ಗಣಕ ಯಂತ್ರದಲ್ಲಿ ಕನ್ನಡ ಅಳವಡಿಕೆ
ಎಲ್ಲರಿಗೂ ನಮಸ್ಕಾರ,
ನನ್ನ ಹೆಸರು ನಟರಾಜ, ನಾನು ಸಂಪದಕ್ಕೆ ಹೊಸದಾಗೆ ಸದಸ್ಯನಾಗಿದ್ದೇನೆ. ಸಂಪದವನ್ನು ಮೊದಲಿನಿಂದಲು ಒದುತ್ತಿದ್ದೆ ಆದರೆ ಸದಸ್ಯನಾಗಿರಲಿಲ್ಲ.
ಗಣಕ ಯಂತ್ರದಲ್ಲಿ ಕನ್ನಡ ಅಳವಡಿಸುವುದು ಅತ್ಯಂತ ಸುಲಭವಾಗಿದೆ, ಆದರೆ ಬಹಳ ಜನಕ್ಕೆ ಇದರ ಬಗ್ಗೆ ಅರಿವೆ ಇಲ್ಲ. ಜನರಿಗೆ ಇದರ ಬಗ್ಗೆ ಅರಿವು ಮೂಡಿಸಲು ಬಹಳ ಪ್ರಯತ್ನ ಮಾಡುತ್ತಿರುವೆ. ನಿಮ್ಮ ಸಲಹೆ ಇದ್ದರೆ ತಿಳಿಸಿ. ಕನ್ನಡದಲ್ಲಿ ಬರೆಯುವುದು ಮಾತ್ರವಲ್ಲ, ನಿಮ್ಮ windows office & XP ಗೆ ಕನ್ನಡದಲ್ಲೆ ಮೆನು, ಸಹಾಯ ಪದ ಎಲ್ಲವನ್ನು ಕಾಣಬಹುದು.
ಇದನ್ನು ವಿವರವಾಗಿ ಒಂದು PDF ಅಲ್ಲಿ ಬರೆದಿರುವೆ, ಎಲ್ಲರಿಗು ಕಳಿಸಲು ಪ್ರಯತ್ನಿಸುತ್ತಿದ್ದೇನಿ. ನಿಮಗೆ ಆಸಕ್ತಿ ಇದ್ದರೆ, ತಿಳಿಸಿ.
ನಟರಾಜ

- Login or register to post comments
- 1344 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ನನಗೆ ಕಳಿಸಿ
ನಟರಾಜರೇ
ನಿಮ್ಮ PDF ಅನ್ನು ನನ್ನ shreekant.mishrikoti@sbi.co.in ಗೆ ಈ ವಿಳಾಸಕ್ಕೆ ಕಳಿಸಿ .
ಧನ್ಯವಾದಗಳು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ
ದಯವಿಟ್ಟು ಈ ಲೇಖನಗಳನ್ನು ಓದಿ-
ವಿಂಡೋಸ್ ಮತ್ತು ಆಫೀಸ್‌ಗಳಲ್ಲಿ ಕನ್ನಡ
ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಲೇಖನಮಾಲೆಯ ಮೊದಲ ಕಂತು. ಉಳಿದ ಲೇಖನಗಳ ಕೊಂಡಿ ಇದೇ ಲೇಖನದಲ್ಲಿದೆ.
