ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
umesh desai
ಪರಿಚಯ
interested in literature, fan of tejaswi, and old hindi songs.ಹಾಗೆಯೇ ಕನ್ನಡ ಹಾಡುಗಳೂ ಸಹ
ತೆಲಂಗಾಣ---ನಮಗೆಷ್ಟು ಪ್ರಸ್ತುತ
ನಮ್ಮ ರಾಜ್ಯ ದಲ್ಲೂ ಕೆಲಕಡೆ ಅಸಮಾಧಾನವಿದೆ ಅಸಮತೋಲನವಿದೆ
ಬೆಂಗಳೂರು ಕೇಂದ್ರಿತ ನಮ್ಮಅಭಿವೃದ್ಧಿ ಈ ನಾಡಿಗೆ ಈಗಾಗಲೆ ಮುಳುವಾಗಿದೆ
ಈ ನಿಟ್ಟಿನಲ್ಲಿ ಅನೇಕರು ತೆಲಂಗಾಣದ ಸಾಧಕ ಬಾಧಕ ಗಳ ಬಗ್ಗೆ ಕಣ್ತೆರೆದು ನೋಡಬಹುದು
ತೆಲಂಗಾಣ ಮಾದರಿಯ ಹೋರಾಟ ಅನಿವಾರ್ಯವೆ
- Login or register to post comments
- 1542 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: ತೆಲಂಗಾಣ---ನಮಗೆಷ್ಟು ಪ್ರಸ್ತುತ
ಹೈದರಾಬಾದ್ ಕರ್ನಾಟಕ ಹೋರಾಟಕ್ಕೆ ತೆಲಂಗಾಣ ಮಾದರಿ ಆದರೆ ಆಶ್ಚರ್ಯವಿಲ್ಲ.
ವಿಶ್ವ ತುಳು ಸಮ್ಮೇಳನ, ವಿಶ್ವ ಕೊಡಗು ಸಮ್ಮೇಳನ ನಡೆಸುತ್ತಾ ಕಾಲ ಕಳೆಯುವ ನಮ್ಮ ಮು.ಮಂತ್ರಿಗಳಿಗೆ ಎಚ್ಚರಿಸುವವರು ಯಾರೋ
ಉ: ತೆಲಂಗಾಣ---ನಮಗೆಷ್ಟು ಪ್ರಸ್ತುತ
<<ವಿಶ್ವ ತುಳು ಸಮ್ಮೇಳನ, ವಿಶ್ವ ಕೊಡಗು ಸಮ್ಮೇಳನ ನಡೆಸುತ್ತಾ ಕಾಲ ಕಳೆಯುವ ನಮ್ಮ ಮು.ಮಂತ್ರಿಗಳಿಗೆ ಎಚ್ಚರಿಸುವವರು ಯಾರೋ>>
ಅರವಿಂದ್,ವಿಶ್ವ ತುಳು ಸಮ್ಮೇಳನದಲ್ಲಿ ಅವರು ಪಾಲ್ಗೊಂಡಿದ್ದು ಕಾಲಹರಣ ಅನ್ನಿಸುತ್ತಾ ನಿಮಗೆ?
