ತಾಳಿ v / s ಜನಿವಾರ
ಈ ಹುಡುಗಿಯರು ನಾವು ಹುಡುಗರ ಮೇಲೆ ಒಂದು ವಿಷಯದಲ್ಲಿ ಸುಮ್ಮನೆ ಆರೋಪ ಹೊರಿಸುತ್ತಾರೆ. ಅದು ಏನೆಂದರೆ, "ಮದುವೆಯಾಗುವಾಗ ಹೆಂಗಸರಿಗೆ ಮಾತ್ರ ತಾಳಿ ಬಿಗಿಯುತ್ತಾರೆ, ಗಂಡಸರಿಗೆ ಮಾತ್ರ ಏನೂ ಇಲ್ಲವೇ ಇಲ್ಲ" ಅಂತ. ಆದರೆ ಅದು ತಪ್ಪು. ಕಡೇ ಪಕ್ಷ ನಮ್ಮ ಮನೆಗಳಲ್ಲಿ. ನಮ್ಮ ಮನೆಗಳಲ್ಲಿ, infact ಹುಡುಗಿಗಿಂತ ಹುಡುಗನಿಗೇ ಕಷ್ಟ.
ಹೇಗೆ ಅಂತೀರಾ. ನಮ್ಮ ಕಡೆ, ಮದುವೆಯಾಗುವಾಗ ಹುಡುಗನಿಗೆ '೬ ಎಳೆ ಜನಿವಾರ' ಹಾಕುತ್ತಾರೆ. ಹುಡುಗಿಗೆ 'ಒಂದೇ ಒಂದು ಎಳೆ ಸರ' ಹಾಕುತ್ತಾರೆ. ಅತ್ವಾ ಅನುಕೂಲ ಇದ್ದವರು ಎರಡು ಮೂರು ಎಳೆ ಸರ ಮಾಡಿಸಿ ಹಾಕುತ್ತಾರೆ.
ಅದಕ್ಕೆ ಪ್ರಶ್ನೆ ಬಂತು.
"ಆಹಾ!!! ಹುಡುಗರು ದಾರದ ಜನಿವಾರ ಹಾಕೋದು, ನಾವು ಹುಡುಗಿಯರು ಚಿನ್ನದ್ದು ಹಾಕ್ಕೋಬೇಕಲ್ಲ"
"ಅಯ್ಯೋ ಇದೊಳ್ಳೆ ಚೆನ್ನಾಯ್ತು. ಹುಡುಗಿಯು ಕೂಡ ಚಿನ್ನದ್ದೇ ತಾಳಿ ಕಟ್ಕೋಬೇಕು ಅಂತಿಲ್ಲ, ದಾರದ ತಾಳಿಯನ್ನೇ ಕಟ್ಟಿಕೊಳ್ಳಬಹುದು. ಶಾಸ್ತ್ರ ಸಮ್ಮತವಾಗಿ ದಾರದ ತಾಳಿಯನ್ನೇ ಕಟ್ಟಿಕೊಳ್ಳಲ್ಲಿ" :-)
ಈಗ ನೀವೇ ಹೇಳಿ, ನಾವು ಹುಡುಗರು ೬ ಎಳೆ, ಹುಡುಗಿಯರು ೧ ಎಳೆ. ಯಾರಿಗೆ ಹೆಚ್ಚು ಕಷ್ಟ ? ಗಂಡಿಗೆ ಮಾತ್ರ ಯಾವ ಕಟ್ಟಳೆಯೂ ಇಲ್ಲ ಅಂತ ಹೇಳ್ತಾರಲ್ಲ ಇದು ಸರೀನಾ :(
- Login or register to post comments
- 496 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: ತಾಳಿ v / s ಜನಿವಾರ
:D ವರ ದಕ್ಷಿಣೆ ಅಂತ ಆರು ಎಳೆ ಚಿನ್ನದ ಜನಿವಾರ ಹಾಕಿಸ್ಕೊಳ್ಳೋ ಚಾನ್ಸ್ ಮಿಸ್ ಮಾಡಿಕೊಂಡ್ರಾ? ;)
ಉ: ತಾಳಿ v / s ಜನಿವಾರ
ಸುನೀಲ್, ಖಂಡಿತ ನಿಮ್ಮ ಮಾತು ನಿಜ
ಅವರ ತಾಳಿಗಿಂತ ನಮ್ಮ ಜನೀವಾರವೇ ತುಂಬಾ ಹಗುರವೆನಬಹುದು,ಆದರೇ ತೂಕದಲ್ಲಿ ಹಾಗೂ ಮಾರ್ಕೆಟದರದಲ್ಲಿಯೂ ಕೂಡ ಅವರ ತೂಕ ಜಾಸ್ತಿ ಇದೆ ಅಲ್ವ.
ಹುಡುಗಿಯರಬಗ್ಗೆ ನಿಮ್ಮ ಅಭಿಪ್ರಾಯ????
ಉ: ತಾಳಿ v / s ಜನಿವಾರ
ಯುವರ್ ಸೆನ್ಸ್ ಆಫ್ ಹ್ಯೂಮರ್ ಇಸ್ ಕಮೆಣ್ಡಬಲ್!
ಉ: ತಾಳಿ v / s ಜನಿವಾರ
:-) :-) :-)
ಉ: ತಾಳಿ v / s ಜನಿವಾರ
ಸುನಿಲ್
ಜನಿವಾರ ದೊಡ್ಡದೋ ತಾಳಿ ದೊಡ್ಡದೋ ಅಂತ ಯೋಚಿಸೋದಕ್ಕಿಂತಾ, ಯಾವುದು ಸಮಯಕ್ಕೆ ಉಪಯೋಗ ಅನ್ನೋದು ಮುಖ್ಯ ಅಲ್ವಾ ;)
ಬೆನ್ನು ನೆವೆ ಆದಾಗ ಜನಿವಾರ ಕೊಡೋ ಮಜಾನೇ ಬೇರೆ ಅಲ್ವೇನ್ರಿ ;)
ಅರವಿಂದ್