ಕನ್ನಡವನ್ನ ಹೀಗೆ ಬಳಸಿದರೆ ಚೆನ್ನಾಗಿರುತ್ತದೆ ಅಲ್ವಾ?
ನಮಸ್ತೆ ಕನ್ನಡಿಗರೆ,
ಇತ್ತೀಚಿನ ದಿನಗಳಲ್ಲಿ ಕನ್ನಡದ ಬಳಕೆ ಮಾಯವಾಗುತ್ತಿದೆ. ಸರ್ಕಾರ ಇದರಲ್ಲಿ ಭಾಗಿಯಾಗುತ್ತಿಲ್ಲ ಅನ್ನೋದೆ ಒಂದು ಕೊರಗು.
ಅಫ್ ಎಂ ರೇಡಿಯೋಗಳು ಪೂರ್ತಿ ಹಿಂದಿ ಮತ್ತು ಇಂಗ್ಲೀಷ್ ಹಾಡುಗಳನ್ನ ಪ್ರಸಾರ ಮಾಡ್ತಾಯಿವೆ.
-
ಎಲ್ಲಾ ನಾಮಪಲಕಗಳು ಕನ್ನಡವನ್ನ ಒಳಗೊಂಡಿರಬೇಕು.
-
ಹಾಗೆ ಕನ್ನಡ ಸ್ಂಖ್ಯೆಗಳ ಬಳಕೆ ಸಹ ಹೆಚ್ಚಬೇಕು. ಕನ್ನಡ ದಿನ ಪತ್ರಿಕೆಗಳು ಮಾಸ ಪತ್ರಿಕೆಗಳು ಕನ್ನಡ ಸಂಖ್ಯೆಗಳನ್ನ ಬಳಸಬೇಕು.
-
ನಮ್ಮ ಸರ್ಕಾರಿ ಕಛೇರಿಗಳಲ್ಲಿ ಕನ್ನಡ ಭಾಷೆಯ ಬಳೆಕೆ ಹಾಗು ಆಡಳಿತ ಭಾಷೆ ಸಹ ಕನ್ನಡವಾಗಬೇಕು.
-
ಎಲ್ಲಾ ತರಹದ ಶಾಲೆ ಕಾಲೇಜುಗಳಲ್ಲಿ ಕನ್ನಡದ ಬಳಕೆ ಜಾರಿಗೆ ಬರಬೇಕು.
-
ಕನ್ನಡ ಮತ್ತು ಇಂಗ್ಲೀಷ್ ಬಿಟ್ಟು ಬೇರೇ ಯಾವ ಭಾಷೆಯ ಭಿತ್ತಿ ಪತ್ರಗಳು ಬಳಕೆಯಲ್ಲಿರಬಾರದು. ಹಾ ಇಂಗ್ಲೀಷ್ ಭಿತ್ತಿಪತ್ರಗಳು ಸಹ ಕನ್ನಡದ ಪ್ರತಿಯನ್ನ ಒಳಗೊಂಡಿರಬೇಕು.
-
ಪರಭಾಷಾ ಚಿತ್ರ್ಸಗಳ ಪ್ರಚಾರ ಪತ್ರಗಳು ಸಹ ಕನ್ನಡದ ಪ್ರತಿಯನ್ನ ಒಳಗೊಂಡಿರಬೇಕು.
-
ಹಾ ಪ್ರತಿಯೊಬ್ಬ ಕನ್ನಡಿಗನು ರಾಜ್ಯದೇ ಯಾವುದೆ ಭಾಗಲ್ಲು ಕನ್ನಡದಲ್ಲೇ ಮಾತನಾಡಬೇಕು.
ನಿಮಗೆ ಎನ್ನನ್ನಿಸುತ್ತದೆ ನೀವೇ ಹೇಳಿ... ನಮ್ಮ ಭಾಷೆಯನ್ನ ನಾವು ಹೇಗೆ ಉಳಿಸಿಕೊಳ್ಳೊದು ?

- Login or register to post comments
- 1228 hits
- Email this forum





RSS:
ನಮ್ಮದೇ ಸರಕಾರ
ಕರುನಾಡಿನದ್ದೇ ಆದ JDS ಅದಿಕಾರಕ್ಕೆ ಬಂದಿದ್ದರಿಂದ ಏಟೋ ಬದಲಾವಣೆ ಕಾಣುತ್ತಿದ್ದೇವೆ. ಈಗಿನ ಪಾರಟಿ ಕಾಂಗರೇಸ್, ಬಿ.ಜೆ.ಪಿ ಗಳಿಗಿಂತ ಪರವಾಗಿಲ್ಲ. ಹಳ್ಳಿಗಳ ಕಡೆ ಇದನ್ನೆಲ್ಲಾ ವಿಚಾರ ಮಾಡದೇ ಇನ್ನೂ ಇಂದಿರಾ ಗಾಂದಿಯ ಗುಂಗಿನಲ್ಲೇ ಇದ್ದು, "ಕೈಗೆ ಜೈ" ಅನ್ನುತ್ತಿದ್ದಾರೆ. ಕರುನಾಡಿನ ಸಕಲ ಕನ್ನಡಿಗರು ಒಗ್ಗೂಡಿ ನಮ್ಮದೇ ಲೋಕಲ್ ಪಾರಟಿಯನ್ನು ಆಳಿಕೆಗೆ ತಂದಲ್ಲಿ ನಮ್ಮ ಕನಸುಗಳು ನನಸಾದಾವು.
