ವಂದೇಮಾತರಂ ಕೋಮುವಾದ ಗೀತೆಯೆ?
"ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣಿ" ಎನ್ನುವ ಸಾಲುಗಳು ಇರುವುದರಿಂದ "ವಂದೇ ಮಾತರಂ" ಕೋಮುವಾದದ ಗೀತೆಯೆ?
ಹೌದು ಎನ್ನುತ್ತಾರೇ ಹೆಸರಾಂತ ಹೊಸ್ಟೋರಿಯನ್ ಆರ್.ಸಿ. ಮಜುಂದಾರ್. ಆತನ ಮಾತಿನಲ್ಲೇ ಹೇಳಬೇಕಂದರೇ "Bankimchandra converted patriatism into religion and religion into patriatism"
1937 ನಲ್ಲೇ "ತ್ವಂ ಹಿ ದುರ್ಗಾ..."ಇತ್ಯಾದಿ ಚರಣಗಳನ್ನ ಹಾಡುವುದು ನಿಲ್ಲಿಸಿದರು ಅಂದಿನ ಕಾಂಗ್ರೆಸ್ ನೇತಾರರು. ಯಾಕೇ ಎಂದರೇ ಅಲ್ಲಾ ಬಿಟ್ಟು ಬೇರೇ ದೇವರೇ ಇಲ್ಲವೆನ್ನುವ ಮುಸ್ಲಿಂ ಸೋದರರರನ್ನು, ವಿಗ್ರಹಾರಾಧನಯನ್ನು ನಿರಾಕರಿಸುವ ಪಾರ್ಸೀ, ಬ್ರಹ್ಮಸಮಜ ಮೊದಲಾದವರ ಪ್ರೀತಿಗಾಗಿ.
ಆದರೇ 1947ನಲ್ಲಿ ಮತವನ್ನು ಆಧಾರಿಸಿಯೇ ಹುಟ್ಟಿಕೊಂಡಿತು ಪಾಕಿಸ್ತಾನ್. ಇಷ್ಟಾದಮೇಲೂ "ತ್ವಂ ಹಿ ದುರ್ಗಾ...."ಮೊದಲಾದ ಸಾಲುಗಳು "ಕೋಮುವಾದ"ವನ್ನೇ ಪ್ರತಿಧ್ವನಿಸುತ್ತಾಯಿವೇ ಎಂದು ಹೇಳಿ ಆಚೆ ಇಡಲಾಗಿವೆ.
ಈ ನಿಟ್ಟಿನಲ್ಲಿ ನನ್ನಲ್ಲಿ ಹುಟ್ಟಿದ ಪ್ರಶ್ನಗೆಳು..
1. ಅಲ್ಲಾ ಅಥವಾ ಕ್ರೀಸ್ತನೇ ದೇವರೆನ್ನುವುದು ಸೆಕ್ಯುಲರ್ ಆಗಿದ್ದಾಗ "ತ್ವಂ ಹಿ ದುರ್ಗಾ" ಕೋಮುವಾದ ಹೇಗಾಗುತ್ತದೇ?
2. ಭಾರತ ಮೂಲಭೂತವಾಗಿ ಹಿಂದುಗಳ ನಾಡು. ಹಾಗಾಗಿ ತನ್ನ ನಾಡಿನ ಮಾತೆಯನ್ನು "ದುರ್ಗಾ" ಎಂದು ಭಾವಪೂರ್ವಕವಾಗಿ ಕರೆದರೇ "converting patriatism into religion" ಅನ್ನುವದು ಹೇಗೆ ಹುಟ್ಟುಕೊಳ್ಲುತ್ತದೆ?
3. ಅತಿ ಮುಖ್ಯವಾಗಿ ಒಬ್ಬ ಕವಿ ತನ್ನ ಕಲ್ಪನಾ ಸಾಮರ್ಥ್ಯದಿಂದ, ಊಹಾಶಕ್ತಿ ಯಿಂದ ರಚಿಸಿದ ಅತ್ಯುತ್ತಮ ಸಾಹಿತ್ಯದಲ್ಲಿ "ಇದು ಸೆಕ್ಯುಲರ್ ಭಾಗ, ಇದು ಕೋಮುವಾದದ ಭಾಗ" ಎಂದು ವರ್ಗಾಯಿಸಿಲಿಕ್ಕೇ ಯಾರಿಗೆ ಅಧಿಕಾರವಿದೆ? ಅದರಲ್ಲೂ ನಾಗರೀಕರ ಭಾವ ಸ್ವೇಛ್ಛಯನ್ನು ಕಾಪಾಡಬೇಕಾದ ಸರ್ಕಾರಕ್ಕೆ ಅಂತಹ ಅಧಿಕಾರ ಇದಿಯೇ?
ಗೆಳೆಯರೇ, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ !
- Login or register to post comments
- 945 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: ವಂದೇಮಾತರಂ ಕೋಮುವಾದ ಗೀತೆಯೆ?
"ವಂದೇ ಮಾತರಂ" ಕೋಮುವಾದದ ಗೀತೆಯೆ?
ಅದು ಗೊತ್ತಿಲ್ಲ... ಆದಷ್ಟುಬೇಗ ನಿಮಗೆ ಕೋಮುವಾದಿ ಅಂತ ಬಿರುದು ಕೊಡ್ತಾರೆ....
-ವಿನಾಯಕ
ಉ: ವಂದೇಮಾತರಂ ಕೋಮುವಾದ ಗೀತೆಯೆ?