ಉ: ತೆಲಂಗಾಣ---ನಮಗೆಷ್ಟು ಪ್ರಸ್ತುತ
ರಾಕೇಶ್,
ಕಾಲಹರಣ ಖಂಡಿತಾ ಇಲ್ಲ. ಎಚ್ಚರಿಕೆ ಇರಬೇಕು ಎಂದೆ ಅಷ್ಟೆ. ಏಕೆಂದರೆ ಕೊಡವ ನಾಡು, ತುಳು ನಾಡಿನ ಬೇಡಿಕೆಯ ಮಂದಿಯ ಸಮೂಹ, ಅಬ್ಬರ ಕಂಡು ಎಲ್ಲಿ ಹೈದರಾಬಾದ್ ಕರ್ನಾಟಕದ ಕೂಗು ಹೊರಡುವುದೋ ಎಂಬ ಭಯ ;)
- ಅರವಿಂದ
ಉ: ತೆಲಂಗಾಣ---ನಮಗೆಷ್ಟು ಪ್ರಸ್ತುತ
ಸ್ವಲ್ಪ ತಡ್ಕೊಳ್ರೀ ದೇಸಾಯರೆ, ಕೊಡಗು ನಾಡು ಬೇರೆ ಅಂತ, ತುಳುನಾಡು ಬೇರೆ ಅಂತ, ಮರಾಠಿ ನಾಡು ಬೇರೆ ಅಂತ, ತೆಲುಗುನಾಡು ಬೇರೆ ಅಂತ ನಮ್ಮಲ್ಲೂ ಶುರುವಾಗುತ್ತದೆ, "ಆಮರಣಾಂತ ಉಪವಾಸ ಸತ್ಯಾಗ್ರಹ"ಗಳ ಸಾಲು ಸಾಲು, ಹೊಸ ನಾಯಕರ ದಂಡು, ಅವರ ಹಿಂಬಾಲಕರ ಹಿಂಡು. ಎಲ್ಲರಿಗೂ ಜೈ ಅನ್ನುವ ಸೋನಿಯಾ ಮೇಡಂ, ಅವರ ವಂಧಿ ಮಾಗಧರ ಬಹು ಪರಾಕುಗಳ ಕೋರಂ, ಓಹ್! ನಮ್ಮ ಕರ್ನಾಟಕದ ಭೂಪಟ ಬದಲಾಗುವ ಕಾಲ ಬಹಳ ಹತ್ತಿರದಲ್ಲೇ ಇದೆ ಅನ್ನಿಸುತ್ತಿದೆ. ಇನ್ನು ಮುಂದೆ ಪ್ರತಿ ಐನೂರು ಚದುರ ಕಿಲೋಮೀಟರಿಗೊಂದು ರಾಜ್ಯ ಅಂತ ಒಂದು ಸರ್ವ ಸಮ್ಮತ ಠರಾವು ಲೋಕಸಭೆಯಲ್ಲಿ ಮಂಡಿಸಿ, ಅದು ಯಶಸ್ವಿಯಾಗಿಬಿಟ್ಟರೆ ಹಲವಾರು ಅಮಾಯಕರ ಪ್ರಾಣ ಉಳಿಯುತ್ತದೆ.
ಉ: ತೆಲಂಗಾಣ---ನಮಗೆಷ್ಟು ಪ್ರಸ್ತುತ
ವಯುಕ್ತಿಕ ತೆವಲುಗಳಿಗೆ ಸಮಸ್ತ ಕನ್ನಡಿಗರನ್ನು ಒಡೆಯುವುದು ನಮಗೆಷ್ಟು ಪ್ರಸ್ತುತ??
ಉ: ತೆಲಂಗಾಣ---ನಮಗೆಷ್ಟು ಪ್ರಸ್ತುತ
ಸೋಮಯಾಜ್ರೆ,
ಈ ಪ್ರಶ್ನೆಯನ್ನ ಕೊಡವ ರಾಜ್ಯಕ್ಕಾಗಿ ಲಾಬಿ ಮಾಡಿದವರನ್ನ ಕೇಳಿದಿರಿ ಅಂದುಕೊಂಡಿದ್ದೇನೆ. ತೆವಲಿನ ಮೂಲ ಹುಡುಕೋಣ ಅಲ್ಲವೆ.
- ಅರವಿಂದ
ಉ: ತೆಲಂಗಾಣ---ನಮಗೆಷ್ಟು ಪ್ರಸ್ತುತ
karnatique ಅಲ್ಲಿ ಬಂದ ಒಂದು ಬರಹ:
BREAKING NEWS: New Delhi to divide and rule the Telugus
http://karnatique.bl...
ಉ: ತೆಲಂಗಾಣ---ನಮಗೆಷ್ಟು ಪ್ರಸ್ತುತ
ಮಾನ್ಯರಿಗೆಲ್ಲ ಒಂದು ವಿನಂತಿ ಈ ಚರ್ಚೆಯೂ ಹಾದಿ ತಪ್ಪೋ ಲಕ್ಷಣ ಕಾಣಿಸುತ್ತಿದೆ ಚರ್ಚೆ ಹುಟ್ಟುಹಾಕಿದವ ಸುಮ್ಮನಿದ್ರೆ ಹೇಗೆ
ಅಲ್ವಾ ..ಒಂದು ವಿಷಯ ನಿಖರವಾಗಿ ಹೇಳುವೆ ನಾನ್ಯಾವ ತುಳುನಾಡು, ಕೊಡವನಾಡು,ಹೈದ್ರಾಬಾದ್ ಕರ್ನಾಟಕ,ಅಥವಾ
ಉತ್ತರ ಕರ್ನಾಟಕದ ಲಾಬಿಗಾರ ಅಲ್ಲ. ಈ ರಾಜ್ಯ ಅಖಂಡವಾಗಿರಲಿ ಇದು ಆಶಯ ಆದರೆ ಈ ಅಖಂಡತೆಗೆ ಹೈಕ ಹಾಗೂ ಉಕ
ಯಾವ ಬೆಲೆತೆರುತ್ತಿದೆ .ಇದರ ಬಗ್ಗೆ ವಿಚಾರಮಾಡಿದರೆ ತೆಲಂಗಾಣ ನಮಗೇಕೆ(ಹೈಕ ಹಾಗೂ ಉಕ) ಮಾದರಿಯಾಗಬೇಕು ಅನ್ನೋದು ಅರ್ಥವಾಗಬಹುದು. ನಿರ್ಲಕ್ಷದ ಪರಮಾವಧಿ ನೋಡಿದ್ದಾರೆ ಇಲ್ಲಿಯ ಜನ ಅದಕ್ಕೆ ಹತಾಶರಾಗಿದ್ದಾರೆ
ಮೇಲಿನ ಸಂಗತಿಗಳ ಬೆಳಕಲ್ಲಿ ಮತ್ತದೇ ಪ್ರಶ್ನೆ ಕೇಳುತ್ತೇನೆ....
ಉ: ತೆಲಂಗಾಣ---ನಮಗೆಷ್ಟು ಪ್ರಸ್ತುತ
ತೆಲಂಗಾಣದ ವಿಷಯಕ್ಕೂ ಕರ್ನಾಟಕದ ವಿಷಯಕ್ಕೂ ತುಂಬಾ ವ್ಯತ್ಯಾಸಗಳಿವೆ. ತೆಲಂಗಾಣವೆಂಬ ರಾಜ್ಯ ೧೯೪೭ರಲ್ಲಿ ಹೈದರಾಬಾದ್ ರಾಜ್ಯವಾಗಿ ಇತ್ತು. ಹಾಗೂ ಆ ರಾಜ್ಯವನ್ನು ಅಖಂಡ ಆಂಧ್ರಪ್ರದೇಶಕ್ಕೆ ಸೇರಿಸಲಾಯಿತು. ಕರ್ನಾಟಕಕ್ಕೆ ಕೊಡಗು ರಾಜ್ಯವನ್ನು ಸೇರಿಸಿದ ಹಾಗೆ. ಆ ತೆಲಂಗಾಣದಲ್ಲಿ ಸುಮಾರು ೧೩ ಜಿಲ್ಲೆಗಳಿವೆ.