ಜೆ.ಡಿ.ಎಸ್. ಪರವಾಗಿಲ್ಲ !! ಹೌದೆ ಸ್ವಾಮೀ ? ನಮ್ಗೆ ಗೊತ್ತಾಗಕಿಲ್ಲ ದೇವೃ !!
ನಮಗಂತೂ ಯಾವುದು ಪರವಾಗಿಲ್ಲವೋ, ಯಾವುದು ಸರಿಯೋ ಅನ್ನುವ ಯೋಚನೆ ಇನ್ನೂ ದೃಢವಾಗಿಲ್ಲ !
ನೋಡಿ, ಮುಖ್ಯಮಂತ್ರಿಗಳೇ ಕೋಟ್ಯಂತರ ರೂಪಾಯಿನ 'ಗಣಿ ಸ್ಕ್ಯಾಮ್' ನಲ್ಲಿ ಇದಾರೆ. ಇದನ್ನು ಮುಚ್ಚೋದಕ್ಕೆ ಧಿಡೀರನೆ 'ಬೆಳಗಾಂ ಸಮಸ್ಯೆ' ಕಡೆ ವಾಲಿದಾರೆ. ಅದರಲ್ಲೂ, ಬೆಳಗಾಂ ಎರಡನೆಯ ರಾಜಧಾನಿ ಅನ್ನುವ ರೀತಿಯಲ್ಲಿ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ. ಇದರಲ್ಲಿ ಇಂದಿರ ಗಾಂಧಿ ಏನ್ಮಾಡ್ತಾರೆ. ಈಗಿನ ಪರಿಸ್ತಿತಿ ಮುಖ್ಯ ಅಲ್ವೆ !
"ಮೂರ್ಜನ ಗೌಡ್ರು "ಒಳ್ಳೇದ್ ಮಾಡೊದನ್ನ,ತಾನೇ ಕರ್ಣಾಟಕ ಅಪೇಕ್ಷಿಸೋದು ! ಬೇರೆ ನಮ್ಗ್ಯಾಕೆ ?
ಉ: ಜೆ.ಡಿ.ಎಸ್. ಪರವಾಗಿಲ್ಲ !! ಹೌದೆ ಸ್ವಾಮೀ ? ನಮ್ಗೆ ಗೊತ್ತಾಗಕಿಲ್ಲ ದೇವೃ !!
ಗಾಳೀಲಿ ಗುದ್ದಾಡಿ ಸ್ವಾಮೀ! ಆಡಿದ್ದನ್ನು ನಡೆಯೋ ಗುಣ ( walking the Talk!) ಕನ್ನಡದವರಿಗೆ ಬರೋವರಿಗೂ ನಿಮಗೆ ಸಿಗೋದು ನಮ್ಮ ಹರದನಹಳ್ಳಿ ದೇವೇಗೌಡರ ಆಸ್ ವಾಸನೆ (**** ವಾಸನೆ ) ಅಷ್ಟೇನೆ! ಮೂಗು ಗಟ್ಟಿಯಾಗಿ ಮುಚ್ಕೊಳ್ಳೀ.
ಉ: ಜೆ.ಡಿ.ಎಸ್. ಪರವಾಗಿಲ್ಲ !! ಹೌದೆ ಸ್ವಾಮೀ ? ನಮ್ಗೆ ಗೊತ್ತಾಗಕಿಲ್ಲ ದೇವೃ !!
ಅದೇ ಮುಖ್ಯಮಂತ್ರ್ಗಿಗಳು, ಇತರ ಮಂತ್ರಿಗಳು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಕಲಿಸುತ್ತಾರಲ್ಲ ಸ್ವಾಮಿ. ಸಾಹಿತಿಗಳಿಗಿರುವ ಕನ್ನಡದ ಬಗ್ಗೆ ಆೞವಾದ ಪ್ರೀತಿ ರಾಜಕಾರಣಿಗಳಿಗಿರಲ್ಲ ಬಿಡಿ.
ಉ: ನಮ್ಮದೇ ಸರಕಾರ
ಅಲ್ಲಾ ಸ್ವಾಮಿ ಇದ್ದಕ್ಕಿದ್ದ ಹಾಗೆ ಜನತಾ ದಳದ ಜಾತ್ಯಾತೀತ ವಿಂಗ್ (ಸಂಯುಕ್ತ ವಿಂಗ್ ಎಂಬುದೂ ಒಂದಿದೆ) ಅದು ಹೇಗೆ ಪ್ರಾದೇಶಿಕ ಪಕ್ಷವಾಗಿಬಿಟ್ಟಿತೋ! ಕುಮಾರಣ್ಣ ಕರುನಾಡ ಕಂದನಾಗಿಬಿಟ್ಟರೋ!
ನಮ್ಮಿಂದಲೇ ಪ್ರಾರಂಭವಾಗಲಿ ಎಲ್ಲಾ ಬದಲಾವಣೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com