ನಮ್ಮ ಕನ್ನಡ ಟಿ.ವಿ ಚಾನಲ್ ನಿರೂಪಕರಿಗೆ ತರಬೇತಿಯ ಅವಶ್ಯಕತೆ
ಕಳೆದ ಶನಿವಾರ ನಮ್ಮೂರಿಗೆ ಹೋಗಿದ್ದೆ. ಹಾಗೇ ಬೆಳಗಿನ ಕಾಫಿ ಹೀರುತ್ತಾ ದೂರದರ್ಶನದ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ. ನನ್ಜೊತೆ ನಮ್ಮಮ್ಮ, ನಮ್ಮಜ್ಜಿ, ನಮ್ಮಣ್ಣ, ನಮ್ಮ ಅಕ್ಕನ ಮಕ್ಕಳು ಹಾಗೂ ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಜ್ಜ.. ಎಲ್ರೂ ಇದ್ದರು. ನಾವು ನೋಡುತ್ತಿದ್ದದ್ದು ಒಂದು ಕನ್ನಡ ಚಾನಲ್
ಟಿ.ವಿ. ಯಲ್ಲಿ ನಿರೂಪಣೆ ಶುರುವಾಯ್ತು.., ನಮ್ಮೆಲ್ಲರ ಗಮನ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿದ್ದ ನಿರೂಪಕಿಯ ಮೇಲೆ..,
"Good Morning everybody, I am .... ....(name), with you. ನಮ್ಜೊತೆ ಮಾತಾಡೋಕೆ call ಮಾಡಬೇಕಾದ ಸಂಖ್ಯೆ nine,double four..... "
(ಕರೆ ಸ್ವೀಕರಿಸಿದ ನಂತರ)
"Good Morning ....ರವರೆ, ಏನ್ ಮಾಡ್ತಾ ಇದ್ದೀರಿ? studies ಮಾಡ್ತಾ ಇದ್ದೀರಾ? ಅಥವಾ work ಮಾಡ್ತಾ ಇದ್ದೀರಾ?"
...
"well Mr....., we will play a beatiful song for you.."
ಹೀಗೆ ಎಲ್ಲಾ ಕರೆಗಳಲ್ಲೂ ಬರೀ ಆಂಗ್ಲ ಪದಗಳ ಅಟ್ಟಹಾಸ.
ಕೊನೆಗೆ,
"Thank you for calling, ನಾವೀಗ program endಗೆ ಬಂದಿದ್ದೀವಿ... ಮತ್ತೆ ಮುಂದಿನ್ ವಾರ, ಇದೇ Timege meet ಮಾಡೊಣ... ಅಲ್ಲಿವರೆಗೂ.. have a nice time.. take care bye bye".
ಮತ್ತೊಂದು ಕಾರ್ಯಕ್ರಮದಲ್ಲಿ.. ಕರ್ನಾಟಕದ ಇತಿಹಾಸದ ಬಗ್ಗೆ ಹೇಳಬೇಕಾದರೆ... dynasty, construct, soldiers, queens, children, elephant, iron rod.... ಇನ್ನೂ ಮುಂತಾದ ಜನಸಾಮಾನ್ಯರಿಗೆ ಅರ್ಥವಾಗದ ಶಬ್ದಗಳನ್ನು ಉಪಯೋಗಿಸುತ್ತಾರೆ.
ಅಲ್ಲಿ ಕುಳಿತಿದ್ದ ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಜ್ಜನಿಗೆ ಸುಮ್ನೆ ಕೇಳಿದೆ
"ಕಾರ್ಯಕ್ರಮದ ಸಂಭಾಷಣೆ ಅರ್ಥವಾಯಿತೆ ತಾತಾ?"
"ಆವಮ್ಮಂಗೇನೊ ಇಂಗ್ಲೀಸು-ತಂಗ್ಲೀಸು ಗೊತ್ತು ಅಂತ ನಮ್ಗೂ ಗೊತ್ತದೆ ಕಣಪ್ಪ,... ಆದ್ರೆ ನಮ್ಗೆ ಇಂಗ್ಲೀಸು ಗೊತ್ತಿಲ್ಲ ಅಂತ ಅವ್ರಿಗೆ ಗೊತ್ತಿಲ್ವಲ್ಲ..., ಬಿಡಪ್ಪ ಅತ್ಲಾಗೆ... ಏನಾರ ಮಾಡ್ಕಂಡ್ ಸಾಯ್ಲಿ..."
ಹೌದು, ದೂರದರ್ಶನದಲ್ಲಿ ಬರೋ ಶೇಕಡಾ ೮೦ ರಷ್ಟು ಕಾರ್ಯಕ್ರಮಗಳಲ್ಲಿ ಇಂಥದೇ ಸಂಭಾಷಣೆ ಇರುತ್ತೆ. ಇಂದು ಕರ್ನಾಟಕದಲ್ಲಿ ಬಹಳಷ್ಟು ಜನ ಅನಕ್ಷರಸ್ತರಿದ್ದಾರೆ, ಕನ್ನಡ ಮಾಧ್ಯಮದಲ್ಲಿ ಓದಿದವರಿದ್ದಾರೆ. ಬಹುಪಾಲು ಜನಕ್ಕೆ ಓದು ಬರಹ ಬಂದರೂ.. ಟಿ.ವಿ ನಿರೂಪಕರಷ್ಟು ಓದಿರುವುದಿಲ್ಲ. ಇದನ್ನ ನಿರೂಪಕರೂ ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ, ಕೇವಲ ತಮಗಿರುವ ಭಾಷಾಜ್ಞಾನ ಎಲ್ಲರಿಗೂ ತಿಳಿದಿದೆಯೆಂದು ತಿಳ್ಕೊಂಡಿರುತ್ತಾರೆ. ಅಷ್ಟೇ ಅಲ್ಲ... ಇನ್ನೂ ಒನ್, ಟೂ, ತ್ರೀ.. ಬಾರದ ನಮ್ಮ ಅಜ್ಜಿಯಿದ್ದಾರೆ, ಮಕ್ಕಳಿದ್ದಾರೆ., ಯಾರಿಗೂ ಎನೊಂದೂ ಅರ್ಥವಾಗದೇ ಕುಳಿತಿರುತ್ತಾರೆ.
ಇಂಥ ಕಾರ್ಯಕ್ರಮಗಳು ಕೇವಲ ಇಂಗ್ಲೀಷ್ ಬಲ್ಲ ವಿದ್ಯಾವಂತರಿಗಷ್ಟೇ ಸೀಮಿತವಾಗಿರುತ್ತವೆ.
ಆದ್ದರಿಂದ ಇನ್ನು ಮುಂದೆಯಾದರೂ ದೂರದರ್ಶನದವರು ತಾವು ಪ್ರಸಾರ ಮಾಡುವ ಕಾರ್ಯಕ್ರಮಗಳು ನಿರೂಪಕರಿಗಾಗಿ ಅಲ್ಲ, ಜನಸಾಮಾನ್ಯರಿಗೆ ಎಂದು ಅರ್ಥ ಮಾಡಿಕೊಂಡರೆ.. ಒಳ್ಳೆಯ ಕಾರ್ಯಕ್ರಮಗಳು ನಮ್ಮ ಜನಸಾಮಾನ್ಯರಿಗೆ ತಲುಪಿ.. ಯಶಸ್ಸನ್ನೂಗಳಿಸುತ್ತವೆ. ನಿರೂಪಕರಿಗೆ ಅತ್ಯಗತ್ಯವಾದ ಕನಿಷ್ಟ ತರಬೇತಿಯನ್ನಾದರೂ ನೀಡಿದರೆ... ಅದು ಕನ್ನಡವನ್ನು ಬೇಳೆಸುವುದಷ್ಟೇ ಅಲ್ಲದೆ, ಎಲ್ಲ ರೀತಿಯ ಜನರಿಗೆ ತಲುಪುತ್ತದೆ.

- Login or register to post comments
- 1251 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಕಮಲಹಾಸನ್ - ಉದಯೋನ್ಮುಖ ನಟ ?
ಮೊನ್ನೆ ಉದಯ ವಾಹಿನಿ ಅಂತ ಕಾಣುತ್ತೆ ( ಈ-ಟೀವಿ ಇದ್ದರೂ ಇರಬಹುದು) . ಸುಹಾಸಿನಿ-ವಿಷ್ಣುವರ್ಧನ್ ಹೊಸ ಚಿತ್ರ ಕುರಿತು ಹೇಳುವಾಗ ಕಮಲಹಾಸನ್ - ಉದಯೋನ್ಮುಖ ನಟ ಅಂತ ಹೇಳಿದರು !
ಉದಯೋನ್ಮುಖದ ಅರ್ಥ ಇವರಿಗೆ ಗೊತ್ತ್ಯಿಲ್ಲವೆ ? ಅಥವಾ ಕಮಲಹಾಸನ್ ಬಗ್ಗೆ ಗೊತ್ತಿಲ್ಲವೆ ?
ಶ್ರೀಕಾಂತ ಮಿಶ್ರಿಕೋಟಿ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಕಮಲಹಾಸನ್ ಬಗ್ಗೆ.....
ಶ್ರಿಕಾಂತರಿಗೆ,ನೀವು ಹೇಳಿದ್ದು ಸರಿಯಾಗಿದೆ.
ಅವರಿಗೆ 'ಉದಯೋನ್ಮುಖ'ಪದದ ಅರ್ಥ ಗೊತ್ತಿದ್ದಂತಿಲ್ಲ ! ಕನ್ನಡದಲ್ಲಿ ಕಡಿಮೆ ಚಿತ್ರಗಳಲ್ಲಿ ಅವನು ಅಭಿನಯಿಸಿರಬಹುದು.
ಆದರೆ, ಪದದ ಬಳಕೆ ಸರಿಯಿಲ್ಲ ವೆನಿಸುತ್ತೆ.
ವೆಂ.
ಜೊತೆಯಲ್ಲಿ ಅವರೂ ಗೋಣು ಆಡಿಸೋದು ಕಡಿಮೆ ಆದರೂ ಒಳ್ಳೆಯದೇ...
ಇಂಗ್ಲೀಷ್ ಮಿಶ್ರಿತ ಕನ್ನಡವನ್ನು ಸಲೀಸಾಗಿ ಮಾತನಾಡೋ ಈ ಲಲನಾಮಣಿಗಳ ಆರ್ಭಟವಿರಲಿ, ಜೊತೆಯಲ್ಲಿ ಅವರ ಕುತ್ತಿಗೆ ತಲೆಯನ್ನೆಲ್ಲ ಅಗತ್ಯಕ್ಕಿಂತ ಹೆಚ್ಚು ಕುಲುಕಿಸುವುದನ್ನು ನನ್ನಿಂದಂತೂ ನೋಡೋಕಾಗಲ್ಲಪ್ಪಾ!ಇಂಗ್ಲೀಷ್ ಮಿಶ್ರಿತ ಕನ್ನಡವನ್ನು ಸಲೀಸಾಗಿ ಮಾತನಾಡೋ ಈ ಲಲನಾಮಣಿಗಳ ಆರ್ಭಟವಿರಲಿ, ಜೊತೆಯಲ್ಲಿ ಅವರ ಕುತ್ತಿಗೆ ತಲೆಯನ್ನೆಲ್ಲ ಅಗತ್ಯಕ್ಕಿಂತ ಹೆಚ್ಚು ಕುಲುಕಿಸುವುದನ್ನು ನನ್ನಿಂದಂತೂ ನೋಡೋಕಾಗಲ್ಲಪ್ಪಾ!
'ಇ' ಟಿವಿ- ಚೆನ್ನಾಗಿದೆ. ಅದು ರಾಮೊಜಿ ರಾಯ್ರ್ದು ! ರಾಜ್ಕುಮಾರ್ದಲ್ಲ !!
'ನಮ್ಮ 'ಟೀವಿ' ಚಾನಲ್ ನಿರೂಪಕರಿಗೆ.......'
ಸರಿಯಾಗಿ ಹೇಳಿದ್ದೀರಿ.
"ಬಿಡಪ್ಪ ಅತ್ಲಾಗೆ, ಏನಾರ ಮಾಡ್ಕಂಡ್ ಸಾಯ್ಲಿ" ಅಂತ ನಿಮ್ಮ ಪ್ರಶ್ನೆಗೆ ಉತ್ತರ ಹೇಳಿದ್ನಲ್ಲ, ಅವನು ನೋಡಿ, ಇವರ ಯೋಗ್ಯತೆ ಸರಿಯಾಗಿ ಅಳ್ದಿದಾನೆ. ಹಳ್ಳಿ ರೈತನದೆ ಆದ ವ್ಯಕ್ತಿತ್ವ ಇದೆ. ಭಾಷೆ ಇದೆ. ಅವನೇಕೆ ಕೆಟ್ಟ ಬೆಂಗ್ಳೂರ್ ಭಾಷೆ ಮಾತಾಡ್ಬೇಕು.ಹೇಳಿ. ಕನ್ನಡ ವೂ ಸರಿಯಾಗ್ ಬರಲ್ಲ. ಇಂಗ್ಲೀಷು ಅಷ್ಟಕ್ಕಷ್ಟೆ ! ನಮ್ಮದೂ ಅಂತ ಎಲ್ಲಿದೆ ಒಂದು ಸರಿಯಾದ್ 'ಟಿವಿ' ಹೇಳಿ.
ತಮಿಳ್ ನೊರ್ಗೆ, ಜಯಲಲಿತ, ಕರುಣಾನಿಧಿ, ಹೇಳಿ ಮಾಡಿಸಿದಂತೆ ಸಹಕರಿಸಿದಾರೆ. ಕನ್ನಡದಲ್ಲಿ ರಾಜ್ ಕುಮಾರ್, ಮನಸ್ ಮಾಡಿದ್ರೆ, ಖಂಡಿತ ಇಂತಹ ಉತ್ತಮ ಕೆಲ್ಸಾ ಮಾಡ್ಬೊದಾಗಿತ್ತು. ಮಾಡ್ಲಿಲ್ವೆ !!
ನಮ್ಮ 'ಮನದ ಇಂಗಿತ'ಗಳನ್ನು ಹೇಳಲು ಒಂದ್ 'ಛಾನಲ್' ಆದ್ರು ಬೇಡ್ವೆ ಸ್ವಾಮಿ ?
ಯಾರು ಈ 'ಕನ್ನಡ್ದೊರು' ? ಅಂತ ಅನುಮಾನ ಬರುತ್ತೆ. 'ಬಂಗಾರದ ಬೇಟೆಯಲ್ಲಿ' ಕನ್ನಡದ 'ಮಾಡಾನ' ಅಂತ ತಪ್ಪು ತಪ್ಪು ಕನ್ನಡದಲ್ಲಿ 'ನಡೆಸಿಕೊಡುವ 'ಬೆಡಗಿಯ ವೈಯ್ಯಾರ ಮುಖ್ಯವೊ', ಅಥವಾ ಅವಳ ನುಡಿಯೋ ? ಯೋಚಿಸಿ. ಎಲ್ಲಿ 'ಟಿವಿ' ಗೆ ಸಂದರ್ಶನ ತೊಗೊಂಡ್ರೂ, ಮಾತು ಕನ್ನಡ ಬಿಟ್ಟು ಹಿಂದಿಯಲ್ಲೊ ಅಥವ ಇಂಗ್ಲೀಷ್ ನಲ್ಲೊ ಇರುತ್ತೆ. ಆಮೇಲೆ "ಕನ್ನಡವನ್ನು ಅವರ ಜಾಯಮಾನದಲ್ಲೇ ಉಪಯೋಗಿಸಿಲ್ಲವೇನೊ ಎಂಬಂತೆ ಪದಗಳಿಗೆ ಹುಡುಕಾಟ". ಮೊದಲು ಜನರಿಗೆ ಕನ್ನಡ ಭಾಷೆಯ 'ಸೊಗಡೇನು' ಅಂತ ತಿಳಿಸಿಕೊಡಿ ಮಾರಾಯ್ರೆ ! ಇದು ಮುಖ್ಯ. ಕನ್ನಡದ ತತ್ಸಮ, ತದ್ಭವ, ಕ್ರಿಯಾಪದದ ಬಳಕೆ ಸರಿಯಿಲ್ಲ. ಹ್ರಸ್ವ, ದೀರ್ಘ,ಒತ್ತು, ಕೊಂಡಿ ಇತ್ಯಾದಿ, ಆಮೇಲೆ ತಿಳಿಸಿ. ಬರೀ 'ಪಂಡಿತ ಪಾಮರರ ಮಾತುಕತೆ' ಸ್ವಲ್ಪ ನಿಲ್ಲಿಸಿ. ಬನ್ನಿ ಮೈದಾನಕ್ಕೆ. ನೋಡಿ ಏನಾಗ್ತಾ ಇದೆ ಪ್ರಪಂಚದ ವಿದ್ಯಮಾನಗಳು. ಕನ್ನಡದವರನ್ನು 'ಶಕ್ತಿಶಾಲಿ'ಗಳಾಗಿ ಮಾಡಿ. ಒಮ್ಮೆ ಅವರಿಗೆ ಆಸಕ್ತಿ ಬಂತು ಅಂದರೆ ಸಾಕು ಎಂಥಾ 'ಮೋಡಿ' ಆಗುತ್ತೆ ಗಮನಿಸಿ. ಯಾರಿಗೂ ಅವರ 'ಮಾತೃ ಭಾಷೆಯಮೇಲೆ ಅಭಿಮಾನ' ಇದ್ದೇ ಇರುತ್ತೆ. "ನಿರಭಿಮಾನದ ಧೂಳ" ನ್ನು ಕೊಡವಿ ಮುಂದುವರೆಯಲು ಅನುವುಮಾಡಿಕೊಡಿ ಅಯ್ಯ !
ಇನ್ನು 'ಚಂದನ- ಇದು ಕನ್ನಡ ವಾಹಿನಿ. ಎಂದು ಹೇಳಿದರೆ ಸಾಕೆ ? ಕೇಳ್ಸಲ್ಲ, ಕಾಣಲ್ಲ....ಅಂದ್ರೆ ನಮಗೆ....ಮುಂಬೈ ನಲ್ಲಿ.
'ಇ' ಟಿವಿ- ಚೆನ್ನಾಗಿದೆ. ಅದು ರಾಮೊಜಿ ರಾಯ್ರ್ದು ! ರಾಜ್ಕುಮಾರ್ದಲ್ಲ !!