ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ಕಲಿಸಿದೆಯೇ??

 ೨೬/೧೧ರ ದುರಂತದ ಪ್ರಥಮ ವಾರ್ಷಿಕೋತ್ಸವ ನಡೆಯುತ್ತಿದೆ, ಎಲ್ಲೆಡೆ ಅಂದು ಪ್ರಾಣ ತೆತ್ತವರಿಗಾಗಿ ಶ್ರದ್ಧಾಂಜಲಿ ಸಭೆಗಳು ನಡೆಯುತ್ತಿವೆ.  ಆದರೆ ಒಮ್ಮೆಯಾದರೂ, ಒಬ್ಬರಾದರೂ ನಮ್ಮ ಅತ್ಯುನ್ನತ ಅಸ್ತ್ರವಾದ "ಮತದಾನದ" ಬಗ್ಗೆ ಚಕಾರವೆತ್ತಿಲ್ಲ.  ಎಲ್ಲರೂ ಮತ ಚಲಾಯಿಸಿ, ಈಗಿರುವ ೪೫-೫೦% ಮತದಾನ ಮುಂದಿನ ಚುನಾವಣೆಗಳಲ್ಲಿ ೧೦೦% ಮುಟ್ಟಿ, ಅಯೋಗ್ಯರನ್ನು, ಭ್ರಷ್ಟರನ್ನು ಅಧಿಕಾರದಿಂದ ಹೊರಗಿಟ್ಟರೆ, ಈಗ್ಗೆ ವರ್ಷದ ಹಿಂದಾದ ಬಲಿದಾನಗಳಿಗೊಂದು ಅರ್ಥ ಬರಬಹುದು.  ಕೇಂದ್ರದಲ್ಲಿ ಕೇವಲ ಮುಸ್ಲಿಮರ ಹಾಗೂ ಪರಿಶಿಷ್ಟ ಜಾತಿಗಳ ವೋಟಿನ ಮೇಲೇ ಅವಲಂಬಿತವಾಗಿರುವ, ಕಾಂಗ್ರೆಸ್ನಂತಹ ನಿರ್ವೀರ್ಯ ಸರ್ಕಾರ ಅಧಿಕಾರದಲ್ಲಿರುವವರೆಗೂ ಬಹುಶ: ಈ ಗೋಳು ತಪ್ಪುವುದಿಲ್ಲ ಅನ್ನಿಸುತ್ತದೆ.  ಇಲ್ಲದಿದ್ದಲ್ಲಿ ಇಂತಹ ನೂರಾರು ೨೬/೧೧ ಬರುತ್ತಲೇ ಇರುತ್ತವೆ, ಕಣ್ಣೀರು ಹರಿಯುತ್ತಲೇ ಇರುತ್ತದೆ.  ನಿರಪರಾಧಿಗಳ ಮಾರಣಹೋಮ ನಡೆಯುತ್ತಲೇ ಇರುತ್ತದೆ.  ಮುಖ್ಯವಾಗಿ ನಮ್ಮ ವಿದ್ಯಾವಂತರು ಅನ್ನಿಸಿಕೊಂಡವರು ತಮ್ಮ ನಿರ್ಲಿಪ್ತತೆಯಿಂದ ಹೊರ ಬರಬೇಕು. ಮತ ಚಲಾಯಿಸಬೇಕು, ಉತ್ತಮರ ಆಯ್ಕೆ ಮಾಡಬೇಕು.  ಇಲ್ಲದಿದ್ದರೆ ಈ ದೇಶಕ್ಕೆ ಭವಿಷ್ಯವಿಲ್ಲ, ಮತ್ತೊಮ್ಮೆ ಅಮೇರಿಕನ್ನರ ಅಥವಾ ಪಾಕಿಸ್ತಾನೀಯರ!! ಅಡಿಯಾಳಾಗಿ ಈ ದೇಶ ಗುರುತಿಸಿಕೊಳ್ಳುವ ದಿನ ದೂರವಿಲ್ಲ.  ಈ ಬಗ್ಗೆ ಸಂಪದಿಗರ ಅಭಿಪ್ರಾಯವೇನು?? ನೋಡೋಣವೇ ???

Your rating: None Average: 5 (2 votes)

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

mpneerkaje's picture

ನನ್ನನ್ನು ನಿರಾಶಾವಾದಿಯೆಂದು ಜರೆಯಬೇಡಿ. ನನ್ನ ಪ್ರಕಾರ ಹದಗೆಟ್ಟ ರಾಜಕೀಯ ವ್ಯವಸ್ಥೆ ಜನರನ್ನು ಒಂದು ರೀತಿಯ 'ವಿಷ ವರ್ತುಲ' ದಲ್ಲಿ ಬೀಳಿಸಿದೆ. ಜನರು ಬುಧ್ಧಿ ಕಲಿಯುವುದು ಅಷ್ಟರಲ್ಲೇ ಇದೆ. ನೀವು ಆಸ್ತಿಕರಾಗಿದ್ದರೆ ಈ ದೇಶವನ್ನು ದೇವರೇ ಕಾಪಾಡಬೇಕಷ್ಟೆ ಎಂದು ನಂಬಬಹುದು ಅಷ್ಟೇ.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

ರೀ ಮಹೇಶ್, ನೀವದೇನು ಓದಿದ್ದೀರೋ, ಅದೇನು ಮಾಡ್ತಿದ್ದೀರೋ, ಅದೆಷ್ಟು ಬಾರಿ ಇದುವರೆಗೂ ಮತ ಚಲಾಯಿಸಿದ್ದೀರೋ ಗೊತ್ತಿಲ್ಲ! ಆದರೆ "ದೇವರೇ ಕಾಪಾಡಬೇಕಷ್ಟೇ" ಅನ್ನುವ ನಿಮ್ಮ ಮಾತಿನಲ್ಲಿ ಪಕ್ಕಾ ಪಲಾಯನವಾದ ಕಾಣಿಸ್ತಿದೆಯಲ್ರೀ?? ಇದೇ ನಮ್ಮ ದೇಶದ ದೊಡ್ಡ ದುರಂತ, ವಿದ್ಯಾವಂತರೆಲ್ಲ ಕೈ ಕಟ್ಟಿ ಕುಳಿತು, ಅವಿದ್ಯಾವಂತರನ್ನು, ಸಮಾಜದ ಕೆಳಸ್ತರದವರನ್ನು "ನೀವು ದೇಶ ಕಟ್ಟಿ, ನಾವು ನೋಡ್ತೀವಿ" ಅಂತ ಕುಂತದ್ದು ಇಂದಿನ ಈ ಪರಿಸ್ಥಿತಿಗೆ ಕಾರಣ ಕಣ್ರೀ.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

haadu_kaadu's picture

ಸರ್ , ಎಲ್ಲಾ ಪಕ್ಷಗಳು ಒಂದೇ ,..ಎಲ್ಲಿಯವರೆಗೂ ಪೈಪೋಟಿ ಮೇಲೆ ಕಳ್ಳರನ್ನು , ಲಫನ್ಗರನ್ನು ಬಿ ಫಾರಂ ನೀಡಿ ಚುನಾವಣೆಗೆ ನಿಲ್ಲಲು ಅವಕಾಶ ನೀಡುತ್ತವೇಯೋ ಅಲ್ಲಿಯವರೆಗೂ ದೇಶದ ಗತಿ ಇಷ್ಟೇನೇ .
ಇನ್ನು ನಮ್ಮ ನಾಯಕರೋ ..ತಂಪು ಹೊತ್ತಿನಲ್ಲಿ ನೆನೆಯಬಾರದು ..ಬಿಡಿ , ಅಧಿಕಾರ ಇಲ್ಲದೆ ಇರುವಾಗ ಎಲ್ಲಾ ನಾಯಕರು ಬಿಚ್ಚುಗತ್ತಿ ಭರಮಪ್ಪರೇ. ಕುರ್ಚಿ ಸಿಕ್ಕ ಕೂಡಲೇ ಶಾಂತಿ(?) ಗೆ ಪ್ರಿಯತಮನಾಗಲು ಮುಂದೆ ನಿಂತು ಬಿಡುತ್ತಾರೆ .
ಇಷ್ಟೇ ಅಲ್ಲ .. ನಾವೇನು ಕಮ್ಮಿನೇ , ಓಟು ಹಾಕುವಾಗ ನೋಟು , ಜಾತಿ , ಹೆಂಡ ಇವೇ ನಮಗೆ ಮುಖ್ಯ .. ಹಾಗಾಗಿನೇ ಇವತ್ತು ,ಹೆಂಡತಿ ಸತ್ತಾಗ ಬರದಿದ್ದ ಅಳು ಮುಖ್ಯಮಂತ್ರಿ ಪದವಿ ಕೈ ತಪ್ಪುವಾಗ ಬರುತ್ತದೆ. ಏನಂತಿರಾ ?

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

ನಿಮ್ಮ ಮಾತೇನೋ ನಿಜ, ಆದ್ರೆ ಎಲ್ಲರೂ ಮತದಾನ ಮಾಡಿದ್ರೆ ಇಂಥಾ ಗೋಸುಂಬೆಗಳಿಗೆ ಅಧಿಕಾರ ಸಿಗದಂತೆ ನೋಡ್ಕೋಬಹುದಲ್ವೇ? ಅದು ನನ್ನ ಪ್ರಶ್ನೆ. ಯಾವ ಚುನಾವಣೆಯಲ್ಲೂ ಇದುವರೆಗೂ ೧೦೦% ಮತದಾನ ಆಗಿಲ್ವಲ್ಲಾ??

