ಕನ್ನಡ ನಿಘಂಟು ತಂತ್ರಾಂಶ
ಗೆಳೆಯರೇ,
ಇದುವರೆಗೆ ಅಂತರ್ಜಾಲದಲ್ಲಿ ಇಂಗ್ಲೀಷ್-ಕನ್ನಡ ನಿಘಂಟು ತಂತ್ರಾಂಶ ಲಭ್ಯವಿಲ್ಲ. ನಾವೇ ಏಕೆ ಇದನ್ನು open source ನಲ್ಲಿ ಹೊಸದಾಗಿ ತಯಾರು ಮಾಡಬಾರದು. ಇದರ framework ಅನ್ನು ಒದಗಿಸಿದರೆ ನಾನು ಸಂಪೂರ್ಣ ಸಹಕಾರವನ್ನು ಕೊಡಲು ಸಿದ್ಧವಾಗಿದ್ದೇನೆ. HPN ರವರೇ ಈ ಕುರಿತು ನಿಮ್ಮ ಸಹಾಯದ ಅಗತ್ಯವಿದೆ. ಈ ತಂತ್ರಾಂಶವು ಲಭ್ಯವಾದರೆ ಸಮಸ್ತ ಕನ್ನಡಿಗರಿದೆ ಅನುಕೂಲವಾಗುತ್ತದೆ. ಗೆಳೆಯರೇ, ಈ ಪ್ರಯತ್ನವನ್ನು ಆರಂಭಿಸೋಣವೇ?
ಇತೀ ನಿಮ್ಮವ,
ಪ್ರದೀಪ ಅಡಿಗ

- Login or register to post comments
- 1106 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಇದಕ್ಕೆ ನನ್ನ ಪೂರ್ಣ ಬೆಂಬಲವಿದೆ
ಈ ಯೋಚನೆ ನನಗೆ ಬಹಳ ದಿನಗಳಿಂದ ಕಾಡುತ್ತಿತ್ತು.
ಅಂತಹದ್ದೇನಾದರೂ ಈಗಾಗಲೇ ವೆಬ್ ನಲ್ಲಿ ಇದೆಯೇನೋ ಅಂತ ಹುಡುಕಿದ್ದೆ. ಸಿಕ್ಕಿದ್ದು kannadakasturi.com
ಆದರೆ, ಇದರಲ್ಲಿ ಕನ್ನಡದಲ್ಲಿ ಟೈಪಿಸಿ search ಮಾಡಲಾಗುವುದಿಲ್ಲ. ಆದರೂ ಇದೊಂದು ಒಳ್ಳೆಯ ತಾಣ.
ಇತ್ತೀಚೆಗೆ ಹೊಸ ಸೇವೆಗಳನ್ನೂ ಅದು ನೀಡುತ್ತಿದೆ. Downloadable Kannada Dictionary ಯನ್ನೂ ನೀಡುತ್ತಿದೆ. ಈ ತಾಣಕ್ಕೆ ಹೋಗಿ ನೋಡಿ.
-ನಮಸ್ತೆ ಮೇಘಶ್ಯಾಂ
ಆಹಾ!
ಆಹಾ! ಇವರ ವೆಬ್ ಸರ್ವೀಸ್ ಬಳಸಲು ಎರಡು ವರ್ಷಗಳ ಹಿಂದೆ ಪ್ರಯತ್ನಿಸಿ ವಿಫಲನಾಗಿದ್ದೆ. ಈಗೊಬ್ಬರು ಅದನ್ನೇ ಬಳಸಿ ಹಾಕಿರುವುದು ನೋಡಿ ಖುಷಿಯಾಯ್ತು! (ಓದುಗರು ಗಮನಿಸಬೇಕಾದ ಅಂಶ: ವೆಬ್ ಸರ್ವೀಸ್ ಬಳಸಿ ಹಾಕಿರುವ ಪುಟ Unicodeನಲ್ಲಿದೆ!)
