಯತ್ನ.

ಶ್ಯಾಮಲ ಅವರೇ,

ನೀವು ಕೇಳಿರುವ ಪದಗಳು ಸಂಸ್ಕೃತ ಮೂಲದವು; ಆದ್ದರಿಂದ ತದ್ಭವರೂಪಗಳನ್ನು ಬಳಸುವುದು ಮಾತ್ರ ವ್ಯಾಕರಣದ ದೃಷ್ಟಿಯಲ್ಲಿ ಸರಿಯಾದ ಪ್ರಯೋಗ. ರೂಢವಾಗಿಹೋಗಿರುವ ಕೆಲವು ತಪ್ಪು ಪ್ರಯೋಗಗಳನ್ನು ನಾವೇ ತಿದ್ದಿಕೊಳ್ಳುವುದು ಒಳಿತು. ಇರುವುದನ್ನೇ ಸರಿಯೆಂದು ಒಪ್ಪಿಕೊಳ್ಳುವುದು ಬೇರೆ ದಾರಿಯೇ ಇಲ್ಲದಾಗ ಮಾತ್ರ. ಸಮಸ್ಯೆ ನಮ್ಮನ್ನು ನಾವು ತಿದ್ದಿಕೊಳ್ಳುವುದು ಅಷ್ಟೇ. ಅದಿರಲಿ, ನೀವು ಕೇಳಿದ ಪದಗಳ ಪ್ರಯೋಗ ಸರಿಯೋ ಇಲ್ಲವೋ ಎಂದು ಕಂಡುಹಿಡಿಯಲು ಸಂಸ್ಕೃತದ ವ್ಯಾಕರಣ ತಿಳಿದಿರಬೇಕಾಗುತ್ತದೆ; ಅದನ್ನೇ ಇಲ್ಲಿ ಸರಳವಾಗಿ ವಿವರಿಸುವ ಪ್ರಯತ್ನ ಮಾಡುತ್ತೇನೆ:

ಕೆಲವು ಗುಣವಾಚಕ ಪದಗಳನ್ನು ನಾಮಪದದ ಭಾವದಲ್ಲಿ ಬಳಸುವಾಗ ಕೆಲವು ಪ್ರತ್ಯಯಗಳು(suffix) ಸೇರುತ್ತವೆ. ವಿಶೇಷವಾಗಿ ಈ ಸಂದರ್ಭದಲ್ಲಿ ಸೇರುವ ಪ್ರತ್ಯಯಗಳಿಗೆ 'ತತ್' ಪ್ರತ್ಯಯಗಳು ಎನ್ನುತ್ತಾರೆ. ಆದ್ದರಿಂದ ಈ ರೀತಿಯಲ್ಲಿ ಆಗುವ ಶಬ್ದೋತ್ಪತ್ತಿಗೆ 'ತತ್ + ಹಿತ (ತತ್ ಸೇರುವಿಕೆ)' = ತದ್ಧಿತ ಎನ್ನುತ್ತಾರೆ.
೧.
ತದ್ಧಿತಗಳಲ್ಲಿ ವಿವಿಧ ಬಗೆಗಳಿವೆ; ಅವುಗಳಲ್ಲಿ ನಮಗೆ ಈಗ ಇಲ್ಲಿ ಬೇಕಾಗಿರುವ 'ಭಾವಾರ್ಥಕ ತದ್ಧಿತ' ವನ್ನು ಮಾತ್ರ ಗಮನಿಸೋಣ. ಇಲ್ಲಿ ಗುಣವಾಚಕದ ಭಾವವನ್ನು ನಾಮಪದವನ್ನಾಗಿಸುವ ಕ್ರಿಯೆ ನಡೆಯುತ್ತದೆ. ಉದಾ:

'ಏಕಸ್ಯ ಭಾವಃ = ಏಕತಾ' ಅಂದರೆ 'ಏಕ'ದ ಭಾವ ಏಕತೆ. ಏಕ + ತಾ ಎಂಬಲ್ಲಿ ಸೇರುವ 'ತಾ', ಕನ್ನಡದಲ್ಲಿ 'ತೆ'ಯಾಗುತ್ತದೆ.
ಹಾಗೆಯೇ, ಜನಸ್ಯ ಭಾವಃ = ಜನತಾ. 'ಜನ'ದ ಭಾವವೇ 'ಜನತೆ'.

(ಇದನ್ನು ಕೆಲವರು ಸಮೂಹಾರ್ಥಕ ತದ್ಧಿತ ಎನ್ನುವುದೂ ಉಂಟು.)
ಆದ್ದರಿಂದ ನೀವು ಕೇಳಿದ ಗುಣವಾಚಕಗಳಿಗೆ:

ಕಾತರ (ಹೇಡಿತನ) -> ಕಾತರ + ತಾ = ಕಾತರತೆ. ಇದಕ್ಕೂ ಕನ್ನಡದ ಕಾತುರ/ಕಾತರ = ನಿರೀಕ್ಷೆ ಎಂಬುದಕ್ಕೂ ಸಂಬಂಧವಿಲ್ಲ.
ಮಲಿನ -> ಮಲಿನ + ತಾ = ಮಲಿನತೆ.
ಶ್ರೇಷ್ಠ -> ಶ್ರೇಷ್ಠ + ತಾ = ಶ್ರೇಷ್ಠತೆ.
ದರಿದ್ರ -> ದರಿದ್ರ + ತಾ = ದರಿದ್ರತೆ. (ದಾರಿದ್ರತೆ ತಪ್ಪು ಪದ.)

೨. ಸಂಬಂಧಾರ್ಥಕ ತದ್ಧಿತ
ಹೆಸರೇ ಹೇಳುವಂತೆ ಇದು ಒಂದು ಪದಾರ್ಥಕ್ಕೆ ಸಂಬಂಧಿಸಿದ ಮತ್ತೊಂದು ಪದಾರ್ಥವನ್ನು ತಿಳಿಸುವ ಪ್ರಯೋಗ. ಇಲ್ಲಿ 'ವೃದ್ಧಿಪದ' ಪ್ರಮುಖ ಕ್ರಿಯೆ. ಉದಾ:


'ಏಕಸ್ಯ ಇದಂ' = 'ಐಕ್ಯಂ' ; 'ಏಕ' ಎಂಬುದಕ್ಕೆ ಸಂಬಂಧಿಸಿದ್ದು = 'ಐಕ್ಯ'. ಇಲ್ಲಿ 'ಏಕ' ಎಂಬ ಪದದ ಮೊದಲಕ್ಷರಕ್ಕೆ ವೃದ್ಧಿಯಾದ 'ಐ' ಆದೇಶವಾಗಿದೆ. ಕೊನೆಯಕ್ಷರಕ್ಕೆ 'ಯ'ಕಾರದ ಆಗಮವಾಗಿದೆ. ಅಂದರೆ: ಏ+ ಕ್ + ಅ -> ಐ + ಕ್ + ಯ್ + ಅ ಹಾಗೆಯೇ,

ಮಲಿನ -> ಮಾ + ಲಿ + ನ್ + ಯ = ಮಾಲಿನ್ಯ
ದರಿದ್ರ -> ದಾ + ರಿ + ದ್ರ್ + ಯ = ದಾರಿದ್ರ್ಯ. ಇದೇ ಪದವೇ ಅಪಭ್ರಂಶವಾಗಿ 'ದಾರಿದ್ರ' ವಾಗಿ 'ದಾರಿದ್ರತೆ'ಯೂ ಆಗಿಬಿಟ್ಟಿದೆ! ಬಹಳ ತಪ್ಪು!

ನೀವು ಕೇಳಿರುವ ಕೊನೆಯೆರಡು ಪದಗಳು ವಿಶೇಷವಾದವು. ಇವುಗಳ ಮೂಲ ಗುಣವಾಚಕವಲ್ಲದೆ, ನಾಮಪದವೇ! ಇವುಗಳನ್ನು ಗುಣವಾಚಕವನ್ನಾಗಿಸಲು 'ಇಕ' ಪ್ರತ್ಯಯ ಬಳಸಲಾಗಿದೆ. ಇಲ್ಲಿಯೂ ವೃದ್ಧಿಯಾಗುತ್ತದೆ. ಉದಾ:

ನಗರ -> ನಾ + ಗರ್ + ಇಕ = ನಾಗರಿಕ
ವಿಚಾರ -> ವೈ + ಚಾರ್ + ಇಕ = ವೈಚಾರಿಕ

ಇವುಗಳನ್ನು ಮತ್ತೆ ನಾಮಪದದ ರೂಪಕ್ಕೆ ತಂದರೆ,

ನಗರ (ನಾಮಪದ) -> ನಾಗರಿಕ (ಗುಣವಾಚಕ) -> ನಾಗರಿಕ + ತಾ = ನಾಗರಿಕತೆ (ತದ್ಧಿತ)
ವಿಚಾರ (ನಾಮಪದ) -> ವೈಚಾರಿಕ(ಗುಣವಾಚಕ) -> ವೈಚಾರಿಕ + ತಾ = ವೈಚಾರಿಕತೆ (ತದ್ಧಿತ)