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

haadu_kaadu's picture

ಕ್ಷಮಿಸಿ ಸರ್, ನನ್ನದು ಜಾತಿ -ಅತೀ - ತ ರಾಷ್ಟ್ರ , ಇಲ್ಲಿ ೯೫-೧೦೦ % ವೋಟು ಆದರೂ ಬಿಟ್ಟರೂ ಜಾತಿ ಬಲ, ಹಣ ಬಲ ಇರೋರು ಗೆಲ್ಲೋಕೆ ಮಾತ್ರ ಸಾದ್ಯ .. ಕೇವಲ ಅಕ್ಷರಸ್ತರು ( ವಿದ್ದ್ಯೆ ಕಲಿತವರೆಲ್ಲಾ ವಿದ್ಯಾವಂತರು ಅನ್ನೋಕ್ಕೆ ಮನಸ್ಸು ಒಪ್ಪೋಲ್ಲ) ಕಡ್ಡಾಯವಾಗಿ ಮತ ಹಾಕಿ ಬಿಟ್ಟರೆ ಗೆದ್ದವರು ಸಂಪನ್ನರೆ ? ( ಎಲ್ಲಾ ಕಳ್ಳರೇ ಚುನಾವಣೆಗೆ ನಿಂತಿರುವಾಗ ?) ನಮ್ಮ ಹಾಲಿ , ಮಾಜಿ ಮುಖ್ಯ ಮಂತ್ರಿಗಳಲ್ಲಿ ಅನೇಕರು ಮೂರು ಹೊತ್ತಿನ ಮುದ್ದೆಗೆ ಗತಿ ಇಲ್ಲದೆ ಇದ್ದವರು, ಇಂದು ಹತ್ತಾರು ನೂರು ಕೋಟಿ ತೂಗುತ್ತಾರೆ , ಇವತ್ತಿಗೂ ಇವರನ್ನು ಬೆಂಬಲಿಸುವರಲ್ಲಿ ಎಷ್ಟು ಜನ ಅಕ್ಷರಸ್ತರಿಲ್ಲ ? . ಬೆಂಗಳೂರಿನಲ್ಲಿ ಅತೀ ಹೆಚ್ಚು ಅಕ್ಷರಸ್ತರಿರೋ ಕ್ಷೇತ್ರ ಜಯನಗರ, ಅಲ್ಲಿ ರವಿ ಕೃಷ್ಣ ರೆಡ್ಡಿಗೆ ಸಿಕ್ಕ ಮತ ಮೂನ್ನುರು ಮೇಲೆ ಎಂಟು.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

haadu_kaadu's picture

ನಿರ್ವೀರ್ಯ ಸರ್ಕಾರ ? ಇದರ ಮಾನ ದಂಡಗಳೇನು ? ವೀರ್ಯ ( ಕ್ಷಮಿಸಿ , ಇದರಲ್ಲಿ ಲಿಂಗ ತಾರತಮ್ಯ ಇಲ್ಲ .. ಆದ್ರೆ ತಟಸ್ಥ ಪದ ತಲೆಗೆ ಹೊಳೆಯುತ್ತಿಲ್ಲ ) ಸರ್ಕಾರ ಅಂದರೆ ಹೇಗಿರಬೇಕು ? ಸೆರೆ ಸಿಕ್ಕ ಕ್ಷಣ ಸರಿಯಾದ ವಿಚಾರಣೆ ಇಲ್ಲದೆ ಆರೋಪಿಗಳ ಅಂಗಾಂಗ ಕತ್ತರಿಸುವ ಕಾನೂನಿನ ದೇಶದ ಸರ್ಕಾರಗಳು ವೀರ್ಯವೇ ?

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

ಪಾಕಿಸ್ತಾನದವರು ಯಾವಾಗಲೂ ಉಗ್ರಗಾಮಿಗಳನ್ನು ಗಡಿಯಿಂದ ಒಳಕ್ಕೆ ನುಸುಳಿಸುತ್ತಿದ್ದರೂ, ಅಮೇರಿಕಾದವರು ಭಾರತ ನಮ್ಮ ಪರಮಾಪ್ತ ರಾಷ್ಟ್ರ ಅಮ್ತ ಹೇಳಿಕೊಂಡೇ ಬಿಲಿಯನ್ಗಟ್ಟಲೆ ಡಾಲರ್ಗಳನ್ನು ದಾನವಾಗಿ ಕೊಡುತ್ತಿದ್ದರೂ, ಪದೇ ಪದೇ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿ ರಕ್ತದೋಕುಳಿಯಾಡುತ್ತಿದ್ದರೂ ಏನೂ ಮಾಡದೆ ಸುಮ್ಮನೆ ಹಲ್ಲು ಬಿಡುತ್ತಿರುವ ಮುಖಂಡರಿರುವ ಸರ್ಕಾರ, ’ನಿರ್ವೀರ್ಯ ಸರ್ಕಾರ’ ಅಂತ ನನ್ನ ಅಭಿಪ್ರಾಯ.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

haadu_kaadu's picture

ಪಾಪಿ ಪಾಕಿಸ್ತಾನವನ್ನು ಹೊಡೆಬಡಿದು ಹಾದಿಗೆ ತರಲು ಯುದ್ದಕ್ಕಿಂತ ರಾಜತಾಂತ್ರಿಕ ಮಾರ್ಗವೇ ಲೇಸು ಅನ್ನೋದು ನನ್ನ ಅಭಿಪ್ರಾಯ.. ಕಾರಣ ಪಾಕಿಸ್ತಾನ ಭಯೋತ್ಪಾದಕರ ಕಾರ್ಖಾನೆ ಅನ್ನೋದು ಸರಿ ಆದರೆ ಅದಕ್ಕೆ ಬಂಡವಾಳ ಬರುತ್ತಾ ಇರೋದು ಅರಬ್ ದೇಶಗಳಲ್ಲಿಂದ, ತೈಲದ ಹಣ ಮತಾನ್ದತೆಯ ದಳ್ಳುರಿಗೆ ತುಪ್ಪವಾಗಿದೆ. ನಾಳೆ ಪಾಕಿಸ್ತಾನವನ್ನ ಗುಡಿಸಿ ಸ್ಮಶಾನವನ್ನಗಿಸಬಹುದು ಆದ್ರೆ ನಾಡಿದ್ದು ಬಾಂಗ್ಲಾ ದೇಶ ಬಗಣಿ ಗೂಟವಾಗುತ್ತೆ . ಅಮೆರಿಕ ಜಗತ್ತಿನ ಯುದ್ದಗಳ ವ್ಯಾಪಾರಿ , ಅವರಿಗೆ ಯುದ್ದ ಮಾಡೋದು ಗೊತ್ತು , ಮಾಡಿಸೋದು ಗೊತ್ತು .

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

haadu_kaadu's picture

ಮುಂದುವರಿದಿದೆ .. ಪಾಕಿಸ್ತಾನ ಒಂದು ಸಮಯ ಸಾಧಕ ದೇಶ ಅಷ್ಟೇ , ನಮ್ಮ ಮಿತಿ ಮೀರಿದ ಒಳ್ಳೆಯತನದ ಬೆಲೆ ನಾವೀಗ ಕಟ್ಟುತ್ತಿದ್ದೇವೆ ಮತ್ತೇನಿಲ್ಲ ಹಾಗಂತ ಒಳ್ಳೆಯತನತಪ್ಪೇ ?

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

ಅತಿಯಾದ ಒಳ್ಳೆಯತನ ತಪ್ಪು, ಅತಿಯಾದರೆ ಅಮೃತವೂ ವಿಷವಾಗುತ್ತದಂತೆ! ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಅವರ ಇಷ್ಟಕ್ಕೆ ತಕ್ಕಂತೆ ಕುಣಿಯುತ್ತಿರುವ ಕಾಂಗ್ರೆಸ್ ನಾಯಕರಿಂದ ಯಾವುದೇ "ವೀರೋಚಿತ" ನಿರ್ಧಾರಗಳನ್ನೂ ನಿರೀಕ್ಷಿಸಬೇಡಿ, ಅವರೇನಿದ್ರೂ ಅಮ್ಮಾವ್ರ ಗುಲಾಮ್ರು, ಅಷ್ಟೇ!!

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

haadu_kaadu's picture

ಅಮ್ಮಾವ್ರ ಗುಲಾಮ್ರು >> ಇದರ ಬಗ್ಗೆ ಮತ್ತೆ ಮಾತಾಡೋಣ . ಆದರೆ ವೀರೋಚಿತ ನಿರ್ಧಾರ ಅಂದ್ರೆ ಎದ್ದು ಬಿದ್ದು ಯುದ್ದಕ್ಕೆ ಹೋಗೋದು ಅಂತಾನ ? ಯುದ್ದಕ್ಕಿಂತ ಮುಂಚೆ ನಾವಿವತ್ತು ಯುದ್ದವನ್ನ ಸಂಭಾಳಿಸೋ ಸ್ಥಿತಿಲಿ ಇದಿವಾ ಅನ್ನೋದು ಮುಖ್ಯ ಅಲ್ಲವಾ ಸರ್ , ಕಾರ್ಗಿಲ್ ಯುದ್ದ ಆಯ್ತಲ್ಲ ಅದರ ಹಿಂದೆ ನಮ್ಮ ನಾಯಕರ ಎಷ್ಟು ಮೂರ್ಖತನ ಇತ್ತು ಗೊತ್ತಲ್ಲ,ನಾವು ಯುದ್ದ ಗೆದ್ದ್ವಿ ಆದ್ರೆ ಸತ್ತ ಯೋದರ ಲೆಕ್ಕ ಅಲ್ಲೇ ಎಲ್ಲೋ ಕಳೆದು ಹಾಕಿ ಬಿಟ್ಟರಲ್ಲ . ನಿಜ ನಾವು ಭಯೋತ್ಪಾದಕರನ್ನ ಮಟ್ಟ ಹಾಕಲೇಬೇಕು ,ಪಾಕಿಸ್ತಾನವನ್ನ ನಮ್ಮ ತಂಟೆಗೆ ಬರದೇ ಇರುವ ಹಾಗೆ ನೋಡಿಕೋಬೇಕು ಆದ್ರೆ ಅದಕೆಲ್ಲ ಯುದ್ದನೇ ಆಗಬೇಕು ಅಂತಿರಾ? ನಿಮಗೆ ಗೊತ್ತಿರಲಿ ಇಂಡಿಯಾ -ಪಾಕಿಸ್ತಾನದ ಗಡಿಯಲ್ಲಿ ಮಿತಿ ಮೀರಿದ ಮಾದಕವಸ್ತು ಸಾಗಣಿಕೆ ಆಗುತ್ತೆ , ಅದಕ್ಕೆ ನಮ್ಮ ಬಿಎಸ್ಎಫ್ ಯೋಧರ ಲಂಚಗುಳಿತನ ವರವಾಗಿದೆ, ಯಾವ ಕಳ್ಳದಾರಿಗಳನ್ನು ಮಾದಕವಸ್ತು ವ್ಯಾಪಾರಿಗಳು ಬಳಸುತ್ತಾರೋ ಅದನ್ನೇ ಭಯೋತ್ಪಾದಕರು ಬಳಸಿ ಒಳನುಗ್ಗುತ್ತಾ ಇದ್ದಾರೆ, ಇದು ಪಂಜಾಬ್, ರಾಜಸ್ತಾನದಲ್ಲಿ ಅತೀ ಹೆಚ್ಚು. ಇಂತ ವಿಷಯಗಳಿಗೆ ನಮ್ಮವರು ತಲೇನೆ ಕೆಡಿಸ್ಕೊಳಲ್ಲ .