ಕನ್ನಡಕಸ್ತೂರಿಯನ್ನೇ ಯೂನಿಕೋಡ್ ಗೆ ಪರಿವರ್ತಿಸಬಹುದು. ಒಮ್ಮೆ ಇದರ ಕತೃ ನನಗೆ ಅದರ ಪುಟ್ಟ ಫೈಲೊಂದನ್ನು ಕಳುಹಿಸಿದ್ದರು, ನಾನು ಮತ್ತು ಪಮ್ರಿ ಕುಳಿತು ಯೂನಿಕೋಡಿಗೆ ಪರಿವರ್ತಿಸಿದ್ದೆವು. ಯಾರಿಗಾದರೂ ಅದರ ಬಗ್ಗೆ ಹೆಚ್ಚು ಆಸಕ್ತಿ ಇದ್ದರೆ ನನ್ನನ್ನು ಸಂಪರ್ಕಿಸಿ (ಹಾಗೆಯೇ ಈ ತಿಂಗಳು ಒಮ್ಮೆ ಎಲ್ಲರೂ ಭೇಟಿಯಾಗೋಣ)
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಈ ಬಗ್ಗೆ
ಈ ಬಗ್ಗೆ ನಾನೂ ಸುನೀಲ ಸಾಕಷ್ಟು ಚರ್ಚೆ ಮಾಡುತ್ತಿದ್ದೆವು. ಆದರೆ ಅದು ಅಂತರ್ಜಾಲದಲ್ಲಿ ನಾವಾಡುವ ಮಾತಿನ ಮಟ್ಟಿಗೇ ಸೀಮಿತವಾಗಿ ಹೋಯಿತು. ಇಂತಹ ಒಂದು ಪ್ರಾಜೆಕ್ಟಿಗೆ ಸಂಪೂರ್ಣ ಸಹಾಯ ಮತ್ತು ಬೆಂಬಲ ನೀಡಲು ನಾನು ಸಿದ್ಧ. ಈ ತಿಂಗಳು ಯಾವತ್ತಾದರೂ ಒಂದು ದಿನ ಎಲ್ಲರೂ ಒಂದು ಕಡೆ ಸಿಕ್ಕು ಮಾತನಾಡೋಣವೆ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ನಾನು ಸಿದ್ಧನಿದ್ದೇನೆ....
ವೆಬ್‌ನಲ್ಲಿ ಕನ್ನಡ ಪದಕೋಶ ತಯಾರು ಮಾಡುವ ಕೆಲಸದಲ್ಲಿ ಭಾಗಿಯಾಗಲು ನಾನು ಸಿದ್ಧನಿದ್ದೇನೆ. ಬೇಗನೇ ಕೆಲಸ ಪ್ರಾರಂಭಿಸೋಣವೇ?
ಸುಬ್ರಹ್ಮಣ್ಯ.ಎಂ.ಕೆ.
ಬರುವ ಭಾನುವಾರ
ಬರುವ ಭಾನುವಾರ ಎಮ್ ಜಿ ರೋಡ್ ಹತ್ತಿರದ ಕೋಶೀಸ್ ನಲ್ಲಿ ನಾವುಗಳು ಕೆಲವರು ಸರಿಯಾಗಿ ೧೦:೦೦ ಘಂಟೆಗೆ ಭೇಟಿಯಾಗುತ್ತಿದ್ದೇವೆ. ಸಾಧ್ಯವಾದವರು, ಉತ್ಸಾಹವಿರುವವರು ಬನ್ನಿ. ಮಾತನಾಡೋಣ!
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ನನಗೂ ಬರಲು ಮನಸಿದೆ..ಆದರೆ......
ನನಗೂ ನಿಮ್ಮನ್ನು ಭೇಟಿಯಾಗಬೇಕೆಂದು ಬಹಳ ಮನಸ್ಸಿದೆ. ಆದರೆ ನಾನು ಮಣಿಪಾಲದಲ್ಲಿ ಇರುವುದರಿಂದ ಇದು ಸಾಧ್ಯವಾಗುವುದಿಲ್ಲ. ದಯವಿಟ್ಟು ನೀವು ಅಲ್ಲಿ ಏನು ಚರ್ಚೆ ಮಾಡಿದಿರಿ ಅಥವಾ ಏನಾದರೂ ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ, ನನಗೆ ತಿಳಿಸಿ. ನಿಮ್ಮ initiative ನಾನೂಭಾಗಿಯಾಗಲು ಇಚ್ಚಿಸುತ್ತೇನೆ.
