ಕನ್ನಡದಲ್ಲಿನ ಒತ್ತಕ್ಷರಗಳು
ಈಚೆಗೆ,
ಸಂಗನಗೌಡರು ಮಹತ್ವದ ವಿಚಾರವನ್ನು ಎತ್ತಿದ್ದಾರೆ. ಶ್ರೀಕಾಂತ ಮಿಶ್ರಿಕೋಟಿಗಳೂ ಇದರ ಬಗ್ಗೆ ಈಗ ನನ್ನ ಭಾಷೆಯನ್ನೇ ಮತ್ತೊಮ್ಮೆ ಕಲಿಯತೊಡಗಿದ್ದೇನೆ. ! ಎಂದು ದನಿಸೇರಿಸಿದ್ದರು ಕೂಡ.
ಅಲ್ಲಿದ್ದ ಮಹತ್ವದ ವಿಚಾರವೆಂದರೆ, ಕನ್ನಡದಲ್ಲಿ ಅಕ್ಷರಗಳನ್ನು ಒತ್ತಿ ಹೇಳುವಾಗ, ಒಂದು ವ್ಯಂಜನಕ್ಕೆ ಅದೇ ವ್ಯಂಜನ ಒತ್ತಾಗೆ ಬರುತ್ತದೆ ಎಂಬುದು. ಉದಾ: ಕಲ್ಲು, ಹಿತ್ತಲು, ಸೊನ್ನೆ ಹೀಗೆ.
ನಾನೂ ಕೂಡ ಕನ್ನಡದಲ್ಲಿರುವ, ಒತ್ತಕ್ಷರಗಳಿಂದು ಕೂಡಿರುವ, ಪದಗಳನ್ನು ಗಮನಿಸುತ್ತಾ ಹೋದೆ. ಆಗ ನನ್ನಲ್ಲಿ ಕೆಲವು ಗೊಂದಲಗಳು ಮನೆಮಾಡಿದವು.
ನನಗೆ ಕೆಲವು ಪದಗಳ ಬಗ್ಗೆ ಸರಿಯಾದ ಅರಿವು ಮೂಡಲಿಲ್ಲ. ಆ ಪದಗಳೆಂದರೆ
೧. ಅಷ್ಟು
೨. ಇಷ್ಟು
೩. ಎಷ್ಟು
೪. ಸಾಕಷ್ಟು = ಸಾಕು + ಅಷ್ಟು - ಲೋಪ ಸಂಧಿ. ಕನ್ನಡ ಸಂಧಿಯಿದು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಷ ಗೆ ಟ ಒತ್ತಾಗಿ ಬಂದಿದೆ. ಈ ಅಷ್ಟು, ಇಷ್ಟು ಪದಗಳು ಸಂಸ್ಕೃತದವೋ ಇಲ್ಲಾ ಕನ್ನಡದವೋ ಎಂಬುದೇ ನನ್ನ ಗೊಂದಲಕ್ಕೆ ಕಾರಣ.
ಹಾಗೆಯೇ ಲೋಕಾರೂಢಿಯಾಗಿ, ಆಟೋಂದು, ಈಟೋಂದು, ಈಪಾಟಿ ಎಂಬ ಪ್ರಯೋಗಗಳೂ ಇವೆ. ದಯವಿಟ್ಟು ಈ ಪದಗಳನ್ನು ಅರಿತವರು ನಮಗೂ ತಿಳಿಸಿಕೊಡಿ.
ಸಿಗೋಣ.

- Login or register to post comments
- 1306 hits
- Email this forum





RSS:
ಆಸು, ಈಸು, ಏಸು
ಇವು ಹೀಗೆ ಇದ್ದಿರಬಹುದು.
ಆಸು+ಒಟ್ಟು = ಆಸೊಟ್ಟು = ಅಷ್ಟು
ಈಸು+ಒಟ್ಟು = ಈಸೊಟ್ಟು = ಇಷ್ಟು
ಏಸು+ಒಟ್ಟು = ಏಸೊಟ್ಟು = ಎಷ್ಟು
ಒತ್ತಕ್ಕರದ ಕಟ್ಟಳೆಯನ್ನು ಪಾಲಿಸಿಕೊಂಡು ಬರೆಯಬೇಕಾದಾಗ, ಆಸೊಟ್ಟು, ಈಸೊಟ್ಟು, ಏಸೊಟ್ಟು ಎಂದು ಬರೆಯಬಹುದು.
ಆಸು, ಈಸು, ಏಸು ಇವು ಕನ್ನಡದ ಪದಗಳೇ ಆಗಿವೆ. ಇವುಗಳಿಗೆ "ಒಟ್ಟು" ಸೇರಿಸಿ ಆಡುವಾಗ ಅದು ಹಾಗೆ ಆಗುತ್ತದೆ.
ಮಾದರಿಗಳು:
ಏಸೂರು ಕಂಡು ಬಂದಿರಿ?
ಆಸೊಂದು ದುಡ್ಡು ನನಗೆ ಬೇಕಿಲ್ಲ.
ಈಸೊಂದು ಕಣ್ಣೀರ ಹನಿ, ನಿನ್ನ ಕೆನ್ನೆ ಹಾಳು ಮಾಡಿಯಾವು.
"ಕನ್ನಡವೆಂದೊಡೆ ಕುಣಿಯುವುದೆನ್ನೆದೆ"
'ಏಸು' ಕಾಯಂಗಳ
ದಾಸರ 'ದಾಸನಾಗು ವಿಶೇಷನಾಗು' ಹಾಡನ್ನು ನೀವು ಕೇಳಿರಬಹುದು
ಅದರಲ್ಲಿ
'ಏಸು' ಕಾಯಂಗಳ ಎಂಬ ಪ್ರಯೋಗವಿದೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಸಬ್ದಸಂಪತ್ತು ಮತ್ತು ಉದಾರದೃಷ್ಟಿ
ನಾವು ಕೂಡಿದ ಮಟ್ಟಿಗೂ ಶಬ್ದ ಸಂಪತ್ತನ್ನು ವೃದ್ಧಿಮಾಡಿಕೊಳ್ಳಬೇಕೇ ಹೊರತು ಕಡಮೆ ಮಾಡಿಕೊಳ್ಳಬಾರದು . ಇದು ತಪ್ಪು , ಅದು ಅಶುದ್ಧ , ಇದು ಗ್ರಾಮ್ಯ , ಇದು ಅನ್ಯದೇಶೀಯ ಎಂದು ಮಾತುಗಳನ್ನು ತಳ್ಳಿಹಾಕುತ್ತಾ ಹೋದರೆ ಕಡೆಗೆ ಉಳಿಯುವದು ನಮ್ಮ ಇಂದಿನ ಕೆಲಸಕ್ಕೆ ಹೇಗೆ ಸಾಕಾದೀತು? ಭಾಷಾವಿಷಯದಲ್ಲಿಯೂ ಉದಾರದೃಷ್ಟಿ ಅವಶ್ಯ .
---- ಇದು ಬಿ.ಎಂ.ಶ್ರೀ ಅವರ ವಿಚಾರ
ಹೆಚಿನ ವಿವರಕ್ಕೆ ನನ್ನ ಬ್ಲಾಗ್ http://sampada.net/blog/shreekant_mishrikoti/14/09/2006/2240ನೋಡಿ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಸಬ್ದಸಂಪತ್ತು ಮತ್ತು ಉದಾರದೃಷ್ಟಿ
ನಾವು ಕೂಡಿದ ಮಟ್ಟಿಗೂ ಶಬ್ದ ಸಂಪತ್ತನ್ನು ವೃದ್ಧಿಮಾಡಿಕೊಳ್ಳಬೇಕೇ ಹೊರತು ಕಡಮೆ ಮಾಡಿಕೊಳ್ಳಬಾರದು . ಇದು ತಪ್ಪು , ಅದು ಅಶುದ್ಧ , ಇದು ಗ್ರಾಮ್ಯ , ಇದು ಅನ್ಯದೇಶೀಯ ಎಂದು ಮಾತುಗಳನ್ನು ತಳ್ಳಿಹಾಕುತ್ತಾ ಹೋದರೆ ಕಡೆಗೆ ಉಳಿಯುವದು ನಮ್ಮ ಇಂದಿನ ಕೆಲಸಕ್ಕೆ ಹೇಗೆ ಸಾಕಾದೀತು? ಭಾಷಾವಿಷಯದಲ್ಲಿಯೂ ಉದಾರದೃಷ್ಟಿ ಅವಶ್ಯ .