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

ವೀರೋಚಿತ ನಿರ್ಧಾರ ಅಂದ್ರೆ ಎದ್ದು ಬಿದ್ದು ಯುದ್ಧಕ್ಕೋಗೋದು ಅಂತಲ್ಲ ಕಣ್ರೀ, ಹಾವು ಕಚ್ಚೋದಕ್ಕೂ, ಭುಸುಗುಡೋದಕ್ಕೂ ಇರೋ ವ್ಯತ್ಯಾಸವೇ ಇಲ್ಲಿ ಕೂಡಾ ಇರೋದು, ಆದ್ರೆ ನಮ್ಮ ದುರಾದೃಷ್ಟ ಅಂದ್ರೆ ಕಚ್ಚೋದ್ ಬಿಡಿ, ಭುಸುಗುಡೋಕ್ಕೂ ತಾಕತ್ತಿಲ್ದೋರು ಸರ್ಕಾರ ನಡೆಸ್ತಿದ್ದಾರೆ. ಇನ್ನು ಪಾಕಿಸ್ತಾನಕ್ಕಿವ್ರು ಬುದ್ಧಿ ಕಲ್ಸೋದೆಲ್ಬಂತು!! ಅದೆಲ್ಲಾ ಕನ್ಸು. ಇನ್ನೂ ಅದೆಷ್ಟು ೨೬/೧೧ ಬರ್ತಾವೋ, ಅದಿನ್ನೆಷ್ಟು ಸಂದಿಪನಂಥವ್ರು ಬಲಿಯಾಗ್ತಾರೋ, ಗೊತ್ತಿಲ್ಲ.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

haadu_kaadu's picture

ಏನ್ಮಾಡೋದು ಸರ್, ನಮ್ಮಂತ ವೀರರ ಸರದಿ ಇನ್ನೂ ಬಂದಿಲ್ಲ ದೇಶ ಆಳೋಕೆ, ಇಲ್ಲದ್ರೆ ಒಂದು ತೀರ್ಮಾನ ಮಾಡೇ ಬಿಡಬಹುದಿತ್ತು .. ( ಕ್ಷಮಿಸಿ ಸರ್, ನಮ್ಮನ್ನ ನಾವು ಅಪಹಾಸ್ಯ ಮಾಡಿಕೊಳ್ಳುವುದರ ಹೊರತು ಬೇರೆ ದಾರಿನೇ ಇಲ್ಲ, ಈ ವ್ಯವಸ್ಥೆ ಹಾಗಿದೆ )

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

uniquesupri's picture

ನಿಮ್ಮ ವಾದದ ಸರಣಿ ತುಂಬಾ ಚೆನ್ನಾಗಿದೆ.
ಕೇವಲ ಭಾವಾವೇಶದ ಭಾಷಣದಿಂದ ಒಂದಿಷ್ಟು ಗದ್ದಲ ಶುರುವಾಗುತ್ತೆ, ಗಂಟಲು ಒಣಗುತ್ತದೆ ಅಷ್ಟೇ.
ಶೇಕಡಾ ನೂರರಷ್ಟು ಮತದಾನವಾದರೂ ಸಹ ಪರಿಸ್ಥಿತಿಯಲ್ಲಿ ಬದಲಾವಣೆಯೇನು ಆಗದು. ಬಿಜೆಪಿ ಸರಕಾರವಿದ್ದಾಗ, ಕಮ್ಯುನಿಸ್ಟರು ಸರಕಾರದಲ್ಲಿದ್ದಾಗ, ಜನತಾ ಪರಿವಾರ ಸರಕಾರ ರಚಿಸಿದಾಗ ಯಾವಾಗ ನಾವು ಇದು ಶ್ರೇಷ್ಠ ಸರಕಾರ ಎಂದುಕೊಂಡಿದ್ದೇವೆ?
We get what we deserve ಎನ್ನುವುದು ನಮಗೆ ಮನದಟ್ಟಾಗಬೇಕಷ್ಟೇ.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

haadu_kaadu's picture

ನಿಜ ಸುಪ್ರೀತ್ , ಮಿತಿ ಮೀರಿದ ಆಶಾವಾದ ಉಪಯೋಗಕ್ಕೆ ಬರುವುದಿಲ್ಲ . ನಾನೂ ಒಂದು ಪಕ್ಷದ ಕಾರ್ಯಕರ್ತನಾಗಿ ಎಲೆಕ್ಷನ್ ಬೂತ್ನಲ್ಲಿ ಕಾರ್ಯನಿರ್ವಹಿಸಿದ್ದೇನೆ. ಮಹಾನ್ ಅರಿಭಯಂಕರ ನಾಯಕರ, ಅವರ ಚೇಲಾಗಳ ಅಪರಾವತಾರಗಳ್ಳನ್ನು ನೋಡಿ ಅಸಹ್ಯ ಮೂಡಿದ್ದು ಬಿಟ್ಟರೆ ನಾನು ಮಾಡಲಿಕ್ಕೆ ಆದದ್ದು ಏನೂ ಇಲ್ಲ .

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

haadu_kaadu's picture

ಅಮ್ಮಾವ್ರ ಗುಲಾಮ್ರು ? ಇದು ನಮ್ಮ ಮನಸ್ಥಿತಿಯ ಬಿಂಬ ಅಷ್ಟೇ , ಹೆಣ್ಣು ತೆಗೆದುಕೊಳ್ಳೋ ನಿರ್ಧಾರವನ್ನ ತುಚ್ಚವಾಗಿ ಕಾಣೋ, ಅದನ್ನ ಹೀಯಾಳಿಸೋ ನುಡಿಗಟ್ಟಿನ ಪ್ರಯೋಗ ಯಾಕೋ ಸರಿ ಅನ್ನಿಸಲಿಲ್ಲ ಸರ್, ಅದು ಎಲ್ಲೋ ಗಂಡೇ ಮೇಲು ಅನ್ನೋದನ್ನ ಸೂಚ್ಯವಾಗಿ ಬಿಂಬಿಸುತ್ತೆ. ನಿಮ್ಮ ಪ್ರಕಾರ ಕಾಂಗ್ರೆಸ್ಸಿಗರೆಲ್ಲ ಅಮ್ಮಾವ್ರ ಗುಲಾಮರಾದರೆ , ಏ ಐ ಡಿ ಎಂ ಕೆ , ಬಿ ಎಸ್ ಪಿ , ತೃಣ ಮೂಲ ಕಾಂಗ್ರೆಸ್ ನಲ್ಲಿ ಇರೋ ಜನ , ಅಷ್ಟೇ ಯಾಕೆ ನಮ್ಮ ಸುಷ್ಮಕ್ಕನ ಮಕ್ಕಳು (?) ಎಲ್ಲಾ ಅದೇ ಅಲ್ಲ್ವಾ ಸರ್ .

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

ಎಲ್ಲಾರೂ ಅದೇ ಕಣ್ರೀ, ಅಮ್ಮಾವ್ರ ಗುಲಾಮ್ರು ಅನ್ನೋದು ನಮ್ಮ ಮನಸ್ಥಿತಿಯ ಬಿಂಬ ಅಲ್ಲ, ಇಂದಿನ ವಾಸ್ತವತೆಯ ಪ್ರತಿಬಿಂಬ! ಫಿರೋಜ್ ಗ್ಯಾಂಡಿಯನ್ನು ಮದುವೆ! ಆದ ಇಂದಿರಮ್ಮ ಕ್ರಮೇಣ ಅದನ್ನ "ಗಾಂಧಿ" ಅಂತ(ಕೆಲವು ದೇಶಭಕ್ತ ಕಾಂಗ್ರೆಸ್ಸಿಗರ ವಿರೋಧದ ಹೊರತಾಗಿಯೂ)ಬದ್ಲಾಯ್ಸಿದ್ದು ಎಲ್ಲಾ ಕಾಂಗ್ರೆಸ್ಸಿಗರಿಗೂ ಗೊತ್ತು! ಇವತ್ತು ಹಳ್ಳಿಯ ಮುಗ್ಧ ಜನರನ್ನು ಕೇಳಿ ನೋಡಿ, ಆಯಮ್ಮ ಯಾರು ಅಂತ, ಮಹಾತ್ಮ ಗಾಂಧಿಯ ಮಗಳು ಅಂತಾರೆ, ಇದೆಂಥಾ ದ್ರೋಹ! ಇಡೀ ದೇಶಕ್ಕೇ "ಮಕ್ಮಲ್ ಟೋಪಿ" ಹಾಕ್ಬಿಟ್ರಲ್ಲಾ! ಆದರೂ ಸೋನಿಯಾ ಮೇಡಂಗೆ ಬಹು ಪರಾಕ್ ಹೇಳಿಕೊಂಡು ಭಟ್ಟಂಗಿಗಳಂತೆ ಬಾಳುತ್ತಿದ್ದಾರಲ್ಲಾ, ಅವರಿಗೆ ನಮ್ಮ ಜನ ವೋಟ್ ಹಾಕಿ ಗೆಲ್ಲಿಸ್ತಿದ್ದಾರಲ್ಲಾ, ೧೦೦% ಮತದಾನ ನಡೆದಿದ್ರೆ ಹೀಗಾಗ್ತಿರಲಿಲ್ಲ ಅಂತ ನನ್ನ ಅಭಿಪ್ರಾಯ. ಇನ್ನು ನೀವು ಹೆಸರಿಸಿರೋವ್ರೆಲ್ಲಾ ಮಾಜಿ ಕಾಂಗ್ರೆಸ್ಸಿಗರೇ, ಈ ಭಟ್ಟಂಗಿತನ ಅವರ ರಕ್ತದಲ್ಲಿ " ಇಂದಿರಮ್ಮನ" ಕೃಪೆಯಿಂದ ಹರಿದು ಬಂದ್ಬಿಟ್ಟಿದೆ. ಇಡೀ ಭಾರತದ ರಾಜಕೀಯವನ್ನ ಕುಲಗೆಡಿಸಿದ ಕುಖ್ಯಾತಿ ಆಯಮ್ಮಂದು. ಈಗಲೂ ನಮ್ಮ ವಿದ್ಯಾವಂತರು ಎಚ್ಚೆತ್ತುಕೊಳ್ದಿದ್ರೆ, ಸೋನಿಯಾ ಮೇಡಂ ಸಡ್ಡು ಹೊಡೆದು ಹೇಳಿರುವಂತೆ ರಾಹುಲ್ ನೆಹರೂನನ್ನ ಮತ್ತೊಬ್ಬ ಗಾಂಧಿಯ ಕುಡಿಯಾಗಿಸಿ, ಈ ದೇಶದ ಕಣ್ಮಣಿಯಾಗಿ ಮಾಡೋದು ೧೦೦% ಖಚಿತ.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

haadu_kaadu's picture

ಸರ್ ಏ ಐ ಡಿ ಎಂ ಕೆ , ಬಿ ಎಸ್ ಪಿ ಯಲ್ಲಿ ಮಾಜಿ ಕಾಂಗ್ರೆಸ್ಸಿಗರು ಇಲ್ಲವೇ ಇಲ್ಲ ಅನ್ನೋ ಅಷ್ಟು ಕಡಿಮೆ. ಇನ್ನೂ ರಾಹುಲ್ ನ ವಿಚಾರ ..ತನ್ನ ಯೋಗ್ಯತೆ ಆಧಾರದ ಮೇಲೆ ಪ್ರಧಾನಿ ಆದ್ರೆ ತಪ್ಪೇನಿದೆ? ಕೇವಲ ಆತ ನೆಹರು ಕುಟುಂಬದ ಕುಡಿ ಅಂತ ವಿರೋದಿಸೋದು ಎಷ್ಟು ಮಾತ್ರ ಸರಿ, ಅದು ನಮ್ಮ ದೇವೇಗೌಡರ ಸೊಸೆ ಅಂದ ಮಾತ್ರಕ್ಕೆ ಮದುಗಿರಿಲಿ ಎಲೆಕ್ಷನ್ ಗೆ ನಿಲ್ಲಬಹುದಾ ಅಂತ ಕೇಳಿದ ಬಟ್ಟಂಗಿ ಪತ್ರಿಕೆಗಳ ಮುಂದುವರಿದ ಪ್ರಶ್ನೆಯ ಬಾಗ ಅನ್ನಿಸುತ್ತೆ. ಎಡಿಯೂರಪ್ಪನ ಮಗ ಸಿಹಿಮೊಗ್ಗೆಯಲ್ಲಿ ಯಾವ ಮಹಾನ ನಾಯಕ ಅಂತ ಟಿಕೆಟ್ ಸಿಕ್ಕಿ ಗೆದ್ದು ಬಿಟ್ಟ ಸರ್ ? ಕೇವಲ ಕಾಂಗ್ರೆಸ್ ಅದಕ್ಕೆ ನಮಗೆ ರಾಹುಲ್ ಬೇಡ , ಆತ ನೆಹರು ಮರಿ ಮಗ ಅದಕ್ಕೆ ಅವ್ನು ಬೇಡ ಅನ್ನೋದಾದರೆ ಆತನಿಗೆ ಆತನ ವ್ಯಕ್ತಿತ್ವ ಇಲ್ಲವಾ ? ನಿಜ ಆತನ ಸುತ್ತಣ ಪರಿಸರ ಆತನಿಗೆ ಬಹಳಷ್ಟು ಅನುಕೂಲಕರವಾಗಿದೆ, ನಟನೊಬ್ಬನ ಮಗ ಬಹುಪಾಲು ನಟನೇ ಆಗುವಂತೆ ( ನಮ್ಮ ದರ್ಶನ್, ಅಪ್ಪು, ಶಿವಣ್ಣ, ಜಗ್ಗೇಶನ ಮಗ ಇವರಿಗೆಲ್ಲ ಇರುವ ಸಂಪರ್ಕಗಳು ತಮ್ಮ ತಮ್ಮ ತಂದೆಯರ ಬಳುವಳಿ, ಕಡೇ ಪಕ್ಷ ೮೦% ) , ಆದರೆ ಆತ ಅರ್ಹತೆ ಇಲ್ಲದೆ ಸುಲಭವಾಗಿ ಪ್ರಧಾನಿಯಾಗಲಾರ , ಆದರೂ ಆ ಪದವಿಯನ್ನು ನಿಭಾಯಿಸಲಾರ ಅತ್ಯುತ್ತಮ ಉದಾಹರಣೆ ಬೇಕಿದ್ದರೆ ನಮ್ಮ ಮುಖ್ಯಮಂತ್ರಿ. ರಾಹುಲ್ ಇಂದಿರಮ್ಮನ ಮೊಮ್ಮಗ , ಆಕೆ ರಾಜಕಾರಣ ಕುಲಗೆಡಿಸಿದಳು ಅದಕ್ಕೆ ಆಕೆಯ ಮೊಮ್ಮಗ ಪ್ರಧಾನಿ ಅಭ್ಯರ್ಥಿ ಆಗುವುದು ಬೇಡ ಅನ್ನೋದು ಸರಿಯಾದ ಸಮರ್ಥನೆ ಅಲ್ಲ ಅನ್ನೋದು ನನ್ನ ಅನಿಸಿಕೆ. ಜನ ಬಿಡಿ ಸರ್ ಏನ್ ಬೇಕಿದ್ರೂ ನಂಬುತ್ತಾರೆ ಉದಾಹರಣೆಗೆ ವಾಜಪೇಯಿಯವರು ಸ್ವತಃ ತಾವು ಭ್ರಂಮಚಾರಿ ಅಲ್ಲ ಅವಿವಾಹಿತ ಮಾತ್ರ ಅಂತ ಹೇಳಿದರೂ ಅವರು ಆಜನ್ಮ ಭ್ರಂಮಚಾರಿ ಅಂತ ೯೫ % ಜನ ಹಾಯ್ ಬೆಂಗಳೂರು ಮೇಲೆ ಆಣೆ ಮಾಡಿ ಹೇಳ್ತಾರೆ ನಮ್ಮೂರಿನಲ್ಲಿ. ಆದ್ರೆ ಅಕ್ಷರಸ್ತರಾದ ನಾವಾದರೂ ಏನು ಕಮ್ಮಿನಾ ಎರೆಡು ಪೇಪರ್ನಲ್ಲಿ ಶೋಬಾ -ಎಡಿಯೂರಪ್ಪನ ಬಗ್ಗೆ ಬಂತು ಅಂತ ಅವ್ರು ಬದುಕಿ ಮಣ್ಣಾದ ಮೇಲೂ ಮಾತಾಡಲ್ವ .

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

ಅದು ಹಾಗಲ್ಲಾ ಸ್ವಾಮಿ, ಇಂದಿನ ಕುಲಗೆಟ್ಟ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದು ಆ ಇಂದಿರಮ್ಮ. ಅದಲ್ಲದೆ ವಂಶಪಾರಂಪರ್ಯ ಆಳ್ವಿಕೆಗೂ ದಾರಿ ತೋರಿಸಿ ಕೊಟ್ಟಿದ್ದು ಆಕೆಯೇ. ಇತಿಹಾಸ ಎಂದೂ ಕ್ಷಮಿಸದ ತಪ್ಪುಗಳನ್ನು ಮಾಡಿ ಕೊನೆಗೆ ಗುಂಡೇಟಿಗೆ ಬಲಿಯಾಗಿಬಿಟ್ಲು. ಈಗ ಇಷ್ಟೆಲ್ಲ ಮುಂದುವರೆದ, ವಿದ್ಯಾವಂತ ಜನ ಹೆಚ್ಚಿರುವಾಗ ಮತ್ತೆ ಅದೇ ಹಳಸಲು ವಂಶ ಪಾರಂಪರ್ಯ ಆಡಳಿತ ಏಕೆ? ಈಗ ಗೆದ್ದಿರುವ ರಾಜಕಾರಣಿಗಳ ಮಕ್ಕಳು ಸ್ಪರ್ಧಿಸಿದ್ದ ಚುನಾವಣೆಗಳಲ್ಲಿಯೂ ಮತದಾನ ಕೇವಲ ೪೫-೫೦% ಆಸುಪಾಸಿನಲ್ಲಿದೆ. ವಿದ್ಯಾವಂತರು ಅನ್ನಿಸಿಕೊಂಡವರೆಲ್ಲ ಯೋಚಿಸಿ, ಯೋಗ್ಯರಿಗೆ ಮಾತ್ರ ಮತ ಚಲಾಯಿಸಿದ್ದಿದ್ದರೆ ಅವರು ಗೆಲ್ಲಲಾಗುತ್ತಿರಲಿಲ್ಲ, ಅಲ್ಲವೇ??

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

haadu_kaadu's picture

ಸರ್ , ಇಂದಿರಮ್ಮ ವಂಶಪಾರಂಪರ್ಯ ಆಡಳಿತಕ್ಕೆ ಮುನ್ನುಡಿ ಬರೆದಿದ್ದು ಒಪ್ಪಿಕೊಳ್ಳೋಣ ಹಾಗಂತ ಮಿಕ್ಕವರೂ ಅದನ್ನೇ ಪಾಲಿಸಿದ್ದು ಯಾಕೆ ? ಇಲ್ಲಿ ಇಂದಿರಮ್ಮನ ಬಟ್ಟಂಗಿತನಕ್ಕಿಂತ ಮಕ್ಕಳೆಂಬ ಮಮಕಾರ, ತನ್ನ ನಂತರ ತನ್ನವರೇ ಆಳಲಿ ಅನ್ನೋ ಮನುಜ ಸಹಜ ಸ್ವಾರ್ಥ ಅಷ್ಟೇ , ಲಾಲು ಉದಾಹರಣೆನ ನೋಡಿ ಆತ ಇಂದಿರಮ್ಮನ ಪಕ್ಕ ವಿರೋದಿ ಆಕೆಯ ಎಲ್ಲಾ ಅಭಿಪ್ರಾಯಗಳನ್ನ ಲೇವಡಿ ಮಾಡಿದವನು, ಆತ ತನ್ನ ಸೀಟಿಗೆ ಹೆಂಡ್ತಿನ ಕೂರಿಸಲಿಲ್ಲವೇ . ಇನ್ನು ಅಕ್ಷರಸ್ತರು , ರಾಜಕೀಯಕ್ಕೆ ಬಂದರೆ ? ಕ್ಷಮಿಸಿ ಸರ್ ೯೦ % ಜನ ನಾವು ತುಂಬಾ ಒಳ್ಳೆಯವರು,ಪಲಾಯನವಾದಿಗಳು, ಮುಕೇಡಿಗಳು ಹಾಗೂ ಅಷ್ಟೇ ದುರ್ಬಲರು. ನಾನು ಬಿ ಇ ಓದುತ್ತಿದ್ದ ಹಾಸ್ಟೆಲ್ಲಿನಲ್ಲಿ ಇದ್ದದ್ದು ನಾನೂರಕ್ಕೂ ಹೆಚ್ಚು ಜನ , ಎಲೆಕ್ಷನ್ ದಿನ ಮುಕ್ಕಾಲು ಪಾಲು ಹುಡುಗರು ಸಾರಸಗಟಾಗಿ ಒಬ್ಬನಿಗೆ ಮತ ಹಾಕಿದರು, ರಾಜಕೀಯದಲ್ಲಿ ಆತ ಯಾರು ,ಆತನ ಹಿನ್ನಲೆ ಏನು, ಎದುರಾಳಿಗಳ ಹಿನ್ನಲೆ ಏನೂ ಗಮನಿಸಲಿಲ್ಲ ಬರೀ ಬಟನ್ ಒತ್ತೋ ಆಟ ಅಷ್ಟೇ, ಕಾರಣ ಆತ ಅವ್ರ ಜಾತಿ, ಜೊತೆಗೆ ನಮ್ಮದು ಜಾತಿ ಒಂದರ ಮಠ ನಡೆಸುತ್ತಿದ್ದ ಕಾಲೇಜ್ , ಜಗದ್ಗುರುಗಳ ( ಅವರ ಜಗತ್ತು ೩೦ ಕಿ ಮಿ ಅಗಲ, ೪೫ ಕಿ ಮಿ ಉದ್ದ ಅಷ್ಟೇ ) ಮಾತೇ ವೇದ ವಾಕ್ಯ . ಮತ ಪೆಟ್ಟಿಗೆಯ ಮುಂದೆ ನಿಂತಾಗ 'ಮತ' , 'ಮಠ' , 'ಮಾಲು( ಹೆಂಡ, ಹಣ, ನಂಗಾ ನಾಚ್ ಸಮೇತ )' ಕಣ್ಣ ಮುಂದೆ ಕುಣಿವಾಗ ಒಳ್ಳೆಯ ಅಭ್ಯರ್ಥಿಯ ಗೆಲುವು !!!? ಜನಾ .ರೆಡ್ಡಿಯ ಮೇಲೆ ಆಣೆ ..

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

mpneerkaje's picture

ನಾನು ಏನು ಓದಿದ್ದೀನಿ ಎಂಬುದು ಮುಖ್ಯ ಅಲ್ಲ. ನೀವು ಕೇಳಿದ್ದಕ್ಕೆ ಹೇಳ್ತಿದ್ದೀನಿ - ನಾನು ಓದಿರೋದು MSc in Electroincs. ಇಷ್ಟು ವಿದ್ಯೆ ಸಾಕು ಅಂದ್ಕೊಂಡಿದೀನಿ. ಇನ್ನು ಮತದಾನದ ಬಗ್ಗೆ - ಕಳೆದ ಬಾರಿ ಮತದಾನದಲ್ಲಿ ಬೆಂಗಳೂರಿನಿಂದ ನಮ್ಮ ಊರಾದ ಮಂಗಳೂರಿಗೆ ಬಂದು ಮತ ಚಲಾಯಿಸಿದೀನಿ. ಆದರೂ ಏನು ಬಂತು ಮಹಾ? ಮತದಾನದಿಂದ ದೇಶ ಉಧ್ಧಾರ ಆಗುತ್ತೆ ಅಂತ ನೀವು ಅಂದ್ಕೊಂಡಿದ್ರೆ ಅದು ಕೇವಲ ಕನಸು. ಯಾಕೆಂದ್ರೆ ನೀವು ಯಾವುದೇ ಸಂದರ್ಭದಲ್ಲೂ ೬೦ ಶೇ ಕ್ಕಿಂತ ಹೆಚ್ಚು ಮತದಾನವಾಗುವುದನ್ನು ನೋಡಲಾರಿರಿ. ಹಾಗು ಇದು ಜಾಸ್ತಿಯಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ ನನಗೆ.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

ನಾನು ದುಬೈನಿಂದ ಬೆಂಗಳೂರಿಗೆ ಬಂದು ಶಂಕರಮಠದ ಪಾರ್ಕಿನಲ್ಲಿ ಸುಮಾರು ಎರಡೂವರೆ ಘಂಟೆ ಸಾಲಿನಲ್ಲಿ ನಿಂತು, ನನ್ನ ಮತದಾರರ ಗುರುತಿನ ಚೀಟಿ ಪಡೆದು ಮತ ಚಲಾಯಿಸಿದೆ. ಆದರೆ ಈ ಸಾರಿ ನಡೆದಿದ್ದು ಕೇವಲ ೫೫% ಮತದಾನ, ಉಳಿದ ೪೫% ಜನ ಅದೆಲ್ಲಿ ಹೋದರೋ ಗೊತ್ತಿಲ್ಲ, ಪ್ರಜಾಪ್ರಭುತ್ವದಲ್ಲಿ ನಮಗಿರುವುದು ಮತದಾನವೊಂದೇ, ಅದು ನಮ್ಮ ಹಕ್ಕು, ಅದನ್ನು ನಾವು ಸಂಪೂರ್ಣವಾಗಿ ಚಲಾಯಿಸಿದರೆ ಯೋಗ್ಯರ ಆಯ್ಕೆ ಸಾಧ್ಯ, ಉತ್ತಮ ಸರ್ಕಾರವೂ ಸಾಧ್ಯ. ಆದರೆ ಮತದಾನದ ಸಮಯದಲ್ಲಿ ಜಗವನ್ನೇ ಮರೆತು ವಿಹಾರ ಹೊರಟು ಬಿಡುತ್ತಾರಲ್ಲಾ? ಇವರಿಗೇನನ್ನೋಣ ??

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

yuvapremi's picture

ಅಯ್ಯೊ ಬಿಡ್ರಿ, ಇವೆಲ್ಲ ವ್ಯರ್ಥದ ಮಾತು. ನಮಗೆ ಅಂತ ಬುದ್ದಿ ಇದ್ದಿದ್ರೆ , ನಾವು ಪ್ರಜ್ಞೆ ಇರುವ ಪ್ರಜೆಗಳಾಗಿದ್ರೆ ನಮ್ಮ ದೇಶ ಈ ಹೀನ ಸ್ತಿತಿ ತಲುಪ್ತಾಇರ್ಲಿಲ್ಲ.

ಎಷ್ಟು ಜನ ಸತ್ರೆ ಏನು, ಜನಕ್ಕೆ ಬರವಾ ನಮ್ ದೇಶದಾಗೇ ??

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

-----ಎಷ್ಟು ಜನ ಸತ್ರೆ ಏನು, ಜನಕ್ಕೆ ಬರವಾ ನಮ್ ದೇಶದಾಗೇ ??-----ಸೂಪರ್ ಡೈಲಾಗ್ ಕಣ್ರೀ, ಇದಕ್ಕಿಂತ ನಿದರ್ಶನ ಬೇಕೇ? ನಂ ದೇಶ ಯಾಕಿಂಗಾಗಿದೆ ಅನ್ನೋಕ್ಕೆ!!

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

asuhegde's picture

ಮಂಜುನಾಥ್,

ಕಳೆದ ವರುಷ ನಡೆದದ್ದು ನಿಜಕ್ಕೂ "ಬಲಿದಾನ". ಅವರೆಲ್ಲರ ಬಲಿಯ ದಾನ ನಡೆಯಿತು. ಯಾರೂ ಸ್ವಯಿಚ್ಛೆಯಿಂದ ನೀಡಿದ ದಾನ ಅಲ್ಲ.
ಯಾಕಂದ್ರೆ, ನಮ್ಮ ಸರ್ಕಾರ ಮತ್ತು ವ್ಯವಸ್ಥೆಗಳ ಕಾರ್ಯ ವೈಫಲ್ಯದಿಂದ ಅವರೆಲ್ಲಾ ಬಲಿಯಾದರು.

ಈ ಎಲ್ಲಾ ಸಮಸ್ಯೆಗಳಿಗೆ ಭಾರತ ಸರಿಯಾದ ಪರಿಹಾರ ಕಂಡುಕೊಳ್ಳಬೇಕಾದರೆ, "ಎರಡು ಪಕ್ಷಗಳ ವ್ಯವಸ್ಥೆ" ಜಾರಿಗೆ ಬರಬೇಕು ಮತ್ತು ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು ದೊರೆಯಬೇಕು. ಚುನಾಯಿತ ಪ್ರತಿನಿಧಿಗಳನ್ನು ವಾಪಸು ಕರೆಸುವ ಪದ್ದತಿಯೂ ಜಾರಿಗೆ ಬರಬೇಕು.

-ಆತ್ರಾಡಿ ಸುರೇಶ್ ಹೆಗ್ಡೆ.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

haadu_kaadu's picture

ಸರ್ , ನಿಜವಾದ ಸ್ವಾತಂತ್ರ ನಮ್ಮ ಮುಂದಿರುವ ಆಯ್ಕೆಗಳ ಸಂಖ್ಯೆಯ ಮೇಲೆ ಅವಲಂಬಿಸಿದೆ. ಒಪ್ಪಲೇಬೇಕು , ಒಪ್ಪಲ್ಲೇಬಾರದು ಎನ್ನುವ ಎರಡೇ ಆಯ್ಕೆ ಜೀವನವನ್ನು ಇನ್ನಷ್ಟು ದುಸ್ತರಗೊಳಿಸುತ್ತವೆ. ಇಡೀ ಜಗತ್ತನ್ನು ರಷ್ಯ ಅಥವಾ ಅಮೆರಿಕ ಬಣ ಮಾಡಲು ಹುನ್ನಾರ ನಡೆಯುತ್ತಿದ್ದಾಗ ತಲೆಯೆತ್ತಿ "ಆಲಿಪ್ತರು" ಅಂತ ಹೇಳಿದ ದೇಶದವರು ನಾವು.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

ನಿಜ ಸುರೇಶ್, ಅದು ನಿಜಕ್ಕೂ ಬಲಿಯ ದಾನವೇ! ಎರಡು ಪಕ್ಷಗಳಿಗಿಂತ ಬಹು ಪಕ್ಷ ವ್ಯವಸ್ಥೆಯೇ ಒಳ್ಳೆಯದು ಅಂತ ನನ್ನ ಅಭಿಪ್ರಾಯ, ಆದರೆ ಚುನಾಯಿತ ಪ್ರತಿನಿಧಿಗಳನ್ನು ಅವರ ಕಾರ್ಯ ವೈಖರಿಯ ಆಧಾರದ ಮೇಲೆ ಮುಂದುವರೆಸುವ, ಅಯೋಗ್ಯರನ್ನು ಉಗಿದು ವಾಪಸು ಕರೆಸುವ ಪದ್ಧತಿ ಬಂದರೆ ಬಹಳ ಚನ್ನಾಗಿರುತ್ತದೆ, ಆಗ ಪರಿಸ್ಥಿತಿ ಸುಧಾರಿಸಬಹುದು. ಆದರೆ ಬೆಕ್ಕಿಗೆ ಘಂಟೆ ಕಟ್ಟುವವರ್ಯಾರು??

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

PrasannAyurveda's picture

ಮತದಾನ ಇರುವುದು ಯೋಗ್ಯರ ಆಯ್ಕೆ ಮಾಡಲಿಕ್ಕೆ, ಇದು ನಾನು ತಿಳಿದುಕೊಂಡಿರುವುದು... ಆಯ್ಕೆ ಮಾತ್ರ ಕಣದಲ್ಲಿ ಇರುವವರಲ್ಲಿ ಒಬ್ಬರನ್ನು ಮಾಡಬೇಕು ತಾನೇ? ಯೋಗ್ಯರೇ ಕಣದಲ್ಲಿ ಇಲ್ಲದಿರುವಾಗ ಏನು ಮಾಡಿ ಏನು ಪ್ರಯೋಜನ ಸ್ವಾಮಿ? "ಹಾಳೂರಿಗೆ ಉಳಿದವನೆ ನಾಯಕ" ಅಂತೆ ! ಇಂದಿನ ರಾಜಕೀಯ ಎಷ್ಟು ಭ್ರಷ್ಟ - ಮಲಿನ ಆಗಿದೆ ಅಂದರೆ, ಯಾರಾದರು ಸಭ್ಯ, ಸಜ್ಜನ, ವಿದ್ಯಾವಂತರನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಕೇಳಿ ನೋಡಿ ತಿಳಿಯುತ್ತದೆ (ಅಂತಹವರು ಸ್ಪರ್ಧಿಸಿದರೆ ನಾನು ಎಲ್ಲಿದ್ದರೂ ಬಂದು ಮತ ಚಲಾಯಿಸಲು ಸಿದ್ಧ)...ಇಲ್ಲವಾದಲ್ಲಿ ಮತ್ತೆ ಯಾರನ್ನು ಆಯ್ಕೆ ಮಾಡಿದರೆ ಏನಂತೆ? ಎಲ್ಲರೂ ಕಳ್ಳರೇ, ಒಬ್ಬ ದೊಡ್ಡ ಕಳ್ಳ, ಇನ್ನೊಬ್ಬ ಸ್ವಲ್ಪ ಕಡಿಮೆ ಅಷ್ಟೇ :)

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

ಸರಿ, ಹಾಗಾದರೆ ನಿಮ್ಮಂತೆ ಎಲ್ಲರೂ ಕಳ್ಳರೇ ಅಂತ ಎಲ್ರೂ ಸುಮ್ನಿದ್ರೆ ಪರಿಹಾರ ಏನು? ಮುಂದಿನ ತಲೆಮಾರಿಗೆ ನಮ್ಮ ಕೊಡುಗೆ ಏನು? ಭ್ರಷ್ಟರ ಕೈಯಲ್ಲೇ ಅಧಿಕಾರವುಳಿದು, ವಿಶ್ವದಲ್ಲೇ ಅತ್ಯಂತ ಭ್ರಷ್ಟ ರಾಷ್ಟ್ರ ಅನ್ನಿಸಿಕೊಂಡ ದೇಶದ ಪ್ರಜೆಗಳಾಗಿರುವುದೇ?? ಕೈ ಕಟ್ಟಿ ಸುಮ್ಮನೆ ಕೂರುವುದರಿಂದ ಏನೇನೂ ಉಪಯೋಗವಿಲ್ಲವಲ್ಲ??

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

PrasannAyurveda's picture

ಸರಿ ಹಾಗಾದ್ರೆ ಏನು ಪರಿಹಾರ ಅಂತೀರ? ಮುಂದಿನ ಚುನಾವಣೆಲಿ ನೀವು ನಿಲ್ತೀರ? ಗೆದ್ದರೆ ಒಳ್ಳೆ ಕೆಲಸ ಮಾಡ್ತೀರ? ಇಲ್ಲ ನಾನು, ನೀವು ನಿಂತರೆ ಗೆಲ್ಲಕ್ಕೆ ದುಡ್ಡು ತುಂಬಾ ಬೇಕು, ಸಾಧ್ಯ ಇಲ್ಲ ಅಂತೀರ? ಬದಲಾವಣೆ ತರೋದಕ್ಕೆ ನನ್ನ ಸಹಕಾರ ಖಂಡಿತ ಇದೆ ಸಾರ್. ಬಹಳಷ್ಟು ಜನರೂ ಜೊತೆಯಾಗಬಹುದು ನೋಡಿ...

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

ಹೌದು, ಚುನಾವಣೆಗೆ ನಿಂತು ಗೆಲ್ಲೋದಿಕ್ಕೆ ತುಂಬಾ ದುಡ್ಡು ಬೇಕು, ಯಾಕಂದ್ರೆ ನಮ್ಮ ಅವಿದ್ಯಾವಂತರಿಗೆ, ಕೂಲಿ ಕಾರ್ಮಿಕರಿಗೆ ಹೆಂಡ, ಬಟ್ಟೆ, ಸೀರೆ, ಹಣ, ಭರ್ಜರಿ ಬಾಡೂಟ ಇವೆಲ್ಲವನ್ನೂ ಕೊಡಿಸಿ, ಅವರನ್ನು ಯಾಮಾರಿಸಿ, ಮತ ಪಡೆಯಬೇಕಾದರೆ, ನೀವು ಹೇಳಿದಂತೆ ತುಂಬಾ ದುಡ್ಡು ಬೇಕು. ಇದುವರೆಗೆ ನಡೆದಿರುವ ಬಹುತೇಕ ಚುನಾವಣೆಗಳಲ್ಲಿ ಸಮಾಜದ ಕೆಳವರ್ಗದವರ ಮತಗಳೇ ನಿರ್ಣಾಯಕ ಪಾತ್ರ ವಹಿಸಿರುವುದು. ವಿದ್ಯಾವಂತರು ಯೋಗ್ಯರನ್ನು ಚುನಾವಣೆಗೆ ನಿಲ್ಲುವಂತೆ ಪ್ರೇರೇಪಿಸಬಹುದಲ್ಲವೇ? ೧೦೦% ಮತದಾನವಾದಾಗ ಅಯೋಗ್ಯರು ಹೇಗೆ ಗೆಲ್ಲುತ್ತಾರೆ? ಆ ಬದಲಾವಣೆ ಇಂದಿನ ಅನಿವಾರ್ಯ ಅವಶ್ಯಕತೆಯಾಗಿದೆ.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

PrasannAyurveda's picture

ಸರಿ ಮಾಡಿ ತೋರಿಸೋಣ ಬನ್ನಿ, ಇತರರನ್ನೂ ಸೇರಿಸಿ... ಸಂಪದಿಗರೆಲ್ಲ ಜೊತೆಯಲ್ಲಿದ್ದೀರಿ ಅಲ್ವ? ಯಾವ 'ಯೋಗ್ಯ'ರನ್ನು ಮನವಿ ಮಾಡೋಣ? ಇಂದೇ ಆರಂಭವಾಗಲಿ ಕೆಲಸ...

ಆದರೆ, ನಿಜ ಹೇಳ್ಬೇಕಂದ್ರೆ ೧೦೦% ಮತದಾನ ಆದ ಮಾತ್ರಕ್ಕೆ 'ಯೋಗ್ಯ'ರೇ ಇಲ್ಲದ ಚುನಾವಣೆಯಲ್ಲಿ ಯೋಗ್ಯರು ಹೇಗೆ ಗೆಲ್ಲುವುದು ಅಂತ ಅರ್ಥವೇ ಆಗ್ತಿಲ್ಲ ನನಗೆ... ಸ್ವಲ್ಪ ವಿವರಿಸಿದ್ದರೆ ಚೆನ್ನಾಗಿತ್ತು...

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

ತುಂಬಿ ತುಳುಕುತ್ತಿರುವ ಭಾರತದ ಜನಸಂಖ್ಯೆಯಲ್ಲಿ "ಯೋಗ್ಯ" ಅಭ್ಯರ್ಥಿಗಳಿಗೆ ಬರವೇ? ಖಂಡಿತ ಸಿಗುತ್ತಾರೆ. ರಾಜಕೀಯ ಪಕ್ಷಗಳಿಂದ ನಿಂತವರನ್ನೇ ಆರಿಸಬೇಕೆಂದೇನೂ ಇಲ್ಲವಲ್ಲ! ಹಾಗೆ ಆರಿಸಿದರೂ ಭ್ರಷ್ಟರಲ್ಲದವರನ್ನು, ಅವರ ಹಿಂದಿನ ಕಾರ್ಯ ಸಾಧನೆಗಳ ಆಧಾರದ ಮೇಲೆ ಗೆಲ್ಲಿಸಬಹುದಲ್ಲವೇ? "ಮನಸ್ಸಿದ್ದಲ್ಲಿ ಖಂಡಿತ ಮಾರ್ಗವೂ ಇದ್ದೇ ಇರುತ್ತದೆ".

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

PrasannAyurveda's picture

ಹೌದು ಸಾರ್, ಬರವಿಲ್ಲ. ಆದರೆ ನನಗೆ ನಿಮ್ಮನ್ನು ಆರಿಸಬೇಕೆನಿಸಿದರೆ ಹಾಗೆ ಮಾಡಲು ಸಾಧ್ಯವಿಲ್ಲವಿಲ್ಲ, ನೀವು ಮೊದಲು ಚುನಾವಣೆಯಲ್ಲಿ ಸ್ಪರ್ಧಿಸಿರಬೇಕಲ್ಲ...

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

nayana_vk's picture

ಸರ್,
ಪ್ರಾರಂಭದಲ್ಲಿ ಎಲ್ಲರೂ ಯೋಗ್ಯ ಅಭ್ಯರ್ಥಿಗಳ ಹಾಗೇ ಕಾಣಿಸುತ್ತಾರೆ. ಆದರೆ ಯಾವಾಗ ಅಧಿಕಾರ ಪ್ರಾಪ್ತವಾಗುತ್ತೋ ಅವರ ಯೋಗ್ಯತೆಯೂ ಕಾಣಸಿಗುವುದಿಲ್ಲ.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

ಚುನಾಯಿತರಾದ ಮೇಲೆ ಅಯೋಗ್ಯರಾದವರನ್ನು ಉಗಿದು ವಾಪಾಸ್ ಕರೆಸುವ ಪದ್ಧತಿ ಬಂದರೆ ತುಂಬಾ ಚೆನ್ನಾಗಿರುತ್ತದಲ್ಲವೇ? ಅದಕ್ಕೂ ನಮ್ಮ ವಿದ್ಯಾವಂತ ಸಮುದಾಯ ತಮ್ಮ ಕುಂಭಕರ್ಣ ನಿದ್ರೆಯಿಂದ ಏಳಲೆಬೇಕಲ್ಲ??

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

uniquesupri's picture

ನನ್ನ ಪ್ರಶ್ನೆ ಸರಳ:
‘ಯೋಗ್ಯ’ ಅಭ್ಯರ್ಥಿ ಎಂದರೆ ಯಾರು? ರಾಜಕೀಯದಲ್ಲಿ ಯೋಗ್ಯತೆ, ಅರ್ಹತೆ ಎಂದರೆ ಯಾವುದು?
ಸರಳವಾಗಿ ವಿವರಿಸಿ.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

ಸುಪ್ರ‍ೀತ್, ಇದು ತುಂಬಾ ಸರಳ, ರಾಜಕೀಯವನ್ನು ಬದಿಗಿಟ್ಟು "ಯೋಗ್ಯ" ಅಂದರೇನು ಅಂತ ಯೋಚಿಸಿ, ಹಾಗೆ ನಮಗೆ ಸಮಾಜದಲ್ಲಿ ಯೋಗ್ಯರಾಗಿ ಕಂಡವರು ಚುನಾವಣೆಗೆ ನಿಲ್ಲಬಾರದು, ನಾವು ಅವರಿಗೆ ಮತದಾನ ಮಾಡಬಾರದು ಅಂತೇನೂ ಇಲ್ಲವಲ್ಲ! ಒಬ್ಬ ವ್ಯಕ್ತಿಯನ್ನು ಸಮಾಜದಲ್ಲಿ "ಯೋಗ್ಯ" ಎಂದು ಕರೆಯಬೇಕಾದರೆ ಏನೆಲ್ಲಾ ಗುಣಗಳು ಅವನಲ್ಲಿರಬೇಕೆಂಬುದನ್ನು ಇಲ್ಲಿ ವಿಶೇಷವಾಗಿ ವರ್ಣಿಸಬೇಕಾಗಿಲ್ಲ ಎಂದು ನನಗನ್ನಿಸುತ್ತದೆ. ಏಕೆಂದರೆ ನಾವೆಲ್ಲಾ ಸಾಕಷ್ಟು ವಿದ್ಯಾವಂತರಲ್ಲವೇ?

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

uniquesupri's picture

ಇಲ್ಲ ಸರ್ ನಾನು ವಿದ್ಯಾವಂತನಾದರೂ ನನಗೆ ‘ಯೋಗ್ಯ’ ಎಂದರೆ ಯಾರು ಎನ್ನುವುದನ್ನು ಶಾಲೆ, ಕಾಲೇಜುಗಳು ಹೇಳಿಕೊಟ್ಟಿಲ್ಲ.
>>> ಒಬ್ಬ ವ್ಯಕ್ತಿಯನ್ನು ಸಮಾಜದಲ್ಲಿ "ಯೋಗ್ಯ" ಎಂದು ಕರೆಯಬೇಕಾದರೆ ಏನೆಲ್ಲಾ ಗುಣಗಳು ಅವನಲ್ಲಿರಬೇಕೆಂಬುದನ್ನು ಇಲ್ಲಿ ವಿಶೇಷವಾಗಿ ವರ್ಣಿಸಬೇಕಾಗಿಲ್ಲ ಎಂದು ನನಗನ್ನಿಸುತ್ತದೆ.

ನನ್ನ ಪ್ರಶ್ನೆಯೇ ಅದು. ‘ಯೋಗ್ಯ’ ಎನ್ನಬೇಕಾದರೆ ಏನು ಗುಣಗಳಿರಬೇಕು?

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

----ಇಲ್ಲ ಸರ್ ನಾನು ವಿದ್ಯಾವಂತನಾದರೂ ನನಗೆ ‘ಯೋಗ್ಯ’ ಎಂದರೆ ಯಾರು ಎನ್ನುವುದನ್ನು ಶಾಲೆ, ಕಾಲೇಜುಗಳು ಹೇಳಿಕೊಟ್ಟಿಲ----ಹಾಗಾದರೆ ಪಾಪ, ನೀವು ತಾನೆ ಏನು ಮಾಡೋಕ್ಕಾಗುತ್ತೆ? ತಪ್ಪು ನಿಮ್ಮದಲ್ಲ ಬಿಡಿ, ನೀವು ಇನ್ನೂ ಕೆಲ ವರ್ಷಗಳು ಸ್ವಲ್ಪ "ಸೀರಿಯಸ್" ಚರ್ಚೆಗಳಿಂದ ಹೊರಗಿರುವುದೇ ಉತ್ತಮ ಅನ್ನಿಸುತ್ತೆ. ಈ "ಯೋಗ್ಯ" ಅನ್ನುವ ಪದದ ಅರ್ಥ ತಿಳಿದ ಬಳಿಕ ಭಾಗವಹಿಸಿದರೆ ತುಂಬಾನೇ ಚೆನ್ನಾಗಿರುತ್ತೆ. ಸ್ವಲ್ಪ ಸಂಶೋಧನೆ ಮಾಡಿ ಸುಪ್ರೀತ್!!

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

modmani's picture

ಬ್ರೆಕ್ಟನ ಕಕೇಷಿಯನ್ ಚಾಕ್ ಸರ್ಕಲ್ ನ ಮಾತೊಂದು ನೆನಪಾಯಿತು.
" ಯೋಗ್ಯನೊಬ್ಬನನ್ನು ನಾವು ನ್ಯಾಯಾಧೀಶನನ್ನಾಗಿ ಮಾಡಿದೆವು. ಅವನು ಅಯೋಗ್ಯನಾದ. ಅದಕ್ಕೆ ಈಗ ಅಯೋಗ್ಯನನ್ನೇ ನ್ಯಾಯಾಧೀಶನನ್ನಾಗಿ ಮಾಡೋಣ. ಆದರೆ ಅವನು ಯೋಗ್ಯನಾಗುತ್ತಾನೆ ಅಷ್ಟೇ... ಇನ್ನೇನೂ ಆಗಲಾರ .. " :P

ಮೊದ್ಮಣಿ.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

uniquesupri's picture

ಸಕತ್ ಸರ್!
ಅದಕ್ಕೇ ನಾನು ಯೋಗ್ಯ ಅಂದರೆ ಯಾರು ಅಂತ ಪ್ರಶ್ನಿಸಿದ್ದು.
ಯಾರೂ ಸಹ ತಮ್ಮನ್ನು ತಾವು ಅಯೋಗ್ಯರು ಎಂದು ಕರೆದುಕೊಳ್ಳಲಾರರು.
ಹಾಗೆಯೇ ಒಬ್ಬೊಬ್ಬರಿಗೆ ಒಂದೊಂದು ‘ಯೋಗ್ಯ’ತೆಯ ಮಾನದಂಡಗಳಿರುತ್ವೆ!

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

uniquesupri's picture

ಸಂಶೋಧನೆಗೆ ಮೊದಲು ಗೈಡ್ ಬೇಕಲ್ಲವೇ ಸರ್?
ನೀವು ಸರಳವಾದ ಉತ್ತರ ಕೊಡುವುದಕ್ಕೆ ಯಾಕೆ ಹಿಂಜರೆಯುತ್ತಿದ್ದೀರಿ? ‘ಯೋಗ್ಯ’ ಅಭ್ಯರ್ಥಿ ಎಂದರೆ ಯಾರು ಹೇಳಿರಲ್ಲ? ಸಮಯ ಬೇಕು ಎನ್ನುವುದಾದರೆ ಸಾವಕಾಶವಾಗಿಯೇ ಉತ್ತರಿಸಿ.

>>> ನೀವು ಇನ್ನೂ ಕೆಲ ವರ್ಷಗಳು ಸ್ವಲ್ಪ "ಸೀರಿಯಸ್" ಚರ್ಚೆಗಳಿಂದ ಹೊರಗಿರುವುದೇ ಉತ್ತಮ ಅನ್ನಿಸುತ್ತೆ.
on a lighter note,
ಹು ನಾನು ಸೀರಿಯಸ್ ಚರ್ಚೆಗಳಿಂದ ದೂರವಿದ್ದೇನೆ, ಅದಕ್ಕೇ ಇಲ್ಲಿ ಮುಕ್ತವಾಗಿ ಭಾಗವಹಿಸುತ್ತಿರುವುದು ;)

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

ಯೋಗ್ಯ ಅಭ್ಯರ್ಥಿ ಅಂದರೆ ಯಾರು ಅಂತ ಹೇಳೋದಿಕ್ಕೆ ಹಿಂಜರಿಕೆ ಏನೂ ಇಲ್ಲ ಸುಪ್ರೀತ್, ಆದರೆ ಅಷ್ಟೂ ಗೊತ್ತಿಲ್ಲದಿರುವವರಿಗೆ ಸುಮ್ಮನೆ ಉತ್ತರ ಕೊಡುವುದರಿಂದ ಏನೂ ಪ್ರಯೋಜನವಿಲ್ಲ ಅಂತ ನನ್ನ ಅಭಿಪ್ರಾಯ. ಸೀರಿಯಸ್ ಚರ್ಚೆಗಳಿಂದ ದೂರವಾಗಿ ಇಲ್ಲಿ ರಾಂಗ್ ಎಂಟ್ರಿ ಕೊಟ್ರಿ ಅನ್ಸುತ್ತೆ!! ಇರಲಿ, ಪರವಾಗಿಲ್ಲ, ಯೋಗ್ಯ ಅನ್ನುವ ಪದದ ಬಗ್ಗೆ ನಿಮ್ಮ ಕಲ್ಪನೆಗಳದೇನೇನಿವೆಯೋ ಮೊದಲು ಪಟ್ಟಿ ಮಾಡಿ, ನಂತರ ವಿಸ್ತೃತವಾದ ಚರ್ಚೆ ಮಾಡುವ. ನಿಮ್ಮ ಪ್ರಕಾರ ಯಾರನ್ನು ಯೋಗ್ಯ ಅನ್ನಬಹುದು?? ಪರಾಂಬರಿಸುವಂಥವರಾಗಿ.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

uniquesupri's picture

>>> ಆದರೆ ಅಷ್ಟೂ ಗೊತ್ತಿಲ್ಲದಿರುವವರಿಗೆ ಸುಮ್ಮನೆ ಉತ್ತರ ಕೊಡುವುದರಿಂದ ಏನೂ ಪ್ರಯೋಜನವಿಲ್ಲ ಅಂತ ನನ್ನ ಅಭಿಪ್ರಾಯ.
ಗೊತ್ತಿಲ್ಲದಿದ್ದರೆ ತಾನೆ ಸರ್ ಪ್ರಶ್ನೆ ಕೇಳುವುದು? :)

