ಶಕಲಕಬೇಬಿ - ಸಕಲಕಲಾವಲ್ಲಭ
ಮರಿಜೋಸೇಫರ, ಸಕಲಕಲಾವಲ್ಲಭದ ಬಗ್ಗೆ ನಡೆದಿರುವ ಚರ್ಚೆ ನೋಡ್ತಾ ಇದ್ದೀನಿ. ಎಲ್ಲಿಂದಲೋ ಎಲ್ಲಿಗೋ ಹೊರಟುಹೋಗಿದೆ ಅದು.
ಈ ಸಕಲಕಲಾವಲ್ಲಭ ಅನ್ನೋ ಪದ ಇದ್ಯಲ್ಲ, ಸಖತ್ ಕಿಕ್ ಕೊಡ್ತತೆ..ಹಿಂದೆ, ಈ ಹೆಸರಿನಲ್ಲಿ ಶಶಿಕುಮಾರ್ ನಾಯಕನಾಗಿ ನಟಿಸಿದ್ದ ಸಿನಿಮಾ ಬಂದಿತ್ತು. ಆನಂತರ ಸುದೀಪ್ ಅದನ್ನೇ ನಂ.೭೩ ಶಾಂತಿನಿವಾಸ ಅಂತ ಮಾಡ್ದ.
ಈಗಿನ ಕಾಲಕ್ಕೆ ತಕ್ಕಂತೆ, ಸಕಲಕಲಾವಲ್ಲಭನನ್ನು ಹೇಗೆ ಕರೆಯಬಹುದು ಅಂತ ಯೋಚಿಸಿದಾಗ, ಹೊಳೆಯಿತು. ಶಕಲಕಬೇಬಿ - ಬೂಮ್ ಬೂಮ್.
ಅಲ್ಲ, ಮರಿಜೋಸೇಫರ್ ಹೇಳಿದ್ದು,
ಅರುವತ್ನಾಲ್ಕು ವಿದ್ಯೆಗಳಂತೆ!, ಅವೆಲ್ಲವನ್ನೂ ತಿಳಿದವನು ಸಕಲಕಲಾವಲ್ಲಭನಂತೆ, ಎಲ್ಲಾ ಚಂದಮಾಮನ ಕಾಗಕ್ಕ ಗುಬ್ಬಕ್ಕನ ಕಂತೆ.
ಇದು ಕುಹಕ ಎಲ್ಲಾಯಿತು. ಮರಿಜೋಸೇಫರ ಮೇಲಿನ ಮಾತನ್ನು ಕುಹಕ ಎನ್ನುವುದಾದರೆ, ಭಕ್ತ ಕನಕದಾಸ ಚಿತ್ರದ.
ಭಕ್ತಿಯಂತೆ ಪೂಜೆಯಂತೆ ಒಂದು ಅರಿಯೆ ನಾ, ಪಾಪವಂತೆ ಪುಣ್ಯವಂತೆ ಕಾಣೆನಯ್ಯ ನಾ
ಶುದ್ಧನಾಗಿ ಪೂಜೆಗೈಯೆ ಒಲಿವೆಯಂತೆ ನೀ, ಶುದ್ಧವೋ ಅಶುದ್ಧವೋ ನಾ ಕಾಣೆ ದೇವನೇ
ನಾದವಂತೆ ವೇದವಂತೆ ಒಂದೂ ತಿಳಿಯೆ ನಾ, ಬೆಂದ ಜೀವ ನೊಂದು ಕೂಗೆ ಬಂದು ನೋಡೆಯಾ.
ಈ ಸಾಲುಗಳು ಏನು ?
Irony, ನೋಡಿ, ಇಂದು ಈ ಹಾಡನ್ನು ಬಸ್ಸು ರೈಲುಗಳಲ್ಲಿ ಬಿಕ್ಷೆಗಾಗಿ ಹಾಡುತ್ತಾರೆ. ಕಾಸು ಸಿಗುತ್ತಿದೆ ಈ ಹಾಡಿನಿಂದ.
ಇನ್ನೊಂದು,
"ಯಾವೋನ್ ಕಂಡ ನಿನ್ನ ಮೂತಿ ಮುಶುಡಿಯನ್ನ..ಕಳ್ಳ ಶಿವ, ಮಳ್ಳ, ಸುಳ್ಳ ಶಿವ, ಭಂಡ ಶಿವ "
ಹಾಡು ಕುಹಕವೇ ?