ಈ ಬಗ್ಗೆ ನಾನು ಈಗಾಗಲೆ ಕನ್ನಡಬ್ಲಾಗರ್.ನಿಂಗ್ ನಲ್ಲಿ ಚರ್ಚೆಏರ್ಪಡಿಸಿರುವೆ ಅದು ರೀಪೀಟಾಗುತ್ತೆ ನನ್ನದು ಒಂದೇ ಪ್ರಶ್ನೆ
ಬಹುಸಂಖ್ಯಾತರು ಹೀಗೆ ಇರಬೇಕು ಎಂದು ನಿರ್ಧರಿಸಲು ಈ ಸೋ ಕಾಲ್ಡ "ಅಲ್ಪ ಸಂಖ್ಯಾತರು" ಯಾರು?
ಉ: ವಂದೇಮಾತರಂ ಕೋಮುವಾದ ಗೀತೆಯೆ?
ಒಂದೇ ಮಾತರಂ ಗೀತೆ ಕೋಮುವಾದ ಹೌದೇ? ಅಲ್ಲವೇ? ಎಂಬುದರ ಬಗ್ಗೆ ಯೋಚಿಸುವುದರ ಮೊದಲು ಅದರ ಸ್ಥಾನಮಾನವೇನು ಎನ್ನುವುದನ್ನು ನಿರ್ಧರಿಸಬೇಕು. ಅದು ರಾಷ್ಟ್ರಗೀತೆಯೆ? ಒಂದು ರಾಷ್ಟ್ರಕ್ಕೆ ಒಂದೇ ರಾಷ್ಟ್ರಗೀತೆ ಇರಬೇಕು ಅಲ್ಲವೆ? ಒಂದೇ ಮಾತರಂ ರಾಷ್ಟ್ರಗೀತೆಯಾದರೆ ಜನಗಣ ಮನ ಏನು? ಒಂದೇ ಮಾತರಂ ರಾಷ್ಟ್ರಗೀತೆಯಲ್ಲವೆಂದ ಮೇಲೆ ಅದನ್ನು ಹಾಡುವುದಕ್ಕೆ ಒತ್ತಾಯ ಮಾಡುವುದಾದರೂ ಏಕೆ? ಮೊದಲು ಈ ಎಲ್ಲಾ ಪ್ರಶ್ನೆಗಳ ಬಗ್ಗೆ ಯೋಚಿಸುವುದು ಒಳಿತಲ್ಲವೆ?
ಉ: ವಂದೇಮಾತರಂ ಕೋಮುವಾದ ಗೀತೆಯೆ?
#################################################
ಒಂದೇ ಮಾತರಂ ರಾಷ್ಟ್ರಗೀತೆಯಲ್ಲವೆಂದ ಮೇಲೆ ಅದನ್ನು ಹಾಡುವುದಕ್ಕೆ ಒತ್ತಾಯ ಮಾಡುವುದಾದರೂ ಏಕೆ?
#################################################
ಫತ್ವಾ ಹೊರಡಿಸಿರುವುದು ವಂದೇ ಮಾತರಂ ಹಾಡಬೇಡಿ ಎಂದು.. ಅದನ್ನು ಹಾಡಿ ಅಂತ ಫತ್ವಾ ಹೊರಡಿಸಿಲ್ಲ ಅಲ್ವಾ? ವಂದೇ ಮಾತರಂ ಹಾಡಬೇಡಿ ಅನ್ನುವುದು ಸರೀನಾ?
ಮುಸ್ಲಿಂ ತುಷ್ಟೀಕರಣದಿಂದಾಗಿ ಒಂದೇಮಾತರಂ ತುಂಡಾಯಿತು [ದೇಶ ಕೂಡ] ಈಗ ಮತ್ತೊಮ್ಮೆ ಆಗಬೇಕಾ?
ಉ: ವಂದೇಮಾತರಂ ಕೋಮುವಾದ ಗೀತೆಯೆ?
"ಜನಗಣಮನ ಅಧಿನಾಯಕ ಜಯಹೇ" ಎಂದು ಠಾಗೂರರು ಅಂದಿನ ಆಂಗ್ಲ ದೊರೆಯನ್ನು ಮೆಚ್ಚಿಸಲು ಬರೆದ ಗುಲಾಮಗಿರಿಯ ಸಂಕೇತವಾದ ಗೀತೆಯನ್ನು ನಮ್ಮ "ರಾಷ್ಟ್ರ"ಗೀತೆ ಅಂತ ಒಪ್ಕೊಳ್ಳೋದಾದ್ರೆ, ವಂದೇಮಾತರಂ ಒಪ್ಪಿಕೊಳ್ಳುವಲ್ಲಿ ಏನು ತಪ್ಪಿದೆ?? ಈ ಭ್ರಷ್ಟ ಕಾಂಗ್ರೆಸ್ಸಿಗರು ಈ ದೇಶದ ಆಡಳಿತದಿಂದ ಹೊರಗೆ ಹೋಗುವವರೆಗೆ ನಾವು ಆ ಗುಲಾಮಗಿರಿಯ ದ್ಯೋತಕವಾದ ಗೀತೆಯನ್ನೇ ನಮ್ಮ ಭವ್ಯ "ರಾಷ್ಟ್ರ ಗೀತೆ" ಎಂದು ಹಾಡಬೇಕಾದ್ದು ಅನಿವಾರ್ಯ ಕರ್ಮ!!
ಉ: ವಂದೇಮಾತರಂ ಕೋಮುವಾದ ಗೀತೆಯೆ?
ರಾಷ್ಟಗೀತೆಯನ್ನಾದರು ಕಡ್ಡಾಯವಾಗಿ ಹಾಡಿದಾರೆಯೆ? ಹಿಂದೆ ಕಾಂಗ್ರೆಸ್ಸ್ ಅಧಿವೇಶನಗಳಲ್ಲಿ ಖಡ್ಡಯಾವಾಗಿದ್ದ ವಂದೇ ಮಾತರಂ ತುಂಡಾಗಿದ್ದೇಕೆ? ಆಮೆಲೆ ಅದು ನಿಂತು ಹೋದದ್ದೇಕೆ ಅನ್ನುವುದರ ಬಗ್ಗೆ ವಿದ್ಯಾನಂದರ ಭಾರತ ದರ್ಶನ ಓದಿ ಇಲ್ಲವೇ ಕೇಳಿ.