ಆ ಹೈದರಾಬಾದ್ ರಾಜ್ಯದ ಕನ್ನಡಿಗರು ಹೆಚ್ಚಾಗಿದ್ದ ಮೂರು ಜಿಲ್ಲೆಗಳನ್ನು ಕರ್ನಾಟಕಕ್ಕೆ ಸೇರಿಸಲಾಯಿತು. ಅದೂ ಅಲ್ಲಿ ಸ್ಥಳೀಯರ ಬೇಡಿಕೆಯ ಮೇಲೆ. ಆದರೆ ತೆಲಂಗಾಣದವರು ವಿಶಾಲಾಂಧ್ರಕ್ಕೆ ಸೇರಲು ಮೊದಲಿಂದಲೂ ತಕರಾರು ಎತ್ತಿದ್ದರು.
ಅಲ್ಲಿಯ ಹಾಗು ಇಲ್ಲಿಯ ಪರಿಸ್ಥಿತಿಗಳು ವಿಭಿನ್ನ.
ಇನ್ನು ಮೂರು ಜಿಲ್ಲೆಗೊಂದು, ಎರಡು ಜಿಲ್ಲೆಗೊಂದು ಕೊನೆಗೆ ಒಂದೇ ಜಿಲ್ಲೆಗೊಂದ ರಾಜ್ಯ ಮಾಡುವುದಾದರೆ ರಾಜ್ಯ ಎಂಬ ಪದಕ್ಕೇ ಅರ್ಥವಿರುವುದಿಲ್ಲ.!
ಕೊಡಗು ಪ್ರದೇಶದಲ್ಲಿ ಇಂದಿಗೂ ಕನ್ನಡ ಮಾತಾಡುವವರೇ ಹೆಚ್ಚು. ಕೊಡವರು ಅಲ್ಲಿ ಅಲ್ಪಸಂಖ್ಯಾತರು(೧/೫).
ದೊಡ್ಡ ರಾಜ್ಯಗಳನ್ನು ಆಡಳಿತಾತ್ಮಕವಾಗಿ ಸೂಕ್ತಗಾತ್ರಕ್ಕೆ ಕಿರಿದಾಗಿಸುವುದು ಸುಲಭಶಾಸನಕ್ಕೆ ಒಂದು ಮಾರ್ಗ. ಹಾಗೆಂದು ತೀರಾ ಚಿಕ್ಕ ಚಿಕ್ಕ ರಾಜ್ಯಗಳನ್ನು ಮಾಡುವುದು ವಿತ್ತೀಯವಾಗಿ ಅಸಂಭವ ಹಾಗು ನಷ್ಷದ ವ್ಯಾಪಾರ.
ತೆಲಂಗಾಣ ಬೇರೆಯಾಗುವುದರಲ್ಲಿ ಒಂದು ಅರ್ಥವಿದೆ. ಆಂದ್ರ ಒಂದು ದೊಡ್ಡ ರಾಜ್ಯ. ಈಗಿನ ಲೆಕ್ಕಾಚಾರದಂತೆ ಸುಮಾರು ೯ಕೋಟಿ ಮಂದಿ ಅಲ್ಲಿದ್ದಾರೆ. ಕರ್ನಾಟಕದಲ್ಲಿ ೫ಕೋಟಿ ಮಂದಿ ಇದ್ದಾರೆ.
ಇದಕ್ಕೆಲ್ಲ ಸರಿಯಾದ ಹಾಗು ನೀಟಾದ ಪರಿಹಾರವೆಂದರೆ ಒಂದು ರಾಜ್ಯಕ್ಕೆ ಇಂತಿಷ್ಟು ಸೂಕ್ತವಾದ ಜನಸಂಖ್ಯೆಯಿರಬೇಕೆಂಬ ಮಟ್ಟವನ್ನು ತೀರ್ಮಾನಿಸಿ, ಅದಕ್ಕಿಂತ ಹೆಚ್ಚಗೆ ಜನಸಂಖ್ಯೆಯಿರುವ ದೊಡ್ಡ ರಾಜ್ಯಗಳನ್ನು ತಕ್ಕವಾಗಿ ಒಡೆದು ರಾಜ್ಯ ರಚಿಸುವುದು ಹಾಗೂ ಅದಕ್ಕಿಂತ ಕಡಮೆ ಜನಸಂಖ್ಯೆಯಿರುವ ರಾಜ್ಯಗಳನ್ನು ಸೇರಿಸಿ ಒಂದೇ ರಾಜ್ಯವಾಗಿಸುವುದು.
