ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಸ್ರೀವಾದ ಮತ್ತು ಸಮಾಜ

August 18, 2006 - 1:45pm — ritershivaram

ಇದೀಗ ನಮ್ಮ ಸಮಾಜ ಪುರುಷ ಪ್ರಧಾನ ಸಮಾಜವಾಗಿ ಇನ್ನೂ ಉಳಿದಿದೆಯೇ?  ಖಂಡಿತ ಇಲ್ಲ.  ಹಿಂದೊಂದು ಕಾಲವಿತ್ತು ಹೆಣ್ಣು ಮುಸುಕೆಳೆದುಕೊಂಡೇ ತಿರುಗುವ ಕಾಲ. ಈಗ ಹೆಣ್ಣು ಸಂಪೂರ್ಣ ಸ್ವಾತಂತ್ರ ಪಡೆದಿದ್ದಾಳೆ. ನಿರ್ಭಿಡೆಯಿಂದ, ಅಷ್ಟೇಕೆ  ಹಿಂದೆಂದಿಗಿಂತಲೂ  ಬಲು ಸ್ವಚ್ಛಂಧವಾಗಿ  ತೆರೆದುಕೊಂಡಿದ್ದಾಳೆ ಅಂಥ “ರಮ್ಯ” ಕಾಲವಿದಾಗಿದೆ.  ಹೌದು, ಜೀವನಾನಂದದ ಸ್ವರೂಪವೇ ಹೆಣ್ಣು. ಅವಳು ಎಲ್ಲಿ ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ಸಂಪ್ರೀತರಾಗಿರುತ್ತಾರೆ” ಎಂಬುದೀಗ ಕ್ಲೀಷೆಯಾಗಿದೆ.  ಇದೀಗ ಹೆಣ್ಣು ಎಲ್ಲಿ ದೇವತೆಯಂತೆ ಕಂಗೊಳಿಸತ್ತಾಳೋ ಅಲ್ಲಿ ಅವಳೇ ಪೂಜಿಸಲ್ಪಡುತ್ತಾಳೆ.  ಯುವ ಜನಾಂಗದ ಕನಸಿನ ಕನ್ಯೆಯೆ ಅವಳಾಗಿರುತ್ತಾಳೆ ಎಂಬುದು ಉತ್ಪ್ರೇಕ್ಷೆಯಾಗಲಾರದು.

ಇಂದಿನ ದಿನಗಳಲ್ಲಿ ಜಾಹೀರಾತು ಪ್ರಪಂಚದಿಂದ ಹಿಡಿದು, ಸಿನಿಮಾ, ಟೆಲಿ ಸಿನಿಮಾಗಳವರೆಗೆ ಆಕೆ ರೋಮ್ಯಾಂಟಿಕ್- ಗ್ಲಾಮರಸ್ ಪ್ರಪಂಚದಲ್ಲಿ ಮೆರೆದಿದ್ದಾಳೆ; ಮೆರೆಯುತ್ತಿದ್ದಾಳೆ.  ಈಗ ಗಂಡು ಹೆತ್ತವರಿಗೇ ಕಷ್ಟ.   ಅವರಿಗೆ ತಮ್ಮ ಮಕ್ಕಳನ್ನು ಜೋಪಾನ ಮಾಡಿಕೊಳ್ಳಬೇಕಾದ ದುರ್ದರ ಪ್ರಸಂಗ.  ಯಾಕೆಂದರೆ, ಯಾವ ಹೊತ್ತಿನಲ್ಲಿ ಯಾವ ಹುಡುಗಿಯನ್ನು ತಂದು-ತಂದೆ ತಾಯಿಗಳ ಎದುರಿನಲ್ಲಿ ನಿಲ್ಲಿಸುತ್ತಾನೋ ಮಗ ಎಂಬ ಆತಂಕ.  ವಯಸ್ಸಿಗೆ ಬಂದ ಹುಡುಗಿಯೂ ಅಷ್ಟೇ.... ಯಾವ ಹುಡುಗನನ್ನು ಯಾವ ಘಳಿಗೆಯಲ್ಲಿ ತಂದು ತಂದೆ-ತಾಯಿಯರೆದುರಿಗೆ ನಿಲ್ಲಿಸಿ ಇವನನ್ನೇ ಲವ್ ಮಾಡುತ್ತಿದ್ದೇನೆ; ಮದುವೆಯಾಗುತ್ತಿದ್ದೇನೆ ಎಂದು ಹೇಳುತ್ತಾಳೋ ಎಂಬ ಆಂದೋಲನವೇ ಪೀಡಿಸುವಂತಹ ಕಾಲ ಘಟ್ಟದಲ್ಲಿ ನಾವಿಂದು ಬದುಕುತ್ತಿರುವಾಗ ಹಳೆಯ ವಾದಗಳು ನೆರವಿಗೆ ಬರಲಾರವು.

ಸ್ತ್ರೀ ಇಂದಿನ ಪುರುಷನಿಗೆ ಸರಿಸಮಾನವಾಗಿ ಬದುಕುತ್ತಿದ್ದಾಳೆ; ಸಂತೋಷವೇ.  ಹಾಗಿರುವಾಗ ಅವಳದೇ ವಾದವೆಂದರೇನು?ಹೆಣ್ಣಾಗಿ ಹುಟ್ಟಿದ್ದಕ್ಕೆ ಅವಳದೇ ಕೆಲ ಸಮಸ್ಯಗಳು ಲಿಂಗ ರೀತ್ಯ ಪ್ರತ್ಯೇಕವೆನಿಸುತ್ತದೆಯಾದರೂ. ಗಂಡೂ ಅವಳ ಆ ಪರಿಯ ಸಮಸ್ಯೆಗಳಿಗೆ ಸ್ವಂದಿಸಬೇಕು ನಿಜ. ಅವಳೂ ಅಷ್ಟೇ. ಇಬ್ಬರೂ ಬದುಕುತ್ತಿರುವ ಸಮಾಜ ಒಂದೇ ಆದಾಗ ಪರಸ್ಪರ ಹೊಂದಾಣಿಕೆ ಸೌಹಾರ್ದತೆ ಅನಿವಾರ್ಯ. ಪುರುಷರೇ ಇಲ್ಲದ ಸಮಾಜವನ್ನು ನಾವು ಹೇಗೆ ಊಹಿಸಿಕೊಳ್ಳಲು ಅಸಾಧ್ಯವೋ ಹಾಗೆಯೆ ಸ್ತ್ರೀಯರೇ ಇಲ್ಲದ ಬದುದು ಭವಿಷ್ಯವನ್ನು ಕಾಣಲಾರೆವು. ಅಂದರೆ, ಹೆಣ್ಣಿಗೆ  ಗಂಡು, ಗಂಡಿಗೆ ಹೆಣ್ಣು ಇಬ್ಬರೂ ಇಂದಿ ದಿನ ದಿನಗಳಲ್ಲಿ ಸಾಮಾಜಿಕವಾಗಿ ಸರಿಸಮಾನರೇ.    ಇಬ್ಬರಲ್ಲೂ ಸಾಮಾಜಿಕ ಹೊಣೆಗಾರಿಕೆ ಎಂಬದಿರುವಾಗ ಪ್ರತ್ಯೇಕ ವಾದಗಳೇಕೆ? 

 ಹಿಂದಿತ್ತು ಪುರುಷ ಪ್ರಧಾನ ಕಾಲ. ಆಗ ಬೇಕಿತ್ತು ಸ್ತ್ರೀವಾದ...  
ಪ್ರೇಮಕ್ಕೂ ಮತ್ತು ಪ್ರೀತಿಗೂ ಇರುವ ಹೋಲಿಕೆ ವ್ಯತ್ಯಾಸಗಳು ಇಂದಿನ ಯುವ ಜನಾಂಗ ಅರಿತಂತಿಲ್ಲ.   ಹೊಸ ಮೌಲ್ಯಗಳನ್ನು ಹುಟ್ಟು ಹಾಕುವ ಕಾತರತೆಯ ಸಡಗರದಲ್ಲಿದ್ದಾರೆ. ಇಂದಿನ ಯುವತಿ ಯುವಕರ  ವಾದಕ್ಕೆ ಹಿರಿಯರಾದ ನಾವು ಉತ್ತರ ಹೇಳುವುದೇ ಕಷ್ಟವಾಗಿದೆ..  ಸಿನಿಮಾ ಮತ್ತು ಟಿ.ವಿ. ಚಾನೆಲ್ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಗಳ ಕಲಸು ಮೇಲೋಗರದಲ್ಲಿ  ಅವರು ಹಪ ಹಪಿಸುತ್ತಿದ್ದಾರೆ.  ಅವರಿಗೆ ಸೂಕ್ತ ಮಾರ್ಗ ದರ್ಶನ ನೀಡುವಂಥ  ಹೊಸ ಮೌಲಿಕವಾದ ಆಯಾಮವೊಂದನ್ನು ಹಿರಿಯರಾದ ನಾವು ಅಂದರೆ  ಹಿರಿಯ ಸ್ತ್ರೀ ಮತ್ತು ಪುರುಷರಾದ ನಾವೆಲ್ಲರೂ ಒಂದು ಗೂಡಿ  ಹಳೆಯದು ಮತ್ತು ಹೊಸತೆಂಬ ಜೀವನ ಶೈಲಿಯ  ಸಮನ್ವಯಕಾರರಾಗಿ  ಆರೋಗ್ಯಕರ ಸಮಾಜವನ್ನು ಕಟ್ಟುವಂತಹ ಅವರಿಗೆ ಭವಿಷ್ಯದಲ್ಲಿ ತುಂಬು ಭರವಸೆ ನೀಡುವಂತಹ “ಹೊಸ ಸಮಾಜವಾದ”ವನ್ನು  ಹುಟ್ಟು ಹಾಕಬೇಕಾಗಿರುವ ಹೊಣೆ ನಮ್ಮೆಲ್ಲರದು ಆಗಿದೆ.
-ಎಚ್.ಶಿವರಾಂ          18 ಆಗಸ್ಟ್ , 2006

‹ ಆಷಾಢ ಮಾಸ ಅಶುಭವೇಕೆ ? ಸ೦ನ್ಯಾಸ ಎ೦ದರೆ ›
  • ಸಮಾಜ
~.~
  • Login or register to post comments
  • 1486 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 30, 2006 - 11:39am — Srimatha

ಎಲ್ಲಿ ಸ್ವಾತಂತ್ರ್ಯ??