ಆದ್ದರಿಂದ, ಇವೇ ಸರಿಯಾದ ಪ್ರಯೋಗ; ಅನುಮಾನವೇ ಬೇಡ. ಆದರೆ ಸರಿಯಾಗಿ ತಿಳಿಯದೆ ಎರಡೆರಡು ತದ್ದಿತವನ್ನು ಪ್ರಯೋಗಿಸುವ ರೂಢಿ ಇತ್ತೀಚೆಗೆ ಹುಟ್ಟಿಕೊಂಡಿದೆ; ಅದೇ ಇಲ್ಲಿನ ಚರ್ಚೆಯ ವಸ್ತುವಾಗಿದ್ದು. ಉದಾ:

ಏಕ -> 'ಏಕತೆ' ಅಥವಾ 'ಐಕ್ಯ' ಎರಡೂ ಸರಿ; ಆದರೆ 'ಐಕ್ಯತೆ' ಸರಿಯಲ್ಲ.

'ಐಕ್ಯ'ವೇ ನಾಮಪದವಾದ ಮೇಲೆ ಅದಕ್ಕೆ 'ತೆ' ಮತ್ತೇಕೆ? 'ತಲೆಶಿರೋಭಾರ' ಅಷ್ಟೇ!

ನಿಮ್ಮವ
ಬೆನಕ

‹ `ಓವಿ ' ಪದದ ಅರ್ಥವೇನು? ಆಡುಗನ್ನಡ ವ್ಯಾಕರಣ - ’ಉ’ ಕೊನೆ ›
  • ವ್ಯಾಕರಣ
Ornamental seperator
  • Login or register to post comments
  • 995 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 11, 2006 - 8:39am — shaamala

ವ್ಯಾಕರಣ : ತದ್ಧಿತ

shaamala's picture

 

ಬೆನಕ ಅವರೆ,

ನಿಮ್ಮ ಸುದೀರ್ಘವಾದ ವಿವರಣೆಗೆ ಧನ್ಯವಾದಗಳು. ಸಾಕಷ್ಟು ಸಮಯ ವೆಚ್ಚ ಮಾಡಿ ಚೆನ್ನಾಗಿ ವಿವರಿಸಿದ್ದೀರ.

ನನಗೆ ಕನ್ನಡದ ವ್ಯಾಕರಣ ಹೆಚ್ಚಾಗಿ ತಿಳಿದಿಲ್ಲ, ಆದರೆ ಭಾಷಾಶುದ್ಧಿಯ ಬಗ್ಗೆ ಕಾಳಜಿ ಮಾತ್ರ ಬಹಳಷ್ಟಿದೆ.

ನಿಮ್ಮ ವಿವರಣೆ ನೋಡಿ ಈಗಲಾದರೂ ಕನ್ನಡ ವ್ಯಾಕರಣವನ್ನು ಸರಿಯಾಗಿ ತಿಳಿದುಕೊಳ್ಳಬೇಕೆಂಬ ಆಸೆ ಬಂದಿದೆ.

ಪ್ರೌಢಶಾಲೆಯಲ್ಲಿ ಸಂಸೃತ ಭಾಷೆಯನ್ನೌ ಆರಿಸಿಕೊಂಡಿದ್ದರಿಂದ ಕನ್ನಡದಲ್ಲಿ ಪ್ರೌಢಿಮೆ ಕಡಿಮೆಯಾಯಿಯುತು.

ಆದರೂ ಸಂಸೃತ ಭಾಷೆಯ ಪರಿಚಯದಿಂದ ಸ್ವಲ್ಪ ಮಟ್ಟಿಗೆ ಹೊಸ ದಿಗಂತದ ಅನುಭವ ಸಾಧ್ಯವಾಯಿತೆಂದು ನನ್ನ ಭಾವನೆ.

ಇರಲಿ, ನೀವು ಹೇಳುತ್ತೀರ- "ನೀವು ಕೇಳಿರುವ ಪದಗಳು ಸಂಸ್ಕೃತ ಮೂಲದವು; ಆದ್ದರಿಂದ ತದ್ಭವರೂಪಗಳನ್ನು

ಬಳಸುವುದು ಮಾತ್ರ ವ್ಯಾಕರಣದ ದೃಷ್ಟಿಯಲ್ಲಿ ಸರಿಯಾದ ಪ್ರಯೋಗ." ಹಾಗಂದರೆ ತತ್ಸಮಗಳನ್ನು ಬಳಸುವುದು

ತಪ್ಪು ಎನ್ನುತ್ತೀರಾ?

 

ನಿಮ್ಮ ಜಪಾನ್ ದೇಶದ ಅನುಭವಗಳ ಮುಂದಿನ ಕಂತನ್ನು ಎದುರು ನೋಡುತ್ತಿದ್ದೇನೆ.

 

ನಮಸ್ಕಾರಗಳೊಂದಿಗೆ,

'ಶಾಮಲ' (ಶ್ಯಾಮಲ ಅಲ್ಲ- ಇದರ ಹಿಂದೊಂದು ಕಥೆ ಇದೆ, ಈಗ ಬೇಡ)

 

How do I make the font size bigger in the rich-text format? Can anyone please tell me?

  • Login or register to post comments
  • link
  • Email this ಪ್ರತಿಕ್ರಿಯೆ
July 11, 2006 - 11:12pm — ahoratra

ಬೆನಕರೆ ನಿಮಗೆ ವಂದನೆ.

ahoratra's picture

ವ್ಯಾಕರಣ ಮಹಾಸಾಗರ, ಅದು ನದಿಯಲ್ಲ ಎಂದು ನಮಗೆ ಅರಿವಾಯಿತು.ಊಹಿಸಲಸಾದ್ಯವಾದ ಜ್ಞಾನಭಂಡಾರ ನಿಮ್ಮಲ್ಲಿದೆ. ಧನ್ಯವಾದ

ಅಹೋರಾತ್ರ

  • Login or register to post comments
  • link
  • Email this ಪ್ರತಿಕ್ರಿಯೆ
July 11, 2006 - 1:10pm — benaka

ತತ್ಸಮ

benaka's picture

ಶಾಮಲ ಅವರೆ,
ತತ್ಸಮಗಳ ಬಳಕೆ ಖಂಡಿತವಾಗಿಯೂ ತಪ್ಪಲ್ಲ; ಅವು ನೇರವಾಗಿ ಸಂಸ್ಕೃತಪದಗಳು ಅಷ್ಟೇ.
ಉದಾ: ಶ್ಯಾಮಲಾ (ತ್ಸ) --> ಶ್ಯಾಮಲೆ, ಶ್ಯಾಮಳೆ (ದ್ಭ) ಆದಂತೆ,
'ದರಿದ್ರತಾ' (ತ್ಸ) --> 'ದರಿದ್ರತೆ' (ದ್ಭ). ನಾನು ಹೇಳಿದ್ದು ಇದನ್ನೇ ಹಿಗ್ಗಾ ಮುಗ್ಗಾ ಎಳೆದು - ದಾರಿದ್ರತೆ, ದಾರಿದ್ರ್ಯತೆ ಇತ್ಯಾದಿ ಮಾಡುವುದು ಬೇಡ ಎಂದಷ್ಟೆ.
ತತ್ಸಮ, ತದ್ಭವ ಎರಡರಲ್ಲೂ ವ್ಯಾಕರಣ ಭಾಗ ಮಾತ್ರ ವ್ಯತ್ಯಾಸ ಆಗದಿರಲೆಂದು ನನ್ನ ಆಶಯ.

ನನ್ನ ನಾಲ್ಕು ವಾಕ್ಯಗಳು ನಿಮಗೆ ವ್ಯಾಕರಣದಲ್ಲಿ ಆಸಕ್ತಿ ಮೂಡಿಸಿದರೆ, ಧನ್ಯನಾದೆ!
ನಿಮ್ಮವ

 

ಬೆನಕ

  • Login or register to post comments
  • link
  • Email this ಪ್ರತಿಕ್ರಿಯೆ
July 11, 2006 - 12:12pm — ಮಹೇಶ ಭೋಗಾದಿ

ವಚನೇ ಕಾ ದರಿದ್ರತಾ!

ಮಹೇಶ ಭೋಗಾದಿ's picture

ಬೆನಕರೆ,
ಶರಣು!

ನೀವು ಬರೆದದ್ದನ್ನು ಸುನಿಲರು ನನಗೆ ತೋರಿಸಿದರು.