ಯಾರಾದ್ರು ಪ್ರಶ್ನೆ ಮಾಡಿದರೆ, ಅವರು ಎತ್ತಿದ ಪ್ರಶ್ನೆಯನ್ನು ಬಿಟ್ಟು, ಅವರನ್ನೇ ಗುರಿಯಾಗಿಸಿಕೊಳ್ಳುತ್ತಾರೆ ? ಯಾಕೆ ? ಯಾಕೆ ? ಯಾಕೆ ?
- Login or register to post comments
- 629 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: ಶಕಲಕಬೇಬಿ - ಸಕಲಕಲಾವಲ್ಲಭ
ನನ್ನೀ ಸುನೀಲ್ ರೇ,
ಅವಹೇಳನಕ್ಕೂ ಆತ್ಮ ನಿವೇದನೆಗೂ ಸಾಕಷ್ಟು ವ್ಯತ್ಯಾಸವಿದೆ ಸರ್....
ಸಾತ್ವಿಕ್
ಉ: ಶಕಲಕಬೇಬಿ - ಸಕಲಕಲಾವಲ್ಲಭ
ಪದ ಜೋಡಣೆಗಳ ಮಾಯೆ :)
" ಅರುವತ್ನಾಲ್ಕು ವಿದ್ಯೆಗಳಂತೆ!, ಅವೆಲ್ಲವನ್ನೂ ತಿಳಿದವನು ಸಕಲಕಲಾವಲ್ಲಭನಂತೆ, ಎಲ್ಲಾ ಚಂದಮಾಮನ ಕಾಗಕ್ಕ ಗುಬ್ಬಕ್ಕನ ಕಂತೆ."
ಇಲ್ಲಿ ಎರಡನೇ ಭಾಗ ಇದೆಯಲ್ಲ, "ಎಲ್ಲಾ ಚಂದಮಾಮನ ಕಾಗಕ್ಕ ಗುಬ್ಬಕ್ಕನ ಕಂತೆ." ಕೆಲವರನ್ನು ಕೆಣಗಿದೆ ಅನಿಸುತ್ತೆ...
ಬರಹಗಾರರ ಹಳೇ ಬರಹಗಳ ಅನಿಸಿಕೆ, ಮುಂದುವರೀತಿದೆಯೇನೋ ಅನ್ನೋ ಗುಮಾನಿ...
ಎಷ್ಟೋ ಮಂದಿ ಈ ರೀತಿ ಪ್ರಶ್ನೆ ಕೇಳಿ, ಹಳೇ ಬರಹಗಳ ಅಭಿಪ್ರಾಯವನ್ನು ಮಂಡಿಸೋಕೆ ವೇದಿಕೆ ಸಿದ್ದಪಡಿಸೋದನ್ನ ಸಂಪದದಲ್ಲಿ ನೋಡೋಲ್ವಾ ನಾವು!
'ಸಕಲಕಲಾವಲ್ಲಭ' ನೋಡಿದಾಗ ನನ್ಗೇನೋ ಹಾಗನಿಸಿರಲಿಲ್ಲ...ಬೇರೆ ಅವರು ಪ್ರತಿಕ್ರಿಯೆಯಲ್ಲಿ ವಿಷಯಾಂತರ ಮಾಡೋವರೆಗೂ...
--ಶ್ರೀ
ಉ: ಶಕಲಕಬೇಬಿ - ಸಕಲಕಲಾವಲ್ಲಭ
>>'ಸಕಲಕಲಾವಲ್ಲಭ' ನೋಡಿದಾಗ ನನ್ಗೇನೋ ಹಾಗನಿಸಿರಲಿಲ್ಲ...ಬೇರೆ ಅವರು ಪ್ರತಿಕ್ರಿಯೆಯಲ್ಲಿ ವಿಷಯಾಂತರ ಮಾಡೋವರೆಗೂ...
ಸರಿಯಾಗಿ ನೋಡ್ಕಂಡ್ ಮಾತಾಡಿ ಸೀನಪ್ಪ, ವಿಷಯಾಂತರ ಮಾಡಿದ್ದು ಯಾರೂಂತ?