---- ಇದು ಬಿ.ಎಂ.ಶ್ರೀ ಅವರ ವಿಚಾರ
ಹೆಚಿನ ವಿವರಕ್ಕೆ ನನ್ನ ಬ್ಲಾಗ್ http://sampada.net/blog/shreekant_mishrikoti/14/09/2006/2240
ನೋಡಿ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಪದಸಂಪತ್ತು
ಪದಸಂಪತ್ತು ಹೆಚ್ಚಬೇಕು, ಅದಕ್ಕಾವ ಅಡ್ಡಿಯೂ ನನ್ನಿಂದ ಇಲ್ಲ. ಆದರೆ ಹೊರಗಿನ ಪದ ಕನ್ನಡಕ್ಕೆ ಬಂದಾಗ ಕನ್ನಡದ್ದೇ ಎನಿಸುವ ಮಟ್ಟಿಗೆ ತಕ್ಕ ರೂಪ ಬದಲಾವಣೆ ಹೊಂದಬೇಕು ಎಂದು ನಾನು ಹೇಳುತ್ತಿರುವುದು.
ಸಂಯುಕ್ತಾಕ್ಷರಗಳು
ಗೆಳೆಯರೇ,
ನಾನು ಓದಿರುವ ಹಳೆಗನ್ನಡದ ಕೃತಿಗಳಲ್ಲಿ ಕಾಣಸಿಗುವ ರೂಪಗಳಿವು:
ಅಷ್ಟು = ಅನಿತು (ಅಣೈತ್ತು); ಇಷ್ಟು = ಇನಿತು (ಇಣೈತ್ತು); ಎಷ್ಟು = ಎನಿತು (ಎಣೈತ್ತು)
ಕಂಸದಲ್ಲಿನ ಹಳೆಯ ತಮಿಳಿನ ಪದಗಳಿಗೆ ಇವು ಹತ್ತಿರವಾಗಿರುವುದು ಸುಲಭವಾಗಿ ತಿಳಿಯುತ್ತದೆ. ಆದರೆ, ಈಗ ಬಳಕೆಯಲ್ಲಿರುವ ತಮಿಳಿನ ಪದಗಳಿಗೆ ಸಮಾನ ಕನ್ನಡ ಪದಗಳು 'ರಾಶಿ'ಯನ್ನಲ್ಲದೆ 'ದೂರ'ವನ್ನು ಹೇಳುತ್ತವೆ:
ಅಷ್ಟು(ದೂರ) = ಅತ್ತ (ಅತ್ತಣೈ); ಇಷ್ಟು(ದೂರ) = ಇತ್ತ (ಇತ್ತಣೈ); ಎಷ್ಟು(ದೂರ) = ಎತ್ತ (ಎತ್ತಣೈ)
ಬಹುಶಃ ಏಸು, ಈಸು, ಆಸು ಗಳು ನಡುಗನ್ನಡ ಕಾಲದ ಕೊನೆಯಭಾಗದಲ್ಲಿ ರೂಢಿಯಲ್ಲಿದ್ದಿರಬೇಕು; ಮಿಶ್ರಿಕೋಟಿಗಳು ಉದ್ಧರಿಸಿದ ಪುರಂದರದಾಸರ ಪದವೂ ಒಂದು ಉದಾಹರಣೆಯೆನಿಸುತ್ತದೆ. ಆದರೆ ಆಗಲೂ 'ಅಷ್ಟು', 'ಇಷ್ಟು', 'ಎಷ್ಟು'ಗಳೂ ಇದ್ದುವೆಂಬುದಕ್ಕೆ ದಾಸರ ಇತರ ಪದಗಳನ್ನು ನೋಡಿ:
೧......ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ...(ನರಜನ್ಮ ಬಂದಾಗ)
೨......ಎಷ್ಟು ಒಯ್ದರೂ ಬೆಲೆರೊಕ್ಕವಿದಕಿಲ್ಲ..(ಕಲ್ಲುಸಕ್ಕರೆ ಕೊಳ್ಳಿರೋ)
೩.....ಎಷ್ಟಾದರೂ ಮತಿಗೆಟ್ಟು ಇರಲಿ..(ನಾರಾಯಣ ನಿನ್ನ)
ಇನ್ನು ಒತ್ತಕ್ಷರದ ಕಟ್ಟಲೆಯೆಂದು ಭಾವಿಸಲ್ಪಡುತ್ತಿರುವ 'ಸವರ್ಣ ಸಂಯುಕ್ತಾಕ್ಷರ' ಕನ್ನಡಕ್ಕೆ ಮಾತ್ರವಲ್ಲ, ಬೆಳೆಯುವ ಎಲ್ಲ ಭಾಷೆಗಳ ಪ್ರಾಥಮಿಕ ಹಂತದಲ್ಲಿದ್ದುದು ಎಲ್ಲರಿಗೂ ತಿಳಿದಿದೆ. 'ಪ್ರಾಕೃತ'ವು ಸಂಸ್ಕರಣೆಗೆ ಒಳಗಾಗಿ 'ಸಂಸ್ಕೃತ'ವಾಗುವ ಮುನ್ನ ಇದೇ ರೂಪದಲ್ಲಿದ್ದುದು.(ಆರ್ಯ = ಅಯ್ಯ; ವಸ್ತ್ರ= ವಟ್ಟ). ಈಗಲೂ ಕೆಲ ಭಾಷೆಗಳು ಅದೇ ಹಂತದಲ್ಲಿವೆ. ಉದಾ: ಚೀನೀ,ಜಪಾನೀ,ಹಾಂಗುಲ್ ಗಳು
ಇದರಿಂದ ಅವುಗಳು ಜಗತ್ತಿನ ಇತರ ಭಾಷೆಗಳೊಂದಿಗೆ ಸಂವಹನ ಸಾಧಿಸಲು ಅದೆಷ್ಟು ಹೆಣಗುತ್ತಿವೆ ಗೊತ್ತೆ? (ಒಂದು ತಮಾಷೆ ನೆನಪಾಯಿತು : 'ಲ' ಕಾರವೇ ಇಲ್ಲದ ಜಪಾನೀ ಭಾಷೆಯಲ್ಲಿ ಹುಡುಗನೊಬ್ಬ ಅಮೆರಿಕದ ಹುಡುಗಿಗೆ ಪ್ರೀತಿಯಿಂದ 'ಐ ರಬು ಯು' ಎನ್ನುತ್ತಿರುವನೆಂದು ಆಕೆಗೆ ತಿಳಿಯುವುದೇ ಇಲ್ಲ! ಇವನೇಕೆ ನನ್ನನ್ನು ಉಜ್ಜುವನು(ರಬ್)ಎಂದು ಆಕೆ ದುರುಗುಟ್ಟಿದ್ದಿದೆ!)
ಭಾರತದಲ್ಲಿ ಆ ಸಂವಹನದ ತೊಂದರೆ ನೀಗಿಸಲು ಹುಟ್ಟಿದ ಭಾಷೆಯೇ ಸಂಸ್ಕೃತ! ಸರಿ, ಇಲ್ಲಿಗೆ ನಿಲ್ಲಿಸಿಬಿಡೋಣ; ಮೊದಲೇ ನಾನು ಸಕ್ಕದ ಪಕ್ಕದವನೆಂದು ಬಿರುದಾಂಕಿತನಾದವನು! ಏಕೆ ಸಂಯುಕ್ತಾಕ್ಷರಗಳು ಹುಟ್ಟಿದವೆಂದು ಇನ್ನೊಮ್ಮೆ ನಿಧಾನವಾಗಿ ಬರೆಯುತ್ತೇನೆ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಹೆಮ್ಮೆಯ ವಿಚಾರವಿದು, ಮರೆಯುವಂತಿಲ್ಲ
ಸವಿಯೊದಗು, ನನ್ನ ಪ್ರಕಾರ ಚರ್ಚೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ನಾನು ಈ ಅಷ್ಟು, ಇಷ್ಟು, ಎಷ್ಟು ಪದಗಳ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿದ್ದೆ ಈ ಕಾರಣಕ್ಕಾಗಿ. ಅವೆಲ್ಲವೂ ಕನ್ನಡ ಪದಗಳೇ.
ಸರಿ, ಈಗ ಸಂಗನಗೌಡರ ಪ್ರಕಾರವೇ ತೆಗೆದುಕೊಳ್ಳೋಣ.
ಆಸು+ಒಟ್ಟು = ಆಸೊಟ್ಟು = ಅಷ್ಟು
ಇಲ್ಲಿ ಎಲ್ಲಿಯೂ ಸಂಸ್ಕೃತದ ಸುಳಿವಿಲ್ಲ, ಅದಾಗಿಯೂ(ಅಥವಾ ಅದಾಗ್ಯೂ..ಮತ್ತೊಂದು ಸಂಯುಕ್ತಾಕ್ಷರ) ಕೂಡ ಸಂಯುಕ್ತಾಕ್ಷರಗಳು ಕನ್ನಡದಲ್ಲಿ ಜಾಗ ಪಡೆದುಕೊಂಡಿದೆ. ಒಂದು ರೀತಿಯಲ್ಲಿ, ಇದನ್ನು, "ಸಂಸ್ಕೃತದ ಹೊರತಾಗಿಯೂ ಕೂಡ ಕನ್ನಡದಲ್ಲಿ ಸಂಯುಕ್ತಾಕ್ಷರಗಳಿವೆ ಹೇಳಬಹುದು".
ಅಷ್ಟೇ ಅಲ್ಲದೆ, ಬೆನಕರವರು ಹೇಳಿದ ಹಾಗೆ ದಾಸರ ಪದಗಳಲ್ಲಿಯೂ ಬಳಸಲ್ಪಟ್ಟಿವೆ.
......ಎಷ್ಟು ಒಯ್ದರೂ ಬೆಲೆರೊಕ್ಕವಿದಕಿಲ್ಲ..(ಕಲ್ಲುಸಕ್ಕರೆ ಕೊಳ್ಳಿರೋ)
ಅಂದರೆ, ಕನ್ನಡವು ತನ್ನ ಸ್ವಂತ ನೆಲೆಯಲ್ಲೇ ಬೆಳೆಯುತ್ತಾ ಮುನ್ನಡೆದಿದೆ. ಹಾಗಾಗಿ, ನಮ್ಮ ಭಾಷೆ ಆರೋಗ್ಯಕರವಾದ ಮತ್ತು ಸರಿಯಾದ ರೀತಿಯಲ್ಲಿ ಕಾಲಕಾಲಕ್ಕೆ ಬೆಳೆಯುತ್ತಲೇ ಇದೆ. ಇದು ನಮಗೆ ಸಂತೋಷವನ್ನು ಉಂಟುಮಾಡಬೇಕಾದ ವಿಷಯವಲ್ಲವೇ ?
ಹಾಗಾಗಿ, ನನಗನ್ನಿಸುವ ಮಟ್ಟಿಗೆ ಕನ್ನಡವು ಈ "ಸಂಯುಕ್ತಾಕ್ಷರದ ಕಟ್ಟಳೆ" ಯನ್ನು ದಾಟಿ ಮುನ್ನಡೆದಿದೆ. ನಾವು ಸಂಯುಕ್ತಾಕ್ಷರಗಳನ್ನು ಬೇಡವೆಂದರೆ ಕನ್ನಡವನ್ನು ಸುಮಾರು ಶತಮಾನಗಳಷ್ಟು ಹಿಂದೆ ತಳ್ಳಿದಂತೆ ಆಗುತ್ತದೆ. ಮತ್ತು ನೆನಪಿರಲಿ, ದಾಸರ ಪದಗಳನ್ನು ದಯಾದಾಕ್ಷಿಣ್ಯವಿಲ್ಲದೆ ಸುಡಬೇಕಾಗುತ್ತದೆ, ಒಂದು ವೇಳೆ ಕನ್ನಡದಲ್ಲಿ ಸಂಯುಕ್ತಾಕ್ಷರಗಳು ಬೇಡವೆಂದರೆ.
ಕಡೆಯದಾಗಿ, ನನ್ನ ಮಾತಿಷ್ಟೇ, ಕನ್ನಡದ ಮಟ್ಟಿಗೆ ಈ ಪದಗಳು ಒಂದು ರೀತಿಯ ಮೈಲಿಗಲ್ಲು. ಕನ್ನಡವು ಸಂಯುಕ್ತಾಕ್ಷರಗಳನ್ನು ಬರಮಾಡಿಕೊಂಡಿಲ್ಲ, ತಾಯಿ ಮಗುವನ್ನು ಹೇರುವು ಹಾಗೆ, "ಸಂಯುಕ್ತಾಕ್ಷರಗಳು" "ಕನ್ನಡ ತಾಯಿಯಲ್ಲಿಯೇ"(ಯೂ) ಹುಟ್ಟಿ ಬೆಳೆದಿವೆ. ಹಾಗಾಗಿ ಕನ್ನಡದಲ್ಲಿ ಸಂಯುಕ್ತಾಕ್ಷರಗಳನ್ನು ನಾವು ಬೇಡವೆನ್ನುವ ಹಾಗಿಲ್ಲ.
ಬನ್ನಿ, ಈ ಸೂತ್ರವನ್ನು ಅನುಸರಿಸಿ, ಮಿಶ್ರಿಕೋಟಿಗಳು ಉದಾಹರಿಸಿದ ಬಿ,ಎಂ,ಶ್ರೀ ಅವರ ವಿಚಾರಗಳನ್ನು ಸಾಕಾರ ಮಾಡುವತ್ತ ಸಾಗೋಣ.
ನನ್ನ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯಗಳೇನು ?
ಬರಹ ಮತ್ತು ಆಡು ಮಾತು,ಒತ್ತಕ್ಕರ ಮತ್ತು ಸಮ್ಮುಕ್ಕರ
ಇಂಗಲೀಸಿನಲ್ಲಿ know ಎಂಬುದನ್ನು ಹೇಳುವಾಗ k ಸುಮ್ಮನಾಗುತ್ತದೆ. ಹಾಗೆಯೇ 'ಬನ್ನಿರಿ' ಎಂಬದನ್ನು ಹೇಳುವಾಗ 'ಬನ್‍ರಿ' ಆಗುತ್ತದೆ. ಹಾಗೆಯೇ 'ಅಸ್‍ಟು', 'ಇಸ್‍ಟು' ಮುಂತಾದವು. ತೆಗೆದುಕೊಳ್ಳಿರಿ-ತಕ್ಕೊಳ್‍ರಿ ಕುಳಿತುಕೊಳ್ಳಿ-ಕೂತಕೊಳ್‍ರಿ.
ತುಸುವೇ ತುಸು ಗಮನವಿಟ್ಟು ನೋಡಿದಾಗ ಕನ್ನಡದಲ್ಲಿ ಹೆಚ್ಚಿನ ಹೊರಗಿನ ಪದಗಳು ಒತ್ತಕ್ಕರದ ನಿಯಮವನ್ನು ಪಾಲಿಸಲಾರವು.
ಹೀಗಿದ್ದರೂ ನಾನೇನು ಕನ್ನಡ ಪತ್ತಿಗೆ, ಹೊತ್ತಿಗೆಗಳನ್ನು ಓದುವದನ್ನು ಬಿಟ್ಟಿಲ್ಲ. ಆದರೆ ಕನ್ನಡದಲ್ಲಿ ಬರೆಯುವಾಗ ಎರಡೇ ಎರಡು ಸರಳ ನಿಯಮಗಳ ಪಾಲನೆ ಮಾಡುತ್ತೇನೆ. ೧)ಸಮ್ಮುಕ್ಕರದಲ್ಲಿ ಬರೆಯದಿರುವುದು. ೨)ನಾಮಪದಕ್ಕೆ ಇಸು ಸೇರಿಸದಿರುವುದು.
ಸಮ್ಮುಕ್ಕರ ಎಂಬ ಪದ ನಾನೇ ಹುಟ್ಟಿಸಿದ ಪದವೋ ಇಲ್ಲವೇ ಮೊದಲೇ ಇರುವುದೋ ನನಗೆ ಗೊತ್ತಿಲ್ಲ. ಹಾಗೆಂದರೆ ಏನು ಎಂಬುದು ಓದುವವರಿಗೆ ತಿಳಿಯುತ್ತಿದೆ ಮತ್ತು ಕಟ್ಟಳೆಗಣುಗುನವಾಗಿ ಬರೆಯುತ್ತಿದ್ದೇನೆಂಬ ಸಂತಸ ನನಗಿದೆ.
ಸುನೀಲರೇ ನಿಮ್ಮ ಈ ಮೇಲಿನ ಮಾತಿನಲ್ಲಿ ಸಮ್ಮುಕ್ಕರಗಳು ಮತ್ತು ಅವನ್ನು ಹೇಗೆ ಬರೆಯಬಹುದು ಎಂಬುದನ್ನು ಪಟ್ಟಿ ಮಾಡಿದ್ದೇನೆ, ಇದು ಆಡಿಕೊಳ್ಳಲಲ್ಲ.
ನನ್ನ ಪ್ರಕಾರ-ನನಗೆ ತೋರುವಂತೆ,ನನ್ನ ಅನಿಸಿಕೆಯಂತೆ
ಚರ್ಚೆ-ಮಾತುಕತೆ
ಪ್ರಾರಂಭಿಸಿದ್ದು-ಮೊದಲು ಮಾಡಿದ್ದು, ಸುರು ಮಾಡಿದ್ದು,ಮೊದಲಾಗಿಸಿದ್ದು
ಅದಾಗ್ಯೂ- ಅದಾಗಿಯೂ
ಒಯ್ದರೂ- ಒಯ್ಯಿದರೂ (ಒಯ್ಯಿ ಅಂದರೆ ತೆಗೆದುಕೊಂಡು ಹೋಗು, ಕೊಳ್ಳು-ಕೊಂಡರೂ, ಊಳು-ಉತ್ತರೂ, ತಿನ್ನು-ತಿಂದರೂ, ಇವುಗಳಾಂತೆಯೇ ಒಯ್ಯಿ-ಒಯ್ಯಿದರೂ,ಬಯ್ಯಿ-ಬಯ್ಯಿದರೂ, ಕೊಯ್ಯಿ-ಕೊಯ್ಯಿದರೂ)
ಸ್ವಂತ-ಸೊಂತ
ಆರೋಗ್ಯ-ಆರೋಗ್ಗೆ
ಸಂಯುಕ್ತಾಕ್ಷರ-ಸಮ್ಮುಕಕ್ಕರ
ಶತಮಾನಗಳಷ್ಟು-ಸತಮಾನಗಳಾಸು
ದಯಾದಾಕ್ಷಿಣ್ಯ-ದಯಾದಕ್ಕಿಣೆ
ಮಾತಿಷ್ಟೇ-ಮಾತೀಟೇ, ಮಾತಿಟ್ಟೇ
ಸೂತ್ರ-ಸೂತರ(ಕಟ್ಟಳೆ, ನಿಯಮ)
ಅಭಿಪ್ರಾಯ-ಅಬಿಪರಾಯ(ಅನಿಸಿಕೆ)
ಇದೇ ನನ್ನ ಅನಿಸಿಕೆ. ನಿಮ್ಮ ಅನಿಸಿಕೆ ಏನು?
ಅಷ್ ಟು != ಅಷ್ಟು
ಇಂಗಲೀಸಿನಲ್ಲಿ know ಎಂಬುದನ್ನು ಹೇಳುವಾಗ k ಸುಮ್ಮನಾಗುತ್ತದೆ. ಹಾಗೆಯೇ 'ಬನ್ನಿರಿ' ಎಂಬದನ್ನು ಹೇಳುವಾಗ 'ಬನ್‍ರಿ' ಆಗುತ್ತದೆ. ಹಾಗೆಯೇ 'ಅಸ್‍ಟು', 'ಇಸ್‍ಟು' ಮುಂತಾದವು. ತೆಗೆದುಕೊಳ್ಳಿರಿ-ತಕ್ಕೊಳ್‍ರಿ ಕುಳಿತುಕೊಳ್ಳಿ-ಕೂತಕೊಳ್‍ರಿ.
ಸಂಗನಗೌಡರೆ ನಿಮ್ಮ ವಿಚಾರಗಳೇ ತಿಳಿಯಾಗುತ್ತಿಲ್ಲ. ಬರವಣಿಗೆಯಲ್ಲಿನ ಬನ್ನಿರಿ ಪದ ಆಡು ಮಾತಿನ ಬನ್ರಿ ಆಗಿರಬಹುದು. ಆದರೆ "ಅಷ್ ಟು" ಪದ ಅಷ್ಟು ಆಗಿಲ್ಲ. ಏಕೆಂದರೆ ಅಷ್ಟು ಬರೀ ಆಡುಮಾತಿನಲ್ಲಿ ಬಳಸಲ್ಪಡುವ ಪದವಲ್ಲ ಬದಲಾಗಿ ಈಗಾಗಲೇ ಕನ್ನಡ ಸಾಹಿತ್ಯದಲ್ಲಿ ಸಂಸ್ಕತದ ಹೊರತಾಗಿಯೂ ಬಳಸಲ್ಪಟ್ಟಿದೆ. ಶ್ರೀಕಾಂತ ಮಿಶ್ರಕೋಟಿಗಳು ಮತ್ತು ಬೆನಕರವರು ತೋರಿಸಿರುವ ಮೇಲಿನ ಉದಾಹರಣೆಗಳನ್ನು ನೋಡಿರಿ. ಆದರೂ ನೀವು ಕನ್ನಡದಲ್ಲಿ ಸಂಯುಕ್ತಾಕ್ಷರಗಳನ್ನು ಒಪ್ಪಿಕೊಳ್ಳುವ ಜತುನ ಮಾಡುತ್ತಿಲ್ಲ. ಏಕೆ?.
ನನಗೆನಿಸುವ ಹಾಗೆ, ನೀವು "ಆಟೆ" ಪದವೇ ಸರಿ, "ಅಷ್ಟೇ" ಪದ ತಪ್ಪು ಎಂಬ ಧೋರಣೆ ಹೊಂದಿರುವಂತಿದೆ. "ಆಟೆ" ಆಡು ಮಾತಿನಲ್ಲಿ ರೂಢಿಯಲ್ಲಿರುವ ಪದ. ಅದನ್ನು ಯಾವ ಲೇಖನದಲ್ಲಿಯೂ ಬಳಸಲು ಬರುವುದಿಲ್ಲ.
ಅಂದಹಾಗೆ ಕನ್ನಡಕ್ಕೆ, ಈ ಒತ್ತಕ್ಷರದ ಕಟ್ಟಳೆಯನ್ನು ಎಲ್ಲಿ ದಾಖಲಿಸಿದ್ದಾರೆ ಎಂಬುದನ್ನು ದಯವಿಟ್ಟು ವಿವರಿಸಿ. ಈ ಚರ್ಚೆಯಲ್ಲಿ ಸಂಯುಕ್ತಾಕ್ಷರಗಳ ಕಡೆಗೆ ಮಾತ್ರವೇ ಹೆಚ್ಚಿನ ಗಮನ ನೀಡೋಣ.
ನನ್ನ ಮಟ್ಟಿಗಂತೂ, ಕನ್ನಡಕ್ಕೆ ಇಂತಹ ಕಟ್ಟಳೆಯನ್ನೇನಾದರೂ ಭಾಷಾ ಶಾಸ್ತ್ರಜ್ಞರು ವಿಧಿಸಿದ್ದರೆ, ಅವರ ಕಟ್ಟಳೆಯನ್ನು ಮೀರಿ ನಮ್ಮ ಭಾಷೆ ಮುನ್ನಡೆದಿದೆ.
ಆಸೊಟ್ಟು = ಆಟು
ಬಿಡಿ ಮಾಡಬಲ್ಲಂತವುಗಳನ್ನು ಎಣಿಕೆ ಮಾಡಿ ಹೇಳುವಾಗ ಆಸು,ಈಸು,ಏಸು ಬರುತ್ತವೆ. ಮಾದರಿಗೆ: ಏಸು ಕಲ್ಲುಗಳು, ಏಸು ಹಣ್ಣುಗಳು. ಮುಂತಾದವು. ಬಿಡಿ ಮಾಡಲಾಗದವನ್ನು ಎಣಿಕೆಯಲ್ಲಿ ಹೇಳುವಾಗ ಏಸೊಟ್ಟು ಬರುತ್ತದೆ. ಮಾದರಿಗೆ; ಬೋಗುಣಿಯಲ್ಲಿ ಏಸೊಟ್ಟು ಹಾಲಿದೆ?. ಬಿಂದಿಗೆಯಲ್ಲಿ ಏಸೊಟ್ಟು ನೀರಿದೆ? ಹೀಗೆ ಯಾವುದನ್ನು ಬಿಡಿಯಾಗಿ ಎಣಿಸಲು ಬಾರದೋ ಅವುಗಳ ಅಳತೆಯನ್ನು ಹೇಳುವಾಗ ಏಸು+ಒಟ್ಟು=ಏಸೊಟ್ಟು ಆಗಿದೆ. ಅದಕ್ಕಾಗಿ ಅದನ್ನು ಎಷ್ಟು ಎಂದು ಬರೆಯುವುದು ತಪ್ಪು. ಹಳೆಯ ಕಾಲದಲ್ಲಿ ಸಕ್ಕದವು ಎಲ್ಲಕ್ಕೂ ಮಿಗಿಲಾದ ನುಡಿ ಎಂಬ ಅನಿಸಿಕೆಯಿಂದಾಗಿ ಅದರ ಬೇಗರಣ ಪದ್ದತಿಯನ್ನು ಕನ್ನಡಕ್ಕೂ ಬಲವಂತವಾಗಿ ಅಳವಡಿಸಲಾಯಿತು. ನಡುಗನ್ನಡದಲ್ಲಿ ಕೇಶೀರಾಜ ಬಟ್ಟರು ಇದನ್ನು ಇನ್ನೂ ಹೆಚ್ಚಿಗೆ ಮಾಡಿದರು ಎಂದು ವಿಕಿಪೆಡಿಯದಲ್ಲಿ ಬರೆಯಲಾಗಿದೆ.
ಬೆನಕರು 'ಎತ್ತ' ಮತ್ತು 'ಏಸೊಟ್ಟು ದೂರ' ಒಂದೇ ಎಂದಿದ್ದಾರೆ. ಎತ್ತ ಅಂದರೆ ಯಾವ ಕಡೆಗೆ, ಅದು ದಿಕ್ಕನ್ನು ತಿಳಿಯಲು ಕೇಳಬೇಕಾದಾಗ, ಬಳಕೆಯಾಗುತ್ತದೆ. 'ಏಸೊಟ್ಟು ದೂರ' ಎಂದಾಗ ಅದು ದೂರವನ್ನು ಅಳತೆಯಲ್ಲಿ ತಿಳಿಯಲು ಕೇಳಬೇಕಾದಾಗ, ಬಳಕೆಯಾಗುತ್ತದೆ.
ಆಸೊಟ್ಟು = ಆಟು ಇಲ್ಲವೇ ಆಟ್ಟು, ಎರಡಕ್ಕರದ ಪದಗಳು ಆಡಲು ಸರಳವಾದ್ದರಿಂದ ಅದು ಆಟು ಆಗಿದೆ.
ಸಮ್ಮುಕಕ್ಕರಗಳು, ಕನ್ನಡ ತಾನೇ ತಾನಾಗಿ ಬೆಳೆದು ಹುಟ್ಟಿವೆ ಎಂಬುದಕ್ಕೆ ಬೇರೇ ಕನ್ನಡ ಪದದ ಮಾದರಿ ಕೊಡಿ. ಇಲ್ಲಿ ನೀಡಿದ ಒಂದೇ ಒಂದು ಮಾದರಿಯ ಸರಿ ಬಳಕೆ ಹೇಗೆ ಎಂಬುದನ್ನು ಬರೆದಿದ್ದೇನೆ, ಬೇರೆ ಯಾವುದಾದರೂ ಪದವನ್ನು ಹುಡುಕಿ. ಸಕ್ಕದದ ಪದಗಳ ಬಳಕೆ ಬಿಡಬೇಕೆಂದು ಹೇಳಿಕೊಂಡು ಬಂದ ನೀವೇ, ಏಕೆ ಬದಲಾದಿರಿ?
ಸಮ್ಮುಕಕ್ಕರದ ಬಳಕೆ ಎರಡನೆಯ ಹಂತದ ಬೆಳವಣಿಗೆ ಎಂದು ಬೆನಕರು ಬರೆದಿದ್ದಾರೆ, ಹಾಗಿದ್ದರೆ ಆಡುಮಾತಿನಲ್ಲೇಕೆ ಸಕ್ಕದ ಉಳಿಯಲಿಲ್ಲ? ಮತ್ತು ಇಂಗಲೀಸು ಏಕೆ ಆಟೊಂದು ಕಲಿಯಲು ಕಟಿಣ? ಕನ್ನಡವೇಕೆ ಸುಲಿದ ಬಾಳೆ ಹಣ್ಣಿನಂತೆ ಸರಳ?
ವ್ಯತ್ಯಾಸವಿದೆ
ಸಂಗನಗೌಡರೆ,
ನೀವೆಂದುಕೊಂಡದ್ದಕ್ಕೂ ನಾನು ಬರೆದದ್ದಕ್ಕೂ ಸ್ವಲ್ಪ ವ್ಯತ್ಯಾಸವಿದೆ:
ತಮಿಳಿನ 'ಎತ್ತಣೈ' ಕನ್ನಡದ 'ಎಷ್ಟು' ಎಂಬರ್ಥದಲ್ಲ್ಲಿ ಬಳಸಲ್ಪಡುತ್ತದೆ; ಆದರೆ, 'ಎತ್ತಣೈ' ಕನ್ನಡದ 'ಎತ್ತ'ವಾಗಿ ಉಳಿದಿರಬಹುದಾದ್ದರಿಂದ ದೂರವಾಚಕವಾಗಿ ಬಳಸಲ್ಪಡುತ್ತದೆ ಎಂದು ಹೇಳುವುದು ನನ್ನ ಉದ್ದೇಶ. 'ಎತ್ತ' = 'ಎಷ್ಟು ದೂರ' ಎಂದಲ್ಲ! 'ಎತ್ತ' = 'ಎಲ್ಲಿ' ಎಂದೇ ಬಳಕೆಯಲ್ಲಿರುವುದು! ಇನ್ನೂ ಸರಿಯಾಗಿ ಹೇಳಬೇಕೆಂದರೆ, ಈಗ ಅಷ್ಟೇನೂ ಬಳಕೆಯಲ್ಲಿಲ್ಲದ 'ಎತ್ತಣ' -> 'ಎತ್ತ'ವಾಗಿದೆ.
ಆದ್ದರಿಂದ:
ಇಲ್ಲಿಂದ ಮುಂದೆ:
ಎನಿತು -> ಎಂತು, ಏಸು, ಎಷ್ಟು ಎಂದೆಲ್ಲಾ ಬದಲಾಗಿರಬಹುದು. ಹಳೆಗನ್ನಡದಲ್ಲಿ 'ಎಷ್ಟು' = ಎನಿತು ಆಗಿತ್ತೆಂಬುದಕ್ಕೆ ಇನ್ನೊಂದು ಪ್ರಸಿದ್ಧ ಉದಾಹರಣೆ ನೋಡಿ:
ಅಂದಹಾಗೆ, ನೇರ ಪ್ರಶ್ನೆ: ಕನ್ನಡದ ಮೇಲೆ ಸಂಸ್ಕೃತವನ್ನು ಬಲವಂತವಾಗಿ ಹೇರಲಾಯಿತು ಎಂಬ ನಿಮ್ಮ ಹೇಳಿಕೆಗೆ ಸಾಕ್ಷಿಯೇನಾದರೂ ಇದ್ದರೆ ತೋರಿಸಿ. ತಿಳಿಯಲು ನನಗೂ ಕುತೂಹಲವಿದೆ. ಆಂಗ್ಲರ ಅಭಿಪ್ರಾಯವಾಗಲೀ, ಅವರ ನೆರಳಲ್ಲಿ ಬೆಳೆದ ವಿಚಾರವಾದಿಗಳ ಅಭಿಪ್ರಾಯಗಳಾಗಲೀ, ಅನಿಸಿಕೆಗಳೇ ಹೊರತು ಸಾಕ್ಷಿಗಳಲ್ಲ. 'ಬಲವಂತವಾಗಿ ಹೇರಲಾಯಿತು' ಎಂಬ ನಿಮ್ಮ ವಾದಕ್ಕೆ ಬಲವಾದ ಆಧಾರವೇನೆಂಬುದನ್ನು ನಾನು ತಿಳಿಯಲಿಚ್ಛಿಸುತ್ತೇನೆ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಸಕ್ಕದದ ಹೇರಿಕೆಗೆ ಪುರಾವೆ
ನಾನೊಂದು ಮಾತನ್ನು ಕೇಳುತ್ತೇನೆ, ಅದಕ್ಕೆ ನೀವು ಏನು ಹೇಳುತ್ತೀರಿ ಎಂಬುದರಲ್ಲಿ, ಮೇಲಿನ ನಿಮ್ಮ ಕೇಳಿಕೆಗೆ ನನ್ನ ಹೇಳಿಕೆ ಅಡಗಿದೆ. ನಾನು ಕೇಳುವುದು, ಕ ಕೆಳಗೆ ಷ ಬರೆದರೆ ಕ್ಷ ಆಗುತ್ತದೆ, ಆದಾಗಲೂ, ಕ್ಷ ಮತ್ತು ಜ್ಞ ಗಳನ್ನು ತಳದ ಅಕ್ಕರಗಳೆಂದೇಕೆ ನಾವು ಓದುತ್ತೇವೆ?, ದಯಮಾಡಿ ತಿಳಿಸಿ.
ತಳದ ಅಕ್ಕರ ಎಂದರೇನು?
ತಳದ ಅಕ್ಕರ ಎಂದರೇನು? ಈ ಪದವನ್ನು ಮೊದಲಬಾರಿಗೆ ಕೇಳುತ್ತಿದ್ದೇನೆ. ತಳ = ಕೆಳಗಿನ; ಅಕ್ಕರ=ಅಕ್ಷರ ಎಂದು ಅರ್ಥೈಸಿಕೊಂಡರೆ 'ಕೆಳಗಿನ ಅಕ್ಷರ' ಎಂದಾದರೆ ಒತ್ತಕ್ಷರವೇ? ಹಾಗಿದ್ದಲ್ಲಿ, ಕ್ಷ ಮತ್ತು ಜ್ಞ ಗಳನ್ನು ಒತ್ತಕ್ಷರ ಎನ್ನುವುದೇಕೆ ಎಂಬುದು ನಿಮ್ಮ ಪ್ರಶ್ನೆಯೇ? ನಿಮ್ಮ ಪ್ರಶ್ನೆ ಅದೇ ಆದಲ್ಲಿ, ಅವೆರಡೂ 'ಒತ್ತಕ್ಷರ'ಗಳಲ್ಲ; ಸಂಯುಕ್ತಾಕ್ಷರಗಳು.
ನಿಮ್ಮ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ತಳ = ಮೂಲ
ತಳ ಅಂದರೆ bottom, not down.
ಇನ್ನೊಂದು ಅರುತದಲ್ಲಿ ಮೂಲ ಎಂದು.
from the bottom of my heart = ನನ್ನೆದೆಯ ತಳದಿಂದ = ನನ್ನೆದೆಯ ಮೂಲದಿಂದ.
ಅವರ ತಳದ ಊರು = ಅವರ ಮೂಲ ಊರು.
ಹೇಗಾದೀತು?
ಅದಕ್ಕೇ ಸ್ವಾಮಿ ಹೊಸ ಹೊಸ ಪದಗಳನ್ನು ಹುಟ್ಟುಹಾಕಬೇಡಿ ಎಂದಿದ್ದು! ಮೂಲ ಅಕ್ಷರ ಎಂದಿದ್ದರೆ ಎಲ್ಲರಿಗೂ ಅರ್ಥವಾಗುತ್ತಿತ್ತು. ತಳ ಎಂದರೆ 'ಬುಡ' ಮಾತ್ರವಲ್ಲ, 'ಕೆಳ' ಎಂಬರ್ಥವೂ ಇದೆ; ನನ್ನ ಮಾತಿನಲ್ಲಿ ನಂಬುಗೆಯಿಲ್ಲದಿದ್ದಲ್ಲಿ, ನಿಘಂಟು ತಿರುವಿಹಾಕಬಹುದು. ಇರಲಿ, ನಿಮ್ಮ ಪ್ರಶ್ನೆಗೆ ಬರೋಣ:
ಕ್ಷ ಮತ್ತು ಜ್ಞ , ಜೊತೆಗೆ 'ತ್ರ' ಕೂಡ ಸಂಯುಕ್ತಾಕ್ಷರಗಳೇ. ಅಂದರೆ ಎರಡು ವ್ಯಂಜನಗಳು ಕೂಡಿ ಆದವು. ಅವು ಸಂಸ್ಕೃತದಲ್ಲಿ ವಿಶೇಷಾಕ್ಷರಗಳಾದರೂ, ವರ್ಣಮಾಲೆಯಲ್ಲಿ ಎಂದಿಗೂ ಸೇರಿರಲಿಲ್ಲ; ಸೇರಿಯೂ ಇಲ್ಲ; ಸೇರುವುದೂ ಇಲ್ಲ. ಸಂಸ್ಕೃತ ಸೂತ್ರಕಾರ-ವಾಕ್ಯಕಾರ-ಭಾಷ್ಯಕಾರ ಮುನಿತ್ರಯರು ಕೂಡ ಇವುಗಳನ್ನು 'ಮೂಲ ವರ್ಣವೆಂದು' ಎಲ್ಲಿಯೂ ಹೇಳಿಲ್ಲ. ಬರೆಯಲು ಸುಲಭವಾಗುವಂತೆ ಈ ಅಕ್ಷರಗಳ ಬಳಕೆ ಜಾರಿಗೆ ಬಂತು. ನನ್ನ ಮಾತು ನಿಜವೋ ಇಲ್ಲವೋ ಎಂದು 'ಮಾಹೇಶ್ವರ ಸೂತ್ರ'ಗಳನ್ನು ಪರಿಶೀಲಿಸಿ ನೋಡಬಹುದು. ಸಕ್ಕದದಲ್ಲಿಯೇ ಇಲ್ಲದ ಮೇಲೆ ಕನ್ನಡದಲ್ಲಿ ಅವು ಮೂಲ ವರ್ಣಗಳೆಂದು ಯಾರು ಹೇಳಿದರೋ ನನಗೆ ತಿಳಿಯದು! ನಿಜವಾಗಿ ಸಕ್ಕದಕ್ಕೇ ಜೋತುಬೀಳಬೇಕಿದ್ದಲ್ಲಿ 'ಕ್ಷ', 'ತ್ರ', 'ಜ್ಞ' ಗಳನ್ನು ಬರೆಯಲು ಸಕ್ಕದದಂತೆ ಕನ್ನಡದಲ್ಲೂ ವಿಶೇಷ ಅಕ್ಷರಗಳೇ ಹುಟ್ಟಬೇಕಿತ್ತಲ್ಲವೇ? ಯೋಚಿಸಿ ನೋಡಿ! ತಮಿಳಿನಲ್ಲಿ 'ಶ್ರೀ' ಬರೆಯಲೆಂದೇ ಹೊಸ ಅಕ್ಷರ ಹುಟ್ಟಿತು; ಕನ್ನಡದಲ್ಲಿ ಹಾಗಾಗಲಿಲ್ಲ! ಇಂದಿಗೂ 'ಕ' ಕ್ಕೆ 'ಷ' ಒತ್ತು 'ಕ್ಷ' ಎಂದೇ ಎಲ್ಲರೂ ಬರೆಯುತ್ತಿರುವುದಲ್ಲವೇ? 'ಬಲವಂತದ ಹೇರಿಕೆ' ಹೇಗಾದೀತು?
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ತಳ=ಬುಡು=ಬಡ್ಡಿ
ಕೆಳಗೆ ಕುಳಿತುಕೋ, ತಳಕ್ಕೆ ಕುಳಿತುಕೋ ಬೇರೆ ಬೇರೆ. 'ಮೂಲ' ಇದು ಸಕ್ಕದದ ಪದ. ತಳ ಬೇರೆ, ಕೆಳಗೆ ಬೇರೆ. 'ಮೂಲ' = ತಳ.
ಕನ್ನಡ ಕಸ್ತೂರಿ.ಕಾಂ
ಕೆಳಗೆ ಕುಳಿತುಕೋ, ತಳಕ್ಕೆ ಕುಳಿತುಕೋ ಬೇರೆ ಬೇರೆ. 'ಮೂಲ' ಇದು ಸಕ್ಕದದ ಪದ. ತಳ ಬೇರೆ, ಕೆಳಗೆ ಬೇರೆ. 'ಮೂಲ' = ತಳ.
ಇಲ್ಲಿ ಕುಳಿತುಕೊಳ್ಳುವ ವಿಚಾರವಿಲ್ಲ ಸ್ವಾಮಿ, ತಳ ಅಕ್ಕರ ಎಂಬ ಹೊಸ ಪದದ ಬಗ್ಗೆ ಚರ್ಚಿಸುತ್ತಿದ್ದೇವೆ.
'ತಳ' ಕೂಡ ಸಕ್ಕದವೇ! ತಲ -> ತಳ ತದ್ಭವ ಅಷ್ಟೇ.
ತಲ = ಸಮತಲ, ಮಾಳಿಗೆಯ ಮುಚ್ಚು, ಕೆಳಭಾಗ, ಕೆಳಗೆ, ಅಡಿ, ಬುಡ, ಮೂಲ ಇತ್ಯಾದಿ.
ಅಂದಹಾಗೆ ಕನ್ನಡದ ಮೇಲೆ ಸಕ್ಕದ 'ಬಲವಂತವಾಗಿ ಹೇರಲ್ಪಟ್ಟದ್ದಕ್ಕೆ' ಬಲವಾದ ಸಾಕ್ಷಿ ಸಿಕ್ಕರೆ ತಿಳಿಯಲು ಉತ್ಸುಕನಾಗಿದ್ದೇನೆ. ಆ ವಿಚಾರ ಬಿಟ್ಟು ತಳವೆಂದರೆ 'ಕೆಳಭಾಗ' ಅಲ್ಲವೇ ಅಲ್ಲ ಎಂದು ನೀವು ವಾದಿಸುವುದೇ ಆದರೆ, ಅದನ್ನು ಹೊಸ ಚರ್ಚಾವಿಷಯ ಮಾಡಿ, ತಳ ಎಂದರೆ 'ಕೆಳಭಾಗ' ಎಂಬರ್ಥವೂ ಇದೆ ಎಂದು ತೋರಿಸಲು ನಾನೂ ಸಿದ್ಧ! ಸದ್ಯಕ್ಕೆ ಕನ್ನಡ ಕಸ್ತೂರಿ.ಕಾಂ ನಲ್ಲಿ 'ತಲ' ಮತ್ತು 'ತಳ'ವನ್ನು ನೋಡಿ; ಆಮೇಲೆ ವಾದಿಸೋಣ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಆಯಿತು
ಕೆಳಗೆ = down
ತಳಕ್ಕೆ = bottom
ಇದಕ್ಕಿಂತ ಹೆಚ್ಚಿಗೆ ಹೇಳೆನು. ಇವುಗಳ ನಡುವಿನ ಅಂತರ ತಿಳಿಸಲು ಎರಡು ಒಳ್ಳೆಯ ಮಾದರಿಗಳನ್ನು ನೀಡಿದ್ದೇನೆ.
೧)"ತಳದ ಊರು"
೨)"ಕೆಳಕ್ಕೆ ಹಾಕು" "ತಳಕ್ಕೆ ಹಾಕು" ಇವೆರಡೂ ಬೇರೆ ಬೇರೆ ಎಂದು ಒಪ್ಪುವಿರಿ ತಾನೆ? ತಳಕ್ಕೆ ಅಂದರೆ ಎಲ್ಲಕ್ಕಿಂತ ಕೆಳಗೆ, ಅಂದರೆ ಮೂಲಕ್ಕೆ.
ಇನ್ನೊಂದು ಮಾದರಿ:- ತಲಕಾವೇರಿ, ತಳಕಾವೇರಿ. 'ತಲ್' ದಿಂದ ಈ ಪದ 'ತಳ' ಆಗಿದೆ. 'ಮೂಲ' ಎಂಬುದರ ಬಳಕೆಗೂ ನಾನು ಬೇಡ ಎನ್ನುವದಿಲ್ಲ, ಆದರೆ ತಳ,ಬಡ್ಡಿ ಇವುಗಳನ್ನು ಬಿಟ್ಟು 'ಮೂಲ' ಎಂದೇ ಬರೆಯಬೇಕು ಎಂಬುದನ್ನು ನಾನು 'ವಿರೋದ' ಮಾಡುತ್ತೇನೆ. ಇದನ್ನೇ ನಾನು ಬಲವಂತಿಕೆ ಎನ್ನುತ್ತೇನೆ.
ಇವೆರಡನ್ನು ಮೂಲ ಅಕ್ಕರಗಳ ಪಟ್ಟಿಗೇಕೆ ಸೇರಿಸಲಾಯಿತೆಂಬುದನ್ನು ನೀವು ಮೊದಲು ಸರಿಯಾಗಿ ಬಿಡಿಸಿ, ಹೇಳಿ. ನೀವೂ ಸಾಲೆಯಲ್ಲಿ ಓದೇ ಇರುತ್ತೀರಿ,
ಬೆಂಜನಗಳು
ಕ,ಖ,ಗ,ಘ......ಯ,ರ,ಲ,ವ,ಶ,ಷ,ಸ,ಹ,ಳ,ಕ್ಷ,ಜ್ಞ
ನೀವೂ ಹೀಗೆಯೇ ತಾನೆ ಓದಿದ್ದು. ಕ್ಷ,ಜ್ಞ ಗಳನ್ನು ನೀವು ಓದಿಲ್ಲವೋ?? ಸುಮ್ಮನೆ ವಾದ ಮಾಡಲು ಏನೋ ಒಂದನ್ನು ಹೇಳಬೇಡಿ, ಸರಿಯಾದ ಮತ್ತು ಒಪ್ಪಬಹುದಾದ, ಇಲ್ಲವೇ ಸುನೀಲರು ಎತ್ತಿದ "ಆಸೊಟ್ಟು, ಈಸೊಟ್ಟು" ಅಂತಹ ತುಸು ಕಸರತ್ತು ಮಾಡಲು ಹಚ್ಚುವ ಇಚಾರ ಇದ್ದರೆ ಹೇಳಿ, ದಯಮಾಡಿ.
ವರ್ಣಗಳು ಐವತ್ತೇ
ಸಂಗನಗೌಡರೇ,
ನಿಮ್ಮ ಅಭಿಪ್ರಾಯಗಳೇನೇ ಇದ್ದರೂ, ನೀವು ಹುಟ್ಟಿಸಿದ 'ತಳದ ಅಕ್ಕರ' ಎಂದರೆ 'ಕೆಳಗಡೆಯ ಅಕ್ಷರ' ಎಂದೇ ಅರ್ಥವಾಗುವುದು. 'ಹೊಸನಾಡ ಕಟ್ಟುವ' ಹುಮ್ಮಸ್ಸಿನ ನಿಮ್ಮ ಅಭಿಪ್ರಾಯಗಳು ಇದುವರೆಗಿನ ಕನ್ನಡ ಪದಗಳ ಬಳಕೆಯನ್ನು ಇಲ್ಲವಾಗಿಸುವ ಮಟ್ಟಕ್ಕೆ ಹೋಗದಿರಲೆಂದು ಆಶಿಸುತ್ತೇನೆ. ಅದೇನೇ ಇರಲಿ, ಮುಖ್ಯ ಪ್ರಶ್ನೆಗೆ ಬರೋಣ:
ನಾನು ಓದಿರುವ, ಕಲಿತಿರುವ, ಕಲಿಸಿರುವ, ಕೇಳಿರುವ, ಹೇಳಿರುವ ಯಾವುದೇ ಸಂದರ್ಭದಲ್ಲೂ 'ಕ್ಷ', 'ತ್ರ', 'ಜ್ಞ' ಎಂಬಕ್ಷರಗಳು 'ಮೂಲವರ್ಣಗಳು' ಎಂದು ಇರಲಿಲ್ಲ. ಸಕ್ಕದದಲ್ಲೇ ಮೂಲವರ್ಣಗಳಲ್ಲದ ಇವು ಕನ್ನಡದಲ್ಲಿ ಮೂಲವರ್ಣಗಳೆಂದು ತಮಗೆ ಯಾರು ಹೇಳಿದರೋ ತಿಳಿಯದು. ನಿಮ್ಮ ಸಂದೇಹದಿಂದ ನನಗೆನಿಸಿದ್ದು ಇಷ್ಟೇ: ದೇವನಾಗರೀ ಲಿಪಿಯನ್ನು ಬಳಸುವ ಹಲವು ಭಾಷೆಗಳ ಪುಸ್ತಕಗಳಲ್ಲಿ ವರ್ಣಮಾಲೆಯ ಕೊನೆಗೆ ಕ್ಷ, ತ್ರ, ಜ್ಞ ಗಳನ್ನು ಸೇರಿಸುವ ರೂಢಿ ಜಾರಿಯಲ್ಲಿತ್ತು; ಅವುಗಳನ್ನು ಬರೆಯುವ ರೀತಿ ಬೇರೆಯಾದ್ದರಿಂದ ಅದು ಸಹಜ ಕೂಡ. ಕರ್ನಾಟಕದ ಹೊರಗೆ ಮುದ್ರಣವಾಗುತ್ತಿದ್ದುದರಿಂದ ಕೆಲವು ಕನ್ನಡ ಪುಸ್ತಕಗಳಲ್ಲೂ ಇದೇ 'ಅಭ್ಯಾಸ' ಉಳಿದುಕೊಂಡಿತ್ತು; ಆದರೆ ಮೂಲವರ್ಣಗಳೆಂದು ಯಾರೂ ಹೇಳಿಲ್ಲ. ಈಗಲೂ ಹೊಸಗನ್ನಡದಲ್ಲಿ ವರ್ಣಗಳು ಐವತ್ತೇ(೫೦). 'ೠ' ವನ್ನು ಕೈಬಿಟ್ಟಾಗಿನಿಂದ ನಲವತ್ತೊಂಬತ್ತು(೪೯) ಆಗಿವೆ ಅಷ್ಟೇ:
ಅ - ಔ ೧೪ ಸ್ವರಗಳು + ಕಚಟತಪ ವರ್ಗೀಯವ್ಯಂಜನಗಳು ೨೫ + ಯ - ಳ ಅವರ್ಗೀಯ ವ್ಯಂಜನಗಳು ೯ (ಹಳಗನ್ನಡದಲ್ಲಿ ಱ,ೞ ಸೇರಿ ೧೧) + ಯೋಗವಾಹಗಳು ೨ = ೫೦.
ಕ್ಷ, ತ್ರ, ಜ್ಞ ಗಳನ್ನು ಬರೆಯುವುದಕ್ಕಾಗಿ ಕನ್ನಡದಲ್ಲಿ ಹೊಸ ಅಕ್ಷರಗಳೂ ಹುಟ್ಟಿಲ್ಲ; ಈ ಬಗ್ಗೆ ಹಿಂದೆಯೇ ಪ್ರತಿಕ್ರಿಯಿಸಿದ್ದೇನೆ. ಇನ್ನು ಸಕ್ಕದದ 'ಬಲವಂತದ' ಹೇರಿಕೆಯನ್ನು ಸಾಕ್ಷಿ ಸಮೇತ ತೋರಿಸುವುದು ನಿಮ್ಮ ಸರದಿ! ನಾನೂ ನಿಮ್ಮಂತೆಯೇ ಕನ್ನಡಿಗ; ಕನ್ನಡದ ಮೇಲೆ ಯಾವುದೇ 'ಬಲವಂತದ' ಹೇರಿಕೆಯನ್ನು ನಾನೂ ವಿರೋಧಿಸುತ್ತೇನೆ; ಆದರೆ ಸಕ್ಕದದ ಸಮುದ್ರವನ್ನರಿಯದೆ ಕನ್ನಡಿಗರು ಬಾವಿಯ ಕಪ್ಪೆಗಳಾಗಬೇಕೆಂಬುದನ್ನು ನಾನು ಒಪ್ಪುವುದಿಲ್ಲ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಕನ್ನಡದಲ್ಲಿನ ಒತ್ತಕ್ಷರಗಳು
ಈ ಎಷ್ಟು, ಅಷ್ಟು, ಇಷ್ಟು ಹಾಗೂ ಉಷ್ಟುಗಳು ಕನಡದ ಎನಿತುಟು, ಎಂತುಟು, ಅನಿತುಟು, ಅಂತುಟು, ಇನಿತುಟು, ಇಂತುಟು, ಉನಿತುಟು, ಉಂತುಟುಗಳಿಂದ ಎಂತ್ಟು, ಅಂತ್ಟು, ಇಂತ್ಟು, ಉಂತ್ಟುಗಳಿಂದ ಅಂಸ್ಟು, ಇಂಸ್ಟು, ಇತ್ಯಾದಿಗಳಿಂದುತ್ಪತ್ತಿಯಾಗಿ ಟಕಾರದ ಉಚ್ಚಾರದ ಸ್ಥಾನದಲ್ಲಿಯೇ ಷಕಾರದ ಉತ್ಪತ್ತಿ ಸ್ಥಾನವಿರುವುದರಿಂದ ಅಷ್ಟು, ಇಷ್ತು, ಎಷ್ಟು, ಉಷ್ಟು ರೂಪಗಳು ಸಿದ್ಧಿಸಿವೆ. ಈ ರೂಪಗಳು ಪೂರ್ವದ ಹೞಗನ್ನಡ, ಹೞಗನ್ನಡ ಅಷ್ಟೇ ಏಕೆ ನಡುಗನ್ನಡದಲ್ಲೇ ಅಷ್ಟಾಗಿ ಸಿಗದೆ ಹೊಸಗನ್ನಡದಲ್ಲಿ ಮಾತ್ರವೇ ಸಿಗುವುದಱಿಂದ ಈ ಶಬ್ದಗಳು ಕನ್ನಡ ಹಾಗೂ ಸಂಸ್ಕೃತ ಬಲ್ಲ ಪಂಡಿತ ಕಿತಾಪತಿಯೊಬ್ಬನಿಂದ ಕನ್ನಡಕ್ಕೆ ಸೇರಿಸಲ್ಪಟ್ಟಿರಬೇಕು. ಹೇೞಲು ಚೆನ್ನಾಗನಿಸಿದಱಿಂದ ಎಲ್ಲರಿಂದ ಒಪ್ಪಲ್ಪಟ್ಟಿರಬೇಕೆಂದು ನನ್ನಭಿಮತ. ಇದಕ್ಕೆ ವಾದ ಪ್ರತಿವಾದಗಳನ್ನೊಪ್ಪಿದರೂ ನಾನು ಈ ವಿಚಾರವನ್ನು ಹೆಚ್ಚು ಬೆಳೆಸಲಾಱೆ. ನನ್ನನ್ನು kannadamaga@gmail.com ನಲ್ಲಿ ಸಂಪರ್ಕಿಸಿ.