Srimatha's picture

Quote:
"ಇದೀಗ ನಮ್ಮ ಸಮಾಜ ಪುರುಷ ಪ್ರಧಾನ ಸಮಾಜವಾಗಿ ಇನ್ನೂ ಉಳಿದಿದೆಯೇ? ಖಂಡಿತ ಇಲ್ಲ. ಹಿಂದೊಂದು ಕಾಲವಿತ್ತು ಹೆಣ್ಣು ಮುಸುಕೆಳೆದುಕೊಂಡೇ ತಿರುಗುವ ಕಾಲ. ಈಗ ಹೆಣ್ಣು ಸಂಪೂರ್ಣ ಸ್ವಾತಂತ್ರ ಪಡೆದಿದ್ದಾಳೆ."?????
ಯಾವ ದೇಶ ಕಾಲಗಳ ಬಗ್ಗೆ ಮಾತಾಡ್ತಿದ್ದೀರ?? ಟಿ ವಿ ಪರದೆಯ ಮೇಲೆ ಮುದ್ದಾಗಿ ನಕ್ಕ ಮಾತ್ರಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಅಂತ ಅರ್ಥಾನಾ?? ಎಲ್ಲೋ ಮೇಲ್ವರ್ಗದ ಒಂದು ಗುಂಪಿನಲ್ಲಿ ಸಾಕಷ್ಟು ಮಟ್ಟಿಗೆ ಸಮಾನತೆಯ ಕಲ್ಪನೆ ಸಾಕಾರ ಆಗಿರಬಹುದು. ಹಾಗಂತ ಸಂಪೂರ್ಣ ಸ್ವಾತಂತ್ರ್ಯ ಬಂದುಬಿಟ್ಟಿದೆ, ಇನ್ನು ಸ್ತ್ರೀ ವಾದದ ಅವಶ್ಯಕತೆ ಇಲ್ಲ ಅಂತ ತೀರ್ಪು ಕೊಟ್ಟುಬಿಡೋಕಾಗುತ್ತ? ಬಿಹಾರದ ಹಳ್ಳಿ ಬಿಡಿ, ನಮ್ಮದೇ ಮಧ್ಯಮ - ಕೆಳಮಧ್ಯಮ ವರ್ಗದ ಮನೆಗಳಲ್ಲಿ ಪುರುಷಪ್ರಧಾನ ಸಮಾಜ ಇನ್ನೂ ದಷ್ಟಪುಷ್ಟವಾಗಿ ಜೀವಂತವಾಗಿದೆ ಅನ್ನೋದು ಸ್ವಲ್ಪ ಆತ್ಮಾವಲೋಕನ ಮಾಡಿಕೊಂಡಾಗ ಸುಲಭವಾಗಿ ಕಾಣಿಸೋ ಸತ್ಯ. ವಿದ್ಯಾಭ್ಯಾಸ ಇರಬಹುದು, ಕೆಲಸ ಇರಬಹುದು, ಬದುಕಿನ ಯಾವುದೇ ಆಯ್ಕೆ 'ಸ್ತ್ರೀ' ಅನ್ನೋ ಕಾರಣಕ್ಕೆ ಹಿಡಿತಕ್ಕೊಳಗಾಗದೇ ಮಾಡೊಕೆ ಸಾಧ್ಯ ಇದ್ರೆ ಅದನ್ನ ಸಂಪೂರ್ಣ ಸ್ವಾತಂತ್ರ್ಯ ಅನ್ನಬಹುದು.ಇದನ್ನ ಸಾಧಿಸಬೇಕಾ ಇಲ್ಲ್ವಾ ಅನ್ನೋದು ಬೇರೆ ಮಾತು - ಆದ್ರೆ ಇದು ಈಗಾಗ್ಲೇ ಸಿಕ್ಕಿಬಿಟ್ಟಿದೆ ಅನ್ನೋದು ಖಂಡಿತ ಸತ್ಯಕ್ಕೆ ದೂರದ ಮಾತು!

ಅಷ್ಟಕ್ಕೂ ಸ್ತ್ರೀವಾದ ಅಂದ್ರೆ ಏನು? ಈಚಿನ ದಿನಗಳಲ್ಲಿ 'ಸ್ತ್ರೀ ವಾದ'ಅಂತ ಒಂದು ಪರಿಕಲ್ಪನೆಯ ಬದಲು ಬೇರೆ ಬೇರೆ ಸಾಮಾಜಿಕ, ಸಾಂಸ್ಕೃತಿಕ ಪರಿಸರಗಳಿಗೆ ನಿರ್ದಿಷ್ಟವಾಗಿ 'ಸ್ತ್ರೀ ವಾದಗಳು' ಕಂಡುಬರುತ್ತಿವೆ - ಇದು ಅಗತ್ಯವೂ ಹೌದು. ಸಾಮಾನ್ಯವಾಗಿ ಕೆಲವು ವಿಷಯಗಳು universal ಎನಿಸಿದರೂ ಅಯಾ ದೇಶ ಕಾಲಗಳಿಗೇ specific ಆದ ವಿಷಯಗಳು ಹಲವು ಸ್ತ್ರೀ ವಾದದ ಬಗ್ಗೆ ಮಾತನಾಡುವಾಗ ಮುಖ್ಯವಾಗುತ್ತವೆ. ಇದನ್ನೆಲ್ಲ ಸಾರಾಸಗಟಾಗಿ ಸಾರಿಸಿ ಸ್ತ್ರೀ ಸ್ವಾತಂತ್ರ್ಯವನ್ನ ಸಾಧಿಸಿ ಆಯ್ತು, ಇನ್ನು ಸ್ತ್ರೀ ವಾದವನ್ನ ಗಂಟು ಕಟ್ಟಿ ಬಿಸಾಕ್ಬೇಕು ಅನ್ನೋದು ಎಷ್ಟು ಸರಿ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 31, 2006 - 8:47am — ritershivaram

ಸ್ವಾತಂತ್ರ್ಯಸತ್ಯಕ್ಕೆ ದೂರದ ಮಾತು..?

ritershivaram's picture

 

ವಿದ್ಯಾಭ್ಯಾಸ ಇರಬಹುದು, ಕೆಲಸ ಇರಬಹುದು, ಬದುಕಿನ ಯಾವುದೇ ಆಯ್ಕೆ 'ಸ್ತ್ರೀ' ಅನ್ನೋ ಕಾರಣಕ್ಕೆ ಹಿಡಿತಕ್ಕೊಳಗಾಗದೇ ಮಾಡೊಕೆ ಸಾಧ್ಯ ಇದ್ರೆ ಅದನ್ನ ಸಂಪೂರ್ಣ ಸ್ವಾತಂತ್ರ್ಯ ಅನ್ನಬಹುದು...ಇದನ್ನ ಸಾಧಿಸಬೇಕಾ ಇಲ್ಲ್ವಾ ಅನ್ನೋದು ಬೇರೆ ಮಾತು - ಆದ್ರೆ ಇದು ಈಗಾಗ್ಲೇ ಸಿಕ್ಕಿಬಿಟ್ಟಿದೆ ಅನ್ನೋದು ಖಂಡಿತ ಸತ್ಯಕ್ಕೆ ದೂರದ ಮಾತು..??!

 