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಶಕಲಕಬೇಬಿ - ಸಕಲಕಲಾವಲ್ಲಭ
ವಿಷಾಯಾಂತರ ನಿಮ್ ಬ್ಲಾಗಲ್ಲಿ ಯಾವಾಗಲೂ ಮತಾಂತರಕ್ಕೆ. :)
ಮರಿಜೋಸೆಪ್ ನೆನ್ನೆ ಯಾರೋ ನೀವು ನನ್ನ ಕ್ರಿಶ್ಚಿಯನ್ಗೆ ಆಮಿಷವೊಡ್ಡಿ ಮತಾಂತರ ಮಾಡಿದ್ದೀರಿ ಎಂದು ಅಂತಿದ್ದರು. :)
ಉ: ಶಕಲಕಬೇಬಿ - ಸಕಲಕಲಾವಲ್ಲಭ
ಈ ಮರಿಜೋಸೆಫ್ ಅನ್ನೋ ಹೆಸರೇ ಒಂದು ಭಯಂಕರ ಹೆಸರು ನೋಡ್ರೀ.
ಯಾವುದೋ ರಾಜ ಅನ್ತನೋ, ಸುಂದರ ಅನ್ತನೋ, ಪ್ರಕಾಶ ಅನ್ತನೋ ಇದ್ದಿದ್ರೆ ಚೆನ್ನಾಗಿತ್ತು. ಈ ಮರಿಜೋಸೆಫ್ ಅನ್ನೋ ಹೆಸರು ನೋಡಿದ್ರೇನೆ ಅದೆಲ್ಲೋ ಹಸಿ ಮೆಣಸಿನಕಾಯಿ ಇಟ್ಕಂಡಂಗೆ ಕೆಲವರಿಗೆ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಶಕಲಕಬೇಬಿ - ಸಕಲಕಲಾವಲ್ಲಭ
ಅಯ್ಯೋ.. ಅದ್ಸರಿ..
ನನ್ ಹೆಸ್ರಿಗೆ ಏನಾಗಯ್ತೆ? ನಾನು ಕ್ರಿಶ್ಚಿಯನ್ ಅಂತಲ್ಲ. ನಾನು ನಾಸ್ತಿಕ. ನಿಮ್ಮ ಏಸೂ ಕೂಡ ನಂಗೆ ಸುಳ್ಳು. ನನ್ನ ನೀವು ಆಮಿಷವೊಡ್ಡಿ ಸಿಲುಬೆಗೇರಿಸಿದ್ದೀರಿ ಅಂದ್ರೆ ನನ್ ನಾಸ್ತಿಕಧರ್ಮಕ್ಕೆ ಅವಹೇಳನ ಅಲ್ವೇ!
ಉ: ಶಕಲಕಬೇಬಿ - ಸಕಲಕಲಾವಲ್ಲಭ
ಅಯ್ಯೋ ನಿಮ್ಮ ಅಭಿಪ್ರಾಯಕ್ಕೆ ನಾನೇಕೆ ಅಡ್ಡ ಬರಲಿ. ನಾನ್ಯಾಕೆ ನನ್ನ ಅಭಿಪ್ರಾಯವನ್ನು ನಿಮ್ಮ ಮೇಲೆ ಹೇರಲಿ.
ಅಷ್ಟಕ್ಕೂ, ಮತಾಂತರಕ್ಕೂ ನನಗೂ ಆಗಿಬರೋಲ್ಲ, ಸುಮ್ನೆ ಇಲ್ಲಿ ವಾದ ಮಾಡೋರ ಕಿಮ್ಮತ್ತು ನೋಡೋಣ ಅಂತ ವಾದ ಮಾಡ್ತೀನಿ ಅಷ್ಟೇಯ. ಬೂಟಾಟಿಕೆಯವರನ್ನು (ಅವರು ಯಾವು ಧರ್ಮದವರೇ ಆಗಿದ್ರೂ) ಕಂಡ್ರೆ ಮೈ ಉರೀತದೆ.
(ಇನ್ನೊಂದು ವಿಸ್ಯ ಯಾರ್ಗೂ ಯೋಳ್ಬೇಡಿ, ನನಗೂ ಈ ಪಾದ್ರಿಬಿಷಪ್ಪರಿಗೂ ಆಗಿ ಬರ್ಲಿಲ್ಲ ಅನ್ನೋ ಕಾರಣಕ್ಕೆ ಎಕ್ಸ್ ಕಮ್ಯುನಿಕೇಟ್ ಆಗಿದ್ದೆ, ಆದ್ರೆ ನನಗೂ ಯೇಸುಗೂ ಮಧ್ಯೆ ಅದೆಂಥದೋ ಋಣಾನುಬಂಧ).