ಉ: ವಂದೇಮಾತರಂ ಕೋಮುವಾದ ಗೀತೆಯೆ?
ಅದು ಒಂದೇ ಅಲ್ಲ ವಂದೇ ..ಟೈಪಿಸುವಾಗ ತಪ್ಪಿದೆ ಅಂದ್ಕೋತಿನಿ ...
ವಂದೇಮಾತರಂ ಅಧೀಕೃತ ರಾಷ್ಟ್ರ ಗಾನ (National Song) ...
ಉ: ವಂದೇಮಾತರಂ ಕೋಮುವಾದ ಗೀತೆಯೆ?
ಹೌದು ನನ್ನಿಂದ ಕಾಗುಣಿತ ತಪ್ಪಾಗಿದೆ. ಅದನ್ನು ಎಡಿಟ್ ಮಾಡಲಾಗುತ್ತಿಲ್ಲ. ಕ್ಷಮೆಯಿರಲಿ. ಧನ್ಯವಾದಗಳು
ಉ: ವಂದೇಮಾತರಂ ಕೋಮುವಾದ ಗೀತೆಯೆ?
ದೇಶ ಭಕ್ತಿ ಹಾಡುವುದಕ್ಕೆ 'ಫತ್ವಾ' ಹೊರಡಿಸಲಾಗಿದೆ! ವಿಪರ್ಯಾಸವೆಂದರೆ ಈ ದೇಶದ ಗೃಹ ಸಚಿವರ ಉಪಸ್ಥಿತಿಯಲ್ಲಿ! ಜೊತೆಗೆ ಎಂತ ಮಾತು 'ದೇಶವನ್ನು ಪ್ರೀತಿಸುತ್ತೇವೆ,ಪೂಜಿಸುವುದಿಲ್ಲ' !
ಇನ್ಯಾವ ದೇಶದಲ್ಲದರು ಹೀಗೆ ನಡೆಯಲು ಸಾಧ್ಯವೇ? ಪುಡಿ ವೋಟಿಗೋಸ್ಕರ ಏನು ಬೇಕಾದರೂ ನಡೆಯುತ್ತದೆ ಇಲ್ಲಿ , ಇದು ನಮ್ಮ ಭಾರತ!
ಉ: ವಂದೇಮಾತರಂ ಕೋಮುವಾದ ಗೀತೆಯೆ?
ಉತ್ತಮ ಲೇಖನ ಸರ್. ನಿಮ್ಮ ಈ ಲೇಖನಕ್ಕೆ ಇನ್ನೂ "flag" ಬಂದಿಲ್ಲ ಅದೇ ಸಂತಸ. ಹಾಗೆಯೆ ಇನ್ನೂ ಕೋಮುವದಿ, ಕೇಸರಿಕಣ್ಣಿನ ಕನ್ನಡಕದವರು ಎಂಬ ಬಿರಿದು ಬಾವಲಿ ಪಡೆಯಲು ಸಿದ್ದವಿರಿ ಅಷ್ಟೆ!!
ಉ: ವಂದೇಮಾತರಂ ಕೋಮುವಾದ ಗೀತೆಯೆ?
ಗಣಿ ಕಳ್ಳರೂ, ಸುಳ್ಳುಗಳ ಸರಮಾಲೆಯನ್ನೇ ಪೋಣಿಸಿ ಜನರಿಗೆ ಮರುಳುಗೊಳಿಸಿ ಹೇಗಾದರೂ ಅಧಿಕಾರ ಹಿಡಿದು ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ದಗಾ, ವಂಚನೆ ಗಳನ್ನೇ ಉಸಿರಾಗಿಸಿಕೊಂಡಿರುವ ಸ್ವಿಸ್ ಬ್ಯಾಂಕುಗಳಲ್ಲಿ ಕೋಟ್ಯಾಂತರ ರೂಪಾಯಿ ಬಡವರನ್ನು ಸುಲಿದ ಹಣ ಪೇರಿಸಿಟ್ಟಿರುವ (ಉದಾ: ಮಧು ಕೋಡಾ, ಮಾಜಿ ಆರೆಸ್ಸಿಸ್ಸಿಗ) ಮಹ್ಹಾನ್ ದೇಶಭಕ್ತರಾದ ಆರೆಸ್ಸಿಗರೂ ಅವರ ಮಾನಸ ಪುತ್ರರಾದ ಬಿಜೆಪಿ, ಥಾಕ್ರೆ, ವಿ ಎಚ್ ಪಿ, ಭಜರಂಗಿ ಗೂಂಡಾ ಗಳೂ ಎಲ್ಲ ಸೇರಿ ಅಪ್ಪಣೆ ಕೊಡಿಸಿದ ಮೇಲೆ ವಂದೇ ಮಾತರಂ ಹಾಡುವುದೊಂದೇ ದೇಶಭಕ್ತಿಯನ್ನು ಪ್ರಕಟಿಸುವ ವಿಧಾನ ಇರಬೇಕು ಬಿಡಿ! ಗಣಿ ಕಳ್ಳರಾದರೇನು? ವಂದೇಮಾತರಂ ಹಾಡುತ್ತಾನೆಯೇ? ಜಿನ್ನಾ ನನ್ನು ಭಜಿಸಿದರೇನು? ವಂದೇ ಮಾತರಂ ಹಾಡುತ್ತಾನೆಯೇ? ಪಕ್ಷಕ್ಕಾಗಿ ದುಡಿದವರನ್ನೆಲ್ಲ ಬದಿಗೊತ್ತಿ, ಹಡಬಿಟ್ಟಿ ದುಡ್ಡನ್ನು ನೀರಿನಂತೆ ಚೆಲ್ಲಿ ಮಗನನ್ನೇ ಎಂ ಪಿ ಮಾಡಿದರೇನು? ವಂದೇ ಮಾತರಂ ಹಾಡುತ್ತಾನೆ ತಾನೇ? ಹಾಗಾದರೆ ಮಹಾನ್ ದೇಶ ಭಕ್ತನೆ ಇರಬೇಕು ಬಿಡಿ!