ನೋಡಿ ಕಳೆದ ಎರಡು ಕಮೆಂಟುಗಳಲ್ಲೂ ನೀವು ಹಾರಿಕೆಯ ಉತ್ತರವನ್ನಲ್ಲದೆ ‘ಯೋಗ್ಯ’ ಎಂದು ಒಬ್ಬ ವ್ಯಕ್ತಿಯನ್ನು ತೀರ್ಮಾನಿಸುವುದಕ್ಕೆ ಅರ್ಹತೆಗಳೇನು ಎಂದು ಸರಳವಾಗಿ ವಿವರಿಸುವುದಕ್ಕಾಗಲಿಲ್ಲ.

>>> ಇರಲಿ, ಪರವಾಗಿಲ್ಲ, ಯೋಗ್ಯ ಅನ್ನುವ ಪದದ ಬಗ್ಗೆ ನಿಮ್ಮ ಕಲ್ಪನೆಗಳದೇನೇನಿವೆಯೋ ಮೊದಲು ಪಟ್ಟಿ ಮಾಡಿ, ನಂತರ ವಿಸ್ತೃತವಾದ ಚರ್ಚೆ ಮಾಡುವ. ನಿಮ್ಮ ಪ್ರಕಾರ ಯಾರನ್ನು ಯೋಗ್ಯ ಅನ್ನಬಹುದು?? ಪರಾಂಬರಿಸುವಂಥವರಾಗಿ.

ಅಲ್ಲ ಸರ್, ಅಷ್ಟೂ ಗೊತ್ತಿಲ್ಲದಿರುವವನು ಎಂದು ನೀವೇ ಗುರಿತಿಸಿ ಪಟ್ಟಿ ಮಾಡು ಎಂದರೆ ಹೇಗೆ? ಕೋರ್ಸಿಗೆ ಸೇರಿಸಿಕೊಳ್ಳದೇನೆ, ಪಾಠ ಪಾಡದೇನೆ ಪರೀಕ್ಷೆ ಬರಿ ಅಂದ್ರೆ?

ಕೆಳಗೆ ಪ್ರಸನ್ನರವರು ಹಾರಿಕೆಯ ಉತ್ತರ ನೀಡದೆ ನನ್ನ ಪ್ರಶ್ನೆಗೆ ಉತ್ತರಿಸಿದ್ದಾರೆ. ಚರ್ಚೆ ಅಲ್ಲಿ ಮುಂದುವರೆಸುವ...

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

PrasannAyurveda's picture

ಇಲ್ಲಿ ವಿಚಾರ ನಮ್ಮನ್ನಾಳುವ ನಾಯಕರ ಬಗ್ಗೆ ಆದ್ದರಿಂದ ಪ್ರಜೆಗಳಿಗೆ ಒಳ್ಳೆಯ ಆಡಳಿತ, ಮೂಲಭೂತ ಸೌಕರ್ಯಗಳು, ನ್ಯಾಯ ಇತ್ಯಾದಿಗಳು ದೊರೆಯುವಂತೆ ನೋಡಿಕೊಳ್ಳಬೇಕಾಗಿರುತ್ತದೆ. ಹಾಗಾಗಿ ಸ್ವತಃ ದಕ್ಷ ಜೀವನ, ಪ್ರಾಮಾಣಿಕತೆ, ದೀನರ ಬಗ್ಗೆ ಕಾಳಜಿ, ಉತ್ತಮ ವಿದ್ಯೆ, ದೇಶದ ಇತಿಹಾಸದ ಪರಿಚಯ, ಕ್ರಿಯಾಶೀಲ ವ್ಯಕ್ತಿತ್ವ ಇತ್ಯಾದಿಗಳನ್ನು ಯೋಗ್ಯತೆಗಳೆಂದು ಪರಿಗಣಿಸೋಣವೇ? ಯಾರಾದರು ಸಿಗುವರೇ ಎಂಬುದು ಮುಂದಿನ ಪ್ರಶ್ನೆ? :) ಇರಲಿ, ಹಾಗಾದರೆ ಉತ್ತಮ ವಿದ್ಯೆ, 'ಕ್ರಿಮಿನಲ್' ಹಿನ್ನೆಲೆ ಇಲ್ಲದಿರುವುದು ಇಷ್ಟಾದರೂ ಇರಲಿ....

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

ವಂದನೆಗಳು ಪ್ರಸನ್ನ, ನಿಮ್ಮ ಪ್ರತಿಕ್ರಿಯೆ ಸುಪ್ರೀತ್ ಮಾಡಬೇಕಿದ್ದ ಸಂಶೋಧನೆಯನ್ನು ತುಂಡರಿಸಿತು ಅನ್ನೋಣ. ಆ ರೀತಿಯ ಉತ್ತಮ ವ್ಯಕ್ತಿಗಳು ನಮ್ಮ ಮಧ್ಯೆ ಸಾಕಷ್ಟಿದ್ದಾರೆ. ಅವರನ್ನು ಗುರುತಿಸುವ, ಜನಸೇವೆಗೆ ಸಜ್ಜು ಮಾಡುವ, ಚುನಾವಣೆಗೆ ನಿಲ್ಲಿಸಿ ಆರಿಸುವ, ಅವರಿಂದ ಸಮಾಜಕ್ಕೆ, ದೇಶಕ್ಕೆ ಉತ್ತಮ ಸೇವೆ ಸಿಗುವಂತೆ ಮಾಡುವ ಗುರುತರ ಜವಾಬ್ಧಾರಿ ವಿದ್ಯಾವಂತರದಲ್ಲವೇ? ಯಾರೋ ಬಂದರು, ಏನೋ ಮಾಡಿದರು, ಅದಕ್ಕೂ ನಮಗೂ ಸಂಬಂಧವಿಲ್ಲ, ಇನ್ಯಾರೋ ಮುಂದಿನ ಚುನಾವಣೇಲಿ ಬರ್ತಾರೆ, ಅವ್ರಿನ್ನೇನೋ ಮಾಡ್ತಾರೆ, ಅದರ ಉಸಾಬರಿ ನಮಗ್ಯಾಕೆ ಅಂತ "ವಿದ್ಯಾವಂತರು" ಕೈ ತೊಳೆದುಕೊಂಡುಬಿಟ್ಟರೆ, ಅದು ಸಮಾಜಕ್ಕೆ, ದೇಶಕ್ಕೆ ಮಾಡಿದ ದ್ರೋಹವಲ್ಲವೇ? ಇದನ್ನು ತಿದ್ದಿ ಹೇಳಲು, ಈ ವಿದ್ಯಾವಂತ ವರ್ಗವನ್ನು ತಮ್ಮ ನಿರ್ಲಿಪ್ತತೆಯಿಂದ ಹೊರ ಬಂದು ಸಕ್ರಿಯರನ್ನಾಗಿ ಮಾಡಲು ಅದಿನ್ನೆಷ್ಟು ೨೬/೧೧ಗಳು ಬರಬೇಕೋ, ಅದಿನ್ನೆಷ್ಟು ಮುಗ್ಧರ ಪ್ರಾಣ ಹರಣವಾಗಬೇಕೋ, ಗೊತ್ತಿಲ್ಲ.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

PrasannAyurveda's picture

ಸರಿ, ಇಲ್ಲಿ ಸಂಪದದಲ್ಲೇ ಬಹಳಷ್ಟು ಮಂದಿ ವಿದ್ಯಾವಂತರಿದ್ದಾರೆ... ಏನು ಮಾಡೋಣ ಈಗ ಹೇಳಿ? ನಿಮ್ಮ ಸಲಹೆ ಏನು? ೧೦೦% ಮತದಾನ ಆಗಬೇಕು ಅನ್ನಬೇಡಿ, ಯಾಕೆಂದರೆ ಅದಕ್ಕೂ ಮುನ್ನ ಈ 'ಯೋಗ್ಯ'ರು ಸ್ಪರ್ಧಿಸಬೇಕು...ಎಲ್ಲಿಂದ ಆರಂಭಿಸೋಣ?

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

manju787's picture

..........ಸರಿ, ಇಲ್ಲಿ ಸಂಪದದಲ್ಲೇ ಬಹಳಷ್ಟು ಮಂದಿ ವಿದ್ಯಾವಂತರಿದ್ದಾರೆ.......ಸರಿ ಮತ್ತೆ, ಸಂಪದದಿಂದಲೇ ಪ್ರಾರಂಭಿಸಬಹುದು, ಯಾರು ಯೋಗ್ಯರು, ಎಲ್ಲಿಂದ ಅವರು ಚುನಾವಣೆಗೆ ಸ್ಪರ್ಧಿಸಬಹುದು ಎಂಬ ವಿಚಾರಗಳನ್ನು ಕಲೆ ಹಾಕಿ ಮುಂದಿನ ಚುನಾವಣೆಗೆ ನಿಲ್ಲುವಂತೆ ಮನವೊಲಿಸಿ, ಅದಕ್ಕೂ ಮುನ್ನ ಅವರಿಗೆ ೧೦೦% ಮತದಾನ ನಡೆಯುತ್ತದೆನ್ನುವ ಭರವಸೆ ಕೊಡೋಣ.

ಉ: ೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ...

PrasannAyurveda's picture

ಸರಿ ಒಂದು ಬೇರೆಯದೇ ಚರ್ಚೆ ಆರಂಭಿಸಿ...ನೋಡೋಣ ನಮ್ಮ ಸಂಪದಿಗ ಗೆಳೆಯರ ಪ್ರತಿಕ್ರಿಯೆಗಳನ್ನು...