ನಾನು ಎಲ್ಲಾ ದೇವಸ್ಥಾನ ದರ್ಗಾಗಳಿಗೂ ಓಯ್ತೀನಿ ಕಣಣ್ಣೋ. ನಮ್ ಕಚೇರೀಲಿ ಆಯ್ದಾ ಪೂಜೇಗೆ ಎಷ್ಟೋ ವರ್ಸಗಳಿಂದ ನಾನೆ ಕನ್ವೀನರ‍್ರು.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಶಕಲಕಬೇಬಿ - ಸಕಲಕಲಾವಲ್ಲಭ
ಆಯ್ದ ಪೂಜೆ :) ಹೆ ಹೆ
ಉ: ಶಕಲಕಬೇಬಿ - ಸಕಲಕಲಾವಲ್ಲಭ
ನಿಮ್ಮ ಬಗ್ಗೆ ಕೇಳಿದ್ದೆ..
ನೀವು ಕನ್ನಡ ಕ್ರೈಸ್ತರ ಬಗ್ಗೆ ಬಹಳಷ್ಟು ಹೋರಾಟ ನಡೆಸ್ತೀರೆಂದು ಕೇಳಿದ್ದೆ??
ನಿಮ್ಮ ಹೋರಾಟದ ಕಿರು ಚಿತ್ರಣ ಕೊಟ್ಟಿದ್ದರೆ ಚೆನ್ನಾಗಿತ್ತು..
ಉ: ಶಕಲಕಬೇಬಿ - ಸಕಲಕಲಾವಲ್ಲಭ
ಆ ಚಿತ್ರಣ ತಕ್ಕಂಡ್ ಏನಪ್ಪ ಮಾಡ್ತೀರಾ ನಾಗೇಂದ್ರ?
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಶಕಲಕಬೇಬಿ - ಸಕಲಕಲಾವಲ್ಲಭ
ಗಾಂಧಿ ಉಪವಾಸ ಸತ್ಯಾಗ್ರಹ ಮಾಡಿದ್ದು ತಿಳ್ಕೊಂಡು ಏನುಪಯೋಗ.. ಸುಭಾಸ್ ರ ನೀವು ರಕ್ತ ಕೊಡಿ.. ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂಬುದನ್ನು ತಿಳ್ಕೊಂಡು ಏನು ಉಪಯೋಗವೋ.. ಹಾಗೆ.. ತಮಿಳು ಕ್ರೈಸ್ತರಿಂದ ಕನ್ನಡಿಗ ಕ್ರೈಸ್ತರ ದಬ್ಬಾಳಿಕೆಯ ವಿರುದ್ಧ ಮರಿ ಜೋಸೆಫರ ಹೋರಾಟ ತಿಳಿದುಕೊಳ್ಳುವುದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ....
ಉ: ಶಕಲಕಬೇಬಿ - ಸಕಲಕಲಾವಲ್ಲಭ
ಅಯ್ಯಯ್ಯೋ ಅಚಾತುರ್ಯ!
ಆ ಹೋರಾಟದಲ್ಲಿ ನನ್ನಂಥವರು ಎಷ್ಟೋ ಮಂದಿ ಇದ್ದಾರೆ, ಕ್ರೈಸ್ತರಲ್ಲದವರೂ ಇದ್ದಾರೆ, ಮುಖ್ಯವಾಗಿ ನನಗೆ ಮಾರ್ಗದರ್ಶನ ನೀಡಿ ನೇಪಥ್ಯದಲ್ಲಿ ಉಳಿದ ದೊಡ್ಡ ದೊಡ್ಡ ಮಹನೀಯರೂ ಇದ್ದಾರೆ.
ಅವರೆಲ್ಲರ ಮುಂದೆ ನಾನೊಬ್ಬ ಕಿಂಕರ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಶಕಲಕಬೇಬಿ - ಸಕಲಕಲಾವಲ್ಲಭ
ಹೋಗ್ಲಿ ಬಿಡಿ.. ಅವ್ರನ್ನೆಲ್ಲ ಸೇರಿಸಿಕೊಂಡು ಒಂದು ಲೇಖನ ಬರೆಯಬೇಕೆಂದು ವಿನಂತಿಸುತ್ತೇನೆ..
ಉ: ಶಕಲಕಬೇಬಿ - ಸಕಲಕಲಾವಲ್ಲಭ
ಇವರ ಮಾತು ಕೇಳಿ, ಮರಿಜೋಸೆಪರು ಆ ಮಹನೀಯರ ಹೆಸರನ್ನೆಲ್ಲ ಬರೆದರೆ, ಮತಾಂತರಕ್ಕೆ ಕನ್ನಡ ಹೋರಾಟದ ಆಮಿಷ ಅನ್ನೋ ಮಂದಿಯೂ ಇದ್ದಾರೆ ಇಲ್ಲಿ.