ಇದೇ ದೇಶ; ಇದೇ ಕಾಲ, ಈಗ ಹೇಗಿದೆ ಅನ್ನೋದನ್ನ  ನಾವು ನೋಡುತ್ತಿದ್ದೇವಲ್ಲ; ನೀವು ಅದ್ಯಾವಕಾಲವನ್ನೇ ಕುರಿತು  ಇಂದಿಗೂ ಚಿಂತಿಸುತ್ತಲಿದ್ದೀರಿ?  ! ನಿಮ್ಮದೇ ಮಾತಿನಂತೆ ಹಿಂದೆ ಸ್ತ್ರೀ ಅನ್ನೋ ಕಾರಣಕ್ಕೆ ವಿದ್ಯಾಭ್ಯಾಸ ಇರಬಹುದು, ಕೆಲಸ ಇರಬಹುದು ಬದುಕಿನ ಯಾವುದೇ ಆಯ್ಕೆಗೆ ಸಾಧ್ಯವಿರಲಿಲ್ಲ; ನಿಜ. ಆ ಕಾಲದಿಂದ ನಾವೀಗ ಹೊರ ಬಂದಿದ್ದೇವೆ ಅನ್ನೋದನ್ನ ನೀವು ಗಮನಿಸಿದಂತೆಯೆ ಇಲ್ಲವಲ್ಲ..? ಈಗ ಸ್ತ್ರಿ ತಾನು ಬದುಕುವ ದಾರಿಯಲ್ಲಿ ಹಿಂದೆಂದಿಗಿಂತಲೂ ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯ ಪಡೆದಿದ್ದಾಳೆ ಎನ್ನುವುದಕ್ಕೆ ಎಷ್ಟೋ ಉದಾಹರಣಗಳಿವೆಯಲ್ಲ  ವಿದ್ಯಾಭ್ಯಾಸ, ಕೆಲಸವನ್ನೇ ತೆಗೆದುಕೊಳ್ಳಿ, ಇಂದು ಮಹಿಳಾ ಪೊಲೀಸ್. ಬಸ್ ಡ್ರೈವರ್ಸ, ಕಂಡಕ್ಟರ್, ಹೆವಿಟ್ರಕ್ಸ್ ಡ್ರೈವರ್ಸ, ಅಷ್ಟೇಕೆ ಭಾರತ್ ಅರ್ತ್‌ ಮೂವರ್ಸ ಅಂತಹ ದೊಡ್ಡ ಕಂಪೆನಿ ಇಂದು ಮಹಿಳೆಯರಿಗೆ ಹೆವಿ ಅರ್ಥ್ ಮೂವರ್ಸ ಚಾಲನೆಗೆ ತರಬೇತಿ ನೀಡುತ್ತಿದೆ.  ಅಂತಹ ಕೆಲಸಗಳಿಗೆ ಸ್ತ್ರೀ ಇಂದು ತನ್ನನ್ನು ತಾನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಪಡೆದಿದ್ದಾಳೆ.  ಅಂತಹ ಕಠಿಣವಾದ ಕೆಲಸಗಳಿಗೆ ಸ್ತ್ರೀ ಬರುತ್ತಿರುವುದು ಇಂದು ತೀರ ಕೆಳ-ಮಧ್ಯಮ ವರ್ಗದ ಕುಟುಂಬದಿಂದಲೇ ಅನ್ನೋದು ಸ್ಫಟಿಕದಷ್ಟು ಸ್ವಚ್ಛ ನಿಚ್ಛಳವಾಗಿದೆಯಲ್ಲದೇ ಅವರಿಗೆ ಈಗ ಅವರ ಬದುಕಿನ ಆಯ್ಕೆ ಎಂಬುದು ಎಲ್ಲಿ ಹಿಡಿತಕ್ಕೊಳಗಾಗಿದೆಯೋ ದೇವರೇ ಬಲ್ಲ.. ಎಲ್ಲೋ ಬಿಹಾರದ ಕೆಲ ಕುಗ್ರಾಮಗಳಲ್ಲಿ ಅನಕ್ಷರತೆ,ಅಜ್ಞಾನ,ಅಂಧವಿಶ್ವಾಸದಿಂದ ಹೆಣ್ಣು ಇನ್ನೂ ಹಿಡಿತಕ್ಕೊಳಗಾಗಿಯೆ ಇದ್ದಿರಬಹುದು. ಅಂಥಲ್ಲಿ ಬೇಕು;ನೀವೇ ಹೇಳಿದಂತೆ Specific  ಆಗಿ  ಒಂದು ಸ್ತ್ರೀವಾದ. ತಂದೆ ತಾಯಿಗಳೇ ಇಂದು ತಮ್ಮ ಹೆಣ್ಣು ಮಕ್ಕಳು  ಟಿ.ವಿ, ಸಿನಿಮಾಗಳಲ್ಲಿ ನಿರ್ಭಿಡೆಯಿಂದ ತೆರೆದುಕೊಂಡು ಪಾತ್ರಮಾಡಲು ಸ್ವಾತಂತ್ರ್ಯ ನೀಡುತ್ತಿರುವುದು ಇದೇ ಕಾಲದ ಕಠೋರ ಸತ್ಯವಲ್ಲದೇ ಇನ್ನೇನು?  ಸುಮ್ಮನೆ ಟಿವಿ ಪರದೆ ಮೇಲೆ ಮುದ್ದಾಗಿ ನಕ್ತಾರೆ ಎಂದಿದ್ದೀರಲ್ಲ. ಹೌದು, ಇದ್ದಿದ್ದರಲ್ಲಿ ಟಿ.ವಿ.ಪರದೇನೆ ಸ್ವಲ್ಪ ಉತ್ತಮ ಅನ್ನಿ.  ಆದರೆ, ಅದೇ ಟಿ.ವಿಲಿ ಬರೋ ಸಿನಿಮಾಗಳಲ್ಲಿ ಹೆಣ್ಣನ್ನು ಕೆಟ್ಟದಾಗಿಎಕ್ಸಪೋಸ್ ಮಾಡಿರುವಂಥ ದೃಶ್ಯಗಳೆಷ್ಟಿರೊಲ್ಲ.  ಈಗ ಗಂಡು ಮಕ್ಕಳನ್ನು ರಕ್ಷಿಸಿಕೊಳ್ಳಲು Specific ಆಗಿ  ಇನ್ನೊಂದು ರೀತಿಯಲ್ಲಿ ಪುರುಷವಾದವನ್ನೇ ಮಂಡಿಸಬೇಕಾಗಿದೆ.  ಯಾಕೆಂದರೆ, ಎಷ್ಟೋ ಕೆಲಸಗಳಿಗೆ ಅರ್ಜಿ ಹಾಕಿದಾಗ ಸ್ತ್ರೀಗೇ ಹಿಂದೆಂದಿಗಿಂತಲೂ ಆದ್ಯತೆ. ಆ ದಿಸೆಯಲ್ಲೆ ಕೆಲಸ ಮಾಡುವ ಸ್ಥಳಗಳಲ್ಲಿ ಹೆಣ್ಣಿನ ವೇಷಭೂಷಣಗಳಿಗೆ ನೀತಿಸಂಹಿತೆ ಬೇಕು, ಜಾಹೀರಾತುಗಳಲ್ಲಿ, ಸಿನಿಮಾಗಳಲ್ಲಿ ಅವಳನ್ನು “ತೆರೆದು” ತೋರುವ ಸ್ವಚ್ಛಂದ ಪ್ರವೃತ್ತಿಗೆ, ಎಲ್ಲಿದೆ ಕಡಿವಾಣ? ಎಲ್ಲಿದೆ ಆ ಹಿಂದಿನ ಸೆನ್ಸಾರ್ ನೀತಿ; ಹಣವೇ ಪ್ರಧಾನವಾಗುತ್ತಿರುವಾಗ ಈ ಸಮಾಜದಲ್ಲಿ  ಇಂತಹ ವೈಪರಿತ್ಯಗಳಿಗೆ ಸ್ತ್ರೀ ಸಮುದಾಯವೇಕೆ ಸುಮ್ಮನಿದೆ?  ಅಮೆರಿಕದಂತ ದೇಶವೇ ಸರಳ-ಸಂಯಮ ಜೀವನಶೈಲಿಗೆ ಮಾರುಹೋಗುತ್ತಿರುವ ಇಂದಿನ ಸಂದರ್ಭದಲ್ಲಿ ಇಲ್ಲೇಕೆ ಹೀಗೆ..? ಒಬ್ಬ ಸೇರ್ಲ್ಸ ಗರ್ಲ್ ಆದಿಯಾಗಿ ಆಕೆಯ ಗ್ಲಾಮರಸ್ ಪ್ರಪಂಚಕ್ಕೆ ಇದೀಗ ಬಹಳ ಪ್ರಾಮುಖ್ಯವಿದೆ;ಅನ್ನೋ ಕಾರಣಕ್ಕೇ  ಗಂಡಿಗೆ ಕೆಲಸವಿಲ್ಲದೇನೆ ನರಳುವ ಗಂಡುಮಕ್ಕಳನ್ನಷ್ಟೇ ಹೆತ್ತವರು ಪಡುವಂಥ ಪಾಡು ಹೇಳುವಂತಿಲ್ಲ..  ಸಧ್ಯ ನನ್ನ ಮಕ್ಕಳು ಓದಿ ದೊಡ್ಡ  ಕೆಲಸದಲ್ಲಿದ್ದಾರೆ  ಅಂತ ನಾನೊಬ್ಬ ನಿಟ್ಟುಸಿರಿಟ್ಟರಾಯಿತೇನು!  ಕೆಳ-ಮಧ್ಯಮ ಕುಟುಂಬದ ಗಂಡು ಮಕ್ಕಳ ಪಾಡೇನು?  ಅಲ್ಲಿ ಬಿ.ಎ.ಡಿಗ್ರಿ ಮಾಡಿದ ಹುಡುಗನ ತಾಯಿಗೆ ಕೆಲಸ ಸಿಕ್ಕೀತು; ಆ ಹುಡುಗನಿಗಲ್ಲ... ಇದು ಇದೇ ಇಂದಿನ ಕಾಲದ ಕಠೋರ ವಾಸ್ತವವಾಗಿರುವಾಗ ಎಲ್ಲಿದೆ ಯಾವ ದಂತಗೋಪುರದಲ್ಲಿ ಇನ್ನೂ ಅಡಗಿಕುಳಿತಿದೆ ಸ್ತ್ರೀವಾದ.?. ಸಾರಸಗಟಾಗಿ ಸ್ತ್ರೀವಾದವನ್ನೇ ತಿರಸ್ಕರಿಸಿ ಎಂದಿಲ್ಲ; ಅದು ಹಿಂದಿನ ಪರಿಕಲ್ಪನೆ ಪ್ರಾಮುಖ್ಯತೆಯನ್ನು ಖಂಡಿತವಾಗಿ ಕಳೆದುಕೊಂಡಿದೆ. ಹಾಗೇನಾದರೂ ಇನ್ನೂ ಸ್ತ್ರೀವಾದ ಬೇಕೆಂದಿದ್ದರೆ, ಅದರ ಪರಿಭಾಷೆಯನ್ನೇ  ಆಯಾ ಪರಿಸರಕ್ಕೆ ಸಂದರ್ಭಕ್ಕೆ ತಕ್ಕಂತೆ ನ್ಯಾಯ ಒದಗಿಸಲೆಂದೇ ಬದಲಿಸಿ ಬಳಸಬೇಕಾಗುತ್ತದೆಯಷ್ಟೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 31, 2006 - 10:57am — Srimatha

Quote: ನಿಮ್ಮದೇ

Srimatha's picture

Quote:
ನಿಮ್ಮದೇ ಮಾತಿನಂತೆ ಹಿಂದೆ ಸ್ತ್ರೀ ಅನ್ನೋ ಕಾರಣಕ್ಕೆ ವಿದ್ಯಾಭ್ಯಾಸ ಇರಬಹುದು, ಕೆಲಸ ಇರಬಹುದು ಬದುಕಿನ ಯಾವುದೇ ಆಯ್ಕೆಗೆ ಸಾಧ್ಯವಿರಲಿಲ್ಲ; ನಿಜ. ಆ ಕಾಲದಿಂದ ನಾವೀಗ ಹೊರ ಬಂದಿದ್ದೇವೆ ಅನ್ನೋದನ್ನ ನೀವು ಗಮನಿಸಿದಂತೆಯೆ ಇಲ್ಲವಲ್ಲ..?

