ಕೋರಿದ ಪುಟ ಇಲ್ಲ
http://www.sampada.net/kannada-l10n/wiki/index.php/Create_an_Open_type_f...
http://kannada.sampada.net/ ಅಲ್ಲಿ ಇರುವ ಈ ಮೇಲಿನ ಕೊಂಡಿಯು ಸಿಗುತ್ತಿಲ್ಲ. ದಯವಿಟ್ಟು ಸರಿಪಡಿಸಿ.
- ಪ್ರದೀಪ ಅಡಿಗ

- Login or register to post comments
- 797 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ತಡವಾದ
ತಡವಾದ ಉತ್ತರಕ್ಕೆ ಕ್ಷಮೆಯಿರಲಿ. ಹೊಸ ಸರ್ವರಿಗೆ ಸಂಪದವನ್ನು ಸ್ಥಳಾಂತರಿಸುವಲ್ಲಿ ಮುಳುಗಿಹೋಗಿದ್ದೆವು. ಶಶಿಯ ಸಹಾಯದಿಂದ ಸಾಕಷ್ಟು ಬೇಗನೆ ಆಯ್ತು. ಶಶಿ ಬಿಟ್ಟರೆ ನಾನೊಬ್ಬನೇ ಹೊಸ ಸರ್ವರಿಗೆ ಸಂಬಂಧಪಟ್ಟ ಎಲ್ಲ ಕಾರ್ಯಗಳನ್ನೂ ನೋಡಿಕೊಳ್ಳುತ್ತಿರುವುದರಿಂದ ನೀವು ಸಲ್ಲಿಸಿರುವ ಕೋರಿಕೆ ಸರಿಪಡಿಸುವಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಿಮಗೆ ಈ ಕೆಲಸ ವಹಿಸಿಕೊಳ್ಳಲು ಆಸಕ್ತಿಯಿದ್ದರೆ ತಿಳಿಸಿ, ಬೇಗ ಸರಿಪಡಿಸಬಹುದು.
(ಮುಂಚೆ ಸಂಪದ l10n ಪುಟದಲ್ಲಿ ಒಂದು ವಿಕಿ ಇತ್ತು. ಅದನ್ನು ತೆಗೆದುಹಾಕಿದಾಗಿನಿಂದ ನೀವು ತಿಳಿಸಿರುವಂತಹ ಲಿಂಕುಗಳು ಕೆಲಸಮಾಡುತ್ತಿಲ್ಲ. ಅಂತಹ ಪುಟಗಳಲ್ಲಿದ್ದ ಮಾಹಿತಿಯನ್ನು ಮತ್ತೆ ಪಡೆಯಲು ಮೀಡಿಯವಿಕಿಯನ್ನು ಎಲ್ಲಾದರೂ install ಮಾಡಿ ಅಲ್ಲಿಂದ ಡೇಟ ತೆಗೆದು l10n ಪುಟಕ್ಕೆ ಹಾಕುವ ಕೆಲಸ ಮಾಡಬೇಕಿದೆ)
P.S: ನಾನು ಈ ಕಾಮೆಂಟ್ ಹಾಕುತ್ತಿರುವ ಸಮಯದಲ್ಲಿ ಸಂಪದದ Kannada l10n ಪುಟ ಹಾಗೂ ಲರ್ನಿಂಗ್ ಸೆಂಟರ್ ಇವೆರಡೂ ಕೆಲಸ ಮಾಡುತ್ತಿಲ್ಲ. ನಮ್ಮ ಕನ್ನಡಿಗರು ನಾಳೆ ಸ್ಟ್ರೈಕ್ ಮಾಡುತ್ತಿರುವ ಸಮಯದಲ್ಲಿ ನಾನು ಕುಳಿತು ಉಳಿದ ಸೈಟುಗಳನ್ನು ಮರುಸ್ಥಾಪಿಸುವ ಕಾರ್ಯ ಕೈಗೆತ್ತಿಕೊಳ್ಳುವೆ
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಸಂತೋಷವಾಯಿತು
HPNರವರೇ,
ನಿಮ್ಮ ಪ್ರತಿಕ್ರಿಯೆಗೆ ಬಹಳ ಧನ್ಯವಾದಗಳು. ಬಹಳ ದಿನಗಳಾದರೂ ಉತ್ತರ ಬರಲಿಲ್ಲವಾದ್ದರಿಂದ, ಕಡೆಗಣಿಸುತ್ತಿದ್ದೀರಿ ಎಂದು ಅನಿಸಿತು. ಈ ತಾಣದಲ್ಲಿನ ಚಟುವಟಿಗೆಗಳು ನನಗೆ ಬಹಳ ಇಷ್ಟ.
ಈ ತಾಣದಲ್ಲಿ ನಡೆಯುವ ಯಾವುದೇ ಚಟುವಟಿಕೆಗಳಿಗೆ ನಾನು ಸ್ವಯಂಸೇವಕನಾಗಿ ಕಾರ್ಯನಿರ್ವಹಿಸಲು ಸಿದ್ಧ. ಹಾಗಾಗಿ ಏನೇ ಕೆಲಸಗಳಿದ್ದರೂ ನನಗೆ ತಿಳುಹಿಸಿ. ಸಾಧ್ಯವಾದಷ್ಟು ಬೇಗನೇ ಮಾಡಿ ಮುಗಿಸುವೆ.
ಇತೀ ನಿಮ್ಮವ,
ಪ್ರದೀಪ ಅಡಿಗ
ಸದಸ್ಯರೆಲ್ಲರಿಗೆ
> ಬಹಳ ದಿನಗಳಾದರೂ ಉತ್ತರ ಬರಲಿಲ್ಲವಾದ್ದರಿಂದ, ಕಡೆಗಣಿಸುತ್ತಿದ್ದೀರಿ ಎಂದು ಅನಿಸಿತು.
ಓಹ್! ದಯವಿಟ್ಟು ಹಾಾಗೆ ಮಾತ್ರ ಅಂದುಕೊಳ್ಳಬೇಡಿ ಗುರುಗಳೆ.
ಸದಸ್ಯರೆಲ್ಲರಿಗೆ,
ನಿರ್ವಹಣೆ ಕುರಿತ ಸಲಹೆಗಳಿಗೆ ಹೆಚ್ಚು ದಿನ ಉತ್ತರ ಬರದಿದ್ದರೆ "ಕಡೆಗಣಿಸಿದ್ದೇವೆ" ಎಂದು ದಯವಿಟ್ಟು ತಿಳಿಯಬೇಡಿ. ಸಾಕಷ್ಟು ಕೆಲಸಗಳ ಮಧ್ಯೆ ಸರ್ವರಿನ ನಿರ್ವಹಣೆಯನ್ನೂ ಮಾಡುತ್ತಿರುವುದರಿಂದ ಸಮಯದ ಅಭಾವ ಎದ್ದು ಹೊಡೆಯುತ್ತಿದೆ. ಸಂಪದ ಈಗ ಸಾಕಷ್ಟು ಬೆಳೆದುನಿಂತಿದೆಯಾದ್ದರಿಂದ ಇದರ ನಿರ್ವಹಣೆ ಕಷ್ಟವಾಗುತ್ತ ಹೊರಟಿದೆ (ಇತ್ತೀಚೆಗೆ ನನ್ನ ಪ್ರತಿನಿತ್ಯದ ವಿಕಿಪೀಡಿಯ ಕೆಲಸಕ್ಕೂ ಇದರಿಂದಾಗಿ ವಿರಾಮ ಕೊಟ್ಟಿರುವೆ!) ದಿನನಿತ್ಯ ಬರುತ್ತಿರುವ ಸಾಕಷ್ಟು ಇ-ಮೇಯ್ಲುಗಳಿಗೆ ಹಾಗು ಸಂಪದದಲ್ಲಿ ಸೇರಿಸಿದ ಸಲಹೆಗಳಿಗೆ ತಕ್ಷಣ ಉತ್ತರ ನೀಡಲಾಗುತ್ತಿಲ್ಲ. ಹಾಗೆಂದ ಮಾತ್ರಕ್ಕೆ "ಇ-ಮೇಯ್ಲುಗಳನ್ನು ಕಳುಹಿಸಬೇಡಿ, ಸಲಹೆಗಳನ್ನು ಸಂಪದದಲ್ಲಿ ಸೇರಿಸಬೇಡಿ" ಎಂದಲ್ಲ, ಉತ್ತರ ಸಿಗದಿದ್ದರೆ ಮತ್ತೊಮ್ಮೆ ಹಾಕಿ, ಮತ್ತೊಮ್ಮೆ ಮೇಯ್ಲ್ ಮಾಡಿ. ಉತ್ತರ ಸಿಗುವವರೆಗೂ ಹಾಕುತ್ತಿರಿ
ಸಂಪದದ ಎಲ್ಲ ಕೆಲಸ "volunteer based" ಆಗಿ ನಡೆಯುತ್ತಿರುವುದರಿಂದ ಸಮುದಾಯದ ಎಲ್ಲ ಸದಸ್ಯರಿಗೂ ಭಾಗವಹಿಸುವ, ಕೆಲಸ ನಿರ್ವಹಿಸುವ ಹಾಗೂ ಎಚ್ಚರಿಸುವ ಹಕ್ಕು ಹಾಗೂ ಜವಾಬ್ದಾರಿ ಉಂಟು. ನಿರ್ದಾಕ್ಷಿಣ್ಯವಾಗಿ ಮುಂದುವರೆಯಬಹುದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಸಹಾಯ ಮಾಡಲು ಸಿದ್ಧ
HPNರವರೇ,
ಈಗ ನೀವು ಮಾಡುತ್ತಿರುವ ಕೆಲಸದಲ್ಲಿ ನನ್ನ ಸಹಾಯ ಬೇಕಿದ್ದರೆ ದಯವಿಟ್ಟು ತಿಳಿಸಿ. ಸಾಧ್ಯವಾದಷ್ಟು ಬೇಗ ಸಂಪದ ತಾಣ online ಆಗಬೇಕೆಂಬುದೇ ನನ್ನ ಆಶಯ.
ಇತೀ ನಿಮ್ಮವ,
ಪ್ರದೀಪ ಅಡಿಗ