ಅಷ್ಟು ಉದಾತ್ತಭಾವನೆಯ ದೇಶಭಕ್ತರು.! :)
ಉ: ಶಕಲಕಬೇಬಿ - ಸಕಲಕಲಾವಲ್ಲಭ
ಯಾವಾಗ ಬರಿತೀರ ಮರಿ ಜೋಸೆಫರೆ??
ಉ: ಶಕಲಕಬೇಬಿ - ಸಕಲಕಲಾವಲ್ಲಭ
>>ಇವರ ಮಾತು ಕೇಳಿ, ಮರಿಜೋಸೆಪರು ಆ ಮಹನೀಯರ ಹೆಸರನ್ನೆಲ್ಲ ಬರೆದರೆ, ಮತಾಂತರಕ್ಕೆ ಕನ್ನಡ ಹೋರಾಟದ ಆಮಿಷ ಅನ್ನೋ ಮಂದಿಯೂ ಇದ್ದಾರೆ ಇಲ್ಲಿ.
ತುಂಬಾ ಒಳ್ಳೇ ಜೋಕು.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಶಕಲಕಬೇಬಿ - ಸಕಲಕಲಾವಲ್ಲಭ
ಅದರಲ್ಲಿ ಮೇಲ್ವರ್ಗದ ಕ್ರೈಸ್ತರು ಉದಾಹರಣೆಗೆ ಸ್ವ ಘೋಷಿತ ಕೊಂಕಣಿಗರು(ಕೊಂಕಣ ಬಾಮಣ್ ಗಳು) ದಲಿತ ಕ್ರೈಸ್ತರನ್ನು ಅಸ್ಪ್ರಶ್ಯರಂತೆ ಕಾಣುವುದರ ವಿರುದ್ದದ ತಮ್ಮ ಹಾಗೂ ತಮ್ಮಂತಹ ಸಹೃದಯರ ಹೋರಾಟವನ್ನೂ ಸೇರಿಸಬೇಕಾಗಿ ವಿನಂತಿಸುತ್ತೇನೆ..
ಉ: ಶಕಲಕಬೇಬಿ - ಸಕಲಕಲಾವಲ್ಲಭ
ನಾಗೇಂದ್ರ ಅವರೆ ತಾವ್ ಯಾವ ಧರ್ಮ, ಯಾವ ಜಾತಿ? ನಿಮ್ ಧರ್ಮದ ಶೋಷಿತ ದಲಿತ ಕೀಳುವರ್ಗಕ್ಕಾಗಿ ಯಾವ್ ಯಾವ್ ಹೋರಾಟ ಮಾಡಿದ್ದೀರಿ ಪಟ್ಟಿ ಮಡಗಿ ವಸಿ.
ನಾನೂ ಒಂದು ಧರ್ಮದಿಂದ ಶೋಷಿತ, ದಲಿತ.
ಉ: ಶಕಲಕಬೇಬಿ - ಸಕಲಕಲಾವಲ್ಲಭ
ಮಾನವ ಧರ್ಮ, ಗಂಡಸು ಜಾತಿ(ಕೆಲ ವರ್ಷಗಳ ಹಿಂದೆ ಹುಡುಗ ಜಾತಿ) ನನ್ ಧರ್ಮದ ಶೋಷಿತ ದಲಿತ ಕೀಳುವರ್ಗಕ್ಕಾಗಿ ಏನೂ ಹೋರಾಟ ಮಾಡಿಲ್ಲ :( .
ನೀವು ಒಂದು ಧರ್ಮದಿಂದ ಶೋಷಿತ, ದಲಿತನ? ಆದ್ರೆ ನಾನಲ್ಲ.
ಮರಿ ಜೋಸೆಫರು ಬೇಜಾರ್ ಮಾಡ್ಕೊಂಡ್ರು ಅನ್ಸುತ್ತೆ :(
ಅವರ ಜೀವನವೆ ಒಳ್ಳೆ ಬಾಷ(ಕನ್ನಡದಲ್ಲಿ ವಿಷ್ಣುವರ್ಧನ್ ಅಭಿನಯಿಸಿದ್ದು) ಪಿಕ್ಚರ್ ತರ ಇದೆ.. ಕಾಗಕ್ಕ ಗುಬ್ಬಕ್ಕ ಮಾಡಿದ್ದು.. ಚಂದಮಾಮನ ಕಥೆ ಕೇಳಿದ್ದು.. ಬೆಣ್ಣೆ ಕದ್ದ ಕ್ರಿಷ್ಣ ಹಾಡ್ ಹಾಡಿದ್ದು.. ಹಂಗೆ ವಾಟಾಳ್ ನಾಗರಾಜರ ಟ್ರೈನ್ ತಡೆದ ಸುದ್ದಿ ಕೇಳಿ ಹೆದರಿ ಮನೆಗ್ ಹೋಗಿದ್ದು................................. ಅಲ್ಲಿಗೆ ಸಶೇಷ.....
ಆದ್ರೆ ಅಲ್ಲಿಂದ ಮುಂದಿನ ಅವರ ಹೋರಾಟದ ಜೀವನದ ಬಗ್ಗೆ ತಿಳಿದ್ಕೊಳ್ಳಬೇಕೆಂಬ ಆಸೆ..
ಉ: ಶಕಲಕಬೇಬಿ - ಸಕಲಕಲಾವಲ್ಲಭ
ಹೌದು ರೀ ಜೋಸೆಫ್‍ರೇ...
ನೀವು ವಿಷಯಾಂತರ ಮಾಡಿದರಿ ಅನ್ನಲಿಲ್ವಲ್ಲ :)
"ಬೇರೆ ಅವರು ವಿಷಯಾಂತರ ಮಾಡೋವರೆಗೂ" ಅಂತಲ್ವಾ ನಾನು ಬರೆದದ್ದು! ತಪ್ಪಾ?
ಉ: ಶಕಲಕಬೇಬಿ - ಸಕಲಕಲಾವಲ್ಲಭ
ಸುನಿಲ್,
ಗೊತ್ತಿಲ್ಲದ ವಿಷಯಗಳನ್ನು ಕೇಳಿ ತಿಳಿದುಕೊಳ್ಳ ಬಯಸುವವನು , ಗೊತ್ತಿಲದರ ಬಗ್ಗೆ ಕೇಳಬೇಕು, ಇನ್ನೊಬ್ಬರ ನಂಬಿಕೆಯನ್ನು 'ಚಂದಮಾಮ ,ಕಾಗಕ್ಕ ಗುಬಕ್ಕ' ಅಂತ ಪ್ರಶ್ನಿಸಿದ್ದು ಯಾಕೆ? ಯಾಕೆ? ಯಾಕೆ?
ಹಾಗೆ ಅಲ್ಲಿ ಪ್ರತಿಕ್ರಿಯೆಗಳನ್ನು ನೋಡಿದರೆ ವಿಷಯಾಂತರ ಮಾಡಿಸಿದ್ದು ಯಾರು ಎನ್ನುವುದು ತಿಳಿಯುತ್ತದೆ ಅನ್ಕೊತಿನಿ.
ರಾಕೇಶ್ ಶೆಟ್ಟಿ :)
ಉ: ಶಕಲಕಬೇಬಿ - ಸಕಲಕಲಾವಲ್ಲಭ
> "ಭಕ್ತಿಯಂತೆ ಪೂಜೆಯಂತೆ ಒಂದು ಅರಿಯೆ ನಾ, ಪಾಪವಂತೆ ಪುಣ್ಯವಂತೆ ಕಾಣೆನಯ್ಯ ನಾ
ಶುದ್ಧನಾಗಿ ಪೂಜೆಗೈಯೆ ಒಲಿವೆಯಂತೆ ನೀ, ಶುದ್ಧವೋ ಅಶುದ್ಧವೋ ನಾ ಕಾಣೆ ದೇವನೇ
ನಾದವಂತೆ ವೇದವಂತೆ ಒಂದೂ ತಿಳಿಯೆ ನಾ, ಬೆಂದ ಜೀವ ನೊಂದು ಕೂಗೆ ಬಂದು ನೋಡೆಯಾ."
ಇದು ಬೇಡರ ಕಣ್ಣಪ್ಪ ಚಿತ್ರದ "ಶಿವಪ್ಪ ಕಾಯೊ ತಂದೆ" ಹಾಡಿನ ಸಾಲುಗಳಲ್ವೆ ? :)
ಉ: ಶಕಲಕಬೇಬಿ - ಸಕಲಕಲಾವಲ್ಲಭ
ಹೌದು!
ಉ: ಶಕಲಕಬೇಬಿ - ಸಕಲಕಲಾವಲ್ಲಭ