ಹಿಂದೆ ಅಲ್ಲ ಸಾರ್, ಅದು ಇಂದಿಗೂ ಬಹಳ ಮಟ್ಟಿಗೆ ಚಾಲ್ತಿಯಲ್ಲಿರೋ ವಿಷಯ! ಕೆಲಸ/ ವಿದ್ಯಾಭ್ಯಾಸಕ್ಕೆ ಸಮಾಜ ಅವಕಾಶ ಮಾಡಿಕೊಡೂವಲ್ಲಿ ಎರಡು ಅಂಶಗಳು ಮುಖ್ಯವಾಗುತ್ತವೆ - ಒಂದು ಸೌಲಭ್ಯವನ್ನು ಒದಗಿಸುವುದು - ಆ ಮಟ್ಟಿಗೆ ನಾವು ಸಾಕಷ್ಟು ಸಫಲರಾಗಿದ್ದೀವಿ ಅನ್ನಬಹುದು. ಆದರೆ ಎರಡನೆಯದು - ಕುಟುಂಬ - ಸಮಾಜಗಳ ಬೆಂಬಲ, ಸ್ವೀಕಾರ - ಇದು ಇನ್ನೂ ಬಹಳ ಮಟ್ಟಿಗೆ ಒಂದು ideal ಪರಿಸ್ಥಿತಿಯ ambition ಆಗಿಯೇ ಉಳಿದಿದೆ. ಮಹಿಳಾ ಕಂಡಕ್ಟರ್ ಗಳು ಇದ್ದಾರೆ - ಆದರೆ ಅವರೆಲ್ಲ ಇನ್ನೂ exceptional caseಗಳಾಗಿ ಉಳಿದಿದ್ದಾರೆ ಅನ್ನೋದೂ ಅಷ್ಟೇ ನಿಜ. ಅಲ್ಲದೆ ವಕ್ರದೃಷ್ಟಿಯಿಂದ ನೋಡೊ, ಕೊಂಕು ಮಾತುಗಳನ್ನಾಡೊ ಪ್ರಯಾಣಿಕರಿಂದೇನೂ ಬಿಡುಗಡೆ ಸಿಕ್ಕಿಲ್ಲ ಅವರಿಗೆ ಇನ್ನೂ.

Quote:
ಸ್ತ್ರೀ ಇಂದಿನ ಪುರುಷನಿಗೆ ಸರಿಸಮಾನವಾಗಿ ಬದುಕುತ್ತಿದ್ದಾಳೆ; ಸಂತೋಷವೇ.

Quote:
ಎಲ್ಲೋ ಬಿಹಾರದ ಕೆಲ ಕುಗ್ರಾಮಗಳಲ್ಲಿ ಅನಕ್ಷರತೆ,ಅಜ್ಞಾನ,ಅಂಧವಿಶ್ವಾಸದಿಂದ ಹೆಣ್ಣು ಇನ್ನೂ ಹಿಡಿತಕ್ಕೊಳಗಾಗಿಯೆ ಇದ್ದಿರಬಹುದು. ಅಂಥಲ್ಲಿ ಬೇಕು;ನೀವೇ ಹೇಳಿದಂತೆ Specific ಆಗಿ ಒಂದು ಸ್ತ್ರೀವಾದ.

ಮೊದಲಿನ ಹೇಳಿಕೆಯ universalisation ನನಗೆ ಸಮಸ್ಯಾತ್ಮಕ ಎನಿಸುವುದು. ಸ್ತ್ರೀವಾದಗಳೇ ಇರಲಿ ಅದರ ವಿರೋಧವಾಗಿ ಬರುವ ಮಾತುಗಳೇ ಇರಲಿ, ಸಮಾಜವನ್ನ ಹೊಮೊಜೆನೈಸ್ಡ್ ಆಗಿ ಕಲ್ಪಿಸಿಕೊಂಡು ಇರುವ ಭಿನ್ನತೆಗಳನ್ನೆಲ್ಲ ಸಾರಿಸಿ ಪಕ್ಕಕ್ಕೆ ತಳ್ಳುವುದು ಎಷ್ಟು ಸರಿ?? ಬಿಹಾರದ ಆ ಹೆಣ್ಣು ಮಗಳೂ ಇದೇ ಸಮಾಜದ ಭಾಗ ಅಲ್ಲ್ವಾ? ಇಷ್ಟರ ಮೇಲೆ ಅನಕ್ಷರತೆಯ ಕಾರಣ ಹೀಗೆದೆ ಅನ್ನೋದು ಇನ್ನೊಂದು ಸುಳ್ಳು. ನಮ್ಮ ಬೆಂಗಳೂರಿನ ಮೇಲು ಮಧ್ಯಮ ವರ್ಗದ ಹೆಣ್ಣುಮಕ್ಕಳಲ್ಲಿ ಎಷ್ಟು ಜನಕ್ಕೆ ತಮಗೆ ಬೇಕಾದ್ದನ್ನ(ಇದು ಸ್ವಚ್ಛಂದತೆಯ ಪರ ವಾದ ಅಲ್ಲ) ಮಾಡುವ ಸ್ವಾತಂತ್ರ್ಯವನ್ನ, ಅದಕ್ಕೆ ತಮ್ಮ ಕುಟುಂಬದ ಸಹಕಾರವನ್ನ ಪಡೆದಿದ್ದಾರೆ??

Quote:
ಸಿನಿಮಾಗಳಲ್ಲಿ ಅವಳನ್ನು “ತೆರೆದು” ತೋರುವ ಸ್ವಚ್ಛಂದ ಪ್ರವೃತ್ತಿಗೆ, ಎಲ್ಲಿದೆ ಕಡಿವಾಣ? ಎಲ್ಲಿದೆ ಆ ಹಿಂದಿನ ಸೆನ್ಸಾರ್ ನೀತಿ; ಹಣವೇ ಪ್ರಧಾನವಾಗುತ್ತಿರುವಾಗ ಈ ಸಮಾಜದಲ್ಲಿ ಇಂತಹ ವೈಪರಿತ್ಯಗಳಿಗೆ ಸ್ತ್ರೀ ಸಮುದಾಯವೇಕೆ ಸುಮ್ಮನಿದೆ?

ಈ ರೀತಿಯ ಶೋಷಣೆಗಳು ಇನ್ನೂ ನಡೆಯುತ್ತಿರೋದ್ರಿಂದಲೇ ಸ್ತ್ರೀವಾದ ಇನ್ನೂ ಅಗತ್ಯವಾಗಿದೆ ಅಲ್ಲ್ವಾ?! ಇಂತಹ ವೈಪರೀತ್ಯಗಳಿಗೆ ಸ್ತ್ರೀ ಸಮುದಾಯ ಮಾತ್ರ ಹೊಣೇನಾ?? ಬಾಯಿ ಬಿಟ್ಟ್ಕೊಂಡು ನೋಡೋ ಗಂಡಸರದ್ದು ಏನೂ ತಪ್ಪಿಲ್ಲ ಅಲ್ಲ್ವ?! ಇಲ್ಲಿ ಸ್ತ್ರೀವಾದ ಹೆಂಗಸರ ಸ್ವತ್ತು ಅಂದುಕೊಂಡುಬಿಟ್ಟ್ರೆ ಅದಕ್ಕಿಂತ ದುಸ್ಠಿತಿ ಬೇರೆ ಇಲ್ಲ. ಸ್ತ್ರೀವಾದ ಬೇಕಿರುವುದು ಬರೀ ಹೆಣ್ಣುಮಕ್ಕಳಿಗಲ್ಲ. ಅದು ಬೇಕಿರೋದು ಒಂದು ಆರೋಗ್ಯವಂತ ಸಮಾಜದ ಎಲ್ಲ ಸದಸ್ಯರಿಗೆ.

Quote:
ಸಾರಸಗಟಾಗಿ ಸ್ತ್ರೀವಾದವನ್ನೇ ತಿರಸ್ಕರಿಸಿ ಎಂದಿಲ್ಲ; ಅದು ಹಿಂದಿನ ಪರಿಕಲ್ಪನೆ ಪ್ರಾಮುಖ್ಯತೆಯನ್ನು ಖಂಡಿತವಾಗಿ ಕಳೆದುಕೊಂಡಿದೆ. ಹಾಗೇನಾದರೂ ಇನ್ನೂ ಸ್ತ್ರೀವಾದ ಬೇಕೆಂದಿದ್ದರೆ, ಅದರ ಪರಿಭಾಷೆಯನ್ನೇ ಆಯಾ ಪರಿಸರಕ್ಕೆ ಸಂದರ್ಭಕ್ಕೆ ತಕ್ಕಂತೆ ನ್ಯಾಯ ಒದಗಿಸಲೆಂದೇ ಬದಲಿಸಿ ಬಳಸಬೇಕಾಗುತ್ತದೆಯಷ್ಟೇ.

ಸದ್ಯಕ್ಕೆ ಸ್ತ್ರೀವಾದ(ಗಳು) ಬಂದು ನಿಂತಿರುವ ಘಟ್ಟ ಇದೇ. ಇದನ್ನೇ ನಾನು ನನ್ನ ಹಿಂದಿನ ಪೋಸ್ಟ್ನಲ್ಲಿ ಹೇಳಲು ಪ್ರಯತ್ನಿಸಿದ್ದು. ಸ್ತ್ರೀವಾದ ಅನ್ನೋದು ಒಂದು ಸೀಮಿತ conceptಆಗದೇ ಆಯಾ ಪರಿಸರಕ್ಕೆ ತಕ್ಕಂತೆ feminisms ಆಗುವತ್ತ ಹೆಜ್ಜೆ ಹಾಕುತ್ತಿದೆ. ಹಿಂದಿನ ಪರಿಕಲ್ಪನೆಯನ್ನ ಮುಂದಿಟ್ಟುಕೊಂಡು ಅದು ಅಲ್ಲಿಂದ ಮುಂದೆ ಹಾದು ಹೋಗಿರುವ ದಾರಿಯನ್ನ, ಬದಲಾಗಿರುವ ಬಗೆಯನ್ನ ಗಮನಿಸದಿದ್ದರೆ ಸ್ತ್ರೀವಾದದ ಪರಿಕಲ್ಪನೆಗೆ ನ್ಯಾಯ ಒದಗಿಸಿದಂತಾಗುತ್ತದೆಯೇ??

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 2, 2006 - 11:08am — ritershivaram

ಸ್ತ್ರೀವಾದ ಅರ್ಥ ಕಳೆದುಕೊಂಡಿದೆಯೇಕೆ?

ritershivaram's picture

Quote:
ಹಿಂದೆ ಅಲ್ಲ ಸಾರ್, ಅದು ಇಂದಿಗೂ ಬಹಳ ಮಟ್ಟಿಗೆ ಚಾಲ್ತಿಯಲ್ಲಿರೋ ವಿಷಯ! ಕೆಲಸ/ವಿದ್ಯಾಭ್ಯಾಸಕ್ಕೆ ಸಮಾಜ ಅವಕಾಶ ಮಾಡಿಕೊಡುವಲ್ಲಿ ಎರಡು ಅಂಶಗಳೂ ಮುಖ್ಯವಾಗುತ್ತವೆ- ಒಂದು ಸೌಲಭ್ಯ ಒದಗಿಸುವುದು ಆ ಮಟ್ಟಿಗೆ ನಾವು ಸಾಕಷ್ಟು ಸಫಲರಾಗಿದ್ದೀವಿ ಅನ್ನಬಹುದು.- ಆದರೆ, ಎರಡನೆಯದು – ಕುಟುಂಬ- ಸಮಾಜಗಳ ಬೆಂಬಲ, ಸ್ವೀಕಾರ- ಇದು ಬಹಳ ಮಟ್ಟಿಗೆ ಒಂದು ಐಡಿಯಲ್ ಪರಿಸ್ಥಿತಿಯ ambition ಆಗಿಯೆ ಉಳಿದಿದೆ.