ಉ: ವಂದೇಮಾತರಂ ಕೋಮುವಾದ ಗೀತೆಯೆ?
ಇಲ್ಲಿ RSS ಯಾಕೆ ಬಂತು ಗೊತ್ತಿಲ್ಲ.
೧. ವಂದೇ ಮಾತರಂ ಬರೆದವರು RSSನವರು ಅಲ್ಲ.
೨. ವಂದೇ ಮಾತರಂ ಹಾಡಲೇಬೇಕು ಅಂದವರು RSS ನವರು ಅಲ್ಲ.
೩. ವಂದೇ ಮಾತರಂ ಹಾಡಬಾರದು ಅಂದವರೂ RSS ನವರು ಅಲ್ಲ.
>> ಮಹ್ಹಾನ್ ದೇಶಭಕ್ತರಾದ ಆರೆಸ್ಸಿಗರೂ .... ವಂದೇ ಮಾತರಂ ಹಾಡುವುದೊಂದೇ ದೇಶಭಕ್ತಿಯನ್ನು ಪ್ರಕಟಿಸುವ ವಿಧಾನ ಇರಬೇಕು ಬಿಡಿ!
ಆಥರ ಎಲ್ಲಿ ಅಪ್ಪಣೆ ಕೊಡಿಸಿದ್ದಾರೆ ಸ್ವಲ್ಪ ತಿಳಿಸಿ?
-ವಿನಾಯಕ ಮುತಾಲಿಕ
ಉ: ವಂದೇಮಾತರಂ ಕೋಮುವಾದ ಗೀತೆಯೆ?
"ವಂದೇ ಮಾತರಂ" ಎಂಬ ದೇಶಭಕ್ತಿಗೀತೆಯನ್ನು ಎಲ್ಲೆಲ್ಲಿಗೋ ತಗುಲಿಹಾಕಿದ್ದೀರಲ್ಲ, ಮಹಾನ್ ದೇಶಭಕ್ತರೇ ಇರಬೇಕು ಬಿಡಿ!
ಉ: ವಂದೇಮಾತರಂ ಕೋಮುವಾದ ಗೀತೆಯೆ?
ಆತ್ಮೀಯ
ಬುದ್ಧಿಜೀಜಿಗಳಿಗೆ ಸ್ವಾಗತ. ಒ೦ದಿಡೀ ಜನಕ್ಕೆ ಸ್ವಾತ೦ತ್ರ್ಯ ಹೋರಾಟಕ್ಕೆ ಪ್ರಚೋದನೆಯನ್ನು ಕೊಟ್ಟ ಗೀತೆಯನ್ನು ಕೋಮುವಾದಿ ಗೀತೆಯೆನ್ನುವ ಅದನ್ನು ಆರ್ ಎಸ್ ಎಸ್ ಗೀತೆಯನ್ನಾಗಿ ಪಟ್ಟಕಟ್ಟಿದ ನಿಮಗೆ ನಮೋನ್ನಮಃ.ಸ್ವಾಮಿ ಭ್ರಷ್ಟರು ಎಲ್ಲೆಡೆ ಇದ್ದಾರೆ ನಮ್ಮ ವಿಷಯ ಅದಲ್ಲ ವ೦ದೇ ಮಾತರ೦ ಗೀತೆಯಲ್ಲಿ ಕೋಮುವಾದ ವಾಸನೆಯಿದೆಯೇ ಎ೦ಬುದು.ದೇಶಭಕ್ತಿಯೆ೦ದರೆ ಆರ್ ಎಸ್ ಎಸ್ ಭಜ೦ಗ ವಿ ಹೆಚ್ ಪಿ ಗಳು ಮಾತ್ರ ಏಕೆ ನನಪಾಗ್ತಾರೆ.ಯಾಕೇ೦ದ್ರೆ ಅವರು ದೇಶಭಕ್ತರು.ಕಾ೦ಗ್ರೆಸ್ ಮತಾ೦ತರ ಮಾಡೋ ಮ೦ದೆ ನೆನಪಗಾಲ್ಲವಲ್ಲ.ಅದು ಬಿಡಿ ಸುಮ್ನೆ ಅದೆಲ್ಲಾ ಯಾಕೆ.ಸ್ವಾ೦ತ೦ತ್ರ್ಯ ಹೋರಾಟಕ್ಕೆ ಸ್ಪೂರ್ತಿಯನ್ನ ಕೊಟ್ಟ ಗೀತೆಯನ್ನು ರಾಷ್ಟ್ರಗೀತೆ ಅ೦ತ ಘೋಷಣೆ ಮಾಡೋದ್ರಲ್ಲಿ ತಪ್ಪೇನು.ಅದೂ ಬೇಡ ಅಷ್ಟೊ೦ದು ಜನ ಅದನ್ನ ಹಾಡಿ ಒಪ್ಪಿಕೊ೦ಡು ಅಪ್ಪಿಕೊ೦ಡು ಹೋರಾಟಕ್ಕೆ ಇಳಿದು ಸ್ವಾತ್೦ಅತ್ರ್ಯ ಗಳಿಸಿಕೊಟ್ಟಮೇಲೆ ಅದನ್ನ ಯಾರೋ ಒ೦ದಷ್ಟು ಜನರ (?) ಧಾರ್ಮಿಕ ಭಾವನೆಗೆ ಧಕ್ಕೆ ಆಗುತ್ತೆ ಅ೦ತ ಅದನ್ನ ಬಿಟ್ಟು ಹಾಕಿದ್ರಲ್ಲ ನಿಮ್ಮ ಜನ ಇದು ಸರಿಯಾ?
ಒ೦ದು ಗೀತೆಯಲ್ಲಿ ಕೋಮುವಾದದ ವಾಸನೆಯನ್ನ ಹುಡುಕಿದ ದೇಶಭಕ್ತ ಭಾರತೀಯನಿಗೆ ಜೈ ಹೋ
ಹರೀಶ ಆತ್ರೇಯ
ಉ: ವಂದೇಮಾತರಂ ಕೋಮುವಾದ ಗೀತೆಯೆ?
ಅಬ್ಬಾಬ್ಬಾ ಗಣಿ ಧಣಿ ವಿ ಎಚ್ ಪಿ ಬಿಜೆಪಿ ಆರ್ ಎಸ್ ಎಸ್ , ಎಲ್ಲೆಂದಿಲ್ಲಿಗೆ ಹರಿದಿದೆ ವಂದೇ ಮಾತರಂ ಬೇಡ ಎನ್ನುವುದಕ್ಕೂ ಇವರುಗಳ ಹೆಸರು ಎತ್ತುವುದಕ್ಕೂ ಅದ್ಯಾವ ಸಂಬಂಧವೋ ಗೊತ್ತಿಲ್ಲ
ಉ: ವಂದೇಮಾತರಂ ಕೋಮುವಾದ ಗೀತೆಯೆ?
ರೀ ವರಾಹ ಅವ್ರೆ,
ಬೇಜಾನ್ ಭಾವವೆಶಕ್ಕೊಳಗಾಗಿ ಒಂದೇ ಉಸಿರನಲ್ಲಿ ಬರೆದಿರೋ ಆಗಿದೆ ಈ ಕಮೆಂಟು!.
ವೊಸಿ ಸಮಾಧಾನ ಮಾಡ್ಕಳಿ :), ಸ್ವಲ್ಪ ತಣ್ಣೀರು ಕುಡಿದು,ಆಮೇಲೆ ಬಂದು ನಿಮ್ಮ್ ಕೀ - ಬೋರ್ಡ್ ಮೇಲೆ ಕೈಯಾಡಿಸಿ.
'ವಂದೇ ಮಾತರಂ' ಗೀತೆಯ ಹಿನ್ನೆಲೆ ತಿಳಿದಿದ್ದಿದ್ದರೆ, ಇನ್ಯಾರ್ಯಾರನ್ನೋ ಈ ಚರ್ಚೆ ಯಲ್ಲಿ ಸೇರಿಸುತ್ತಿರಲಿಲ್ಲ.
ರಾಕೇಶ್ ಶೆಟ್ಟಿ :)
ಉ: ವಂದೇಮಾತರಂ ಕೋಮುವಾದ ಗೀತೆಯೆ?
’ಆಲ್ಪ ಸಂಖ್ಯಾತ’ರ ಭಾವನೆಗೆ ಧಕ್ಕೆಯುಂಟು ಮಾಡುತ್ತದೆ ಎಂದು ಹೇಳುವ ಯಾವುದೇ ವಸ್ತುವಾಗಲಿ, ಗೀತೆಯಾಗಲಿ ನಮ್ಮ ದೇಶದಲ್ಲಿ ನಿಷಿದ್ದ . ಏಕೆಂದರೆ ಅವರು " ಬಹು ಸಂಖ್ಯಾತ"ರಲ್ಲವಲ್ಲ.
ಅಲ್ಲಾ ಅಲ್ಲಾ ಎಂದು ರಾಜ್‌ಕುಮಾರ್ ಹಾಡಿರುವ ಹಾಡನ್ನೂ ಸಹನೆಯಿಂದ ಕೇಳುವ ಕೇಳಿ ಸಂತಸ ಪಡುವ , ಇಂದು ಎನಗೆ ಗೋವಿಂದ ಎನ್ನುವ ಹಾಡನ್ನು ವಿಕಾರಗೊಳಿಸಿ ಪಾಪ್ ಸಾಂಗ್‌ನಂತೆ ಅಶ್ಲೀಲವಾಗಿ ಹಾಡಿ ತೋರಿಸಿದ ಚೆಲ್ಲಾಟ ಚಿತ್ರದ ಗಣೇಶ್‌ರವರನ್ನೇ ಆರಾಧ್ಯದೈವವೆಂದು ಭಾವಿಸಿರುವ ಬಹುಸಂಖ್ಯಾತರ ಭಾವನೆಗಳಿಗೆ ಬೆಲೆಯಾದರೂ ಏಕೆ ಕೊಡಬೇಕು ಹೇಳಿ.
ಹರೇ ರಾಮ ಹರೇ ಕ್ರಿಷ್ಣದಂತಹ ವಾಕ್ಯವನ್ನೇ ನಶೆಯಲ್ಲಿರುವ ಜನ ಹಾಡುವಂತೆ ತೋರಿಸಿದರೂ ಬಹುಸಂಖ್ಯಾತರೆಂದು ಕರೆಯಲ್ಪಡುವ ನಾವುಗಳು ಸಂತಸದಿಂದ ಹಾಡುತ್ತೇವೆ.
ನಮ್ಮ ದೇವರುಗಳನ್ನು ಮೂರಾಬಟ್ಟೆಯಾಗಿ ಚಿತ್ರಗಳಲ್ಲಿ ತಮಾಷೆಯಾಗಿ ತೋರಿಸಿದರೂ ನಕ್ಕು ನಲಿದು ಮರೆತು ಬಿಡುವ ಬಹುಸಂಖ್ಯಾತರು ನಾವುಗಳು.
ಇದು ಹಿಂದೂ ಸ್ಥಾನವೇ ಆಗಿದ್ದರೂ ದೊಡ್ಡ ಕಲಾವಿದರು ನಮ್ಮ ದೇವರುಗಳನ್ನು ಬೆತ್ತಲು ಮಾಡಿ ಬರೆದರೂ ಅದು ಕಲಾವಿದನ ಕಲಾತ್ಮಕತೆಯಾಗುತ್ತದೆ
ವಂದೇ ಮಾತರಂ ನಲ್ಲಿ ಮಾತ್ರ ಭಾರತಾಂಬೆಯನ್ನು ನೆನೆದರೆ ಅದು ಧಾರ್ಮಿಕತೆ ಆಗುತ್ತದೆ.
ಇದೆಲ್ಲಾ ಕೇವಲ ನಮ್ಮ ದೇಶದಲ್ಲಿ ಮಾತ್ರ ಸಾಧ್ಯ
ಉ: ವಂದೇಮಾತರಂ ಕೋಮುವಾದ ಗೀತೆಯೆ?
ಬೆತ್ತಲು ನಗ್ನತೆ ಎರೆಡೂ ಒಂದೇನಾ.... ವಂದೇ ಮಾತರಂಗೂ ಕಲಾವಿದನ ನಗ್ನ ಚಿತ್ರಕ್ಕು ಎಲ್ಲಿಯ ಸಂಬಂದ....
ಉ: ವಂದೇಮಾತರಂ ಕೋಮುವಾದ ಗೀತೆಯೆ?
ಇದೆಲ್ಲಾ ನಾವೇ ಮಾಡ್ಕೊ೦ಡಿರೋದು. ನಮ್ಮಲ್ಲೀ ಒಗ್ಗಟ್ಟಿಲ್ಲಾ ಅನ್ನೋದು ಅವರಿಗೂ ಕೂಡ ಚೆನ್ನಾಗಿ ತಿಳಿದಿದೆ. ಅದನ್ನ ಅವರು ಸರಿಯಾಗಿ ಉಪಯೋಗಿಸಿಕೊಳ್ತಾ ಇದ್ದಾರೆ ಅಷ್ಟೆ. ಮು೦ದೆ ಒ೦ದಿನ ದೇಶಕ್ಕೆ ಬೇರೆ ಹೆಸರಿಡಬೇಕು ಅ೦ತ ಹೇಳೋ ದಿನ ಕೂಡ ಬರಬಹುದು.
ಉ: ವಂದೇಮಾತರಂ ಕೋಮುವಾದ ಗೀತೆಯೆ?
ಗೆಳೆಯರೇ,
ನನ್ನದೊಂದು ವಿನಂತಿ.
ಇಲ್ಲಿ ಭಾ.ಜ.ಪಾ ಅಥವಾ ಕಾಂಗ್ರೆಸ್ ಅಥವಾ ವಿ.ಹೆಚ್.ಪಿ ಇತ್ಯಾದಿಗಳ ಬಗ್ಗೆ ಚರ್ಚೆ ನಡಿಸುವುದು ನನ್ನ ಉದ್ದೇಶವಾಗಿಲ್ಲ. ಹಾಗಯೇ ರೆಡ್ಡಿ. ಯೆಡ್ಡಿ ಬಡಿದಾಟ ಇತ್ಯಾದಿ ಕ್ಷುಲ್ಲಕ ವಿಷಯಗಳನ್ನು ಹೆಗೆಲಿಗೆ ಹೊತ್ತಿಕೊಳ್ಳಲು ನನಗೆ ಇಷ್ಟವಿಲ್ಲ.
ಈ ಚರ್ಚೆ ಕೇವಲ "ವಂದೇಮಾತರಂ" ಗೀತೆಯೆ ಬಗ್ಗೆ ಮತ್ತೆ ಅದರಲ್ಲಿ "ಕೋಮುವಾದ"ದ ದೃಕ್ಕೋಣ ವಿದಿಯೇ ಅಂತ ತೆಳಿಯುವುದಕ್ಕೆ ಮಾತ್ರ ಸೀಮಿತ.
ಹಾಗಾಗಿ, ಯಾರಿಗಾದರೂ ಭಾ.ಜ.ಪಾ ಅಥವಾ ಅಂತಹ ರಾಜಕೀಯ ಪಾರ್ಟೀಗಳನ್ನ ಹೊಗಳುವ/ಬಯ್ಯುವ ಹಂಬಲವಿದ್ದರೇ...ಮಾನ್ಯರೇ...ದಯವಿಟ್ಟು ಇಲ್ಲಿ ವ್ಯಾಖ್ಯಾನವನ್ನ ಮಾಡಬೇಡಿ.
***********
ಚರ್ಚಾ ವಿಷಯಕ್ಕೆ ಬಂದರೇ, "ಜನಗಣಮನ" ದೇವರ ಬಗ್ಗೇ ಬರೆದಿರುವುದು ಎನ್ನುವ ವಾದವಿದೇ. ಹಾಗಾಗಿ ಅದು ಕಿಂಗ್ ಜಾರ್ಜ್ ಮೇಲೇ ಬರೆದಿರುವುದಾ ಅಥವಾ ದೇವರ ಮೇಲೆ ಬರೆದಿರುವುದಾ ಎನ್ನುವುದು ಜಿಜ್ಣ್ಸಾಸವೇ ಸರಿ.
ಏನಾದರೂ, ಭಾರತ ಸ್ವಾತಂತ್ರ್ಯ ಸಂಗ್ರಾಮ ಜೊತೆಗೆ "ವಂದೇಮಾತರಂ" ಗುರುತಿಸಿಕೊಂದಷ್ಟು "ಜನಗಣಮನ" ಗುರುತಿಸಿಕೊಂಡಿಲ್ಲ. ಆದರೇ ನಾನು ಓದಿದ ಮೇರೆಗೆ "ಆರ್ಕೆಷ್ಟ್ರಾ ದಲ್ಲಿ ಜನಗಣಮನ ಗೀತೆ ಶ್ರಾವ್ಯವಾಗಿ ಕೇಳಿಬರುತ್ತದೆ. ವಂದೇಮಾತರಂ ಹಾಗೆ ಕೇಳಿಬರುವದಿಲ್ಲ. ಹಾಗಾಗಿ ರಾಷ್ಟ್ರಗೀತೆ ಯಾಗಿ ಜನಗಣಮನವನ್ನು ಆರಿಸಲಾಯಿತು" ಅಂತ ಜವಹರ್ ಲಾಲ್ ನೆಹ್ರೂ ಹೇಳಿದರಂತೇ!
ಉ: ವಂದೇಮಾತರಂ ಕೋಮುವಾದ ಗೀತೆಯೆ?
ಜವಾಹರಲಾಲ ನೆಹರು ಯಿಂದಾದ ದುರಂತಗಳು ಅಂತ ಯಾರಾದ್ರು ಒಂದು ಪುಸ್ತಕ ಬರೆದ್ರೆ ....................
ಉ: ವಂದೇಮಾತರಂ ಕೋಮುವಾದ ಗೀತೆಯೆ?
ನನ್ನನ್ನು ವೈಯಕ್ತಿಕವಾಗಿ ಕೇಳಿದರೆ ನನಗೆ ವಂದೇ ಮಾತರಂ ಒಂದು ದೇವರನ್ನು ಸ್ತುತಿಸುವ ಭಕ್ತಿಗೀತೆಯಾಗಿ ತೋರುವುದಿಲ್ಲ. ಆದರೆ ಆ ಕವನ ಆನಂದಮಠ ಕಾದಂಬರಿಯ ಒಂದು ಭಾಗ. ಆನಂದಮಠ ಕಾದಂಬರಿಯನ್ನು ನಾನು ಓದಿಲ್ಲ. ಆ ಕಾದಂಬರಿಯ ಒಟ್ಟು ಸಂದರ್ಭದಲ್ಲಿ ಆ ಕವಿತೆಯನ್ನು ಮತ್ತು ಆ ಇಡೀ ಕಾದಂಬರಿಯನ್ನು ಜನಾಂಗೀಯ ಮತ್ತು ಕೋಮು ಪೂರ್ವಗ್ರಹ ಪೀಡಿತ ಎಂದು ಕೆಲವರು ತಿಳಿಯುತ್ತಾರೆ ಎಂದು ನಾನು ಗೃಹಿಸಿದ್ದೇನೆ. ಹಾಗೆ ತಿಳಿಯುವವರ ತಿಳುವಳಿಕೆ ಸರಿಯೋ, ತಪ್ಪೋ, ತಿಳುವಳಿಕೆ ಇರುವುದಂತೂ ಹೌದು. ಇನ್ನು ದೇಶವನ್ನು ಮಾತೆ, ದುರ್ಗೆ ಎಂದು ಪರಿಭಾವಿಸುವುದು ಚೆಂದದ ಆದರೆ ಹಳಸಲು ರೂಪಕ. ಮಕ್ಕಳನ್ನೇ ತೊರೆದು ಪ್ರಿಯಕರನೊಂದಿಗೆ ಓಡುವ ಮಾತೆಯರು, ಹೆಚ್ಚೇಕೆ ಮಕ್ಕಳನ್ನೇ ವೈರಿಯಂತೆ ಕಾಣುವ, ಕೊಂದು ಕಳೆಯುವ ಮಾತೆಯರೂ ಇದ್ದಾರೆ. ವಂದೇ ಮಾತರಂ ದೇಸ್ ರಾಗದಲ್ಲಿ ಚೆನ್ನಾಗಿ ಕೇಳುತ್ತದೆ. ಅದರಲ್ಲೂ ಪಂಡಿತ್ ಭೀಮಸೇನ್ ಜೋಷಿಯವರ ಕಂಠಸಿರಿಯಲ್ಲಿ ಅದನ್ನು ಎಷ್ಟು ಬಾರಿ ಕೇಳಿದರೂ ಬೋರ್ ಆಗುವುದಿಲ್ಲ.
ಉ: ವಂದೇಮಾತರಂ ಕೋಮುವಾದ ಗೀತೆಯೆ?
ವಂದೇ ಮಾತರಂ ಬಗ್ಗೆ ಒಂದು ಒಳ್ಳೆ ಲೇಖನ :
http://www.vijayvaan...
ಉ: ವಂದೇಮಾತರಂ ಕೋಮುವಾದ ಗೀತೆಯೆ?
ಈ ವಿವಾದದಲ್ಲಿ ನಾನು ಗುರುತಿಸಿದ ಸಂಗತಿ...
ಮೇಲ್ನೋಟಕ್ಕೆ ಇದು ಎರಡು ಧರ್ಮಗಳ ನಡುವಿನ ತಿಕ್ಕಾಟ.
ಆದರೆ ವಾಸ್ತವವಾಗಿ ಇದು ಮೊನೊಥೀಯಿಸ್ಟ್ ಆದ ಇಸ್ಲಾಂ, ಕ್ರಿಶ್ಚಿಯಾನಿಟಿ ಹಾಗೂ ಇನ್ನಿತರ ಧರ್ಮಗಳು ಒಡ್ಡುವ ಸಮಸ್ಯೆ. ಒಬ್ಬನೇ ದೇವರು ಎನ್ನುವ ಅವರ ಬಾಲಿಶ ಶ್ರದ್ಧೆ ಅವರನ್ನು ಎಂತಹ ಅತಿರೇಕದವರೆಗೂ ಕೊಂಡೊಯ್ಯಬಲ್ಲದು. ಆರಾಧನೆ ಎನ್ನುವ ಅತಿ ಅಮೂರ್ತವಾದ ಭಾವನೆಯನ್ನೂ ಇವರು ಫತ್ವಾ ಜಾರಿಗೊಳಿಸುವ ಮೂಲಕ ನಿಗ್ರಹಿಸಬಹುದು ಎಂದು ಭಾವಿಸುತ್ತಾರೆ!
ನಮ್ಮ ದೇಶದಲ್ಲಿ ನಾವು ಸೆಕ್ಯುಲರಿಸಂ ಅನ್ನು ಸರಿಯಾಗಿ ವ್ಯಾಖ್ಯಾನಿಸುವಲ್ಲಿ ವಿಫಲರಾಗಿರುವುದೇ ಇದಕ್ಕೆ ಕಾರಣ. ಆಡಳಿತಕ್ಕೆ, ಸರಕಾರದ ಯೋಜನೆಗಳ ಅನುಷ್ಠಾನಕ್ಕೆ ಧರ್ಮ ಅಡ್ಡಿಯಾಗಬಾರದು ಎಂದು ಸೆಕ್ಯುಲರಿಸಂನ್ನು ವ್ಯಾಖ್ಯಾನಿಸಿ ಅದನ್ನು ಸಂವಿಧಾನದಲ್ಲಿ ಸೇರಿಸಿದ್ದರೆ ಇಂತಹ ಕೆಲಸಗಳು ಅಸಂವಿಧಾನಿಕವಾಗುತ್ತಿದ್ದವು (ಇದರಲ್ಲಿ ಧಾರ್ಮಿಕ ಕಾರಣಕ್ಕಾಗಿ ರಸ್ತೆ ಅಗಲೀಕರಣವನ್ನು ವಿರೋಧಿಸುವುದರಿಂದ ಹಿಡಿದು ಧಾರ್ಮಿಕ ಕಾರಣಗಳಿಗಾಗಿ ರಾಮ ಸೇತು ಉಳಿಸಬೇಕೆಂದು ಆಗ್ರಹಿಸುವುದೂ ಸೇರುತ್ತದೆ.)
``ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವುದು. ಧರ್ಮಗಳ ಆಧಾರದಲ್ಲಿ ಪಾರ್ಶಿಯಾಲಿಟಿ ತೋರದಿರುವುದು'' ಎನ್ನುವುದೇ ನಮ್ಮ ಜಾತ್ಯಾತೀತತೆಯ ವ್ಯಾಖ್ಯಾನವಾಗಿರುವಂತಿದೆ. ಇದು ಮುಟ್ಟಲಾಗದ ಗುರಿ. ಏಕೆಂದರೆ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣಲು ಎಂದಿಗೂ ಸಾಧ್ಯವಿಲ್ಲ. ಏಕೆಂದರೆ ಧರ್ಮಗಳು ಸಮಾನವಲ್ಲ. ಮೇಲಾಗಿ ಶ್ರದ್ಧೆಯೇ ಜೀವಾಳವಾಗಿರುವ ಇವುಗಳಲ್ಲಿ ಆಬ್ಜೆಕ್ಟಿವಿಟಿ ಇರುವುದಿಲ್ಲ.
ಉ: ವಂದೇಮಾತರಂ ಕೋಮುವಾದ ಗೀತೆಯೆ?
"ಈಶ್ವರ್ ಅಲ್ಲಾ ತೇರೋ ನಾಮ್
ಸಬ್ ಕೋ ಸನ್ಮತಿ ದೇ ಭಗವಾನ್"
ಸೂರಿ ಹೇಳಿದಂತೇ "ಇವನೊಬ್ಬನೇ ದೇವರು" ಎನ್ನುವವರಿಗೇ ಈ ಸಾಲುಗಳು ಹೆಚ್ಚಾಗಿ ಅನ್ವಯಿಸುತ್ತದೆ. ಇತರೇ ಮತಸ್ತರ ದೇವರು/ದೇವತೆಗಳನ್ನ ಅನುಮೋದಿಸಲು ಸಹಕಾರಿ ಆಗುತ್ತದೆ. ಆದರೇ ಅಸಲೀ ವಿಚಾರವೇನೆಂದರೇ ಸಾಧರಣವಾಗಿ "ಮೈನಾರಿಟೀ" ವ್ಯತಿರೇಕಿಗಳಾದ "ಅತಿರೇಕ" ಹಿಂದುಗಳಿಗೆ ಬುದ್ಧಿ ತಿದ್ದುವ ಪ್ರಯತ್ನದಲ್ಲಿ ಈ ಸಾಲುಗಳು ಅತಿ ಹೆಚ್ಚಾಗಿ ಬಳಿಕೇ ಆಗುತ್ತವೆ.
"ಇವನೊಬ್ಬನೇ ದೇವರು" ಎನ್ನುವವರು ಬಹುಶಾ ಈ ಸಾಲುಗಳನ್ನ ಹೀಗೆ ಕೇಳಿಸಿಕೊಂಡಿರಬಹುದು....
"ಈಶ್ವರ್ ಅಲ್ಲಾ ಬೇರೇ ರಾಮ್
ಸಬ್ ಕೋ ಯೇ ಸನ್ಮತಿ ದೇ ಭಗವಾನ್"