ಈ ಪಜೀತಿಗೆಲ್ಲ ಮೂಲ ಮೊದಲನೇ ರಾಜ್ಯ ರಚನೆ ಕಾರ್ಯವನ್ನು ಆತಾತುರವಾಗಿ, ಭಾವನಾತ್ಮಕವಾಗಿ ಮಾಡಿದ್ದು ಹಾಗೂ ತರುವಾಯ ಪೂರ್ವೋತ್ತರದಲ್ಲಿ ಬುಡಕಟ್ಟಿಗೊಂದು ರಾಜ್ಯಕಟ್ಟಿಕೊಡ್ಡಿದ್ದು.. ಒಟ್ಟಿನಲ್ಲಿ ನೋ ಪ್ರಾಪರ‍್ ಪ್ಲಾನಿಂಗ್..! ಯಥಾಪ್ರಕಾರ ಎಡ್ಡಂದಿಡ್ಡಿ ವ್ಯವಹಾರ!
ಉ: ತೆಲಂಗಾಣ---ನಮಗೆಷ್ಟು ಪ್ರಸ್ತುತ
@ಮಾಯ್ಸ್-೨ ನಿಮ್ಮ ಜೊತೆ ವಾದಹಾಕೋ ತಾಕತ್ತು ನನಗಿಲ್ಲ ನೀವು ಹೇಳೋ ಹಾಗೆ ಎರಡೂ ವಿಷಯಗಳಲ್ಲಿ ವ್ಯತ್ಯಾಸ ಇದೆ.ಆದ್ರೆ ನೀವು ಉಕ ಅಥವ ಹೈಕದವರ ಭಾವನೆ ಅಥವಾ ಬವಣೆನೂ ಒಮ್ಮೆ ಗಮನಿಸಿ. ಈ " ಬೆಂಗಳೂರು ಕೇಂದ್ರಿಕೃತ" ಅಭಿವೃದ್ಧಿ ಬಗ್ಗೆ ನನ್ನ ತಕರಾರಿದೆ .ಎಷ್ಟೋಜನ
ಇಲ್ಲಿಯವ್ರಿಗೆ ನಮ್ಮೂರ ಹೆಸರು ಉಚ್ಚಾರ ಮಾಡಲಿಕ್ಕೆ ಬರೂದಿಲ್ಲ.ಮೊದಲಿಂದಲೂ ನಾವು ಅಂದ್ರೆ ಇಲ್ಲಿಯವ್ರಿಗೆ ಕೀಳು.... ಆದ್ರೆ ನಮ್ಮ ನೆರೆಮನೆಯವ್ರು ಇವರಿಗೆ ಪ್ರಿಯರು..ಇವರಮನೇಲಿ ಇದ್ದು ಇವರದೇ ಮನೆ ಅವ್ರು ದೋಚಿದ್ರು ಸಹ...! ನನ್ನ ಕಳಕಳಿ ಇದೆ ನಾವ್ಯಾಕೆ ತೆಲಂಗಾಣ ಮಾದರಿಯಾಗಿ ತಗೊಬಾರ್ದು...ಅಂತ.
ಉ: ತೆಲಂಗಾಣ---ನಮಗೆಷ್ಟು ಪ್ರಸ್ತುತ
ಬಿಟ್ಟುಹೋಗಲು ಇಷ್ಟಪಡುವವರನ್ನು ಸ್ನೇಹದಿಂದ ಬೀಳ್ಕೊಡುವುದು ಒಳಿತು ಹಾಗು ಸಜ್ಜನಿಕೆ.! ಯಾರೊಟ್ಟಿಗೂ ಬಲಾತ್ಕಾರದಿಂದ ಪ್ರೀತಿ ಸಂಪಾದಿಸಲಾರದು... ಹಾಗೇ ಒಡನಾಟ, ಸಹಬಾಳ್ವೆ ಕೂಡ....
ಆದರೆ ಆ ಕಡೆಯಿಂದ ಆಯ್ಕೆಯಾಗಿ ಮಂತ್ರಿ, ಮುಖ್ಯಮಂತ್ರಿ, ಕೇಂದ್ರದ ಮಂತ್ರಿ ಇತ್ಯಾದಿ ಪಟ್ಟಗಳನ್ನು ಅಲಂಕರಿಸಿ ನಾಯಕೋತ್ತಮರಲ್ಲಿ ನಿಮ್ಮ ಆಶೋತ್ತರಗಳನ್ನು ಸಮರ್ಪಕವಾಗಿ ಸಮಾಲೋಚಿಸಿದ್ದೀವೆ! ಸಿಕ್ಕ ಅವಕಾಶಗಳ ಉಪಯೋಗ ... !
ಇನ್ನು ಉಚ್ಚಾರದ ಮಾತು... ಕತ್ತೆ ಮತ್ತು ಕತ್ತಿ ಎರಡೂ ಕತ್ತಿ ಆದರೆ ಅದು ನಮಗೆ ಹೇಗೆ ತಿಳೀಬೇಕು?
ನನಗೆ ಇಂದಿಗೂ ಒಂದು ಸಂದೇಹ ದಿಟವಾಗಿ .. ಒಬ್ಬರ ಹಸರು ಕತ್ತಿಮನಿ ಎಂದು ಅದು "ಕತ್ತೆಮನೆ"ಯೋ, "ಕತ್ತಿಮನೆ"ಯೋ ಯಾವ ಅರ್ಥವೋ.. ಆದರು ಇವೆಲ್ಲ ಪ್ರಾಂತೀಯ ಉಪಭಾಷಾಲಕ್ಷಣಗಳು; ಆಪೇಕ್ಷಾರ್ಹವಲ್ಲ.
ಒಟ್ಟಾರೆ....... ತೆಲಂಗಾಣ ನಮಗೆ ಅಪ್ರಸ್ತುತ!
ನಮಸ್ಕಾರ!
ಉ: ತೆಲಂಗಾಣ---ನಮಗೆಷ್ಟು ಪ್ರಸ್ತುತ
@ಮಾಯ್ಸ್-೨ ಬಿಟ್ಟು ಭಾಳದಿನಾ ಆಗ್ಯಾವ ಹೋಗೋರಿಗೆ ಯಾರೂ ತಡಿ ಮಾಡೂದಿಲ್ಲ ಖರೆ. ಯಾರದೋ " ಕತ್ತಿಮನಿ" ಅನ್ನಾವ್ರಬಗ್ಗೆ ಮಾತಾಡಿದ್ರಿ ಇರ್ಲಿ ಅದು ಇಲ್ಲಿ ಮಂದಿ ಹುಟ್ಟಗುಣ ಹುಗದ್ರು ಕಮಿಆಗೂದಿಲ್ಲ...! ನಿಮಗ ಅಪ್ರಸ್ತುತ ಅನಿಸಿರಬಹುದು ಆದ್ರ ನಮ್ಮಮಂದಿ ಎದಿಯೊಳಗಿನ ಕುದಿ ಹೊರಗ ಬರತದ ನೋಡ್ತಿರಿ ನೀವೂ ...!
ಉ: ತೆಲಂಗಾಣ---ನಮಗೆಷ್ಟು ಪ್ರಸ್ತುತ
ಅರ್ಥವಾಗಲಿಲ್ಲ..
ಈ ವಿಷಯವಾಗಿ ಒಂದು ಬ್ಲಾಗು ಬರೆದಿದ್ದೀನಿ ನೋಡಿ.
http://sampada.net/b...
ಉ: ತೆಲಂಗಾಣ---ನಮಗೆಷ್ಟು ಪ್ರಸ್ತುತ
ಓದಿದೆ ನಿಮ್ಮ ಬ್ಲಾಗು ಸೀಮಿತವಾಗಿದೆ ಕರ್ನಾಟಕ ಬೇರೆಯಾದ್ರೆ ಹಳೆಮೈಸೂರಿಗರಿಗೆ ಪ್ರಾಮುಖ್ಯಅನ್ನೊ ರೀತಿ ಇದೆ ಈಗಲೂ ಅದೇ ತಾನೆ ಆಗುತ್ತಿರುವುದು ಇನ್ನು ಏಕೀಕರಣದ ವಿಷಯ
ನಾವು ನಮ್ಮ ಹಿರಿಯರಿಗೆ ಸಂಭಾಳಿಸಿಕೊಳ್ಳುತ್ತೇವೆ ಬಿಡಿ...!ಮುಖ್ಯವಾಗಿ ತೆಲಂಗಾಣರಚನೆ ನಮ್ಮವರಿಗೂ ಬೇರೆ ದಾರಿ ತೋರಬಹುದು...
ಉ: ತೆಲಂಗಾಣ---ನಮಗೆಷ್ಟು ಪ್ರಸ್ತುತ
ಬೆಸ್ಟ್ ಆಫ್ ಲಕ್! ನಾನು ಆ ಸಂದರ್ಭದಲ್ಲಿದೊಂದು ನನ್ನ ವಿಮರ್ಶಾತ್ಮಕ ಬ್ಲಾಗು ಬರೆದುಕೊಳ್ಳಲು ಕಾತುರನಾಗಿರ‍್ತೀನಿ. :D
ಯಾವತ್ತು ಸುರು ಮಾಡ್ತೀರಿ ಹೋರಾಟ?
ನೋಡಿ.. ಇಲ್ಲೊಂದು ಅಇಡಿಯ ಕೊಡ್ತೀನಿ.. ಮೊದಲ ಹೆಚ್ಚೆಯಾಗಿ ನಿಮ್ಮ ಕಡೆ TRS ತರದ ಬಲಶಾಲಿ ಪಕ್ಷಕೊಟ್ಟಿಕೊಳ್ಳಿ.. ಒಳ್ಳೇದಾಗಲಿ!
........................................
ನನ್ನ ಮಾತುಗಳಿಂದ ನಿಮಗೆ ಬೇಸರ, ಸಿಟ್ಟು, ಮುಜುಗರ, ಯಾ ಇತರೇ ಅತೋಷದ ಭಾವಗಳಾಗಿದ್ದರೆ ಅದಕ್ಕೆ ನಾನು ತುಡಿಯುವೆನು. ಮನ್ನಿಸಿ ಬಿಡಿ. "ಸರ್ವೇ ಜನಾಸುಖಿನೋ ಭವಂತು" ಎಂದೇ ಹರಕೆ.
ಉ: ತೆಲಂಗಾಣ---ನಮಗೆಷ್ಟು ಪ್ರಸ್ತುತ
ಒಂದು ಪ್ರಾಂತ್ಯ/ರಾಜ್ಯದ ಅಭಿವೃದ್ಧಿಯಾಗಲು ಪ್ರತ್ಯೇಕ ಆಡಳಿತ ಘಟಕವನ್ನಾಗಿ ಮಾಡುವುದರಿಂದ ಮಾತ್ರ ಸಾಧ್ಯವೆಂದು ಅನ್ನಿಸುತ್ತಿಲ್ಲ.
ಹಳೇ ಮೈಸೂರು ಪ್ರಾಂತ್ಯದವರು ಲಾಬಿ ಮಾಡಿಕೊಂಡು ತಮ್ಮ ಪ್ರದೇಶವನ್ನು ಉದ್ದಾರ ಮಾಡಿದ್ದಾರೆಂದೇ ಊಹಿಸೋಣ. ಹಾಗಾದರೆ, ಇಲ್ಲಿಯವರೆಗೂ ಉ.ಕರ್ಣಾಟಕದ ಜನ ಪ್ರತಿನಿಧಿಗಳು (ಎಂ ಎಲ್ ಎ, ಎಂಪಿ) ಏನು ಮಾಡಿಕೊಂಡು ಬಂದಿದ್ದಾರೆ? ಕೃಷ್ಣಾ, ತುಂಗಭದ್ರಾ ಮುಂತಾದ ಯೋಜನೆಗಳು ಅಷ್ಟೊಂದು ಕಳಪೆ ಗುಣಮಟ್ಟದಲ್ಲಿ, ಅತಿ ನಿಧಾನವಾಗಿ ಜಾರಿಯಾಗಲು ಕಾರಣ ಯಾರು? ಹೆಚ್ಚಿನ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಆಂಧ್ರದವರು ಆಕ್ರಮಿಸಿಕೊಳ್ಳಲು ಹೇಗೆ ಸಾಧ್ಯವಾಯಿತು?
ನಾನು ಇಲ್ಲಿಗೆ ಉನ್ನತ ಅಧ್ಯಯನಕ್ಕೆ ಬರುವ ಮೊದಲು ಉ. ಕರ್ಣಾಟಕದ ತಾಲೂಕೊಂದರಲ್ಲಿ ಸುಮಾರು ಎರಡು ವರ್ಷಗಳವರೆಗೆ ಸರಕಾರಿ ಇಲಾಖೆಯೊಂದರಲ್ಲಿ ಕೆಲಸಕ್ಕಿದ್ದೆ. ಈ ಅನುಭವದ ಪ್ರಕಾರ ಹೇಳಬಯಸುವುದೇನೆಂದರೆ, ಅಲ್ಲಿನ ಸರಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮನೆ/ಆಸ್ತಿಯ ಮೇಲೆ ಆದಾಯತೆರಿಗೆಯವರು ದಾಳಿ ಮಾಡಿದರೆ, ಹಾಗೂ ಅಲ್ಲಿಂದ ವಶಪಡಿಸಿಕೊಂಡ ಹಣವನ್ನು ಪುನಃ ಸದ್ಬಳಕೆ ಮಾಡಿಕೊಂಡರೆ ಇಡೀ ಉ.ಕ. ವಿಭಾಗವನ್ನು ಅಭೂತಪೂರ್ವವಾಗಿ ಉದ್ಧಾರ ಮಾಡಬಹುದಾದಷ್ಟು ಕಪ್ಪುಹಣ ಸಿಗುವುದರಲ್ಲಿ ಸಂಶಯವಿಲ್ಲ.
ನನ್ನ ಪ್ರಕಾರ, ಉ.ಕ. ಪ್ರಾಂತ್ಯದ ಹಿಂದುಳಿಯುವಿಕೆಗೆ ಅಲ್ಲಿಂದ ಚುನಾಯಿತರಾಗುತ್ತಿರುವ ಭ್ರಷ್ಟ ಫುಡಾರಿಗಳೇ ಶೇ80 ರಷ್ಟು ಕಾರಣ. ಶೇ10 ಅಲ್ಲಿನ ಸರಕಾರಿ ಅಧಿಕಾರಿಗಳು, ಹಾಗೂ ಇನ್ನುಳಿದ ಶೇ10 ರಷ್ಟು ಇಂಥಾ ಫುಢಾರಿಗಳನ್ನು ಚುನಾಯಿಸುತ್ತಿರುವ ನಮ್ಮಂಥ ಜನಸಾಮಾನ್ಯರು ಕಾರಣ.
ಉ: ತೆಲಂಗಾಣ---ನಮಗೆಷ್ಟು ಪ್ರಸ್ತುತ
ಭಾಷಾವಾರು ಪ್ರಾಂತ್ಯ ಮತ್ತು ಭಾರತ!
http://enguru.blogsp...