ಯುನಿಕೋಡ್ ಬಗ್ಗೆ -1, 2
ಸಿಗೋಣ,
ಪವನಜ
-----------
Vishva Kannada
Think globally, Act locally
ನಿಮ್ಮ ಲೇಖನ
ನಮಸ್ಕಾರ ಪವನಜರೆ,
ನಾನು ನಿಮ್ಮ ಎಲ್ಲಾ ಲೇಖನಗಳನ್ನು ಒದಿದ್ದೇನೆ. bashaindia.com ಅಲ್ಲಿ ನೀವು ಬರೆದಿರುವ ಲೇಖನದಿಂದಲೆ ನಾನು ಸ್ಪೂರ್ತಿ ಪಡೆದುಕೊಂಡದ್ದು. ನಿಮ್ಮ ಲೇಖನ ಒದುವವರೆಗು ನನಗೆ ಇದು ಇಷ್ಟೊಂದು ಮುಂದುವರೆದಿದೆ ಎಂದು ಗೊತ್ತಿರಲಿಲ್ಲ. ನಿಮ್ಮ ಲೇಖನದಿಂದ ಕೆಲವು ಭಾಗಗಳನ್ನು ತೆಗೆದು ಉಳಿದಿದ್ದನ್ನು ಅಂತಾರ್ಜಾಲದಿಂದ ಆರಿಸಿದ್ದೇನೆ.
PDF ಅಲ್ಲಿ ಬರೆಯುವ ನನ್ನ ಉದ್ದೇಶ ಎನೆಂದರೆ ಅದನ್ನು e-mail ಅಲ್ಲಿ ಲಗತ್ತಿಸಿ ಕಳಿಸಬಹುದು.
ನಿಮಗೆ ಇದನ್ನು ಕಳಿಸ್ತೀನಿ, ಎನಾದರು ಸಲಹೆ ಇದ್ದರೆ ತಿಳಿಸಿ. ಎಲ್ಲಾ ಕಡೆ ಪ್ರಚಾರ ಮಾಡಲು ಪ್ರಯತ್ನಿಸುತ್ತಿದ್ದೇನೆ.
ನಟರಾಜ
ಕನ್ನಡದ pdf ನನಗೂ ಕಳಿಸಿ
ಆತ್ಮೀಯ ನಟರಾಜ್,
ಕನ್ನಡದ ಮಾಹಿತಿಗಳನ್ನೊಳಗೊಂಡ ಖಡತವನ್ನು ನನ್ನ ವಿಳಾಸಕ್ಕೂ ಕಳಿಸಿ. hallimanearavind@gmail.com
ಧನ್ಯವಾದಗಳೊಂದಿಗೆ
ಅರವಿಂದ
http://www.belaku.net
ಕಂಪ್ಯೂಟರ್‌ನಲ್ಲಿ ಕನ್ನಡದ ಬಳಕೆ
ಕಂಪ್ಯೂಟರ್‌ನಲ್ಲಿ ಕನ್ನಡ ಬಳಸುವವರು ಹೆಚ್ಚುತ್ತಿದ್ದಾರೆ ಎಂಬುದು ನಿಜವಾದರೂ ಅಗತ್ಯ ಸಂಖ್ಯೆಯಲ್ಲಿ ಹೆಚ್ಚುತ್ತಿಲ್ಲ. ಈ ಮಧ್ಯೆ ನಾವು ಕನ್ನಡ ಬಳಕೆಯನ್ನು ಸಾಧ್ಯತೆಯನ್ನು, ಸುಧಾರಣೆಯನ್ನು ಹಂಚಿಕೊಳ್ಳಬೇಕಿದೆ.
ನಾನು ವಿಂಡೋ ಎಕ್ಸ್‌ಪಿ ಬಳಸುತ್ತಿದ್ದೇನೆ (ಕನ್ನಡದ ಹೊದಿಕೆ). ಇಲ್ಲಿನ ಕೀಬೋರ್ಡ್ (ಇನ್‌ಸ್ಕಿಪ್ಟ್) ನಲ್ಲಿಯೂ ಕೆಲವು ಸಮಸ್ಯೆಗಳಿವೆ. ಕೋಲನ್, ಸೆಮಿಕೋಲನ್, ಪ್ರಶ್ನಾರ್ಥಕ ಚಿನ್ಹೆ, ಉಲ್ಲೇಖ ಚಿನ್ಹೆಗಳಿಗೂ ಇಂಗ್ಲೀಷ್‌ಗೆ ಬರಬೇಕು. ಅಲ್ಲದೆ ಜೀರೋ ವಿಡ್ತ್ ಜಾನಿಯರ್‌ಗೆ ಕಂಟ್ರೋಲ್‌ನೊಂದಿಗೆ ಮೂರು ಕೀ ಬಳಸಬೇಕು.
ಅಕಸ್ಮಿಕವಾಗಿ ನಾನು ಮೈಕ್ರೋಸಾಪ್ಟ್ ಕೀಬೋರ್ಡ್ ಲೇಔಟ್ ಕ್ರಿಯೇಟರ್ ಎಡವಿದೆ. (ಬಹುಶಃ ಕನ್ನಡದ ಲೋಕಲೈಜೇಷನ್‌ನಲ್ಲಿನ ಪವನಜ ಅವರ ಲಿಂಕ್ ಎಂದು ಕಾಣುತ್ತದೆ- ಇದು ಅದಿಕೃತ ವಿಂಡೋ ಎಕ್ಸ್‌ಪಿ ಬಳಸುವವರಿಗೆ ಡೌನ್ ಲೋಡ್‌ಗೆ ಲಭ್ಯವಿದೆ). ಇದನ್ನು ಬಳಸಿ ಮೇಲಿನವನ್ನು ಮುಖ್ಯ ಕೀಬೋರ್ಡ್‌ಗೆ ವರ್ಗಾಯಿಸಲು ಸಾಧ್ಯವಾಯಿತು. ಈಗ ಕನ್ನಡ ಟೈಪಿಸುವಾಗ ಇಂಗ್ಲೀಷ್ ಕೀಬೋರ್ಡ್‌ಗೆ ಬದಲಾಯಿಸುವ ಅಗತ್ಯವಿಲ್ಲ.
ಆದಾಗ್ಯೂ ಮೈಕ್ರೋಸಾಪ್ಟ್ ಒಂದು ಬಹುರಾಷ್ಟ್ರೀಯ ಕಂಪೆನಿ ಎಂಬುದನ್ನು ನಾವು ಮರೆಯ ಬಾರದು. ಲಾಭವಲ್ಲದೆ ಯಾವ ಸಾಂಸ್ಕೃತಿ ಜವಾಬುದಾರಿಯನ್ನು ಅದರಿಂದ ನಿರೀಕ್ಷಿಸುವುದು ಸಾಧ್ಯವಾಗುವುದಿಲ್ಲ.
ವಿಂಡೋ ಎಕ್ಸ್‌ಪಿ ಕೊಂಡವರಿಗೆ ಹೊಸ ಮಾದರಿಯ ತುಂಗಾ ಪಾಂಟ್ ಕೊಡದಿರುವುದು (ಈ ಬಗೆಗಿನ ಭರವಸೆಯ ನಡುವೆಯೂ) ಅದರ ಕಾಳಜಿಯ ನೆಲೆಗಟ್ಟನ್ನು ಪ್ರದರ್ಶಿಸುತ್ತದೆ. ಹೀಗಾಗಿ ಅಂತ್ಯದಲ್ಲಿ ನಮಗೆ ಏನಿದ್ದರೂ ಓಪನ್ ಸೋರ್ಸ್ ಒಂದೇ ದಾರಿ. ಆದರೆ ಈ ಬಗೆಗಿನ ತಂತ್ರಾಶ ಸುಲಭ ಬಳಕೆ ಸಾಧ್ಯವಾಗುವವರೆಗೂ, ಕನ್ನಡದಲ್ಲಿ ಸುಲಭ ಬಳಕೆ ಅಸಾಧ್ಯ ಎಂಬ ಕಾರಣ ನೀಡಿ ಬಳಸದಿರುವ ಅಧಿಕಾರಶಾಹಿಗಳು (ಇಂಗ್ಲೀಷ್ ಪರ ವಾದಿಗಳು) ಹೆಚ್ಚಾಗಿದ್ದಾರೆ ಎಂಬುದನ್ನು ಸಹ ನಾವು ಮರೆಯಬಾರದು.
ಆಸಕ್ತಿದಾಯಕ ಅಂಶವೆಂದರೆ ಈಗ ಕನ್ನಡದ ಎರಡು ಪತ್ರಿಕೆಗಳು ಇ-ಪೇಪರ್ ಹೊರತಂದಿವೆ. ಆದರೆ ಅಲ್ಲಿ ಪದ ಹುಡುಕುವುದು ಸುಲಭವಲ್ಲ. (ಅವರೆಲ್ಲರೂ ಬೇರೆ ಬೇರೆ ಪಾಂಟ್ ಉಪಯೋಗಿಸುತ್ತಾರೆ) ಭಿನ್ನ ಭಿನ್ನ ಪಾಂಟ್ ಬಳಸುವ ಬದಲು ಯುನಿಕೋಡ್ ಪಾಂಟ್‌ಗಳನ್ನೇ ಅಭಿವೃದ್ಧಿ ಪಡಿಸಿ ಕೊಡಬಹುದಾಗಿತ್ತು. (ವಿಂಡೋ ಎಕ್ಸ್‌ಗಿಂತ ಹಿಂದಿನ ವಿಂಡೋ ಆವೃತ್ತಿಗಳನ್ನು ಬಳಸುತ್ತಿರುವವರ ಬಗೆಗಿನ ಸಮಸ್ಯೆಗೆ ಬೇರೆ ಪರಿಹಾರವಿಲ್ಲವೇ?) ತಕ್ಷಣದ ಪ್ರಜಾವಾಣಿಯ ಬಗೆಗಿನ ಪರಿಹಾರವೆಂದರೆ ವಾಸು ಅವರು ಕೊಡುವ ಕನ್‌ವರ್ಟ್‌ರ್ ಬಳಸಿ ಯುನಿಕೋಡ್‌ನಿಂದ ಬರಹಕ್ಕೂ ನಂತರ ಡೆಕ್ಕ್‌ನ್ ಶ್ರೀ ಪಾಂಟ್‌ಗೂ ಪರಿವರ್ತಿಸಿ ಹುಡುಕುವುದು. ಅದು ಅಷ್ಟು ಸಮಂಜಸವಾಗಿ ಕೆಲಸ ಮಾಡುತ್ತಿದ್ದಂತೆ ಭಾಸವಾಗುವುದಿಲ್ಲವಾದರೂ ಏನು ಇಲ್ಲದಿರುವುದಕ್ಕಿಂತ ಮೇಲು.
ಅದಕ್ಕಿಂತ ಹೆಚ್ಚಾಗಿ ಅಲ್ಲಿ ಬಳಸುವ ಅಡೋಬ್ ರೀಡರ್ (PDF) ಕನ್ನಡ ಯುನಿಕೋಡ್‌ನ್ನಾಗಲಿ, ಹುಡುಕುನಲ್ಲಿ ಪೋಸ್ಟ್‌ಕ್ರಿಪ್ಟ್ ಫಾಂಟ್‌ನ್ನಾಗಲಿ ತೋರಿಸಲಾರದು. ಅಷ್ಟು ವಿಸೃತವಾಗಿ ಅದನ್ನು ಕನ್ನಡಕ್ಕೆ ಬಳಸುತ್ತಿದ್ದಾಗ ಈ ಬಗೆಗಿ ಕಂಪೆನಿಯನ್ನು ಕೇಳಬಹುದಾಗಿತ್ತೇನೋ. ಈ ಕಂಪೆನಿ ಹಲವು ಭಾಷೆಗಳ ಬೆಂಬಲಕ್ಕೆ ಪೂರಕ ತಂತ್ರಾಶ ಬಿಡುಗಡೆ ಮಾಡಿದೆಯಾದರೂ ಅದರಲ್ಲಿ ಕನ್ನಡವಿಲ್ಲ. (ಯಾವುದೇ ಭಾರತೀಯ ಭಾಷೆ ಇಲ್ಲ). ಈ ಬಗೆಗೆ ಕನ್ನಡ ಪತ್ರಿಕೆಗಳಾವುವೂ ತಲೆಕೆಡಿಸಿಕೊಂಡಂತೆಯೂ ಕಾಣುತ್ತಿಲ್ಲ. ವಾಸ್ತವದಲ್ಲಿ ಸಾಂಸ್ಕೃತಿಕ ಜವಾಬುದಾರಿಯೆಂದರೆ ಇದೇ ಎಂದು ನನ್ನ ಗ್ರಹಿಕೆ.
ಇಂತಹ ಪ್ರಶ್ನೆಗಳ ಬಗೆಗೆ ನಾವು ಗಂಭೀರವಾಗಿ ಪರಿಗಣಿಸುವುದು ಯಾವಾಗ.
ಹೊಸ ತುಂಗಾ ಫಾಂಟ್
ಹೊಸ ತುಂಗಾ ಫಾಂಟ್ ಗೆ ನನ್ನ ಬ್ಲಾಗ್ ನೋಡಿ.
http://www.sampada.net/blog/aravinda/25/09/2006/2285
ಧನ್ಯವಾದಗಳೊಂದಿಗೆ
ಅರವಿಂದ (http://www.belaku.net)
ಸಹಾಯ
ಪ್ರದೀಪ್ ,
ನಿಮ್ಮ ಲೇಖನಕ್ಕೆ ಧನ್ಯವಾದಗಳು.
ನನಗೆ, ಒಂದು ಸಹಾಯ ಆಗಬೇಕು.ನೀವು "ಇಂಗ್ಲೀಷ್‌ಗ" ಹೇಗೆ ಬರಿದಿರಿ ಸ್ವಲ್ಪ ತಿಳಿಸುವಿರಾ? ಬಹಳ ಜನಕ್ಕೆ ಇದರ ತೊಂದರೆ ಇದೆ. ಎರಡು ಒತ್ತಾಕ್ಷರವಿರುವ ಪದ ಬಂದರೆ ಅದನ್ನು IME ಜೋಡಿಸಿಬಿಡುತ್ತದೆ.ಉದಾಹರಣೆಗೆ, ನಾನು ಬರೆದರೆ ಇಂಗ್ಲೀಷ್ಗ್ ಆಗಿಬಿಡುತ್ತದೆ.
ನಾನು Microsoft IME ಬಳಸುತ್ತಿದ್ದೇನೆ.
ನಟರಾಜ
ಒತ್ತಕ್ಷರ ಹಾಗೂ ಅರ್ಧ ಅಕ್ಷರ
ನಟರಾಜ್ ಅವರೆ,
ಇದಕ್ಕೆ zero width non joiner ಬಳಸ ಬಹುದು. ಮೂಲ ಕೀಲಿ ಮಣೆಯಲ್ಲಿ ctrl+shift+1 ಬಳಸುವ ಮೂಲಕ ಒತ್ತಕ್ಷರ ಮೂಡುವುದನ್ನು ನಿವಾರಿಸ ಬಹುದು. ಈ ಬಗೆಗೆ ಮಾಹಿತಿ ಕೊಟ್ಟುದು ಪವನಜ ಅವರು.
ಪ್ರದೀಪ್
ಒತ್ತಕ್ಷರ ಬೇಡವಾದಲ್ಲಿ ...
ಉತ್ತರವನ್ನು ನನ್ನ ತಾಣದಲ್ಲಿ ಹಾಕಿದ್ದೆ. ಅದು ಎಲ್ಲೋ ಕಳೆದುಹೋಗಿತ್ತು. ಅದನ್ನು ಈಗ ಪುನ ದಾಖಲಿಸಿದ್ದೇನೆ. ನೋಡಿ - http://vishvakannada.com/node/306
Ctrl-Shift-1 ಅಲ್ಲ, Ctrl-Shift-2 ಆಗಬೇಕು. Ctrl-Shift-1 ಸೇರಿಸುವುದು Zero Width Joiner ಅನ್ನು.