ಅಲ್ಲ ಮೇಡಮ್, ನೀವು ಪೂರ್ವಾಗ್ರಹ ಪೀಡಿತರಾಗದಿರಿ. ಮೇಲಿನ ಹೇಳಿಕೆ ಪ್ಯಾರದಲ್ಲಿ ನಿಮ್ಮ ಮಾತಿನಂತೆಯೆ- ಕೆಲಸ/ವಿದ್ಯಾಭ್ಯಾಸದ ವಿಷಯದಲ್ಲಿ ಸೌಲಭ್ಯವಷ್ಟೇಅಲ್ಲ.. ಅವರಿಗೆ ಮನೆಯವರು ಆಯ್ಕೆಯ ಸ್ವಾತಂತ್ರ್ಯವನ್ನೂ ಕೊಟ್ಟಿದ್ದಾರೆ;ಕೊಡುತ್ತಿದ್ದಾರೆ. ಕೊಡದಿದ್ದರೆ ಅವರು ಕೇಳಿ ಪಡೆಯುವ ಮಟ್ಟಕ್ಕೆ ಬೆಳೆದಿದ್ದಾರೆ-ಗಂಡಾಗಲಿ, ಹೆಣ್ಣಾಗಲಿ. ಅವರು ಮುಂದೆ ಹಿರಿಯರ ಬದ್ಧಿವಾದವಿರಲಿ ಯಾವುದೇ ವಾದವೂ “ಹಿಂಸೆ” ಎನ್ನುವಂತಾಗಿದೆಯಲ್ಲ. ಆದ್ದರಿಂದ,ಕುಟುಂಬ- ಸಮಾಜಗಳ ಬೆಂಬಲ ಸ್ವೀಕಾರವೂ ಅಷ್ಟೇ..ಅದು ಐಡಿಯಲ್ ambition ಆಗಿಯೆ ಉಳಿದಿದೆ ಎನ್ನವುದಂತೂ ಖಂಡಿತ ಸರಿಯಲ್ಲ. ಕುಟುಂಬದಲ್ಲಿ ವಿಧವೆಯಾದ ಯುವತಿಗೆ ಹಿಂದಿನಂತೆ ಕೇಶಮುಂಡನ ಮಾಡೊದೆಲ್ಲಿದೆ? ಈಗ ಹಣೆಗ ಕುಂಕುಮ, ಮುಡಿಗೆಹೂ ಮುಡಿದುಕೊಂಡು(ಮಾಂಗಲ್ಯ ಸರ,ಕಾಲುಂಗರ ಎರಡುಬಿಟ್ಟು) ಎಲ್ಲ ಮುತ್ತೈದೆ ಲಕ್ಷಣಗಳನ್ನು ಪಡೆಯುವ ಸ್ವಾತಂತ್ರ್ಯಆಕೆಗೆ ಬಂದಿದೆಯಲ್ಲ; ಒಳ್ಳಯೆ ಒಡವೆ ರಷ್ಮೆ ಸೀರೆಯುಟ್ಟು ಆಕೆ ಮಂಗಳ ಕಾರ್ಯಗಳಲ್ಲಿ ಭಾಗವಹಿಸುವುದನ್ನು ಸಾಕಷ್ಟು ಕುಟುಂಬಗಳು-ಸಮಾಜ ಒಪ್ಪಿಕೊಂಡಿಲ್ಲವೇ.. ಮಕ್ಕಳೆ ಇಲ್ಲದೆ ಹೆಣ್ಣನ್ನು “ಬಂಜೆ”ಎಂದು ದೂರವಿಡಲಾರೆವೀಗ. ಇಂತಹದೆಲ್ಲ ನಿಧಾನವಾಗಿಯಾದರೂ ಹಳ್ಳಿಗಳಲ್ಲೂ ಸಹ ಸುಧಾರಿಣೆಯಯಲ್ಲಿರುವುದನ್ನ ನಾವು ಕಾಣತ್ತಲೇ ಇದ್ದೇವೆ. ಕೆಲಸದ ವಿಷಯದಲ್ಲೂ ಅಷ್ಟೇ. ಇವತ್ತು ಕೆಳ-ಮಧ್ಯಮ ವರ್ಗದ ಹೆಣ್ಣುಮಕ್ಕಳೇ ಹೆಚ್ಚಾಗಿ ಪೊಲೀಸ್ ಇಲಾಖೆಯಲ್ಲಿ, ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವ ಆಯ್ಕೆ ಅವಕಾಶ ಪಡೆದಿರುವುದನ್ನು ಕಾಣುತ್ತಿದ್ದೇವೆ. ಗಿಜಿಗಿಜಿಗುಟ್ಟುವ ಟ್ರಾಫಿಕ್ ನಲ್ಲಿ ಯವತಿ-ಪೊಲೀಸ್, ಟ್ರಾಫಿಕ್ ಕಂಟ್ರೋಲ್ ಮಾಡುವುದನ್ನ ಸೋಜಿಗದಿಂದ ನೋಡುತ್ತಿದ್ದೇವೆ;ನೋಡಿ ಸಂತೋಷ ಪಡುವವರಿದ್ದೇವೆ;ಛೇಡಿಸುವ ಫಟಿಂಗರೂ ಎಲ್ಲಕಾಲಕ್ಕೂ ಇದ್ದೇ ಇರುತ್ತಾರೆ. ಮಹಿಳಾ ಕಂಡಕ್ಟರ್ ಗಳನ್ನ ವಕ್ರ ದೃಷ್ಟಿಯಿಂದ ನೋಡೋ ಪ್ರಯಾಣಿಕರಲ್ಲೂ ಅಂಥವರಿದ್ದಾರೆ ಬಿಡಿ. ಆದರೆ, ಆ ಹೆಣ್ಣು ಅದೆಷ್ಟು ಕಷ್ಟದಿಂದ ಹಾಗೂ ಅಷ್ಟೇ ಧೈರ್ಯ ಉತ್ಸಾಹಗಳಿಂದ ಈ ಕೆಲಸವನ್ನೆ ಒಪ್ಪಿಕೊಂಡು ಮಾಡುತ್ತಿರಬಹುದು ಎಂದು ನನ್ನ ಹಾಗೆ ಚಿಂತಿಸುವವರೂ ಇದಾರೆ; ಕೆಲಸದಲ್ಲಿ ಆಕೆ ತೋರೊ ದಕ್ಷತೆ ಪ್ರಾಮಾಣಿಕತೆ ಕಂಡು ಮೆಚ್ಚಿಗೆ ವ್ಯಕ್ತಪಡಿಸುವವರೂ ಇದಾರೆ. ಆದ್ದರಿಂದ, ಅನೇಕ ಸಂಸ್ಥೆಗಳಲ್ಲಿ ಹೆಣ್ಣು ಮಕ್ಕಳೇ ಕೆಲಸಕ್ಕೆ ಬೇಕು ಎನ್ನುತ್ತಾರೆ. ಅದಕ್ಕೆಂದೇ ಛೇಡಿಸವವರೂ ಕೂಡ ಕಾಲಸರಿದಂತೆ ಅವರೂ ಸುಮ್ಮನಾಗುತ್ತಾರೆ; ಹೆಣ್ಣಿಗೆ ಸಿಗುವ ಬೆಂಬಲ ಕಂಡೇ ಅವರೂ ಸರಿಹೋಗುತ್ತಲಿದ್ದಾರೆ. ಜಿಂದಾಲ್ ಮತ್ತು ಟಾಟಾ ಅಂತಹ ದೊಡ್ಡ ಸಂಸ್ಥೆಗಳಲ್ಲಿ ಕುಗ್ರಾಮಗಳಿಂದ ಬಂದ ಯುವತಿಯರಿಗೆ ಧೈರ್ಯ ಪ್ರೋತ್ಸಾಹ ನೀಡಿ ಜೆಸಿಬಿಯಂತಹ ಭಾರಿಯಂತ್ರ- ವಾಹನ ಚಾಲನೆ ತರಬೇತಿ ಕೊಟ್ಟು ಕೆಲಸವನ್ನೂ ಕೊಡ್ತಾ ಇದಾರೆ. ಹೆಣ್ಣು ಅದನ್ನ ಅಷ್ಟೇ ಧೈರ್ಯವಾಗಿ ಸಮರ್ಪಕವಾಗಿ ಮಾಡುತ್ತಿದ್ದಾಳೆ;ಇದೆಲ್ಲ ಬದಲಾಗುತ್ತಿರುವ ಸಮಾಜದಲ್ಲಿ ಅವಳು ಸ್ವಾತಂತ್ರ್ಯದ ದೋತಕವೇ ಆಗಿದೆಯಲ್ಲ; ಸಂತೋಷದ ವಿಷಯವಲ್ಲವೇ.

Quote:
ಎಲ್ಲೋ ಬಿಹಾರದ ಕುಗ್ರಾಮಗಳಲ್ಲಿ... ಅನಕ್ಷರತೆಗೆ ಕಾರಣ ಹೀಗಿದೆ ಅನ್ನೋದು ಇನ್ನೊಂದು ಸುಳ್ಳು....ಹೆಣ್ಣು ಅವಳೂ ಸಮಾಜದ ಒಂದು ಭಾಗವೇ ಅಲ್ಲವೇ..

ನಮ್ಮ ದೇಶದಲ್ಲಿ ಅಜ್ಞಾನ,ಅನಕ್ಷರತೆ ಅನ್ನೋದು ಸುಳ್ಳು ಹೇಗಾಗುತ್ತೇ ಹೇಳಿ ಮೇಡಂ, ಉದಾಹರಣೆಗೆ ಅಂಥವರಲ್ಲಿ ವಿದ್ಯೆ ಇಲ್ಲದಿರುವುದರಿಂದಲೆ ಅವರು ಶೋಷಣೆಗೊಳಗಾಗುವುದಿದೆಯಲ್ಲ; ಅನಕ್ಷರಸ್ಥ ಗಂಡಸೂ ಶೋಷಣೆಗೊಳಗಾಗುತ್ತಾನೆ. ವಿದ್ಯಾವಂತರು ಮಾಡೊ ಕೆಲಸಕ್ಕೆ ಅವರಿಗೆ ಅವಕಾಶವೆಲ್ಲಿದೆ?... ಇನ್ನುಅಂತಹ ಅಜ್ಞಾನ-ಅಂಧವಿಶ್ವಾಸದ ಪರಿಸರದಲ್ಲಿ ವಿಧವೆಯರ ಸ್ವಾತಂತ್ರ್ಯದ ಬಗ್ಗೆ ನಾವು ಮಾತಾಡಿ ಸೈ ಅನಿಸಿಕೊಳ್ಳುವುದು ಬಹಳ ಕಷ್ಟವಿದೆಯಲ್ಲ. ಒಂದು ಕಡೆ ಜನಸಂಖ್ಯೆ ವಿದ್ಯಾವಂತರ ಸಂಖ್ಯೆ ಬೆಳೆದಂತೆ ಇನ್ನೊಂದು ಕಡೆಯಿಂದ ಅಂಥ ಅಜ್ಞಾನ ಅನಕ್ಷರತೆ ಇದ್ದೇ ಇರುವುದನ್ನೇ ಕಾಣುತ್ತಿರುವುದೂ ಇಂದಿಗೂ ಕಠೋರ ವಾಸ್ತವವೆ ಆಗಿದೆಯಲ್ಲ.. ಅನಕ್ಷರತೆ ಕಾರಣ ಸುಳ್ಳು ಎಂತೀರಲ್ಲ. ಅದಿರುವುದರಿಂದಲೇ ಶೋಷಣೆ ಹಾಗೂ ನಮ್ಮನ್ನು ಆಳುವವರಿಗೆ ಹೆಚ್ಚು ಮತಗಳು ಸಿಕ್ಕುವುದೂ ಕೂಡ. ಬಿಹಾರದಂತಹ ರಾಜ್ಯದ ಕುಗ್ರಾಮಗಳಲ್ಲಿ ಆಗಿರುವುದೂ ಅದೇ. ನಾನು ಒಬ್ಬ ಕನ್ನಡ ಲೇಖಕನಾಗಿ ಬಹುತೇಕ ಹೆಣ್ಣಿನ ಪರ ಕಾಳಜಿಯ ನ್ಯಾಯಸಮ್ಮತವಾದ ಕಥೆಗಳನ್ನೇ ಹೆಚ್ಚು ಬರೆದವನು. “ನಿಮ್ಮಕಥಾನಾಯಕಿ(ಮಧ್ಯಮ ವರ್ಗದ ಹೆಣ್ಣು ) ನಮ್ಮೆಲ್ಲ ಹೆಣ್ಣು ಮಕ್ಕಳಿಗೆ ಮಾರ್ಗದರ್ಶಿನಿಯಾಗಿದ್ದಾಳೆ. ನಿಮ್ಮ ಈ ಕಥೆ ನಮ್ಮ ಕುಟುಂಬದವರನ್ನೆಲ್ಲ ತೃಪ್ತಿಪಡಿಸಿದೆ” ಎಂದು ಪತ್ರಿಕೆಯಲ್ಲಿ ಮೆಚ್ಚುಗೆ ಪಡೆದಾಗ ತುಂಬ ಆತ್ಮಸಂತೋಪಟ್ಟವನು. ಸ್ತ್ರೀವಿರೋಧಿಯಂತೂ ಖಂಡಿತ ನಾನಲ್ಲ. ಅಂತೆಯೆ, ಸ್ತ್ರೀವಾದ ಎಂಬುದು ಇದ್ದರೆ ಪ್ರಸ್ತುತ ಸಮಾಜದಲ್ಲಿ ಹೇಗಿರಬೇಕು? ಅದು ಯಾವ ಯಾವ ಸ್ತರದಲ್ಲಿ-ಸಂದರ್ಭಗಳಲ್ಲಿ ಹೇಗೆ ಅನ್ವಯವಾಗಬೇಕೆಂಬುದೇ ಪ್ರಾಮುಖ್ಯತೆ ಪಡೆಯುತ್ತದೆಯಲ್ಲದೇ, ಅದೇ ಸ್ತ್ರೀವಾದ ಏಕೆ ಈಗಿನ ಕಾಲದ ಯಾವ ಪರಿಸರ ಸಂದರ್ಭಗಳಲ್ಲಿ ಅರ್ಥಕಳೆದುಕೊಳ್ಳುತ್ತದೆ ಎನ್ನುವೂದೂ ಅಷ್ಟೇ ಜಟಿಲ ಪ್ರಶ್ನೆಯಾಗಿ ಉಳಿದುಬಿಡುತ್ತದೆ. ನಿಮ್ಮ ಇನ್ನೊಂದು ಪ್ರಶ್ನೆಯೆಂದರೆ- ಬೆಂಗಳೂರಿನ ಕೆಲ ಮೇಲು ಮಧ್ಯಮ ವರ್ಗಗಳ ವಿಷಯ ಅಂತೀರಿ-ಅಲ್ಲಿ ಸ್ವಾತಂತ್ರ್ಯ ಎಲ್ಲ ಹೆಣ್ಣು ಮಕ್ಕಳಿಗೆ ಸಿಕ್ಕಿದೆಯೇ..? ಎಂದು ಪ್ರಶ್ನಿಸಿದ್ದೀರಿ? ಕೆಲವೇಳೆ ಸಿಗುವುದುಕಷ್ಟವಿದೆ ಯಾಕೆ ಗೊತ್ತೇ... ಇಂದಿನ ದಿನಗಳಲ್ಲಿ ಹೊರಗೆ ದುಡಿಯಲು ಹೋಗುವ ಹರೆಯದ ಹೆಣ್ಣು ಮನೆಗೆ ಸುರಕ್ಷಿತವಾಗಿ ಬರುವಳೇನು? ಹೊರಗೆ ದುಡಿಯುವ-ಓಡಾಡುವ ನೆಪದಲ್ಲಿ ಬೇಡವೆಂದರೂ ಅವಳ ವೇಷ ಭೂಷಣಗಳೂ ಬದಲಾಗುತ್ತವೆ; ಬಾಯ್ಸ್ ಫ್ರೆಂಡ್ಸ್ ಜೊತೆಯಾಗ್ತಾರೆ ಎಂಬುವ ಗುಮಾನಿಯೆ ಮನೆಯವರಿಗೆ. ಆನಂತರ, ಅವಳು ಹೆತ್ತವರೊಂದಿಗೆ ಹಿರಿಯರೊಂದಿಗೆ ವರ್ತಿಸುವುದರಲ್ಲಿ “ಬೋಲ್ಡ್” ಆಗುತ್ತಾಳೆಯೋ ಅಥವಾ ಹಿರಿಯರೇ ಬಾಯ್ ಬಾಯ್ ಬಿಟ್ಟುಕೊಂಡು ಹೆದರಿಕೆಯಿಂದ ಆಕೆಗೆ ಹೇಳುವುದನ್ನೇ ಬಿಟ್ಟು ಸುಮ್ಮನಿರಬೇಕಾಗುತ್ತದೋ. ತಮ್ಮ ಗಂಡು/ಹೆಣ್ಣು ಮಕ್ಕಳ ಎದುರಿಗೆ ನಿಂತು ಮಾತನಾಡುವ ಧೈರ್ಯವನ್ನೇ ಹೆತ್ತವರು ಕಳೆದುಕೊಳ್ಳುತ್ತಿದ್ದಾರೆ. ಟಿ.ವಿ.ಸಿನಿಮಾ ನೋಡಿ “ಮಾಡ್”ಆಗುತ್ತಿರುವ(ಸ್ವಾತಂತ್ರ್ಯದ ದುರುಪಯೋಗ ವಾಗಿಸಿಕೊಂಡಿರುವ,ಸ್ವೇಚ್ಛಾಚಾರಕ್ಕೆಬಲಿಯಾಗಿರುವ) ಹರೆಯದ ಹೆಣ್ಣನ್ನೇ.. ಇದು ಅಮೆರಿಕಾ ಆಗುತ್ತದೆ ಅಂದ್ಕೊಂಡಿದಾರೆಯೆ; (ಅಮೆರಿಕಾದವರೇ ವಾಸಿ;ಸ್ವಚ್ಛಂದತೆಯಿಂದ ಅವರು ಅದಾಗಲೆ ಬೇಸತ್ತಿದ್ದಾರೆ;ಅದು ಬೇಡವಾಗಿದೆ ಅವರಿಗೆ ಸರಳತೆ-ಸಂಯಮಕ್ಕೆ ಮನಸೋತಿದ್ದಾರೆ). ನೋಡಿ, ಓದುವ ಹುಡುಗಿ ಇಲ್ಲೆ ಸ್ವಲ್ಪ ನನ್ನ ಫ್ರೆಂಡ್ ಮನೆಗೆ ಹೋಗಿ ಬರ್ತಿನಿ ಅಂದ್ರೂ ಅವಳು ಬರೋದು ಲೇಟಾಯ್ತೂಂದ್ರೆ ಹೆದರಿಕೆಯೆ ಮನೆಯವರಿಗೆ. . ಈ ಮಾತಿಗೆ ಕೆಲವೇ ಗಂಡು-ಹೆಣ್ಣುಗಳಲ್ಲಿ ಎಕ್ಸೆಪ್ಷನ್ ಇರಬಹುದಲ್ಲ , ಅವರನ್ನು ಹೆತ್ತವರೇ ಪುಣ್ಯವಂತರು – ಇದಕ್ಕೆಲ್ಲ ಯಾರನ್ನ ಹೊಣೆ ಮಾಡಬೇಕು ನೀವೆ ಹೇಳಿ?.

“ಹೋಮೊಜನೈಸ್ಡ್” ಎಂದಿದ್ದೀರಿ.. ಮನೆಗಳಿಲ್ಲದ ಕುಟುಂಬಗಳಿಲ್ಲದ ಸಮಾಜ ಉಂಟೇನು? ಸಮಾಜದಲ್ಲಾಗುವ ಬದಲಾವಣೆಗಳು ಕುಟುಂಬಗಳ ಮೇಲೆ ಪರಿಣಾಮ ಬೀರದೇ ಇರುವುದೇನು?.ಹಾಗೆಯೆ ಸಮಾಜವೂ ಕೂಡ. ವಯಸ್ಸಿಗೆ ಬಂದ ಹುಡುಗಿ ತನ್ನ ಉಡುಗೆ ತೊಡುಗೆ ಮಾಡುವ ಕೆಲಸ ಹೀಗೆ ಎಲ್ಲದರಲ್ಲೂ ಸ್ವಾತಂತ್ರ್ಯಬೇಕೆನ್ನುತ್ತಾಳೆ. ಮನೆಯಲ್ಲಿನ ನೈಟಿಯನ್ನು ಹೊರಗೆ ತೊಟ್ಟು ಬರುತ್ತಾಳೆ, ಹಾಗೆ ತನ್ನ ಉಬ್ಬುತಗ್ಗುಗಳನ್ನು ಪಾಯಿಂಟ್ ಮಾಡಿ ಬಿರಿಯುವ ನೈಟಿ, ಜೀನ್ಸ್ ಸ್ಸೇ ಬೇಕೆಂದು ಹಠ ಹಿಡಿದು ಉಪವಾಸ ಮಾಡಿಯಾದರೂ ಧರಿಸುವ ಸುಂದರಳಾದ ಹುಡುಗಿ ಮನೆಯಲ್ಲಿದ್ದರೆ ಪರವಾಯಿಲ್ಲ; ಅದೇ ಉಡುಪಿನಲ್ಲಿ ಹೊರಬಂದಾಗ “ಸೋಷಿಯಲೈಸ್ಡ್” ಆಗುತ್ತಾಳೆ; ಆದರೆ, ಅದೆಷ್ಟರ ಮಟ್ಟಿಗೆ ಹೊರಗಿನ ಸಮಾಜದಲ್ಲಿ “ಸೇಫ್” ಆಗಿರುತ್ತಾಳೆಂಬುದು ಮಾತ್ರ ಪ್ರಶ್ನಾತೀತವೇ. ಎಲ್ಲೋ ಅಡಗಿಸಿಕೊಂಡಿದ್ದ ಹರೆಯದ ಹುಡುಗರ ದೌರ್ಬಲ್ಯವನ್ನು ಕೆಣಕುವವರೂ ಇಂಥವರೇ ಅಲ್ಲವೇ? ಬೀದಿಗಿಳಿದಾಗ ಬೀದಿಯ ಮಗ್ಗುಲಲ್ಲಿ ಹರೆಯದ ಹುಡುಗಿಯೊಬ್ಬಳು ಹಿರಿಯರೆಲ್ಲ ಅಲ್ಲೇ ಓಡಾಡುತ್ತಿದ್ದರೂ ಒಬ್ಬ ಹುಡುಗನೊ(ರೊ)ಡನೆ ರಾಜಾರೋಷಾಗಿ ಸಲಿಗೆಯಿಂದ ನಗುನಗುತ್ತ ಮಾತಿಗೆ ತೊಡಗುವಂತಹ ಸ್ವಾತಂತ್ರ್ಯ ಹಿಂದಿತ್ತೇ..? ಅದಕ್ಕೆ ಈಗಲೂ ಅಷ್ಟಿಷ್ಟು ಅಂತರ್ವಿರೋಧ ಕಂಡುಬರುವುದು ಅದನ್ನು ಆ ಹುಡುಗಿಯ ಸಂಪ್ರದಾಯಸ್ತ ಕುಟುಂಬವರ್ಗ ಕಂಡಾಗಲೇ. ಹಾಗಂತ ನಮ್ಮ ಸಂಪ್ರದಾಯಗಳೆಷ್ಟೋ ಬದಲಾವಣೆ ಕಂಡಿವೆ;ಕಾಣುತ್ತಿವೆ. ಆದ್ದರಿಂದಲೆ, ಬದಲಾದ ಪರಿಸರದಲ್ಲಿ ಹಾಗೆ ಮಾತನಾಡುವುದೇ ತಪ್ಪೆಂದೂ ಕೂಡ ಸರಾಸಗಟಾಗಿ ಇಂದಿನ ಇಲ್ಲ ಕುಟುಂಬಗಳೂ ಹೇಳಲಾರವು. ಅಂತಹ ಸಾಮಾಜಿಕ ಬದಲಾವಣೆಗಳು ಇಂದು ಸ್ವೀಕಾರಾರ್ಹವಾಗಿಬಿಟ್ಟಿವೆಯಲ್ಲವೇ...!

Quote:
ಶೋಷಣೆಗಳು ನಡೆಯುತ್ತಿರೋದ್ರಿಂದಲೇ ಸ್ತ್ರೀವಾದ ಅಗತ್ಯವಾಗಿದೆ ಅಲ್ವಾ..?....ಇಂತಹ ವೈಪರಿತ್ಯಗಳಿಗೆ ಸ್ತ್ರೀ ಸಮುದಾಯ ಮಾತ್ರಹೊಣೆನಾ..? ಬಾಯ್ ಬಿಟ್ಟುಕೊಂಡು ನೋಡೋ ಗಂಡಸರದ್ದೂ ತಪ್ಪಿಲ್ಲ ಅಲ್ವಾ.. ಸ್ತ್ರೀವಾದ ಹೆಂಗಸರ ಸ್ವತ್ತೂ ಅಂದ್ಕೊಂಡ್ ಬಿಟ್ರೇ ಅದಕ್ಕಿಂತ ದುಸ್ಥಿತಿ ಬೇರೆ ಇಲ್ಲ...... ಸ್ತ್ರೀವಾದ ಬೇಕಿರುವುದು ಒಂದು ಆರೋಗ್ಯವಂತ ಸಮಾಜದ ಎಲ್ಲ ಸದಸ್ಯರಿಗೆ..

ಆದರೆ, ಫ್ಯಾಷನ್, ಸೋಷಿಯಲ್- ಸೋಫೆಸ್ಟಿಕೇಟೆಡ್- ಲೈಫ್ ಸ್ಟೈಲ್ ಇವುಗಳ “ಪರಿಕಲ್ಪನೆ” ಸಾಕಾರಗೊಳ್ಳುವಲ್ಲಿ ಇಂದಿನ ಹರೆಯದ ಹೆಣ್ಣು ಕಟ್ಟೆಚ್ಚರ ವಹಿಸಬೇಕಾದ ಸಂದರ್ಭಗಳಲ್ಲಿ ನಾವಿಂದು ಬದುಕುತ್ತಿದ್ದೇವೆ. ಹೌದು.ನಮ್ಮ ಆರೋಗ್ಯವಂತ ಸಮಾಜದ ಸೃಷ್ಟಿಸಬೇಕಾದ ಹೊಣೆ ನಮ್ಮ ನಿಮ್ಮೆಲ್ಲರದೂ ಆಗಿದೆ. ನೀವು ಕೇಳುವ ಪ್ರಶ್ನೆಯಲ್ಲೆ ಹೆಣ್ಣಿನ ಹೊಣೆಯೂ ಹೆಚ್ಚಿದೆ ಎಂಬುದೂ ನಿಚ್ಛಳವಾಗಿದೆಯಲ್ಲ. ಯಾವಾಗಲೂ ಸಮಾಜದಲ್ಲಿ ಆಗುವ ಒಳ್ಳೆಯ ಬದಲಾವಣೆಯನ್ನೂ ಕೂಡ ಜನಸಮುದಾಯ ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ. ಅದೇ ಕಟ್ಟದ್ದಕ್ಕೇ ಕೆಟ್ಟ ಸೋಗಿನ ಥಳುಕು ಬಳುಕಿಗೆ ಪ್ರಾಶಸ್ತ ಅದ್ಹೇಗೋ ಬೇಗನೆ ಬಂದು ಬಿಡುತ್ತದೆ. ವ್ಯಾಪಾರಿಗಳು ಅದರಿಂದ ಲಾಭವನ್ನೂ ಪಡೆಯುತ್ತಿದ್ದಾರೆ.ವಿದ್ಯಾವಂತರೂ ಬದ್ಧಿವಂತರಾದ ಯುವಜನಾಂಗ ಎಚ್ಚೆತ್ತು ಕೊಳ್ಳಬೇಕಷ್ಟೇ. ಹಳೆತು ಹೊಸತೆಂಬುದರ ಸಮನ್ವಯ ಆಗಬೇಕು. ನಿಜ. ಮಗಳಿಗೆ ಸ್ವಾತಂತ್ರ್ಯಕೊಟ್ಟಿದ್ದೇವೆ ಅಂದರೆ, ನೀನು ಜೀನ್ಸ್ ಪ್ಯಾಂಟ್ ಹಾಕುವುದಿದ್ದರೆ ಸ್ವಲ್ಪ ಲೂಸ್ ಆಗಿರುವುದನ್ನ ಆಯ್ಕೆಮಾಡ್ಕೋ, ಚೂಡಿದಾರವೂ ಮೈಬಿಗಿಯದಿರಲಿ, ಹೆಗಲಿನ ಮೇಲಿನ ಹೊದಿಕೆ ಉಬ್ಬಿದೆದೆಯಿಂದ ಹಿಂದಕ್ಕೆ ಜಾರಿ ಕುತ್ತಿಗೆಗೆ ನೇಣು ಬಿಗಿದಂತೆ ಕಾಣದಿರಲಿ ಎಂದಾಗ ಆಕೆ ಒಪ್ಪಿಕೊಂಡರೆ ಸರಿ, ಸಮನ್ವಯವೇಆದಹಾಗೆ. ಇಲ್ಲದಿದ್ದರೇ... ಹೇಗೆ? ಇನ್ನೂ ವಿದ್ಯೆ, ಹುದ್ದೆ, ಆಚರಣೆ ಹೀಗೆ ಹೆಚ್ಚು ಉದಾಹರಣೆ ಸಹಿತ ಹೇಳಬೇಕೆಂದರೆ, ಬಹಳವಿದೆ; ಇಲ್ಲಿ ಸ್ಥಳಾವಕಾಶವಾಗಲಾರದಲ್ಲ. ಅದು ಹಾಗೆಯೆ ಸಾಮಾಜಿಕ ಮನಸ್ಸಿನ ವೈಪರಿತ್ಯಗಳೂ ನಮ್ಮಲ್ಲಿ ಬಹಳವಿವೆಯಲ್ಲ.
ಏನೆ ಆಗಲಿ ನಮ್ಮ ಇಂದಿನ ಸಮಾಜದಲ್ಲಿ ಸ್ತ್ರೀವಾದದ ಪರಿಕಲ್ಪನೆ ಹುರುಳಿಲ್ಲವಾಗಿರೋದಂತೂ ನಿಜ; ಸ್ರ್ರೀವಾದವೋ ಪುರುಷವಾದವೋ ಅದು ಕುಟುಂಬದಿಂದಲೇ ಮೊದಲು ಆರಂಭವಾಗಬೇಕು; ಆರೋಗ್ಯವಂತ ಸಮಾಜದಸೃಷ್ಟಿಯಾಗ್ಬೇಕಷ್ಟೇ ಅಲ್ಲವೇ.., ಈಗಾಗಲೇ ಹೇಳಿದಂತೆ ಅನೇಕಾನೇಕ ಕುಟುಂಬಗಳು ಸೇರಿದರೇನೆ ಒಂದು ಸಮಾಜ ಆಗೋದಲ್ಲವೇ..” ಟಿ.ವಿ. ಮುಂದೆ.. ಬಾಯ್ ಬಿಟ್ಟುಕೊಂಡು ನೋಡೋ ಗಂಡಸರದ್ದೂ ತಪ್ಪಿಲ್ಲ ಅಲ್ವಾ..” ಎಂದು ಛೇಡಿಸಿದ್ದೀರಿ. ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ; ನನ್ನ ಹರೆಯದ ಮಗ ಟಿ.ವೀ ಮುಂದೆ ಬಾಯ್ಬಿಟ್ಟುಕೊಂಡು ಕುಳಿತಾಗ –ನಾನು ನನ್ನಾಕೆ ತಲೆತಗ್ಗಿಸುವ ಹಾಗೆ ಅವಾಚ್ಯವಾಗಿ ಅವನನ್ನು ಛೇಡಿಸಿ ಓದುವ ಕೋಣೆಗೆ ಓಡಿಸಿ ಕಳುಹಿಸಿದ್ದೇನೆ. ಹಾಗೆ ಗಂಡುಮೈಮರೆತು ಕೂರುವಂತೆ ಮಾಡಿದ್ದು ಹೆಣ್ಣು ಅಂತ ಹೇಳಬೇಕೇ .?.ಇಲ್ಲ ಹಣದ ದಾಹದಲ್ಲಿ ಸಭ್ಯತೆ-ಮಾನವೀಯ ಮೌಲ್ಯಗಳಿಗೆ ಬೆಲೆ ನೀಡದಂತಹ ಇಂತಹ ಅಸ್ವಸ್ಥ ಸಮಾಜದ ಸೃಷ್ಟಿಗೆ ಕಾರಣರಾದವರು ಯಾರು ಅಂತ ಹುಡುಕ್ತಾ ಕೂರಬೇಕೇ.. ತೆರೆಯ ಮೇಲೆ ಅಂಥ ಪಾತ್ರಗಳಿಗೆ ಒಪ್ಪಿಸಿಕೊಂಡ ಹೆಣ್ಣು ಹಾಗೂ ಅವಳನ್ನು ಹೆತ್ತವರೂ ಸಹ ಹಣಕ್ಕೇ ಪ್ರಾಧಾನ್ಯತೆ ಇತ್ತವರೇ ಆಗಿದ್ದರೇ ಮುಗಿಯಿತಲ್ಲ; ನಮ್ಮ ಸಮಾಜದಲ್ಲಿ ಪೂಜನೀಯಳಾದ ಹೆಣ್ಣಿನ ಸ್ಥಿತಿ ಇಂದು ಯಾವ ದುಸ್ಥಿತಿಗೆ ತಲುಪಿದೆ ಎಂಬುದನ್ನೆಲ್ಲ ಹೇಳುವಾಗ ಸಾಮಾಜಿಕ ಕಾಳಜಿಯುಳ್ಳ ಹಿರಿಯರಿಗೆ ಎಲ್ಲರಿಗೂ ಹಿಂಸೆ ಯಾಗುತ್ತೆ. ಹೀಗೆ ಎಳೆ ಎಳೆಯಾಗಿ ಅನೇಕ ದೃಷ್ಟಿಕೋನಗಳಲ್ಲಿ ನೋಡ ತೊಡಗಿದಾಗ ಒಂದೆಡೆ ಹೆಣ್ಣಿನ ಸ್ವಾತಂತ್ರ್ಯ–ಸಮಾನತೆ ಎಂಬುದು ಯಾವ ದುರಾದೃಷ್ಟಕರ ಹಂತ ತಲುಪಿದೆ? ಎಂಬ ಭಯವೆ ಹಿರಿಯರಿಗೆಲ್ಲ ಅದು ಕಳವಳಕಾರಿಯಾಗಿರುವದಂತೂ ಸತ್ಯದ ಸಂಗತಿಯೆ. ಇನ್ನೊಂದೆಡೆ ಹಿಂದು ಮುಂದೆ ಯೋಚಿಸದೆ ನಮಗೂ ಅಂತಹ ಸ್ವಾತಂತ್ರ್ಯ ಬೇಕು ಎನ್ನುವ ಮುಗ್ಧರಾದ ಹೆಣ್ಣು ಮಕ್ಕಳು ಬೇರೆಯೆ. ಹೀಗಾಗಿ ನನ್ನ ಅಭಿಪ್ರಾಯದಲ್ಲಿ ಹಿಂದಿನ ಸ್ತ್ರೀವಾದದಲ್ಲಿ ಹುರುಳಿಲ್ಲ. ವಿದ್ಯೆ,ಹುದ್ದೆ, ಯಾವುದೇ ಕೆಲಸಕಾರ್ಯಗಳಿರಲಿ, ಮದುವೆವಿಷಯವಿರಲಿ ಸಮಾಜದಲ್ಲಿ ಅವಳ ಗೌರವ- ಸ್ಥಾನಮಾನ ಇವುಗಳ ದೃಷ್ಟಿಯಿಂದ ಅವಳೂ ಹೆಣ್ಣಾಗಿ ಹೊಣೆಯರಿತು ಎಚ್ಚರಿಕೆಯಿಂದ ವರ್ತಿಸಬೇಕು, ಗಂಡು ಮಕ್ಕಳೂ ಖಂಡಿತ ಸಹಕರಿಸಬೇಕು. ಇದರ ಮೇಲೂ ಸಮಾಜವಾದಕ್ಕಿಂತ ಸ್ತ್ರೀವಾದ ಮುಖ್ಯವೆಂದರೆ ತಪ್ಪಾದೀತು. ನೀವೇ ಹೇಳಿದಂತೆ ಹೆಣ್ಣೂ ಹೇಗೆ ಈ ಸಮಾಜದ ಅಂಗವೋ ಹಾಗೆಯೆ ಗಂಡೂ ಸಹ ಇಬ್ಬರೂ ಹೊಣೆಯರಿತು ನಡೆಯಬೇಕಾಗಿದೆ. ಹೇಳಬೇಕೆಂದರೆ ಗಂಡಿನ ಬದುಕಿನಲ್ಲಿ ಜೀವನಾನಂದದ ಸ್ವರೂಪವೇ ಆಗಿ ಗೌರವಾನ್ವಿತಳಾಗಿ ಕಂಗೊಳಿಸಬೇಕಾದ ಇಂದಿನ ಹರೆಯದ ಹೆಣ್ಣಿನ ಸಮಸ್ಯೆಗಳು ಬೇರೆಯೆ ಆಗಿವೆ. ಅಷ್ಟೇ ಅಲ್ಲ, ವಿದ್ಯೆ, ಹುದ್ದೆಗಳಿಗಿಂತ ಮಿಗಿಲಾಗಿ ಸ್ವಾತಂತ್ರ್ಯದ ಹೆಸರಿನಲ್ಲಿ ಅವಳು ಸಭ್ಯತೆಯ ಎಲ್ಲೇ ಮೀರದಿರಲು ಹೊಣೆಗಾರಿಕೆಯಂತೂ ದಿನೇ ದಿನೇ ಹೆಚ್ಚಿದೆ. ಪ್ರಾಯದ ಗಂಡಿಗೂ ಅಷ್ಟೇ ಆಮಿಷಗಳೂ ಹಣ- ಹೆಣ್ಣಿನ ವ್ಯಾಮೋಹಗಳು ಕಾಡಿವೆ. ಅಂತೆಯೆ, ಒಟ್ಟಿನಲ್ಲಿ ಗಂಡು-ಹೆಣ್ಣಿನ ಒಂದು ಆರೋಗ್ಯಕರ ಸಮಾಜದ ಸೃಷ್ಟಿಗಾಗಿ ನಮ್ಮೆಲ್ಲರ ಹೋರಾಟವೂ ಕೂಡ ಅರ್ಥಪೂರ್ಣವಾಬೇಕಷ್ಟೇ. ಅದಕ್ಕೆ ಯುವಕರೂ ಹಿರಿಯರೂ ಪುರುಷರೂ ಆದ ಎಲ್ಲರ ಬೆಂಬಲ ಖಂಡಿತ ಇರುತ್ತದೆ;ಇರಲೇಬೇಕಾಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೆಣ್ಣು
  • “ಆಧುನಿಕ ಮೌಲ್ಯಗಳು..”.
  • ಇಂಥ ಮಕ್ಕಳನ್ನು ಬೆಳೆಸುವುದು ಹೇಗೆ?
  • ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
  • ನಾ ಕಂಡ ಹೋಲಿ
Syndicate content

ಲೇಖಕರು

ritershivaram's picture

ಪೂರ್ಣ ಹೆಸರು
ritershivaram

ಪರಿಚಯ

ನಿವೃತ್ತ ನೌಕರ(Bsnl). ಚಿಂತಕ,ಸಾಹಿತಿ ಮತ್ತು ಕಂಪ್ಯೂಟರ್ ಶಿಕ್ಷಕ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಗೂದೆ ಹಣ್ಣು
  • ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
  • ಪೊನ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator