ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸಂಪದೀಗರೇ

ನನ್ನದೊಂದು ಅನುಮಾನ ಪರಿಹರಿಸಿ

ನಾವು ನಮ್ಮ ದಿನದ ಆಗುಹೋಗುಗಳಲ್ಲಿ ನೂರೆಂಟು ಮಿಂಚಂಚೆಗಳನ್ನು ಕಳಿಸುತ್ತಿರುತ್ತೇವೆ. ಅದರಲ್ಲಿ ನಾವು ಬಳಸುವ Dear Sir/madam, ಅಥವಾ Hello Sir/madam, ಇದರಲ್ಲಿ ಯಾವುದು ಸರಿ ಹಾಗೂ ಯಾವ ಸಂದರ್ಭಗಳು ತಿಳಿಸಿ.

ಈ ಅನುಮಾನ ಯಾಕೆ ಬಂತೆಂದರೆ
ಮೊನ್ನೆ ನಮ್ಮ ಕಂಪೆನಿಯ ಸಿಇಓಗೆ ಒಂದು ಮಿಂಚಂಚೆ ಕಳಿಸಿದ್ದೆ, ಅದರಲ್ಲಿ ನಾನು Hello Sir ಎಂದು ಬರೆದದ್ದಕ್ಕೆ ಅದಕ್ಕೆ ಆಕ್ಷೇಪಣೆ ಬಂದಿತ್ತು. ಅವರಿಗೆ Dear Sir ಅಂತಾ ಉಪಯೋಗಿಸಬೇಕಂತೆ (ಎಲ್ಲಾರಿಗೂ), Dear ಅನ್ನುವ ಪದ ಪ್ರೋಫೆಷನಲ್ಲಿ ಎಷ್ಟು ಸರಿ, ಹಲೋ ಎನ್ನುವುದು ಒಂದು ಶುಭಾಷಯ ಕೋರುವ ಪದವಲ್ಲವೆ. ಪ್ರತಿ ಸಾರಿಯೂ ಡಿಯರ್ ಸಾರ್ ಅಂತಾ ಸಂಭೋಧಿಸೋದು ಸಮಂಜಸವೇ ?

ಅರವಿಂದ್

Your rating: None Average: 5 (1 vote)

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: Dear ಅಥವಾ Hello

inchara123's picture

ನಾನು ಓದಿದ್ದು secretarial practise. ಅದರಲ್ಲಿ ನಮಗೆ ೧೦೦ ಮಾರ್ಕ್ಸ್ ಗಳಿಗೆ ಪತ್ರ ಬರೆಯುವುದು ಹೇಗೆ? ಎಂದು ಪರೀಕ್ಷೆ ಕೂಡಾ ಇರುತ್ತದೆ. ನಾವು ಗಂಡಸರನ್ನು ಸಂಭೋದಿಸುವಾಗ ಯಾವಾಗಲೂ ಡಿಯರ್ ಸರ್ ಎನ್ನಬೇಕು, ಹಾಗೂ ಮಹಿಳೆಯರಿಗೆ ಸಂಭೋದನೆ ಮಾಡುವಾಗ ಬರಿಯ ಮೇಡಮ್ ಎಂದು ಸಂಬೋದಿಸಬೇಕು. ಇದು ರೂಲ್. ನಿಮ್ಮ ಸಿಇಓ ಹೇಳಿದ್ದು ನಿಜ

ಉ: Dear ಅಥವಾ Hello

ಅರವಿಂದ್'s picture

ಇಂಚರಾ

ಹಾಗಾದರೆ ಹಲೋ ಸರ್ ಅನ್ನೋದು ಸಂಪೂರ್ಣ ತಪ್ಪು ಅಂತೀರಾ ? ಅದನ್ನು ಬಳಸಲೇಬಾರದೇ ?

ಅರವಿಂದ್

ಉ: Dear ಅಥವಾ Hello

inchara123's picture

ನಮಗಿಂತ ಮೇಲಧಿಕಾರಿಗಳಿಗೆ ಹೆಲ್ಲೊ ಅನ್ನುವುದು ತಪ್ಪು. ಇನ್ನೂ ಸಲಿಗೆ ಇದ್ದರೇ ಏಕವಚನದಲ್ಲೂ ಕೂಡ ಮಾತನಾಡಬಹುದು :-)

ಉ: Dear ಅಥವಾ Hello

ಅರವಿಂದ್'s picture

ಇಂಚರಾ

ಹೆಸರು ಹೇಳೋದೆ ತಪ್ಪು ಅಂತಾರೇ!!!! ಇನ್ನೂ ಏಕವಚನದಲ್ಲಿ ಮಾತಾಡಿದ್ರೆ ಮುಗೀತು. ಇದರ ಬಗ್ಗೆ ಗೂಗಲಿಕರಿಸಿದೆ ಆದರೆ ಅವುಗಳು ಇನ್ನೂ ಚರ್ಚೆಯಲ್ಲಿದೆ, ಯಾವುದು ನಿರ್ಧಾರವಾಗಿಲ್ಲ.

ಅರವಿಂದ್

ಉ: Dear ಅಥವಾ Hello

Rakesh Shetty's picture

'ಹಲೋ' ಅಂತ ಬಳಸಿದರೆ ತಪ್ಪೇನಿಲ್ಲ ಅರವಿಂದ್, ನಿಮ್ಮ್ ಸಿಇಓ ಅದನ್ನ 'ಎಲೋ' ಅಂತ ಓದಿರಬೇಕು :)
ನಮ್ಮ ಕಂಪೆನಿಯಲ್ಲಿ ಎಲ್ಲರಿಗು 'Hi' ಅಂತ ಬಳಸುತ್ತೇವೆ.

ಉ: Dear ಅಥವಾ Hello

ಅರವಿಂದ್'s picture

ರಾಕೇಶ್

ಹಲೋಗೆ ಒಪ್ಪದಿರುವವರು ಹಾಯ್ ಅಂದ್ರೆ ಸುಮ್ನೆ ಇರ್ತಾರೇನೂ

ಅರವಿಂದ್

ಉ: Dear ಅಥವಾ Hello

Nagaraj.G's picture

ಲೋ ತಮ್ಮ ಅಂದ್ರೆ ಹೇಗಿರತ್ತೆ ಅರವಿಂದ್.....  ;)

 

ನಾವಂತು ಡಿಯರ್ ಅಂತನೇ ಬಲಸೋದು ಡಿಯರ್ ಸಾರ್/ ಡಿಯರ್ ಮೇಡಮ್ ಅಂತಾನೇ.....

 

 

 

 

ನಾಗರಾಜ್

ಉ: Dear ಅಥವಾ Hello

ಅರವಿಂದ್'s picture

ನಾಗರಾಜ್

 

>>ಲೋ ತಮ್ಮ ಅಂದ್ರೆ ಹೇಗಿರತ್ತೆ<<

 

ಯಾರ ತಮ್ಮ ನೀನು ಅನ್ನೋ ಪ್ರಶ್ನೆ ಬರಬಹುದೇನೋ ;)

 

ಅರವಿಂದ್

 

 

 

ಉ: Dear ಅಥವಾ Hello

sudhimail's picture

ನನಗನಿಸಿರೋ ಪ್ರಕಾರ... ಯೂರೋಪಿಯನ್ನರಿರಿಗೆ "Hi" ಅಂದರೆ ಇಷ್ಟ,
ಅಮೆರಿಕನ್ನರಿಗೆ "hello" ಅಂದರೆ ಇಷ್ಟ,
ಹಾಗೆ ಭಾರತೀಯರದರೆ "Dear" ಅಂತ ಕರೆಸಿಕೊಳ್ಳೋಕೆ ಇಷ್ಟ ಪಡ್ತಾರೆ...

ಉ: Dear ಅಥವಾ Hello

ಅರವಿಂದ್'s picture

ಸುಧೀಂದ್ರ

ಹಾಗಾದರೆ ಸರಿಯಾದುದು ಯಾವುದು ?

ಅರವಿಂದ್

ಉ: Dear ಅಥವಾ Hello

vinideso's picture

ಅರವಿಂದ ಅಣ್ಣ , ಯಾವುದು ಸರಿಯಲ್ಲ , ನಮಸ್ತೆ ಅಂತ ಕಳಸಿ ;) :)
ಇಂತಿ
ವಿನಯ :) :)

ಉ: Dear ಅಥವಾ Hello

ಅರವಿಂದ್'s picture

ವಿನಯ್

ಅದು ಕನ್ನಡದಲ್ಲಾದರೆ ಸರಿ, ಇಂಗ್ಲೀಷಿನಲ್ಲಿ ಯಾವುದರ ಬಳಕೆ ಸರಿ ?

ಅರವಿಂದ್

ಉ: Dear ಅಥವಾ Hello

vinideso's picture

ನಿಮಗೆ ಆಂಗ್ಲವೇ ಬೇಕಂದ್ರೆ ಹೀಗೆ ಮಾಡಿ , ಮೊದಲು ಬರೀ ಹಾಯ್ , ಹಲೋ , ಡಿಯರ್ ಅಂತ ಪ್ರತ್ಯೇಕ ಸಂದೇಶ ಕಳುಹಿಸಿ ;) .
ಆಮೇಲೆ ಯಾವುದು ಬಳಸಬೇಕು ಅಂತ ಆ ಕಡೆ ಇಂದಾನೆ ಉತ್ತರ ಬರುತ್ತೆ ;) :) :)

ಉ: Dear ಅಥವಾ Hello

inchara123's picture

ಯಾವಾಗಲೂ ಬಾಸ್ ಹೇಳಿದ್ದೇ ಸರಿ ಅರವಿಂದ್ :-) ಹಾಗೂ ಗ್ರಾಹಕ ಹೇಳಿದ್ದೂ ಕೂಡಾ ಸರಿಯೇ. ಹಾಗೆ ಒಪ್ಪಿಕೊಂಡ್ರೆ ಯಾವ ತೊಂದರೆಯೂ ಇರೋದಿಲ್ಲ.

ಉ: Dear ಅಥವಾ Hello

ಅರವಿಂದ್'s picture

ಇಂಚರಾ

ನೀವು ಹೇಳಿದ ಹಾಗೆ ಬಾಸ್ ಹೇಳಿದ್ದೇ ಸರಿ ಎನ್ನುವುದಾದರೆ ನನ್ನ ಪ್ರಶ್ನೆ

ನಿಮಗೆ ಇಬ್ಬರೂ ಬಾಸ್ ಎಂದುಕೊಳ್ಳಿ

ಒಬ್ಬರಿಗೆ ಹಲೋ ಸರ್ ಎಂದರೆ ಸರಿ ಮತ್ತೊಬ್ಬರಿಗೆ ಡಿಯರ್ ಸರ್ ಎಂದರೆ ಸರಿ.
ಈಗ ನೀವು ಇಬ್ಬರಿಗೂ ಒಂದೇ ಮಿಂಚಂಚೆಯನ್ನು ಕಳಿಸಬೇಕು ಏನೆಂದು ಸಂಭೋದಿಸುತ್ತೀರಿ.

ಮತ್ತೊಂದು ಪದದ ಗಣನೆ ಬೇಡಾ ಡಿಯರ್ ಸರ್ ಅಂತೀರೋ ಹಲೋ ಸರ್ ಅಂತೀರೋ ತಿಳಿಸಿ.

ಅರವಿಂದ್

ಉ: Dear ಅಥವಾ Hello

inchara123's picture

ಒಂದೇ ಮಿಂಚಂಚೆಯನ್ನೂ ಎರಡೆರಡೂ ಸಲ ಕಳಿಸ್ತೀನಿ. ಒಂದರಲ್ಲಿ ಡಿಯರ್ ಇನ್ನೊಂದರಲ್ಲಿ ಹಲೋ ಅಂತಾ :-)

ಉ: Dear ಅಥವಾ Hello

ಅರವಿಂದ್'s picture

ಇಂಚರಾ

ಹಾಗಾದರೆ ಯಾವುದು ಸರಿ ಎನ್ನುವ ಗೊಡವೆಗೆ ಹೋಗುವುದಿಲ್ಲವೇ ?

ಅರವಿಂದ್

ಉ: Dear ಅಥವಾ Hello

sudhimail's picture

ಹೀಗೂ ಮಾಡಬಹುದೇನೋ... :)
ಭಾರತೀಯರಿಗೆ ಕಳಿಸುವಾಗ "Dear"
ಅಮೆರಿಕಾದವರಾದ್ರೆ "Hello"
ಯುರೋಪಿಯನ್ನರಾದ್ರೆ "Hi"

ಉ: Dear ಅಥವಾ Hello

asuhegde's picture

ಕೆಲವು ಕಚೇರಿಗಳಲ್ಲಿ "Hi" ಅನ್ನುವುದನ್ನಷ್ಟೇ ಬಳಸುತ್ತಾರೆ, ಮುಂಚೂಣಿಯಲ್ಲಿರುವ ಅಧಿಕಾರಿಗಳವರೆಗೂ.
ಬಹುಷಃ ರೂಢಿಮಾಡಿಕೊಂಡಂತೆ ಇರುತ್ತದೆ ಇನ್ನು ಕೆಲವೊಮ್ಮೆ ಪತ್ರದ ಭಾವವನ್ನೂ ಅವಲಂಬಿಸಿರಬಹುದು.
ತಮಾಷೆಗೆ ಸ್ವೀಕರಿಸುವ ಬೈಗಳನ್ನು ಕೋಪದಲ್ಲಿದ್ದಾಗ ಸ್ವೀಕರಿಸುವುದಿಲ್ಲ, ಹಾಗೆ, ಅಂತ ನನ್ನ ಅನಿಸಿಕೆ.

ಉ: Dear ಅಥವಾ Hello

ಅರವಿಂದ್'s picture

ಸರ್

ಹಾಗಾದರೆ ಡಿಯರ್ ಅಥವಾ ಹಲೋವಿನಲ್ಲಿ ಯಾವುದು ಸರಿ ಎಂಬುದು ನಿಮ್ಮನಿಸಿಕೆ.

ಅರವಿಂದ್

ಉ: Dear ಅಥವಾ Hello

asuhegde's picture

"ಡಿಯರ್" ಅನ್ನುವುದು "ಹೆಲೋ" ಅನ್ನುವುದಕ್ಕಿಂತ ಸೂಕ್ತ.

"ಹೆಲೋ" ಅನ್ನುವುದರಲ್ಲಿ ಯಾವುದೇ ಭಾವ ವ್ಯಕ್ತವಾಗುವಂತೆ ಕಾಣುವುದಿಲ್ಲ, ಆದರೆ "ಡಿಯರ್" ಪದ ಹಾಗಲ್ಲ, ಅಂತ ನನ್ನ ಅನಿಸಿಕೆ.

ಉ: Dear ಅಥವಾ Hello

ಅರವಿಂದ್'s picture

ನಾನು ಗೂಗಲಿಸಿದಾಗ ಒಬ್ಬ ವ್ಯಕ್ತಿ ಒಂದು ವಿಚಾರವನ್ನು ತಿಳಿಸುತ್ತಾರೆ

ಯಾರಾದರೂ ಅಪರಿಚಿತರಿಗೆ ಮಿಂಚಂಚೆ ಕಳಿಸಬೇಕಾದರೆ ನಾವು ಡಿಯರ್ ಸರ್/ಮೇಡಂ ಎನ್ನುತ್ತೇವೆ, ಆ ವ್ಯಕ್ತಿಯ ಪರಿಚಯ ಇದ್ದರೆ ಹಲೋ ಸರ್/ಮೇಡಂ ಸರಿ ಎನ್ನುತ್ತಾರೆ.

ಇದರ ಬಗ್ಗೆ ಅಭಿಪ್ರಾಯ ತಿಳಿಸಿ.

ಅರವಿಂದ್

ಉ: Dear ಅಥವಾ Hello

ambika's picture

ಡಿಯರ್, ಹಲೋ ಯಾವುದೂ ಬೇಡ.(Respected Sir) ಗೌರವಾನ್ವಿತ ಎನ್ನಿರಿ. ಒಂದು (increment)ಇನ್ಕ್ರಿಮೆಂಟ್ ಗ್ಯಾರಂಟಿ. ಏನಂತೀರಿ ?

ಉ: Dear ಅಥವಾ Hello

vinideso's picture

<<ಇನ್ಕ್ರಿಮೆಂಟ್ ಗ್ಯಾರಂಟಿ>>>
ಬಡ್ತಿ ಖಚಿತ (ಹಾಗೆ ಸುಮ್ಮನೆ ) ;) :) :)

ಉ: Dear ಅಥವಾ Hello

ಅರವಿಂದ್'s picture

ವಿನಯ್

ಬಡ್ತಿ ಬಗ್ಗೆ ಈ ರಿಸೆಷನ್ನಲ್ಲಿ ಯೋಚಿಸೋದು ಬೇಡಾ ಅಲ್ವಾ ;) ಕೊಡೋ ಯೋಚನೇನೆ ಇರೋಲ್ಲಾ ಕಂಪೆನಿಗಳಿಗೆ,

ವಿಷ್ಯಾಂತರವಾಗದಿರಲಿ

ಅರವಿಂದ್

ಉ: Dear ಅಥವಾ Hello

vinideso's picture

<<ಬಡ್ತಿ ಬಗ್ಗೆ ಈ ರಿಸೆಷನ್ನಲ್ಲಿ ಯೋಚಿಸೋದು ಬೇಡಾ ಅಲ್ವಾ>>
ಹಿಂಬಡ್ತಿ , ಹೊರಬಡ್ತಿ ಕೂಡ ಬಡ್ತಿಗಳೇ ಅರವಿಂದ ಅಣ್ಣ ;) :)
ವಿಷಯಾಂತರಕ್ಕೆ ಕ್ಷಮೆ ಇರಲಿ
ಇಂತಿ
ವಿನಯ

ಉ: Dear ಅಥವಾ Hello

ambika's picture

ಆ ಪದ ಕೂಡಲೇ ಹೊಳೆಯಲಿಲ್ಲ ವಿನಯ್ ಕ್ಷಮಿಸಬೇಕು.

ಉ: Dear ಅಥವಾ Hello

ಅರವಿಂದ್'s picture

ಅಂಬಿಕಾ

ಪ್ರತಿಕ್ರಿಯೆ ಧನ್ಯವಾದ,:)
ಇಲ್ಲಿ ಹಲೋ ಅಥವಾ ಡಿಯರ್ ಎಂಬುದರಲ್ಲಿ ಯಾವುದು ಸರಿ ಅನ್ನೋದು, ರೆಸ್ಪೆಕ್ಟೆಡ್ ಸರ್ ಅಂತಾ ಉಪಯೋಗಿಸಬಹುದು. ಇಲ್ಲಿ ಇಬ್ಬಂದಿಗೆ ಸಿಲುಕಿಸಿರುವುದು ಹಲೋ ಅಥವಾ ಡಿಯರ್.

ಅರವಿಂದ್

ಉ: Dear ಅಥವಾ Hello

ambika's picture

ನನ್ನ ಅಭಿಪ್ರಾಯ ಹೇಳುವುದಾದರೆ ಡಿಯರ್ ಎಂಬುದನ್ನು ಆತ್ಮೀಯರಿಗೆ ಮಾತ್ರ ಬಳಸಬೇಕು. ಹಲೋ ಎಂಬುದನ್ನು ಪರಿಚಿತರಿಗೆ, ಹಾಗೂ ಮೇಲಿನ ಅಧಿಕಾರಿಗಳಿಗೆ ಗೌರವಾನ್ವಿತ ಪದವೇ ಸರಿ. (ಹಲೋ ಮತ್ತು ಡಿಯರ್ ಎರಡು ಸರಿಯಲ್ಲ)

ಉ: Dear ಅಥವಾ Hello

ಅರವಿಂದ್'s picture

ಅಂಬಿಕಾ

ಗೂಗಲಿಕರಿಸಿದಾಗಲೂ ಹಾಗೂ ಕನ್ನಡ ನಿಘಂಟುವಿನಲ್ಲಿ ಹುಡುಕಿದಾಗಲೂ ಡಿಯರ್ ಪದಕ್ಕೆ - ಇನಿಯ, ನಲ್ಮೆಯ,ಕಾಂತ ಅಂತಲೂ ಹಲೋ ಪದಕ್ಕೆ - ನಮಸ್ಕಾರ ಅಂತಲೂ ತಿಳಿದುಬಂತು, ಆದರೆ ಅದು ವ್ಯಾಕರಣ ಶುದ್ದವಾಗಿ ಯಾವುದು ಸರಿ ಎಂಬುದು ಮುಖ್ಯ.

ಅರವಿಂದ್

ಉ: Dear ಅಥವಾ Hello

ambika's picture

High school English grammar and composition by Wren & Martin ನಲ್ಲಿ 'ಡಿಯರ್ ಸರ್' ಬಳಸಬೇಕೆಂದು ತಿಳಿಸಿರುತ್ತಾರೆ.
(ಪುಸ್ತಕದ ಶೀರ್ಷಿಕೆ ತಿಳಿಯಲಿ ಎಂದು ಪುಸ್ತಕದ ಹೆಸರನ್ನು ಅಂಗ್ಲ ಭಾಷೆಯಲ್ಲಿ ಬರೆದಿರುತ್ತೇನೆ)

ಉ: Dear ಅಥವಾ Hello

ಅರವಿಂದ್'s picture

ಅಂಬಿಕಾ

ಮಾಹಿತಿಗೆ ಧನ್ಯವಾದಗಳು :)

ಮತ್ತೊಂದು ನೀವು ಆ ಪುಸ್ತಕದ ಹೆಸರನ್ನು ಇಂಗ್ಲೀಷಿನಲ್ಲಿ ಬರೆದಿದ್ದಕ್ಕೆ ಯಾವುದೇ ಬೇಸರಬೇಡ. ನಾವು ಕಾಗದದ ಕನ್ನಡಿಗರೋ !!! ಪ್ರಚಾರ ಕನ್ನಡಿಗರೋ !!!! ದುರಭಿಮಾನಿ ಕನ್ನಡಿಗರೋ ಅಲ್ಲಾ, ನಾವು ಕನ್ನಡದ ಕನ್ನಡಿಗರು ಅಷ್ಟೆ.:)

ಅರವಿಂದ್

ಉ: Dear ಅಥವಾ Hello

modmani's picture

ಅಲ್ಲೋ ಅಂತ ಬಳಸಿದ್ರೆ ಹೇಗೆ..?  :P‌

 

ಉ: Dear ಅಥವಾ Hello

abdul's picture

ಒಂದಾನೊಂದು ಕಾಲದಲ್ಲಿ ಡಿಯರ್ ಮದರ್ ಎಂದು ಬಿಟ್ಟರೆ ಅಭಾಸವಾಗಿಬಿಡುತ್ತಿತ್ತು . ಏಕೆಂದರೆ ಡಿಯರ್ ಅನ್ನೋ ಪದ ಪ್ರೇಮಿಸುವವರು ಮಾತ್ರ ಬಳಸಬೇಕು ಎನ್ನುವ ಧೋರಣೆ. ಕಾಲ ಬದಲಾಗಿವೆ ಆದರೆ ನಮ್ಮ ದೇಶದ ಇಂಗ್ಲೀಶ್ ಮಾತ್ರ ಬದಲಾಗಲಿಲ್ಲ. ಈಗಲೂ ಕೆಲವೊಂದು ಪದಗಳನ್ನು ಭಾರತದಲ್ಲಿ ಮಾತ್ರ ಉಪಯೋಗಿಸಲಾಗುತ್ತಿದೆ. ex. brinjal, ladies finger, dicky (car)...
ಇನ್ನು formal ಆಗಿ ಪತ್ರ ಬರೆಯುವಾಗ ಡಿಯರ್ ಸರ್ / ಡಿಯರ್ ಮೇಡಂ ಎಂದು ಉಪಯೋಗಿಸುವುದು ಉಚಿತ. respected sir / madam ಈಗ archaic.

ಉ: Dear ಅಥವಾ Hello

manju787's picture

ಎಲ್ಲವನ್ನೂ ಬಿಟ್ಟು ಭಾರತೀಯರಾದ ನಾವು ನಮ್ಮ ಭಾರತೀಯ ಬಾಸ್ ಗಳಿಗೆ " ಡಿಯರ್ ಸರ್/ಮೇಡಮ್" ಅನ್ನುವುದೇ ಸೂಕ್ತ ಮತ್ತು ಅನುಕೂಲಕರ ಅನ್ನುವುದು ನನ್ನ ಅಭಿಪ್ರಾಯ. ಈ ಹೈ/ಹಲ್ಲೋಗಳನ್ನು ಪಾಶ್ಚಿಮಾತ್ಯರಿಗೆ ಬಿಟ್ಟರೆ ಒಳ್ಳೆಯದು ಅನ್ಸುತ್ತೆ.