ಸಿಗೋಣ,
ಪವನಜ
-----------
Vishva Kannada
Think globally, Act locally
ನೂರಾರು ಓಪನ್‌ಟೈಫ್ ಫಾಂಟ್‌ಗಳು
ಕನ್ನಡಕ್ಕೆ ನೂರಾರು ಓಪನ್‌ಟೈಪ್ ಫಾಂಟ್‌ಗಳು ಬರಲಿವೆ. ಓದಿ - http://vishvakannada.com/node/310
ಸಿಗೋಣ,
ಪವನಜ
-----------
Vishva Kannada
Think globally, Act locally
ಫಾಂಟುಗಳ ಮಾಹಿತಿಗಾಗಿ ಸವಿಯೊದಗು
ಇದನ್ನು ಕೇಳಿ ಬಹಳ ಆನಂದವಾಯಿತು. ಬಹುಕಾಲದಿಂದ ಕೇದಗೆಯನ್ನೇ ಬಳಸುತ್ತಿದೆ, ನೋಡೋಣ ಈಗ ಎಂತಹ ಫಾಂಟುಗಳು ಬರುತ್ತಿವೆ ಎಂಬುದಾಗಿ.
ಉ: ನೂರಾರು ಓಪನ್‌ಟೈಫ್ ಫಾಂಟ್‌ಗಳು
ಇದರ ಕುರಿತಾಗಿ ಯಾವ ಹೊಸಸುದ್ಧಿಯೂ ಬರಲೇ ಇಲ್ಲವಲ್ಲ.
ನನಗೊಂದು ನಕಲು
sikhanagoudar@gmail.com ಗೆ ನನಗೊಂದು ನಕಲು ಕಳಿಸುತ್ತೀರಾ?
ನೂರಾರು ಫಾಂಟ್‌ಗಳೆಲ್ಲಿ?
ಸಿಡಿ ಬಿಡುಗಡೆ ನವಂಬರ್ ಒಂದನೇ ತಾರೀಕಿಗೆ ಆಗಬೇಕಿತ್ತು. ಸಿಡಿ ತಯಾರಾಗಿರದಿದ್ದುದರಿಂದ ಕಾರ್ಯಕ್ರಮ ಮುಂದಕ್ಕೆ ಹೋಗಿದೆ ಎಂದು ತಿಳಿದುಬಂದಿದೆ. ಮುಂದೆ ಯಾವಾಗ ಕಾರ್ಯಕ್ರಮ ಇರುತ್ತದೆ ಎಂಬುದು ಗೊತ್ತಿಲ್ಲ. ಮುಖ್ಯವಾಗಿ ಸಿಡಿಯಲ್ಲಿ ಸೇರಿಸಬೇಕಿದ್ದ ಕನ್ನಡ ಓಪನ್‌ಆಫಿಸ್ ತಯಾರಾಗಿರಲಿಲ್ಲ. ಫಾಂಟ್‌ಗಳು ಇವೆ. ಪ್ರಯೋಗಾರ್ಥ ಬಂದ ಸಿಡಿಯಲ್ಲಿ ಅವು ಇದ್ದವು. ನನ್ನಲ್ಲಿ ಪರೀಕ್ಷೆಗಾಗಿ ಬಂದ ಕಾರಣ ನನ್ನಲ್ಲೂ ಇವೆ. ಆದರೆ ಫಾಂಟ್‌ಗಳು ಸುಮಾರಾಗಿವೆ ಅಷ್ಟೆ. ತುಂಬ ಫಾಂಟ್‌ಗಳು ಇವೆ ಎಂದು ಹೆಮ್ಮೆ ಪಡಬಹುದು ಅಷ್ಟೆ.
ಸಿಗೋಣ,
ಪವನಜ
-----------
Vishva Kannada
Think globally, Act locally