ಏನು ಮಾತನಾಡಿದಿರಿ?
ನಮಸ್ಕಾರ ಹರಿಯವರೇ,
ಮೊನ್ನೆ ಭಾನುವಾರ ನೀವೆಲ್ಲಾ ಭೇಟಿಯಾದಿರಾ? ಏನಾದರೂ ಹೊಸ ನಿರ್ಧಾರವನ್ನು ಕೈಗೊಂಡಿರಾ? ನನಗೆ ಅದರ ಬಗ್ಗೆ ತಿಳಿಯಲು ಕಾತುರ.
ಇತ್ತೀಚೆಗೆ ನನಗೊಂದು ಆಲೋಚನೆ ಬಂತು. ಅದು ನಿಮಗೆಲ್ಲಾ ಹಳೆಯದು ಅಂತ ಅನಿಸುತ್ತದೋ ಏನೋ. Firefox ಕನ್ನಡ ಭಾಷೆಯಲ್ಲಿ ಲಭ್ಯವಿಲ್ಲ. ಇದು open source project ಆದುದರಿಂದ ನಾವು ಇದನ್ನು ಮಾಡಬುಹುದೋ ಏನೋ. ನೀವು ನನಗೆ ಅದನ್ನು ಹೇಗೆ ಮಾಡಬೇಕೆಂದು ಸ್ವಲ್ಪ ಮಾಹಿತಿ ನೀಡಿದರೆ, ಅನುವಾದದ ಕೆಲಸವನ್ನು ನಾನು ಮಾಡಲು ಸಿದ್ಧನಿದ್ದೇನೆ.
ಇತೀ ನಿಮ್ಮವ,
ಪ್ರದೀಪ ಅಡಿಗ
ಕೆಲ
ಕೆಲ ಕಾರಣಗಳಿಂದ follow up ಮಾಡಲಾಗಲಿಲ್ಲ.
ನಾನು ಬಹಳ ಉತ್ಸಾಹದಿಂದ ಅಂದುಕೊಂಡಿದ್ದ ಕೆಲಸ ಇದು. ಹಾಗಾಗಿ, ತಾವುಗಳು ಭೇಟಿಯಾದಿರಾ? ಏನು discuss ಮಾಡಿದಿರಿ?
ತಿಳಿಸಿದರೆ, ಮುಂದಿನ ಕೆಲಸಗಳಿಗೆ ಕೈ ಜೋಡಿಸಲು ಸಹಾಯವಾಗುತ್ತದೆ.
-ನಮಸ್ತೆ
ಮೇಘಶ್ಯಾಂ
ಕೈ ಕೂಡಿಸಲು ಸಿದ್ದ
ಈ ಜತುನದಲ್ಲಿ ನಿಮ್ಮೆಲ್ಲರೊಂದಿಗೆ ಕೈ ಕೂಡಿಸಲು ನಾನೂ ಸಿದ್ದ.
ಅಲ್ಲದೇ ಈಗಿರುವ ಕನ್ನಡಕಸ್ತೂರಿ.ಕಾಮ್ ನಲ್ಲಿ ಸಕ್ಕದದ ಪದಗಳೇ ಬಹಳಾಗಿ ಸಿಗುತ್ತವೆ, ಹೊಸ ಪದಕಣಜ ಆದಿನಿತು ಅಚ್ಚಕನ್ನಡ ಪದಗಳನ್ನೇ ಹೊಂದಿರಬೇಕೆಂಬುದೂ ನನ್ನ ಹಂಬಲ.
ನಿಮ್ಮ,
ಸಂಗನಗೌಡ.
ಉ: ಕೈ ಕೂಡಿಸಲು ಸಿದ್ದ
ಆದಷ್ಟು ಸಮಗ್ರ ನಿಘಂಟುವನ್ನು ಕೊಡೋಣ. ಹೞಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಜಾನಪದ ಮತ್ತು ಸ್ಥಾನಿಕ ವಿಶೇಷ ಶಬ್ದಗಳನ್ನು ಸೇರಿಸೋಣ. ಇದಱಲ್ಲಿ ಸಹಾಯ ಮಾಡಲು ನಾನು ಸಿದ್ಧ.