ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

"ಬಾಡು" ಯಾಕೆ "ಬಾಟ" ಆಗೋದಿಲ್ಲ?

ಕೂಡು->ಕೂಟ, ಓಡು -> ಓಟ,ಪಾಡು-> ಪಾಟ,ಕಾಡು->ಕಾಟ,ನೋಡು->ನೋಟ,ಉಣ್ಣು->ಊಟ, ತೋಡು->ತೋಟ,ಹೂಡು-> ಹೂಟ ಇವೆಲ್ಲಾ ಸರಿ.. ಆದರೆ "ಬಾಡು" ಯಾಕೆ "ಬಾಟ" ಆಗೋದಿಲ್ಲ?

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: "ಬಾಡು" ಯಾಕೆ "ಬಾಟ" ಆಗೋದಿಲ್ಲ?

Sunil Jayaprakash's picture

ಬಾಡು as in ಮಾಂಸವೋ ಅತ್ವಾ ಹೂವು ಬಾಡುವ ಕ್ರಿಯೆಯೋ ?

ಉ: "ಬಾಡು" ಯಾಕೆ "ಬಾಟ" ಆಗೋದಿಲ್ಲ?

ಮಾಯ್ಸ೨'s picture

ಬಾಡು => ಬಾಟ ಆಗತ್ತೆ. ಪದನೆರಿಕೆಯಲ್ಲಿಲ್ಲದಿದ್ದರೂ.

ಹಾಡು => ಹಾಟ ( ಪಾಟ ಅಂದ್ರೆ ಹಾಡುಗಾರಿಕೆ, ಹಾಡು )

ಓದು => ಓತ
ಆಡು => ಆಟ

ಮೂಡು => ಮೂಟ

ಇನ್ನು ಉಣ್ಣು => ಊಟ ಹೇಗೆ?

ಇನ್ನು ಬಾಡು ಅನ್ನೋದು ಬಾಯ್( ಒಣಗು ) ಎಂಬ ಬಂದಿದೆಯೇ?

’ಬಾಳ್ಕಾ’(ಮೆಣಸಿನಕಾಯಿ) ಬಾಡ್ಕಾಯ್ => ಬಾೞ್ಕಾ ( ಗಮನಿಸಿರಿ ಬಾಳ್ಕಾ ಎಂದು ಹೇಳೋವಾಗ, ೞಕಾರ ಬರತ್ತೆ )

ಉ: "ಬಾಡು" ಯಾಕೆ "ಬಾಟ" ಆಗೋದಿಲ್ಲ?

cmariejoseph's picture

>>ಕೂಡು->ಕೂಟ, ಓಡು -> ಓಟ,ಪಾಡು-> ಪಾಟ,ಕಾಡು->ಕಾಟ,ನೋಡು->ನೋಟ,ಉಣ್ಣು->ಊಟ, ತೋಡು->ತೋಟ,ಹೂಡು-> ಹೂಟ ಇವೆಲ್ಲಾ ಸರಿ.. ಆದರೆ "ಬಾಡು" ಯಾಕೆ "ಬಾಟ" ಆಗೋದಿಲ್ಲ?

ವೆಂಕಟೇಶ ಅವರೇ ನಿಮಗೇ ಉತ್ತರ ಗೊತ್ತಿದ್ದರೆ ತಿಳಿಸಿ. ನನಗೂ ಈ ಬಗ್ಗೆ ಕುತೂಹಲ ಇದೆ.

ಅನಂತಕೃಷ್ಣ ಅವರು ಈ ಬಗ್ಗೆ ಏನಾದರೂ ಪ್ರತಿಕ್ರಿಯಿಸ್ತಾರೆ ಎಂದು ಕಾದಿದ್ದೆ. ಆದರೆ ಸಂಪದದಲ್ಲಿ ಯಾಕೋ ಈ ನಡುವೆ ಅವರ ಸುಳಿವಿಲ್ಲ.

ಕೂಡ್, ಓಡ್, ಪಾಡ್, ನೋಡ್ ಇವೆಲ್ಲ ಕ್ರಿಯಾಧಾತುಗಳಾಗುತ್ತವೆ. ಆದರೆ ನಿಮ್ಮ ಬಾಡು ಅನ್ನೋ ಪದ ನಾಮಪದವಾಗಿಯೂ ಬಳಕೆಯಲ್ಲಿದೆ.
ಬಾಡು ಅನ್ನೋದಕ್ಕೆ ಮೂರು ಅರ್ಥಗಳಿವೆ. ೧.ಬಾಡು=ಮಾಂಸ ೨.ಬಾಡು=ಮುರುಟು, ಸೊರಗು ೩.ಬಾಡು=ನೆರಳು shelter

ನಾವು ಮೊದಲು ನೋಡಿದಂತೆ ಕೂಡ್, ಓಡ್, ನೋಡ್ ಇವುಗಳಂತೆ ಬಾಡ್ ಅನ್ನೋದು ಮೂಲ ಕ್ರಿಯಾಧಾತುವಾಗಿರಲು ಸಾಧ್ಯವಿಲ್ಲ. ಅದೇನೋ ಬೇರೆ ರೂಪದಲ್ಲಿರಬಹುದು ಅನ್ನಿಸುತ್ತೆ. ಬಹುಶಃ ಆ ಕಾರಣಕ್ಕಾಗಿಯೇ ನಮಗೆ ಬಾಟ ಅನ್ನೋ ರೂಪ ಎಲ್ಲೂ ಕಂಡುಬರೋದಿಲ್ಲ. ಈ ಬಗ್ಗೆ ನಾನು ಅಧಿಕೃತವಾಗಿ ಮಾತನಾಡಲು ತಕ್ಕವನಲ್ಲ. ಬಲ್ಲವರು ಯಾರಾದರೂ ಹೇಳಿದರೆ ಒಳ್ಳೆಯದು.

ಪ್ರೀತಿಯಿಂದ
ಸಿ ಮರಿಜೋಸೆಫ್

ಉ: "ಬಾಡು" ಯಾಕೆ "ಬಾಟ" ಆಗೋದಿಲ್ಲ?

ಮಾಯ್ಸ೨'s picture

ಬಾಡ್ ಎಸಗುಪದ/ಕ್ರಿಯಾಪದದ ಬೇರು.

ಮೂಡು => ಮೂಟ ಇದೆಯೇ?
ನೀಡು => ನೀಟ ಇದೆಯೇ?
ದೂಡು => ದೂಟ?