Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ

July 22, 2006 - 5:07pm — Sunil Jayaprakash

ಗೆಳೆಯರೆ, ನನಗೆ ಕಳೆದುಹೋಗಿರುವ ಒಂದು ಕನ್ನಡ ಪದ್ಯ ಬೇಕಾಗಿದೆ, ದಯವಿಟ್ಟು ಸಹಾಯ ಮಾಡಿರೆಂದು ಕೇಳಿಕೊಳ್ಳುವೆ. ಆ ಪದ್ಯದ ಕೆಲವು ಸಾಲುಗಳು ಮಾತ್ರ ನನಗೆ ತಿಳಿದಿವೆ.

ನಾನು ಈಗ್ಗೆ ಸುಮಾರು ತಿಂಗಳ ಹಿಂದೆ, ಗೋಖಲೆ ಸಾರ್ವಜನಿಕ ವಿಚಾರ ಸಂಕೀರ್ಣದಲ್ಲಿ, "ಶಿವಾನಂದ ಲಹರಿ" ಬಗ್ಗೆ ಒಂದು ಉಪನ್ಯಾಸ ಕೇಳುತ್ತಿದ್ದೆ. ಆಗ ಈ ಪದ್ಯದ ಪ್ರಸ್ತಾಪವಾಗಿತ್ತು,

ಯಾರೋ ಪುಣ್ಯಾತ್ಮರು ಈ ರೀತಿ ಒಂದು ಸರಳ ಪದ್ಯವನ್ನು ಬಹಳ ಹಿಂದೆ ರಚಿಸಿರುವರಂತೆ.
ಸುಲಿದ ಬಾಳೆಯಹಣ್ಣಿನಂದದಿ...
ಕಳಿದ.....ಕಬ್ಬಿನಂದದಿ...
......................
ಸಂಸ್ಕೃತದಲ್ಲಿನ್ನೇನು.

ಆ ಪದ್ಯದ ಅರ್ಥ ಹೀಗಂತೆ..
ನಮ್ಮ ಕನ್ನಡ ಭಾಷೆಯು, ಸುಲಿದ ಬಾಳೆ ಹಣ್ಣಿನಂತೆ, ಕಬ್ಬಿನ ಹಾಲು ಕುಡಿದಷ್ಟೇ ಸಿಹಿ.....ಹೀಗೆ ಸರಳವಾಗಿ ಇರುವ ಕನ್ನಡ ಭಾಷೆಯಲ್ಲಿ ನಾನು ಹೇಳುತ್ತೇನೆ. ಸಂಸ್ಕೃತದಲ್ಲಿ ಅದರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಸಂಸ್ಕೃತದಲ್ಲೂ ಅದೇ ಹೇಳಿದೆ.

ಜೇನಿನ ಹೊಳೆಯಾಗಿರುವ, ಹಾಲಿನ ಮಳೆಯಾಗಿರುವ ನಮ್ಮ ಕನ್ನಡ ಭಾಷೆಯನ್ನು ಇನ್ನಷ್ಟು ಸರಳವಾಗಿ ಹೊಗಳಿರುವ ಆ ಪದ್ಯ ಬೇಕಾಗಿದೆ. ನನಗೆ ಆ ಪದ್ಯವನ್ನು ದಯಮಾಡಿ ಯಾರಾದರು ತಿಳಿಸಿಕೊಟ್ಟರೆ ನಾನು ನಿಜವಾಗಿಯೂ ಚಿರಋಣಿಯಾಗಿರುತ್ತೇನೆ.

‹ ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು ಕಬ್ಬಿಗ = ಕವಿ ›
  • ಸಾಹಿತ್ಯ, ಭಾಷೆ
Ornamental seperator
  • Login or register to post comments
  • 1532 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 22, 2006 - 5:13pm — Sunil Jayaprakash

ಸುಲಿದ ಬಾಳೆಯ ಹಣ್ಣಿನಂದದಿ

Sunil Jayaprakash's picture

ಗೂಗಲ್ ಮಾಡಿದಾಗ, ಡಾ || ಚಿದಾನಂದಮೂರ್ತಿಯವರು ಈ ಪದ್ಯದ ಹಿರಿಮೆಯ ಬಗ್ಗೆ ವಿಶ್ವಕನ್ನಡದಲ್ಲಿ ಬರೆದಿರುವ ಒಂದು ಲೇಖನ ಕಂಡಿತು. ಇಂತಹ ಲೇಖನಗಳನ್ನು ಓದಲೇ ಬೇಕು ನಾವೆಲ್ಲರು.

  • Login or register to post comments
  • link
  • Email this ಪ್ರತಿಕ್ರಿಯೆ
July 23, 2006 - 1:40am — mana

Re: ಸುಲಿದ ಬಾಳೆಯ ಹಣ್ಣಿನಂದದಿ

mana's picture

ಸುನಿಲ್, ನೀವು ಕೇಳಿರುವ ಪದ್ಯ ಇಲ್ಲಿದೆ.

---------

 

ಸುಲಿದ ಬಾಳೆಯ ಹಣ್ಣಿನಂದದಿ

ಕಳೆದ ಸಿಗುರಿನ ಕಬ್ಬಿನಂದದಿ

ಅಳೆದ ಉಷ್ಣದ ಹಾಲಿನಂದದಿ ಸುಲಭವಾಗಿರುವ ಈ

ಲಲಿತವಹ ಕನ್ನಡ ನುಡಿಯಲಿ

ತಿಳಿದು ತನ್ನಲಿ ತನ್ನ ಮೋಕ್ಷವ

ಗಳಿಸಿಕೊಂಡರೆ ಸಾಲದೆ? ಸಂಸ್ಕೃತದಲಿನ್ನೇನು?

  • Login or register to post comments
  • link
  • Email this ಪ್ರತಿಕ್ರಿಯೆ
July 24, 2006 - 9:34am — nadahalli

Comment on (ಮನ's) comment

nadahalli's picture

ಈ ಪದ್ಯವನ್ನು ರಚಿಸಿದವರಾರೆಂದು ತಿಳಿಸಿಕೊಟ್ಟರೆ ಚೆನ್ನಿತ್ತು.

  • Login or register to post comments
  • link
  • Email this ಪ್ರತಿಕ್ರಿಯೆ
July 24, 2006 - 10:16am — Sunil Jayaprakash

ಸುಲಿದ ಬಾಳೆಯ ಹಣ್ಣಿನಂದದಿ - ರಚಿಸಿದವರು

Sunil Jayaprakash's picture

ಡಾ|ಚಿದಾನಂದಮೂರ್ತಿಯವರು ಪ್ರಸ್ತಾಪಿಸಿರುವಂತೆ ಇದರ ರಚನಕಾರ ಮಹಾಲಿಂಗರಂಗ ಎಂಬ ಕವಿ. ಇದರ ಪೂರ್ಣ ಲೇಖನ ಇಲ್ಲಿದೆ.

  • Login or register to post comments
  • link
  • Email this ಪ್ರತಿಕ್ರಿಯೆ
July 24, 2006 - 10:26am — Sunil Jayaprakash

ಮನರವರಿಗೆ ನಮೋನಮಃ

Sunil Jayaprakash's picture

ನನಗೆ ಬಹಳ ಸಂತೋಷವಾಗುತ್ತಿದೆ. ಈ ಪದ್ಯವನ್ನು ತಿಳಿಸಿ ಬಹಳ ಉಪಕಾರವನ್ನು ಮಾಡಿರುವಿರಿ "ಮನ" ಅವರೇ. ಸವಿಯೊದಗು.

  • Login or register to post comments
  • link
  • Email this ಪ್ರತಿಕ್ರಿಯೆ
July 24, 2006 - 10:26am — ಮಹೇಶ ಭೋಗಾದಿ

ಸವಿ ಸಿರಿ ಗನ್ನಡಂ ಗೆಲ್ಗೆ

ಮಹೇಶ ಭೋಗಾದಿ's picture

ನಲಿವಾಯಿತು ಜೀವಕ್ಕೆ
ಒಲವಾಯಿತು ಭಾವಕ್ಕೆ
ಕನ್ನಡದ ಈ ಹೊಗಳಿಕೆ
ತಿಂದ ಹಾಗೆ ಹೋಳಿಗೆ

  • Login or register to post comments
  • link
  • Email this ಪ್ರತಿಕ್ರಿಯೆ
August 10, 2006 - 8:20am — benaka

ಸಕ್ಕರೆಯದು ಕನ್ನಡದ ಪಾಲ್ಗೆ!

benaka's picture

ಗೆಳೆಯರೇ,

ಸಾಲದೇ, 'ಸಂಸ್ಕೃತದಲಿನ್ನೇನು'? ಎಂಬುದೇನೋ ಸರಿ, ಕನ್ನಡದ ಹಿರಿಮೆ ಅರ್ಥವಾಗುತ್ತದೆ. ಆದರೆ, ಸಂಸ್ಕೃತವಿಲ್ಲದೆ ಕನ್ನಡವಿಲ್ಲ ಎಂಬುದಕ್ಕೆ ಇದೇ ಪದ್ಯವೇ ಒಳ್ಳೆಯ ಉದಾಹರಣೆ. ಏಕೆಂದರೆ ಇಲ್ಲಿಯೂ ಕೂಡ ಸಕ್ಕದದ ಬಳಕೆಯಿದೆ! ನೋಡಿ:

'ಉಷ್ಣ'ದ ಹಾಲು, 'ಸುಲಭ'ವಾಗಿರುವ, 'ಲಲಿತ'ವಹ, 'ಮೋಕ್ಷ' -> ಎಲ್ಲ ಶುದ್ಧ ಸಕ್ಕದಪದಗಳೇ! ಅಲ್ಲವೇ?

ಸಕ್ಕದದೊಳಿನಿತಕ್ಕರೆಯಿರಲ್
ಸಕ್ಕರೆಯದು ಕನ್ನಡದ ಪಾಲ್ಗೆ!

ನಿಮ್ಮ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • Email this ಪ್ರತಿಕ್ರಿಯೆ
June 8, 2007 - 4:13pm — Sunil Jayaprakash

ಉ: ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ

Sunil Jayaprakash's picture

ಗೆಳೆಯರೆ,

ಈ ದಿನ ಅಶೋಕ್ ಅವರು ಒಂದು ಕೊಂಡಿಯನ್ನು ನೀಡಿ ದೊಡ್ಡ ನೆರವನ್ನಿತ್ತರು. ತೆರೆದು ನೋಡಿದರೆ, ನಾವುಗಳು ತುಂಬಾ ದಿನಗಳಿಂದ ಕಾಯುತ್ತಿದ್ದ ಪುಸ್ತಕ ಸಿಕ್ಕಿತು.

ಈ ಪುಸ್ತಕದ ಮುನ್ನುಡಿಯನ್ನು ತಿರುವಿ ಹಾಕಿದಾಗ ತಿಳಿದುಬಂದದ್ದು, ಅನೇಕ ಕುತೂಹಲಕಾರಿಯಾದ ಅಂಶಗಳು.
೧. ಈ ಗ್ರಂಥದ ಕರ್ತೃವಿಗೂ, ಚಿತ್ರದುರ್ಗಕ್ಕೂ ಏನೋ ನಂಟಿದೆ.
೨. ನಾವು ಸಂಸ್ಕೃತದ ಅನೇಕ ಗ್ರಂಥಗಳು ಕನ್ನಡಕ್ಕೆ ಭಾಷಾಂತರವಾಗಿರುವದನ್ನು ಕಾಣುತ್ತೇವೆ. ಆದರೆ ಕುತೂಹಲಕಾರಿಯಾದ ಅಂಶವೆಂದರೆ, ಈ ಕನ್ನಡ ಗ್ರಂಥವು ಸಂಸ್ಕೃತಕ್ಕೆ ಭಾಷಾಂತರವಾಗಿದೆಯಂತೆ. "ಶ್ರೀಮತ್ಪರಮಹಂಸ ಬಾಲಕೃಷ್ಣ ಬ್ರಹ್ಮಾನಂದ ರಾಜಯೋಗಿಗಳು" ಇದನ್ನು ೧೭೩೫ರಲ್ಲಿ ಸಂಸ್ಕೃತಕ್ಕೆ ಅನುವಾದ ಮಾಡಿರುವರಂತೆ.

ಅನುಭವಾಮೃತ ಪುಸ್ತಕವನ್ನು ಪೂರ್ತಿಯಾಗಿ ಓದಲು ಇಲ್ಲಿ ಕ್ಲಿಕ್ಕಿ. ಶ್ರೀಮಹಲಿಂಗರಂಗಕವಿಯ ಅನುಭವಾಮೃತ (ಶುದ್ಧಪಾಠ) ಸರ್ವಾರ್ಥಸಂದರ್ಶಿನಿ ಎಂಬ ಟೀಕಿನೊಡನೆ - ಮುದ್ರಣ ೧೯೩೬

ಈ ಪುಸ್ತಕ ತುಂಬಾ ತೂಕವುಳ್ಳದ್ದೆನಿಸುತ್ತಿದೆ. ಓದಿದರೆ ತಿಳಿಯುವುದು. ಬಿಡುವಿದ್ದಾಗ ಅಥವಾ ಅದ್ವೈತದಲ್ಲಿ ಆಸಕ್ತಿಯುಳ್ಳವರು ಓದಬಹುದು. ಪಿ.ಡಿ.ಎಫ್ ಎಲ್ಲಿಯಾದರೂ ಅಪ್ಲೋಡ್ ಮಾಡಲು ಪ್ರಯತ್ನಿಸುವೆ.

  • Login or register to post comments
  • link
  • Email this ಪ್ರತಿಕ್ರಿಯೆ
June 8, 2007 - 10:44pm — ASHOKKUMAR

ಉ: ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ

ASHOKKUMAR's picture

ಸುನೀಲ್‍ಜಿ,
ನಿಮ್ಮ ಡೌನ್‍ಲೋಡ್ ಸಲಕರಣೆಗೆ ಧನ್ಯವಾದಗಳು.
ಅನುಭವಾಮೃತ ಪುಸ್ತಕವನ್ನು ಇಳಿಸಿಕೊಂಡೆ. ಇದನ್ನು ಅಂತರ್ಜಾಲದ ಈ ಕೊಂಡಿಯಲ್ಲಿ ಇರಿಸಿದ್ದೇನೆ. ಬೇಕಾದವರು ಇಳಿಸಿಕೊಳ್ಳಿ.
http://www.mediafire.com/?52m091zh1tz
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನುಭವಾಮೃತ - ೧
  • O L Nagabhushanaswami and Yeats
  • ಭಗವದ್ಗೀತೆ ಜ್ಞಾನಯೋಗದ ಬಗ್ಗೆ ಉಪನ್ಯಾಸ
  • ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?
  • ಘನಗಂಭೀರ ಕವಿತ್ವ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator