ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮಹೇಶ್ ಭಟ್ ಮುಸ್ಲಿಂ ಪ್ರೇಮ!

  ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಮಗ ರಾಹುಲ್ ಭಟ್ ಶಂಕಿತ ಉಗ್ರ ಡೇವಿಡ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಜೊತೆ ಸಂಪರ್ಕ ಹೊಂದಿದ್ದುದು ದೃಢಪಟ್ಟಿದೆ. ರಾಹುಲ್‌ನನ್ನೂ ಮತ್ತು ಅವನಪ್ಪ ಮಹೇಶ್ ಭಟ್ ಅವರನ್ನೂ ಪೋಲೀಸರು ನಿರ್ದಾಕ್ಷಿಣ್ಯವಾಗಿ ವಿಚಾರಣೆಗೊಳಪಡಿಸಿ ಸಕಲ ಸತ್ಯವನ್ನೂ ಬಯಲಿಗೆಳೆಯಬೇಕು.


  ಭಾರತದ ಯಾವುದೇ ಮೂಲೆಯಲ್ಲಿ ಕೋಮುಸಂಬಂಧಿ ಘರ್ಷಣೆ ಸಂಭವಿಸಲಿ, ಈ ಮಹೇಶ್ ಭಟ್ ಅಲ್ಪಸಂಖ್ಯಾತರ (ಅದರಲ್ಲೂ ಮುಸ್ಲಿಮರ) ವಕ್ತಾರನಂತೆ ಮಾತನಾಡುವುದನ್ನು ನಾವು ಗಮನಿಸಿದ್ದೇವೆ. ಮುಸ್ಲಿಂ ಉಗ್ರರೊಂದಿಗಿನ ತನ್ನ/ತನ್ನ ಮಗನ ಸಂಪರ್ಕವನ್ನು ಮುಚ್ಚಿಹಾಕಿಕೊಳ್ಳಲು ಈತ ಈ ರಕ್ಷಣಾವಿಧಾನವನ್ನು ಅನುಸರಿಸುತ್ತಿದ್ದಾನೆಯೇ ಎಂಬ ನಿಟ್ಟಿನಲ್ಲಿಯೂ ಪೋಲೀಸರು ತನಿಖೆ ಕೈಗೊಳ್ಳಬೇಕು. ಭೂಗತ ಪಾತಕಿಗಳು, ಮುಸ್ಲಿಂ ಉಗ್ರರು ಮತ್ತು ದಾವೂದ್ ಇಬ್ರಾಹಿಂ ಇವರ ಜೊತೆ ಬಾಲಿವುಡ್‌ಗೆ ಇರಬಹುದಾದ ಯಾವುದೇ ರೀತಿಯ ನಂಟಿನ ಬಗ್ಗೆಯೂ ತನಿಖೆ ನಡೆಯಬೇಕು. ಈ ನಂಟಿನ ಒಂದು ಭಾಗವೇ ರಾಹುಲ್-ಹೆಡ್ಲಿ ಸಂಪರ್ಕ ಹಾಗೂ ಮಹೇಶ್ ಭಟ್ ಮುಸ್ಲಿಂ ಪ್ರೇಮ ಇರಬಹುದು.


  ಯಾವ ರಾಜಕೀಯ ಒತ್ತಡಕ್ಕೂ ಮಣಿಯದೆ ಭಾರತದ ತನಿಖಾಧಿಕಾರಿಗಳು ಎಫ್‌ಬಿಐ ನೆರವಿನೊಂದಿಗೆ ತನಿಖೆ ಮುಂದುವರಿಸಬೇಕು. ಇಬ್ಬರು ಭಟ್‌ಗಳೂ ನಿರಪರಾಧಿಗಳೆಂದು ಸಾಬೀತಾದರೆ ಬಹಳ ಸಂತೋಷ.

Your rating: None Average: 5 (1 vote)

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮಹೇಶ್ ಭಟ್ ಮುಸ್ಲಿಂ ಪ್ರೇಮ!

vinayak.mdesai's picture

>> ನಿರಪರಾಧಿಗಳೆಂದು ಸಾಬೀತಾದರೆ ಬಹಳ ಸಂತೋಷ.
ಶಿಕ್ಷೆ ಜಾರಿಯಾದರೆ (ಅಪರಾಧಿಗಳಾಗಿದ್ದರೆ) ಇನ್ನೂ ಬಹಳ ಸಂತೋಷ.

ಉ: ಮಹೇಶ್ ಭಟ್ ಮುಸ್ಲಿಂ ಪ್ರೇಮ!

asuhegde's picture

ಇಂದಿಲ್ಲಿ ಈ ರೀತಿ ಹಗಲು ಕನಸು ಕಾಣುವಿರೇಕೆ ನೀವೆಲ್ಲಾ ಹೇಳಿ
ಶಿಕ್ಷೆಯಾದರೂ ಜಾರಿ ಮಾಡದಿರುವುದು ನಮ್ಮ ಹಳೇ ಚಾಳಿ...
:)

ಉ: ಮಹೇಶ್ ಭಟ್ ಮುಸ್ಲಿಂ ಪ್ರೇಮ!

prasca's picture

**ಯಾವ ರಾಜಕೀಯ ಒತ್ತಡಕ್ಕೂ ಮಣಿಯದೆ (ಭಾರತದ ತನಿಖಾಧಿಕಾರಿಗಳು ಎಫ್‌ಬಿಐ ನೆರವಿನೊಂದಿಗೆ ತನಿಖೆ ಮುಂದುವರಿಸಬೇಕು.)**
ಇದು ಸಾಧ್ಯ ಅಂತ ನಿಮಗನ್ನಿಸುತ್ತ?

**ಇಬ್ಬರು ಭಟ್‌ಗಳೂ ನಿರಪರಾಧಿಗಳೆಂದು ಸಾಬೀತಾದರೆ ಬಹಳ ಸಂತೋಷ.**
ಆಗದಿದ್ದರೆ ದುಃಖನಾ ಸಾರ್? ಯಾಕೆ ಅಂತ ಕೇಳ್ಬಹುದ?

ಉ: ಮಹೇಶ್ ಭಟ್ ಮುಸ್ಲಿಂ ಪ್ರೇಮ!

h.a.shastry's picture

ನನ್ನ ದೇಶದಲ್ಲಿ ನಾವಂದುಕೊಂಡದ್ದಕ್ಕಿಂತ ಇಬ್ಬರು ಅಯೋಗ್ಯರು ಕಮ್ಮಿ ಇದ್ದಾರಲ್ಲಾ ಎಂದು ಸಂತೋಷ.

ಉ: ಮಹೇಶ್ ಭಟ್ ಮುಸ್ಲಿಂ ಪ್ರೇಮ!

kamalap09's picture

>>ಭೂಗತ ಪಾತಕಿಗಳು, ಮುಸ್ಲಿಂ ಉಗ್ರರು ಮತ್ತು ದಾವೂದ್ ಇಬ್ರಾಹಿಂ ಇವರ ಜೊತೆ ಬಾಲಿವುಡ್‌ಗೆ ಇರಬಹುದಾದ ಯಾವುದೇ ರೀತಿಯ ನಂಟಿನ ಬಗ್ಗೆಯೂ ತನಿಖೆ ನಡೆಯಬೇಕು.

ಇದು ನಿನ್ನೆ ಇವತ್ತಿನದಲ್ಲ. ತನಿಖೆ ನಡೆಯಬೇಕು. ಆದ್ರೆ ನಡೆಸುವವರ್ಯಾರು ಸರ್???

>>ಯಾವ ರಾಜಕೀಯ ಒತ್ತಡಕ್ಕೂ ಮಣಿಯದೆ ಭಾರತದ ತನಿಖಾಧಿಕಾರಿಗಳು ಎಫ್‌ಬಿಐ ನೆರವಿನೊಂದಿಗೆ ತನಿಖೆ ಮುಂದುವರಿಸಬೇಕು.

ಇದು ಸಾಧ್ಯನ?

ಉ: ಮಹೇಶ್ ಭಟ್ ಮುಸ್ಲಿಂ ಪ್ರೇಮ!

h.a.shastry's picture

ಸರ್ಕಾರವು ಸಮಗ್ರ ಮತ್ತು ಪಕ್ಷಪಾತರಹಿತ ತನಿಖೆ ನಡೆಸುವಂತೆ ಸಾರ್ವಜನಿಕ ಒತ್ತಡ ರೂಪಿಸುವ ಪ್ರಯತ್ನ ಈ ಕಿರುಬರಹ.

ಉ: ಮಹೇಶ್ ಭಟ್ ಮುಸ್ಲಿಂ ಪ್ರೇಮ!

hejjenu's picture

ಐಬಿಎನ್ ನಲ್ಲಿ ಈ ರೀತಿ ಇದೆ "bhatt defended his son saying, “My son is a hero. My son and his friend have earned the clean chit as they walked into the Head of Crime office in Mumbai.”

ಅವರ ಪ್ರಕಾರ, ಅವರ ಮಗ ಸ್ವತಃ ಪೋಲಿಸರಿಗೆ ಮಾಹಿತಿ ಕೊಟಿದ್ದಾನೆ, ಹಾಗಾಗಿ ಅವನೊಬ್ಬ ಹೀರೊ.

ಮಿಕ್ಕಿದ್ದನ್ನು ತೆರೆಯ ಮೇಲೆ ನೋಡಿ ಆನಂದಿಸೋಣ ...

ಉ: ಮಹೇಶ್ ಭಟ್ ಮುಸ್ಲಿಂ ಪ್ರೇಮ!

asuhegde's picture

ಆ ರಾಹುಲ ಭಟ್ಟ "ಹೀರೋ" ಅನ್ನುವುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಅನ್ನುತ್ತೀರಾದರೆ, ಇಡೀ ಕತೆಯಲ್ಲಿ ಒಬ್ಬ "ಹೀರೋಯಿನ್" ಕೂಡ ಇದ್ದಾಳೆ ಎನ್ನುವುದು ನಾವೆಲ್ಲ ಅರಿತುಕೊಳ್ಳಬೇಕಾದ ಸೂಕ್ಷ್ಮ ವಿಚಾರ.

ಯಾಕಂದ್ರೆ "ಹೀರೋಯಿನ್" ಇಲ್ಲದ ಚಿತ್ರ ನಿರ್ದೇಶಿಸುವ ಮನಸ್ಸು ಮಾಡೋದೇ ಇಲ್ಲ ಈ ಮಹೇಶಪ್ಪಾ...

ಹಾಗೊಂದು ವೇಳೆ ಮಾಡಿದ್ರೆ.....ಆ ಮೇಲೆ ಆ ಹೀರೋ ಚುಂಬಿಸೋದು ಯಾರನ್ನು ಹೇಳಿ...ಮರವನ್ನಾ.....??!!
:)