ನಿಮ್ಮ
"ದರಿದ್ರ -> ದಾ + ರಿ + ದ್ರ್ + ಯ = ದಾರಿದ್ರ್ಯ. ಇದೇ ಪದವೇ ಅಪಭ್ರಂಶವಾಗಿ 'ದಾರಿದ್ರ' ವಾಗಿ 'ದಾರಿದ್ರತೆ'ಯೂ ಆಗಿಬಿಟ್ಟಿದೆ! ಬಹಳ ತಪ್ಪು!" ಮಾತಿಗೆ ಸಂಬಂಧಿಸಿದಂತೊಂದು ಮನವಿ.

"ದಾರಿದ್ರತಾ" ಇದು ತಪ್ಪೆಂದೊಪ್ಪುತ್ತೇನೆ.

ನಾನೊಂದು ಸುಭಾಷಿತವನ್ನು ಕಲಿತಿಹೆನು, ಅದು

ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯಂತಿ ಜಂತವಃ|
ತಸ್ಮಾತ್-ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ||

ಈ ಸುಭಾಷಿತದಲ್ಲಿ "ದರಿದ್ರತಾ" ಎನ್ನುವುದು ವ್ಯಾಕರಣದೋಷವೆ? ಇದೊಂದು ಬಹಳ ಪ್ರಸಿದ್ಧವಾದ ಸುಭಾಷಿತ?

ನನ್ನ ತಿಳಿವಿನಂತೆ
ದಾರಿದ್ರ್‍ಯಂ(ನಪುಂಸಕಲಿಂಗ) = ದರಿದ್ರತಾ (ಸ್ತ್ರೀಲಿಂಗ)
ಔದಾರ್ಯಂ(ನಪುಂಸಕಲಿಂಗ) = ಉದಾರತಾ(ಸ್ತ್ರೀಲಿಂಗ)
ಕಾರುಣ್ಯಂ (ನಪುಂಸಕಲಿಂಗ) = ಕರುಣಾ(ಸ್ತ್ರೀಲಿಂಗ)
ಕ್ರೌರ್ಯಂ (ನಪುಂಸಕಲಿಂಗ) = ಕ್ರೂರತಾ(ಸ್ತ್ರೀಲಿಂಗ)

ಕೊನೆಯ ಮಾತು, ಕನ್ನಡ ವ್ಯಾಕರಣವು, ಸಂಸ್ಕೃತ ವ್ಯಾಕರಣವನ್ನು ಇಷ್ಟೊಂದು ಅವಲಂಬಿಸಿದೆಯೆ?

ಇಂತಿ,
ಮಹೇಶ.

  • Login or register to post comments
  • link
  • Email this ಪ್ರತಿಕ್ರಿಯೆ
July 11, 2006 - 12:55pm — benaka

ಸರಿಯಾಗಿಯೇ ಇದೆ

benaka's picture

ಮಹೇಶರೆ,

ಖಂಡಿತವಾಗಿಯೂ ಅದು ಚಿರಪರಿಚಿತ ಉತ್ತಮ ಸುಭಾಷಿತ; ಅದರಲ್ಲಿನ 'ದರಿದ್ರತಾ' ಎಂಬ ಪ್ರಯೋಗ ಸರಿಯಾಗಿಯೇ ಇದೆ. ಬಹುಶಃ ನೀವು ಸಂಬಂಧಾರ್ಥಕ ತದ್ಧಿತದ ೪ ನೇ ಉದಾಹರಣೆಯನ್ನು ಗಮನಿಸಿಲ್ಲವೆನಿಸುತ್ತದೆ. 'ದಾರಿದ್ರ್ಯಂ' ಹಾಗೂ 'ದರಿದ್ರತಾ' ಎರಡೂ ಸರಿಯೇ - ಕನ್ನಡದಲ್ಲಿ ಅವು - ದಾರಿದ್ರ್ಯ ಹಾಗೂ ದರಿದ್ರತೆ; ಎರಡೂ ಸರಿಯಾಗಿವೆ. ನಾನು ಹೇಳಿದ್ದು 'ದಾರಿದ್ರತಾ' ಎಂಬುದು ದೋಷ ಎಂದು. ಸಂಸ್ಕೃತಭಾಷೆ ಭಾರತದ ಭಾಷೆಗಳಲ್ಲಿ ಹಾಸು-ಹೊಕ್ಕಾಗಿದೆ; ಆದ್ದರಿಂದ ಸಂಸ್ಕೃತ ಪದಗಳನ್ನು ಬಳಸುವಾಗ ಆ ಭಾಷೆಯ ವ್ಯಾಕರಣವನ್ನು ಅನುಸರಿಸುವುದು ಸೂಕ್ತವೆಂದು ನನ್ನ ಅಭಿಪ್ರಾಯ. ತಿಳಿದೋ ತಿಳಿಯದೆಯೋ, ಈಗಾಗಲೇ ಅದು ಎಲ್ಲ ಭಾಷೆಗಳಲ್ಲೂ ಅನುಸರಿಸಲ್ಪಡುತ್ತಿದೆ.

