21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಈ ’ಸುರಬಯಾ’ ವೈರಸ್ ಗೆ ಪರಿಹಾರ ತಿಳಿಸಿ

May 31, 2009 - 11:55am
vikashegde
ಇತ್ತೀಚೆಗೆ ನನ್ನ ಕಂಪ್ಯೂಟರ್ ಒಂದು ವೈರಸ್ ನಿಂದ ತೊಂದರೆಗೊಳಗಾಗುತ್ತಿದೆ. ಅದು ’ಸುರಬಯಾ’ ವೈರಸ್. ಕಂಪ್ಯೂಟರ್ನಲ್ಲಿ ವಿಂಡೋಸ್ ಶುರುವಾಗುವಾಗ ಮತ್ತು ಮುಚ್ಚುವಾಗ ಅದು ಒಂದು ಸಂದೇಶವನ್ನು ತೋರಿಸುತ್ತದೆ. Don't kill me, i'm just send message from your computer Terima kasih telah menemaniku walaupun hanya sesaat, tapi bagiku sangat berarti ........something something ಹೀಗೆ ಏನೇನೋ ಇರುತ್ತದೆ. ಅದನ್ನು OK ಕೊಟ್ಟಮೇಲೆ ಮುಂದೆ ಹೋಗಬಹುದು. ಇಶ್ಟೆ ಆಗಿದ್ದರೆ ಪರವಾಗಿಲ್ಲ. ಆದರೆ ಇದು ಒಳಗಡೆ folderಗಳಿಗೆಲ್ಲಾ ಧಾಳಿ ಮಾಡಿ ಹಾಳು ಮಾಡುತ್ತಿದೆ. folder ಒಳಗಡೆ ಇರುವ fileಗಳು ಕಾಣುವುದಿಲ್ಲ. ಕೆಲವು fake folder ಗಳು ಸೃಷ್ಟಿಯಾಗುತ್ತವೆ. folder ಗಳನ್ನು ಡಿಲೀಟ್ ಮಾಡಿ refesh ಕೊಟ್ಟರೆ ಮತ್ತೆ ಬರುತ್ತವೆ. ಒಂದೊಂದು ವಿಂಡೋಗಳೂ ಬೇರೆಬೇರೆಯಾಗಿ ಓಪನ್ ಆಗಿ my computerನಿಂದ ಒಳಗೆ ಹೋಗಿ ಯಾವುದಾದರೂ ಫೈಲ್ ಓಪನ್ ಮಾಡುವವರೆಗೆ ಆರೆಂಟು ವಿಂಡೋಗಳು ತೆಗೆದುಕೊಳ್ಳುತ್ತವೆ. ಈ ವಿಷಯವಾಗಿ ಇಂಟರ್ನೇಟ್ ನಲ್ಲಿ ಆ ವೈರಸ್ ತೆಗೆಯುವ ಬಗೆಯನ್ನು ಹುಡುಕಿ ಅದೇ ರೀತಿ ಮಾಡಿದೆ , ಆದರೂ ಕೂಡ ವರ್ಕೌಟ್ ಆಗುತ್ತಿಲ್ಲ. ನಾರ್ಟನ್, ಮೆಕ್ಯಾಫೆ ಮುಂತಾದ antivirusಗಳೂ ಅದನ್ನು ಹಿಡಿಯುತ್ತಿಲ್ಲ. ಇದು ಎಲ್ಲಿಂದ ಬರುತ್ತದೆ? ಹಾರ್ಡ್ ಡಿಸ್ಕ್ ಪೂರ್ತಿ format ಮಾಡಿ ಹೊಸ ವಿಂಡೋಸ್ ಹಾಕಿದರೂ ಕೆಲವು ದಿನಗಳ ನಂತರ ಹಾಜರಾಗುತ್ತದೆ. pendriveನಿಂದ ಬರುತ್ತಿದೆ ಎಂದು ನನ್ನ ಅಂದಾಜು, ಆದರೆ pendrive ಪೂರ್ತಿ format ಮಾಡಿ ಹಾಕಿದರೂ ಕೂಡ ಮತ್ತದೇ ಗತಿ :( ದಯವಿಟ್ಟು ಯಾರಾದರೂ ಪರಿಹಾರ ಸೂಚಿಸಿ. ಇದನ್ನು ತೆಗೆಯುವ ವಿಧಾನ ಮತ್ತು ಇದನ್ನು ಹಿಡಿಯುವ antivirusಗಳು ಯಾವುದಾದರೂ ಇದ್ದರೆ ಸಲಹೆ ಮಾಡಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by ಶ್ರೀನಿಧಿ on
ನನಗೆ ಅರ್ಥ ಆದಂತೆ - ನಿಮ್ಮ pen driveನಲ್ಲಿ Autorun enable ಆಗಿದೆ. ನೀವು ವಿಂಡೋಸ್ format ಮಾಡಿ ಪೆನ್ ಡ್ರ್ತೈವ್ ಹಾಕಿದರೆ ಅದು ಪೆನ್ ಡ್ರೈವ್ ನಿಂದ ಹರಡುತ್ತಿದೆ. ಹೀಗಾಯಿತಲ್ಲ ಅಂತ ನೀವು ಪೆನ್ ಡ್ರೈವ್ format ಮಾಡಿದರೆ ಅದು ನಿಮ್ಮ ಸಿಸ್ಟಮ್ಮಿನಿಂದ pen driveಗೆ ಹರಡುತ್ತಿದೆ!! ಇದಕ್ಕೊಂದು ಸುಲಭದ ಉಪಾಯ ಇದೆ ಲಿನಕ್ಸ್ ಉಪಯೋಗಿಸಿ :). ಅಥವಾ ವಿಂಡೊಸ್ನಲ್ಲಿ ೧: autorun ಮೊದಲು disable ಮಾಡಿ ಹೇಗೆ ಮಾಡಬೇಕು ಅನ್ನುವುದು ಇಲ್ಲಿದೆ. ೨. ನಂತರ ನೀವು ಮೊದಲು ಉಪಯೋಗಿಸಿದ ಯಾವುದೇ Antivirus ಉಪಯೋಗಿಸಿ ತೆಗೆಯಲು ಪ್ರಯತ್ನಿಸಿ. ೩. Ad-aware, Spybot search and Destroy ಇವುಗಳೂ ಸಹಾಯ ಮಾಡಬಹುದು. ೪. ನಿಮ್ಮ ಕಂಪ್ಯೂಟರ್ರಿನಿಂದ ಈ ಹುಳವನ್ನು (worm?? ) ತೆಗೆದ ಮೇಲೆ ನಿಮ್ಮ ಪೆನ್ ಡೈವ್ format ಮಾಡಿ.( ಇಲ್ಲವೇ ಯಾವುದಾದರೂ ಲಿನಕ್ಸ್ ಸಿಸ್ಟಮ್ಮಿಗೆ ಹೋಗಿ ಅಲ್ಲಿ format ಮಾಡಿಕೋಬಹುದು) ವಿ. ಸೂ: ನನ್ನಲ್ಲಿರುವುದು ಲಿನಕ್ಸ್. ಆದ್ದರಿಂದ ಮೇಲಿನ ನಾಲ್ಕು ಹೆಜ್ಜೆಗಳನ್ನು ನಾನು ಪ್ರಯತ್ನಿಸಿ ನೋಡಿಲ್ಲ.