December 16, 2009 - 7:29pm
ಈ ದಿನ ಸುಧಾ ಪ್ಲಗಿನ್ ಮೂಲಕ ಡಿಸೆಂಬರ್ ೧೭ರ ಸಂಚಿಕೆ ಓದುತ್ತಿದ್ದಾಗ, ಒಂದು ಡಚ್ ಗಾದೆ ಕಣ್ಣಿಗೆ ಬಿತ್ತು. ಅದು ಹೀಗಿತ್ತು.
"ಹೊಸ ಮನೆಯಲ್ಲಿ ಮೊದಲ ವರ್ಷ ನಿನ್ನ ಶತ್ರು ಇರಲಿ; ಎರಡನೆ ವರ್ಷ ನಿನ್ನ ಮಿತ್ರ ಇರಲಿ; ಮೂರನೇ ವರ್ಷ ನೀನೇ ಇರು. - ಡಚ್ ಗಾದೆ"
ಹೀಗೆಂದರೇನು ?
Forums:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಉ: ಈ ಗಾದೆಯ ತಿಳಿವೇನು ?
ಈ ಗಾದೆ ಇನ್ನೂ ಅರ್ಥ ಆಗಿಲ್ಲ. ನಿಮಗೆ ಯಾರಿಗಾದರೂ ಗೊತ್ತಾಗಿದೆಯಾ ?
ಉ: ಈ ಗಾದೆಯ ತಿಳಿವೇನು ?
ಸುನೀಲರವರೆ ನಿಮ್ಮ ಗಾದೆಗೆ ಅರ್ಥ ಹುಡುಕುವ ಪ್ರಯತ್ನ ಮಾಡಿದ್ದೇನೆ.
*ಹೂಸ ಕೆಲಸ ಆರಂಭಿಸಿದಾಗ ವೈರಿ ಜೊತೆಯಲ್ಲಿ ಇರಬೇಕು. ಏಕೆಂದರೆ ವೈರಿ ಯಾವಾಗಲೂ ನಾವು ಮಾಡುವ ಕೆಲಸದಲ್ಲಿನ ತಪ್ಪು ಹುಡುಕುತಿರುತ್ತಾನೆ ಹಾಗಾಗಿ ಏನೇ ಹೆಜ್ಜೆಯಿಡುವ ಮೊದಲು ಚನ್ನಾಗಿ ಯೋಚಿಸ ಬೇಕಾಗುತ್ತದೆ.
*ಎರಡನೇ ವರ್ಷ ಮಿತ್ರ ಜೊತೆಗಿರಬೇಕು ಏಕೆಂದರೆ ನಿಜವಾದ ಮಿತ್ರನಿಂದ ನೈತಿಕ ಹಾಗು ಮಾನಸಿಕ ಬೆಂಬಲ ಸಿಗುತ್ತದೆ. ಇದರಿಂದ ಏನೇ ಕಷ್ಟ ಬಂದರೂ ಎಲ್ಲರೂ ಜೊತೆಗಿದ್ದಾರೆಂಬ ಧೈರ್ಯದಿಂದ ಮುನ್ನುಗ್ಗ ಬಹುದು. ಅನುಭವಿಗಳ ಸಲಹೆ ಪಡೆಯ ಬಹುದು.
*ಮೂರನೆ ವರ್ಷ ನಿನೇ ಇರಬೇಕು ಅಂದರೆ ಮೇಲಿನ ಎರಡು ಹಂತ ದಾಟಿದ ನಂತರ ಯಾರ ಮೇಲೂ ಅವಲಂಬಿತನಾಗದೆ ಸ್ವತಂತ್ರವಾಗಿ ಯೋಚಿಸಿ ನಿರ್ಧಾರ ತೆಗೆದು ಕೊಳ್ಳುವ ಸಾಮರ್ಥ್ಯಹೊಂದಬೇಕು. ತನ್ನ ತಪ್ಪು ವೈರಿ ಅರಿಯುವ ಮೊದಲೇ ತಾನೇ ಗುರುತಿಸಿ ಸರಿಪಡಿಸಿರಬೇಕು.
ಸುನೀಲ್ ರವರೆ ನನಗೆ ತಿಳಿದ ಮಟ್ಟಿಗೆ ಗಾದೆ ಬಿಡಿಸುವ ಪ್ರಯತ್ನ ಮಾಡಿದ್ದೇನೆ ತಪ್ಪಿದ್ದರೆ ಕ್ಷಮಿಸಿ.
>ಸೌಮ್ಯ
ಉ: ಈ ಗಾದೆಯ ತಿಳಿವೇನು ?
ನನ್ನಿ ಸುನಿಲ,
"ಹೊಸ ಮನೆಯಲ್ಲಿ ಮೊದಲ ವರ್ಷ ನಿನ್ನ ಶತ್ರು ಇರಲಿ; ಎರಡನೆ ವರ್ಷ ನಿನ್ನ ಮಿತ್ರ ಇರಲಿ; ಮೂರನೇ ವರ್ಷ ನೀನೇ ಇರು."
ಹೊಸಮನೆ ಅಲ್ಲವಾ? ಸರಿಯಾಗಿ ಕಟ್ಟಿಲ್ಲದಿದ್ದರೆ..ಬೀಳುವುದಿದ್ದರೆ..ಅದಕ್ಕೆ ಮೊದಲ ವರ್ಷ ಶತ್ರುವಿಗೆ. :)
ಎರಡನೆ ವರ್ಷ ಮಿತ್ರನಿಗೆ ಇರಲು ಬಿಟ್ಟರೆ- ಏನೆಲ್ಲಾ ರಿಪೇರಿ ಕೆಲಸವಾಗಬೇಕು, ಅದೆಲ್ಲಾ ಆತನೇ ಮಾಡಿಯಾನು.. :)
ಮತ್ತೂ ಅವನಿಗೆ ಇರಲು ಬಿಟ್ಟರೆ ಅವ ಮನೆ ಬಿಟ್ಟು ಹೋಗಲಾರ. ಅದಕ್ಕೆ ಮೂರನೇ .... :)
-ಗಣೇಶ.
ಉ: ಈ ಗಾದೆಯ ತಿಳಿವೇನು ?
ವಾಹ್ ಗಣೇಶಜಿ ಉತ್ತಮವಾದ ಸಲಹೆ ನೀಡಿದ್ದೀರಿ. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತೆ, ಸ್ವಕಾರ್ಯವೂ ಆಯಿತು, ಶತೃ ಸಂಹಾರವೂ ಆಯಿತು. ಮುಂದೊಮ್ಮೆ ಮನೆ ಕಟ್ಟಿದರೆ ನಿಮ್ಮ ಸಲಹೆ ಬಳಸಿ ಕೊಳ್ಳುವೆ.
>ಸೌಮ್ಯ