ನಿಮ್ಮವ

ಬೆನಕ

  • Login or register to post comments
  • link
  • Email this ಪ್ರತಿಕ್ರಿಯೆ
July 11, 2006 - 2:03pm — ಮಹೇಶ ಭೋಗಾದಿ

ಧನ್ಯವಾದ

ಮಹೇಶ ಭೋಗಾದಿ's picture

ನನಗುತ್ತರವು ದೊರಕಿತು.

ತೊಂದರೆಯಾಗಿದ್ದಲ್ಲಿ ಮನ್ನಿಸಿರಿ.

  • Login or register to post comments
  • link
  • Email this ಪ್ರತಿಕ್ರಿಯೆ
July 11, 2006 - 1:45pm — shreekant.mishrikoti

ಪಂಡಿತರ ತಪ್ಪುಗಳು!

shreekant.mishrikoti's picture

ಈ ಚರ್ಚೆ ಸಾಮಾನ್ಯನಾದ ( ವೈಯಾಕರಣಿಯೂ ಅಲ್ಲದ , ಭಾಷಾಶಾಸ್ತ್ರಿಯೂ , ಸಮಾಜಶಾಸ್ತ್ರಿಯೂ , ಇತ್ಯಾದಿ ಇತ್ಯಾದಿ ಅಲ್ಲದ) ನಾನು ಬರೆದೊಂದು ಪದದಿಂದ ಆರಂಭವಾಯಿತು . ಈಗಾಗಲೇ ಸಾವಿರ ನೆಟ್ಟೊದೆತಗಳು ಇಲ್ಲಿ ಬಿದ್ದಿವೆ! .

ನಾನು ಬಹುತೇಕ ಈ ಚರ್ಚೆಯಿಂದ ದೂರವಿದ್ದೇನೆ . ಏಕೆಂದರೆ ನನಗೆ ಅಷ್ಟೆಲ್ಲ ತಿಳಿಯುವದಿಲ್ಲ.
ಆದರೆ
ನನ್ನದು ಒಂದು ಪ್ರಶ್ನೆ.

ಭಾಷಾ ಶುದ್ಧತೆಯ ಚರ್ಚೆಯಲ್ಲಿ ತೊಡಗಿರುವ ಪಂಡಿತರೇ ತಪ್ಪು ತಪ್ಪಾಗಿ ಬರೆಯುತ್ತಿದ್ದಾರಲ್ಲ ?!
ಉ: ಮನ್ನಸಿರಿ , ವೂಹಿಸಲಸಾದ್ಯವಾದ ಇತ್ಯಾದಿ
ಈ ಬಗ್ಗೆ ಪಂಡಿತರು ಏನು ಹೇಳುತ್ತಾರೆ ?

ಶ್ರೀಕಾಂತ ಮಿಶ್ರಿಕೋಟಿ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • *ವಿಶ್ವ ಮಹಿಳಾ ದಿನದ ಶುಭಾಷಯಗಳು*
  • ಚಲುವ ಕನ್ನಡ ಕಸ್ತೂರಿ
  • ಒಂಥರಾ ಪ್ರೀತಿ...
  • ನೆನಪು...
  • ವಿರಹದಲಿಮನ
Syndicate content

ಲೇಖಕರು

benaka's picture

ಪರಿಚಯ

ಹೊಯ್ಸಳರ ವೈಭವದಿ ಮೆರೆದು
ಪರಕೀಯರ ದಾಳಿಗೆ ಕೈಮುರಿದು
ದಂತವ ಎಡದ ಕೈಯಲಿ ಹಿಡಿದು
ನವಭಾರತವ ಕನ್ನಡದಿ ಬರೆಯೆ ಕಾದಿಹ ಬೆನಕ ಮೈಮುರಿದು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator